ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/01/2021
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನಾನು ಜೀವೋ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ಯಾದಗಿರಿಯ ಲಕ್ಷ್ಮೀ ನಗರದ ಸೋಮರೆಡ್ಡಿ ತಂದೆ ಬಸಣ್ಣ ದೇಸಾಯಿ ಸಾ|| ಲಕ್ಷ್ಮೀ ನಗರ ಯಾದಗಿರಿ ಇವರ ಮನೆಯಲ್ಲಿ ಬಾಡಿಗೆ ಇರುತ್ತೇನೆ. ನನ್ನದೊಂದು ಹೊಂಡಾ ಶೈನ್ ಮೋಟರ್ ಸೈಕಲ್ ನಂ ಏಂ 33, ಏ 3498 ಇದ್ದು, ಅದರ ಇಟಿರಟಿಜ ಓಠ-ಎಅ36ಇ2280670, ಅಚಿ ಓಠ-ಒಇ4ಎಅ36ಅಃಃ8188501, ಅಂತಾ ಇರುತ್ತದೆ. ಸದರಿ ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 20,000/ ರೂಪಾಯಿಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು, ದಿನಾಂಕ 07/11/2020 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ನನ್ನ ಮೋಟರ್ ಸೈಕಲ್ ನಾನು ಬಾಡಿಗೆ ಇದ್ದ ಮನೆಯ ಮುಂದೆ ನಿಲ್ಲಿಸಿ, ನಾನು ಮನೆಯಲ್ಲಿ ಉಳಿದುಕೊಂಡೆನು. ನಂತರ ದಿನಾಂಕ 08/11/2020 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ಮನೆಯ ಅಕ್ಕ ಪಕ್ಕದಲ್ಲಿ ನೋಡಿದರೂ ನನ್ನ ಗಾಡಿ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನನ್ನ ಮೋಟರ್ ಸೈಕಲ್ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ನನ್ನ ಮೋಟರ್ ಸೈಕಲ್ ಪತ್ತೆಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 04/2021 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 05/2021 ಕಲಂ 279 337 338 ಐ.ಪಿ.ಸಿ. : ಆರೋಪಿತನು ದಿನಾಂಕ: 31-12-2020 ರಂದು 11:15 ಪಿ.ಎಮ್.ಕ್ಕೆ ಸುಮಾರಿಗೆ ಆರೋಪಿತು ತನ್ನ ಆಟೋ ನಂ. ಕೆ.ಎ.33-ಎ-4504 ನೇದ್ದನ್ನು ಶಹಾಪುರದಿಂದ ಸಗರ ಗ್ರಾಮಕ್ಕೆ ಪ್ರಯಾಣಿಕರನ್ನು ಕುಳ್ಳಿಸಿಕೊಂಡು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಚಾಂದ ಪಟ್ರೋಲ ಪಂಪ ಹತ್ತಿರ ಎದುರಿಗೆ ಬರುತ್ತಿದ್ದ ವ್ರೆಟಾರ ಸೈಕಲ್ ನಂ. ಕೆ.ಎ.33- ಕ್ಯೂ- 7918 ನೇದ್ದಕ್ಕೆ ಡಿಕ್ಕಿ ಪಡಿಸಿ ಆಟೋ ಪಲ್ಟಿ ಮಾಡಿ ಆಟೋದಲ್ಲಿದ್ದ ಪ್ರಯಾಣಿಕರಿಗೆ ಮತ್ತು ಮೊಟಾರ ಸೈಕಲ್ ಸವಾರನಿಗೆ ಭಾರೀ ಮತ್ತು ಸಾದಾ ಗಾಯ ಮಾಡಿದ್ದು ಗಾಯಾಳು ಉಪಚಾರಕ್ಕೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಇತ್ಯಾದಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.05/2021 ಕಲಂ. 