ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/02/2020

By blogger on ಭಾನುವಾರ, ಫೆಬ್ರವರಿ 9, 2020


                                    ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/02/2020

ಯಾದಗಿರ ನಗರ ಠಾಣೆ ಗುನ್ನೆ ನಂ:- : 19/2020 ಕಲಂ 379 ಐಪಿಸಿ:- ಇಂದು ದಿನಾಂಕ: 09/02/2020 ರಂದು 10-30 ಎಎಮ್ ಕ್ಕೆ ಶ್ರೀ ಎನ್.ವೈ. ಗುಂಡುರಾವ್ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ಜ್ಞಾಪನ ಪತ್ರವನ್ನು  ಮುಂದಿನ ಕ್ರಮಕ್ಕಾಗಿ ನೀಡಿದ್ದರ ಸಾರಾಂಶವೆನೆಂದರೆ,  ಇಂದು ದಿನಾಂಕ: 09/02/2020 ರಂದು ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಸಾಬರೆಡ್ಡಿ ಪಿಸಿ-379, ಮೌನೇಶ ಪಿಸಿ 343 ಮತ್ತು ಜೀಪ ಚಾಲಕ ಮಹಿಬೂಬ ಪಿಸಿ 02 ಇವರೊಂದಿಗೆ ಠಾಣೆಯ ಜೀಪ್ ನಂಬರ ಕೆಎ.33.ಜಿ.0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ  ಬೆಳಗ್ಗೆ 9-15 ಗಂಟೆ ಸುಮಾರಿಗೆ ಚರ್ಚಕ್ರಾಸ ಹತ್ತಿರ ಹೋಗುತ್ತಿರುವಾಗ ಒಂದು ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿರುವಾಗ ನಾವು ಕೈ ಮಾಡಿ ನಿಲ್ಲಿಸುವಂತೆ ಸೂಚನೆ ಮಾಡಿದಾಗ ಆಗ ಚಾಲಕನು ಟ್ರಾಕ್ಟರ ನಿಲ್ಲಿಸಿ ಓಡಿ ಹೋದನು ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರಕ್ಕೆ ನೋಂದಣಿ ನಂಬರ ಇರಲಿಲ್ಲ. ಇಂಜನ ನಂ.ಖ3251ಏ26001 ಚಾಸ್ಸಿ ನಂ. ಒಇಂ908ಂ5ಇಏ2244413 ಇದ್ದು  ಅದರಲ್ಲಿ ಅಕ್ರಮವಾದ ಮರಳು ತುಂಬಿದ್ದು ಇತ್ತು. ಚಾಲಕನು ಟ್ರಾಕ್ಟರ ಚಾವಿ ಬಿಟ್ಟು ಓಡಿ ಹೋಗಿದ್ದರಿಂದ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಾತ್ರಿಪಡಿಸಿಕೊಂಡಿದ್ದು ನಂತರ ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ ಚಾಲಕ ಮತ್ತು ಮಾಲೀಕನ ಹೆಸರು ತಿಳಿದು ಬಂದಿರುವುದಿಲ್ಲ. ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 10-15 ಎಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಆಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟ್ರ್ಯಾಕ್ಟರ ಇಂಜನ ನಂ.ಖ3251ಏ26001 ಚಾಸ್ಸಿ ನಂ. ಒಇಂ908ಂ5ಇಏ2244413  ಅ.ಕಿ.2,00,000/-ರೂ, ಮರಳು ಅ.ಕಿ.1,000/-ರೂ ನೇದ್ದವುಗಳನ್ನು ಒಪ್ಪಿಸಿ, ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 10-30 ಎಎಮ್ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಟ್ರಾಕ್ಟರ ಚಾಲಕ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.19/2020 ಕಲಂ.379 ಐಪಿಸಿ  ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಠಾಣೆ ಗುನ್ನೆ ನಂ:- 39/2020 ಕಲಂ. ಮನುಷ್ಯ ಕಾಣಿಯಾದ ಬಗ್ಗೆ  :- ಇಂದು ದಿನಾಂಕ:09-02-2020 ರಂದು 12:30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿನಿಂಗಮ್ಮ ಗಂಡ ಫಿರಪ್ಪ ಅಲಗಿ ವ|| 44 ವರ್ಷ ಜಾ|| ಹೊಲೆಯ ಉ|| ಕೂಲಿ ಕೆಲಸ ಸಾ|| ಯರಗೊಳ ತಾ||ಜಿ|| ಯಾದಗಿರಿ ಇದ್ದು ಫಿಯರ್ಾದಿ ಸಾರಾಂಸವೆನೆಂದರೆ, ದಿನಾಂಕ:08-02-2020 ರಂದು ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವಕ್ಕೆ ಕುಟುಂಬ ಸಮೇತವಾಗಿ ತಿಂಥಣಿ ಗ್ರಾಮಕ್ಕೆ ಬಂದಿದ್ದು ನದಿಯಲ್ಲಿ ಮುಂಜಾನೆ ಜಳಕ ಮಾಡುವಾಗ 10:00 ಗಂಟೆಗೆ ನನ್ನ ಗಂಡನಾದ ಪೀರಪ್ಪ ತಂದೆ ಮರಗಪ್ಪ ಅಲಗಿ ವ|| 48 ವರ್ಷ ಇದ್ದು ಸ್ನಾನ ಮಾಡುವಾಗ ನೀರಿನಲ್ಲಿ ಕಾಣೆಯಾಗಿದ್ದಾನೆ. ಪ್ರಯುಕ್ತ ಕಾಣೆಯಾದ ನನ್ನ ಗಂಡನುನ್ನು ಹುಡುಕಿ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನನ್ನ ಗಂಡನನ್ನು ನದಿಯಲ್ಲಿ, ತಿಂಥಣಿ ಮೌನೇಶ್ವರ ಜಾತ್ರೆಯಲ್ಲಿ ಮತ್ತು ವೀರಗೋಟ್ದಲ್ಲಿ ಹುಡುಕಾಡಿ ಇಂದು ದಿನಾಂಕ:09-02-2020 ರಂದು 12:30 ಪಿಎಂಕ್ಕೆ ತಡವಾಗಿ ಬಂದು ದೂರು ಸಲ್ಲಿಸುತ್ತೇನೆ. ವಿನಂತಿ ಅಂತಾ ಕೊಟ್ಟ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ. 39-2020 ಕಲಂ: ಮನುಷ್ಯ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ:-

ಹುಣಸಗಿ ಗ್ರಾಮೀಣ ಠಾಣೆ ಗುನ್ನೆ ನಂ:-.16/2020 ಕಲಂ. 279 337 338 ಐಪಿಸಿ  & 187 ಐಎಂವಿ ಕಾಯ್ದೆ:- ದಿನಾಂಕ:09/02/2020 ರಂದು 18.45 ಗಂಟೆಯ ಸುಮಾರಿಗೆ ಪಿಯರ್ಾದಿ ಠಾಣೆಗೆ ಬಂದು ಒಂದು ಹೇಳಿಕೆ ಕೊಟ್ಟಿದ್ದು ಏನೆಂದರೆ, ದಿನಾಂಕ:07/02/2020 ರಂದು ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ನನ್ನ ಗಂಡನಾದ ದೇವಿದ್ರಪ್ಪನು ತನ್ನ ಬಜಾಜ ಪ್ಲಾಟಿನ್ ಕೆಂಪು ಬಣ್ಣದ ಮೋಟಾರ್ ಸೈಕಲ್ ನಂ. ಕೆಎ-33 5992 ನೇದ್ದರ ಮೇಲೆ ಹೊಲದಿಂದಾ ಮನೆಗೆ ಹೆಬ್ಬಾಳ(ಬಿ)-ಕಚಕನೂರ ರೋಡಿನ ಮೇಲೆ ಕಚಕನೂರ ಕಡೆಗೆ ಬರುವಾಗ ಎದರುಗಡೆಯಿಂದಾ ಒಂದು ಸ್ವಿಪ್ಟ ಸಿಲ್ವರ ಬಣ್ಣದ ಕಾರ ನಂಬರ ಇಲ್ಲದ್ದನ್ನು ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಪಿಯರ್ಾದಿ ಗಂಡನ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ದೇವಿಂದ್ರಪ್ಪನಿಗೆ ಎಡಗಾಲಿಗೆ ಭಾರಿ ಒಳಪೆಟ್ಟಾಗಿದ್ದು, ಸ್ಥಳದಲ್ಲಿದ್ದ ಚಾಲಕ ಆಸ್ಪತ್ರೆಗೆ ತೋರಿಸುತ್ತೇನೆ ಅಂತಾ ಹೇಳಿ ಹುಣಸಗಿ ಸರಕಾರಿ ದವಾಖಾನೆಗೆ ತಂದು ಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆಂದು ವಿಜಯಪುರ ಬಾಗ್ಯವಂತಿ ದವಾಖಾಣೆಗೆ ಕಳಿಸಿದ್ದು, ಇದುವರಗೆ ಬಂದು ಕಾರ ಚಾಲಕ ದವಾಖಾನೆಗೆ ತೋರಿಸದೆ, ಇದ್ದುದ್ದಕ್ಕೆ ನಾವು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದು, ನಂಬರ ಇಲ್ಲದ ಸಿಲ್ವರ ಬಣ್ಣದ ಸ್ವಿಪ್ಟ ಕಾರ ಚಾಲಕನ ಮೇಲೆ ಕಾನೂನ ರೀತಿ ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.   


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-40/2020 ಕಲಂ: 20(ಛ)()(ಂ) ಎನ್.ಡಿ.ಪಿ.ಎಸ್. ಕಾಯ್ದೆ-1985:- ಇಂದು ದಿನಾಂಕ:09-02-2020 ರಂದು 8:15 ಪಿಎಂ ಕ್ಕೆ ಶ್ರೀ ಆನಂದರಾವ್ ಎಸ್.ಎನ್ ಪಿ.ಐ ಸುರಪೂರ ಠಾಣೆ ಸಾಹೇಬರು ಒಬ್ಬ ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆ ಹಾಜರಾಗಿ ಒಂದು ವರದಿ ನೀಡಿದ್ದರ ಸಾರಂಶಏನಂದರೆ, ನಾನು ಆನಂದರಾವ್ ಎಸ್.ಎನ್ ಪಿ.ಐ ಸುರಪೂರ ಠಾಣೆ ವರದಿ ಕೊಡುವದೇನೆಂದರೆ ಇಂದು ದಿನಾಂಕ 09/02/2020 ರಂದು 5:15 ಪಿ.ಎಂ.ಕ್ಕೆ ನಾನು ತಿಂಥಣಿ ಜಾತ್ರೆಯ ಬಂದೊಬಸ್ತ ಕುರಿತು ತಿಂಥಣಿ ಉಕ್ಕಡ ಠಾಣೆಯಲ್ಲಿದ್ದಾಗ ಬಾತ್ಮೀ ಬಂದಿದ್ದೇನೆಂದರೆ ತಿಂಥಣಿ ಜಾತ್ರೆಯ ಕೈಲಾಸ ಕಟ್ಟಿಯ ಮುಂದುಗಡೆ ಜಾತ್ರೆಯಲ್ಲಿ ಒಬ್ಬ ವ್ಯಕ್ತಿಯು ಕುಳಿತು ಜಾತ್ರೆಗೆ ಬಂದ ಸಾರ್ವಜನಿಕರಿಗೆ ಅನಧಿಕೃತವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಪಂಚರಾದ 1) ಶ್ರೀ. ಸಂತೋಷರೆಡ್ಡಿ ತಂದೆ ಶಿವರೆಡ್ಡಿ ಹೋತಗಲ್ಲ ವಯಾ: 36 ವರ್ಷ ಉ:ಹಿಂದು ರೆಡ್ಡಿ ಉ: ಗ್ರಾಮ ಲೇಖಪಾಲಕರು ಕಕ್ಕೇರಾ ಸಾ: ಬೋಳನಿ ತಾ:ಆಳಂದ ಹಾವ:ತಿಂಥಣಿ ಗ್ರಾವ 2) ಶ್ರೀ. ಬಸವರಾಜ ತಂದೆ ರಾಮಣ್ಣ ಶೇಟ್ಟಿ ವಯಾ:26 ವರ್ಷ ಉ: ಗ್ರಾಮ ಲೇಖ ಪಾಲಕರು ತಿಂಥಣಿ ಗ್ರಾಮ ಜಾ: ಉಪ್ಪಾರ ಸಾ:ಇಸಾಂಪೂರ ತಾ:ಹುಣಸಗಿ ಹಾವ:ಬುಡಾ ಬೋವಿಗಲ್ಲಿ ಸುರಪೂರ ಇವರನ್ನು ಉಕ್ಕಡ ಠಾಣೆಗೆ ಕರೆಯಿಸಿಕೊಂಡು ಅವರಿಗೆ ಪೊಲೀಸ್ ನೊಟೀಸ್ ನೀಡಿ ಒಪ್ಪಿಗೆ ಪತ್ರ ಪಡೆದುಕೊಂಡು ಮತ್ತು ಸಮಕ್ಷಮ ಅಧಿಕಾರಿ ಕುರಿತು ಪತ್ರಾಂಕಿತ ಅಧಿಕಾರಿಗಳಾದ ಡಾ:ನಜ್ಮಾ ವೈಧ್ಯಾಧಿಕಾರಿಗಳು ಸರಕಾರಿ ಪ್ರಾಥಮೀಕ ಆರೋಗ್ಯ ಕೇಂದ್ರ ಕಕ್ಕೇರಾ ಆಸ್ಪತ್ರೆ, ರವರನ್ನು ಬರಮಾಡಿಕೊಂಡು ಪೊಲೀಸ್ ನೊಟೀಸ್ ಮೂಲಕ ವಿನಂತಿಸಿಕೊಂಡು ಒಪ್ಪಿಗೆ ಪಡೆದುಕೊಂಡು ಹಾಗೂ ಗ್ರಾಮದ ಶರಣಯ್ಯಾ ತಂದೆ ವಿರಯ್ಯಾ ಸ್ವಾಮಿ ಹಿರೇಮಠ ವಯಾ:45 ಉ:ಕುಂಕುಮ ವ್ಯಾಪಾರ ಜಾತಿ:ಜಂಗಮ ಸಾ:ತಿಂಥಣಿ ಇವರಿಗೆ ವಶಪಡಿಸಿಕೊಂಡ ಮುದ್ದೆಮಾಲನ್ನು ತೂಕ ಮಾಡಲು ಪೊಲೀಸ್ ನೊಟೀಸ್ ನೀಡಿ ಒಪ್ಪಿಗೆ ಪಡೆದುಕೊಂಡು ದಾಳಿಯ ಬಗ್ಗೆ ತಿಳಿಸಿ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂಧಿಯವರಾದ ಶ್ರೀ ಉಮಾಕಾಂತ ಸಿಹೆಚ್ಸಿ-192, ಶ್ರೀ ಚಂದ್ರಾಮ ಸಿಪಿಸಿ-175, ಶ್ರೀ ಸೋಮಯ್ಯಾ ಸಿಪಿಸಿ-235, ಶ್ರೀ ದಯಾನಂದ ಸಿಪಿಸಿ-337 ಎಲ್ಲರೂ ಕೂಡಿಕೊಂಡು 05:45 ಪಿ.ಎಮ್.ಕ್ಕೆ ಉಕ್ಕಡ ಠಾಣೆಯಿಂದ ಹೊರಟು 05:50 ಪಿ.ಎಮ್.