ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/01/2021

By blogger on ಶನಿವಾರ, ಜನವರಿ 16, 2021

 



                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/01/2021 

ಯಾದಗಿರ ಗ್ರಾಮೀಣ  ಪೊಲೀಸ ಠಾಣೆ ಗುನ್ನೆ ನಂ:- 06/2021 ಕಲಂ 143, 147, 148, 302 ಸಂ 149 ಐಪಿಸಿ : ಇಂದು ದಿನಾಂಕ 16/01/2021 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ರಾಜಪ್ಪ ತಂದೆ ಲಕ್ಷ್ಮಣ ರಾಮಣ್ಣನವರ್, ಸಾ||ಅಲ್ಲಿಪೂರ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ಮೇಲ್ಕಂಡ ವಿಳಾಸದ ನಿವಾಸಿಯಾದ ನಾನು ಒಕ್ಕಲುತನ ಮಾಡಿಕೊಂಡಿರುತ್ತೇನೆ. ನನಗೆ 1)ಧನರಾಜ, 2)ಸುರೇಶ, 3)ವಿಜಯಕುಮಾರ, 4)ಚಿರಂಜೀವಿ, 5)ದೇವಪ್ಪ ಹೆಸರಿನ 5 ಜನ ಗಂಡುಮಕ್ಕಳಿರುತ್ತಾರೆ. ನನ್ನ ಮಕ್ಕಳು ಎಲ್ಲರು ಕೂಲಿ ಕೆಲಸ ಮಾಡಿಕೊಂಡಿದ್ದು, ದೇವಪ್ಪ ವಯ:16 ವರ್ಷ ಈತನು ಆಡು ಕಾಯುತ್ತಿದ್ದನು. ಹೀಗಿದ್ದು ನಿನ್ನೆ ದಿನಾಂಕ:15/01/2021 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನನ್ನ ಮಗ ದೇವಪ್ಪನು ಊಟಮಾಡಿ ಅಂಗಳದಲ್ಲಿದ್ದ ಆಡುಗಳನ್ನು ಮನೆಯಲ್ಲಿ ಕಟ್ಟಿದ ನಂತರ ಚರ್ಚ ಕಡೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದನು. ನಮ್ಮೂರಿನ ಶಿವು ತಂದೆ ಮಹಾದೇವಪ್ಪ ನಾಟೆಕಾರ್ ಈತನು ಕೈಕುಸ್ತಿಯಲ್ಲಿ ಗೆದ್ದಿದ್ದರಿಂದ ಆತನಿಗೆ ಮೆರವಣಿಗೆ ಮಾಡಿಕೊಂಡು ಚಚರ್್ ಹತ್ತಿರದಿಂದ ಹೋಗುತ್ತಿದ್ದರಿಂದ ಮೆರವಣಿಗೆ ನೋಡಲು ಹೋಗಿರಬಹುದೆಂದು ತಿಳಿದು ನಾವು ಮತ್ತು ನನ್ನ ಮಕ್ಕಳು ಮನೆಯಲ್ಲಿ ಇದ್ದೆವು. ರಾತ್ರಿ 12:00  ಗಂಟೆಯಾದರೂ ನನ್ನ ಮಗ ದೇವಪ್ಪನು ಮನೆಗೆ ಬರದೇ ಇದ್ದರಿಂದ ನಾನು ಚರ್ಚ ಕಡೆಗೆ, ಊರಲ್ಲಿ ಹೋಗಿ ಹುಡುಕಾಡಿ ನೋಡಲಾಗಿ ದೇವಪ್ಪನು ಕಾಣಲಿಲ್ಲ. ನಂತರ ನಾನು ಮನೆಗೆ ಬಂದು ನಾನು ಮತ್ತು ನನ್ನ ಮಕ್ಕಳು ಕೂಡಿಕೊಂಡು ಊರಿನ ಸಮೀಪದ ನಮ್ಮ ಹೊಲದಲ್ಲಿ, ಗೇಟಿಗೆ ಹೋಗಿ ಹುಡುಕಾಡಿದ್ದು ದೇವಪ್ಪನು ಸಿಗಲಿಲ್ಲ. ನಂತರ ಇಂದು ದಿನಾಂಕ:16/01/2021 ರಂದು ಬೆಳಗ್ಗೆ 6:00 ಗಂಟೆಯ ಸುಮಾರಿಗೆ ನನ್ನ ಮಗನಾದ ಸುರೇಶನು ದೆವಪ್ಪನಿಗೆ ಹುಡುಕಾಡಲು ನಮ್ಮ ಓಣಿಯ ಹಳ್ಳದ ನಂತರ ಹಾಳು ಬಿದ್ದ ಮನೆಗಳ ಕಡೆ ನೋಡಿಬರುತ್ತೇನೆ ಎಂದು ಹೇಳಿ ಹೋಗಿ ಸ್ವಲ್ಪ ಸಮಯದ ನಂತರ ಸುರೇಶನು ಮರಳಿ ಬಂದು ತಿಳಿಸಿದ್ದೇನೆಂದರೆ, ರಾಜಪ್ಪ ತಂದೆ ಭೀಮರಾಯ ಅಚಿಕೇರಿ ಇವರ ಮನೆಯ ಪಕ್ಕದ ಖುಲ್ಲಾ ಜಾಗೆಯಲ್ಲಿ ದೇವಪ್ಪನು ನೆಲದ ಮೇಲೆ ಬಿದ್ದಿದ್ದು, ನೋಡಲಾಗಿ ಆತನ ಕುತ್ತಿಗೆಗೆ ಮತ್ತಿತರ ಕಡೆಗಳಿಗೆ ರಕ್ತಗಾಯಗಳಾಗಿದ್ದು, ಯಾರೋ ದೇವಪ್ಪನಿಗೆ ಕೊಲೆಮಾಡಿರುತ್ತಾರೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಹೆಂಡತಿ ಅಮೃತಮ್ಮ, ನನ್ನ ಮಕ್ಕಳು ಹಾಗು ನನ್ನ ಅಣ್ಣ ಜ್ಞಾನಮಿತ್ರ ಹಾಗು ಇನ್ನಿತರರು ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ಮಗ ದೇವಪ್ಪನಿಗೆ ಕುತ್ತಿಗೆಗೆ ಕಂದುಗಟ್ಟಿದ ರಕ್ತಗಾಯಗಳಾಗಿದ್ದು, ಬಲಗಲ್ಲಕ್ಕೆ ಭಾರಿ ರಕ್ತಗಾಯವಾಗಿದ್ದು, ಬಾಯಿಗೆ ಗಾಯವಾಗಿ ವಸಡು ಸಮೇತ ಹಲ್ಲುಗಳು ಮುರಿದಿರುತ್ತವೆ. ಬಲಕಿವಿಗೆ, ಬಲಕಿವಿ ಹಿಂದಿನ ತಲೆಗೆ ರಕ್ತಗಾಯಗಳಾಗಿದ್ದು, ಎರಡೂ ಭುಜಗಳಿಗೆ ರಕ್ತಗಾಯಗಳಾಗಿ ಸತ್ತಿದ್ದನು. ದಿನಾಂಕ:15/01/2021 ರಂದು ರಾತ್ರಿ 10:30 ಗಂಟೆಯಿಂದ 11:30 ಗಂಟೆಯ ಅವಧಿಯಲ್ಲಿ ರಾಜಪ್ಪ ತಂದೆ ಭೀಮರಾಯ ಅಚಿಕೇರಿ ಇವರ ಮನೆಯ ಪಕ್ಕದ ಖುಲ್ಲಾ ಜಾಗೆಯಲ್ಲಿ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ನನ್ನ ಮಗನಾದ ದೇವಪ್ಪ ವಯ:16 ವರ್ಷ ಈತನಿಗೆ ಯಾವುದೋ ಆಯುಧದಿಂದ ಹೊಡೆದು ಕೊಲೆಮಾಡಿರುತ್ತಾರೆ. ನನ್ನ ಮಗನಾದ ದೇವಪ್ಪನು ನಮ್ಮೂರಿನ ಚರ್ಚ ಹತ್ತಿರ ಹೋಗಿ ಕೂಡುತ್ತಿದ್ದರಿಂದ 1)ರಾಜಪ್ಪ ತಂದೆ ಯೇಸಪ್ಪ ದೊಡ್ಡಮನಿ, 2)ಸಾಬಣ್ಣ ತಂದೆ ಮಲ್ಲಪ್ಪ ದೊಡ್ಡಮನಿ, 3)ಮರೆಪ್ಪ ತಂದೆ ಜಾನಪ್ಪ ದೊಡ್ಡಮನಿ, 4)ಭಾಸ್ಕರ ತಂದೆ ಸಾಬಣ್ಣ ದೊಡ್ಡಮನಿ, 5)ದಶವಂತ ತಂದೆ ಸಾಂತಪ್ಪ ದೊಡ್ಡಮನಿ, 6)ಯೇಸಪ್ಪ ತಂದೆ ಸಣ್ಣಸಾಬಣ್ಣ ದೊಡ್ಡಮನಿ ಎಲ್ಲರು ಸಾ||ಅಲ್ಲಿಪೂರ ಇವರು ಆಗಾಗ ನನ್ನ ಮಗ ದೇವಪ್ಪನಿಗೆ ಚರ್ಚ ಹತ್ತಿರ ಯಾಕ ಕೂಡ್ತಿ, ಇಲ್ಲಿಂದ ಎದ್ದುಹೋಗು ಅಂತಾ ತಕರಾರು ಮಾಡುತ್ತಾ ಬಂದಿದ್ದು, ಈಗ 8-10 ದಿವಸಗಳ ಹಿಂದೆ ರಾತ್ರಿ 8:00 ಗಂಟೆಯ ಸುಮಾರಿಗೆ ಮೆಲಿನವರೆಲ್ಲರು ನನ್ನ ಮಗ ದೇವಪ್ಪನೊಂದಿಗೆ ಚರ್ಚ ಹತ್ತಿರ ಯಾಕ ಬಂದು ಕೂಡ್ತಿ ಅಂತಾ ಜಗಳತೆಗೆದು ಬಾಯಿಮಾಡಿಕೊಳ್ಳುತ್ತಿದ್ದರಿಂದ ನಾನು ಮತ್ತು ನನ್ನ ಅಣ್ಣ ಜ್ಞಾನಮಿತ್ರ ಹೋಗಿ ಅವರಿಗೆ ಸಮಜಾಯಿಸಿ ನನ್ನ ಮಗ ದೇವಪ್ಪನಿಗೆ ಮನೆಗೆ ಕರೆದುಕೊಂಡು ಬಂದಿದ್ದು, ಅವರೆಲ್ಲರು ನನ್ನ ಮಗ ದೇವಪ್ಪನಿಗೆ ಇಲ್ಲಿಗೆ ಇನ್ನೊಮ್ಮೆ ಬಂದರೆ ನೆಟ್ಟಗಿರಲ್ಲ, ಒಂದಲ್ಲ ಒಂದು ದಿನ ನಿನಗೆ ನೋಡಿಕೊಳ್ತಿವಿ ಅಂತಾ ಹೆದರಿಕೆ ಹಾಕಿದ್ದರು.  