ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/08/2020

By blogger on ಬುಧವಾರ, ಆಗಸ್ಟ್ 5, 2020


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/08/2020 
                                                                                                                                
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 73/2020  324 504 506 ಐಪಿಸಿ & 3(1)(ಆರ್), 3(1)(ಎಸ್), 3(2)(ಗಿ-ಚಿ) ಎಸ್.ಸಿ/ಎಸ್.ಟಿಕಾಯ್ದೆ : ದಿನಾಂಕ:05/08/2020ರಂದುಮದ್ಯಾಹ್ನ16.30ಗಂಟೆಗೆಠಾಣೆಗೆ ಹಾಜರಾಗಿಒಂದುಕನ್ನಡದಲ್ಲಿಟೈಪ್ ಮಾಡಿದಅಜರ್ಿ ಸಲ್ಲಿಸಿದ್ದು ಸಾರಾಂಶವೆನೆಂದರೇ,ಇಂದು ದಿ:05/08/2020 ರಂದುಮದ್ಯಾಹ್ನ 15.00 ಗಂಟೆಯ ಸುಮಾರಿಗೆಫಿರ್ಯಾದಿಯುತನ್ನ ಹೊಲಕ್ಕೆ ಹೋಗಿ ನೋಡಿದಾಗಆರೋಪಿತನ ಹೊಲವು ಫಿರ್ಯಾದಿಯ ಹೊಲದ ಮೇಲ್ಬಾಗದಲ್ಲಿದ್ದು, ಆರೋಪಿತನ ಹೊಲದಲ್ಲಿಯ ಬದುವಿಗೆ ಮುಂಗಿ ಬಿದ್ದು ನೀರು ಫಿರ್ಯಾದಿಯ ಹೊಲದ ಮೆಣಸಿನ ಗಿಡದಲ್ಲಿಎರಡು ದಿವಸಗಳಿಂದ ಹೋಗುತ್ತಿದ್ದರಿಂದ ಫಿರ್ಯಾದಿಯುಆರೋಪಿತನಿಗೆಕರೆದುಎರಡು ದಿನವಾಯ್ತು ನಿನ್ನ ಹೊಲದ ಬದುವಿಗೆ ಮುಂಗಿ ಬಿದ್ದು, ನೀರು ನಮ್ಮ ಮೆಣಸಿನ  ತೋಟದಲ್ಲಿ ಹೋಗುತ್ತಿದ್ದು, ತೋಟ ಹಾಳಾಗುತ್ತಿದೆ. ಬದುವಿನ ಮುಂಗಿಗೆ ಮಣ್ಣು ಹಾಕಿ ಮುಚ್ಚಬಾರದೇನುಅಂತಾಅಂದಾಗಆರೋಪಿತನು ಏ ಹೊಲೆ ಸೂಳೆಮಗನೆ ನಮ್ಮ ಹಿರಿಯರು ನಿಮಗೆ ಹೊಲ ಕೊಟ್ಟುತಪ್ಪು ಮಾಡ್ಯಾರ ಸೂಳೆ ಮಗನೆ ನನಗೆ ಎದುರಾಡುತ್ತಿ ಏನು ಅಂತಾಅಂದುತನ್ನಕೈಯಲ್ಲಿದ್ದ ಸಲಿಕೆಯ ಹಿಂಬಾಗದಿಂದತಲೆಯ ಹಿಂಬಾಗಕ್ಕೆ, ಬಲಗಡೆ ಹಣೆಗೆ ಹೊಡೆದು ರಕ್ತಗಾಯಪಡಿಸಿದ್ದು, ಹಾಗೂ ಬಲಗಡೆ  ಪಕಡಿಗೆ ಹೊಡೆದುಗುಪ್ತಗಾಯ ಪಡಿಸಿದ್ದು, ಅಲ್ಲದೆ ಮತ್ತೊಮ್ಮೆ ಹೊಡೆಯಲು ಹೋದಾಗ ಕೈ ಅಡ್ಡವಾಗಿಒಯ್ದಿದ್ದರಿಂದ ಬಲಗಡೆ ಕೈ ಬೆರಳಿಗೆ ರಕ್ತಗಾಯಡಪಸಿದ್ದು, ಅಲ್ಲದೆಆರೋಪಿತನು ಫಿರ್ಯಾದಿಗೆಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 122/2020 ಕಲಂ 498(ಎ), 323, 504 ಸಂಗಡ 34 ಐಪಿಸಿ  ಮತ್ತು ಕಲಂ: 3 & 4 ಡಿ.ಪಿ. ಆಕ್ಟ್ -1961 : ಫಿರ್ಯಾದಿದಾರಳೀಗೆ ದಿನಾಂಕ 27.05.2020 ರಂದು ಆಶಾಪೂರ ತಾಂಡಾದ ಹೇಮ್ಯಾ ಇವರ ಮಗನಾದ ಜಾಪ್ಯಾ ಈತನಿಗೆ 5 ತೋಲಿ ಬಂಗಾರ ಮತ್ತು 50 ಸಾವಿರ ರೂಗಳನ್ನು ಉಡುಗರೆ ರೂಪದಲ್ಲಿ ಕೊಟ್ಟು ಸಂಪ್ರದಾಯದಂತೆ ಹಿರಿಯ ಸಮಕ್ಷಮದಲ್ಲಿ ಮದುವೆ ಮಾಡಿ ಕೊಟ್ಟಿರುತ್ತಾರೆ. ಮದುವೆ ಆದಾಗಿನಿಂದ ಸುಮಾರು 1 ತಿಂಗಳ ವರೆಗೆ ಫಿರ್ಯಾದಿಯೊಂದಿಗೆ  ಅನೂನ್ಯವಾಗಿದ್ದರು. ನಂತರ ದಿನಗಳಲ್ಲಿ ಆರೋಪಿತರು ನನಗೆ ಹೊಲ ಮನೆಯಲ್ಲಿ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲ ಅಂತಾ ಮಾನಸೀಕ ಮತ್ತು ದೈಹಿಕ ಕಿರುಕುಳ ನೀಡುತ್ತ ಬಂದಿದ್ದು ಅಲ್ಲದೇ ಇನ್ನು ಕೊಡಬೆಕಾಗಿದ್ದ 4 ತೊಲಿ ಬಂಗಾರ ಮತ್ತು 1 ಲಕ್ಷದ 50 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಬರುವಂತೆ ಆರೋಪಿತರೆಲ್ಲಾರು ಕೂಡಿ ದಿನಾಂಕ 14.07.2020 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ನನಗೆ ಕೈಯಿಂದ ಹೊಡೆ-ಬಡೆ ಮಾಡಿದ್ದು ಉಳಿದ ವರದಕ್ಷಿಣೆ ತರುವ ತನಕ ನಮ್ಮ ಮನೆಯಲ್ಲಿ ನೀನು ಕಾಲಿಡಬಾರದು ನಡಿ ಅಂತಾ ಫಿರ್ಯಾದಿದಾರಳಿಗೆ ನನಗೆ ಹೊರಗೆ ದೊಬ್ಬಿದರು. ನಂತರ ನಾನು ಅಲ್ಲಿಂದ ನಮ್ಮ ತಾಯಿಯೊಂದಿಗೆ ತವರು ಮನೆಗೆ ಹೋಗಿ ನಂತರ ಇಂದು ದಿನಾಂಕ:05.08.2020 ರಂದು ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿ ತಿಳಿಸಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡೆನು.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 59/2020 ಕಲಂ: 323,324,504,506, ಸಂಗಡ 34  ಐಪಿಸಿ : ಇಂದು ದಿನಾಂಕ 20/06/2020 ರಂದು 5:00 ಪಿ.