279, 337, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಕಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 06/2021.ಕಲಂಃ 78(3) ಕೆ.ಪಿ.ಆ್ಯಕ್ಟ : ಇಂದು ದಿನಾಂಕ 07/01/2021 ರಂದು 19-30 ಗಂಟೆಗೆ ಸ|| ತ|| ಪಿಯರ್ಾದಿ ಶಾಮಸುಂದರ ಪಿ.ಎಸ್.ಐ.(ಅ.ವಿ) ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ 07/01/2021 ರಂದು 17-00 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂರ ಹಳಿಪೇಠದ ಸಿದ್ದಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ಸದರಿ ಅಪರಾದವು ಅಸಂಜ್ಞಯ ಅಪರಾದವಾಗಿದ್ದರಿಂದ ಠಾಣೆಯ ಎನ್ ಸಿ. 2/2021 ನ್ನೇದ್ದನ್ನು ದಾಖಲಿಸಿಕೊಂಡು ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರ ವ್ಯವಹಾರ ಮಾಡಿ 17-20 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಮಾಳಪ್ಪ ಹೆಚ್.ಸಿ.64. ಲಕ್ಕಪ್ಪ ಪಿ.ಸಿ.163. ಗೋಕುಲ್ ಪಿ.ಸಿ.172. ಭೀಮನಗೌಡ ಪಿ.ಸಿ.402. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಗೋಕುಲ್ ಹುಸೇನ ಪಿ.ಸಿ.172. ರವರಿಗೆ 17-30 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 30 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ 2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 50 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 17-35 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.
ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ. ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ನಡೆದುಕೊಂಡು ದಾಳಿ ಕುರಿತು ಠಾಣೆಯಿಂದ 17-40 ಗಂಟೆಗೆ ಹೊರಟೇವು. ನೇರವಾಗಿ ಶಹಾಪೂರ ಹಳಿಪೇಠದ ಸಿದ್ದಲಿಂಗೇಶ್ವರ ಗುಡಿಯ 17-50 ಗಂಟೆಗೆ ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಸಿದ್ದಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ, ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 17-55 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ಚಂದ್ರಶೇಖರ ತಂದೆ ಮಲ್ಲಿಕಾಜರ್ುನ ಬಳಗಾರ ವ|| 42 ಜಾ|| ಲಿಂಗಾಯತ ಉ|| ಮಟಕಾಬರೆದುಕೊಳ್ಳೂವದು ಸಾ|| ಹಳಿಪೇಠ ಶಹಾಪೂರ ಅಂತ ಹೇಳಿದನು. ಈತನ ಹತ್ತಿರ ನಗದು ಹಣ 560-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಮತ್ತು 2 ಮಟಕಾ ಚೀಟಿಗಳು, ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 560-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 18-00 ಗಂಟೆಯಿಂದ 19-00 ಗಂಟೆಯವರೆಗೆ ರಸ್ತೆಯ ಲೈಟಿನ ಕಂಬದ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 19-10 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ, ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ 19-30 ಗಂಟೆಗೆ ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 06/2021 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 07/2021 ಕಲಂ 78(3) ಕೆ.ಪಿ ಆಕ್ಟ್ : ಇಂದು ದಿನಾಂಕ 07/01/2021 ರಂದು ರಾತ್ರಿ 20-45 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ್ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಇಬ್ಬರೂ ವ್ಯಕ್ತಿಗಳೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 07/01/2021 ರಂದು ಸಾಯಂಕಾಲ 17-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ, ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 03/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿಮಾಡಿಕೊಂಡು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಸಾಯಂಕಾಲ 17-45 ಗಂಟೆಗೆ ಅನುಮತಿ ಪಡೆದುಕೊಂಡು, ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಸಾಯಂಕಾಲ 18-30 ಗಂಟೆಗೆ ದಾಳಿ ಮಾಡಿ ಆರೋಪಿ ಎ-1) ಸಾಬರಡ್ಡಿ ತಂದೆ ಚಂದ್ರಾಮ ಹಳಿಮನಿ ವಯ 30 ವರ್ಷ ಜಾತಿ ಕಬ್ಬಲಿಗ ಉಃ ಮಟಕಾ ನಂಬರ ಬರೆದುಕೊಳ್ಳುವದು ಎ-2) ವೆಂಕಟೇಶ್ ತಂದೆ ನಂದಪ್ಪ ಮೂಲಿಮನಿ ವಯ 23 ವರ್ಷ ಜಾತಿ ಕಬ್ಬಲಿಗ ಉಃ ಕೂಲಿ ಕೆಲಸ ಇಬ್ಬರೂ ಸಾಃ ಅರಕೇರಾ(ಬಿ) ತಾಃ ಜಿಃ ಯಾದಗಿರಿ ಇವರನ್ನು ವಶಕ್ಕೆ ಪಡೆದುಕೊಂಡು, ಸದರಿಯವರಿಂದ ನಗದು ಹಣ 710-00 ರೂಪಾಯಿ ಒಂದು ಬಾಲ್ ಪೆನ್ ಹಾಗೂ ಎರಡು ಮಟಕಾ ಚೀಟಿಗಳು ಸಾಯಂಕಾಲ 18-35 ಗಂಟೆಯಿಂದ ಸಾಯಂಕಾಲ 19-35 ಗಂಟೆಯ ಅವಧಿಯಲ್ಲ್ಲಿ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿರುತ್ತದೆ. ಸದರಿ ಆರೋಪಿತರ ವಿರುದ್ದ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 07/2021 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 01/2021 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 07/01/2021 ರಂದು 03.00 ಪಿ.ಎಮ್.ಕ್ಕೆ ಮದ್ರಕಿ ಗ್ರಾಮದ ಗೂಳಿಬಸವೇಶ್ವರ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 4.30 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5.45 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 2980=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದ ಕ್ರಮ ಜರುಗಿಸಿದ ಬಗ್ಗೆ
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:-. 04/2021 498(ಎ), 304(ಬಿ) ಸಂಗಡ 34 ಐಪಿಸಿ & 3, 4 ಡಿಪಿ ಯಾಕ್ಟ್ : ಇಂದು ದಿ: 07/01/2021 ರಂದು 12.15 ಪಿಎಮ್ಕ್ಕೆ ಶ್ರೀ ಪ್ರಶಾಂತ ತಂದೆ ಭೀಮರಾಯ ಕೊಂಡಗೂಳಿ ವಯಾ|| 26 ಜಾ|| ಕುರುಬ ಉ|| ಕಿರಾಣಾ ವ್ಯಾಪಾರ ಸಾ|| ಏವೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮ ತಂಗಿಯಾದ ಮಲ್ಲಮ್ಮ ಇವಳಿಗೆ ಈಗ್ಗೆ ಒಂದು ವರ್ಷದ ಹಿಂದೆ ನಮ್ಮ ಮನೆಯಲ್ಲಿ ಭೀಮರಾಯಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್ ಇವನಿಗೆ ಕೊಟ್ಟು ಮದುವೆ ಮಾಡಬೆಕೆಂದು ನಿಶ್ಚಯಿಸಿದ್ದು ಇರುತ್ತದೆ. ಅದರಂತೆ ಸದರಿ ನಿಶ್ಚಿತಾರ್ಥವನ್ನು 10 ತಿಂಗಳ ಹಿಂದೆ ನಮ್ಮ ಏವೂರ ಗ್ರಾಮದ ನಮ್ಮ ಮನೆಯಲ್ಲಿ ಆಗಿದ್ದು ಇರುತ್ತದೆ. ನಿಶ್ಚಿತಾರ್ಥ ಕಾಲಕ್ಕೆ ನಾನು ನಮ್ಮ ಮನೆಯವರಾದ, ತಂದೆಯಾದ ಭೀಮರಾಯ, ತಾಯಿಯಾದ ದೇವಕೆಮ್ಮ, ಅಕ್ಕಳಾದ ರೇಣುಕಾ, ತಮ್ಮನಾದ ಗುರುರೇವಣಸಿದ್ದ, ನನ್ನ ಹೆಂಡತಿಯಾದ ಶರಣಮ್ಮ, ನನ್ನ ತಮ್ಮನ ಹೆಂಡತಿಯಾದ ಚೌಡಮ್ಮ ಹಾಗೂ ದೊಡ್ಡಪ್ಪನಾದ ಸಂಗಪ್ಪ, ದೊಡ್ಡಮ್ಮಳಾದ ಶಾಂತಮ್ಮ, ಕಾಕನಾದ ನಿಂಗಪ್ಪ ಹಾಗೂ ನಮ್ಮೂರ ಹಿರಿಯಾರಾದ ವಿಜಯರೆಡ್ಡಿ ತಂದೆ ಗೌಡಪ್ಪಗೌಡ ಪಾಟೀಲ್, ಬಸನಗೌಡ ತಂದೆ ಶರಣಪ್ಪಗೌಡ ಕೂಡ್ಲಿಗಿ, ಬಸನಗೌಡ ತಂದೆ ಮಡಿವಾಳಪ್ಪಗೌಡ ದಳಪತಿ ಹಾಗೂ ಇತರರು ಮತ್ತು ಗಂಡಿನ ಮನೆಯವರಾದ ವರನಾದ 1) ಭೀಮರಾಯಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್, ವರನ ತಂದೆಯಾದ 2) ಸಿದ್ದನಗೌಡ ತಂದೆ ಭೀಮರಾಯಗೌಡ ಪೊಲೀಸ್ ಪಾಟೀಲ್ ಮತ್ತು ತಾಯಿಯಾದ 3) ಚಾಮುಂಡಿ ಗಂಡ ಸಿದ್ದನಗೌಡ ಪೊಲೀಸ್ ಪಾಟೀಲ್ ಇವರು ಹಾಗೂ ಅವರ ಗ್ರಾಮದವರು ಇದ್ದದ್ದು ಇರುತ್ತದೆ. ನಿಶ್ಚಿತಾರ್ಥದಲ್ಲಿ ಮದುವೆ ಸಮಯದಲ್ಲಿ ಗಂಡಿನ ಮನೆಯವರಿಗೆ 1 ಲಕ್ಷ ರೂಪಾಯಿ ಹಾಗೂ 6 ತೊಲಿ ಬಂಗಾರ ಮತ್ತು ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ಮತ್ತು ಮದುವೆಯನ್ನು ಗಂಡಿನ ಮನೆಯವರು ಮಾಡಿಕೊಡುವಂತೆ ಮಾತುಕತೆಯಾಗಿ ಆಗಿದ್ದು ಅದಕ್ಕೆ ನಾವು ನಮ್ಮ ತಂಗಿಯ ಹಿತದೃಷ್ಠಿಯಿಂದ ಒಪ್ಪಿಕೊಂಡಿದ್ದು ಇರುತ್ತದೆ. ನಂತರ ದಿನಾಂಕ: 24/05/2020 ರಂದು ಈ ಮೊದಲು ನಿಶ್ಚಿತಾರ್ಥದಲ್ಲಿ ಮಾತನಾಡಿದಂತೆ 1 ಲಕ್ಷ ರೂಪಾಯಿ ಹಾಗೂ 6 ತೊಲಿ ಬಂಗಾರ ಮತ್ತು ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ನಮ್ಮ ತಂಗಿಯಾದ ಮಲ್ಲಮ್ಮ ಇವಳಿಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹೆಬ್ಬಾಳ (ಕೆ) ಗ್ರಾಮದ ಭೀಮರಾಯಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್ ಈತನೊಂದಿಗೆ ಹೆಬ್ಬಾಳ ಗ್ರಾಮದ ಪರಮಾನಂದ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ಸಮಯದಲ್ಲಿ ನಮ್ಮ ಕಡೆಯವರು ಮತ್ತು ಗಂಡಿನ ಕಡೆಯವರು ಹಾಜರಿದ್ದದ್ದು ಇರುತ್ತದೆ.
ಮದುವೆಯಾದ ಸುಮಾರು 2 ತಿಂಗಳ ವರೆಗೆ ನನ್ನ ತಂಗಿಯು ತನ್ನ ಗಂಡ ಹಾಗೂ ಅವರ ಮನೆಯವರೊಂದಿಗೆ ಚೆನ್ನಾಗಿದ್ದಳು. ನನ್ನ ತಂಗಿಯು ಹೆಬ್ಬಾಳ ಮತ್ತು ಏವೂರ ಗ್ರಾಮಕ್ಕೆ ಹೋಗುವದು ಬರುವದು ಮಾಡುತ್ತಿದ್ದಳು. ನಂತರದಲ್ಲಿ ಈಗ್ಗೆ 4-5 ತಿಂಗಳುಗಳಿಂದ ಹೆಬ್ಬಾಳ ಗ್ರಾಮದಲ್ಲಿ ನನ್ನ ತಂಗಿಯ ಗಂಡ 1) ಭೀಮರಾಯಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟಿಲ, ತಂಗಿಯ ಮಾವನಾದ 2) ಸಿದ್ದನಗೌಡ ತಂದೆ ಭೀಮರಾಯಗೌಡ ಪೊಲೀಸ್ ಪಾಟೀಲ ಹಾಗೂ ಅತ್ತೆಯಾದ 3) ಚಾಮುಂಡಿ ಗಂಡ ಸಿದ್ದನಗೌಡ ಪೊಲಿಸ್ ಪಾಟೀಲ ಇವರೆಲ್ಲರು ಸೇರಿ ನನ್ನ ತಂಗಿ ಮಲ್ಲಮ್ಮಳಿಗೆ ನೀನು ನಮ್ಮ ಮನೆಗೆ ಹೊಂದಾಣಿಕೆ ಆಗುವದಿಲ್ಲ, ನಿನ್ನಿಂದ ನಮಗೇನು ಲಾಭವಿಲ್ಲ, ನಿನಗೆ ಅಡುಗೆ ಮಾಡಲು ಬರುವದಿಲ್ಲ ನಿನಗೆ ನಿನ್ನ ತವರು ಮನೆಯವರು ಹೇಗೆ ಕೆಲಸ ಕಲಿಸಿದ್ದಾರೋ ಏನೊ ನಿನಗೇನು ಗೊತ್ತೇ ಇಲ್ಲ, ನೀನು ನಮ್ಮಿಂದ ತೊಲಗಿ ಹೋಗು, ಇಲ್ಲದಿದ್ದರೆ ನಿನ್ನ ತವರು ಮನೆಯಿಂದ ಇನ್ನೂ 5 ತೊಲಿ ಬಂಗಾರ ಹಾಗೂ 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ, ಇಲ್ಲದಿದ್ದರೆ ಎಲ್ಲಾದರು ಹೋಗಿ ಸಾಯಿ ಅಂತ ದಿನಾಲು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಅಂತ ನಮ್ಮ ತಂಗಿ ನಮಗೆ ಆಗಾಗ ಫೋನ್ ಮೂಲಕ ಮತ್ತು ತವರು ಮನೆಗೆ ಬಂದಾಗ ತಿಳಿಸಿದ್ದು, ನಾವು ಅವಳಿಗೆ ಇರಲಿ ತಾಳಿಕೊಂಡು ಗಂಡನ ಮನೆಯವರೊಂದಿಗೆ ಹೊಂದಿಕೊಂಡು ಹೋಗುವಂತೆ ಬುದ್ದಿಮಾತು ಹೇಳಿದ್ದು ಇರುತ್ತದೆ.ಈಗ್ಗೆ ಸುಮಾರು 2 ತಿಂಗಳ ಹಿಂದೆ ಹೆಬ್ಬಾಳ ಗ್ರಾಮದಲ್ಲಿ ಪುನಃ ಒಂದು ದಿನ ಇದೇ ರೀತಿ ನನ್ನ ತಂಗಿಗೆ ಗಂಡನ ಮನೆಯವರು ಪುನಃ ತವರು ಮನೆಯಿಂದ ಹಣ ಮತ್ತು ಬಂಗಾರ ತಂದರೆ ಮಾತ್ರ ನಮ್ಮ ಮನೆಯಲ್ಲಿ ಇರಲಿಕ್ಕೆ ಅವಕಾಶ ಇರುತ್ತದೆ ಅಂತ ನನ್ನ ತಂಗಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ಗಂಡನ ಮನೆಯಲ್ಲಿ ಯಾಕೆ ಇರುತ್ತೀ ನಿನ್ನ ತವರು ಮನೆಗೆ ಹೋಗಿ ಹಣ ಬಂಗಾರ ತೆಗೆದುಕೊಂಡು ಬಾ ಅಂತ ಜಗಳ ಮಾಡಿ ಹೊಡೆಬಡೆ ಮಾಡಿದ್ದರಿಂದ ಈ ವಿಷಯವನ್ನು ನಮಗೆ ನಮ್ಮ ತಂಗಿಯು ಫೋನ್ ಮಾಡಿ ತಿಳಿಸಿದ್ದರಿಂದ ನಮ್ಮ ತಂದೆ ಭೀಮರಾಯ ಹಾಗೂ ನಾನು ಮತ್ತು ನಮ್ಮ ದೊಡ್ಡಪ್ಪನಾದ ಸಂಗಪ್ಪ ತಂದೆ ನಿಂಗಪ್ಪ ಕೊಂಡಗೂಳಿ ಎಲ್ಲರು ಹೆಬ್ಬಾಳ ಗ್ರಾಮಕ್ಕೆ ಹೋಗಿ ನ್ಯಾಯ ಮಾಡಿದರೂ ಸಹಿತ ನ್ಯಾಯಕ್ಕೆ ಒಪ್ಪದೆ 5 ತೊಲಿ ಬಂಗಾರ 1 ಲಕ್ಷ ರೂಪಾಯಿ ಹಣ ತಂದರೆ ಮಾತ್ರ ಮಲ್ಲಮ್ಮಳಿಗೆ ನಮ್ಮ ಮನೆಯಲ್ಲಿ ಜಾಗ ಇರುತ್ತದೆ ಅಂತ ಅಂದಿದ್ದರಿಂದ ಆಯಿತು ಹತ್ತಿ ಮಾರಿದ ನಂತರ ಹಣವನ್ನು ತಂದು ಕೊಡುತ್ತೇವೆ ನಮ್ಮ ತಂಗಿಗೆ ಸರಿಯಾಗಿ ನೋಡಿಕೊಳ್ಳಿರಿ ಅಂತಾ ಹೇಳಿ ಬಂದಿರುತ್ತೇವೆ. ನಮ್ಮ ತಂಗಿಯು ನಮಗೆ ತನ್ನ ಗಂಡ, ಅತ್ತೆ, ಮಾವನ ಕಿರುಕುಳ ತಾಳಲಿಕ್ಕೆ ಠಾಗುತ್ತಿಲ್ಲ ನನಗೆ ಮನೆಗೆ ಕರೆದುಕೊಂಡು ಹೋಗಿ ಅಂತಾ ಹೇಳಿದ್ದರಿಂದ ನಾನು ಒಂದು ತಿಂಗಳ ಹಿಂದೆ ಹೆಬ್ಬಾಳಕ್ಕೆ ಹೋಗಿ ನನ್ನ ತಂಗಿಗೆ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ನಂತರ ನನ್ನ ತಂಗಿ ತವರು ಮನೆಗೆ ಬಂದ ಮೂರು ದಿನದಲ್ಲಿ ಪುನಃ ಭೀಮರಾಯಗೌಡ ಈತನು ಏವೂರ ಗ್ರಾಮಕ್ಕೆ ನಮ್ಮ ಮನೆಗೆ ಬಂದು ನನ್ನ ತಂಗಿಯ ಹತ್ತಿರ ಇನ್ನು ಮುಂದೆ ನಾನು ಚೆನ್ನಾಗಿ ಇರುತ್ತೇನೆ ಅಂತ ಹೇಳಿದಾಗ ನಮ್ಮೂರಿನ ನಮ್ಮ ಅಣ್ಣತಮ್ಮಕಿಯವರು ಕೂಡಿ ಬುದ್ದಿಮಾತು ಹೇಳಿ ಮಲ್ಲಮ್ಮ ಇವಳೊಂದಿಗೆ ಸರಿಯಾಗಿ ಸಂಸಾರ ಮಾಡಿಕೊಂಡು ಹೋಗು ಅಂತ ಹೇಳಿದಾಗ, ಆಯಿತು ಅಂತ ಅಂದವನು 2 ದಿನ ಸರಿಯಾಗಿ ಇದ್ದು, ಪುನಃ ಅದೇ ಚಾಳಿಯನ್ನು ಮುಂದುವರೆಸಿ ಮಲ್ಲಮ್ಮ ಇವಳಿಗೆ ಗಂಡನ ಮನೆಗೆ ಕರೆದುಕೊಂಡು ಹೋಗದೆ ಇಲ್ಲಿಯೇ ಬಿಟ್ಟು ಹಣ ಮತ್ತು ಬಂಗಾರ ತಂದರೆ ಮಾತ್ರ ಹೆಬ್ಬಾಳ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ಹೋದನು. ಆಗ ನಾವು ಈ ಬಗ್ಗೆ ಹೆಬ್ಬಾಳ ಗ್ರಾಮದ ಪ್ರಮುಖರೊಂದಿಗೆ ಪುನಃ ನ್ಯಾಯ ಮಾಡಿದರಾಯಿತು ಅಂತ ನಮ್ಮ ಮಗಳನ್ನು ಏವೂರ ಗ್ರಾಮದಲ್ಲಿಯೇ ಇಟ್ಟುಕೊಂಡಿದ್ದೆವು. ಹೀಗಿದ್ದು, ನಿನ್ನೆ ದಿನಾಂಕ: 06/01/2021 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ನಮ್ಮ ಕುಟುಂಬದವರೊಂದಿಗೆ ನಮ್ಮ ಮನೆಯಲ್ಲಿದ್ದಾಗ ಆಗ ನಮ್ಮ ತಂಗಿಯ ಗಂಡನಾದ ಭೀಮರಾಯಗೌಡ ಈತನು ನಮ್ಮ ಮನೆಗೆ ಬಂದನು. ಆಗ ನಮ್ಮ ಮಾವ ಭಿಮರಾಯಗೌಡ ಸಾಯಂಕಾಲ 8 ಪಿಎಮ್ ಸುಮಾರಿಗೆ ಪುನಃ ನನ್ನ ತಂಗಿಯ ಜೊತೆಗೆ ಹಣ ಮತ್ತು ಬಂಗಾರದ ಸಲುವಾಗಿ ಜಗಳ ತೆಗೆದನು. ಆಗ ನಾವು ಆಯಿತು ಈಗ ರಾತ್ರಿಯಾಗಿದೆ ಮುಂಜಾನೆ ಮಾತಾಡೋಣ ಅಂತ ನಮ್ಮ ತಂಗಿ ಮಲ್ಲಮ್ಮ ಮತ್ತು ತಂಗಿಯ ಗಂಡ ಭೀಮರಾಯಗೌಡ ಈತನಿಗೆ ಇಬ್ಬರಿಗೂ ತಿಳಿಹೇಳಿ, ಊಟ ಮಾಡಿಸಿ ರಾತ್ರಿ ಮಲಗಲು ಅಂಗಡಿಯಿರುವ ನಮ್ಮ ಇನ್ನೊಂದು ಮನೆಗೆ ಇಬ್ಬರಿಗೂ ಕಳುಹಿಸಿದೆವು. ಎಂದಿನಂತೆ ನಾವು ಹಳೆ ಮನೆಯಲ್ಲಿಯೆ ಕುಟುಂಬ ಸಮೇತ ರಾತ್ರಿ ಮಲಗಿದೆವು. ನಂತರ ನಾನು ದಿನಾಂಕ: 07/01/2021 ರ ಬೆಳಿಗ್ಗೆ ಎದ್ದು ನನ್ನ ಕಿರಾಣಿ ಅಂಗಡಿಗೆ ಬಂದೆನು. ನನ್ನ ತಂಗಿಯು ಸಹಿತ ಆ ಮನೆಯಿಂದ ಕೆಲಸ ಮಾಡಲು ಹಳೆ ಮನೆಗೆ ಬಂದಳು. ನಂತರ ಸುಮಾರು 8 ಎಎಮ್ ಆದರೂ ಸಹಿತ ಭಿಮರಾಯಗೌಡ ಈತನು ಎದ್ದು ಬರಲಿಲ್ಲ. ಆಗ ನನ್ನ ತಂಗಿ ಗಂಡನಿಗೆ ಎಬ್ಬಿಸಿಕೊಂಡು ಬರುತ್ತೇನೆ ಅಂತ ಮನೆಯಲ್ಲಿ ಹೇಳಿ ಹೋದಳು. ನಂತರ ನಾನು ಅಂಗಡಿಯಲ್ಲಿದ್ದಾಗ ಇಂದು ದಿನಾಂಕ: 07/01/2021 ರಂದು 8.45 ಎಎಮ್ ಸುಮಾರಿಗೆ ನನ್ನ ತಂಗಿಯ ಗಂಡನಾದ ಭೀಮರಾಯಗೌಡ ಈತನು ಮನೆಯಿಂದ ಹೊರಗಡೆ ಬಂದವನೇ ತನ್ನ ಕಾರು ಚಾಲು ಮಾಡುತ್ತಿದ್ದಾಗ, ಆಗ ನಾನು ಯಾಕೆ ಮಾಮ ಎಲ್ಲಿಗೆ ಹೊಂಟಿರಿ ಅಂತ ಕೇಳಿದಾಗ, ಅವನು ಹೆಬ್ಬಾಳಕ್ಕೆ ಹೋಗುತ್ತೇನೆ ಅಂತ ಗಡಿಬಿಡಿಯಿಂದ ಕಾರು ಚಾಲೂ ಮಾಡಿಕೊಂಡು ಹೋದನು. ಆಗ ನಾನು ಗಾಬರಿಯಾಗಿ ನಮ್ಮ ತಂಗಿ ಇದ್ದ ಕೋಣೆಗೆ ಹೋಗಿ ನೋಡಲಾಗಿ, ಆಗ ಕೋಣೆಯಲ್ಲಿ ನನ್ನ ತಂಗಿ ಬಿದ್ದು ಒದ್ದಾಡುತ್ತಿದ್ದಳು. ಆಗ ನಾನು ಏನಾಯಿತು ಅಂತ ಕೇಳಿದಾಗ ನನ್ನ ಗಂಡ ತಾಳಿ ಹರಿದುಕೊಂಡು ನನಗೆ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಇಲ್ಲದಿದ್ದರೆ ಇಲ್ಲೇ ಎಣ್ಣಿ ಕುಡಿದು ಸಾಯಿ ಅಂತ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕ್ರಿಮಿನಾಶಕ ಔಷಧ ಸೇವನೆ ಮಾಡಿದ್ದೇನೆ ಅಂತ ಒದ್ದಾಡುತ್ತಾ ಹೇಳಿದಳು. ಆಗ ಈ ವಿಷಯವನ್ನು ನಮ್ಮ ಮನೆಯವರಿಗೆ ತಿಳಿಸಿ ನಮ್ಮ ತಂಗಿಗೆ ಉಪಚಾರ ಕುರಿತು ನಾನು, ನಮ್ಮೂರ ಕೃಷ್ಣಪ್ಪ ಜೇರಟಗಿ, ಬಸಪ್ಪ ಕೊಂಡಗೂಳಿ, ಗೋಪಾಲ ಲಕಣಾಪೂರ ಎಲ್ಲರು ಕೂಡಿ ನನ್ನ ತಂಗಿಗೆ ಚಾಮನಾಳ ಸರಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕುರಿತು ಸೇರಿಕೆ ಮಾಡಿ, ಅಲ್ಲಿನ ವೈದ್ಯರು ಹೆಚ್ಚಿನ ಉಪಚಾರ ಕುರಿತು ಶಹಾಪುರಕ್ಕೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡುವಷ್ಟರಲ್ಲಿ ಇಂದು ಮುಂಜಾನೆ 10.30 ಗಂಟೆ ಸುಮಾರಿಗೆ ಸರಕಾರಿ ಆಸ್ಪತ್ರೆಯ ಹತ್ತಿರ ಮೃತಪಟ್ಟಿರುತ್ತಾಳೆ. ಕಾರಣ ನನ್ನ ತಂಗಿಯ ಗಂಡನಾದ 1) ಭೀಮರಾಯಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟಿಲ, ತಂಗಿಯ ಮಾವನಾದ 2) ಸಿದ್ದನಗೌಡ ತಂದೆ ಭೀಮರಾಯಗೌಡ ಪೊಲೀಸ್ ಪಾಟೀಲ ಹಾಗೂ ಅತ್ತೆಯಾದ 3) ಚಾಮುಂಡಿ ಗಂಡ ಸಿದ್ದನಗೌಡ ಪೊಲಿಸ್ ಪಾಟೀಲ ಸಾ|| ಎಲ್ಲರೂ ಹೆಬ್ಬಾಳ (ಕೆ) ಇವರೆಲ್ಲರು ಸೇರಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿದ್ದರಿಂದ ಅವರು ನೀಡುವ ಕಿರುಕುಳಕ್ಕೆ ಬೇಸತ್ತು ನನ್ನ ತಂಗಿಯು ದಿನಾಂಕ: 07/01/2021 ರಂದು ಬೆಳಿಗ್ಗೆ 8:45 ಗಂಟೆಗೆ ಮನೆಯಲ್ಲಿ ಕ್ರಿಮಿನಾಷಕ ಔಷದಿ ಸೇವನೆ ಮಾಡಿ ಉಪಚಾರ ಫಲಕಾರಿಯಾಗದೇ ಬೆಳಿಗ್ಗೆ 10:30 ಗಂಟೆಗೆ ಮೃತಪಟ್ಟಿರುತ್ತಾಳೆ. ಕಾರಣ ನನ್ನ ತಂಗಿಯ ಸಾವಿಗೆ ಕಾರಣರಾದ ಮೇಲ್ಕಾಣಿಸಿದ 3 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 04/2021 ಕಲಂ: 498ಎ, 304ಬಿ, 34 ಐಪಿಸಿ ಮತ್ತು 3, 4 ಡಿಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.