ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/07/2020

By blogger on ಭಾನುವಾರ, ಜುಲೈ 12, 2020

                                 
                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/07/2020
                                                                                                               
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 165/2020 ಕಲಂ: 279, 337, 338, 304(ಎ) ಐಪಿಸಿ : ಇಂದು ದಿನಾಂಕಃ 12/07/2020 ರಂದು 5-30 ಪಿ.ಎಮ್ ಕ್ಕೆ ಶ್ರೀ ಚಂದರ ತಂದೆ ನರಸಿಂಗನಾಯಕ ಚವ್ಹಾಣ ಸಾ: ಲಕ್ಷ್ಮೀ ನಗರ ಸೈದಾಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾಧಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಕಿರಿಯ ಮಗನಾದ ಸುಶೀಲ್ ಚವ್ಹಾಣ ಇತನು ವಜ್ಜಲ್ ಗ್ರಾಮದ ಹತ್ತಿರವಿರುವ ನಮ್ಮ ಸಮಾಜದ ವಿಠಲ್ ಮಹಾರಾಜರ ಮಠಕ್ಕೆ ಭಕ್ತಿಯಿಂದ ನಡೆಯುತ್ತ ಬಂದಿದ್ದು ಆಗಾಗ ಮಠಕ್ಕೆ ಹೋಗಿ ಬರುತ್ತಿದ್ದನು. ಅದರಂತೆ ಇಂದು ದಿನಾಂಕಃ 12/07/2020 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನನ್ನ ಮಗನಾದ ಸುಶೀಲ್ ಚವ್ಹಾಣ ವಯಃ 19 ವರ್ಷ ಹಾಗು ಆತನ ಸ್ನೇಹಿತರಾದ ನಮ್ಮೂರಿನ ಸಂತೋಷ ತಂದೆ ಪ್ರೇಮನಾಥ ಚವ್ಹಾಣ ವಯಃ 24 ವರ್ಷ, ಪ್ರಕಾಶ ತಂದೆ ಚಂದರ ರಾಠೋಡ ವಯಃ 28 ವರ್ಷ ಮೂವರು ಕೂಡಿ, ಪ್ರಕಾಶ ಇತನು ನಡೆಸುವ ಕಾರ ನಂಬರ ಕೆ.ಎ 01 ಎ.ಸಿ 5758 ನೇದ್ದರಲ್ಲಿ ವಜ್ಜಲ್ ಸಮೀಪದ ವಿಠಲ್ ಮಹಾರಾಜರ ಮಠಕ್ಕೆ ಹೋಗಿ ಬರುತ್ತೇವೆ ಅಂತ ಹೇಳಿ ಕಾರಿನಲ್ಲಿ ಹೋಗಿದ್ದರು. ನಂತರ ಮದ್ಯಾಹ್ನ 2-15 ಗಂಟೆಯ ಸುಮಾರಿಗೆ ಪ್ರಕಾಶ ರಾಠೋಡ ಇತನು ನನಗೆ ಫೋನ್ ಮಾಡಿ ಅಳುತ್ತ ತಿಳಿಸಿದ್ದೆನೆಂದರೆ, ನಾನು, ಸುಶೀಲ್ ಮತ್ತು ಸಂತೋಷ ಮೂವರು ಕಾರಿನಲ್ಲಿ ಯಾದಗಿರಿ, ಸುರಪೂರ, ದೇವಾಪೂರ ಕ್ರಾಸ್ ಮಾರ್ಗವಾಗಿ ವಜ್ಜಲ್ ಕಡೆಗೆ ಹೋಗುವಾಗ ದೇವತಕಲ್ ಗ್ರಾಮದ ಸಮೀಪ ಹಿಂದಿನಿಂದ ನಂಬರ ಪ್ಲೇಟ ಇಲ್ಲದ ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಈಗ್ಗೆ 2-00 ಗಂಟೆಯ ಸುಮಾರಿಗೆ ನಮ್ಮ ಕಾರಿಗೆ ಹಿಂದಿನಿಂದ ಜೋರಾಗಿ ಡಿಕ್ಕಿಪಡಿಸಿದ್ದರಿಂದ ಕಾರ ರಸ್ತೆಯ ಎಡಭಾಗದಲ್ಲಿ ಪಲ್ಟಿಯಾಗಿ ಬಿದ್ದಿದ್ದು, ಟ್ರ್ಯಾಕ್ಟರ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣ ನುಜ್ಜುಗೊಜ್ಜಾಗಿ ಹಿಂದಿನ ಸಿಟಿನಲ್ಲಿ ಎಡಗಡೆ ಕುಳಿತಿದ್ದ ನಿನ್ನ ಮಗನಾದ ಸುಶೀಲ್ ಚವ್ಹಾಣ ಇತನು ಹಿಂದಿನಿಂದ ಕಾರ ಚಪ್ಪಟೆಯಾಗಿದ್ದರಿಂದ ಮದ್ಯೆ ಸಿಕ್ಕಿ ಹಾಕಿಕೊಂಡು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಸದರಿ ಅಪಘಾತದಲ್ಲಿ ನನಗೆ ಮತ್ತು ಸಂತೋಷ ಹಾಗು ನಮಗೆ ಅಪಘಾತ ಪಡಿಸಿದ ಟ್ರ್ಯಾಕ್ಟರ ಚಾಲಕ ಮೂವರಿಗೂ ಗಾಯಗಳಾಗಿರುತ್ತವೆ ಅಂತ ತಿಳಿಸಿದನು. ಆಗ ಗಾಬರಿಯಾಗಿ ನಾನು ಮತ್ತು ನನ್ನ ಹೆಂಡತಿ ಸೋನಿಬಾಯಿ, ಪ್ರಕಾಶ ಇತನ ತಾಯಿಯಾದ ಶಾಂತಿಬಾಯಿ ಮೂವರು ಖಾಸಗಿ ಕಾರಿನಲ್ಲಿ ಅಪಘಾತ ಸ್ಥಳಕ್ಕೆ ಹೋಗಿ ನನ್ನ ಮಗನ ಶವ ನೋಡಲಾಗಿ ಎಡಗಣ್ಣಿನ ಹುಬ್ಬಿನ ಮೇಲೆ ಭಾರಿಗುಪ್ತವಾಗಿ, ಮೂಗು, ಬಾಯಿಯಿಂದ ರಕ್ತಸ್ರಾವ ಆಗಿರುವದಲ್ಲದೇ ಬಲಗಡೆ ಎದೆ, ಬಲ ಪಕ್ಕಡಿಗೆ, ಎರಡು ಕೈಗಳಿಗೆ ಎಡಗಾಲಿನ ತೊಡೆ ಮತ್ತು ತೊಡೆಯ ಸಂದಿನಲ್ಲಿ ತರಚಿದ ರಕ್ತಗಾಯಗಳಾಗಿ ಮತ್ತು ಕಂದುಗಟ್ಟಿರುವ ಭಾರಿ ಗುಪ್ತಗಾಯಗಳಾಗಿ ಮೃತಪಟ್ಟಿರುತ್ತಾನೆ. ಅಪಘಾತ ಪಡಿಸಿದ ಟ್ರ್ಯಾಕ್ಟರ ಹಾಗು ಕಾರ ಸ್ಥಳದಲ್ಲೆ ಇದ್ದು, ಟ್ರ್ಯಾಕ್ಟರ ನಂಬರ ಪ್ಲೇಟ ಇರುವದಿಲ್ಲ. ಟ್ರ್ಯಾಕ್ಟರ ಇಂಜಿನ್ ಮೇಲೆ ನಂಬರ ನೋಡಲಾಗಿ ಚಎಂ2ಏಃಂ3694 ಅಂತ ಇರುತ್ತದೆ. ಅಲ್ಲಿಂದ ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳಿಗೆ ನೋಡಿ ವಿಚಾರಿಸಲಾಗಿ ಪ್ರಕಾಶ ಇತನ ಎಡಗಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯವಾಗಿದ್ದು ಮೈಯಲ್ಲಿ ಅಲ್ಲಲ್ಲಿ ಗುಪ್ತಗಾಯಗಳಾಗಿರುವ ಬಗ್ಗೆ ತಿಳಿಸಿರುತ್ತಾನೆ. ಸಂತೋಷ ಇತನು ಅರೆಪ್ರಜ್ಞಾವಸ್ಥೆಯಲ್ಲಿ ಇದ್ದು ಆತನ ಎಡಗಣ್ಣಿನ ಹುಬ್ಬಿಗೆ ಹಾಗು ಎಡಹಣೆಯ ಮೇಲೆ ತರಚಿದಂತಾಗಿ ಭಾರಿ ಗುಪ್ತಗಾಯಗಳಾಗಿರುತ್ತವೆ. ಅಪಘಾತ ಪಡಿಸಿದ ಟ್ರ್ಯಾಕ್ಟರ ಚಾಲಕನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವದರಿಂದ ಆತನ ಹೆಸರು ವಿಳಾಸ ವಿಚಾರಿಸಲಾಗಿ ಶರಣಗೌಡ ತಂದೆ ಪರಮನಗೌಡ ಮಾಲಿಪಾಟೀಲ್ ಸಾ: ಗೋಡಿಹಾಳ ತಾಃ ಸುರಪೂರ ಅಂತ ತಿಳಿಸಿದ್ದು ಆತನ ಬಲಮೊಣಕಾಲಿಗೆ, ಹಣೆಗೆ ಹಾಗು ಕುತ್ತಿಗೆ ಭಾಗದಲ್ಲಿ ಅಲ್ಲಲ್ಲಿ ರಕ್ತಗಾಯಗಳಾಗಿರುತ್ತವೆ. ಕಾರಣ ನನ್ನ ಮಗನು ತನ್ನ ಇಬ್ಬರೂ ಸ್ನೇಹಿತರೊಂದಿಗೆ ಕಾರಿನಲ್ಲಿ ಕುಳಿತುಕೊಂಡು ವಜ್ಜಲ್ ಕಡೆಗೆ ಹೋಗುವಾಗ ದೇವತಕಲ್ ಗ್ರಾಮದ ಸಮೀಪ ಮಹಿಂದ್ರಾ ಟ್ರ್ಯಾಕ್ಟರ ಚಾಲಕನಾದ ಶರಣಗೌಡ ಇತನು ತನ್ನ ಟ್ರ್ಯಾಕ್ಟರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ನನ್ನ ಮಗನು ಕಾರಿನಲ್ಲಿ ಸಿಕ್ಕಿ ಹಾಕಿಕೊಂಡು ಸ್ಥಳದಲ್ಲೆ ಮೃತಪಟ್ಟಿದ್ದಲ್ಲದೇ ಆತನ ಜೊತೆ ಕಾರಿನಲ್ಲಿದ್ದ ಪ್ರಕಾಶ, ಸಂತೋಷ ಇಬ್ಬರಿಗೂ ಸಾದಾ ಹಾಗು ಭಾರಿ ಸ್ವರೂಪದ ಗಾಯಪಡಿಸಿ ತಾನು ಗಾಯ ಹೊಂದಿರುವ ಟ್ರ್ಯಾಕ್ಟರ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 165/2020 ಕಲಂ. 279, 337, 338, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 03/2020 107 ಸಿ.ಆರ್.ಪಿ.ಸಿ : ಇಂದು ದಿನಾಂಕ:12/07/2020 ರಂದು 10.30 ಎ.ಎಂಕ್ಕೆ ನಾನು ಸಂಗಡ ಪಿಸಿ-90 ದೇವಿಂದ್ರಪ್ಪ ರವರೊಂದಿಗೆ ಹಳ್ಳಿ ಬೇಟಿಗೆಂದು ಯರಕಿಹಾಳ ಗ್ರಾಮಕ್ಕೆ ಹೋದಾಗ ಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಬಾಲಪ್ಪ ತಂದೆ ಹಣಮಂತ್ರಾಯ ಹುಲಿಕೇರಿ ಮತ್ತು ಸಂಗಡಿಗರು ಮತ್ತು ಅದೇ ಗ್ರಾಮದ ಶರಣಪ್ಪ ತಂದೆ ಹಣಮಂತ ಹುಲಕೇರಿ ಮತ್ತು ಸಂಗಡಿಗರ ಮದ್ಯ ಯರಕಿಹಾಳ  ಗ್ರಾಮ ಸೀಮೆಯ ಹೊಲಗಳಿಗೆ ಹೊಗುವ ಹಾದಿಯ ವಿಷಯದಲ್ಲಿ ದಿ:13/03/2020 ರಂದು ಎರಡು ಪಾಟರ್ಿಯವರ ಮದ್ಯ ಜಗಳವಾಗಿ ಠಾಣೆಯಲ್ಲಿ ಗುನ್ನೆ ನಂ.15/2020 ಮತ್ತು 16/2020 ನೇದ್ದು ಗುನ್ನೆ ಮತ್ತು ಪ್ರತಿ ಗುನ್ನೆ ದಾಖಲಾಗಿದ್ದು ಅಂದಿನ ಎರಡು ಪಾಟರ್ಿಯವರ ಮದ್ಯ ಗಾಡವಾದ ವೈಷಮ್ಯ ಬೆಳದಿದ್ದು, ಮುಂಬರುವ ದಿನಗಳಲ್ಲಿ ಎರಡು ಪಾಟರ್ಿಯವರು ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಮರಳಿ ಠಾಣೆಗೆ ಬಂದು ಬಾಲಪ್ಪ ತಂದೆ ಹಣಮಂತ್ರಾಯ ಹುಲಿಕೇರಿ ಮತ್ತು ಸಂಗಡಿಗರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ.


