ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/08/2020

By blogger on ಸೋಮವಾರ, ಆಗಸ್ಟ್ 10, 2020

                    


                             

   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/08/2020 

                                                                                                                                

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 123/2020 ಕಲಂ 302, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 10.08.2020 ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಪರಮೇಶಪಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ ಅಂತಾ ಫೋನಿನ ಮೂಲಕ ಭಾತ್ಮಿ ಬಂತು. ನಾನು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದೆನು. ಘಟನಾ ಸ್ಥಳದ ಕಾವಲು ಸಂಬಂಧ ಸಿಬ್ಬಂದಿಗೆ ನೇಮಿಸಿದ ನಂತರ ಮೃತನ ತಾಯಿ ಮಾಲನಬಿ ಗಂಡ ಹಜರತಮಿಯಾ ತಾಶೇವಾಲೆ ಸಾ||ಚಿನ್ನಾಕಾರ ಗ್ರಾಮ ಇವರು ಗಣಕೀಕೃತ ದೂರು ಅಜರ್ಿ ಹಾಜರುಪಡಿಸಿದರು ಅದರ ಸಾರಾಂಶವೆನೇಂದರೆ ನಾನು ಮಾಲನಬಿ ಗಂಡ ಹಜರತಮಿಯಾ ತಾಶೇವಾಲೆ ವಯಸ್ಸು:60 ವರ್ಷ ಜಾತಿ:ಮುಸ್ಲಿಂ,  ಉದ್ಯೋಗ:ಮನೆ ಕೆಲಸ ಮುಕ್ಕಾಂ:ಚಿನ್ನಾಕಾರ ಗ್ರಾಮ ತಾಲೂಕ:ಗುರುಮಠಕಲ್, ಜಿಲ್ಲಾ:ಯಾದಗಿರಿ ಇದ್ದು ಮೇಲ್ಕಂಡ ವಿಷಯದಲ್ಲಿ ಕೋರುವುದೆನೇಂದರೆ, ನಮ್ಮ ದೂರದ ಸಂಬಂಧಿ ಗುಲಾಮ ರಸೂಲ್ ತಂದೆ ಖಾಜಾಸಾಬ ಮುಲ್ಲಾ ಸಾ||ಪರಮೇಶಪಲ್ಲಿ ಗ್ರಾಮ ಈತನ ಮಗಳ ಮದುವೆ ಕಾರ್ಯಕ್ರಮಕ್ಕೆ ಅಂತಾ ನನ್ನ ಮಗ ಮಹ್ಮದ ಹನೀಫ್ ಇಂದು ಹೋಗಿದ್ದ.  

ಹೀಗಿದ್ದು ಇಂದು ದಿನಾಂಕ 10.08.2020 ರಂದು ಮಧ್ಯಾಹ್ನ 1:45 ಗಂಟೆ ಸುಮಾರಿಗೆ ನನ್ನ ಅಳಿಯ ಅನ್ವರ ಪಾಷಾ ತಂದೆ ಮೈಹಿಬೂಬ ಅಲಿ ಶೇಖ ಈತನು ನನ್ನ ಮನೆಗೆ ಬಂದು ಹನೀಫನಿಗೆ ಪರಮೇಶಪಲ್ಲಿಯ ಮದುವೆ ಕಾರ್ಯಕ್ರಮದಲ್ಲಿ ಹೊಡೆಯುತ್ತಿದ್ದಾರೆ ಅಂತಾ ಬಸ್ ನಿಲ್ದಾಣದ ಹತ್ತಿರ ಹುಡುಗರು ಅಂದಾಡುತ್ತಿದಾರೆ ಎಂದು ತಿಳಿಸಿದನು. ನಂತರ ನಾನು ಮತ್ತು ನನ್ನ ಮೊಮ್ಮಗ ಆಸಿಫ್ ತಂದೆ ಅನ್ವರ ಪಾಷಾ ಶೇಖ ಕೂಡಿಕೊಂಡು ಮೋಟಾರು ಸೈಕಲ್ ಮೇಲೆ ಚಿನ್ನಾಕಾರದಿಂದ ಪರಮೇಶಪಲ್ಲಿಯ ಮದುವೆ ಮನೆಗೆ ಹೋದೆವು. ಅಲ್ಲಿ ಗುಲಾಮ ರಸೂಲ್ ಮನೆಯ ಮುಂದೆ ಹಾಕಿದ ಮದುವೆ ಟೆಂಟಿನಲ್ಲಿ ಮದುಮಗನ ಸ್ಟೇಜ್ನ ಮುಂದೆ ನನ್ನ ಮಗ ಮಹ್ಮದ ಹನೀಫ್ ಈತನು ಬೋರಲಾಗಿ ಬಿದ್ದಿದ್ದ, ಅವನ ತೆಲಿ ಮತ್ತು ಬಾಯಿಯಿಂದ ರಕ್ತ ಸ್ರಾವವಾಗಿ ಟೆಂಟಿನ ಸೈಡವಾಲ್ ಪಕ್ಕದಿಂದ ಹರಿಯುತ್ತಿತ್ತು. ನಾನು ನನ್ನ ಮಗನಿಗೆ ಏನಾಯಿತು ಮಗ ಹೇಳು-ಹೇಳು ಅಲುಗಾಡಿಸಿ ಎಬ್ಬಿಸಲು ಪ್ರಯತ್ನಪಟ್ಟೆ ನನ್ನ ಮಗ ಏನು ಪ್ರತ್ಯೂತ್ತರ ಕೊಡದೆ ನಾಲಿಗೆ ಹೊರ ಹಾಕಿ ಏನೋ ಹೇಳಲು ಪ್ರಯತ್ನಿಸಿದ. ನೋಡು-ನೋಡುತ್ತಲೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ನನ್ನ ಕಣ್ಣೆದುರಿನಲ್ಲೇ ನನ್ನ ಮಗನ ಜೀವ ಹೊಯಿತು. ಮದುವೆ ಮಂಟಪದಲ್ಲಿ ಹಾಕಿದ ಕುಚರ್ಿಗಳು ಮುರಿದೊಗಿ ಚಲ್ಲಾ-ಪಿಲ್ಲಿಯಾಗಿದ್ದವು. ಅಲ್ಲದೆ ನನ್ನ ಮಗನ  ಮೈ ಮೇಲೆ ಅಂಗಿ ಸಹ ಇರಲಿಲ್ಲ. ನನ್ನ ಮಗನ ಮೆಲೆ ಬಿದ್ದು ನಾನು ಅಳುವ ಕಾಲಕ್ಕೆ ಗುಲಾಮ ರಸೂಲ್ ಈತನು ಏ ರಾಂಡ ಹಟ್ ಇದರಸೆ ಉಸಕಾ ಬಹೂತ್ ಹೋಗಯಾತಾ ತೆರೆ ಬೇಟಾ ಖಾಹಾಂ ಬಚಾ ಮರಗಯಾ, ತೆರಾಬಿ ಜಾನ್ ಜಾತಾ ದೆೆಕ್ ಅಂತಾ ನನ್ನ ಕೈ ಹಿಡಿದು ದೊಬ್ಬಿದನು. 

ಮದುವೆಗೆ ಅಂತಾ ಹೋದ ನನ್ನ ಮಗನಿಗೆ ಯಾವುದೋ ಕಾರಣಕ್ಕೆ ಅವರನ ಸಂಗಡ 1.ಗುಲಾಮ್ ರಸೂಲ್ ತಂದೆ ಖಾಜಾಸಾಬ ಮುಲ್ಲಾ, 2.ಇರಫಾನ ತಂದೆ ಗುಲಾಮ್ ರಸೂಲ್ ಮುಲ್ಲಾ, 3.ಮಹ್ಮದ ಇಮ್ರಾನ ತಂದೆ ಗುಲಾಮ್ ರಸೂಲ್ ಮುಲ್ಲಾ, 4.ಹಾರುನ್ ತಂದೆ ಗುಲಾಮ್ ರಸೂಲ್ ಮುಲ್ಲಾ, ಇವರೆಲ್ಲಾರು ಜಗಳ ತೆಗೆದು ನನ್ನ ಮಗನಿಗೆ ಹೊಡದು ಕೊಲೆ ಮಾಡಿರುತ್ತಾರೆ. ಘಟನೆ ಇಂದು ಮಧ್ಯಾಹ್ನ 1-30 ಗಂಟೆಯಿಂದ 2 ಗಂಟೆಯ ಮಧ್ಯದ ಅವಧಿಯಲ್ಲಿ ನಡೆದಿರುತ್ತದೆ. ನನ್ನ ಮಗನ ಕೊಲೆಗೆ ಕಾರಣಿಕರ್ತರಾದ ಮೇಲ್ಕಂಡ ಐದು ಜನರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿದೆ ಅಂತಾ ಸಲ್ಲಿಸಿದ ದೂರು ಅಜರ್ಿಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು ನಾನು ಹಣಮಂತ ಪಿ.