ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/02/2020

By blogger on ಗುರುವಾರ, ಫೆಬ್ರವರಿ 20, 2020


                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/02/2020

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- ಕಲಂ. 279, 304(ಎ) ಐಪಿಸಿ & 187 ಐಎಂವಿ ಕಾಯ್ದೆ:- ಇಂದು ದಿನಾಂಕ:19/02/2020 ರಂದು 14.00 ಗಂಟೆಗೆ ಹುಣಸಗಿ ಸರಕಾರಿ ದವಾಖಾನೆಗೆ ದಿಂದಾ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಬೇಟಿ ಕೊಟ್ಟು ವಿಚಾರಣೆ ಮಾಡಿದ್ದು, ಆಸ್ಪತ್ರೆಯಲ್ಲಿದ್ದ ಮೃತನ ತಮ್ಮನಾದ ಕಂಠೆಪ್ಪ ತಂದೆ ಮಡಿವಾಳಪ್ಪ ಬೂದಿಹಾಳ ಸಾ:ಕೂಳಿಹಾಳ ಇವರು ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಕೊಟ್ಟಿದ್ದು ಏನೆಂದರೆ, ಇಂದು ದಿನಾಂಕ:19/02/2020 ರಂದು ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ನಮ್ಮಣ್ಣನು ಕೋಳಿಹಾಳ-ಇಸ್ಲಾಂಪುರ ರೋಡಿನ ಮೇಲೆ ವಾಲ್ಮಿಕಿ ಸರ್ಕಲ್ ಹತ್ತಿರ ಅಂಗಡಿಗೆ ಹೋಗಿ ಬರುವಾಗ ಕೊಳಿಹಾಳ ಬಸವರಾಜ ಇಬ್ರಾಹಿಂಪುರ ಇವರ ಹೊದಲದಿಂದಾ ಭಾರಿ ಪ್ರಮಾಣದಲ್ಲಿ ಕಬ್ಬನ್ನು ತುಂಬಿಕೊಂಡ ಬಂದ ಲಾರಿ ನಂ.ಎಂಹೆಚ್-18 ಎಂ-2745 ನೇದ್ದನ್ನು ಆ ವಾಹನ ಚಾಲಕನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದಾ ನಡೆಯಿಸಿಕೊಂಡು ಬಂದು ನಮ್ಮಣ್ಣ ಶಂಕ್ರಪ್ಪನಿಗೆ ತಿರುವಿನಲ್ಲಿ ರಭಸದಿಂದಾ ಲಾರಿಯ ಮುಂಭಾಗ ಬಡಿದು ನಮ್ಮಣ್ಣ ಅಲ್ಲಿಯೇ ಸ್ಥಳದಲ್ಲಿ ಬಿದ್ದು ಮೃತಪಟ್ಟಿದ್ದು, ಅಪಘಾತದ ಬಗ್ಗೆ ವಿಚಾರಿಸದೆ, ನಾವು ಕೈ ಮಾಡಿ ಒದರಿದರು ರಭಸದಿಂದಾ ಲಾರಿಯನ್ನು ಚಾಲಕ ತೆಗೆದುಕೊಂಡು ಹೋಗಿರುತ್ತಾನೆ. ನನ್ನ ಅಣ್ಣನ ಸಾವಿಗೆ ಕಾರಣನಾದ ಲಾರಿ ನಂ. ಎಂಹೆಚ್-18 ಎಂ-2745 ಚಾಲಕನ ಮೇಲೆ ಕಾನೂನ ಕ್ರಮ ಜರುಗಿಸಬೇಕೆಂದು ಕೊಟ್ಟಿದ್ದು ಪಡೆದುಕೊಂಡು ಮರಳಿ ಠಾಣೆಗೆ 18.05 ಗಂಟೆಗೆ ಬಂದು ಕ್ರಮ ಜರುಗಿಸಲಾಗಿದೆ.   
