ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/08/2020

By blogger on ಮಂಗಳವಾರ, ಆಗಸ್ಟ್ 4, 2020


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/08/2020 

AiÀiÁzÀVgÀ £ÀUÀgÀ ¥ÉưøÀ oÁuÉ UÀÄ£Éß £ÀA:- 07/2020 PÀ®A 107 ¹.Dgï.¦.¹ : ನಾನು ಶ್ರೀಮತಿ ಸೌಮ್ಯ ಎಸ್.ಆರ ಪಿ.ಎಸ್.(ಕಾ.ಸು) ಯಾದಗಿರಿ ನಗರ ಠಾಣೆ ಮಾನ್ಯರವರಲ್ಲಿ ಸಲ್ಲಿಸುವ ವರದಿ ಏನೆಂದರೆ, ದಿನಾಂಕ.05/08/2020 ರಂದು ಅಯೋದ್ಯಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಮತ್ತು ಅಡಿಗಲ್ಲು ಸ್ಥಾಪನೆ ಇದ್ದುದ್ದರಿಂದ ಠಾಣೆಯ ರೌಡಿ ಶೀಟರನಾದ ಪರಶುರಾಮ ತಂದೆ ಅಂಬಣ್ಣ ಶೇಗುರಕರ ವಃ 36  ಯಾದಗಿರ ಛತ್ರಪತಿ ಶಿವಾಜಿ ಸೇನೆ ಜಿಲ್ಲಾ ಅದ್ಯಕ್ಷ ಸಾಃ ಬಂಡಿಗೇರಾ ಯಾದಗಿರಿ ಈತನು ಛತ್ರಪತಿ ಶಿವಾಜಿ ಸೇನೆ ಜಿಲ್ಲಾ ಅದ್ಯಕ್ಷನಿದ್ದು ದಿನಾಂಕ; ದಿನಾಂಕ.05/08/2020 ರಂದು ಅಯೋದ್ಯಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಮತ್ತು ಅಡಿಗಲ್ಲು ಸ್ಥಾಪನೆ ಇದ್ದುದ್ದರಿಂದ ಸದರಿಯವನು ಜನರನ್ನು ಗುಂಪುಗುಡಿಸಿಕೊಂಡು ನಗರದಲ್ಲಿ ಕೋಮು ಗಲಭೆವುಂಟುಮಾಡಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆ ತಂದು ಕಾನೂನು ಸುವ್ಯವಸ್ಥೆಗೆ ತೊಡಕುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿಯವನಿಂದ ಮುಂದೆ ಜರುಗಬಹುದಾದ ಸಂಭವನಿಯ ಅಪರಾಧಗಳನ್ನು ತಡೆಗಟ್ಟುವಗೋಸ್ಕರ ಸದರಿಯವನ ವಿರುದ್ದ ಮುಂಜಾಗೃತ ಕ್ರಮವಾಗಿ ಇಂದು ದಿನಾಂಕ: 04/08/2020 ರಂದು 1-00 ಪಿ.ಎಮ್ ಕ್ಕೆ ಠಾಣೆ ಪಿ..ಆರ್.ನಂ: 07/2020 ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ಕಾರಣ ಮಾನ್ಯರವರು ಸದರಿ ಪ್ರತಿವಾದಿ ವಿರುದ್ದ ಕಲಂ: 116(2) ಸಿ.ಆರ್.ಪಿ.ಸಿ ಪ್ರಕಾರ ಇಂಟೆರಿಯಮ ಬಾಂಡ ಪಡೆದುಕೊಳ್ಳಲು ವಿನಂತಿ. 

 

AiÀiÁzÀVgÀ £ÀUÀgÀ ¥ÉưøÀ oÁuÉ UÀÄ£Éß £ÀA:- 08/2020 PÀ®A 107 ¹.Dgï.¦.¹ : ನಾನು ಶ್ರೀಮತಿ ಸೌಮ್ಯ ಎಸ್.ಆರ ಪಿ.ಎಸ್.(ಕಾ.ಸು) ಯಾದಗಿರಿ ನಗರ ಠಾಣೆ ಮಾನ್ಯರವರಲ್ಲಿ ಸಲ್ಲಿಸುವ ವರದಿ ಏನೆಂದರೆ, ದಿನಾಂಕ.05/08/2020 ರಂದು ಅಯೋದ್ಯಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಮತ್ತು ಅಡಿಗಲ್ಲು ಸ್ಥಾಪನೆ ಇದ್ದುದ್ದರಿಂದ ಠಾಣೆಯ ರೌಡಿ ಶೀಟರನಾದ ಅಬ್ದುಲ್ ಕರೀಂ ತಂದೆ ಇಫ್ತೀಕಾರ ಹುಸೇನ್ ಸೈದಾಪೂರ ;35 ಜಾ; ಮುಸ್ಲಿಂ ಸಾ; ಮದನಪೂರಗಲ್ಲಿ ಸ್ಟೇಶನ್ ಏರಿಯಾ ಯಾದಗಿರಿ ಈತನು ಟಿಪ್ಪು ಸುಲ್ತಾನ ಸಂಘಟನೆ ಯಾದಗಿರಿಯ ಜಿಲ್ಲಾಧ್ಯಕ್ಷನಾಗಿದ್ದು ದಿನಾಂಕ; ದಿನಾಂಕ.05/08/2020 ರಂದು ಅಯೋದ್ಯಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಮತ್ತು ಅಡಿಗಲ್ಲು ಸ್ಥಾಪನೆ ಇದ್ದುದ್ದರಿಂದ ಸದರಿಯವನು ಜನರನ್ನು ಗುಂಪುಗುಡಿಸಿಕೊಂಡು ನಗರದಲ್ಲಿ ಕೋಮು ಗಲಭೆವುಂಟುಮಾಡಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆ ತಂದು ಕಾನೂನು ಸುವ್ಯವಸ್ಥೆಗೆ ತೊಡಕುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿಯವನಿಂದ ಮುಂದೆ ಜರುಗಬಹುದಾದ ಸಂಭವನಿಯ ಅಪರಾಧಗಳನ್ನು ತಡೆಗಟ್ಟುವಗೋಸ್ಕರ ಸದರಿಯವನ ವಿರುದ್ದ ಮುಂಜಾಗೃತ ಕ್ರಮವಾಗಿ ಇಂದು ದಿನಾಂಕ: 04/08/2020 ರಂದು 1-50 ಪಿ.ಎಮ್ ಕ್ಕೆ ಠಾಣೆ ಪಿ..ಆರ್.ನಂ: 08/2020 ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ಕಾರಣ ಮಾನ್ಯರವರು ಸದರಿ ಪ್ರತಿವಾದಿ ವಿರುದ್ದ ಕಲಂ: 116(2) ಸಿ.ಆರ್.ಪಿ.ಸಿ ಪ್ರಕಾರ ಇಂಟೆರಿಯಮ ಬಾಂಡ ಪಡೆದುಕೊಳ್ಳಲು ವಿನಂತಿ                                                                                                                                


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 88/2020 ಕಲಂ: 279,337,338 ಐಪಿಸಿ : ಇಂದು ದಿನಾಂಕ: 04/08/2020 ರಂದು 3-45 ಪಿಎಮ್ ಕ್ಕೆ ಶ್ರೀ ಶ್ರೀಧರ ತಂದೆ ಅರವಿಂದ ಕುಲಕಣರ್ಿ, ವ:24, ಜಾ:ಬ್ರಾಹ್ಮಣ, ಉ:ಫೊಟೊಗ್ರಾಫರ ಸಾ:ನಂದವಾಡಗಿ ತಾ:ಇಲಕಲ್ ಜಿ:ಬಾಗಲಕೋಟ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಸಲ್ಲಿಸಿದ್ದೆನಂದರೆ ಅವಿನಾಶ ತಂದೆ ಅಶೋಕ ಕುಲಕಣರ್ಿ ಈತನು ನನಗೆ ಕಾಕನ ಮಗನಾಬೇಕು. ಸದರಿ ಅವಿನಾಶನು ಮುದ್ದೆಬಿಹಾಳದಲ್ಲಿ ಜೆ.ಸಿ.ಬಿ ಸ್ಪೇರಪಾಟ್ರ್ಸ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾನೆ. ಹೀಗಿದ್ದು ದಿನಾಂಕ: 31/07/2020 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು ಲಿಂಗಸ್ಗೂರುದಲ್ಲಿ ಇದ್ದಾಗ ಅವಿನಾಶನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ನನ್ನ ಗೆಳೆಯ ವಿನಾಯಕ ತಂದೆ ಸಿದ್ರಾಮಯ್ಯ ಇಬ್ಬರೂ ಕೆಲಸದ ನಿಮಿತ್ಯ ಮೋಟರ್ ಸೈಕಲ್ ಮೇಲೆ ಗುರುಮಠಕಲ್ಕ್ಕೆ ಹೋಗಿ ಸಾಯಂಕಾಲ ಮರಳಿ ಮುದ್ದೆಬಿಹಾಳಕ್ಕೆ ಬರುತ್ತಿದ್ದೇವು. ನಾವು ಕುಳಿತು ಹೊರಟ ಮೋಟರ್ ಸೈಕಲ್ ನಂ. ಕೆಎ 03 ಕೆಎ 0150 (ಚೆಸ್ಸಿ ನಂ. ಒಃ8ಇಆ11ಂಇಏ8103752) ನೇದ್ದನ್ನು ವಿನಾಯಕ ಚಲಾಯಿಸುತ್ತಿದ್ದು, ನಾನು ಹಿಂದುಗಡೆ ಕುಳಿತುಕೊಂಡಿದ್ದೇನು. ಸಂಜೆ 5 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಗುರುಸಣಗಿ ಕ್ರಾಸದಿಂದ ಯಾದಗಿರಿಗೆ ಬರುವ ಬೈಪಾಸ ರೋಡಿನ ರೈಸ್ ಮಿಲ್ ಹತ್ತಿರ ಮೇನ ರೋಡ ಕಡೆ ಹೋಗುತ್ತಿದ್ದಾಗ ಎದುರುಗಡೆಯಿಂದ ಕಾರ ನಂ. ಎಮ್.