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 04/2020 107 ಸಿ.ಆರ್.ಪಿ.ಸಿ : ಇಂದು ದಿನಾಂಕ:12/07/2020 ರಂದು 10.30 ಎ.ಎಂಕ್ಕೆ ನಾನು ಸಂಗಡ ಪಿಸಿ-90 ದೇವಿಂದ್ರಪ್ಪ ರವರೊಂದಿಗೆ ಹಳ್ಳಿ ಬೇಟಿಗೆಂದು ಯರಕಿಹಾಳ ಗ್ರಾಮಕ್ಕೆ ಹೋದಾಗ ಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಬಾಲಪ್ಪ ತಂದೆ ಹಣಮಂತ್ರಾಯ ಹುಲಿಕೇರಿ ಮತ್ತು ಸಂಗಡಿಗರು ಮತ್ತು ಅದೇ ಗ್ರಾಮದ ಶರಣಪ್ಪ ತಂದೆ ಹಣಮಂತ ಹುಲಕೇರಿ ಮತ್ತು ಸಂಗಡಿಗರ ಮದ್ಯ ಯರಕಿಹಾಳ  ಗ್ರಾಮ ಸೀಮೆಯ ಹೊಲಗಳಿಗೆ ಹೊಗುವ ಹಾದಿಯ ವಿಷಯದಲ್ಲಿ ದಿ:13/03/2020 ರಂದು ಎರಡು ಪಾಟರ್ಿಯವರ ಮದ್ಯ ಜಗಳವಾಗಿ ಠಾಣೆಯಲ್ಲಿ ಗುನ್ನೆ ನಂ.15/2020 ಮತ್ತು 16/2020 ನೇದ್ದು ಗುನ್ನೆ ಮತ್ತು ಪ್ರತಿ ಗುನ್ನೆ ದಾಖಲಾಗಿದ್ದು ಅಂದಿನ ಎರಡು ಪಾಟರ್ಿಯವರ ಮದ್ಯ ಗಾಡವಾದ ವೈಷಮ್ಯ ಬೆಳದಿದ್ದು, ಮುಂಬರುವ ದಿನಗಳಲ್ಲಿ ಎರಡು ಪಾಟರ್ಿಯವರು ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಮರಳಿ ಠಾಣೆಗೆ ಬಂದು ಶರಣಪ್ಪ ತಂದೆ ಹಣಮಂತ ಹುಲಕೇರಿ ಮತ್ತು ಸಂಗಡಿಗರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 05/2020 107 ಸಿ.ಆರ್.ಪಿ.ಸಿ : ದಿನಾಂಕ:12/07/2020 ರಂದು 18.00 ಗಂಟೆಗೆ ಠಾಣೆಯ ಶ್ರೀ ಗುರುನಾಥ ಹೆಚ್.ಸಿ-29 ರವರು ಠಾಣೆಗೆ ಬಂದು ಒಂದು ಲಿಖಿತ ವರದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:12/07/2020 ರಂದು 17.00 ಗಂಟೆಗೆ  ನಾನು ನನ್ನ ಗಸ್ತು ಗ್ರಾಮಕ್ಕೆ ಬರುವ ಬ್ಯಾಲದ ಗಿಡದ ತಾಂಡಾಕ್ಕೆ ಬೇಟಿಗೆಂದು ಹೋದಾಗ ತಾಂಡಾದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ತಾಂಡಾದ  ರೇಖಪ್ಪ ತಂದೆ ಮೇಘಪ್ಪ ಜಾದವ ಮತ್ತು ಸಂಗಡಿಗರು ಮತ್ತು ಗ್ರಾಮದ ಶಂಕ್ರಪ್ಪ ತಂದೆ ಮೇಘಪ್ಪ ಜಾದವ ಮತ್ತು ಸಂಗಡಿಗರ ಮದ್ಯ ಹೊಲದ ಪಾಲಿನ ವಿಷಯದಲ್ಲಿ ಸುಮಾರು ದಿನಗಳಿಂದಾ ತಕರಾರು ಇದ್ದು,  ದಿನಾಂಕ:04/04/2020 ರಂದು ಈ ವಿಷಯದಲ್ಲಿ ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಠಾಣೆಯಲ್ಲಿ ಗುನ್ನೆ ನಂ.19/2020, 20/2020 ಗುನ್ನೆ ಪ್ರತಿ ಗುನ್ನೆ  ದಾಖಲಾಗಿದ್ದು ಮತ್ತು ದಿನಾಂಕ:08/04/2020 ರಂದು ಎರಡು ಪಾಟರ್ಿಯವರ ಮದ್ಯ ಜಗಳವಾಗಿ ಠಾಣೆಯಲ್ಲಿ ಗುನ್ನೆ ನಂ.23/2020, 24/2020  ಗುನ್ನೆ ಪ್ರತಿ ಗುನ್ನೆಗಳು ದಾಖಲಾಗಿದ್ದು, ಇರುತ್ತದೆ. ರೇಖಪ್ಪ ತಂದೆ ಮೇಘಪ್ಪ ಜಾದವ ಬಸವರಾಜ ತಂದೆ ರೇಖಪ್ಪ ಜಾದವ ಇವರುಗಳು ನ್ಯಾಯಾಂಗ ಬಂಧನದಲ್ಲಿ ಇದ್ದರೂ ಮುಂಬರು ದಿನಗಳಲ್ಲಿ ಜಾಮೀನ ಮೇಲೆ ಹೊರಗಡೆ ಬಂದು ಶಂಕ್ರಪ್ಪ ತಂದೆ ಮೇಘಪ್ಪ ಜಾದವ  ಮತ್ತು ಸಂಗಡಿಗರೊಂದಿಗೆ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ  ರೇಖಪ್ಪ ತಂದೆ ಮೇಘಪ್ಪ ಜಾದವ ಮತ್ತು ಸಂಗಡಿಗರ ಮೇಲೆ ಮುಂಜಾಗೃತಾ ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ.


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 06/2020 107 ಸಿ.ಆರ್.ಪಿ.ಸಿ : ದಿನಾಂಕ:12/07/2020 ರಂದು 18.30 ಗಂಟೆಗೆ ಠಾಣೆಯ ಶ್ರೀ ಗುರುನಾಥ ಹೆಚ್.ಸಿ-29 ರವರು ಠಾಣೆಗೆ ಬಂದು ಒಂದು ಲಿಖಿತ ವರದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:12/07/2020 ರಂದು 17.00 ಗಂಟೆಗೆ  ನಾನು ನನ್ನ ಗಸ್ತು ಗ್ರಾಮಕ್ಕೆ ಬರುವ ಬ್ಯಾಲದ ಗಿಡದ ತಾಂಡಾಕ್ಕೆ ಬೇಟಿಗೆಂದು ಹೋದಾಗ ತಾಂಡಾದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ತಾಂಡಾದ  ರೇಖಪ್ಪ ತಂದೆ ಮೇಘಪ್ಪ ಜಾದವ ಮತ್ತು ಸಂಗಡಿಗರು ಮತ್ತು ಗ್ರಾಮದ ಶಂಕ್ರಪ್ಪ ತಂದೆ ಮೇಘಪ್ಪ ಜಾದವ ಮತ್ತು ಸಂಗಡಿಗರ ಮದ್ಯ ಹೊಲದ ಪಾಲಿನ ವಿಷಯದಲ್ಲಿ ಸುಮಾರು ದಿನಗಳಿಂದಾ ತಕರಾರು ಇದ್ದು,  ದಿನಾಂಕ:04/04/2020 ರಂದು ಈ ವಿಷಯದಲ್ಲಿ ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಠಾಣೆಯಲ್ಲಿ ಗುನ್ನೆ ನಂ.19/2020, 20/2020 ಗುನ್ನೆ ಪ್ರತಿ ಗುನ್ನೆ  ದಾಖಲಾಗಿದ್ದು ಮತ್ತು