ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/08/2020

By blogger on ಸೋಮವಾರ, ಆಗಸ್ಟ್ 10, 2020                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/08/2020 

                                                                                                                                

ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 166/2020  ಕಲಂ 279  304(ಎ)  ಐ.ಪಿ.ಸಿ: ದಿನಾಂಕ 16/06/2020 ರಂದು ಸಾಯಂಕಾಲ 17-00 ಗಂಟೆಗೆ ಫಿರ್ಯಾಧಿ ಶ್ರೀಮತಿ ಈರಮ್ಮ ಗಂಡ ತಿಮ್ಮಯ್ಯ ತಿರುಲಯ್ಯನೋರ ವಯ 55 ವರ್ಷ ಜಾತಿ ಯಾದವಗೊಲ್ಲ ಉಃ ಹೊಲ ಮನೆ ಕೆಲಸ ಸಾಃ ತಿಮ್ಮಾಪೂರದೊಡ್ಡಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 12/06/2020 (ಶುಕ್ರವಾರ) ದಿನದಂದು ಮುಂಜಾನೆ 05-00 ಗಂಟೆಯ ಸುಮಾರಿಗೆ ತನ್ನ ಗಂಡ ತಿಮ್ಮಯ್ಯ ಮತ್ತು ಗ್ರಾಮದ ಯಲ್ಲಪ್ಪ ತಂದೆ ಲಚಮಣ್ಣ ಸೇಡಂ ಇಬ್ಬರೂ ಕೂಡಿ  ಕುರಿಗಳನ್ನು ಖರೀದಿ ಮಾಡಿಕೊಂಡು ಬರಲು  ಶಹಾಪೂರಕ್ಕೆ  ಹೋಗಿ ಬರುತ್ತೇವೆ ಅಂತ ನಿಂಗಪ್ಪ ತಂದೆ ಲಚಮಣ್ಣ ಈತನು ಚಲಾಯಿಸುತಿದ್ದ ಆಟೋ ನಂ ಕೆಎ-33-ಎ-5382 ನೇದ್ದರಲ್ಲಿ ಕುಳಿತುಕೊಂಡು ಹೋದರು. ಸ್ವಲ್ಪ ಸಮಯದ ನಂತರ  ಯಲ್ಲಪ್ಪ್ಪನು ಪೋನ್ ಮಾಡಿ ತಿಳಿಸಿದ್ದೆನೆಂದರೆ, ಆಟೋದಲ್ಲಿ ಶಹಾಪೂರಕ್ಕೆ ಬರುತಿದ್ದಾಗ ರಸ್ತಾಪೂರ ಗ್ರಾಮ ದಾಟಿದ ನಂತರ ರಸ್ತಾಪೂರ ಕಮಾನ ಇನ್ನೂ 200 ಮೀಟರ ಅಂತರದಲ್ಲಿರುವಾಗ ಬೆಳಗಿನ  ಜಾವ 05-15 ಗಂಟೆಯ ಸುಮಾರಿಗೆ ಆಟೋ ಚಾಲಕ ನಿಂಗಪ್ಪನು ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಣ ತಪ್ಪಿ ರೋಡಿನ ಮೇಲೆ ಪಲ್ಟಿಮಾಡಿರುತ್ತಾನೆ. ಆಟೋದಲ್ಲಿ ಕುಳಿತ ನನಗೆ ಮತ್ತು ನಿಂಗಪ್ಪನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ನಿಮ್ಮ ಗಂಡ ತಿಮ್ಮಯ್ಯ ಇವರಿಗೆ ತಲೆಯಹಿಂದುಗಡೆ ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ಒಳಪೆಟ್ಟಾಗಿರುತ್ತವೆ ಅಂತ ತಿಳಿಸಿದ ಮೆರೆಗೆ ಫಿರ್ಯಾದಿಯು ತನ್ನ  ಸಂಬಂಧಿಕ ಬಲವಂತ ತಂದೆ ಬೈಲಪ್ಪ ಕಾಗಿ ಈತನೊಂದಿಗೆ ಮೋಟರ ಸೈಕಲ್ ಮೇಲೆ  ಸ್ಥಳಕ್ಕೆ ಬಂದು ನೋಡಲಾಗಿ ಅಪಘಾತ ಸ್ಥಳದಿಂದ ರಸ್ತಾಪೂರ ಕಮಾನ ಇನ್ನೂ 200 ಮೀಟರ ಅಂತರದಲ್ಲಿ ಆಟೋ ಪಲ್ಟಿಯಾಗಿ ರೋಡಿನ ಮೆಲೆ ಬಿದ್ದಿತ್ತು. ತನ್ನ ಗಂಡನಿಗೆ ನೋಡಲಾಗಿ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ರಕ್ತ ಬರುತಿತ್ತು. ಮಾತನಾಡಿಸಿದರು ಮಾತನಾಡಿರುವುದಿಲ್ಲ. ಯಲ್ಲಪ್ಪ ಮತ್ತು ಆಟೋ ಚಾಲಕ  ನಿಂಗಪ್ಪ ಇವರಿಗೆ ಸಣ್ಣ-ಪುಟ್ಟಗಾಯಗಳಾಗಿದ್ದವು.