ಕ್ಕೆ ಬಾತ್ಮಿ ಬಂದ ಸ್ಥಳವಾದ ಕೈಲಾಸ ಕಟ್ಟಿಯಿಂದ ಸ್ವಲ್ಪ ಅಂತರದ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ತನ್ನ ಮುಂದೆ ಪ್ಲಾಸ್ಟಿಕ್ ಕವರನಲ್ಲಿ ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು 05:55 ಪಿ.ಮ್.ಕ್ಕೆ ಪತ್ರಾಂಕಿತ ಅಧಿಕಾರಿ ಸಮಕ್ಷಮ, ಪಂಚರು ಮತ್ತು ಸಿಬ್ಬಂಧಿಯವರೊಂದಿಗೆ ದಾಳಿ ಮಾಡಿ ಗಾಂಜಾ ಮಾರಾಟ ಮಾಡುವ ವ್ಯಕ್ತಿಯನ್ನು ಹಿಡಿದು ಆತನ ಹೆಸರು, ವಿಳಾಸ ವಿಚಾರಿಸಲಾಗಿ ತನ್ನ ಹೆಸರು  ಈರಣ್ಣ ತಂದೆ ಮಹಾದೇವ ಕುಂಟ ವಯಾ:24 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಗದ್ದಲ ತಾ:ಮಾನವಿ ಜಿಲ್ಲಾ:ರಾಯಚೂರ ಅಂತಾ ತಿಳಿಸಿದ್ದು ತನ್ನ ಮುಂದೆ ಇರುವ ಗಾಂಜಾ ತಾನೇ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದೇನೆ ಅಂತಾ ತಿಳಿಸಿದನು. ಸದರಿ ಗಾಂಜಾ ಮಾರಾಟ ಕುರಿತು ಪರವಾನಿಗೆ ಕೇಳಲಾಗಿ, ಪರವಾನಿಗೆ ಇಲ್ಲವೆಂದು ತಿಳಿಸಿದನು. ಆತನ ಅಂಗ ಜಪ್ತಿ ಮಾಡಲು ನೊಟೀಸ್ ನೀಡಿ ಸದರಿಯವನ ಅಂಗ ಜಪ್ತಿ ಮಾಡಿದಾಗ ಅವನ ಹತ್ತಿರ 400=00 ರೂ.ನಗದು ಹಣ ದೊರೆತಿದ್ದು, ಸದರಿ ಗಾಂಜಾದ ಪ್ರಮಾಣ ತಿಳಿಯಲು ಶರಣಯ್ಯಾ ತಂದೆ ವಿರಯ್ಯಾ ಸ್ವಾಮಿ ಹಿರೇಮಠ ಇವರಿಂದ ತೂಕ ಮಾಡಿಸಿದ್ದು ಸದರಿ ಗಾಂಜಾವು 350 ಗ್ರಾಂ ಆಗಿರುತ್ತದೆ. ಸದರಿ ಗಾಂಜಾದ ಅಂದಾಜು ಕಿಮ್ಮತ್ತು 875=00 ರೂ. ಆಗುತ್ತದೆ. ಸದರಿ ಗಾಂಜಾವನ್ನು ಒಂದು ಚೀಲದಲ್ಲಿ ಹಾಕಿ ಮತ್ತು ಹಣವನ್ನು ಒಂದು ಕವರಿನಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ನಿಶನೆ ಮಾಡಿದ ಚೀಟಿ ಅಂಟಿಸಿ ಜಪ್ತಿ ಮಾಡಿ ವಶಕ್ಕೆ ತೆಗೆದುಕೊಂಡಿರುತ್ತೇನೆ ಜಪ್ತಿ ಮಾಡಿಕೊಂಡ ಒಟ್ಟು ಗಾಂಜಾದಲ್ಲಿ 100 ಗ್ರಾಂ ಗಾಂಜಾ ರಾಸಾಯನಿಕ ಪರೀಕ್ಷೆ ಕುರಿತು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಶೀಲ್ ಮಾಡಿ ಕೆಎಲ್ಆರ್ ಅಂತಾ ಇಂಗ್ಲಿಷ ಅಕ್ಷರದಲ್ಲಿ ಶೀಲ್ಡ್ ಮಾಡಿ ತಾಬಾಕ್ಕೆ ತೆಗದುಕೊಂಡೆನು. ಸದರಿ ಜಾಗೆಯ ಚೆಕ್ ಬಂದಿ ಈ ಕೆಳಗಿನಂತೆ ಇರುತ್ತದೆ. ಸದರಿ ಪಂಚನಾಮೆಯನ್ನು ಇಂದು ದಿನಾಂಕ 09/02/2020 ರಂದು ಮದ್ಯಾಹ್ನ 6 ಪಿ.ಎಮ್.ದಿಂದ 7 ಪಿ.ಎಮ್.ದ ವೆರೆಗೆ ಸ್ಥಳದಲ್ಲಿ ಕುಳಿತು ಬರೆಯಲಾಯಿತು. ನಂತರ ಠಾಣೆಗೆ ಮರಳಿ 8:15 ಪಿ.