ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-07-2019

By blogger on ಗುರುವಾರ, ಜುಲೈ 18, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-07-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 59/2019 ಕಲಂ 379 ಐಪಿಸಿ:-ಫಿಯರ್ಾದಿ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು, ಕುಲಕಸಬು ಹಂದಿ ಸಾಕುವ ಕೆಲಸ ಮಾಡಿಕೊಂಡು ಇರುತ್ತೇನೆ. ಒಂದೊಂದು ಏರಿಯಾದ ಹಂದಿಗಳು, ನಮ್ಮ ಜನಾಂಗದ ಒಬ್ಬೊಬ್ಬರು ಹಂಚಿಕೊಂಡಿದ್ದು ಇರುತ್ತದೆ. ನನ್ನ ಹಂದಿಗಳು ಯಾದಗಿರಿ ನಗರದ ಯಂಡಗಾರ ಅಗಸಿ, ಕೊಟಗರವಾಡಾ, ಗಂಜ್ ಏರಿಯಾ, ಹೊಸಳ್ಳಿ ಕ್ರಾಸ್ ಮತ್ತು ರಾಜೀವಗಾಂಧಿ ನಗರದಲ್ಲಿ ಇರುತ್ತವೆ. ಎಲ್ಲರು ತಮ್ಮ ತಮ್ಮ ಹಂದಿಗಳಿಗೆ ತಮ್ಮದೇಯಾದ ನಿಶಾನೆ (ಗುತರ್ು) ಮಾಡಿರುತ್ತಾರೆ. ಅದರಂತೆ ನಮ್ಮ ಹಂದಿಗೆ ನಾನು ಹಂದಿ ಕಿವಿಗೆ ಚಾಕುವಿನ ಆಕಾರದಲ್ಲಿ ಗುತರ್ು ಮಾಡಿರುತ್ತೇನೆ. ಸದರಿ ಹಂದಿಗಳನ್ನು ನಾವು ದಿನಾಲು ಏರಿಯಾದಲ್ಲಿ ಹೋಗಿ ನಿಗಾವಹಿಸುತ್ತೇವೆ. ಪ್ರತಿ ನಿತ್ಯದಂತೆ ನಾನು ದಿನಾಂಕ 11/07/2019 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ನಮ್ಮ ಹಂದಿಗಳನ್ನು ನೋಡಿಕೊಂಡು ಬಂದರಾಯಿತು ಅಂತಾ ಗಂಜ್ ಏರಿಯಾದ ಮೌನೇಶ್ವರ ಗುಡಿಯ ಹತ್ತಿರ ಕಡೆ ಹೋದಾಗ ನಮಗೆ ಸೇರಿದ ಸುಮಾರು 50 ಹಂದಿಗಳು ಇದ್ದವು. ನಂತರ ದಿನಾಂಕ 12/07/2019 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಗಂಜ್ ಏರಿಯಾದಲ್ಲಿ ಹಂದಿಗಳು ನೋಡಿಕೊಂಡು ಬರಲು ಹೋದಾಗ ನಮಗೆ ಸೇರಿದ ಸುಮಾರು 10 ಹಂದಿಗಳು ಇರಲಿಲ್ಲ. ಯಾರೋ ಕಳ್ಳರು ನಮ್ಮ ಹಂದಿಗಳನ್ನು ಕದ್ದುಕೊಂಡು ಹೋದಂತೆ ಕಂಡು ಬಂದಿರುತ್ತದೆ. 10 ಹಂದಿಗಳ ಅಂದಾಜು ಕಿಮ್ಮತ್ತು 45,000/ ರೂಪಾಯಿಗಳು. ನಮ್ಮ ಹಂದಿಗಳನ್ನು ಪತ್ತೆಮಾಡಿ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಇಲ್ಲಿಯ ವರೆಗೆ ನಾವು ಅಲ್ಲಿ ಅಲ್ಲಿ ಹುಡುಕಾಡಿದರೂ ನಮ್ಮ ಹಂದಿಗಳು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಹೇಳಿ ಗಂಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ ನಿಜವಿದೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 59/2019 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.   

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 60/2019 ಕಲಂ 78(3) ಕೆ.ಪಿ ಎಕ್ಟ್ :- ದಿನಾಂಕ.18/07/2019 ರಂದು 2-45 ಪಿಎಮ್ ಕ್ಕೆ ನಾನು ದಿನಚರಿ ಕರ್ತವ್ಯದಲ್ಲಿದ್ದಾಗ ಶ್ರೀ ಬಾಪುಗೌಡ ಪಾಟೀಲ ಪಿ.ಎಸ್.ಐ(ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಮೂರು ಜನ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಗೂ  ಜ್ಞಾಪನಾ  ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:18/07/2019 ರಂದು 1-00 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿಯ ವಾಲ್ಮೀಕಿ ನಗರದ ಮಶಮ್ಮ ದೇವಾಸ್ಥಾನ ಹತ್ತಿರ ಯಾರೋ ಮೂರು ಜನರು ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ ಹೋಗಿ ನೋಡಿ ಖಾತ್ರಿ ಪಡಿಸಿಕೊಂಡು 1-30  ಪಿಎಂಕ್ಕೆ ದಾಳಿ ಮಾಡಿ ಹಿಡಿದು ಅವರ ಹೆಸರು ವಿಚಾರಿಲಾಗಿ 1) ತಿಮ್ಮಣ್ಣ ತಂದೆ ಬಸಪ್ಪ ಬಗಲಿ ವಯಾ:45 ಜಾತಿ:ಬೇಡರ ಉ:ಮಟ್ಕಾ ಬರೆದುಕೊಳ್ಳುವುದು ಸಾ;ವಾಲ್ಮೀಕಿ ನಗರ ಯಾದಗಿರಿ 2) ಬಸವರಾಜ ತಂದೆ ಬಸಪ್ಪ ಬಗಲಿ ವಯಾ:38 ಜಾತಿ:ಬೇಡರ ಉ:ಮಟ್ಕಾ ಬರೆದುಕೊಳ್ಳುವುದು ಸಾ: ವಾಲ್ಮೀಕಿ ನಗರ ಯಾದಗಿರಿ 3) ರಫಿಕ್ ತಂದೆ ಮಹಿಬೂಬಸಾಬ ದಂಡೋತಿ ವಯಾ:41 ಜಾತಿ:ಮುಸ್ಲಿಂ ಉ:ಆಟೋ ಡ್ರೈವರ ಸಾ: ಕಸಾಬವಾಡಿ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವರಿಗೆ ಚೆಕ್ ಮಾಡಲಾಗಿ ಅವರ ಹತ್ತಿರ ನಗದು ಹಣ 1) 25,380=00 ರೂ. 2) ಎರಡು ಬಾಲಪೆನಗಳು ಅ.ಕಿ.00=00 3) ನಾಲ್ಕು ಮಟಕಾ ಚೀಟಿಗಳು ಅ.ಕಿ.00=00 ರೂ.