ದಿನಾಂಕ:15/01/2021 ರಂದು ರಾತ್ರಿ 10:30 ಗಂಟೆಯಿಂದ 11:30 ಗಂಟೆಯ ಅವಧಿಯಲ್ಲಿ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ನನ್ನ ಮಗನಾದ ದೇವಪ್ಪ ವಯ:16 ವರ್ಷ ಈತನಿಗೆ ಯಾವುದೋ ಆಯುಧದಿಂದ ಹೊಡೆದು ಕೊಲೆಮಾಡಿದ್ದು, ನನ್ನ ಮಗನೊಂದಿಗೆ ಈ ಮೊದಲಿನಿಂದಲೂ ದ್ವೇಷ ಮಾಡುತ್ತಿದ್ದ 1)ರಾಜಪ್ಪ ತಂದೆ ಯೇಸಪ್ಪ ದೊಡ್ಡಮನಿ, 2)ಸಾಬಣ್ಣ ತಂದೆ ಮಲ್ಲಪ್ಪ ದೊಡ್ಡಮನಿ, 3)ಮರೆಪ್ಪ ತಂದೆ ಜಾನಪ್ಪ ದೊಡ್ಡಮನಿ, 4)ಭಾಸ್ಕರ ತಂದೆ ಸಾಬಣ್ಣ ದೊಡ್ಡಮನಿ, 5)ದಶವಂತ ತಂದೆ ಸಾಂತಪ್ಪ ದೊಡ್ಡಮನಿ, 6)ಯೇಸಪ್ಪ ತಂದೆ ಸಣ್ಣಸಾಬಣ್ಣ ದೊಡ್ಡಮನಿ ಎಲ್ಲರು ಸಾ||ಅಲ್ಲಿಪೂರ ಇವರ ಮೇಲೆ ನಮಗೆ ಸಂಶಯವಿರುತ್ತದೆ. ಕಾರಣ ನನ್ನ ಮಗನಿಗೆ ಕೊಲೆಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಟೈಪ್ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 06/2021 ಕಲಂ 143, 147, 148, 302 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

                                                      

ಸೈದಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 08/2021 ಕಲಂ. 279,337,338 ಐಪಿಸಿ ಮತ್ತು 187 ಐಎಮವಿ ಕಾಯ್ದೆ  : 16-01-2021 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರ ಠಾಣೆಗೆ ಹಾಜರಾಗಿ ಪಿಯರ್ಾಧಿ ಸಲ್ಲಿಸಿದ ಸಾರಂಶವೇನೆಂದರೆ ದಿನಾಂಕ: 03-01-2021 ರಂದು ನನ್ನ ಮಗ ರಮೇಶರೆಡ್ಡಿ ಈತನು ಗುಪ್ತ ಮಾಹಿತಿ ಕರ್ತವ್ಯಕ್ಕೆ ಹೋಗಿದ್ದು ದಿನಾಂಕ: 04-01-2021 ರಂದು ಬೆಳಿಗ್ಗೆ 07-45 ಗಂಟೆಗೆ ನನ್ನ ಮಗನಿಗೆ ಕಾಳಬೆಳಗುಂದಿ ಗುಡಿಯ ಹತ್ತಿರ ಅಪಘಾತವಾಗಿದೆ ಅಂತಾ ಸುದ್ದಿ ತಿಳಿದು ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಿಗೆ ಬಲಗಣ್ಣು ಮತ್ತು ಬಲ ಮೇಲಕಿಗೆ ಭಾರಿ ಪೆಟ್ಟಾಗಿ ರಕ್ತಗಾಯವಾಗಿದ್ದು ಬಲಗಣ್ಣು ಉಬ್ಬಿತ್ತು ಮತ್ತು ಬೆನ್ನು ಮತ್ತು ಹೊಟ್ಟೆಗೆ ಭಾರಿ ಗುಪ್ತಗಾಯವಾಗಿತ್ತು ಎಡಕಾಲಿನ ಮೋಣಕಾಲಿನ ಕೆಳಗೆ ರಕ್ತಗಾಯವಾಗಿತ್ತು. ಆತನಿಗೆ ಮಾತಾಡಿಸಿದರೆ ಮಾತನಾಡುತ್ತಿರಲಿಲ್ಲ ಆಗ ನನ್ನ ಮಗನಿಗೆ ವೈದೈಕೀಯ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಯಾದಗಿರಿಗೆ ಹೋಗಿ ಅಲ್ಲಿ ಪ್ರಾಥಮಿಕ ಉಪಚಾರ ಪಡೆದುಕೊಂಡು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ ದಿನಾಂಕ: 03-01-2021 ರಂದು ರಾತ್ರಿ 09-00 ಗಂಟೆಗೆ ಕಾಳಬೆಳಗುಂದಿ ಹತ್ತಿರ ಕಾಳಬೆಳಗುಂದಿ-ಯಲೇರಿ ರೋಡಿನ ಮೇಲೆ ಆರೋಪಿತನು ತಾನು ನಡೆಸುವ ಮೋಟರ ಸೈಕಲ್ ನಂ. ಕೆಎ-33 ಯು-8399 ನೇದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ನಡೆದುಕೊಂಡು ಹೋಗುತ್ತಿರುವ ನನ್ನ ಮಗನಿಗೆ ಅಪಘಾತಪಡಿಸಿರುತ್ತಾನೆ ಅಂತಾ ಪಿಯರ್ಾಧಿ ಸಾರಂಶ 

ವಡಗೇರಾ ಪೊಲೀಸ್ ಠಾಣೆ ಗುನ್ನೆ :- 10/2021 ಕಲಂ:279,338 ಐಪಿಸಿ : ದಿನಾಂಕ:16/01/2021 ರಂದು 1-15 ಪಿಎಮ್ ಕ್ಕೆ ಶ್ರೀ ಸುನೀಲ್ ಕುಮಾರ ತಂದೆ ರಾಜಶೇಖರ ಪಾಟೀಲ್, ವ-27, ಜಾ-ಲಿಂಗಾಯತ, ಉ-ಒಕ್ಕಲುತನ, ಸಾ-ಭಾಗ್ಯನಗರ ಕ್ಯಾಂಪ್ ಸಿರವಾರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮತ್ತು ನನ್ನ ಮಾವ ಪಾಟೀಲ್ ವಿ.ಟಿ ತಂದೆ ತಿಮ್ಮಾ ರೆಡ್ಡಿ ಹಾಗೂ ನಮ್ಮ ಮಾವನ ಗೆಳೆಯ ರಾಮಣ್ಣ ತಂದೆ ಕಾಂತಪ್ಪ ಈ ಮೂರು ಜನ ಸೇರಿ ದಿನಾಂಕ: 14/01/2021 ರಂದು ರಾಯಚೂರಿನಿಂದ ಸಂಕ್ರಾಂತಿ ಪ್ರಯುಕ್ತ ಸಂಗಮಕ್ಕೆ ಬಂದು ಸ್ನಾನ ಮಾಡಿ ತರುವಾಯ ಬೆಂಡೆಬೆಂಬಳಿ ಗ್ರಾಮಕ್ಕೆ ಕಾರ್ ನಂ: ಕೆಎ-36/ಬಿ-4831 ನೇದ್ದರಲ್ಲಿ ಹೊರಟೆವು ಕಾರನ್ನು ನನ್ನ ಮಾವ ಪಾಟೀಲ್ ವಿ.ಟಿ ಈತನು ಚಲಾಯಿಸುತ್ತಿದ್ದನು ನಾನು ಹಿಂದುಗಡೆ ಕುಳಿತುಕೊಂಡಿದ್ದು ಮುಂದುಗಡೆ ನಮ್ಮ ಮಾವನ ಗೆಳೆಯ ರಾಮಣ್ಣ ಕುಳಿತುಕೊಂಡಿದ್ದು ಸಂಗಮ-ಬೆಂಡೆಬೆಂಬಳಿ ರೋಡಿನ ಅರಕಲಬಂಡಿ ಹತ್ತಿರ 04:30 ಪಿಎಮ್ ಸುಮಾರಿಗೆ ಪಾಟೀಲ್ ವಿ.ಟಿ ಈತನು ಕಾರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ತಿರುವಿನಲ್ಲಿ ಕಾರ್ ಆತನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಪಕ್ಕದ ಹೊಲದಲ್ಲಿ ಹೋಗಿ ಬಿದ್ದಿತ್ತು. ಅಪಘಾತದಲ್ಲಿ ನನಗೆ ಸಣ್ಣ ಪುಟ್ಟ ಒಳಪೆಟ್ಟಾಗಿದ್ದು ನಮ್ಮ ಮಾವ ಪಾಟೀಲ್ ವಿ.ಟಿ ಈತನಿಗೂ ಕೂಡ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದವು. ನಮ್ಮ ಮಾವನ ಗೆಳೆಯ ರಾಮಣ್ಣನಿಗೆ ಮುಖಕ್ಕೆ ತರಚಿದ ಗಾಯ, ಬಲಭುಜದಲ್ಲಿ ಭಾರಿ ಒಳಪೆಟ್ಟಾಗಿದ್ದು ಎಲುಬು ಮುರಿದಿದ್ದು ಹೊಟ್ಟೆಗೆ ಮತ್ತು ಬೆನ್ನಿಗೆ ತರಚಿದ ಗಾಯಗಳಾಗಿದ್ದವು. ನಂತರ ನಾವು ಭಾರಿ ಗಾಯಗೊಂಡ ರಾಮಣ್ಣನಿಗೆ ಬೇರೊಂದು ವಾಹನದಲ್ಲಿ ರಾಯಚೂರು ಸುರಕ್ಷಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಾತ್ರಿ ಉಪಚಾರ ಕುರಿತು ಸೇರಿಕೆ ಮಾಡಿದೆವು. ನಂತರ ನಾನು ಅಲ್ಲಿಂದ ನಮ್ಮ ಹಿರಿಯರಿಗೆ ವಿಚಾರಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ.  ಕಾರಣ ಕಾರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿಸಿದ ಪಾಟೀಲ್ ವಿ.ಟಿ ಈತನ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 10/2021 ಕಲಂ:279,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ :- 11/2020 ಕಲಂ: 78(3) ಕೆ.ಪಿ.ಆಕ್ಟ್ : ಇಂದು ದಿನಾಂಕ: 16/01/2021 ರಂದು 3 ಪಿಎಮ್ ಕ್ಕೆ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೆನಂದರೆ ಇಂದು ದಿನಾಂಕ: 16/01/2021 ರಂದು ಸಮಯ ಮಧ್ಯಾಹ್ನ 12:30 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ರಾಜಕುಮಾರ ಹೆಚ.ಸಿ 179 ಮತ್ತು ಶ್ರೀ ಮಹೇಂದ್ರ ಪಿಸಿ 254 ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೇನಂದರೆ ಕುರುಕುಂದಾ ಗ್ರಾಮದ ಅಂಬೇಡ್ಕರ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ನಾವು ಅಲ್ಲಿಗೆ ಹೋಗಿ ದಾಳಿ ಮಾಡಬೇಕಾಗಿದೆ ದಾಳಿ ಸಮಯದಲ್ಲಿ ಪಂಚರಾಗಿ ಹಾಜರಿದ್ದು ಸಹಕರಿಸಲು ಕೇಳಿಕೊಂಡ ಮೇರಗೆ ಪಂಚರು ಒಪ್ಪಿಕೊಂಡರು. ನಂತರ ಈ ಮೇಲ್ಕಂಡ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನಂ. ಕೆಎ 33 ಜಿ 115 ನೇದ್ದರಲ್ಲಿ ಕುಳಿತು ವಡಗೇರಾ ಠಾಣೆಯಿಂದ ಸಮಯ 12-45 ಪಿಎಮ್ ಕ್ಕೆ ಹೊರಟು ಸಮಯ 1-25 ಪಿಎಮ್ ಸುಮಾರಿಗೆ ತುಮಕೂರು ಗ್ರಾಮ ತಲುಪಿ ತುಮಕೂರು ಕ್ರಾಸದಲ್ಲಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ಅಂಬಿಗರ ಚೌಡಯ್ಯನ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 1-30 ಪಿಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸಂತೋಷ ತಂದೆ ತಿಮ್ಮಣ್ಣ ಕೆರೆರ, ವ:45, ಜಾ:ಕಬ್ಬಲಿಗ, ಉ:ಕೂಲಿ ಸಾ:ತುಮಕೂರು ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 8200/- ರೂ ಮತ್ತು 