         ನಂತರ ಗಾಯಾಳು ತಿಮ್ಮಯ್ಯನಿಗೆ ಒಂದು ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಹಾಪೂರಕ್ಕೆ ಬಂದು, ಶಹಾಪೂರದ ಸುಬೇದಾರ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು ವೈದ್ಯಾಧಿಕಾರಿಗಳ ಸಲಹೆ ಮೆರೆಗೆ ಹೆಚ್ಚಿನ ಉಪಚಾರ ಕುರಿತು ಗಾಯಾಳುವನ್ನು  ಕಲಬುರಗಿಗೆ ಕರೆದುಕೊಂಡು ಹೋಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಸದರಿ ಅಪಘಾತಕ್ಕೆ ಕಾರಣಿಭೂತನಾದ  ಅಪ್ಪೆ ಆಟೋ ನಂ ಕೆಎ-33-ಎ-5382 ನೇದ್ದರ ಚಾಲಕ ನಿಂಗಪ್ಪ ತಂದೆ ಲಚಮಣ್ಣ ಸೇಡಂ ಈತನ ವಿರುದ್ದ  ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 166/2020 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.   ಹೀಗಿರುವಾಗ ಇಂದು ದಿನಾಂಕ 09/08/2020 ರಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ  ಕೇಸಿನ ಫಿರ್ಯಾಧಿ ಶ್ರೀಮತಿ ಈರಮ್ಮ ಇವರು ಪುನಃ ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಇನ್ನೊಂದು ಅಜರ್ಿ ನೀಡಿದ ಸಾರಾಂಶವೆನೆಂದರೆ ತನ್ನ ಗಂಡ ತಿಮ್ಮಯ್ಯ ಇವರಿಗೆ  ದಿನಾಂಕ 12/06/2020 ರಂದು ಅಪಘಾತವಾಗಿದ್ದರಿಂದ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಸುಮಾರು 10 ದಿನಗಳಾದರು ತನ್ನ ಗಂಡ ತಿಮ್ಮಯ್ಯನ ಆರೋಗ್ಯದಲ್ಲಿ ಗುಣಮುಖನಾಗುವ ಯಾವುದೇ ಬದಲಾವಣೆಗಳು ಕಂಡು ಬಂದಿರುವುದಿಲ್ಲ ತಿಮ್ಮಯ್ಯನಿಗೆ ಉಪಚಾರ ನೀಡಿದ ವೈದ್ಯಾಧಿಕಾರಿಗಳು ಜೀವದ ಬಗ್ಗೆ ಯಾವುದೇ ಬರವಸೆಯ ನೀಡಲಿಲ್ಲ ಆದ್ದರಿಂದ ದಿನಾಂಕ 23/06/2020 ರಂದು ತನ್ನ ಗಂಡನನ್ನು ಯುನೈಟೆಡ್ ಆಸ್ಪತ್ರೆಯಿಂದ ಡಿಸ್ಜಾರ್ಜ ಮಾಡಿಕೊಂಡು ತಮ್ಮ ಸ್ವಗ್ರಾಮವಾದ ತಿಮ್ಮಾಪೂರದೊಡ್ಡಿಗೆ ಕರೆದುಕೊಂಡು ಬಂದು ಮನೆಯಲ್ಲಿಯೆ ಆರೈಕೆ ಮಾಡುತಿದ್ದು, ಹೀಗಿರುವಾಗ ಇಂದು ದಿನಾಂಕ 09/08/2020 ರಂದು ಮುಂಜಾನೆ 10-30 ಗಂಟೆಗೆ ತನ್ನ ಗಂಡನ ಆರೋಗ್ಯದಲ್ಲಿ ಏರುಪೇರಾಗಿ ತಲೆನೋವು ಮತ್ತು ಎದೆನೋವಿನಿಂದ ಚಿರಾಡುವದು, ಕೂಗಾಡುವದು ಮಾಡುತಿದ್ದಾಗ ಉಪಚಾರ ಕುರಿತು ತನ್ನ ಗಂಡ ತಿಮ್ಮಯ್ಯನಿಗೆ ಒಂದು ಆಟೋದಲ್ಲಿ ಹಾಕಿಕೊಂಡು ಬರುತಿದ್ದಾಗ ಮಾರ್ಗ ಮದ್ಯ ಶಹಾಪೂರ ನಗರದ ಇಂಡಸ್ಟ್ರೀಯಲ್ ಏರಿಯಾ ಹತ್ತಿರ ಮುಂಜಾನೆ 11-00 ಗಂಟೆಗೆ ತನ್ನ ಗಂಡ ತಿಮ್ಮಯ್ಯ ತಂದೆ ತಿರುಲಯ್ಯ ತಿರುಲಯ್ಯನೋರ ಇವರು ಆಟೋದಲ್ಲಿ ಮೃತ ಪಟ್ಟಿರುತ್ತಾರೆ.  