ಗಳು ಸಿಕ್ಕಿದ್ದು, ಇವುಗಳನ್ನು ಮುಂದಿನ ಪುರಾವೆ ಕುರಿತು ಒಂದು ಕಾಗದದ ಪಾಕೆಟದಲ್ಲಿ ಹಾಕಿ ಕಟ್ಟಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ  ನಮ್ಮ ತಾಬೆಗೆ ತೆಗೆದುಕೊಂಡು. ಜಪ್ತಿ ಪಂಚನಾಮೆಯನ್ನು 1-30  ಪಿಎಂ ದಿಂದ 2-30  ಪಿಎಂ ದವರೆಗೆ ಮುಗಿಸಿ ನಂತರ ಆರೋಪಿತರು ಮತ್ತು ಮುದ್ದೆ ಮಾಲಿನೊಂದಿಗೆ ಯಾದಗಿರಿ ನಗರ ಪೊಲೀಸ್ ಠಾಣೆಗೆ 2-45 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ  ಜ್ಞಾಪನ ಪತ್ರ ನೀಡಿ, ಜಪ್ತಿ ಪಂಚನಾಮೆ, ಮುದ್ದೆ ಮಾಲು ಮತ್ತು ಆರೋಪಿತರನ್ನು ಹಾಜರುಪಡಿಸಿ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಕ್ರಮ ಕೈಕೊಳ್ಳಲು ಸೂಚಿಸಿದ್ದರ ಮೇಲಿಂದ ನಾನು ಇಂದು ದಿನಾಂಕ.18/07/2019 ರಂದು 5-30 ಪಿಎಂಕ್ಕೆ ಪಡೆದುಕೊಂಡು ಮರಳಿ ಠಾಣೆಗೆ 5-45 ಪಿಎಂಕ್ಕೆ ಬಂದು ಹಾಜರಪಡಿಸಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪರವಾನಿಗೆ ಮೇಲಿಂದ ಠಾಣೆ ಗುನ್ನೆ ನಂ.60/2019 ಕಲಂ.78(3) ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೊರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 152/2019 ಕಲಂ: 87 ಕೆ.ಪಿ.ಕಾಯ್ದೆ:- ದಿನಾಂಕ:18-07-2019 ರಂದು1-45ಎ.ಎಂ.ಕ್ಕೆಠಾಣೆಯಎಸ್ಹೇಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಆನಂದರಾವ್ಎಸ್.ಎನ್. ಪಿ ಐಸಾಹೇಬರು7ಜನಆಫಾಧಿತರೊಂದಿಗೆ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ: 18-07-2019 ರಂದು12-15 ಪಿ.ಎಂ. ಸುಮಾರಿಗೆಸತ್ಯಂಪೇಠಏರಿಯಾದ ನಂದಿ ವೇ ಬ್ರಿಡ್ಜ ಹತ್ತಿರ ಸಾರ್ವಜನಿಕರಸ್ತೆಯ ಪಕ್ಕದಖುಲ್ಲಾ ಸ್ಥಳದಲ್ಲಿ1) ಆನಂದತಂದೆ ಭೀಮಣ್ಣ ವಿಶ್ವಕರ್ಮ ವಯಾ:42 ವರ್ಷ ಉ:ಒಕ್ಕಲುತನ ಜಾ:ವಿಶ್ವಕರ್ಮ ಸಾ:ಲಕ್ಷ್ಮೀಪೂರ2) ರಾಮಕೃಷ್ಣತಂದೆ ಬಸಪ್ಪದೇಸಾಯಿ ವಯಾ:32 ವರ್ಷಜಾ:ಬೇಡರು ಉ:ವ್ಯಾಪಾರ ಸಾ:ಡೊಣ್ಣಿಗೇರಾ ಸುರಪುರ3) ಬಲಭೀಮತಂದೆಕನಕಪ್ಪ ಪೂಜಾರಿ ವಯಾ:32ವರ್ಷ ಉ:ಕೂಲಿಕೆಲಸ ಜಾ:ಕ್ವರವರು ಸಾ:ದೇವಿಕೇರಿ 4) ಯಲ್ಲಪ್ಪತಂದೆ ಹಣಮಂತಕಡಿಮನಿ ವಯಾ:48 ವರ್ಷ ಉ:ಕೂಲಿ ಜಾ:ಮಾದಿಗ ಸಾ:ಲಕ್ಷ್ಮೀಪೂರ5) ಬಸವರಾಜತಂದೆದೇವಿಂದ್ರಪ್ಪ ಹುದ್ದಾರ ವಯಾ:26 ವರ್ಷ ಉ:ಕೂಲಿ ಜಾ:ಕುರುಬರ ಸಾ:ಹುದ್ದಾರಓಣಿ ಸುರಪುರ6) ಭಾಗಣ್ಣತಂದೆತಿಪ್ಪಣ್ಣಯಾದಗಿರಿ ವಯಾ:35 ವರ್ಷ ಉ:ಕೂಲಿ ಜಾ:ಕಬ್ಬಲಿಗ ಸಾ:ರತ್ತಾಳ 7) ಮಹೇಶ ತಂದೆ ವೀರಣ್ಣಕಂಬಾರ ವಯಾ:25 ವರ್ಷ ಉ:ವ್ಯಾಪಾರ ಜಾ:ವಿಶ್ವಕರ್ಮ ಸಾ:ದೇವಿಕೇರಾಎಲ್ಲರೂದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದಅಂದರ್ -ಬಾಹರ್ ವೆಂಬ ಜೂಜಾಟಆಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿಕ್ರಮಜರುಗಿಸಲು ವರದಿ ನಿಡಿದ್ದುಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 153/2019 ಕಲಂ. 143,147,341,323,504,506 ಸಂಗಡ 149 ಐ.ಪಿ.ಸಿ ಹಾಗು 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989:- ದಿನಾಂಕಃ 18/07/2019 ರಂದು 1-15 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀ ಬಸವರಾಜ ತಂದೆ ಫಕೀರಪ್ಪ ದೊಡ್ಡಮನಿ ಜಾತಿ: ವಾಲ್ಮೀಕಿ, ಸಾ: ಹಿಂಡಸಗೇರಿ ತಾ: ಕಲಘಟಗಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾಧಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ಅಕ್ಕನ ಮಗಳಾದ ಲಕ್ಷ್ಮೀ ತಂದೆ ಕರಬಸಪ್ಪ ಬೆಂಗೇರಿ ಇವರು ಒಂದು ವಾರದ ಹಿಂದೆ ಕಲಬುರಗಿಯಲ್ಲಿರುವ ನನ್ನ ತಂಗಿ ಮನೆಗೆ ಹೋಗಿದ್ದರು. ಆದ್ದರಿಂದ ಆಕೆಗೆ ಕರೆದುಕೊಂಡು ಹೋಗಬೆಕೆಂದು ದಿನಾಂಕಃ 13/07/2019 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ನಾನು ನಮ್ಮ ಕಾರ ನಂಬರ ಕೆ.ಎ 25 ಸಿ 9318 ನೇದ್ದರಲ್ಲಿ ಚಾಲಕನಾದ ರಮೇಶ ತಂದೆ ಗುರುಸಿದ್ದಪ್ಪ ಮಾಗಳದ ಸಾ: ಹಳಿಯಾಳ ಹಾಗು ನನ್ನ ಸ್ನೇಹಿತನಾದ ರಾಮಪ್ಪ ತಂದೆ ಕೆಂಚಪ್ಪ ಹೊನ್ನಳ್ಳಿ ಸಾಃ ಬೆಲವಂತರ ಇವರನ್ನು ಕರೆದುಕೊಂಡು ಹಿಂಡಸಗೇರಿಯಿಂದ ಕಲಬುರಗಿಗೆ ಹೋಗಿ, ಅಲ್ಲಿಂದ ನನ್ನ ಅಕ್ಕನ ಮಗಳಾದ ಲಕ್ಷ್ಮೀ ಇವಳನ್ನು ನಮ್ಮ ಕಾರಿನಲ್ಲಿ ಕೂಡಿಸಿಕೊಂಡು ನಾವು ಮೂರು ಜನರು ಕಲಬುರಗಿಯಿಂದ ಮರಳಿ ನಮ್ಮೂರಿಗೆ ಹೋಗುವ ಸಲುವಾಗಿ ರಾತ್ರಿ 11 ಗಂಟೆಯ ಸುಮಾರಿಗೆ ಮರಳಿ ಹೊರಟೇವು. ನಾವು ಶಹಾಪೂರ, ಹತ್ತಿಗೂಡೂರ ಮಾರ್ಗವಾಗಿ ಸುರಪೂರಕ್ಕೆ ಬರುವಾಗ ದಿನಾಂಕಃ 14/07/2019 ರಂದು 00-30 ಗಂಟೆಯ ಸುಮಾರಿಗೆ ಸುರಪೂರ ತಾಲೂಕಿನ ಲಕ್ಷ್ಮೀಪೂರ ಕ್ರಾಸ್ ಸಮೀಪದಲ್ಲಿರುವ ದಾಬಾ ಹತ್ತಿರ ಚಹಾ ಕುಡಿಯಲು ನಾವು ರಸ್ತೆಯ ಪಕ್ಕದಲ್ಲಿ ದಾಬಾದ ಮುಂದೆ ಕಾರನ್ನು ನಿಲ್ಲಿಸಿ, ನಾನು ಕಾರಿನಿಂದ ಇಳಿದು ದಾಬಾದ ಹತ್ತಿರ ಹೋಗಿ ವಿಚಾರಿಸಲಾಗಿ ಆಗ ದಾಭಾದವರು ರಾತ್ರಿ ಬಹಳ ಹೊತ್ತಾಗಿದೆ, ಚಹಾ ಊಟ ಏನು ಇಲ್ಲಾ ಅಂತ ಹೇಳಿದ್ದರಿಂದ ನಾನು ಮರಳಿ ನಮ್ಮ ಕಾರ ಕಡೆಗೆ ಬರುತ್ತಿರುವಾಗ ಅದೇ ಹೊತ್ತಿಗೆ ಹಿಂಡಸಗೇರಿ ಸಿಮಾಂತರದಲ್ಲಿ ನಾವು ಸಾಗುವಳಿ ಮಾಡುತ್ತಿರುವ 14 ಎಕರೆ ಜಮೀನಿನ ವಿಷಯವಾಗಿ ಸುಮಾರು 18-20 ವರ್ಷಗಳಿಂದ ನಮ್ಮೊಂದಿಗೆ ಆಸ್ತಿ ವಿಷಯವಾಗಿ ತಕರಾರು ಮಾಡುತ್ತ ವೈಷಮ್ಯ ಹೊಂದಿರುವ 1) ಗಿರಿಧರ ಜೋಷಿ ಜಾತಿ: ಬ್ರಾಹ್ಮಣ ಸಾ: ಹುಲಕೋಟಿ ತಾಃ ಗದಗ, 2) ಕಲಾವತಿ ಗಂಡ ಗಿರಿಧರ ಜೋಶಿ ಸಾ: ಹುಲಕೋಟಿ, 3) ರಾಜು ತಂದೆ ದೇವರಾಯ ಪಾಟೀಲ್ ಜಾತಿಃ ಬ್ರಾಹ್ಮಣ, ಸಾ: ವಿಶ್ವೇಶ್ವರ ನಗರ ಹುಬ್ಬಳ್ಳಿ, 4) ಬೇತಾಳಭಟ್ಟ ತಂದೆ ರಮಾನಾಥಭಟ್ಟ ಜಾತಿಃ ಬ್ರಾಹ್ಮಣ ಸಾ: ಅಶೋಕ ನಗರ ಹುಬ್ಬಳ್ಳಿ, 5) ಭಾಗ್ಯಶ್ರೀ ತಂದೆ ಭಾವುಸೋ ಚೌಗಲೇ ಸಾ: ಅಶೋಕ ನಗರ ಹುಬ್ಬಳ್ಳಿ, 6) ಸಂಜುನಾಯಕ ಜಾತಿಃ ಬ್ರಾಹ್ಮಣ ಸಾಃ ಎಲಿಮನೋಳ್ಳಿ ತಾಃ ಹುಕ್ಕೇರಿ, ಜಿಲ್ಲೆ ಬೆಳಗಾವಿ ಇವರು ದಾಬಾದ ಹತ್ತಿರ ಬಂದು ಕಾರ ನಿಲ್ಲಿಸಿ ಇಳಿದು ಒಮ್ಮೆಲೆ ನನಗೆ ನೋಡಿ ಅವರಲ್ಲಿ ಗಿರಿಧರ ಜೋಶಿ, ರಾಜು ಪಾಟೀಲ್, ಬೇತಾಳಭಟ್ಟ ಹಾಗು ಸಂಜುನಾಯಕ ಇವರೆಲ್ಲರೂ ಲೇ ವಾಲ್ಮೀಕಿ, ಬ್ಯಾಡರ ಕೀಳು ಜಾತಿಯ ಭೋಸಡಿ ಮಗನೇ, ನಿನ್ನ ತಾಯಿನ ಹಡಾ, ನಮ್ಮ ಹೊಲ ನಮಗೆ ಬಿಡದೇ ಕೋಟರ್ಿನಲ್ಲಿ ಕೇಸ್ ಹಾಕುತ್ತಿಯಾ ಮಗನೇ, ಇವತ್ತು ನಿನಗೆ ಕೊಂದೇ ಬಿಡುತ್ತೇವೆ ಅಂತ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಬೈಯ್ಯುತ್ತ 4 ಜನರು ಕೂಡಿ ನನ್ನ ಅಂಗಿ ಹಿಡಿದು ಎಳೆದಾಡಿ ನನಗೆ ನೆಲಕ್ಕೆ ಕೆಡವಿ ಎದೆಗೆ, ಹೊಟ್ಟೆಗೆ ಹಾಗು ಬಲಮೊಣಕೈಗೆ ಒದ್ದು