ಹೆಚ್ 12 ಕೆಎನ್ 2748 ನೇದ್ದನ್ನು ಅದರ ಚಾಲಕ ಶಬ್ಬೀರ ತಂದೆ ಚಾಹುಸೇನ ಮುತ್ತಕೊಡ ಸಾ:ಗಂವ್ಹಾರ ಈತನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಲಗಡೆಯಿಂದ ಒಮ್ಮೆಲೆ ಕಟ್ ಹೊಡೆದು ನಮಗೆ ಡಿಕ್ಕಿಪಡಿಸಿದ್ದರಿಂದ ನಾವು ಇಬ್ಬರೂ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದುಬಿಟ್ಟೆವು. ಅಪಘಾತದಲ್ಲಿ ನಮಗಿಬ್ಬರಿಗೆ ಬಲ ಕಾಲುಗಳಿಗೆ ಭಾರಿ ಗಾಯ ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಅಂಬ್ಯುಲೇನ್ಸನಲ್ಲಿ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ನೀನು ಬೇಗನೆ ಬಾ ಎಂದು ಹೇಳಿದಾಗ ನಾನು ಲಿಂಗಸ್ಗೂರದಿಂದ ಹೊರಟು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಅವಿನಾಶ ಮತ್ತು ವಿನಾಯಕ ಇಬ್ಬರಿಗೆ ನೋಡಿದೆನು. ಅವಿನಾಶನಿಗೆ ಬಲಗಾಲ ತೊಡೆಯಲ್ಲಿ ಭಾರಿ ಒಳಪೆಟ್ಟಾಗಿ ಎಲುಬು ಮುರಿದಿತ್ತು ಮತ್ತು ಎಡಗೈಗೆ ತರಚಿದಗಾಯವಾಗಿತ್ತು. ವಿನಾಯಕನಿಗೆ ಬಲ ಮೊಳಕಾಲ ಚಿಪ್ಪಿಗೆ ಭಾರಿ ರಕ್ತಗಾಯವಾಗಿ ತೊಡೆಗೆ ಮತ್ತು ಬಲಗೈಗೆ ತರಚಿದಗಾಯವಾಗಿತ್ತು. ಘಟನೆ ಬಗ್ಗೆ ಕೇಳಿದಾಗ ಮೇಲಿನಂತೆ ಹೇಳಿ ಅಪಘಾತವನ್ನು ರಿಯಾಜ ತಂದೆ ಅಮೀರ ಈತನು ನೋಡಿರುತ್ತಾನೆ ಎಂದು ಹೇಳಿದರು. ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ಇಬ್ಬರು ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಿ ತೋರಿಸುವವರು ಯಾರು ಇಲ್ಲದ್ದರಿಂದ ನಾವು ನಂತರ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ಗಾಯಾಳುಗಳಿಗೆ ಉಪಚಾರಕ್ಕೆ ಬೇರೆ ಆಸ್ಪತ್ರೆಗಳಿಗೆ ಸೇರಿಕೆ ಮಾಡಿ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೇವೆ. ಕಾರಣ ಕಾರ ನಂ. ಎಮ್.ಹೆಚ್ 12 ಕೆಎನ್ 2748 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 88/2020 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 89/2020 ಕಲಂ: 498(ಎ), 504, 323, 506 ಸಂ 34 ಐಪಿಸಿ : ಇಂದು ದಿನಾಂಕ: 04/08/2020 ರಂದು 6-30 ಪಿಎಮಕ್ಕೆ ಶ್ರೀಮತಿ ಯಂಕಿಬಾಯಿ ಗಂಡ ಲಕ್ಷ್ಮಣ ರಾಠೋಡ, ವ:30, ಜಾ:ಲಮ್ಮಾಣಿ, ಉ:ಮನೆಕೆಲಸ ಸಾ:ಬೀರನಕಲ್ ತಾಂಡಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ತವರು ಮನೆಯು ಕಂಠಿ ತಾಂಡಾ  ಇರುತ್ತದೆ. ನನಗೆ ಸುಮಾರು 8-10 ವರ್ಷಗಳ ಹಿಂದೆ ನನ್ನ ತಂದೆ-ತಾಯಿ ಮತ್ತು ಗುರು ಹಿರಿಯರು ಕೂಡಿ ಬೀರನಕಲ್ ತಾಂಡಾದ ಲಕ್ಷ್ಮಣ ತಂದೆ ಖೋಬ್ಯಾ ರಾಠೋಡ ಈತನೊಂದಿಗೆ ನಮ್ಮ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿರುತ್ತಾರೆ. ನಮಗೆ 1) ಗಾಯತ್ರಿ ವ:07 ವರ್ಷ, 2) ಯುವರಾಜ ವ:04 ವರ್ಷ ಮತ್ತು 3) ಕಾತರ್ಿಕ ವ:01 ವರ್ಷ ಹೀಗೆ 3 ಜನ ಮಕ್ಕಳಿರುತ್ತಾರೆ. ಮನೆಯಲ್ಲಿ ನಾವು ಗಂಡ-ಹೆಂಡತಿ ಮತ್ತು ನನ್ನ ಮಾವ ಖೋಬ್ಯಾ ತಂದೆ ತುಕ್ಯಾ ರಾಠೋಡ, ಅತ್ತೆಯಾದ ರುಕ್ಕಿಬಾಯಿ ಗಂಡ ಖೋಬ್ಯಾ ರಾಠೋಡ ಇವರೊಂದಿಗೆ ವಾಸವಾಗಿದ್ದೆವು. ಕೆಲ ದಿನಗಳು ಸರಿಯಾಗಿದ್ದ ನನ್ನ ಗಂಡ, ಅತ್ತೆ ಮತ್ತು ಮಾವ ಮೂರು ಜನ ನನಗೆ ವಿನಾಕಾರಣ ನಿನಗೆ ಕೆಲಸ ಮಾಡಲು ಬರಲ್ಲ, ಅಡಿಗೆ ಮಾಡಲು ಬರಲ್ಲ, ನೀನು ಸರಿ ಇಲ್ಲ, ನೀನು ಅವರಿವರಿಗೆ ನೋಡುತ್ತಿ ಎಂದು ನನಗೆ ಹೊಡೆಬಡೆ ಮಾಡುವುದು ಮಾಡಿ ಕಿರುಕುಳ ಕೊಡಲಾರಂಭಿಸಿದ್ದರು. ಇದನ್ನು ನಮ್ಮ ಆಜುಬಾಜುದವರಾದ ಹರ್ಯಾ ತಂದೆ ನೂರ್ಯಾ ನಾಯಕ ರಾಠೋಡ ಮತ್ತು ಯಂಕಪ್ಪ ತಂದೆ ಕಸನಪ್ಪ ಚವ್ಹಾಣ ಇವರುಗಳು ಬಂದು ನೋಡಿ ಬಿಡಿಸಿ ನನ್ನ ಗಂಡ ಅತ್ತೆ ಮಾವನಿಗೆ ತಿಳುವಳಿಕೆ ಹೇಳಿರುತ್ತಾರೆ. ನಂತರ ನಾನು ನನ್ನ ತಂದೆ-ತಾಯಿಗೆ ನನಗೆ ಕಿರುಕುಳ ಕೊಡುತ್ತಿರುವ ವಿಷಯ ಹೇಳಿದಾಗ ನನ್ನ ತಂದೆ ಭೀಮಪ್ಪ ತಂದೆ ವಿಠ್ಠಪ್ಪ ಮತ್ತು ತಾಯಿ ರತ್ನಿಬಾಯಿ ಇವರು ನಮ್ಮ ಹಿರಿಯರಾದ 1) ರುಕ್ಮಾ ತಂದೆ ವಿಠಪ್ಪ ಚವ್ಹಾಣ ಮತ್ತು 2) ಬಾಬು ತಂದೆ ವಾಲಪ್ಪ ಚವ್ಹಾಣ ಇವರುಗಳಿಗೆ ಕರೆದುಕೊಂಡು ಬಂದು ನನ್ನ ಗಂಡ, ಅತ್ತೆ ಮತ್ತು ಮಾವನಿಗೆ ಕೂಡಿಸಿಕೊಂಡು ಬುದ್ದಿ ಮಾತು ಹೇಳಿದರು. ಆಗ ಅವರು ನಾವು ಯಂಕಿಬಾಯಿಗೆ ಕಿರುಕುಳ ಕೊಟ್ಟಿದ್ದು ತಪ್ಪಾಗಿರುತ್ತದೆ. ಇನ್ನು ಮುಂದೆ ಅವಳಿಗೆ ಸರಿಯಾಗಿ ನೋಡಿಕೊಳ್ಳುತ್ತೇವೆ ಎಂದು ಹೇಳಿ ಆಶ್ವಾಸನೆ ಕೊಟ್ಟು ಕಳುಹಿಸಿದರು. ಅಲ್ಲಿಂದ ಕೆಲವು ದಿನಗಳು ಸರಿಯಾಗಿ ನೋಡಿಕೊಂಡ ನನ್ನ ಗಂಡ, ಅತ್ತೆ ಮತ್ತು ಮಾವ ನನಗೆ ಪುನ: ಕಿರುಕುಳ ಕೊಟ್ಟು ಹೊಡೆಬಡೆ ಮಾಡುವುದು ಮಾಡಲಾರಂಭಿಸಿ, ಈಗ ಸುಮಾರು 4-5 ತಿಂಗಳ ಹಿಂದೆ ನೀನು ನಮ್ಮ ಮನೆಯಲ್ಲಿ ಇರುವುದು ಬೇಡ ನಿನ್ನ ತವರು ಮನೆಗೆ ಹೋಗು ಭೊಸುಡಿ ರಂಡಿ ಎಂದು ನನಗೆ ಅವಾಚ್ಯ ಬೈದು ಮನೆಯಿಂದ ಹೊರಗಡೆ ಹಾಕಿದಾಗ ನಾನು ಅನಿವಾರ್ಯವಾಗಿ ನನ್ನ ತವರು ಮನೆ ಕಂಠಿ ತಾಂಡಾಕ್ಕೆ ಬಂದು ಇಲ್ಲಿಯೇ ಇರುತ್ತೇನೆ. ಹೀಗಿದ್ದು ದಿನಾಂಕ: 28/07/2020 ರಂದು 12-30 ಪಿಎಮ್ ಸುಮಾರಿಗೆ ನಾನು ಕಂಠಿ ತಾಂಡಾದ ನನ್ನ ತವರು ಮನೆಯಲ್ಲಿದ್ದಾಗ ನನ್ನ ಗಂಡನಾದ ಲಕ್ಷ್ಮಣ ತಂದೆ ಖೋಬ್ಯಾ ರಾಠೋಡ, ಅತ್ತೆಯಾದ ರುಕ್ಕಿಬಾಯಿ ಗಂಡ ಖೋಬ್ಯಾ ರಾಠೋಡ ಮತ್ತು ಮಾವನಾದ ಖೋಬ್ಯಾ ತಂದೆ ತುಕ್ಯಾ ರಾಠೋಡ ಈ ಮೂರು ಜನ ಸೇರಿ ನಮ್ಮ ತವರು ಮನೆಗೆ ಬಂದು ನನಗೆ ಏ ಭೊಸುಡಿ ನೀನು ಇಲ್ಲಿ ಬಂದು ಕುಂತರೆ ನಮಗೆ ಅಡಿಗೆ ಯಾರು ಮಾಡಿ ಹಾಕುತ್ತಾರೆ ರಂಡಿ ಅಂತಾ ಬಾಯಿಗೆ ಬಂದಂಗೆ ಅವಾಚ್ಯ ಬೈಯುತ್ತಿದ್ದಾಗ ನಾನು ಮನೆಯಿಂದ ಹೊರಗಡೆ ಬಂದಾಗ ನನ್ನ ಗಂಡನು ಬಂದು ನನ್ನ ತೆಲೆ ಮೇಲಿನ ಕೂದಲು ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು. ನನ್ನ ಅತ್ತೆ ಮತ್ತು ಮಾವ ಇಬ್ಬರೂ ಹೊಡೆ ಈ ಸೂಳೆಗೆ ಇವತ್ತು ಖಲಾಸ ಮಾಡೆ ಬಿಡೊಣ ಎಂದು ಅವರು ಕೂಡಾ ಕೈಯಿಂದ ಮೈಕೈಗೆ ಹೊಡೆದು ಜೀವ ಭಯ ಹಾಕಿದರು. ಆಗ ಅಲ್ಲಿಯೇ ಇದ್ದ ಬಾಜು ಮನೆಯ ಹಿರಿಯರಾದ ರುಕ್ಮಾ ತಂದೆ ವಿಠಪ್ಪ, ಬಾಬು ತಂದೆ ವಾಲಪ್ಪ ಹಾಗೂ ನನ್ನ ತಂದೆ-ತಾಯಿ ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ನನ್ನ ಗಂಡ, ಅತ್ತೆ ಮತ್ತು ಮಾವ ಇಂದಲ್ಲ ನಾಳೆ ಸರಿ ಹೋಗಿ ನನಗೆ ಕರೆದುಕೊಂಡು ಹೋಗಬಹುದು ಎಂದು ಕಾಯುತ್ತಾ ಕುಳಿತ್ತಿದ್ದರಿಂದ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನಗೆ ವಿನಾಕಾರಣ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ, ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ನನ್ನ ಗಂಡ ಅತ್ತೆ ಮತ್ತು ಮಾವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 89/2020 ಕಲಂ: 498(ಎ), 504, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
      
ವಡಗೇರಾ  ಪೊಲೀಸ ಠಾಣೆ ಗುನ್ನೆ ನಂ:- 11/2020 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 04/08/2020 ರಂದು ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಡೆತ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಆಸ್ಪತ್ರೆಗೆ ಭೇಟಿ ನೀಡಿದಾಗ ಶ್ರೀ ತಮ್ಮಣ್ಣ ತಂದೆ ಮಲ್ಲಪ್ಪ ಎಗರಿ ಸಾ:ರೋಟ್ನಡಗಿ ತಾ:ವಡಗೇರಾ ಇವರು ಫಿರ್ಯಾಧಿ ಕೊಟ್ಟಿದ್ದನಂದರೆ ತನ್ನ ತಂದೆಯು ಮನೆಯಲ್ಲಿ ಒಕ್ಕಲುತನ ಮಾಡುವ ಮತ್ತು ಕೊಡು ತಗೊಳ್ಳುವ ಪೂತರ್ಿ ಜವಾಬ್ದಾರಿ ನಿರ್ವಹಿಸುತ್ತಿದ್ದು, ನಮ್ಮ ತಂದೆಗೆ ಸುಮಾರು 10 ಎಕರೆ ಜಮೀನು ಇದ್ದು, ಅದರಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದೇವು. ಸದರಿ ಜಮೀನಿನಲ್ಲಿ ಬಿತ್ತಿ ಬೆಳೆಯುವ ಕುರಿತು ನಮ್ಮ ತಂದೆಯು ಕೆ.ಜಿ.ಬಿ ಬ್ಯಾಂಕನಲ್ಲಿ 2 ಲಕ್ಷ ಬೆಳೆ ಸಾಲ ಮತ್ತು ಕೈಗಡ ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದನು. ಈ ವರ್ಷ ಹತ್ತಿ ಬೆಳೆ ಬಿತ್ತಿದ್ದು, ಅದು ಮಳೆ ಹೆಚ್ಚಾಗಿ ಹತ್ತಿ ಬೆಳೆ ಕೂಡಾ ಸರಿಯಾಗಿ ಬರದ ಕಾರಣ ನಮ್ಮ ತಂದೆಯು ಮಾಡಿದ ಸಾಲ ಹೇಗೆ ತೀರಿಸಲಿ ಎಂದು ಚಿಂತೆ ಮಾಡುತ್ತಿದ್ದನು. ಆಗ ನಾವು ಮುಂದೆ ಮಳೆ ಬೆಳೆ ಸರಿಯಾಗಿ ಆದಾಗ ಸಾಲ ತೀರಿಸಿದರಾಯ್ತು ಎಂದು ಹೇಳಿದರು ಕೇಳದೆ ತುಂಬಾ ಚಿಂತಾಕ್ರಾಂತನಾಗುತ್ತಿದ್ದನು. ದಿನಾಂಕ: 04/08/2020 ರಂದು 4 ಪಿಎಮ್ ಸುಮಾರಿಗೆ ನಮ್ಮ ತಂದೆಯು ಕ್ರಿಮಿನಾಶಕ ಎಣ್ಣೆ ಕುಡಿದು ಒದ್ದಾಡುವಾಗ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಉಪಚಾರ ಪಡೆಯುತ್ತಾ ಮೃತಪಟ್ಟಿರುತ್ತಾನೆ. ನಮ್ಮ ತಂದೆಯು ಹೊಲದಲ್ಲಿ ಬಿತ್ತಿ ಬೆಳೆಯುವ ಕುರಿತು ಮಾಡಿದ ಸಾಲ ಹೇಗೆ ತೀರಿಸಲಿ ಅಂತಾ ಚಿಂತೆ ಮಾಡಿ ಕ್ರಿಮಿನಾಶಕ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ-ಫಿರ್ಯಾಧಿ ವೈಗೆರೆ ಇರುವುದಿಲ್ಲ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 11/2020 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:-. 215/2020.ಕಲಂಃ 78(3) ಕೆ.ಪಿ.ಆ್ಯಕ್ಟ : ಇಂದು ದಿನಾಂಕ 03/08/2020 ರಂದು 23-10 ಗಂಟೆಗೆ ಸ|| ತ|| ಪಿಯರ್ಾದಿ ಚಂದ್ರಕಾಂತ ಪಿ.ಎಸ್.ಐ.(ಕಾ.