ದಿನಾಂಕ:08/04/2020 ರಂದು ಎರಡು ಪಾಟರ್ಿಯವರ ಮದ್ಯ ಜಗಳವಾಗಿ ಠಾಣೆಯಲ್ಲಿ ಗುನ್ನೆ ನಂ.23/2020, 24/2020 ಗುನ್ನೆ ಪ್ರತಿ ಗುನ್ನೆಗಳು ದಾಖಲಾಗಿದ್ದು, ಇರುತ್ತದೆ. ಮುಂಬರು ದಿನಗಳಲ್ಲಿ ರೇಖಪ್ಪ ತಂದೆ ಮೇಘಪ್ಪ ಜಾದವ ಮತ್ತು ಸಂಗಡಿಗರು ಶಂಕ್ರಪ್ಪ ತಂದೆ ಮೇಘಪ್ಪ ಜಾದವ ಮತ್ತು ಸಂಗಡಿಗರೊಂದಿಗೆ ಮತ್ತೆ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಶಂಕ್ರಪ್ಪ ತಂದೆ ಮೇಘಪ್ಪ ಜಾದವ ಮತ್ತು ಸಂಗಡಿಗರ ಮೇಲೆ ಮುಂಜಾಗೃತಾ ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 112/2020 ಕಲಂ 143.147.148,447,323,324,504,506 ಸಂಗಡ 149 ಐ.ಪಿ.ಸಿ : ಇಂದು ದಿನಾಂಕ 12.07.2020 ರಂದು ಶ್ರೀ ಮಲ್ಲಣಗೌಡ ತಂದೆ ಶಂಕರಗೌಡ ಪಾಟೀಲ ವ|| 42 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಪತ್ತೆಪೂರ ಹಾ||ವ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಮ್ಮದು ಪತ್ತೆಪೂರ ಸೀಮಾಂತರದಲ್ಲಿ ಹೊಲ ಸವರ್ೆ ನಂಬರ 16/1, 12ಎಕರೆ 24 ಗುಂಟೆ ಹೊಲವಿದ್ದು ಸದರಿ ಹೊಲದ ಪಕ್ಕಕ್ಕೆ ರಸ್ತೆಯಿದ್ದು ರಸ್ತೆಯ ವಿಷಯವಾಗಿ ಊರಿನ ಜನರು ಆಗಾಗ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿದ್ದರು. ಹೀಗಿದ್ದು ಇಂದು ದಿನಾಂಕ 12/07/2020 ರಂದು ಬೆಳಿಗ್ಗೆ ನಾನು ಹಾಗು ಕೂಲಿ ಆಳುಗಳಾದ ಪಾಂಡು ಗಾಯಕವಾಡ ಹಾಗು ಖಾಜಾಪಟೇಲ ಮುಕನಾಳ ಇವರೊಂದಿಗೆ ತಂತಿಬೇಲಿ ಹಾಕಲು  ಹೋಗಿ ಮದ್ಯಾಹ್ನ 1.35 ಗಂಟೆಯ ಸುಮಾರಿಗೆ ನಮ್ಮ ಹೊಲಕ್ಕೆ ತಂತಿಬೇಲಿ ಹಾಕುತ್ತಿದ್ದಾಗ ಪತ್ತೆಪೂರ ಗ್ರಾಮದ 1) ಬಸವರಾಜ ತಂದೆ ಶರಣಪ್ಪ ಸದಬ 2) ಲೋಹಿತ ತಂದೆ ದ್ಯಾವಪ್ಪ ಆಲಗೂರ 3) ಮಲ್ಲಪ್ಪ ತಂದೆ ದ್ಯಾವಪ್ಪ ಆಲಗೂರ 4) ಭೀಮರಾಯ ತಂದೆ ಅಯ್ಯಪ್ಪ ಬಡಿಗೇರ 5) ಪಂಚಪ್ಪ ಅಲ್ಲಾಪೂರ 6) ಯಲ್ಲಪ್ಪ ಬೈರಾವಡಗಿ 7) ಸೋಮರಾಯ ತಂದೆ ಗುರುಲಿಂಗಪ್ಪ ಬಂಕಲಗಿ ಸಾ|| ಎಲ್ಲರೂ ಪತ್ತೆಪುರ ಇವರು ಕೈಯಲ್ಲಿ ಕಲ್ಲು ಬಡಿಗೆ ರಾಡು ಹಿಡಿದುಕೊಂಡು ಗುಂಪು