ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/01/2021

By blogger on ಬುಧವಾರ, ಜನವರಿ 20, 2021

                 

                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/01/2021


                             

ಯಾದಗಿರಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 09/2021 ಕಲಂ 87 ಕೆ.ಪಿ ಎಕ್ಟ :  ಇಂದು ದಿನಾಂಕ 20-01-2021 ರಂದು 5-30 ಪಿ.ಎಮ್ ಕ್ಕೆ  16 ಜನ ಆರೋಪಿತರು ಮುದ್ನಾಳ ಗ್ರಾಮದ ಸೀಮಾಂತರದಲ್ಲಿ ವಿಶ್ವನಾಥಗೌಡ ಇವರ ಹೋಲದಲ್ಲಿ ಇಸ್ಪೀಟ ಜೂಜಾಟದಲ್ಲಿ ತೋಡಗಿದ್ದಾರೆ ಅಂತಾ ಖಚಿತ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಂದ 32,970/ರೂ ನಗದು ಹಣ 52 ಇಸ್ಪಿಟ ಎಲೆಗಳನ್ನು  ಜಪ್ತಿಪಡಿಸಿಕೊಂಡಿದ್ದು, ಇರುತ್ತದೆ.

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 05/2021 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 20/01/2021 ರಂದು 04.00 ಪಿ.ಎಮ್.ಕ್ಕೆ ಮುಡಬೂಳ ಗ್ರಾಮದ ಅಂಬೇಡ್ಕರ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 05.30 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6.25 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1650=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 06/2021 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 20/01/2021 ರಂದು 08.00 ಪಿ.ಎಮ್.ಕ್ಕೆ ಮದ್ರಕಿ ಗ್ರಾಮದ ವಾಲ್ಮೀಕಿ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 08.45 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಮಾನ್ಯ ಸಿಪಿಐ ಸಾಹೇಬರ ನೇತೃತ್ವದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 9.15 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 2100=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದು ಆರೋಪಿತನು ಬರೆದುಕೊಂಡ ಮಟಕಾ ಚೀಟಿ ಮತ್ತು ಹಣವನ್ನು ಬಸವರಾಜ ಈತನಿಗೆ ಕೊಡುವದಾಗಿ ತಿಳಿಸಿದ್ದರಿಂದ ಆರೋಪಿತರ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 22/2021 ಕಲಂ  87 ಕೆ.ಪಿ. ಕಾಯ್ದೆ  : ಇಂದು ದಿನಾಂಕ: 20-01-2021 ರಂದು 8-50 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಚಂದ್ರಶೇಖರ್ ಪಿ.ಎಸ್.ಐ. (ಕಾ&ಸು-2) ಸಾಹೇಬರು 5 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:20/01/2021 ರಂದು 5:30 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಅರಳಹಳ್ಳಿ ಗ್ರಾಮದ ಚನ್ನಬಸವೇಶ್ವರ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್ಸಿ-105, 3) ಶ್ರೀ ಮಂಜುನಾಥ ಪಿಸಿ-271, 4) ಶ್ರೀ ಪರಮೇಶ ಪಿಸಿ-142, 5) ಶ್ರೀ ಮಾನಯ್ಯ ಪಿಸಿ-372, ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು  ಇಬ್ಬರು ಪಂಚರಾದ 1) ಶ್ರೀ ನರಸಪ್ಪ ತಂದೆ ಮಾನಪ್ಪ ಕರಿಗುಡ್ಡ ವ|| 33 ವರ್ಷ ಜಾ|| ಬೇಡರು ಉ|| ಡ್ರೈವರ್ ಸಾ|| ವೆಂಕಟಾಪೂರ ತಾ|| ಸುರಪುರ 2) ಶ್ರೀ ಹಣಮಂತ ತಂದೆ ಮರಚಪ್ಪ ದನಕಾಯವರು ವ|| 38 ವರ್ಷ ಜಾ|| ಕುರುಬರ ಉ|| ಕೂಲಿ ಸಾ|| ಕುಂಬಾರಪೇಠ ಸುರಪುರ ಇವರನ್ನು 6 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 6:15 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33.