ಗುಪ್ತಗಾಯ ಪಡಿಸಿರುತ್ತಾರೆ. ಕಲಾವತಿ ಹಾಗು ಭಾಗ್ಯಶ್ರೀ ಇಬ್ಬರೂ ಬಂದು ಕಾರಿನಲ್ಲಿ ಕುಳಿತಿದ್ದ ನನ್ನ ಅಕ್ಕನ ಮಗಳಾದ ಲಕ್ಷ್ಮೀ ಇವಳ ಕುದಲು ಹಿಡಿದು ಕಾರಿನಿಂದ ಹೊರಗಡೆ ಎಳೆದು ನೆಲಕ್ಕೆ ಕೆಡವಿ ಕೈಯಿಂದ ಹೊಡೆದು ನಂತರ ಇಬ್ಬರೂ ಕಾಲಿನಿಂದ ಹೊಟ್ಟೆಗೆ, ಗುಪ್ತಾಂಗದ ಮೇಲೆ ಮತ್ತು ಬಲಪಕ್ಕಡಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಅವರು ಹೊಡೆದಿದ್ದರಿಂದ ಲಕ್ಷ್ಮೀ ಇವಳ ತಲೆಯ ಹಿಂಭಾಗದಲ್ಲಿ ಗುಪ್ತಗಾಯವಾಗಿ ಗುಮಟಿ ಬಂದಿರುತ್ತದೆ. ಹಾಗು ಗಿರಿಧರ ಜೋಷಿ ಇತನು ನನಗೆ ಲೇ ಬಸ್ಯಾ ಬ್ಯಾಡ ಸೂಳೆ ಮಗನೇ ಇವತ್ತು ನಿನಗೆ ಖಲಾಸ ಮಾಡಬೇಕೆಂತಲೇ ನಮ್ಮೆಲ್ಲರ ಮೊಬೈಲ್ ಮನೆಯಲ್ಲಿ ಬಿಟ್ಟು ಬಂದಿದ್ದೇವೆ ಲೇ ಅನ್ನುತ್ತ ಹೊಡೆಯುತ್ತಿದ್ದನು. ಆಗ ನಾವು ಚೀರಾಡುತ್ತಿದ್ದಾಗ ರಮೇಶ ಮಾಗಳದ ಹಾಗು ರಾಮಪ್ಪ ಹೊನ್ನಳ್ಳಿ ಇಬ್ಬರೂ ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಆಗ ಅವರೆಲ್ಲರೂ ಲೇ ವಾಲ್ಮೀಕಿ ಕೀಳು ಜಾತಿಯ ಸೂಳೆ ಮಗನೇ ಹೊಲದ ಕೇಸ್ ವಾಪಸ ಪಡಿದಿ ಅಂದರೇ ಒಳ್ಳೆಯದು, ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇವೆ ಮಗನೇ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ. ಆಗ ನಮಗೆ ಮೈಯಲ್ಲಿ ಬಹಳ ಒಳಪೆಟ್ಟುಗಳಾಗಿದ್ದರಿಂದ ರಾತ್ರಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಪ್ರಥಮೋಪಚಾರ ಮಾಡಿಸಿಕೊಂಡು ಇಲ್ಲಿಂದ ವೈದ್ಯರ ಸಲಹೆ ಮೇರೆಗೆ ಕಲಬುರಗಿ ಸಕರ್ಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದು ಮರುದಿವಸ ಬಿಡುಗಡೆ ಆಗಿ ನಮ್ಮೂರಿಗೆ ಹೋಗಿ ನಂತರ ಮನೆಯಲ್ಲಿ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದಿರುತ್ತೇವೆ ಅಂತ ವಗೈರೆ ಫಿರ್ಯದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 153/2019 ಕಲಂ. 143,147,341,323,504,506 ಸಂಗಡ 149 ಐ.ಪಿ.ಸಿ ಹಾಗು 3(1)(ಆರ್), 3(1)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!