ಕಟ್ಟಿಕೊಂಡು ನಮ್ಮ ಹೊಲದಲ್ಲಿ ಅಕ್ರಮವಾಗಿ ಬಂದವರೇ ಕೆಲಸ ಮಾಡುವ ನನಗೆ ಏನಲೆ ಬೋಸಡಿ ಮಗನೆ ರಸ್ತೆಗೆ ಬೇಲಿ ಹಾಕುತ್ತಿಯಾ ಸೂಳೆ ಮಗನೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ನಮ್ಮ ಹೊಲಕ್ಕೆ ಹಾಕುತ್ತಿದ್ದೇನೆ ಅಂತ ಅಂದಾಗ ಎಲ್ಲರೂ ಈ ಸೂಳೆ ಮಗನ ಸೊಕ್ಕು ಬಾಳ ಆಗಿದೆ ಅಂತ ಅನ್ನುತ್ತಾ ನೆಲಕ್ಕೆ ಕೆಡವಿ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ಲೋಹಿತ ಆಲಗೂರ ಈತನು ತನ್ನ ಕೈಯಲ್ಲಿದ್ದ ಚಾಕುವಿನಿಂದ ನನ್ನ ಎಡಗೈ ಮೊಳಕೈ ಹತ್ತಿರ ತಿವಿದು ತರಚಿದ ಗಾಯ ಪಡಿಸಿದ್ದು ಮಲ್ಲಪ್ಪ ಆಲಗೂರ ಈತನು ರಾಡಿನಿಂದ ನನ್ನ ಎಡಗಡೆ ಟೊಂಕಕ್ಕೆ ಹೊಡೆದು ಗುಪ್ತಗಾಯಪಡಿಸಿದನು. ಭೀಮರಾಯ ಬಡಿಗೇರ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬಲಗಾಲ ತೊಡೆಗೆ ಹೊಡೆದು ಗುಪ್ತಗಾಯಪಡಿಸಿದನು ಯಲ್ಲಪ್ಪ ಬೈರಾವಡಗಿ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಎಡಗಡೆ ಟೊಂಕಕ್ಕೆ ಗುದ್ದಿ ಗುಪ್ತಗಾಯ ಪಡಿಸಿದನು ನಂತರ ಉಳಿದವರು ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲೇ ನಮ್ಮ ಹೊಲದಲ್ಲಿ ಕೂಲಿ ಕೆಲಸ ಮಾಡುವ ಪಾಂಡು ಗಾಯಕವಾಡ ಹಾಗೂ ಖಾಜಾಪಟೇಲ ಮುರಕನಾಳ ಇವರು ಓಡಿ ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು ನಂತರ ಎಲ್ಲರು ಹೊಡೆಯುವದನ್ನು ಬಿಟ್ಟು ಮಗನೆ ತಂತಿ ಬೇಲಿ ಹಾಕಿದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ಸದರಿ ಜಗಳದಲ್ಲಿ ನನ್ನ ಒಂದು ಮೊಬೈಲ್ ಕಳೆದುಹೋಗಿರುತ್ತದೆ. ಕಾರಣ ಮೇಲ್ಕಾಣಿಸಿದ 07 ಜನರು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಕಲ್ಲು ಬಡಿಗೆ ಕಬ್ಬಿಣದ ರಾಡು ಹಾಗೂ ಚಾಕುವಿನಿಂದ ಹೊಡೆದು ತರಚಿದ ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 112/2020 ಕಲಂ 143,147,148,447,323,324,504,506 ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!