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 8200/- ರೂ. ನಗದು ಹಣ ಮತ್ತು ಮುದ್ದೆ ಮಾಲನ್ನು ವಶಪಡಿಸಿಕೊಂಡು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಾಭಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು 5-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ. 11/2021 ಕಲಂ 78 (3) ಕೆ.ಪಿ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ :- 04/2021 78 (3) ಕೆ.ಪಿ ಯಾಕ್ಟ : ದಿನಾಂಕ:16/01/2021 ರಂದು 15.30 ಪಿ.ಎಮ್ ಕ್ಕೆ, ಶ್ರೀ.ಬಾಪುಗೌಡ ಪಿಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ  ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ  ವಜ್ಜಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:04/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆನಂತರ ಪಿಎಸ್ಐ(ಕಾ.ಸು)  ಹುಣಸಗಿ ಪೊಲೀಸ್ ಠಾಣೆ ರವರು ಸಾಯಂಕಾಲ 17.15 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 3240/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು,್ದ ಇರುತ್ತದೆ. ಆರೋಪಿತರ ಹೆಸರು 1) ಗುರಣ್ಣ @ಗುರಡ್ಡಿ ತಂದೆ ಬಸಣ್ಣ  ಸುರಪೂರ ವಯ:50 ವರ್ಷ ಜಾತಿ: ಹಿಂದೂ ಲಿಂಗಾಯತ ಉ:ಮಟಕಾ ಬರೆಯುವುದು ಸಾ:ವಜ್ಜಲ್ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತಾನೆ.

ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 12/2021 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ : ಇಂದು ದಿನಾಂಕ 16/01/2021  ರಂದು  ಮದ್ಯಾಹ್ನ 13-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ವೆಂಕಟೇಶ್ ಪೊಲೀಸ್ ಉಪ-ಅಧೀಕ್ಷಕರು, ಸುರಪೂರ ಉಪ ವಿಭಾಗ ರವರು, ಒಂದು ಮರಳು ತುಂಬಿದ ಟಿಪ್ಪರ ವಾಹನ ನಂ ಕೆಎ-33-ಎ-9462 ನೇದ್ದು ಹಾಜರ ಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಫಿಯರ್ಾದಿಯವರು ಇಂದು ದಿನಾಂಕ 16/01/2021  ರಂದು, ಮುಂಜಾನೆ 11-00 ಗಂಟೆಗೆ, ಪೊಲೀಸ್ ಪೇದೆಯಾದ ಸುಭಾಷ ಪಿ.ಸಿ 174, ಮಂಜುನಾಥ ಪಿ.ಸಿ 73 ಮತ್ತು ಜೀಪ್ ಚಾಲಕ ಚಂದಪ್ಪಗೌಡ ಎ.ಪಿ.ಸಿ 143 ರವರೊಂದಿಗೆ ಸರಕಾರಿ ಜೀಪ್ ನಂ ಕೆಎ-33-ಜಿ-0253 ನೇದರಲ್ಲಿ ಶಹಾಪೂರ ನಗರದ ಸಿ.ಬಿ ಕಮಾನ ಹತ್ತಿರ ಪೆಟ್ರೊಲಿಂಗ್  ಕರ್ತವ್ಯದಲ್ಲಿದ್ದಾಗ, ಗೌಡುರ ಕಡೆಯಿಂದ ಒಂದು ಟಿಪ್ಪರದಲ್ಲಿ ಅಕ್ರಮವಾಗಿ ಮರಳು ಲೊಡ ಮಾಡಿಕೊಂಡು ಶಹಾಪೂರ ಕಡೆಗೆ ಬರುತಿದ್ದಾರೆ ಅಂತ ಮಾಹಿತಿ ಮೇರೆಗೆ, ಸದರಿ ಮಾಹಿತಿಯನ್ನು ಜೊತೆಯಲ್ಲಿದ್ದವರಿಗೆ ತಿಳಿಸಿ ಶಹಾಪೂರ ಪೊಲೀಸ್ ಠಾಣೆಯ ಮಲ್ಲಣ್ಣ ದೇಸಾಯಿ 79 ರವರಿಗೆ ಫೋನ್ ಮೂಲಕ ಸದರಿ ಮಾಹಿತಿ ತಿಳಿಸಿ ಇಬ್ಬರೂ ಪಂಚರನ್ನು ಕರೆದುಕೊಂಡು ಶಹಾಪೂರದ ಚಾಂದ ಪೆಟ್ರೋಲ್ ಪಂಪ್ ಹತ್ತಿರ ಬರಲು ತಿಳಿಸಿ ಮುಂಜಾನೆ 11-15 ಗಂಟೆಗೆ ಚಾಂದ ಪೆಟ್ರೋಲ್ ಪಂಪ್ ಹತ್ತಿರ ಹೋಗಿ ಮರಳು ತುಂಬಿಕೊಂಡು ಬರುತಿದ್ದ ಟಿಪ್ಪರ ವಾಹನಗಳನ್ನು ತಪಾಸಣೆ ಮಾಡುತಿದ್ದಾಗ, ಮುಂಜಾನೆ 11-30 ಗಂಟೆಗೆ ವಿಭೂತಿಹಳ್ಳಿ ಕಡೆಯಿಂದ ಒಂದು ಟಿಪ್ಪರ ನಂಬರ ಕೆಎ-33-ಎ-9462 ನೇದ್ದರ ಚಾಲಕನು ಮರಳು ಲೋಡ್ ಮಾಡಿಕೊಂಡು ಬಂದಿದ್ದು, ಸದರಿ ವಾಹನವನ್ನು ನಿಲ್ಲಿಸಲು ಹೋದಾಗ, ಟಿಪ್ಪರ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದು, ಹಿಂಬಾಲಿಸಿದರು ಚಾಲಕ ಸಿಕ್ಕಿರುವುದಿಲ್ಲ. ಟಿಪ್ಪರ ವಾಹನದ ಹತ್ತಿರ ಬಂದು, ಪಂಚರ ಸಮಕ್ಷಮದಲ್ಲಿ ವಾಹನ ಪರಿಶೀಲಿಸಿದಾಗ ಸದರಿ ಟಿಪ್ಪರವಾಹನದಲ್ಲಿ ಅಂದಾಜು 16 ಕ್ಯೂಬಿಕ್ ಮೀಟರ್ನಷ್ಟು  ಮರಳು ಇದ್ದು, ಅಂದಾಜು 21600=00 ರೂಪಾಯಿ ಮೌಲ್ಯದ ಮರಳು, ರಾಜಧನ ರಾಯಲ್ಟಿ ಪಡೆಯದೆ, ಅಕ್ರಮವಾಗಿ ಸರಕಾರಕ್ಕೆ ಸೇರಿದ ಮರಳು ಕಳ್ಳತನದಿಂದ ಟಿಪ್ಪರ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಟಿಪ್ಪರ ವಾಹನ ನಂ ಕೆಎ-33-ಎ-9462 ಅಂ.ಕಿ 8 ಲಕ್ಷ ರೂಪಾಯಿ ನೇದ್ದರಲ್ಲಿ ಮರಳು ಲೊಡ ಮಾಡಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತಿದ್ದ ಬಗ್ಗೆ ಕಂಡು ಬಂದಿದ್ದರಿಂದ ಸದರಿ ಮರಳು ತುಂಬಿದ ಟಿಪ್ಪರ ವಾಹನವನ್ನು ಪಂಚರ ಸಮಕ್ಷಮದಲ್ಲಿ ಮುಂಜಾನೆ 11-45 ಗಂಟೆಯಿಂದ ಮದ್ಯಾಹ್ನ 12-45 ಗಂಟೆಯ ಅವಧಿಯಲ್ಲಿ ಜಪ್ತಿ ಪಡಿಸಿಕೊಂಡು ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮಕ್ಕಾಗಿ ಹಾಜರ ಪಡಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 12/2021 ಕಲಂ 379 ಐ.ಪಿ.ಸಿ ಮತ್ತು 44(1) ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.               

ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 19/2021 ಕಲಂ 363 ಐಪಿಸಿ :ದಿನಾಂಕ: 16-01-2020 ರಂದು 9 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಜೋತ್ಯಿಬಾಯಿ ಗಂಡ ಸೋಮಣ್ಣ ಜಾದವ ವ|| 34 ವರ್ಷ ಜಾ|| ಲಂಬಾಣಿ ಉ|| ಮನೆಗೆಲಸ ಸಾ|| ಗೆದ್ದಲಮಾರಿ ತಾಂಡಾ ತಾ|| ಹುಣಸಗಿ ಇವರು ಠಾಣೆಗೆ ಬಂದು ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು, ಸಾರಾಂಶವೆನೆಂದರೆ ನನಗೆ ಇಬ್ಬರು ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು ಇರುತ್ತಾರೆ. ನನ್ನ ಗಂಡನಾದ ಸೋಮಣ್ಣ ತಂದೆ ಪಿರಪ್ಪ ಜಾದವ ವ|| 40 ವರ್ಷ ಮತ್ತು ತಾರಾಬಾಯಿ ಗಂಡ ಸೋಮಲ್ಲಿಂಗಪ್ಪ ಪವಾರ ವ|| 41 ವರ್ಷ ಸಾ|| ಇಬ್ಬರು ಗೆದ್ದಲಮಾರಿ ತಾಂಡಾ ದವರಿದ್ದು, ದಿನಾಂಕ:22/12/2020 ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪದರ್ೇ ಮಾಡಿ ಚುನಾಯಿತರಾಗಿದ್ದು ಇರತ್ತದೆ. ಹಿಗಿದ್ದು ದಿನಾಂಕ:11/01/2021 ರಂದು ಮುಂಜಾನೆ 10 ಎ.ಎಂಕ್ಕೆ ತಿರುಪತಿ ತಂದೆ ಶೇಟ್ಟೆಪ್ಪ ರಾಠೋಡ ಸಾ|| ಗೆದ್ದಲಮಾರಿ ತಾಂಡಾ ಇವರು ನನ್ನ ಗಂಡ ಮತ್ತು ತಾರಾಭಾಯಿ ಮೂವರು ಕೂಡಿ ಬಲಭೀಮಶ್ವರ ದೇವಾಸ್ಥನವಾದ ಭೀಮರಾಯನ ಗುಡಿಗೆ ಹೊಗಿ ಕಾಯಿ ಒಡೆದುಕೊಂಡು ಬರುತ್ತೇವೆ ಅಂತಾ ಹೇಳಿ ಮನೆಯಿಂದ ಹೊದರು. ನಂತರ ನನ್ನ ಗಂಡ ಮತ್ತು ತಾರಾಬಾಯಿ ಇಬ್ಬರು ಮನೆಗೆ ಬರದೆ ಇದ್ದ ಕಾರಣ ನಾನು ನನ್ನ ಗಂಡನಿಗೆ ದೂರವಾಣಿ ಮೂಲಕ ವಿಚಾರಿಸಿದ್ದಾಗ ನನ್ನ ಗಂಡನು ರಾತ್ರಿ ಆಗಿದ್ದರಿಂದ ಸುರಪುರದಲ್ಲಿರುವ ಕಡೇಚೂರ ಲಾಡ್ಜನಲ್ಲಿ ಇದ್ದು ಬೆಳಿಗ್ಗೆ ಬರುತ್ತೇವೆ ಅಂತಾ ಹೇಳಿದರು. ನಂತರ ದಿನಾಂಕ:12/01/2021 ರಂದು ಸಂಜೆಯ ವರೆಗೂ ಕಾದು ಬರದೆ ಇದ್ದುದರಿಂದ ನಾನು ನನ್ನ ಗಂಡನಿಗೆ ಪೊನಗೆ ಕರೆ ಮಾಡಿದಾಗ ಪೊನ ಸ್ವೀಚ್ ಆಫ್ ಅಂತಾ ಬಂದಿದ್ದರಿಂದ ಗಾಬರಿಗೊಂಡು ಸುರಪುರ ಕಡೇಚೂರ ಲಾಡ್ಜಗೆ ಬಂದು ವಿಚಾರಿಸಿದಾಗ ಇಲ್ಲಿಯೂ ಇರಲಿಲ್ಲಾ ಮತ್ತು ಸುರಪುರ ಪಟ್ಟಣದಲ್ಲಿ ಹುಡುಕಾಡಿದರು ಸಿಕ್ಕಿರಲಿಲ್ಲ. ನಂತರ ನಾನು ಮತ್ತು ವೆಂಕಟೇಶ ತಂದೆ ಸೋಮಲಿಂಗಪ್ಪ ಪವಾರ, ಗೋವಿಂದ ತಂದೆ ಪೀರಪ್ಪ ಜಾದವ, ಹೆಮಲಪ್ಪ ತಂದೆ ನಾರಾಯಣ ಪವಾರ ಎಲ್ಲರು ಕೂಡಿ ಕೋಳಿಹಾಳ ತಾಂಡಾ, ಗೋರವಟ್ಲಾ ತಾಂಡಾ, ಹುಣಸಗಿ ತಾಂಡಾ, ಮಾರನಾಳ ತಾಂಡಾ ಎಲ್ಲಾ ಕಡೆ ಹುಡುಕಾಡಿದರು ಸಿಗದೆ ಇದ್ದ ಕಾರಣ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ನನ್ನ ಗಂಡ ಮತ್ತು ತಾರಾಬಾಯಿ ಇಬ್ಬರಿಗೆ ಅಪಹರಿಸಿಕೊಂಡು ಹೊದ ತಿರುಪತಿ ತಂದೆ ಶೆಟ್ಟೆಪ್ಪ ರಾಠೋಡ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 19/2021 ಕಲಂ: 363 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ



 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!