ಜಿ-0098 ನೇದ್ದರಲ್ಲಿ ಠಾಣೆಯಿಂದ ಹೊರಟು, 7 ಪಿ.ಎಂ ಕ್ಕೆ ಅರಳಹಳ್ಳಿ ಗ್ರಾಮದ ಚನ್ನಬಸವೇಶ್ವರ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಚನ್ನಬಸವೇಶ್ವರ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 7:05 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 5 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ರವೀಂದ್ರ ತಂದೆ ರಾಚಣ್ಣ ಮುಧೋಳ ವ|| 23 ವರ್ಷ ಜಾ|| ಲಿಂಗಾಯತ ಉ|| ಕಿರಾಣಿ ವ್ಯಾಪಾರ ಸಾ|| ನರಸಿಂಗಪೇಠ ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 670/- ರೂಗಳು ವಶಪಡಿಸಿಕೊಳ್ಳಲಾಯಿತು. 2) ತಿರುಪತಿ ತಂದೆ ಸೂಗಣ್ಣ ಮುಧೋಳ ವ|| 30 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ನರಸಿಂಗಪೇಠ ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 730/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಯಲ್ಲಪ್ಪ ತಂದೆ ಮರಚಪ್ಪ ದನಕಾಯವರು ವ|| 35 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಕುಂಬಾರಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಚಂದ್ರಾಮ ತಂದೆ ಶಿವಪ್ಪ ಮಟ್ರಿಯವರ ವ|| 40 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಕವಡಿಮಟ್ಟಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 580/- ರೂಗಳು ವಶಪಡಿಸಿಕೊಳ್ಳಲಾಯಿತು. 5) ನಾಗರಾಜ ತಂದೆ ತುಳಜಾರಾಮ್ ಬಾಂಡೆದವರ ವ|| 25 ವರ್ಷ ಜಾ|| ಗೊಂದಳಿ ಉ|| ಬಾಂಡೆ ವ್ಯಾಪಾರ ಸಾ|| ಕುಂಬಾರಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 2,370/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 5,350/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 7:05 ಪಿ.ಎಮ್ ದಿಂದ 8:05 ಪಿ.ಎಮ್ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದು ಇರುತ್ತದೆ. ನಂತರ 5 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 21/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 10/2021 ಕಲಂ 379 ಐಪಿಸಿ:  ಇಂದು ದಿನಾಂಕ: 20-01-2021 ರಂದು ಸಾಂಯಂಕಾಲ 06-00 ಗಂಟೆಗೆ ಶ್ರಿ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದುಪ್ಪಲ್ಲಿ- ಬದ್ದೆಪಲ್ಲಿ ನಡುವೆ ರೋಡಿನ ಮೇಲೆ ಮರಳು ತುಂಬಿದ ಟ್ರ್ಯಾಕ್ಟರ ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ.10/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 07/2021 ಕಲಂ 323, 324. 307. 504. 506 ಸಂಗಡ 34 ಐಪಿಸಿ: ಇಂದು ದಿನಾಂಕ 19-01-2021 ರಂದು 1-45 ಪಿ.ಎಮ ಕ್ಕೆ  ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ನಾಗರಾಜ ತಂದೆ ಭೀಮಯ್ಯಾ ಬಂಡಿವಡ್ಡರ ವಯಾ:55 ಉ: ಒಕ್ಕಲುತನ ಜಾ: ವಡ್ಡರ ಸಾ:ಇಂಗನಕಲ್ ತಾ: ಚಿತಾಪೂರ ಹಾ:ವ:ಅಬ್ಬೆತುಮಕೂರ ತಾ:ಜಿ: ಯಾದಗಿರಿ ಇವರಿಗೆ ವಿಚಾರಿಸಿದಾಗ ಅವರು ತಡವಾಗಿ ಹೇಳಿಕೆ ನೀಡಿದ್ದೆನೆಂದರೆ ಇಂದು ದಿನಾಂಕ 19-01-2021 ರಂದು 11-30 ಗಂಟೆ ಸುಮಾರಿಗೆ ನಾನು ಸದರಿ ರೋಶನರಾಜು ಇವರ ಹೋಲ ಸವರ್ೇ ನಂ: 202ರಲ್ಲಿ ಎಂದಿನಂತೆ ಕೂಲಿ ಕೆಲಸ ಮಾಡುತ್ತಿದ್ದೆನು. ಆಗ ಅಲ್ಲಿಯೇ ಹೋಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಹಾಬಾಜಖಾನ ತಂದೆ ಸರದಾಖಾನ ಮತ್ತು ಅವರ ಜೋತೆಯಲ್ಲಿ ಪಾಶಾ ತಂದೆ ಲಾಡ್ಲಾಪಟೇಲ್ ಎಂಬುವವರೂ ಕೂಡಾ ಇದ್ದರು. ಅದೇ ವೇಳೆಗೆ ಅಬ್ಬೆತುಮಕೂರು ಗ್ರಾಮದ 1) ಸಿದ್ದಪ್ಪಾ ತಂದೆ ಬಾಲಪ್ಪಾ ದೊರೆ ಇವರ ಮಕ್ಕಳಾದ 2) ಪರಮಣ್ಣಾ ತಂದೆ ಸಿದ್ದಪ್ಪಾ ದೊರೆ 3) ಸಾಬು ತಂದೆ ಸಿದ್ದಪ್ಪಾ ದೊರೆ ಹಾಗೂ 4) ಬಸಮ್ಮಾ ತಂದೆ ಸಿದ್ದಪ್ಪಾ ದೊರೆ ಇವರೆಲ್ಲರೂ ಕೈಯ್ಯಲ್ಲಿ ಕೊಡಲಿ ಮತ್ತು ಬಡಿಗೆಯನ್ನು ಹಿಡಿದುಕೊಂಡು ಹಕಾರಿ ಹೊಡೆಯುತ್ತಾ ರೋಶನರಾಜು ಇವರ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಂದವರೇ ಎಲ್ಲರೂ ಕೂಡಿ ನನಗೆ ಎಲೇ ಬೋಸಡಿ ಮಗನೇ ನಿನಗೆ ಈ ಮೊದಲಿನಿಂದಲೂ ಈ ಹೋಲದಲ್ಲಿ ಕೆಲಸ ಮಾಡಬೇಡ ಈ ಹೋಲ ನಮ್ಮ ಹಿರಿಯರಿಂದ ಬಂದ ಹೋಲವಿದೆ ಅಂತಾ ಹೇಳುತ್ತಾ ಬಂದರೂ ಕೂಡಾ ನೀನು ನಮ್ಮ ಮಾತು ಕೇಳುತ್ತಿಲ್ಲಾ ನಿನಗೆ ಸೊಕ್ಕು ಬಾಲ ಬಂದಿದೆ ಸೂಳೇ ಮಗನೇ ಇವತ್ತು ನಿನಗೆ ಇಲ್ಲಿಯೇ ಖಲಾಸ ಮಾಡುತ್ತೆವೆ ಅಂತಾ ಅಂದವರೇ ಅವರಲ್ಲಿ ಸಿದ್ದಪ್ಪಾ ಇತನು ತನ್ನ ಕೈಯ್ಯಲ್ಲಿದ್ದ ಕೊಡಲಿಯಿಂದ ನನ್ನ ತೆಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಆಗ ನಾನು ಸತ್ತೆನೆಪ್ಪೋ ಅಂತಾ ಕೆಲಗಡೆ ಬಿದ್ದು ಒದ್ದಾಡುತ್ತಿದ್ದಾಗ ಪರಮಣ್ಣಾ ಇತನು ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನ್ನ ಬಲತೊಡೆಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ಇನ್ನೂಳಿದ ಸಾಬು ತಂದೆ ಸಿದ್ದಪ್ಪಾ ದೊರೆ ಹಾಗೂ ಬಸಮ್ಮಾ ತಂದೆ ಸಿದ್ದಪ್ಪಾ ದೊರೆ ಇವರಿಬ್ಬರೂ ನನಗೆ ಮನಸ್ಸಿಗೆ ಬಂದ ಹಾಗೇ ಹೊಟ್ಟೆಗೆ ಮತ್ತು ಪಕ್ಕೆಗೆ ಒದ್ದರು. ಆಗ ನಾನು ಒದರಾಡುವುದು ಚೀರಾಡುವುದು ಮಾಡುತ್ತಿದ್ದಾಗ ಶಹಾಬಾಜಖಾನ ತಂದೆ ಸರದಾಖಾನ ಮತ್ತು ಅವರ ಜೋತೆಯಲ್ಲಿ ಪಾಶಾ ತಂದೆ ಲಾಡ್ಲಾ ಪಟೇಲ್ ಇಬ್ಬರೂ ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಅವರು ಬಿಡಿಸಿಕೊಳ್ಳದಿದ್ದರೇ ಅವರೆಲ್ಲರೂ ಕೂಡಿ ನನಗೆ ಕೊಲೆ ಮಾಡುತ್ತಿದ್ದರು. ಈ ರೀತಿಯಾಗಿ ಈ ಮೇಲ್ಕಂಡ ಮೂರು ಜನರು ತಮ್ಮ ಕೈಯ್ಯಲ್ಲಿ ಕಡಲಿ ಮತ್ತು ಬಡಿಗೆ ಹಿಡಿದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ  ನನಗೆ ಕೊಡಲಿಯಿಂದ ಮತ್ತು ಬಡಿಗೆಯಿಂದ ಹೊಡೆದು ಮತ್ತು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನಿಸಿದ ಈ ಮೇಲ್ಕಂಡ 4 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಘಟನೆಯ ಬಗ್ಗೆ ಮನೆಯಲ್ಲಿ ನಮ್ಮ ಹಿರಿಯರೊಂದಿಗೆ ವಿಚಾರಣೆ ಮಾಡಿ ಫಿರ್ಯಾಧಿ ಕೊಡಲು ತಡವಾಗಿರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು ಮರಳಿ 4-50 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:07/2020 ಕಲಂ 323, 324, 307, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 09/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 20-01-2021 ರಂದು ಸಾಯಂಕಾಲ 03-00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಸೈದಾಪೂರ ಗ್ರಾಮದ ಲಕ್ಷ್ಮೀ ನಗರದ ಪಂಚಾಯಿತಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 1430=00 ರೂಪಾಯಿಗಳು, ಒಂದು ಮಟಕಾ ಬರೆದ ಚೀಟಿ ಒಂದು ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.09/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!