ಎಮ್ ಕ್ಕೆ ಕೇಸಿನ ಒಬ್ಬ ಆರೋಪಿತ ಮತ್ತು ಮುದ್ದೆ ಮಾಲಿನೊಂದಿಗೆ ಬಂದು ಸರಕಾರಿ ತಫರ್ೇ ಪಿರ್ಯಾಧಿದಾರರಾಗಿ ಮುಂದಿನ ಕ್ರಮಕ್ಕಾಗಿ ಈ ವರದಿ ಸಲ್ಲಿಸಿದ್ದು ಇರುತ್ತದೆ.ಅಂತಾ ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 40/2020 ಕಲಂ: 20(ಛ)()(ಂ) ಎನ್.ಡಿ.ಪಿ.ಎಸ್. ಕಾಯ್ದೆ-1985 ಅಡಿ ಪರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

 ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂಬರ 38/2020 ಕಲಂ 87 ಕೆಪಿ ಯಾಕ್ಟ:- :       ಇಂದು ದಿನಾಂಕ: 08/02/2020 ರಂದು 2.50 ಎ.ಎಮ್.ಕ್ಕೆ ಮಾನ್ಯ ಶ್ರೀ ಹನುಮರಡ್ಡೆಪ್ಪ ಪಿ.ಐ ಶಹಾಪೂರ ರವರು ಠಾಣೆಗೆ ಬಂದು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ , ಮುದ್ದೆಮಾಲು ಮತ್ತು 8 ಜನ ಆರೋಪಿತರನ್ನು ತಂದು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನಂದರೆ  ಇಂದು ದಿನಾಂಕ 09/02/2020 ರಂದು 12.30 ಎ.ಎಂಕ್ಕೆ ಎನ್.ಆರ್.ಸಿ ಕರ್ತವ್ಯದ ಮೇಲೆ ಹತ್ತಿಗುಡೂರ ಗ್ರಾಮದಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಕನ್ಯಾಕೊಳ್ಳೂರ ಗ್ರಾಮದ ಪರಮಾನಂದ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ  ಕೆಲವು ಜನರು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ 12.45 ಎ.ಎಂ ಕ್ಕೆ ಠಾಣೆಗೆ ಬಂದು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಶ್ರೀ ವೆಂಕಣ್ಣ ಎ.ಎಸ್.ಐ, ಹುಸೇನಪ್ಪ ಹೆಚ್.ಸಿ 103, ನಾರಾಯಣ ಹೆಚ್.ಸಿ 49, ಬಾಬು ಹೆಚ್.ಸಿ.162, ಗೋಕುಲಹುಸೇನ ಪಿಸಿ 172, ಭಾಗಣ್ಣ ಪಿಸಿ 194, ಸುರೇಶ ಪಿಸಿ 200, ಗುರುಶೇಖರ ಪಿಸಿ 186, ಮುತ್ತಪ್ಪ ಪಿಸಿ 118, ವೀರೇಶ ಪಿಸಿ 401 ಮತ್ತು ನಾಗರೆಡ್ಡಿ ಎಪಿಸಿ 161 ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೇಕೆಂದು ಹೇಳಿ, ದಾಳಿ ಕುರಿತು ಹೋಗುವ ಸಂಬಂಧ ಭಾಗಣ್ಣ ಪಿಸಿ 194 ರವರ ಮುಖಾಂತರ ಇಬ್ಬರು ಪಂಚರಾದ 1) ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 26 ವರ್ಷ ಜಾ|| ಲಿಂಗಾಯತ ಉ|| ಕೂಲಿ ಸಾ|| ಹಳಿಸಗರ ಶಹಾಪೂರ 2) ಶ್ರೀ ಅಂಬ್ಲಪ್ಪ ತಂದೆ ಭಿಮಪ್ಪ ಐಕೂರ ವ|| 45ವರ್ಷ ಜಾ|| ಎಸ್.