ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/08/2020
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 35/2020 ಕಲಂ: 107 ಸಿ.ಆರ್.ಪಿ.ಸಿ : ಇಂದು ದಿನಾಂಕಃ 30/08/2020 ರಂದು 5-00 ಪಿ.ಎಮ್ ಕ್ಕೆ ಶ್ರೀ ಪರಮೇಶ ಸಿಪಿಸಿ 142 ಸುರಪೂರ ಪೊಲೀಸ್ ಠಾಣೆ ರವರು, ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಂಶವೆನೆಂದರೆ ಇಂದು ಹಳ್ಳಿ ಬೀಟ್ ಕುರಿತು 3-15 ಪಿ.ಎಮ್ ಕ್ಕೆ ದೇವತಕಲ್ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ಗಸ್ತು ಮಾಡಿ ಪ್ರಮುಖ ನಾಗರೀಕ ಸಮಿತಿ ಸದಸ್ಯರಿಗೆ ಹಾಗು ಪೊಲೀಸ್ ಬಾತ್ಮಿದಾರರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೆನೆಂದರೆ, ದೇವತಕಲ್ ಸಿಮಾಂತರದ ಹೊಲ ಸವರ್ೆ ನಂಬರ 130 ರಲ್ಲಿ 1 ಎಕರೆ 19 ಗುಂಟೆ ಜಮಿನು ವಿಷಯವಾಗಿ ಕಬ್ಬಲೀಗ ಜನಾಂಗದ ಹಣಮಂತರಾಯ ತಂದೆ ತಿಮ್ಮಣ್ಣ ಹಾಗು ಕುರುಬ ಜನಾಂಗದ ಶರಣಗೌಡ ತಂದೆ ನಿಂಗಪ್ಪ ನಾಯ್ಕೋಡಿ ಇವರ ಮದ್ಯೆ ತಕರಾರು ನಡೆದಿದ್ದು, ಸದರಿ ಹೊಲದ ವಿಷಯವಾಗಿ ದಿನಾಂಕಃ 28/06/2020 ರಂದು ಶರಣಗೌಡ ಹಾಗು ಇತರರು ಕೂಡಿ ತಮ್ಮ ಎದುರಾಳಿಗಳ ಸಂಗಡ ಜಗಳ ತಗೆದು ಹೊಡೆಬಡೆ ಮಾಡಿದ್ದರಿಂದ ಸುರಪೂರ ಠಾಣೆಯಲ್ಲಿ ಅವರ ವಿರುದ್ದ ಗುನ್ನೆ ನಂ. 159/2020 ಕಲಂ 143, 147, 148, 323, 324, 326, 307, 447, 504, 506 ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಾಗಿದ್ದು ಇರುತ್ತದೆ. ಸದರಿ ಹೊಲದ ವಿಷಯವಾಗಿ ಎರಡು ಪಾಟರ್ಿಯ ಜನರ ಮದ್ಯೆ ಗಾಢವಾದ ದ್ವೇಷ ಬೆಳೆದು ಗ್ರಾಮದಲ್ಲಿ ನಾವು ಮೇಲು, ತಾವು ಮೇಲು ಅನ್ನುತ್ತ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದು, ಯಾವುದೇ ಸಮಯದಲ್ಲಿ ಹೊಲದ ವಿಷಯವಾಗಿ 1) ಹಣಮಂತ್ರಾಯ ತಂದೆ ತಿಮ್ಮಣ್ಣ ವ: 50 ಉ: ಒಕ್ಕಲುತನ ಹಾಗು ಅವರ ಸಂಗಡಿಗರಾದ 2) ಬೀಮರಾಯ ತಂದೆ ಹಣಮಂತ್ರಾಯ ಅಂಗಡಿ ವ: 50 ಉ: ಒಕ್ಕಲುತನ 3) ವೆಂಕಟೇಶ ತಂದೆ ಹಣಮಂತ್ರಾಯ ವ: 40 ವರ್ಷ ಉ: ಒಕ್ಕಲುತನ 4) ಅಮರಪ್ಪ ತಂದೆ ರಾಜಪ್ಪ ವ: 62 ಉ: ಒಕ್ಕಲುತನ 5) ಮಂಜುನಾಥ ತಂದೆ ಬೀಮರಾಯ ವ: 28 ಉ: ಒಕ್ಕಲುತನ, 6) ಆನಂದ ತಂದೆ ಹಣಮಂತ್ರಾಯ ವ: 25 ಉ: ಒಕ್ಕಲುತನ 7) ಬಸವರಾಜ ತಂದೆ ಅಮರಪ್ಪ ವ: 35 ಉ: ಒಕ್ಕಲುತನ, 8) ಶೆಖಪ್ಪ ತಂದೆ ಅಮರಪ್ಪ ವ: 46 ಉ: ಒಕ್ಕಲುತನ, 9) ಮಲ್ಲಪ್ಪ ತಂದೆ ಹನಮಂತ್ರಾಯ ವ: 26 ಉ:ಒಕ್ಕಲುತನ, ಎಲ್ಲರೂ ಜಾತಿಃ ಕಬ್ಬಲೀಗ ಸಾ: ದೇವತಕಲ್ ತಾಃ ಸುರಪೂರ ಜಿಃ ಯಾದಗಿರಿ ಇವರೆಲ್ಲರೂ ಶರಣಗೌಡ ತಂದೆ ನಿಂಗಪ್ಪ ನಾಯ್ಕೋಡಿ ಹಾಗು ಅವರ ಸಂಬಂಧಿಕರಿಗೆ ಹೊಡೆಬಡೆ ಮಾಡಿ ಗ್ರಾಮದಲ್ಲಿ ಕಾನೂನು ಸೂವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಹಾಗು ಗ್ರಾಮದಲ್ಲಿ ಆಸ್ತಿಪಾಸ್ತಿ, ಜೀವಹಾನಿ ಆಗುವ ಸಾದ್ಯತೆ ಕಂಡು ಬಂದಿರುತ್ತದೆ. ಆದ್ದರಿಂದ 5-00 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿಯವರ ವಿರುದ್ದ ಸೂಕ್ತ ಮುಂಜಾಗೃತಾ ಕ್ರಮ ಕೈಕೊಳ್ಳಬೇಕು ಅಂತ ವರದಿ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್ ನಂಬರ 35/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 93/2020 32, 34 ಕೆ.ಇ ಆ್ಯಕ್ಟ್ : ಇಂದು ದಿನಾಂಕ 30/08/2020 ರಂದು 5:15 ಪಿ.ಎಮ್.ಕ್ಕೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಶ್ರೀನಿವಾಸ ಅಲ್ಲಾಪೂರ ಸಿಪಿಐ ಶಹಾಪೂರ ವೃತ್ತ ರವರು ಠಾಣೆಗೆ ಬಂದು ವರದಿಯೊಂದಿಗೆ ಜಪ್ತಿ ಪಂಚನಾಮೆ, ಮುದ್ದೆಮಾಲು ಒಪ್ಪಿಸಿ ಕ್ರಮ ಜರುಗಿಸಲು ಸೂಚಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 30/08/2020 ರಂದು ನಾನು ಭೀ.ಗುಡಿ ಹತ್ತಿರ ಇದ್ದಾಗ 02.30 ಪಿ.ಎಮ್.ಕ್ಕೆ ಬಾತ್ಮಿ ಬಂದಿದ್ದೇನಂದರೆ, ಯಮುನಾ ವೈನಶಾಫ್ ಗೋಗಿ ಪೇಠ ನೇದ್ದರ ಯಮುನಾ ವೈನಶಾಫ್ ಗೋಗಿ ಪೇಠ ನೇದ್ದರ ಮಾಲಿಕರಾದ ಹರಿಶ ತೆರದಾಳ ಮತ್ತು ಅದರ ಮ್ಯಾನೇಜರ ಆಗಿರುವ ಅಲ್ಲಾಭಕ್ಷ ಇವರುಗಳು ಅಕ್ರಮವಾಗಿ ತಮ್ಮ ವೈನ್ ಶಾಪದಿಂದ ಉಕ್ಕನಾಳ ಗ್ರಾಮಕ್ಕೆ ಹಿರೋ ಹೆಚ್.ಎಫ್. ಡಿಲಕ್ಸ ಮೋಟಾರ್ ಸೈಕಲ್ ನಂ: ಕೆಎ-32-ಇಇ-3741 ನೇದ್ದರ ಮೇಲೆ ಶಶಿಕಾಂತ ಸಾ: ನೀಲೂರ ಈತನು ನಡೆಸುತ್ತಿದ್ದು, ಹಿಂಬದಿಯಲ್ಲಿ ಶರಣು ತಂದೆ ವಿಠ್ಠಲ ಸಾ: ಗುಲಬಗರ್ಾ ಈತನು ಕುಳಿತು ಇವರು ಇಬ್ಬರ ಮೂಲಕ ಅಕ್ರಮವಾಗಿ ಮಧ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಸಾಗಿಸುತ್ತಿದ್ದಾರೆ. ಅಂತಾ ಇತ್ಯಾದಿ ಬಾತ್ಮಿ ಬಂದಿದ್ದು, ದಾಳಿ ಮಾಡುವ ಕುರಿತು ಪಂಚರು, ಸಿಬ್ಬಂದಿಯವರು ಮತ್ತು ಪೋಟೋಗ್ರಾಫರ ಜೋತೆಯಲ್ಲಿ ಬಾತ್ಮಿ ಪ್ರಕಾರ ಅಕ್ರಮವಾಗಿ ತಮ್ಮ ವೈನ್ ಶಾಪದಿಂದ ಉಕ್ಕನಾಳ ಗ್ರಾಮಕ್ಕೆ ಮೋಟಾರ್ ಸೈಕಲ್ ಮೇಲೆ ಇಬ್ಬರು ವ್ಯಕ್ತಿಗಳ ಮೂಲಕ ಅಕ್ರಮವಾಗಿ ಮಧ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಕಳುಹಿಸಿದ್ದಾರೆ ಮೋಟಾರ್ ಸೈಕಲ್ ಗೋಗಿ ದಾಟಿದೆ ಅಂತಾ ಗೋತ್ತಾದ ಕೂಡಲೆ 03.00 ಪಿಎಂ ಸುಮಾರಿಗೆ ನಾವು ಹಿಂಬಾಲಿಸಿ ಹೋಗಿದ್ದು, ಉಕ್ಕನಾಳ ಕ್ರಾಸ್ ಸಮೀಪ ಮೋಟಾರ್ ಸೈಕಲ್ ಮೇಲೆ ಬಟ್ಟೆಯ ಕೈ ಚೀಲಗಳಲ್ಲಿ ಮಧ್ಯದ ಬಾಟಲಿಗಳನ್ನು ಮೋಟಾರ್ ಸೈಕಲ್ ನಂ: ಕೆಎ-32-ಇಇ-3741 ನೇದ್ದರ ಮೇಲೆ ಮುಂದೆ ಮತ್ತು ನಡುವೆ ಇಟ್ಟು ಕೊಂಡು ಹೋಗುತ್ತಿದ್ದದ್ದನ್ನು ನೋಡಿ ಬೆನ್ನು ಹತ್ತಿದಾಗ ಉಕ್ಕನಾಳ ಕ್ರಾಸ್ ಹತ್ತಿರ 03.20 ಪಿಎಂ ಕ್ಕೆ ಹಿಡಿಯಬೇಕು ಅನ್ನುವಷ್ಟಲ್ಲಿ ಸದರಿ ಮೋಟಾರ್ ಸೈಕಲ್ ಮೇಲೆ ಇದ್ದ ಇಬ್ಬರು ವ್ಯಕ್ತಿಗಳು ತಮ್ಮ ಮೋಟಾರ್ ಸೈಕಲ್ ಮತ್ತು ಬಟ್ಟೆ ಚೀಲದಲ್ಲಿದ್ದ ಮಧ್ಯದ ಬಾಕ್ಸಗಳನ್ನು ಬಿಟ್ಟು ಓಡಿ ಹೊಗಿದ್ದು, ನಾವು ಬೆನ್ನಟ್ಟಿದರು ಗುಡ್ಡದಲ್ಲಿ ಓಡಿಹೊಗಿದ್ದು ಸಿಕ್ಕಿರುವದಿಲ್ಲ. ಸದರಿಯವರು ಬಿಟ್ಟು ಹೊದ ಮಧ್ಯವನ್ನು ಪಂಚರ ಸಮಕ್ಷಮ ಪರೀಶಿಲಿಸಿ ಮುದ್ದೆಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮಾಡಿ, ಅವುಗಳಲ್ಲಿ ಶಾಂಪಲ್ಗಾಗಿ ಎಲ್ಲಾ ಬಾಕ್ಸಗಳಲ್ಲಿಯ 2 ಬಾಟಲಿ ಮತ್ತು 2 ಪಾವೂಚಗಳನ್ನು ತಜ್ಞರ ಪರೀಕ್ಷೆಗಾಗಿ ಕಳುಹಿಸುವ ಸಲುವಾಗಿ ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಅದರ ಮೇಲೆ ಇಂಗ್ಲೀಷ ಅಕ್ಷರದ ಉಕಖ ಅಂತ ಮಾದರಿ ಶಿಲ್ ಹಾಕಿ ಪಂಚರು ಸಹಿ ಮಾಡಿದ ಚೀಟಿಗಳು ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ತಾಬೆಗೆ ತೆಗದುಕೊಂಡಿದ್ದು, ಓಡಿ ಹೊದವರ ಹೆಸರು ವಿಳಾಸ ಮೋಟಾರ ಸೈಕಲ್ ನಡೆಸುತ್ತಿದ್ದವನ ಹೆಸರು ಶಶಿಕಾಂತ ವಯಾ:25 ಸಾ: ನೀಲೂರ ಮತ್ತು ಹಿಂದೆ ಕುಳಿತವನ ಹೆಸರು ಶರಣು ತಂದೆ ವಿಠ್ಠಲ ಸಾ: ಗುಲಬಗರ್ಾ ಅಂತಾ ಗೋತ್ತಾಗಿರುತ್ತದೆ.
ನಂತರ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಬಂದು 1) ಹರಿಶ ತೆರದಾಳ ಯಮುನಾ ವೈನಶಾಫ್ ಗೋಗಿ ಪೇಠ ನೇದ್ದರ ಮಾಲಿಕ 2) ಅಲ್ಲಾಭಕ್ಷ ಯಮುನಾ ವೈನಶಾಫ್ ಮ್ಯಾನೇಜರ 3) ಶಶಿಕಾಂತ ವಯಾ:25 ಸಾ: ನೀಲೂರ 4) ಶರಣು ತಂದೆ ವಿಠ್ಠಲ ಸಾ: ಗುಲಬಗರ್ಾ ಇವರುಗಳ ಮೇಲೆ ಮುಂದಿನ ಕ್ರಮ ಜರುಗಿಸಲು ಜ್ಞಾಪನ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 93/2020 ಕಲಂ 32, 34 ಕೆ.ಇ. ಯಾಕ್ಟ 1965 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.