ಎಸ್.ಐ ಗುರುಮಠಕಲ್ ಠಾಣೆ ಗುನ್ನೆ ನಂಬರ 123/2020 ಕಲಂ: 302, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 105/2020 ಕಲಂ 457. 380 : ಈ ಮೂಲಕ ತಮಗೆ ತಿಳಿಯ ಪಡಿಸುವದೆನೆಂದರೆ ನಾನು ಶ್ರೀಮತಿ ಪಾರ್ವತೆಮ್ಮ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಈಡ್ಲೂರ ಇದ್ದು ನಮ್ಮ ಶಾಲೆಯಲ್ಲಿ ಸರಕಾರದಿಂದ ಶಾಲಾ ಮಕ್ಕಳಿಗೆ ಕಂಪೂಟರ ಕಲಿಸುವ ಸಲುವಾಗಿ ನಮ್ಮ ಶಾಲೆಗೆ ಕಂಪೂಟರ ನೀಡಿದ್ದು ಅವು ನಮ್ಮ ಶಾಲೆಯಲ್ಲಿ ಒಂದು ಕೊಣೆಯಲ್ಲಿ ಅವುಗಳನ್ನು ಇಟ್ಟಿರುತ್ತೇವೆ ಅವುಗಳಿಂದ ಆಗಾಗ ಮಕ್ಕಳಿಗೆ ಕಲಿಸಲಾಗುತಿತ್ತು. ದಿನಾಂಕ: 03-08-2020 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರು ಶಾಲೆಗೆ ಹೋಗಿ ಅಂದು ಸಾಯಂಕಾ; 04-00 ಗಂಟೆ ವರೆಗೆ ಶಾಲೆಯಲಿದ್ದು ನಂತರ ಶಾಲೆಯ ಎಲ್ಲಾ ಕೊಣೆಗಳನ್ನು ಕೀಲಿ ಹಾಕಿಕೊಂಡು ಹೋಗಿದ್ದೆವು. ದಿನಾಂಕ: 04-08-2020 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರು ಶಾಲೆಗೆ ಹೋಗಿದ್ದು ನಾವು ಶಾಲೆಗೆ ಹೋದಾಗ ನಮ್ಮ ಶಾಲೆಯ ಬಾಗಿಲು ಮುರಿದಿತ್ತು ಆಗ ನಮಗೆ ಸಂಶಯ ಬಂದು ಕಂಪೂಟರ ಕೊಣೆಗೆ ಹೋದಾಗ ಆ ಕೊಣೆಯಲ್ಲಿ ಸರಕಾರದಿಂದ ಒದಗಿಸಿದಂತಹ 2 ಆಲ ಇನ್ ಒನ್ ಕಂಪೂಟರಗಳು, ಒಂದು ಸ್ಮಾರ್ಟ ಕ್ಲಾಸಿನ ಸಿ.ಪಿ.ಯು ಅವುಗಳ ಅಂದಾಜು ಕಿಮತ್ತು 1,20,000=00 ನೇದ್ದವುಗಳು ಇರಲಿಲ್ಲ ಆಗ ನಾವು ಕೊಣೆಯ ಎಲ್ಲಾ ಕಡೆ ಹುಡಕಾಡಿ ನೋಡಲಾಗಿ ಕಂಪೂಟರ ಮತ್ತು ಸಿ.ಪಿ.ಯು ಇರಲಿಲ್ಲ.  ದಿನಾಂಕ: 03-08-2020 ರಂದು ಸಾಯಂಕಾಲ 06-00 ಗಂಟೆಯಿಂದ ದಿನಾಂಕ: 04-08-2020 ರಂದು ಬೆಳಿಗ್ಗೆ 06-00 ಗಂಟೆವರೆಗೆ ಯಾರೋ ಕಳ್ಳರು ನಮ್ಮ ಶಾಲೆಯ ಬಾಗಿಲು ಮುರಿದು ಶಾಲೆಯಲ್ಲಿರುವ ಕಂಪೂಟರಗಳನ್ನು, ಮತ್ತು ಸಿ.ಪಿ.ಯು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ತಾವು ನಮ್ಮ ಶಾಲೆಯಲ್ಲಿ ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ನಮ್ಮ ಶಾಲೆಯಲ್ಲಿ ಕಳ್ಳತನವಾದ ಬಗ್ಗೆ ನಮ್ಮ ಮೇಲಾಧಿಕಾರಿಗಲ್ಲಿ ವಿಚಾರ ಮಾಡಿಕೊಂಡು ತಡವಾಗಿ ಠಾಣೆಗೆ ಬಂದಿರುತ್ತೇನೆ.


ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 189/2020 ಕಲಂ: 279,337,338 ಐ.ಪಿಸಿ : ಇಂದು ದಿನಾಂಕಃ 10/05/2020 ರಂದು 5-00 ಪಿ.ಎಮ್ ಕ್ಕೆ ಶ್ರೀ ನಿಂಗಪ್ಪ ತಂದೆ ಹಣಮಂತ ಕೊಂಬೆನವರ ಸಾ: ರುಕ್ಮಾಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾಧಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಮೂರನೇ ಮಗನಾದ ಯಲ್ಲಪ್ಪನು ನಿನ್ನೆ ದಿಃ 09/08/2020 ರಂದು ಸಾಯಂಕಾಲ ದೇವಾಪೂರ ಗ್ರಾಮದಲ್ಲಿರುವ ತನ್ನ ಮಾವನ ಮನೆಗೆ ಹೊಗಿ, ಮುಂಜಾನೆ ಬರುವದಾಗಿ ಹೇಳಿ ಮೋ. ಸೈಕಲ್ ನಂ. ಕೆ.ಎ 33 ಇ 8649 ನೇದ್ದನ್ನು ನಡೆಸಿಕೊಂಡು ಹೋಗಿದ್ದನು. ಇಂದು ದಿ: 10/08/2020 ರಂದು 9-45 ಎ.ಎಮ್ ಕ್ಕೆ ನಾವು ಮನೆಯಲ್ಲಿದ್ದಾಗ ನಮಗೆ ಪರಿಚಯದ ಗೋಪಾಲ ತಂದೆ ರಾಮಪ್ಪ ಹಳಿಮನಿ ಸಾ: ಕವಡಿಮಟ್ಟಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಮೋ.ಸೈಕಲ್ ಮೆಲೆ ಕವಡಿಮಟ್ಟಿ ಗ್ರಾಮದಿಂದ ಕುಂಬಾರಪೇಟಕ್ಕೆ ಹೊರಟಿದ್ದಾಗ ನಮ್ಮ ಮುಂದುಗಡೆ ನಿಮ್ಮ ಮಗನಾದ ಯಲ್ಲಪ್ಪ ಕೊಂಬೆನವರ ಇತನು ಮೋಟಾರ ಸೈಕಲ್ ನಡೆಸಿಕೊಂಡು ಹೊರಟಿದ್ದನು. ಆಗ 9-30 ಎ.ಎಮ್ ಸುಮಾರಿಗೆ ಕುಂಬಾರಪೇಟ ಸಿಮಾಂತರದಲ್ಲಿ ಹೊಸ ಪೆಟ್ರೋಲ್ ಬಂಕ್ ಸಮೀಪ ಕುಂಬಾರಪೇಟ ಕಡೆಯಿಂದ ಅಟೋರಿಕ್ಷಾ ನಂಬರ ಕೆ.ಎ 33 ಎ 5149 ನೇದ್ದರ ಚಾಲಕನು ತನ್ನ ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಮ್ಮ ಮಗನ ಮೋ.ಸೈಕಲಿಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ಯಲ್ಲಪ್ಪನು ಮೋ.ಸೈಕಲ್ ಸಮೇತ ಡಾಂಬರ ರಸ್ತೆಯ ಮೇಲೆ ಬಿದ್ದನು. ಆಗ ತಕ್ಷಣ ನಾವಿಬ್ಬರೂ ಮೋ.ಸೈಕಲ್ ನಿಲ್ಲಿಸಿ ಓಡಿ ಹೋಗಿ ಯಲ್ಲಪ್ಪನಿಗೆ ಎಬ್ಬಿಸಿ ನೋಡಲಾಗಿ ತಲೆಯಲ್ಲಿ ಭಾರಿ ಒಳಪೆಟ್ಟಾಗಿ ಎಡಕಿವಿಯಿಂದ ರಕ್ತಸ್ರಾವ ಆಗುತ್ತಿದ್ದು, ಬಲಗಾಲಿನ ಪಾದಕ್ಕೆ ಹಾಗು ಎಡಗೈ ಹಸ್ತದ ಮಣಿಕಟ್ಟಿನ ಹತ್ತಿರ ರಕ್ತಗಾಯಗಳಾಗಿರುತ್ತವೆ ಬೇಗ ಬಾ ಅಂತ ತಿಳಿಸಿದನು. ಆಗ ನಾನು ಮತ್ತು ನನ್ನ ಮಗನಾದ ಮರೆಪ್ಪ ಇಬ್ಬರೂ ನಮ್ಮ ಓಣಿಯ ಬಸಪ್ಪ ಬಂಕಾಪೂರ ಮೂವರು ಸ್ಥಳಕ್ಕೆ ಹೋಗಿ ನನ್ನ ಮಗನಿಗೆ 108 ಅಂಬ್ಯೂಲೇನ್ಸ್ ವಾಹನದಲ್ಲಿ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಪ್ರಥಮೋಪಚಾರ ಮಾಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಅಪಘಾತ ಪಡಿಸಿದ ಅಟೋರಿಕ್ಷಾ ಸ್ಥಳದಲ್ಲೆ ಇದ್ದು, ಅದರ ಚಾಲಕನು ಓಡಿ ಹೋಗಿದ್ದು ಆತನ ಹೆಸರು ನಂದಪ್ಪ ತಂದೆ ಅಂಬ್ರಣ್ಣ ಹಾಲಬಾವಿ ಸಾ: ದೇವಾಪೂರ ಅಂತ ಗೊತ್ತಾಗಿರುತ್ತದೆ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 189/2020 ಕಲಂ. 279, 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 27/2020 ಕಲಂ: 107 ಸಿ.ಆರ್.ಪಿ.ಸಿ : ಇಂದು ದಿನಾಂಕಃ 10/08/2020 ರಂದು 7-15 ಪಿ.ಎಮ್ ಕ್ಕೆ ಶ್ರೀ ಸುರೇಶ ಎ.ಎಸ್.ಐ ಸುರಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ಹಳ್ಳಿ ಭೇಟಿ ಕುರಿತು 3-30 ಪಿ.ಎಮ್ ಕ್ಕೆ ನಾಗರಾಳ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ಗಸ್ತು ಮಾಡಿ ಪ್ರಮುಖ ನಾಗರೀಕ ಸಮೀತಿ ಸದಸ್ಯರಿಗೆ ಹಾಗು ಪೊಲೀಸ್ ಬಾತ್ಮಿದಾರರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೆನೆಂದರೆ, ನಾಗರಾಳ ಸಿಮಾಂತರದ ಸವರ್ೆ ನಂ. 61 ರಲ್ಲಿ ದಾವಲಸಾಬ ತಂದೆ ಖಾಸಿಂಸಾಬ ಗೊಡೇಕಾರ್ ಹಾಗು ಅವರ ಅಣ್ಣ-ತಮ್ಮಕೀಯ ಸೋಪಿಸಾಬ ತಂದೆ ಸೈಯ್ಯದಸಾಬ ಗೊಡೆಕಾರ ಇವರ ಹೊಲಗಳಿದ್ದು, ದಾವಲಸಾಬ ಇವರ ಹೊಲ ದಾಟಿ ಸೋಪಿಸಾಬ ಇವರ ಹೊಲವಿರುತ್ತದೆ. ಸೋಪಿಸಾಬ ಇವರು ತಮ್ಮ ಹೊಲದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು, ತಮ್ಮ ಹೊಲ ಹಾಗು ಮನೆಗೆ  ಹೋಗಬೇಕಾದರೆ ದಾವಲಸಾಬ ಇವರ ಹೊಲದಲ್ಲಿಂದ ಹೋಗಬೇಕಾಗಿರುತ್ತದೆ. ಸದರಿ ದಾವಲಸಾಬ ಇತನು ಸೋಪಿಸಾಬ ಹಾಗು ಅವರ ಮನೆಯವರಿಗೆ ನಮ್ಮ ಹೊಲದಲ್ಲಿ ದಾರಿ ಇಲ್ಲಾ, ಇಲ್ಲಿಂದ ತಿರುಗಾಡಬೇಡಿರಿ ಅಂತ ತಕರಾರು ಮಾಡುತ್ತ ಬಂದಿರುವದರಿಂದ ಹೊಲಕ್ಕೆ ಹೋಗುವ ದಾರಿಯ ವಿಷಯದಲ್ಲಿ ಎರಡು ಪಾಟರ್ಿಯವರ ಮದ್ಯೆ ಗಾಢವಾದ ದ್ವೇಷ ಬೆಳೆದು ಪರಸ್ಪರ ನಾ ಮೇಲು, ತಾ ಮೇಲು ಅನ್ನುತ್ತ ಗ್ರಾಮದಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ 1) ದಾವಲಸಾಬ ತಂದೆ ಖಾಸಿಂಸಾಬ ಗೊಡೇಕಾರ್ ವಯಃ 42 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ ಹಾಗು 2) ಸೋಪಿಸಾಬ ತಂದೆ ಖಾಸಿಂಸಾಬ ಗೊಡೇಕಾರ್ ವಯಃ 35 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ ಇಬ್ಬರೂ ಸಾ: ನಾಗರಾಳ ತಾ: ಸುರಪೂರ ಇವರು ತಮ್ಮ ಹೊಲದಲ್ಲಿಂದ ಹೋಗಬೇಡಿ ಅಂತ ಹೇಳುತ್ತ ಬಂದರೂ ತಿರುಗಾಡುತ್ತಿರುವ ಸೋಪಿಸಾಬ ತಂದೆ ಸೈಯ್ಯದಸಾಬ ಗೊಡೇಕಾರ್ ಹಾಗು ಅವರ ಕುಟುಂಬದವರಿಗೆ ಹೊಡೆಬಡೆ ಮಾಡಿ ಗ್ರಾಮದಲ್ಲಿ ಕಾನೂನು ಸೂವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಹಾಗು ಗ್ರಾಮದಲ್ಲಿ ಜೀವಹಾನಿ, ಆಸ್ತಿಪಾಸ್ತಿ ಹಾನಿಯಾಗುವ ಸಾದ್ಯತೆ ಕಂಡು ಬಂದಿರುತ್ತದೆ. ಆದ್ದರಿಂದ 7-15 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ವರದಿ ನೀಡಿದ್ದು, ಸದರಿ 2 ಜನರ ವಿರುದ್ದ ಸೂಕ್ತ ಮುಂಜಾಗೃತಾ ಕ್ರಮ ಕೈಕೊಳ್ಳಬೇಕು ಅಂತ ವರದಿ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್ ನಂಬರ 27/2020 ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 77/2020 504.505(2) ಐಪಿಸಿ : ದಿನಾಂಕ:10/08/2020 ರಂದು ಬೆಳಿಗ್ಗೆ 12.15 ಗಂಟೆಗೆ  ಅಜರ್ಿದಾರರು ಠಾಣೆಗೆ  ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದ ಸಾರಾಂಶವೆನೆಂದರೆ ದಿನಾಂಕ:10/08/2020 ರಂದು ಆರೋಪಿತನು ತನ್ನ ಮೊಬೈಲ್ದಲ್ಲಿ ಸಂತ ಸೇವಾಲಾಲ ಇವರ ಭಾವ ಚಿತ್ರದ ಮುಂದೆ ಹಂದಿಯನ್ನು ನಿಲ್ಲಿಸಿ ಹಾಗೂ ನಾಯಿಯನ್ನು ಕೆಳಗಡೆ ನಿಲ್ಲಿಸಿ (ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು) ಒಂದು ಸಮಾಜದ ಆರಾದ್ಯ ದೇವರಾಗಿರುವ ಸಂತ ಸೇವಾಲಾಲ ರವರ ಭಾವ ಚಿತ್ರಕ್ಕೆ ಅವಮಾನ ಮಾಡಿದ ಬಗ್ಗೆ ಅಪರಾಧ.


 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!