ಸಿ. ಉ|| ಕೂಲಿ ಸಾ|| ದೇವಿ ನಗರ ಶಹಾಪೂರ ಇವರಿಗೆ 12.55 ಎ.ಎಂಕ್ಕೆ ಠಾಣೆಗೆ ಕರೆದುಕೊಂಡು ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ನಂತರ ಸದರಿಯವರ ಮೇಲೆ ದಾಳಿ ಮಾಡಲು ನಾನು, ಪಂಚರು ಮತ್ತು ಸಿಬ್ಬಂದಿಯವರು ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು, ಠಾಣೆಯಿಂದ 1.00 ಎ.ಎಂ ಕ್ಕೆ ಹೊರಟು ಕನ್ಯಾಕೊಳ್ಳೂರ ಗ್ರಾಮದ ಪರಮಾನಂದ ಗುಡಿಯ ಹತ್ತಿರ 1.10 ಎ.ಎಂ.ಕ್ಕೆ ಹೋಗಿ ವಾಹನ ನಿಲ್ಲಿಸಿ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ 8 ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದು ಅದರಲ್ಲಿ ಒಬ್ಬ ಅಂದರ 20 ರೂ ಇನ್ನೊಬ್ಬ ಬಾಹರ 20 ರೂ. ಎಂದು ಹೇಳಿ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು  ನಾನು ಮತ್ತು ಸಿಬ್ಬಂದಿಯವರು ಸೇರಿ ಸುತ್ತುವರೆದು ಅವರ ಮೇಲೆ 1.15 ಎ.ಎಮ್ ಕ್ಕೆ ಒಮ್ಮೆಲೆ ದಾಳಿ ಮಾಡಿ ಹಿಡಿಯಲಾಗಿ 8 ಜನರು ಸಿಕ್ಕಿದ್ದು ಸದರಿಯವರಿಗೆ ವಿಚಾರಿಸಿ ಹೆಸರು ವಿಳಾಸ ಕೇಳಲಾಗಿ  1) ಶಿವರಾಜ ತಂದೆ ಹೊನ್ನಪ್ಪ ತಳವಾರ ವ|| 24ವರ್ಷ ಜಾ|| ಕಬ್ಬಲಿಗ ಉ|| ಟ್ರ್ಯಾಕ್ಟರ ಚಾಲಕ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ 2) ಹಯ್ಯಾಳಪ್ಪ ತಂದೆ ಬಸಪ್ಪ ಚಿಕ್ಕನಳ್ಳಿ ವ|| 35ವರ್ಷ ಜಾ|| ಕುರುಬರ ಉ|| ಕೂಲಿ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ 3) ಅಂಬರೇಶ ತಂದೆ ಶಿವಯ್ಯ ಕಲಾಲ ವ|| 30ವರ್ಷ ಜಾ|| ಈಳಿಗೇರ ಉ|| ಒಕ್ಕಲುತನ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ 4) ಕಾಸಿಂಸಾಬ ತಂದೆ ಚಂದಾಸಾಬ ಚಪರೇಶಿ ವ|| 55ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ 5) ದುರ್ಗಪ್ಪ ತಂದೆ ಹಣಮಂತ ತಿಮ್ಮಯ್ಯನೋರ ವ|| 30ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ 6) ಹುಚ್ಚಪ್ಪ ತಂದೆ ನಿಂಗಪ್ಪ ದಾಳೇರ ವ|| 26ವರ್ಷ ಜಾ|| ಕುರುಬರ ಉ|| ಅಟೋ ಚಾಲಕ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ 7) ಚಂದ್ರಪ್ಪ ತಂದೆ ಮಲ್ಲಪ್ಪ ಆಂದೇಲಿ ವ|| 50ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ 8) ಮಲ್ಲಪ್ಪ ತಂದೆ ದೇವಿಂದ್ರಪ್ಪ ನಾಯ್ಕೋಡಿ ವ|| 30ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ ಅವನ  ಅಂಗಶೋದನೆ ಮಾಡಲಾಗಿ  3800/- ರೂ ನಗದು ಹಣ ಸಿಕ್ಕಿದ್ದು ಎಲ್ಲರ ಮುಂದಿನ ಕಣದಲ್ಲಿ 470/-ರೂ. ಮತ್ತು 52 ಇಸ್ಪೀಟ ಎಲೆಗಳು ಇದ್ದು ಹೀಗೆ ಒಟ್ಟು 4270/- ರೂ. ನಗದು ಹಣ ಮತ್ತು 52 ಇಸ್ಪೀಟ ಎಲೆಗಳು ಸದರಿ ಮುದ್ದೆಮಾಲುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ಸಿಕ್ಕ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 1.20 ಎ.ಎಮ್.ದಿಂದ 2.20 ಪಿ.ಎಂ ದ ವರೆಗೆ ಜಪ್ತಿ ಪಂಚನಾಮೆಯನ್ನು  ದೇವಸ್ಥಾನದ ಮುಂದಿನ ಬೀದಿ ದೀಪದ ಬೆಳಕಿನಲ್ಲಿ ಮಾಡಿ ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ಆರೋಪಿತರೊಂದಿಗೆ ಮರಳಿ ಠಾಣೆಗೆ 2.30 ಎ.ಎಂ ಕ್ಕೆ ಬಂದು 8 ಜನ ಆರೋಪಿತರು, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರುಪಡಿಸಿ ವರದಿ ತಯಾರಿಸಿ  ಸದರಿ ಆರೋಪಿತರ ಮೇಲೆ ಮುಂದಿನ ಕ್ರಮ ಕೈಕೊಳ್ಳಲು 2.50 ಎ.ಎಂ.ಕ್ಕೆ ವರದಿ ನೀಡಿರುತ್ತೇನೆ. ಅಂತಾ ಇದ್ದು ಸದರಿ ಅಪರಾಧವು ಅ ಸಂಜ್ಞೇಯ ವಾಗಿದ್ದರಿಂದ  ಠಾಣೆಯ ಎನ್.ಸಿ. 14/2020 ನೇದ್ದಕ್ಕೆ ಧಾಖಲು ಮಾಡಿಕೊಂಡು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಬರಲು ಪಿ.ಸಿ.424 ರವರನ್ನು ನೇಮಿಸಿ ಕಳಿಸಿದ್ದು ಸದರಿ ಪಿ.ಸಿ.424 ರವರು ಪರವಾನಿಗೆ ಪಡೆದುಕೊಂಡು 3.30 ಎ.ಎಮ್.ಕ್ಕೆ ಬಂದಿದ್ದು ಸದರಿ ಪರವಾನಿಗೆಯ ಆಧಾರದ ಮೇಲಿಂದ ಠಾಣೆ ಗುನ್ನೆ ನಂ. 38/2020 ಕಲಂ. 87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!