ಸೂ) ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ 03/08/2020 ರಂದು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಹಳಿಸಗರದ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ 21-05 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ನಾರಾಯಣ ಹೆಚ್.ಸಿ.49. ಶರಣಪ್ಪ ಹೆಚ್.ಸಿ.164. ಗೋಕುಲ್ ಹುಸೇನ್ ಪಿ.ಸಿ. 172. ಬಾಗಣ್ಣ ಪಿ.ಸಿ.194. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಗೋಕುಲ್ ಹುಸೇನ್ ಪಿ.ಸಿ 172. ರವರಿಗೆ 21-10 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 21-20 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.
       ಮೇಲಾಧಿಕಾರಿಯವರ  ಮಾರ್ಗದರ್ಶನದಲ್ಲಿ. ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಒಂದು ಖಾಸಗಿ ಜೀಪನಲ್ಲಿ ಕುಳಿತುಕೊಂಡು ದಾಳಿ ಕುರಿತು ಠಾಣೆಯಿಂದ 21-25 ಗಂಟೆಗೆ ಹೊರಟೇವು. ನೇರವಾಗಿ ಹನುಮಾನ ಗುಡಿಯ ಹತ್ತಿರ ಸ್ಪಲ್ಪ ದೂರದಲ್ಲಿ 21-35 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಜೀಪಿನಿಂದ ನಾವು ಎಲ್ಲರು ಇಳಿದು ಅಲ್ಲಿಂದ ಹನುಮಾನ ಗುಡಿಯ ಹತ್ತಿರ ನಡೆದುಕೊಂಡು ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 21-40 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ದೇವಿಂದ್ರಪ್ಪ @ ದೇವಪ್ಪ ತಂದೆ ಬಸವರಾಜ ರಾಂಪೂರ ವ|| 35 ಜಾ|| ಕಬ್ಬಲಿಗ ಉ|| ಮಟಕಾಬರೆದುಕೊಳ್ಳುವದು ಸಾ|| ಹಳಿಸಗರ ಶಹಾಪೂರ ಅಂತ ಹೇಳಿದನು. ಈತನ ಹತ್ತಿರ ನಗದು ಹಣ 2300-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಮತ್ತು 2 ಮಟಕಾ ಚೀಟಿಗಳು, ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 2300-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 21-45 ಗಂಟೆಯಿಂದ 22-45 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 22-55 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ, ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ 23-10 ಗಂಟೆಗೆ ವರದಿ  ಸಲ್ಲಿಸಿದ್ದರ ಸಾರಾಂಶದ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 215/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:-. 216/2020 ಕಲಂ 78(3) ಕೆಪಿ.ಯಾಕ್ಟ : ಇಂದು ದಿನಾಂಕ 04/08/2020 ರಂದು 7.00 ಪಿಎಂ ಕ್ಕೆ ಶ್ರೀ ಹನುಮರಡ್ಡೆಪ್ಪ ಪಿ.ಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಗಂಗಾನಗರ ಏರಿಯಾದ ಅಂಬಿಗರ ಚೌಡಯ್ಯನ ಕಟ್ಟೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು ಪಿ.ಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹಿಡಿದು ವಿಚಾರಿಸಲಾಗಿ ಅವರ ಹೆಸರು 1) ಸವರಿನಾಥ ತಂದೆ ಕೇರಪ್ಪ ಜೋಗಿ ವ|| 34 ವರ್ಷ ಜಾ|| ಜೋಗೆರ ಉ|| ಮಟಕಾ ಬರೆಯುವುದು & ವ್ಯಾಪಾರ ಸಾ|| ಇಂದಿರಾನಗರ ಶಹಾಪೂರ ತಾ|| ಶಹಾಪೂರ 2) ಮುದುಕಪ್ಪ ತಂದೆ ಮಡಿವಾಳಪ್ಪ ಜೈನಾಪೂರ ವ|| 50ವರ್ಷ ಜಾ|| ಕಬ್ಬಲಿಗ ಉ|| ಮಟಕಾ ಬರೆಯುವುದು & ಕೂಲಿ ಸಾ|| ಗಂಗಾನಗರ ಶಹಾಪೂರ ತಾ|| ಶಹಾಪೂರ ಇದ್ದು ಅವರಿಂದ ನಗದು ಹಣ 2690/- ರೂಪಾಯಿ 2 ಬಾಲ್ ಪೆನ್ಗಳು ಮತ್ತು 2 ಮಟಕಾ ನಂಬರ ಬರೆದುಕೊಂಡ ಚೀಟಿಗಳು ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳು ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 04/08/2020 ರಂದು 9.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 216/2020 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 91/2020 ಕಲಂ 279, 337 ಐ.ಪಿ.ಸಿ : ದಿನಾಂಕ:03/08/2020 ರಂದು 6.30 ಪಿ.ಎಮ್. ಸುಮಾರಿಗೆ ಫಿಯರ್ಾದಿಯು ತನ್ನ ಕಾರ್ ನಂ:ಕೆಎ-32, ಪಿ-3619 ನೇದ್ದರಲ್ಲಿ ತನ್ನ ಕಾರ್ ಚಾಲಕನಾದ ಬಸವರಾಜ ಈತನೊಂದಿಗೆ ತಮ್ಮ ಕರ್ತವ್ಯ ಮುಗಿಸಿಕೊಂಡು ಯಾದಗಿರಿಯಿಂದ ತಮ್ಮ ಊರಿಗೆ ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಮುಡಬೂಳ ಆಂದ್ರ ಕ್ಯಾಂಪ್ ಹತ್ತಿರ ಕೆನಾಲ ಬ್ರಿಜ್ ಮೇಲೆ ಹೊರಟಾಗ ಆರೋಪಿತನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದು ಆಗ ಕಾರ್ ಮುಂದಿನಿಂದ ಒಬ್ಬ ಮೋಟರ್ ಸೈಕಲ್ ಚಾಲಕನು ಒಂದು ವಾಹನವನ್ನು ಓವರ್ ಟೇಕ್ ಮಾಡಿಕೊಂಡು ಕಾರ್ ಎದುರಿಗೆ ಬಂದಾಗ ಕಾರ ಚಾಲಕನು ಕಾರನ್ನು ಒಮ್ಮೆಲೆ ಎಡಕ್ಕೆ ಕಟ್ ಹೊಡೆದಿದ್ದರಿಂದ ಪಕ್ಕದಲ್ಲಿದ್ದ ಕೆನಾಲ ಬ್ರಿಜ್ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿರುತ್ತಾನೆ. ಸದರಿ ಅಪಘಾತದಲ್ಲಿ ಫಿಯರ್ಾದಿಯ ತಲೆಗೆ ರಕ್ತಗಾಯವಾಗಿದ್ದು ಇದರ ಬಗ್ಗೆ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದು ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 19/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ:04/08/2020 ರಂದು 02.30 ಪಿಎಮ್ ಕ್ಕೆ ನಾನು ಸೊಮಲಿಂಗಪ್ಪ ಪಿಎಸ್ಐ (ಅ.ವಿ) ಪೆಟ್ರೋಲಿಂಗ್ ಕುರಿತು ಹೆಚ್.ಸಿ-120 ರವರೊಂದಿಗೆ ಗೋಗಿ ಪೇಠ ಗ್ರಾಮಕ್ಕೆ ಬೇಟಿ ಕೊಟ್ಟಾಗ, ಗ್ರಾಮದ ವಿದ್ಯಮಾನಗಳಿಂದ  ತಿಳಿದು ಬಂದಿದ್ದೇನೆಂದರೆ, ಸದರಿ ಗ್ರಾಮದ ಪ್ರತಿವಾದಿ ಘೋರಕನಾಥ ತಂದೆ ಬಸವರಾಜ ಸುಗಂದಿ ವಯ 32, ಮತ್ತು ಶ್ರೀನಿವಾಸ ತಂದೆ ನಾರಾಯಣ ಧೋತ್ರೆ ವಯ 35 ಇಬ್ಬರು ಸಾ; ಗೋಗಿ ಪೇಠ ತಾ|| ಶಹಾಪೂರ ಇರುಗಳು ಗ್ರಾಮದ ಸಾರ್ವಜನಿಕರೊಂದಿಗೆ ಅಸಭ್ಯ ರೀತಿಯಿಂದ ವತರ್ಿಸುತ್ತಿದ್ದು ಅಲ್ಲದೆ ಗ್ರಾಮದಲ್ಲಿ ನಡೆಯುವ ಧಾಮರ್ಿಕ ಹಾಗು ರಾಜಕೀಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು ಯಾವುದಾದರೊಂದು ತಕರಾರು ಮಾಡಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವ ಪೃವೃತ್ತಿಯವರಾಗಿದ್ದು ಮತ್ತು ಸದರಿ ಘೋರಕನಾಥ ತಂದೆ ಬಸವರಾಜ ಸುಗಂದಿ ವಯ 32 ಮತ್ತು ಶ್ರೀನಿವಾಸ ತಂದೆ ನಾರಾಯಣ ಧೋತ್ರೆ ವಯ 35 ಇಬ್ಬರು, ಸಾ: ಗೋಗಿ ಪೇಠ ತಾ|| ಶಹಾಪೂರ ಇವರುಗಳ ಮೇಲೆ ಈಗಾಗಲೇ ಮತೀಯ ಗುಂಡಾ ಶೀಟ ತೆಗೆದಿದ್ದು ಇರುತ್ತದೆ. ಆದ್ದರಿಂದ ಗೋಗಿ ಗ್ರಾಮದಲ್ಲಿ ಶಾಂತತೆ ಕಾಪಾಡಿಕೊಂಡು ಬರಲು ಹಾಗು ಸದರಿಯವರಿಂದ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಜರಗದಂತೆ ಮುಂಜಾಗ್ರತಾ ಕ್ರಮ ಕುರಿತು ಶಾಂತಿ ಪಾಲನೆಗಾಗಿ ಇಂದು ದಿನಾಂಕ: 04/08/2020 ರಂದು 03.30 ಪಿಎಮ್ ಕ್ಕೆ ಗೋಗಿ ಪೊಲೀಸ ಠಾಣೆ ಪಿಎಆರ್ ನಂ.19/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

 
ಗೋಗಿ  ಪೊಲೀಸ ಠಾಣೆ ಗುನ್ನೆ ನಂ:- 20/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ:04/08/2020 ರಂದು 02.40 ಪಿಎಮ್ ಕ್ಕೆ ನಾನು ಸೋಮಲಿಂಗ ಒಡೆಯರ ಪಿ.ಎಸ್.ಐ ಹಳ್ಳಿ ಭೇಟಿ ಮತ್ತು ಪೆಟ್ರೋಲಿಂಗ್ ಕುರಿತು ಗೋಗಿ ಪೇಠ ಗ್ರಾಮಕ್ಕೆ ಬೇಟಿ ಕೊಟ್ಟಾಗ, ಗ್ರಾಮದ ವಿದ್ಯಮಾನಗಳಿಂದ  ತಿಳಿದು ಬಂದಿದ್ದೇನೆಂದರೆ, ಸದರಿ ಗ್ರಾಮದ ಪ್ರತಿವಾದಿ 1) ನೂರುಲ್ಲಾ ಹಸನ ತಂದೆ ಇಬ್ರಾಹಿಂಸಾಬ ಆನೋರಿ ವಯ26, 2) ಸೈಯ್ಯದ ರಪೀಕ ತಂದೆ ಸೈಯ್ಯದ ಚಾಂದಪಾಶ್ಯಾ ಪುಲೇದಾರ ವಯ:35 3) ಸೈಯ್ಯದ ಅಹೆಮದ ತಂದೆ ಸೈಯ್ಯದ ಅಮಿನೋದ್ದಿನ್ ಅಣಬಿಪೀರ ವಯ 23 ಎಲ್ಲರೂ ಸಾ: ಗೋಗಿ ಪೇಠ ತಾ|| ಶಹಾಪೂರ ಇವರುಗಳ ಗ್ರಾಮದ ಸಾರ್ವಜನಿಕರೊಂದಿಗೆ ಅಸಭ್ಯ ರೀತಿಯಿಂದ ವತರ್ಿಸುತ್ತಿದ್ದು ಅಲ್ಲದೆ ಗ್ರಾಮದಲ್ಲಿ ನಡೆಯುವ ಧಾಮರ್ಿಕ ಹಾಗು ರಾಜಕೀಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು ಯಾವುದಾದರೊಂದು ತಕರಾರು ಮಾಡಿ  ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವ ಪೃವೃತ್ತಿಯವನಾಗಿದ್ದು ಮತ್ತು 1) ನೂರುಲ್ಲಾ ಹಸನ ತಂದೆ ಇಬ್ರಾಹಿಂಸಾಬ ಆನೋರಿ ವಯ26, 2) ನಸೈಯ್ಯದ ರಪೀಕ ತಂದೆ ಸೈಯ್ಯದ ಚಾಂದಪಾಶ್ಯಾ ಪುಲೇದಾರ ವಯ:35 3) ಸೈಯ್ಯದ ಅಹೆಮದ ತಂದೆ ಸೈಯ್ಯದ ಅಮಿನೋದ್ದಿನ್ ಅಣಬಿಪೀರ ವಯ 23 ಎಲ್ಲರೂ ಸಾ: ಗೋಗಿ ಪೇಠ ತಾ|| ಶಹಾಪೂರ ಇವರುಗಳ ಮೇಲೆ ಈಗಾಗಲೇ ದಿನಾಂಕ: 20/07/2013 ರಂದು ಮತೀಯ ಗುಂಡಾ ಶೀಟ ತೆಗೆದಿದ್ದು ಇರುತ್ತದೆ. ಆದ್ದರಿಂದ ಗೋಗಿ ಗ್ರಾಮದಲ್ಲಿ ಮುಂಬರುವ ಹಬ್ಬ ಹರಿದಿನಗಳಲ್ಲಿ ಶಾಂತತೆ ಕಾಪಾಡಿಕೊಂಡು ಬರಲು ಹಾಗು ಸದರಿಯವನಿಂದ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಜರಗದಂತೆ  ಮುಂಜಾಗ್ರತಾ ಕ್ರಮ ಕುರಿತು ಶಾಂತಿ ಪಾಲನೆಗಾಗಿ ಇಂದು ದಿನಾಂಕ: 04/08/2020 ರಂದು 03.45 ಪಿಎಮ್ ಕ್ಕೆ ಗೋಗಿ ಪೊಲೀಸ ಠಾಣೆ ಪಿ.ಎ.ಆರ್. ನಂ.20/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!