ಎಂ ಕ್ಕೆ ಶ್ರೀ ಅಮರೇಶ ತಂದೆ ಚಂದಪ್ಪ ಗೌಡರ ವ:28 ವರ್ಷ ಉದ್ಯೋಗ ಮೀನು ಹಿಡಿಯುವದು ಜಾ:ಹಿಂದು ಬೇಡರ ಸಾ:ನಾರಾಯಣಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ನಮ್ಮ ಗ್ರಾಮದಲ್ಲಿ ನಮ್ಮ ಸಂಬಂದಿ ರಾಯಮ್ಮ ಗಂಡ ಚಂದಪ್ಪ ಗೌಡರ ಇವರು ತೀರಿಕೊಂಡಿದ್ದರಿಂದ ನಾರಾಯಣಪೂರ ಗ್ರಾಮದ ಹಳ್ಳಿ ಶಾಲೆಯಲ್ಲಿ ಜನರು ಕುಡಿದ್ದು ಇರುತ್ತದೆ. ಇಂದು ದಿನಾಂಕ 05/08/2020 ರಂದು ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ನಮ್ಮೂರ ರಮೇಶ ತಂದೆ ಗದ್ದೆಪ್ಪ ಬೇನಗಿಡದರ, ಕುಮ್ಯಾ@ ಕುಮಾರ ತಂದೆ ಹಣಮಂತ ಹಾಳಗೋಡಿ ಮುತ್ತಪ್ಪ ತಂದೆ ಹಣಮಂತ ಹಾಳಗೋಡ ಸಾ:ನಾರಾಯಣಪೂರ ಇವರು ನಮ್ಮೂರ ಹಳ್ಳಿ ಶಾಲೆಯ ಮೆಟ್ಟಲುಗಳ ಮೇಲೆ ಕುಳಿತಿದ್ದರು ನಾನು ಶಾಲೆಯ ಒಳಗಡೆ ಹೋಗಲು ಮೆಟ್ಟಿಲು ಮೇಲಿಂದ ಹೋಗುತ್ತಿದ್ದಾಗ ನನ್ನ ಕಾಲು ಮೆಟ್ಟಿಲಗಳ ಮೇಲೆ ರಮೇಶನಿಗೆ ಬಡಿದಿದ್ದು ಆಗ ರಮೇಶನು ನನಗೆ ಬೋಸುಡಿ ಮಗನ್ಯಾ ಕಣ್ಣ ಕಾಣಸಂಗಿಲೇನ್ ಸರಿಯಾಗಿ ನೋಡಿಕೊಂಡು ಹೋಗಲು ಬರುವದಿಲ್ಲ ಏನು ಅಂತಾ ಅಂದನು ಆಗ ನಾನು ರಮೇಶನಿಗೆ ಸರಿಯಾಗಿ ಮಾತಡಪಾ ಅಂತಾ ಅಂದೇನು ಅವನ ಜೊತೆಗೆ ಇದ್ದ ಕುಮ್ಯಾ @ ಕುಮಾರ ತಂದೆ ಹಣಮಂತ ಹಾಳಗೋಡಿ ಈತನು ನನಗೆ ಬೋಸುಡಿ ಮಗನ್ಯಾ ಕಾಲ ತುಳ್ಯಾತನ ತುಳದ ಮತ್ತೆ ನಮಗ ಸರಿಯಾಗಿ ಮಾತಡಪಾ ಅಂತಿಯಾ ಅಂದು ನನ್ನೊಂದಿಗೆ ತೆಕ್ಕೆಕುಸ್ತಿಗೆ ಬಿದ್ದು ಕೈಯಿಂದ ನನ್ನ ಕಪಾಳಕ್ಕೆ ಹೊಡೆಯತೊಡಗಿದನು ಆಗ ಅಲ್ಲಿಯೇ ಇದ್ದ ಮುತ್ತಪ್ಪ ತಂದೆ ಹಣಮತ್ತ ಹಾಳಗೋಡಿ ಈತನು ಅಲ್ಲಿಯೇ ಬಿದ್ದಿದ್ದ ಒಂದು ಹಿಡಿಗಾತ್ರದ ಕಲ್ಲಿನಿಂದ ನನ್ನ ಬಲಗಡೆ ಕಿವಿಯ ಮೇಲಿನ ತಲೆಗೆ ಹೊಡೆದು ರಕ್ತಗಾಯಪಡಿಸಿದನು ಆಗ ನಾನು ಚೀರಾಡಲು ಅಲ್ಲಿಯೇ ಇದ್ದ ನಮ್ಮ ಗ್ರಾಮದ ಯಲ್ಲಪ್ಪ ತಂದೆ ಅಯ್ಯಪ್ಪ ರಾಯನಗೋಳ, ಹಾಗೂ ಅಮರೇಶ ತಂದೆ ಸಾಯಬಣ್ಣ ಅಮರಾವತಿ ರವರು ಬಂದು ಬಿಡಿಸಿದ್ದು ಇರುತ್ತದೆ ಇವರು ಬಿಡಸಿಕೊಂಡ ನಂತರ ರಮೇಶ, ಕುಮ್ಯಾ, ಮುತ್ತಪ್ಪ ಇವರು ನನಗೆ ಬೋಸಡಿ ಮಗನ್ಯಾ ಇವರು ಇವತ್ತು ಬಿಡಿಸಕೊಂಡರು ಅಂತಾ ಉಳದಿದ್ದಿಯಾ ಇಲ್ಲದಿದ್ದರೆ ನಿನಗೆ ಖಲಾಸ ಮಾಡಿಬಿಡುತ್ತಿದ್ದೇವು ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಕಾರಣ ನನಗೆ ಹೊಡೆದವರ ಮೇಲೆ ಕೇಸು ಮಾಡಲು ತಮ್ಮಲ್ಲಿ ಅಜರ್ಿಸಲ್ಲಿಸಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 59/2020 ಕಲಂ 323,324,504,506, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 122/2020 ಕಲಂ: 504,505[2],506 ಐ.ಪಿ.ಸಿ : ಇಂದು ದಿನಾಂಕ 05.08.2020 ರಂದು 05.15 ಪಿ ಎಮ್ ಕ್ಕೆ ಫಿಯರ್ಾದಿ ಇಮ್ರಾನ ತಂದೆ ಇಕ್ಬಾಲ ಜಾಗೀರದಾರ ವಯಸ್ಸು 28 ಜಾ|| ಮುಸ್ಲೀಂ ಉ: ವ್ಯಾಪಾರ  ಸಾ: ಕೆಂಭಾವಿ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ  ದಿನಾಂಕ 04.08.2020 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ನಗನೂರ ಗ್ರಾಮದ ಅರುಣ ತಂದೆ ಸಂಜೀವಪ್ಪ ಹವಲ್ದಾರ ಈತನು  (ಮೊ 9591454624) ನೇದ್ದವನು ತನ್ನ ಮೋಬೈಲದಲ್ಲಿ ಭೂಮಿ ಪೂಜೆಯ ದಿನ ಅಲ್ಲೇನಾದ್ರೂ ಸಣ್ಣ ಅಹಿತಕರ ಘಟನೆ ನಡದರೇ ದಂಡಮ್ ದಾಸಗುಣಮ್ ಅಂತ ಅಂದು ಖಡ್ಗದ ಗುರುತು ಹಾಕಿ ನಂತರ ಅದರ ಪರಿಣಾಮವಾಗಿ ಭಾರತದಲ್ಲಿರುವ ಒಂದೇ ಒಂದು ಮಸಿದಿಯು ಇಲ್ಲದಂತೆ ಮಾಡ್ತೀವಿ ಎಚ್ಚರುಕೆ ಜೈ ಶ್ರೀರಾಮ್ ಅಂತ ಲೇಖನ ಬರೆದು ಅದರ ಚಿತ್ರಣವನ್ನು ವ್ಯಾಟ್ಸಪ್ದಲ್ಲಿ, ಬಿಟ್ಟು ಮುಸ್ಲೀಂ ಧರ್ಮಕ್ಕ್ಕೆ ಅವಹೇಳನವಾಗುವ ರೀತಿಯಲ್ಲಿ ಅಶ್ಲೀಲ  ಶಬ್ದಗಳಿಂದ ಧರ್ಮಗಳ ನಡುವೆ ದ್ವೇಶ ಬೆಳೆಸುವಂತಹ ಶಬ್ದಗಳಿಂದ ಮುಸ್ಲೀಂ ಧರ್ಮದ ಜನರಿಗೆ ಬೈಯ್ದು ಖಡ್ಗ ತೋರಿಸಿ ಜೀವದ ಭಯ ಹಾಕಿರುತ್ತಾನೆ. ಅಲ್ಲದೇ ನಮ್ಮ ಮುಸ್ಲೀಂ ಧರ್ಮಕ್ಕೆ ಅವಮಾನ (ಅಪಮಾನ) ಮಾಡಿರುತ್ತಾನೆ. ಮುಸ್ಲೀಂ ಧರ್ಮಕ್ಕೆ ಅಪಮಾನ ಮಾಡಿದ ಈತನ ವಿರುದ್ದ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಅಂತ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ 122/2020 ಕಲಂ 504,505[2],506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

      
ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 217/2020  ಕಲಂ 279, 337, 338  ಐ.ಪಿ.ಸಿ : ಇಂದು ದಿನಾಂಕ 05/08/2020 ರಂದು ಮದ್ಯಾಹ್ನ 12-30 ಗಂಟೆಗ ಫಿರ್ಯಾದಿ ಶ್ರೀಮತಿ ಅಂಜಮ್ಮ ಗಂಡ ಅಮರೇಶ ನಾಯ್ಕೋಡಿ ಸಾಃ ಜಿವೇಶ್ವರ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ ತನ್ನ ಗಂಡ  ಅಮರೇಶ ತಂದೆ ಗೊಲ್ಲಾಳಪ್ಪ ನಾಯ್ಕೋಡಿ ವಯ 30 ವರ್ಷ ಸಾಃ ಜಿವೇಶ್ವರ ನಗರ ಶಹಾಪೂರ ಇವರು ಸುಮಾರು 8-10 ವರ್ಷಗಳಿಂದ ಶಹಾಪೂರ ಭವಾನಿ ಟೇಲರ ಅಂಗಡಿಯಲ್ಲಿ ಟೇಲರಿಂಗ ಕೆಲಸ ಮಾಡಿಕೊಂಡಿದ್ದರು. ದಿನಾಂಕ 02/08/2020 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಅಮರೇಶ ಇವರು   ಸ್ವಲ್ಪ ಕೆಲಸವಿದೆ  ಹೊರಗಡೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋದರು. ನಂತರ ರಾತ್ರಿ 8-35 ಗಂಟೆಯ ಸುಮಾರಿಗೆ ಫಿರ್ಯಾದಿಯವರ ಚಿಕ್ಕಮನ ಮಗ ಮರಿಲಿಂಗ ಸಾಃ ಪಿಲ್ಟರ ಬೆಡ್ ಶಹಾಪೂರ ಇವನು ಫೋನ್ ಮಾಡಿ ನಾನು ಹಮಾಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತಿದ್ದಾಗ ಶಹಾಪೂರ-ಭೀಗುಡಿ ರೋಡಿನ ಮೇಲೆ ಶಹಾಪೂರದ ದೇವಿ ನಗರ ಕ್ರಾಸ್ ಹತ್ತಿರ ನಿಮ್ಮ ಗಂಡ ಅಮರೇಶ ಇವರಿಗೆ ಭೀ-ಗುಡಿ ಕಡೆಯಿಂದ ಒಂದು ಮೋಟರ ಸೈಕಲ್ ನಂ ಏಂ-33-ಙ-5252   ರ ಚಾಲಕ ನಾಗಯ್ಯ ತಂದೆ ಸಿದ್ದಲಿಂಗಯ್ಯ ಗುರುವಿನ ಸಾಃ ಹಳಿಪೇಠ ಶಹಾಪೂರ ಈತನು ಮೋಟರ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಅಮರೇಶ ಇವರಿಗೆ ಅಪಘಾತ ಪಡಿಸಿದ್ದರಿಂದ ಅಮರೇಶನಿಗೆ ಮತ್ತು ಮೋಟರ ಸೈಕಲ್ ಮೇಲೆ ಇದ್ದ ಇಬ್ಬರೂ ವ್ಯಕ್ತಿಗಳಿಗೆ   ಭಾರಿ ಹಾಗೂ ಸಾಧಾ ಗಾಯಗಳಾಗಿದ್ದು, ಸದರಿ ಅಪಘಾತಕ್ಕೆ ಕಾರಣಿಭೂತನಾದ ಮೋಟರ ಸೈಕಲ್ ಸವಾರ ನಾಗಯ್ಯ ತಂದೆ ಸಿದ್ದಲಿಂಗಯ್ಯ ಗುರುವಿನ ಸಾಃ ಹಳಿಪೇಠ ಈತನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ 217/2020 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:-. 92/2020 ಕಲಂ 279, 338 ಐ.