ಶಹಾಪೂರ ಸರಕಾರಿ ತಂದಾಗ ವೈದ್ಯಾಧಿಕಾರಿಗಳು ನೋಡಿ  ಮೃತಪಟ್ಟಿರುತ್ತಾನೆ ಅಂತ ತಿಳಿಸಿದರು. ಸದರಿ ಮೃತ ದೇಹವು ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿದ್ದು, ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ, ಸದರಿ ಪ್ರಕರಣದಲ್ಲಿ ಕಲಂ 304(ಎ) ಐ.ಪಿ.ಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ. ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 75/2020 504.505(2) ಐಪಿಸಿ : ದಿನಾಂಕ:09/08/2020 ರಂದು ಸಾಯಾಂಕಾಲ 6.30 ಗಂಟೆಗೆ ಅಜರ್ಿದಾರನಾದ ಶ್ರೀರಸೂಲ್ಸಾಬ ತಂದೆ ಉಮಾರಸಾಬ ಬೆಣ್ಣೂರ ಟಿಪ್ಪು ಸುಲ್ತಾನ ಸಂಯುಕ್ತ ಅಧ್ಯಕ್ಷರು ಹುಣಸಗಿ ತಾಲ್ಲೂಕ ಸಾ:ಹುಣಸಗಿ  ತಾ;ಹುಣಸಗಿ ಇತನು ಠಾಣೆಗೆ  ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದ ಸಾರಾಂಶವೆನೆಂದರೆ ದಿನಾಂಕ:07/08/2020 ರಂದು ಸಾಯಂಕಾಲ 07.15 ಗಂಟೆಗೆ ಆರೋಪಿತನು ತನ್ನ ಮೊಬೈಲ್ದಲ್ಲಿ ಟಿಪ್ಪು ಸುಲ್ತಾನ್ ಇತನ ಹತ್ತಿರ ಇರುವ ಹುಲಿಯನ್ನು ತೆಗೆದು ಹಂದಿಯನ್ನು ನಿಲ್ಲಿಸಿ ಏಕವಚನದಲ್ಲಿ ಟಿಪ್ಪುಸುಲ್ತಾನ ಬಗ್ಗೆ  ಇತನು ಹಂದಿ ಹಿಡಿಯಲು ಲಾಯಕ್ ಅಂತಾ ಅವಹೇಳನ ಮಾಡಿ, ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ಅವಹೇಳನ ಮಾಡಿದ ಬಗ್ಗೆ ಅಪರಾಧ


ಹುಣಸಗಿ ನಗರ ಪೊಲೀಸ ಠಾಣೆ ಗುನ್ನೆ ನಂ:- 76/2020 279, 304(ಎ) ಐಪಿಸಿ : ಇಂದು ದಿನಾಂಕ:09/08/2020 ರಂದು ರಾತ್ರಿ 08.00 ಗಂಟೆಯ ಸುಮಾರಿಗೆ ಮೃತನು ತನ್ನ ಮೋಟಾರ ಸೈಕಲ್ ನಂ:ಕೆಎ-33 ಕ್ಯ_7813 ನೇದ್ದರ ಮೇಲೆ ಸುರಪೂರಕ್ಕೆ ಹೋಗಲು ಹೊರಟು ಕಾಮನಟಗಿ ಸೀಮಾಂತರದ ಬಸವನಕಟ್ಟಿ ಸಮೀಪ ತನ್ನ ಮೋಟಾರ್ ಸೈಕಲ್ನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸ್ಕಿಡ್ ಆಗಿ ರಸ್ತೆಯ ಎಡಗಡೆ ಕಲ್ಲುಗಳ ಮೇಲೆ ಮೋಟಾರ್ ಸೈಕಲ್ ಸಮೇತ ಬಿದ್ದು ನಡು ತಲೆಗೆ, ಹಣೆಗೆ ಭಾರಿ ರಕ್ತಗಾಯ ಹಾಗೂ ಮೆಲಕಿಗೆ ಭಾರಿ ಒಳಪೆಟ್ಟಾಗಿ ಬಲಗಡೆ ಕಣ್ಣುಗುಡ್ಡೆ ಹೊಡೆದು, & ಬಲಗೈ ರಟ್ಟೆ ಹತ್ತಿರ ಕೈ ಮುರಿದು  ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಅಪರಾಧ


ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 25/2020 ಕಲಂ: 107 ಸಿ.ಆರ್.ಪಿ.ಸಿ : ಇಂದು ದಿನಾಂಕಃ 09/08/2020 ರಂದು 10-30 ಎ.ಎಮ್ ಕ್ಕೆ ಶ್ರೀ ಈಶ್ವರಪ್ಪ ಹೆಚ್.ಸಿ 114  ಸುರಪೂರ ಪೊಲೀಸ ಠಾಣೆ ರವರು ಠಾಣೆಗೆ ಬಂದು ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ಹಳ್ಳಿ ಬೀಟ್ ಕರ್ತವ್ಯ ಕುರಿತು ರತ್ತಾಳ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ಗಸ್ತು ಮಾಡಿ ಪ್ರಮುಖ ನಾಗರೀಕ ಸಮೀತಿ ಸದಸ್ಯರಿಗೆ ಹಾಗು ಪೊಲೀಸ್ ಬಾತ್ಮಿದಾರರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೆನೆಂದರೆ, ರತ್ತಾಳ ಗ್ರಾಮದ ಸಿಮಾಂತರದಲ್ಲಿರುವ ಹೊಲ ಸವರ್ೆ ನಂಬರ 48/1 2 ಎಕರೆ 2 ಗುಂಟೆ ಜಮೀನಿನ ಸಂಬಂಧ ರತ್ತಾಳ ಗ್ರಾಮದ ಹಣಮಂತ ತಂದೆ ರಗಪ್ಪ ವಾರಿ ಹಾಗು ಅಯ್ಯಮ್ಮ ಗಂಡ ಯಲ್ಲಪ್ಪ ತೇಲಗರ ಇವರ ಮದ್ಯೆ ತಕರಾರು ನಡೆದಿದ್ದು, ಸದರಿ ಜಮೀನ ಸಂಬಂಧ ಎರಡು ಪಾಟರ್ಿಯವರ ಮದ್ಯೆ ಗಾಢವಾದ ದ್ವೇಷ ಬೆಳೆದು ಪರಸ್ಪರ ನಾ ಮೇಲು, ತಾ ಮೇಲು ಗ್ರಾಮದಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ 1) ಅಯ್ಯಮ್ಮ ಗಂಡ ಯಲ್ಲಪ್ಪ ತೇಲಗರ ವಯಃ 40 ವರ್ಷ ಜಾತಿಃ ಕುರುಬ ಉಃ ಹೊಲಮನೆಕೆಲಸ ಹಾಗು 2) ನಿಂಗಪ್ಪ ತಂದೆ ಭೀಮಣ್ಣ ಬಾಕಲಿ ವಯಃ 25 ವರ್ಷ ಜಾತಿಃ ಕುರುಬ ಉಃ ಒಕ್ಕಲುತನ, 3) ಹೈಯ್ಯಾಳಪ್ಪ ತಂದೆ ಭೀಮಣ್ಣ ಬಾಕಲಿ ವಯಃ 35 ವರ್ಷ ಜಾತಿಃ ಕುರುಬ ಉಃ ಒಕ್ಕಲುತನ 4) ಬಸಮ್ಮ ಗಂಡ ಭೀಮಣ್ಣ ಬಾಕಲಿ ವಯಃ 65 ವರ್ಷ ಜಾತಿಃ ಕುರುಬ ಉಃ ಹೊಲಮನೆಕೆಲಸ, 5) ಮಲ್ಲಯ್ಯ ತಂದೆ ನಾಗಣ್ಣ ವಂಟೂರ ವಯಃ 19 ವರ್ಷ ಜಾತಿಃ ಕುರುಬ ಉ: ವಿದ್ಯಾಥರ್ಿ ಎಲ್ಲರೂ ಸಾ: ರತ್ತಾಳ ತಾ: ಸುರಪೂರ ಜಿಲ್ಲೆ: ಯಾದಗಿರಿ ಇವರೆಲ್ಲರೂ ಹಣಮಂತ ತಂದೆ ರಗಪ್ಪ ವಾರಿ ಹಾಗು ಅವರ ಕುಟುಂಬದವರಿಗೆ ಹೊಡೆಬಡೆ ಮಾಡಿ ಗ್ರಾಮದಲ್ಲಿ ಕಾನೂನು ಸೂವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಹಾಗು ಗ್ರಾಮದಲ್ಲಿ ಜೀವಹಾನಿ, ಆಸ್ತಿಪಾಸ್ತಿ ಹಾನಿಯಾಗುವ ಸಾದ್ಯತೆ ಕಂಡು ಬಂದಿರುತ್ತದೆ. ಆದ್ದರಿಂದ 10-30 ಎ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ವರದಿ ನೀಡಿದ್ದು, ಸದರಿ 5 ಜನರ ವಿರುದ್ದ ಸೂಕ್ತ ಮುಂಜಾಗೃತಾ ಕ್ರಮ ಕೈಕೊಳ್ಳಬೇಕು ಅಂತ ವರದಿ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್ ನಂಬರ 25/2020 ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.     


ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 26/2020 ಕಲಂ: 107 ಸಿ.ಆರ್.ಪಿ.ಸಿ : ಇಂದು ದಿನಾಂಕಃ 09/08/2020 ರಂದು 11-45 ಎ.ಎಮ್ ಕ್ಕೆ ಶ್ರೀ ದೇವಿಂದ್ರಪ್ಪ ಪಿ.ಸಿ 184 ಸುರಪೂರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ಹಳ್ಳಿ ಬೀಟ್ ಕರ್ತವ್ಯ ಕುರಿತು ನಾಗರಾಳ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ಗಸ್ತು ಮಾಡಿ ಪ್ರಮುಖ ನಾಗರೀಕ ಸಮೀತಿ ಸದಸ್ಯರಿಗೆ ಹಾಗು ಪೊಲೀಸ್ ಬಾತ್ಮಿದಾರರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೆನೆಂದರೆ, ನಾಗರಾಳ ಸಿಮಾಂತರದ ಸವರ್ೆ ನಂ. 61 ರಲ್ಲಿ ದಾವಲಸಾಬ ತಂದೆ ಖಾಸಿಂಸಾಬ ಗೊಡೇಕಾರ್ ಹಾಗು ಅವರ ಅಣ್ಣ-ತಮ್ಮಕೀಯ ಸೋಪಿಸಾಬ ತಂದೆ ಸೈಯ್ಯದಸಾಬ ಗೊಡೆಕಾರ ಇವರ ಹೊಲಗಳಿದ್ದು, ದಾವಲಸಾಬ ಇವರ ಹೊಲ ದಾಟಿ ಸೋಪಿಸಾಬ ಇವರ ಹೊಲವಿರುತ್ತದೆ. ಸೋಪಿಸಾಬ ಇವರು ತಮ್ಮ ಹೊಲದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು, ತಮ್ಮ ಹೊಲ ಹಾಗು ಮನೆಗೆ  ಹೋಗಬೇಕಾದರೆ ದಾವಲಸಾಬ ಇವರ ಹೊಲದಲ್ಲಿಂದ ಹೋಗಬೇಕಾಗಿರುತ್ತದೆ. ಸದರಿ ದಾವಲಸಾಬ ಇತನು ಸೋಪಿಸಾಬ ಹಾಗು ಅವರ ಮನೆಯವರಿಗೆ ನಮ್ಮ ಹೊಲದಲ್ಲಿ ದಾರಿ ಇಲ್ಲಾ, ಇಲ್ಲಿಂದ ತಿರುಗಾಡಬೇಡಿರಿ ಅಂತ ತಕರಾರು ಮಾಡುತ್ತ ಬಂದಿರುವದರಿಂದ ಹೊಲಕ್ಕೆ ಹೋಗುವ ದಾರಿಯ ವಿಷಯದಲ್ಲಿ ಎರಡು ಪಾಟರ್ಿಯವರ ಮದ್ಯೆ ಗಾಢವಾದ ದ್ವೇಷ ಬೆಳೆದು ಪರಸ್ಪರ ನಾ ಮೇಲು, ತಾ ಮೇಲು ಅನ್ನುತ್ತ ಗ್ರಾಮದಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ 1) ಸೋಪಿಸಾಬ ತಂದೆ ಸೈಯ್ಯದಸಾಬ ಗೊಡೆಕಾರ ವಯಃ 30 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ ಹಾಗು 2) ಖಾಸಿಂಸಾಬ ತಂದೆ ಸೈಯ್ಯದಸಾಬ ಗೊಡೆಕಾರ ವಯಃ 25 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ 3) ಮೈನುದ್ದೀನ್ ತಂದೆ ಖಾಸಿಂಸಾಬ ಗೊಡೆಕಾರ ವಯಃ 32 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ, ಮೂವರು ಸಾ: ನಾಗರಾಳ ತಾ: ಸುರಪೂರ ಜಿಲ್ಲೆ: ಯಾದಗಿರಿ ಇವರೆಲ್ಲರೂ ತಮ್ಮ ಮನೆಗೆ ಹಾಗು ಹೊಲಕ್ಕೆ ಹೋಗಲು ದಾರಿ ಕೊಡದೇ ತಕರಾರು ಮಾಡುತ್ತಿರುವ ದಾವಲಸಾಬ ತಂದೆ ಖಾಸಿಂಸಾಬ ಗೊಡೇಕಾರ್ ಹಾಗು ಅವರ ಕುಟುಂಬದವರಿಗೆ ಹೊಡೆಬಡೆ ಮಾಡಿ ಗ್ರಾಮದಲ್ಲಿ ಕಾನೂನು ಸೂವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಹಾಗು ಗ್ರಾಮದಲ್ಲಿ ಜೀವಹಾನಿ, ಆಸ್ತಿಪಾಸ್ತಿ ಹಾನಿಯಾಗುವ ಸಾದ್ಯತೆ ಕಂಡು ಬಂದಿರುತ್ತದೆ. ಆದ್ದರಿಂದ 11-45 ಎ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ವರದಿ ನೀಡಿದ್ದು, ಸದರಿ 3 ಜನರ ವಿರುದ್ದ ಸೂಕ್ತ ಮುಂಜಾಗೃತಾ ಕ್ರಮ ಕೈಕೊಳ್ಳಬೇಕು ಅಂತ ವರದಿ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್ ನಂಬರ 26/2020 ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು. 


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 126/2020 ಕಲಂ:143.147.341.323,447.504.506 ಸಂಗಡ 149 ಐಪಿಸಿ : ಇಂದು ದಿನಾಂಕ 09/08/2020 ರಂದು ಬೆಳಿಗ್ಗೆ 9.15 ಗಂಟೆಗೆ ಪಿರ್ಯಾದಿ ಶ್ರೀಮತಿ ಸಾವಿತ್ರಿ ಗಂಡ ರಂಗಯ್ಯ ಗುತ್ತೆದಾರ ವಯಾ|| 50 ಜಾ|| ಈಳಗೇರ ಉ|| ಮನೆಗೆಲಸ ಸಾ|| ಈಜೇರಿ ತಾ|| ಜೇವರಗಿ ಜಿಲ್ಲಾ:ಕಲಬುರಗಿ ರವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಅಜರ್ಿ ಸಾರಾಂಶವೆನೆಂದರೆ ನನ್ನ ಹೆಸರಿನಲ್ಲಿ ಮಾಲಗತ್ತಿ ಸೀಮಾಂತರದಲ್ಲಿ ಸವರ್ೇ ನಂ 387/2 ನೇದ್ದರಲ್ಲಿ 2 ಎಕರೆ 31 ಗುಂಟೆ ಹೊಲವಿದ್ದು ಸದರಿ ಜಮೀನು ನನ್ನ ಕಬ್ಜೆದಲ್ಲಿರುತ್ತದೆ. ನಾನು ನನ್ನ ಹೊಲಕ್ಕೆ ಸಾಗುವಳಿ ಮಾಡಲು ಹೋದರೆ ನನ್ನ ತಮ್ಮನಾದ ಶರಣಗೌಡ ತಂಧೆ ದ್ಯಾವಯ್ಯ ಗುತ್ತೆದಾರ ಇವನು ನನ್ನೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾನೆ.    

