ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-08-2019

By blogger on ಶನಿವಾರ, ಆಗಸ್ಟ್ 17, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-08-2019 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 172/2019 ಕಲಂ 323,324,504,506 ಐ.ಪಿ.ಸಿ:- ದಿನಾಂಕ:17-08-2019 ರಂದು 1-45 ಪಿ..ಎಂ.ಕ್ಕೆ ಠಾಣೆಯಯಲ್ಲಿದ್ದಾಗ ಶ್ರೀ ವೆಂಕಟೇಶ ತಂದೆ ಮರೆಪ್ಪ ಬಿರೆದಾರ ವಯಾ:29 ವರ್ಷ ಉ:ಡ್ರೈವರ ಜಾತಿ:ಬೇಡರ ಸಾ:ಚೌಡೇಶ್ವರಿಹಾಳ ತಾ:ಸುರಪೂರ ಈತನು ಠಾಣೆಗೆ ಬಂದು ಹಾಜರಾಗಿ ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:17-08-2019 ರಂದು ಎಂದಿನಂತೆ ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಮ್ಮೂರ ಚೌಡೇಶ್ವರಹಾಳ ಶ್ರೀ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ನನ್ನ ಕ್ರೋಜರವಾಹನವನ್ನು ಪಾಳೆಗೆ ನಿಲ್ಲಿಸಿದೆನು. ನನಗಿಂತ ಮುಂಚೆ ಸ್ಟ್ಯಾಂಡಿಗೆ ಅಟೋ ತಂದು ನಿಲ್ಲಿಸಿದ್ದ ಸಿದ್ದಾಪೂರ ಗ್ರಾಮದ ಗೌಡಪ್ಪಗೌಡ ಈತನ ಅಟೋ 10-30 ಎ.ಎಂ.ಕ್ಕೆ ಅಲ್ಲಿಂದ ತಗಿಯಬೇಕಾಗಿದ್ದು, ಅವನಿಗೆ ಬೆರೊಂದು ಕಡೆ ಬಾಡಿಗೆ ಬಂದಿದ್ದರಿಂದ ಅವನು ಅಲ್ಲಿಂದ ಅಟೋ ತಗೆದುಕೊಂಡು ಹೋದನು. ಆಗ ನಾನು ನನ್ನ ಕ್ರೋಜರ ವಾಹನವನ್ನು ಪಾಳೆಗೆ ನಿಲ್ಲಸಿ ಗಾಡಿಯ ಸೈಡಿಗೆ ನಿಂತಿದ್ದೆನು. ಆಗ ನಮ್ಮೂರ ಸಾಬಯ್ಯಾ ತಂದೆ ಮರೆಪ್ಪ ಬಾಗೂರ ಈತನು ಬಂದವನೆ ಗೌಡಪ್ಪಗೌಡ ನಮ್ಮ ಅಳಿಯನಾಗುತ್ತಿದ್ದ ಅವನಿಗೆ ಬೆರೆ ಕಡೆ ಬಾಡಿಗೆ ಬಂದಿದೆ ಅವನ ಪಾಳೆ ನಾನು ಹೋಗುತ್ತೆನೆ ನಿನ್ನ ಕ್ರೋಜರ ವಾಹನ ತಗಿ ನನ್ನ ಅಟೋ ನಿಲ್ಲಿಸಬೇಕು ಅಂತಾ ನನ್ನೊಂದಿಗೆ ಜಗಳ ತಗೆಯುತ್ತಿರುವಾಗ ನಾನು ಅವನಿಗೆ ಗೌಡಪ್ಪಗೌಡನ ಪಾಳೆ ಈಗಾಗಲೆ ಮುಗಿದಿದೆ ಈ ಸಧ್ಯ ನಂದು ಪಾಳಿ ಇರುತ್ತದೆ ನಾನು ನಿನ್ನ ಅಟೋಗೆ ಪಾಳೆ ಹಚ್ಚಲು ಬಿಡುವದಿಲ್ಲ ಅಂತಾ ಅಂದಿದ್ದಕ್ಕೆ  ಸಾಭಯ್ಯಾ ಈತನು ಎಲೇ ಬೊಸಡಿ ಮಗನೆ ವೆಂಕ್ಯಾ ನಿಂದು ಬಹಳ ಆಗಿದೆ ಅಂತಾ ನನ್ನ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕಾಲಿನಿಂದ ಒದ್ದವನೆ ತನ್ನ ಅಟೋದಲ್ಲಿ ಇಟ್ಟಿದ್ನೊಂದು ಬಡಿಗೆಯನ್ನು ತಗೆದುಕೊಂಡು ಬಂದವನೆ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿ ನನ್ನ ಎಡಗಾಲಿನ ತೊಡೆಗೆ ಹೊಟ್ಟೆಗೆ ಬಡಿಗೆಯಿಂದ ಹೊಡೆದು ಗುಪ್ತಗಾಯ ಪಡಿಸಿ ಹೊಡೆ ಬಡೆ ಮಾಡುತ್ತಿರುವಾಗ ಅಲ್ಲೆ ಇದ್ದ ನಮ್ಮೂರ ಗೊವಿಂದ ತಂದೆ ಗಾಳೆಪ್ಪ ಕರಿಗುಡ್ಡ, ಹಣಮಂತ್ರಾಯ ತಂದೆ ಮಾನಶಪ್ಪ ಮಕಾಶಿ, ಮತ್ತು ನಮ್ಮ ಅಣ್ಣನಾದ ರಂಗಪ್ಪ ತಂದೆ ಮರೆಪ್ಪ ಬಿರೆದಾರ ಅಣ್ಣತಮಕಿಯಾದ ನರಸಪ್ಪ ತಂದೆ ತಿಪ್ಪಯ್ಯಾಗೌಡ ಬಿರೆದಾರ, ತಿರುಪತಿ ತಂದೆ ಶೇಳ್ಳಿಗೆಪ್ಪ ಬಿರೆದಾರ ಇವರು ಬಂದು ಜಗಳ ಬಿಡಿಸಿದರು. ಆಗ ಅವನು ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ಜೀವ ಸಹೀತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋದನು. ನಂತರ ನನ್ನನ್ನು ನಂತರ ನಮ್ಮ ಅಣ್ಣತಮಕಿಯವರು ನನ್ನನ್ನು ನಮ್ಮ ಕ್ರೋಜರ ವಾಹನದಲ್ಲಿಯೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಮಾಡಿಸಿದ್ದು ಇರುತ್ತದೆ. ನಾನು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಠಾಣೆಗೆ ತಡವಾಗಿ ಬಂದಿದ್ದು ಇರುತ್ತದೆ. ನನಗೆ ಅವಾಚ್ಯ ಬೈದು ಬಡಿಗೆಯಿಂದ ಹೊಡೆ ಬಡೆ ಮಾಡಿ ರಕ್ತಗಾಯಗೊಳಿಸಿದ ಸಾಬಯ್ಯಾ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿ ಟೈಪ ಮಾಡಿಸಿದ್ದು ನಿಜವಿರುತ್ತದೆ ಅಂತಾ  ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 91/2019 ಕಲಂ: 78(3) ಕೆಪಿ ಯಾಕ್ಟ:- ದಿನಾಂಕ: 17.08.2019 ರಂದು 15.00 ಘಂಟೆಗೆ ಶ್ರೀ ಬಾಳನಗೌಡ ಪಿ.ಎಸ್.ಐ ರವರು ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ 17.08.2019 ರಂದುಯ 13.00 ಘಂಟೆಗೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಕೆಂಭಾವಿಯ ಪಟ್ಟಣದ ಯಾಳಗಿ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ  ನಾನು ಠಾಣೆಯ ಸಿಬ್ಬಂದಿಯವರಾದ ಬಲರಾಮ ಹೆಚ್.ಸಿ-146 ಮತ್ತು ಭೀರಪ್ಪ ಪಿಸಿ 195  ರವರಿಗೆ ಕರೆದು ಬಾತ್ಮಿ ವಿಷಯ ತಿಳಿಸಿ ಭೀರಪ್ಪ ಪಿಸಿ 195 ರವರಿಂದ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ  ವ|| 36 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 46 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ 13.30 ಘಂಟೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ ಹೊರಟು ಯಾಳಗಿ ಕ್ರಾಸ ಹತ್ತಿರ 13.45 ಘಂಟೆಗೆ ಹೋಗಿ ಜಾಲಿ ಗಿಡದ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 13.50 ಘಂಟೆಗೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಶರಣಗೌಡ ತಂದೆ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ ವ|| 52 ಜಾ|| ಹಿಂದುರೆಡ್ಡಿ  ಉ|| ಕೂಲಿಕೆಲಸ  ಸಾ|| ಯಾಳಗಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 520/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಸದರಿಯವನಿಗೆ ಮಾನ್ಯ ಪಿ.ಎಸ್.ಐ ಸಾಹೇಬರು ಸದರಿಯವನಿಗೆ ಓಸಿ ಮಟಕಾ ಜೂಜಾಟ ನಂಬರ ಬರೆದ ಪಟ್ಟಿ ಯಾರಿಗೆ ಕೊಡುತ್ತಿ ಅಂತಾ ಕೆಳಿದಾಗ ಆತನು ಶಾಂತಗೌಡ ಅಸ್ಕಿ ಈತನಿಗೆ ಕೊಡುತ್ತೇನೆ ಅಂತಾ ತಿಳಿಸಿರುತ್ತಾನೆ. ಇವುಗಳನ್ನು 13.50 ಘಂಟೆಯಿಂದ 14.50 ಘಂಟೆಯವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡೆನು. ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 15.00 ಘಂಟೆಗೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು ಇರುತ್ತದೆ. ಸದರಿ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಠಾಣಾ ಗುನ್ನೆ ನಂಬರ 91/2019 ಕಲಂ 78[3] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
                                                                                       
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 92/2019 ಕಲಂ: 143, 147, 323, 447, 354, 504,506 ಸಂಗಡ 149 ಐಪಿಸಿ:-ಪಿರ್ಯಾದಿ ಹಾಗೂ ಆರೋಪಿತರ ಮದ್ಯ ಹೊಲ ಸವರ್ೇ ನಂ 132 ನೇದ್ದರ ವಿಷಯದಲ್ಲಿ ತಕರಾರು ಇದ್ದು, ದಿನಾಂಕ: 16/08/2019 ರಂದು ಪಿರ್ಯಾಧಿದಾರರು ತಮ್ಮ ಹೊಲ ಸವರ್ೇ ನಂ 132 ನೇದ್ದರಲ್ಲಿ ಇದ್ದಾಗ ಆರೋಪಿತರು ಗುಂಪುಕಟ್ಟಿಕೊಂಡು ಬಂದು ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಏನಲೇ ಸೂಳಿ ವಿಮಲಿ ಇದು ನಮ್ಮ ಹೊಲ ಇಲ್ಲಿ ಏಕೆ ಬಂದಿರುವಿ ಅಂತ ಅಂದಾಗ ಪಿರ್ಯಾದಿ ಇದು ನಮ್ಮ ಹೊಲ ಇದರಲ್ಲಿ ನನ್ನು ಪಾಲೂ ಇದೆ ಅಂತ ಅಂದಾಗ ಎಲ್ಲರೂ ಈ ಸೂಳೆಯದು ಸೊಕ್ಕು ಬಾಳ ಇದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ನಾನಾಗೌಡ ಈತನು ತನ್ನ ಕೈಯಲ್ಲಿದ್ದ ಹಗ್ಗದಿಂದ ತಲೆಗೆ ಹೆಡಕಿಗೆ ಹೊಡೆದು ಗುಪ್ತಗಾಯ ಮಾಡಿದ್ದು, ಶ್ಯಾಮರಾಜಗೌಡ ಈತನು ಕೂದಲು ಹಿಡಿದು ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಅಲ್ಲದೆ ಎಲ್ಲರೂ ಜೀವದ ಬೆದರಿಕೆ ಹಾಕಿ ಹೋಗಿದ್ದು ಕೇಸಿನ ಸಂಕ್ಷಿಪ್ತ ಸಾರಾಂಶ 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!