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 02/2020 ಕಲಂ 174 (ಸಿ) ಸಿಆರ್ಪಿಸಿ:- ಇಂದು ದಿನಾಂಕ 19/02/2020 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾಧಿದಾರಳಾದ ಶ್ರೀಮತಿ ರೇಣುಕಾಬಾಯಿ ಗಂಡ ಕಾಳಪ್ಪ ಚವ್ಹಾಣ ವಯಾಃ 48 ವರ್ಷ ಜಾಃ ಲಮಾಣಿ ಉಃ ಕೂಲಿಕೆಲಸ ಸಾಃ ಬೈಲಾಪೂರ ತಾಂಡಾ ತಾಃ ಹುಣಸಗಿ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವಿಸುತ್ತೆನೆ, ನನಗೆ ಇಬ್ಬರೂ ಹೆಣ್ಣುಮಕ್ಕಳು ಮತ್ತು ಇಬ್ಬರೂ ಗಂಡು ಮಕ್ಕಳು ಇರುತ್ತಾರೆ, ನನ್ನ ಮೊದಲನೇ ಮಗಳಾದ ಕವಿತಾಬಾಯಿ ಇವಳಿಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ವಿಶ್ವಾಸಪೂರ ತಾಂಡಾದ ಶಂಕರ ತಂದೆ ಲಕ್ಷ್ಮಣ ಪವ್ಹಾರ ಎಂಬುವವನಿಗೆ ಕೊಟ್ಟು ಮದುವೆ ಮಾಡಿರುತ್ತೆವೆ, ನನ್ನ ಮಗಳಾದ ಕವಿತಾಬಾಯಿ ಇವಳಿಗೆ ಎರಡು ಹೆಣ್ಣು ಮಕ್ಕಳು ಇದ್ದಿರುತ್ತವೆ, ನನ್ನ ಮಗಳು ಮತ್ತು ಅಳಿಯ ಇಬ್ಬರೂ ಅನೊನ್ಯವಾಗಿ ಸಂಸಾರ ಮಾಡಿಕೊಂಡು ಇದ್ದರು,  
    ಹೀಗಿರುವಾಗ ಇಂದು ದಿನಾಂಕ 19/02/2020 ರಂದು ಬೆಳಿಗ್ಗೆ ಸುಮಾರಿಗೆ ನಾನು, ನನ್ನ ಮಕ್ಕಳಾದ ರಾಜಶೇಖರ, ದಿಲೀಪ, ನನ್ನ ಸೊಸೆ ಮಹಾದೇವಿ ಎಲ್ಲರೂ ಮನೆಯಲ್ಲಿರುವಾಗ ನನ್ನ ಅಳಿಯನಾದ ಶಂಕರ ಇತನು ಪೋನ ಮಾಡಿ ತಿಳಿಸಿದ್ದೆನೆಂದರೆ ಇಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ನಮ್ಮ ಮನೆಯ ವಿಷಯದ ಸಂಬಂಧ ನನಗೆ ಮತ್ತು ನಿನ್ನ ಮಗಳು ಕವಿತಾಬಾಯಿಗೆ ಬಾಯಿ ಮಾತಿನ ತಕರಾರು ಆಗಿತ್ತು, ನಂತರ ನಾನು ಸಂಡಾಸಕ್ಕೆ ಅಂತಾ ಹೊರಗಡೆ ಹೋಗಿದ್ದೆನು, ಸ್ವಲ್ಪ ಸಮಯದ ನಂತರ ನಾನು ಮನೆಗೆ ಬಂದು ನೋಡಲಾಗಿ ನಿನ್ನ ಮಗಳು ಮನೆಯಲ್ಲಿ ಒದ್ದಾಡುತ್ತಿದ್ದಳು, ಅವಳ ಬಾಯಿಯಿಂದ ಕ್ರಿಮಿನಾಶಕ ಔಷಧಿಯ ವಾಸನೆ ಬರುತ್ತಿತ್ತು, ಆಗ ನಾನು ದವಾಖಾನೆಗೆ ಉಪಚಾರಕ್ಕಾಗಿ ತೆಗೆದುಕೊಂಡು ಹೋಗುವಷ್ಟರಲ್ಲಿ ಅವಳು ಮನೆಯಲ್ಲಿಯೇ ತಿರಿಕೊಂಡಿರುತ್ತಾಳೆ, ನೀವು ಬೇಗನೇ ಬನ್ನಿರಿ ಅಂತಾ ಹೇಳಿದನು, ಆಗ ನಾನು, ನನ್ನ ಮಕ್ಕಳು, ನನ್ನ ಸೊಸೆ ಮತ್ತು ನಮ್ಮ ತಾಂಡಾದ ಗಣೇಶ, ಪೂಲಸಿಂಗ ತಂದೆ ದೇವಲಾ ನಾಯಕ, ನಾಗೇಶ ತಂದೆ ಸಕ್ಕಾನಾಯಕ ಎಲ್ಲರೂ ಕೂಡಿಕೊಂಡು ನಮ್ಮ ತಾಂಡಾದಿಂದ ವಿಸ್ವಾಸಪೂರಕ್ಕೆ ಬಂದು ನೋಡಲಾಗಿ ಈ ಮೇಲಿನಂತೆ ಘಟನೆ ನಡೆದು ನನ್ನ ಮಗಳು ವಿಷಸೇವನೆ ಮಾಡಿ ಸತ್ತಿದ್ದಳು, ನನ್ನ ಮಗಳ ಎರಡು ಕೈಗಳಿಗೆ ಚೂರಿದ ಗಾಯಗಳು, ಕತ್ತಿಗೆಗೆ ಚೂರಿದ ಗಾಯವಾಗಿರುತ್ತದೆ, ಈ ಘಟನೆಯು ಇಂದು ದಿನಾಂಕ 19/02/2020 ರಂದು ಬೆಳಿಗ್ಗೆ 6-30 ಗಂಟೆಗೆ ನಡೆದಿರಬಹುದು, ಆದರೂ ಕೂಡಾ ನನ್ನ ಮಗಳ ಸಾವಿನಲ್ಲಿ ಸಂಶಯ ಇರುತ್ತದೆ, ಮುಂದಿನ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 02/2020 ಕಲಂ 174(ಸಿ) ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 30/2020 ಕಲಂ. ಮಹಿಳೆ ಕಾಣೆಯಾದ ಬಗ್ಗೆ.:- ದಿನಾಂಕ 16.02.2020 ರಂದು ರಾತ್ರಿ 11:00 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ಶಮಶಾದಬೇಗಂ ಮತ್ತು ಆಕೆಯ ಸೊಸೆ ಮತ್ತು ಮಕ್ಕಳು ಮನೆಯಲ್ಲಿ ಊಟ ಮಾಡಿ ಮಲಗಿದ್ದು ದಿನಾಂಕ 17.02.2020 ರಂದು ಬೆಳಿಗ್ಗೆ 06:00 ಗಂಟೆಗೆ ಫಿರ್ಯಾಧಿದಾರಳು ಎದ್ದು ನೋಡಿದಾಗ ತನ್ನ ಮಗಳು ಫಾತಿಮಾಬೇಗಂ ಕಾಣಿಸಲಿಲ್ಲ ನಂತರ ಆಕೆಯನ್ನು ಎಲ್ಲಾ ಕಡೆಗಳಲ್ಲಿ ಹುಡುಕಿ ಸಂಬಂಧಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ವಿಚಾರಿಸಲಾಗಿ ಫಾತಿಮಾಬೇಗಂ ಎಲ್ಲಿಯೂ ಇಲ್ಲದೇ ಇರುವ ಬಗ್ಗೆ ಗೊತ್ತಾಗಿ ಇಂದು ದಿನಾಂಕ 19.02.2020 ರಂದು ತನ್ನ ಮಗಳು ಫಾತಿಮಾಬೇಗಂ ಕಾಣೆಯಾಗಿದ್ದ ಬಗ್ಗೆ ದೂರು ನೀಡಿದ್ದು ಸದರಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 30/2020 ಕಲಂ. ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡೆನು.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:-  09/2020 ಕಲಂ: 79,80 ಕೆ.ಪಿ ಯಾಕ್ಟ್:- ದಿನಾಂಕ:18/02/2020 ರಂದು 8:20 ಪಿ.ಎಂ ಕ್ಕೆ ಶ್ರೀ ವೆಂಕಟೇಶ ಡಿ.ಎಸ್.ಪಿ ಸಾಹೇಬರು ಸುರಪೂರ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪೂರ ಗ್ರಾಮದ ಯಲ್ಲಾಲಿಂಗ ಮಠದ ಹಿಂದಿನ ಕೆ.ಬಿ.ಜೆಎನ್.ಎಲ್ ಜಾಗೆಯಲ್ಲಿನ ಕಟ್ಟಿಸಿರುವ ಬಸನಗೌಡ ತಂದೆ ಹಣಮಗೌಡ ಗೌಡರ ಇವರ ಜನತಾ ಮನೆಯಲ್ಲಿ ಇಸ್ಪೆಟ ಜೂಜಾಟ ಆಡುತ್ತಿದ್ದಾರೆ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಲು ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು ಕಾರಣ ನೀವು ಎಪ್ ಐ ಆರ್ ದಾಖಲಿಸಲು ಸೂಚಿಸಿದ ಅಂತಾ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 09/2020 ಕಲಂ 79,80, ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 
        ನಂತರ ಮಾನ್ಯ ಡಿ ಎಸ್ ಪಿ ಸಾಹೇಬರು 9:50 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 12 ಜನ ಆರೋಪಿತರು ನಗದು ಹಣ 71620/- ರೂ, 52 ಇಸ್ಪೆಟ ಎಲೆಗಳು ಹಾಗೂ ಎರಡು ಬರಕಾಗಳನ್ನು ಜಪ್ತುಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಫನ ಪತ್ರ ನೀಡಿದ್ದು ಇರುತ್ತದೆ. 
ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ಯಮನಪ್ಪ ತಂದೆ ಚಂದಪ್ಪ ಗೌಡರ ವ:40 ವರ್ಷ ಸಾ:ನಾರಾಯಣಪೂರ 
2) ಹುಸೇನ ತಂದೆ ಇಬ್ರಾಹಿಂ ಮುಲ್ಲಾ ವ:26 ವರ್ಷ ಸಾ: ನಾರಾಯಣಪೂರ 
3) ಯಮನೂರಿ ತಂದೆ ಬೀರಪ್ಪ ಬಿರಾದಾರ ವ: 30ವರ್ಷ ಸಾ:ನಾರಾಯಣಪೂರ 
4)ನೀಲಕಂಠ ತಂದೆ ಈಶ್ವರಪ್ಪ ಕೊಡೆಕಲ್ಲ ವ:38 ವರ್ಷ ಸಾ: ನಾರಾಯಣಪೂರ 
5)ಸಂತೋಷ ತಂದೆ ಸಂಗಪ್ಪ ಪೂಜಾರಿ ವ:23 ವರ್ಷ ಸಾ:ನಾರಾಯಣಪೂರ 
6)ರಮೇಶ ತಂದೆ ಗಂಗಪ್ಪ ಚವ್ಹಾಣ ವ:32 ವರ್ಷ ಸಾ: ಬಸರಗೀಡದ ತಾಂಡಾ 
7) ವಿಶ್ವನಾಥ ತಂದೆ ಯಲ್ಲಪ್ಪ ಭಜಂತ್ರಿ ವ:25 ವರ್ಷ ಸಾ:ನಾಲತವಾಡ 
8) ರಮೇಶ ತಂದೆ ಚಂದಪ್ಪ ಗೌಡರ ವ:35 ವರ್ಷ ಸಾ:ನಾರಾಯಣಪೂರ 
9) ರವಿ ತಂದೆ ಛತ್ರಪ್ಪ ಜಾದವ ವ:38 ವರ್ಷ ಸಾ: ಜಂಗಿರಾಂಪೂರ ತಾಂಡಾ 
10) ಬಸವರಾಜ ತಂದೆ ಸುಭಾಶ್ ಗಡ್ಡಿ ವ:22 ವರ್ಷ ಸಾ: ನಾಲತವಾಡ 
11) ವೆಂಕಟೇಶ ತಂದೆ ನಿಂಗಪ್ಪ ಹಾಲಬಾವಿ ವ:22 ವರ್ಷ ಸಾ: ನಾರಾಯಣಪೂರ 
12) ಅರುಣಕುಮಾರ ತಂದೆ ಶರಣಗೌಡ ನಾಡಗೌಡರ ವ:29 ವರ್ಷ ಸಾ: ಹಿರೇಜಾವೂರ 
ಮೂರು ಜನ ಆರೋಪಿತರು ಓಡಿಹೋಗಿರುತ್ತಾರೆ ಅವರ ಹೆಸರು ಈ ಕೇಳಗಿನಂತೆ ಇರುತ್ತದೆ 
1).ಆಂಜನೇಯ ತಂದೆ ಹಣಮಂತ ಗೊಳಸಂಗಿ ವ:35 ವರ್ಷ ಜಾ:ಹಿಂದೂ ಬೇಡರ, 
2). ಶಿವಪ್ಪ ತಂದೆ ಬೀರಪ್ಪ ಬಿರಾದಾರ ವ:36 ವರ್ಷ ಜಾ:ಹಿಂದು ಕುರಬರ, 
3).ಬಸವರಾಜ ತಂದೆ ನಾಗಪ್ಪ ದೇಸಾಯಿ ವ: 43ವರ್ಷ ಜಾ:ಹಿಂದೂ ಬೇಡರ ಸಾ:ಎಲ್ಲರೂ ನಾರಾಯಣಪೂರ 
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 35/2020 ಕಲಂ: 87 ಕೆಪಿ ಆಕ್ಟ :- ಇಂದು ದಿನಾಂಕ: 19.02.2020 ರಂದು 16.00 ಘಂಟೆಗೆ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಜೈನಾಪೂರ ಗ್ರಾಮದ ಹನುಮಾನ ದೇವರ ಗುಡಿಯ  ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0074 ನೇದ್ದರಲ್ಲಿ ಸದರ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 16.50 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 05 ಜನ ಆರೋಪಿತರು ಸಿಕ್ಕಿದ್ದು  ಮತ್ತು ಒಟ್ಟು 6380- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ಸಿಕ್ಕಿದ್ದು ಸದರಿಯವುಗಳನ್ನು 16.50 ಪಿ.ಎಂ ದಿಂದ  17.50 ಪಿ.ಎಂದವರಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 18.30 ಪಿ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 07.45 ಪಿಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 35/20 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೊಗಿ ಪೊಲೀಸ ಠಾಣೆ ಗುನ್ನೆ ನಂ:- 11/2020 379 ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994. :- ಇಂದು ದಿನಾಂಕ: 19/02/2020 ರಂದು 10-00 ಪಿಎಮ್ ಕ್ಕೆ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ಗೋಗಿ ರವರು ಠಾಣೆಗೆ ಬಂದು ಮರಳು ತುಂಬಿದ ಟ್ರ್ಯಾಕ್ಟರ್ ಮತ್ತು ಒಂದು ವರದಿ ಹಾಜರ ಪಡಿಸಿದ್ದು,  ಸದರಿ ವರದಿಯ  ಸಾರಂಶವೆನಂದರೆ, ಇಂದು ದಿನಾಂಕ: 19-02-2020 ರಂದು 8-00 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ, ಸುರಪೂರ ಕಡೆಯಿಂದ ಶೆಟ್ಟಿಕೇರಾ ಮಾರ್ಗವಾಗಿ ವನದುಗರ್ಾ ಕಡೆಗೆ ಟ್ರ್ಯಾಕ್ಟರ್ ದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟಕ್ಕೆ ಹೋಗುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಪ್ರೇಮಸಿಂಗ್ ಪಿಸಿ-318, ಹೈಯ್ಯಾಳಪ್ಪ ಪಿಸಿ-181 ಜೀಪ್ ಚಾಲಕನಾದ ಜಲಾಲಸಾ ಹೆಚ್.ಜಿ-260 ರವರೊಂದಿಗೆ ಸರಕಾರಿ ಜೀಪ್ ನಂ: ಕೆಎ-33 ಜಿ-0160 ನೇದ್ದರಲ್ಲಿ ಠಾಣೆಯಿಂದ 8-15 ಪಿಎಮ್ ಕ್ಕೆ ಹೋರಟು ಶೆಟ್ಟಿಕೇರಾ ಕ್ರಾಸದಲ್ಲಿ ಬಾಬು ಜಗಜೀವನರಾಮ್ ಕಟ್ಟೆಯ ಹತ್ತಿರ ರೋಡಿನಲ್ಲಿ ಕಾಯುತ್ತಾ ನಿಂತಾಗ 9-00 ಪಿಎಮ್ ಕ್ಕೆ ಸುರಪೂರ ಕಡೆಯಿಂದ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ನೋಡಿದ್ದು,  ಸದರಿ ಟ್ರ್ಯಾಕ್ಟರ್ ಚಾಲಕನಿಗೆ ನಿಲ್ಲಿಸಬೇಕೆನ್ನುವಷ್ಟರಲ್ಲಿ ಚಾಲಕನು ನಮ್ಮನ್ನು ನೋಡಿ ಸ್ವಲ್ಪ ದೂರದಲ್ಲಿ ರೋಡಿನ ಮೇಲೆ ತನ್ನ ಟ್ರ್ಯಾಕ್ಟರ್ನ್ನು ಬಿಟ್ಟು ಓಡಿಹೋಗಿದ್ದು ನಾನು ಮತ್ತು ಸಿಬ್ಬಂದಿಯವರು ಸದರಿಯವನಿಗೆ ಹಿಡಿಯಲು ಬೆನ್ನತ್ತಲಾಗಿ ಸದರಿ ಚಾಲಕನು ಓಡಿ ಹೋಗಿದ್ದು, ನಂತರ ಟ್ರ್ಯಾಕ್ಟರ್ನ್ನು ಪರಿಶೀಲಿಸಲಾಗಿ 1) ಸ್ವರಾಜ ಟ್ರ್ಯಾಕ್ಟರ್ 735 ಘಿಖಿ  ನಂ: ಕೆಎ-33 ಟಿಎ-7296 ಅ.ಕಿ.1,00,000=00  ಮತ್ತು 2) ನೀಲಿ ಬಣ್ಣದ ಟ್ರೈಲರ್ಸ ಅದಕ್ಕೆ ನಂಬರ ಇರುವುದಿಲ್ಲ ಅ.