    ಹೀಗಿದ್ದು ನಿನ್ನೆ ದಿನಾಂಕ:-08/08/2020 ರಂದು ಬೆಳಿಗ್ಗೆ 9.00 ಗಂಟೆಗೆ ನಾನು ಹಾಗೂ ನನ್ನ ಗಂಡ ರಂಗಯ್ಯ ತಂದೆ ಸಾಬಯ್ಯ ಗುತ್ತೆದಾರ ಇಬ್ಬರು ಸೇರಿ ನಮ್ಮ ಹೊಲಕ್ಕೆ ಹೋದಾಗ ನಮ್ಮ ಸಂಬಂದಿಕರಾದ 1) ಶರಣಗೌಡ ತಂಧೆ ದ್ಯಾವಯ್ಯ ಗುತ್ತೆದಾರ 2) ವಿಠಲ್ ತಂದೆ ದ್ಯಾವಯ್ಯ ಗುತ್ತೆದಾರ 3) ಮಾನಮ್ಮ ಗಂಡ ಯಮನಯ್ಯ ಗುತ್ತೆದಾರ 4) ಮಹಾದೇವಿ ಗಂಡ ಶಿವಯ್ಯ ಗುತ್ತೆದಾರ 5) ಅನುಸುಯಾ ಗಂಡ ದಸ್ತಯ್ಯ ಗುತ್ತೆದಾರ 6) ಬಾಲಮ್ಮ ಗಂಡ ಸಂತೋಷ ಗುತ್ತೆದಾರ 7) ಬಸಮ್ಮ ಗಂಡ ದ್ಯಾವಯ್ಯ ಗುತ್ತೆದಾರ ಇವರೆಲ್ಲರು ಗುಂಪು ಕಟ್ಟಿಕೊಂಡು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ನಮಗೆ ಸಾಗುವಳಿ ಮಾಡಲು ತಡೆದಾಗ ನಾನು ಏಕೆ ಹೀಗೆ ಮಾಡುತ್ತಿರಿ, ಸದರಿ ಹೊಲವು ನನ್ನ ಹೆಸರಿನಲ್ಲಿರುತ್ತದೆ ಅಂತಾ ಅಂದಾಗ ಮೆಲ್ಕಾಣಸಿದ ಎಲ್ಲಾ ಜನರು ಈ ಸೂಳೆ ಮಕ್ಕಳ ಸೊಕ್ಕು ಬಹಾಳ ಆಗಿದೆ ಅಂತಾ ಅವಾಚ್ಯವಾಗಿ  ಬೈಯುತ್ತಾ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ  ಶಹಾಬುದ್ದೀನ್ ತಂದೆ ಯಲ್ಲಯ್ಯ ಗುತ್ತೆದಾರ ಹಾಗು ಚಾಂದಪಾಶಾ ತಂದೆ ಅಲ್ಲಾಬಕ್ಸ್ ಗುತ್ತೆದಾರ, ಯಂಕೂಬಾ ತಂದೆ ತಿರುಪತಿ ಹವಲ್ದಾರ ಇವರು ಬಂದು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೆ ಇನ್ನೊಮ್ಮೆ ಈ ಹೊಲಕ್ಕೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಮುಂದೆ ನನಗಾಗಲೀ ಹಾಗು ನನ್ನ ಗಂಡನಿಗಾಗಲೀ ಎನಾದರೂ ಅನಾಹುತ ಆದರೆ ಅದಕ್ಕೆ ಮೇಲ್ಕಾಣಿಸದವರೇ ಕಾರಣೀಬೂತರಿದ್ದು ಕಾರಣ ಮೇಲ್ಕಾಣಿಸಿದ 7 ಜನರ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ ಅಂತಾ ಪಿರ್ಯಾದಿ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 125/2020 ಕಲ: 143,147,341,323,447,504,506 ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!