ಪಿ.ಸಿ : ದಿನಾಂಕ: 05/08/2020 ರಂದು 1.30 ಎ.ಎಮ್ ಸುಮಾರಿಗೆ ಮಳೆ ಬರುತ್ತಿದ್ದರಿಂದ ಫಿಯರ್ಾದಿಯು ಮುಡಬೂಳ ಕ್ರಾಸ್ ಹತ್ತಿರ ಮುಖ್ಯ ರಸ್ತೆಯ ಪಕ್ಕದಲ್ಲಿನ ಪಂಚರ ಅಂಗಡಿಯ ಮುಂದೆ ಆಸರೆಗೆ ನಿಂತಾಗ ಆರೋಪಿತನು ಶಹಾಪುರ ಕಡೆಯಿಂದ ತನ್ನ ಗೂಡ್ಸ್ ವಾಹನ ನಂ:ಕೆಎ-34, ಬಿ-8123 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಅಂಗಡಿಯ ಮುಂದೆ ನಿಂತ ಫಿಯರ್ಾದಿಗೆ ಮತ್ತು ಅಲ್ಲೇ ನಿಲ್ಲಿಸಿದ ಬಜಾಜ ಪಲ್ಸರ್ ಮೋಟರ್ ಸೈಕಲ್ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಫಿಯರ್ಾದಿಗೆ ಸಾದಾ ಮತ್ತು ಭಾರಿ ಗುಪ್ತಗಾಯಗಳಾಗಿದ್ದು, ಮೋಟರ್ ಸೈಕಲ್ ಜಖಂಗೊಂಡಿದ್ದು ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸುವಂತೆ ಫಿಯರ್ಾದಿ ಅಜರ್ಿ ನೀಡಿದ್ದು ಇರುತ್ತದೆ.

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:-. 32/2020  ಕಲಂ 279,  338 ಐಪಿಸಿ  : ದಿನಾಂಕ 15/07/2020 ರಂದು ಸಾಯಂಕಾಲ 7-20 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಯಾದಗಿರಿ ಜಿಲ್ಲಾಧಿಕಾರಿಗಳ ಕಾಯರ್ಾಲಯದ ಮುಂದೆ ರಸ್ತೆ ಮೇಲೆ ಈ ಕೇಸಿನ ಗಾಯಾಳು ಗುಂಡಪ್ಪ ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ಆರೋಪಿತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಎಕ್ಸ್-5957 ನೇದ್ದನ್ನು ಅತೀವೇಗ ಮತ್ತು ಅಲಕಷ್ಯತನದಿಂದ ನಡೆಸಿ ಗಾಯಾಳುವಿಗೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಗುಂಡಪ್ಪನಿಗೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆಯಾಗಿ ನಂತರ ಹೆಚ್ಚಿನ ಉಪಚಾರಕ್ಕಾಗಿ ಚಿತ್ರದುರ್ಗದ ಆಸ್ಪತ್ರೆಗೆ ಸೇರಿಕೆಯಾಗಿ ಚಿಕಿತ್ಸೆ ಪಡೆದುಕೊಂಡು ಈ ಘಟನೆ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ಪಿಯರ್ಾದು ನೀಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!