ಕಿ.50,000=00 ಸದರಿ ಟ್ರ್ಯಾಲಿಯಲ್ಲಿ 3) ಅಂದಾಜು ಒಂದು ಬ್ರಾಸ್ ಮರಳು ಅ.ಕಿ.1500=00 ರೂ ಇದ್ದು ಸದರಿ ಟ್ರ್ಯಾಕ್ಟರ್ನ ಚಾಲಕ ಮತ್ತು ಮಾಲೀಕನು ಸರಕಾರಕ್ಕೆ ಹಣ ತುಂಬದೇ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದದ್ದು ದೃಡಪಟ್ಟಿದ್ದರಿಂದ ಸದರಿ ಟ್ರ್ಯಾಕ್ಟರನ್ನು ಖಾಸಗಿ ಚಾಲಕನ ಸಹಾಯದಿಂದ ಠಾಣೆಗೆ 10-00 ಪಿಎಮ್ ಕ್ಕೆ ತಂದು ಹಾಜರ್ ಪಡಿಸಿ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ  ಗುನ್ನೆ ನಂ: 11/2020  ಕಲಂ 379  ಐಪಿಸಿ & 44(1) ಕೆ.ಎಂ.ಎಂ.ಆರ್.ಸಿ ಆಕ್ಟ್-1994 ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
                                      
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 16/2020 ಕಲಂ 78[3] ಕೆಪಿ ಯ್ಯಾಕ್ಟ:- ಇಂದು ದಿನಾಂಕ 19/02/2020 ರಂದು 7.30 ಪಿಎಮ್ ಕ್ಕೆ ಶಿರವಾಳ ಗ್ರಾಮದ ಹಣಮಂತ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪಿಡ್ಡಪ್ಪ ಕೋಲ್ಕರ ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ, ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ವಿಚಾರಿಸಿದಾಗ ಮಟಕಾ ಚಿಟ್ಟಿ ಹಾಗೂ ಹಣವನ್ನು ಭೀಮಣ್ಣ ನಾಯ್ಕಲ್ ಸಾ:ಶಿರವಾಳ ಈತನಿಗೆ ಕೊಡುವದಾಗಿ ತಿಳಿಸಿದ್ದರಿಂದ ಆರೋಪಿತನಿಗೆ ವಶಕ್ಕೆ ತೆಗೆದುಕೊಂಡು ಅವನಿಂದ 1) ನಗದು ಹಣ ರೂಪಾಯಿ 2050=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 7.40 ಪಿ.ಎಮ್ ದಿಂದ 8.40 ಪಿ.ಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 9.15 ಪಿ.ಎಮ್ ಕ್ಕೆ ಠಾಣೆಗೆ ಬಂದು ವರದಿ ತಯಾರಿಸಿ ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 10.15 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 16/2020 ಕಲಂ 78[3] ಕೆ.ಪಿ. ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 44/2020 ಕಲಂ 143, 147, 148, 323, 324, 354, 448, 504, 506 ಸಂಗಡ 149 ಐಪಿಸಿ:- ಇಂದು ದಿನಾಂಕ:19/02/2020 ರಂದು 7 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಸರಕಾರಿ ಆಸ್ಪತ್ರೆ ಸುರಪೂರಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮರೆಗೆ 7:05 ಪಿಎಂ ಕ್ಕೆ ಠಾಣೆಯಿಂದ ಹೊರಟು 7:20 ಪಿಎಂ ಕ್ಕೆ ಸರಕಾರಿ ಆಸ್ಪತ್ರಗೆ ಬೇಟಿ ನೀಡಿ ಗಾಯಾಳುದಾರನಾದ ಚನ್ನಬಸಪ್ಪ ತಂದೆ ಹಣಮಂತ್ರಾಯ ಬಿರಾದಾರ ವ|| 60 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಬೈಲಾಪೂರ ಸಿದ್ದಪೂರ ತಾ|| ಹುಣಸಗಿ ಇವರ ಹೇಳಿಕೆಪಡೆದುಕೊಂಡು 9 ಪಿಎಂ ಮರಳಿ ಠಾಣೆಗೆ ಬಂದು ಫಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ, ಚನ್ನಬಸಪ್ಪನ (ಪಿಯರ್ಾದಿ) ಹಿರಿಯ ಮಗಳಾದ ದೇವಮ್ಮ ಇವಳಿಗೆ ಸುರಪುರದ ಡೊಣ್ಣಿಗೇರಿ ಓಣಿಯ ಮಾನಪ್ಪ ಪುಜಾರಿ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ದೇವಮ್ಮಳ ಮಗಳಾದ ರಂಗಮ್ಮ ಇವಳಿಗೆ 4 ವರ್ಷಗಳ ಹಿಂದೆ ನನ್ನ ಮಗನಾದ ರಮೇಶನೊಂದಿಗೆ ಮದುವೆ ಮಾಡಿಸಬೇಕು ಅಂತಾ ನಮ್ಮ ಮನೆಯಲ್ಲಿ ನಾವು ವಿಚಾರ ಮಾಡಿದ್ದೇವು, ಆದರೆ, ಸುರಪುರ ಪಟ್ಟಣದ ಡೊಣ್ಣಿಗೆರಿಯ ಮರೆಪ್ಪ ತಂದೆ ಗೋಪಾಲ ಇತನು ನಮ್ಮ ಮೊಮ್ಮಗಳಾದ ರಂಗಮ್ಮ ಇವಳನ್ನು ಓಡಿಸಿಕೊಂಡು ಹೊಗಿ ಮದುವೆ ಆಗಿದ್ದು ಇರುತ್ತದೆ. ನಂತರ ಮರೆಪ್ಪ ತಂದೆ ಗೋಪಾಲ ಇತನ ಅಣ್ಣತಮ್ಮಕ್ಕಿಯವರಾದ ಮರೆಪ್ಪ ತಂದೆ ಸಾಬಣ್ಣ ಹವಲ್ದಾರ ಮತ್ತು ಅವರ ಅಣ್ಣ ತಮ್ಮಂದಿಯರು ನನ್ನ ಮಗಳ ತಂಟೆ ತಕರಾರು ಮಾಡುತ್ತಿದ್ದರು ಆಗ ನಾವು ಅವರಿಗೆ ಏನು ಅನ್ನದೆ ಸುಮ್ಮನಿದ್ದೇವು ಈಗ 1 ವರ್ಷ ಹಿಂದೆ ನನ್ನ ಮೊಮ್ಮಗಳಾದ ರಂಗಮ್ಮ ಇವಳ ಗಂಡ ಮರೆಪ್ಪ ಮರಣಹೊಂದಿದ್ದು ಇರುತ್ತದೆ
ಹಿಗಿದ್ದು ಇಂದು ದಿನಾಂಕ:19/02/2020 ರಂದು 4:30 ಪಿಎಂ ಸುಮಾರಿಗೆ ನಾನು ಮತ್ತು ನನ್ನ ಮಗಳಾದ ದೇವಮ್ಮ ಇವಳ ಮನೆಗೆ ಹೊಗಿ, ಮಗಳಾದ ದೇವಮ್ಮ, ಅಳಿಯನಾದ ಮಾನಪ್ಪ ತಂದೆ ಯಂಕಪ್ಪ ಪುಜಾರಿ ಮೂವರು  ಮನೆಯಲ್ಲಿ ಮಾತಾನಾಡುತ್ತಾ ಕುಳಿತಿರವಾಗ ಸುರಪೂರದ ಡೊಣ್ಣಿಗೇರಿ ಓಣಿಯವರಾದ 1) ಮರೆಪ್ಪ ತಂದೆ ಸಾಬಣ್ಣ ಹವಲ್ದಾರ ಜಾ|| ಬೇಡರು 2) ಭೀಮಣ್ಣ ತಂದೆ ಸಾಬಣ್ಣ ಹವಲ್ದಾರ ಜಾ|| ಬೇಡರು 3) ವೆಂಕಟೇಶ ತಂದೆ ಗೋಪಣ್ಣ ಹವಲ್ದಾರ ಜಾ|| ಬೇಡರು 4) ಯಲ್ಲಪ್ಪ ತಂದೆ ಸಾಬಣ್ಣ ಹಲವಲ್ದಾರ ಜಾ|| ಬೇಡರು 5) ಹಣಮಂತ ತಂದೆ ಸಾಬಣ್ಣ ಹವಲ್ದಾರ ಜಾ|| ಬೇಡರು 6) ಯಲ್ಲಮ್ಮ ಗಂಡ ಸಾಬಣ್ಣ ಹವಲ್ದಾರ ಜಾ|| ಬೇಡರು 7) ಪದ್ಮಮ್ಮ ಗಂಡ ಬಸಣ್ಣ ಹವಲ್ದಾರ ಜಾ|| ಬೇಡರು ಎಲ್ಲರು ಕೂಡಿ ಗುಂಪುಕಟ್ಟಿಕೊಂಡು ಅವರ ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಮನೆಗೆ ಬಂದವರೇ ಹಳೇ ವೈಶಮ್ಯದಿಂದ ನನ್ನ ಮಗಳಿಗೆ ಮತ್ತು ಅಳಿಯನಿಗೆ ನಿವೇ ನಮ್ಮ ಮರೆಪ್ಪ ತಂದೆ ಗೊಪಣ್ಣ ಇತನಿಗೆ ಸಾಯಿಹೊಡೆದಿರುತ್ತಿರಿ ಸುಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದವರೇ ಅವರಲ್ಲಿಯ ಮರೆಪ್ಪ ಇತನು ಕೈಯಿಂದ ನನ್ನ ಮಗಳ ಹೊಟ್ಟೆಗೆ ಹೊಡೆದು ಸಿರೆ ಹಿಡಿದು ಎಳೆದಾಡಿ ಮಾನ ಭಂಗ ಮಾಡುತ್ತಿರುವಾಗ ನಾನು ನನ್ನ ಮಗಳಿಗೆ ಏಕೆ ಹೊಡೆಯುತ್ತಿರಿ ಅಂತಾ ಕೇಳಿದಾಗ, ನೀನೇನು ಕೇಳುತ್ತಿ ಸುಳೆ ಮಗನೆ ಅಂತಾ ಅಂದವರೆ ಅವರಲ್ಲಿಯ ಬೀಮಣ್ಣ ಇತನು ಒಂದು ಬಡಿಗೆಯಿಂದ ನನ್ನ ಎದೆಗೆ ಹೊಡೆದು ಗುಪ್ತಗಾಯ ಮಾಡಿದನು, ವೆಂಕಟೇಶ ಇತನು ತನ್ನ ಕೈಯಲಿದ್ದ ಒಂದು ಬಡಿಗೆಯಿಂದ ನನ್ನ ಗದ್ದಕ್ಕೆ ಹೊಡೆದು ರಕ್ತಗಾಯ ಮಾಡಿದನು, ಹಣಮಂತ ಇತನು ತನ್ನ ಕೈಯಲ್ಲಿದ್ದ ಒಂದು ಕಲ್ಲಿನಿಂದ ನನ್ನ ಎದೆಗೆ ಹೊಡೆದು ಗುಪ್ತಗಾಯ ಮಾಡಿದನು, ಯಲ್ಲಮ್ಮ ಮತ್ತು ಪದ್ಮಮ್ಮ ಇಬ್ಬರು ನನ್ನ ಮಗಳಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಗುಪ್ತಗಾಯ ಮಾಡಿ ಹೊಡೆ ಬಡೆ ಮಾಡುತ್ತಿರುವಾಗ ಅದೇ ಸಮಯಕ್ಕೆ ನನ್ನ ಮಗಳ ಮನೆಗೆ ಬಂದ ನನ್ನ ಮಕ್ಕಳಾದ ರಮೇಶ ಮತ್ತು ಹಣಮಂತ್ರಾಯ ಹಾಗೂ ಅಲ್ಲೆ ಇದ್ದ ನನ್ನ ಅಳಿಯ ಮಾನಪ್ಪ ಎಲ್ಲರು ಕೂಡಿ ಜಗಳ ಬಿಡಿಸಿದರು. ಆಗ ಅವರು ಇವತ್ತ ಉಳಿದಿರಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತಾ ಬಿಡುವದಿಲ್ಲ ಅಂತಾ ಜೀವ ಬೇದರಿಕೆ ಹಾಕಿ ಹೊರಟು ಹೊದರು. ನಂತರ ನನ್ನ ಮಕ್ಕಳು ಉಪಚಾರ ಕುರಿತು ಸರಕಾರಿ ಆಸ್ಪತೆ ಸುರಪರಕ್ಕೆ ತಂದು ಸೇರಿಕೆ ಮಾಡಿದ್ದು ಇರುತ್ತದೆ.
ಕಾರಣ ನನಗೆ ಮತ್ತು ನನ್ನ ಮಗಳಿಗೆ ಹೊಡೆ ಬಡೆ ಮಾಡಿ ಮಾನ ಭಂಗ ಮಾಡಿ ಅವಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿ ಗುಪ್ತ ಪೆಟ್ಟು ಪಡಿಸಿದ ಮೇಲೆ ಹೇಳಿದ ಏಳು ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ 44/2020 ಕಲಂ: 143, 147, 148, 323, 324, 354, 448,504, 506 ಸಂ. 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!