ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 04-05-2019

By blogger on ಶನಿವಾರ, ಮೇ 4, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 04-05-2019 

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 25/2019 498(ಎ), 302 ಸಂಗಡ 34 ಐಪಿಸಿ:- ದಿನಾಂಕ:04.05.2019 ರಂದು ಬೆಳಿಗ್ಗೆ 11:00 ಗಂಟೆಗೆ ಫಿಯಾಧಿ ಶ್ರೀ ಗಂಗಪ್ಪ ತಂದೆ ಜೆಟ್ಟೆಪ್ಪ ಕುರಿ ವಯ:65 ವರ್ಷ, ಜಾ:ಕುರುಬ, ಉ:ಒಕ್ಕಲುತನ, ಸಾ:ಮನ್ಯಾಳ ತಾ:ಹುಣಸಗಿ, ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದುಕೊಂಡು ಬಂದ ಫಿರ್ಯಾದಿ ಅಜರ್ಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ, ನನಗೆ 2 ಜನ ಗಂಡು ಮಕ್ಕಳು, 5 ಜನ ಹೆಣ್ಣು ಮಕ್ಕಳು ಇದ್ದು, ಅವರಲ್ಲಿ ಕೊನೆಯ ಮಗಳಾದ ದೇವಮ್ಮ ಇವಳಿಗೆ ಸುಮಾರು 8 ವರ್ಷಗ ಹಿಂದೆ ಕಾಮನಟಗಿ ಗ್ರಾಮದ ವೀರೇಶ ನಾಯ್ಕೊಡಿ ಈತನಿಗೆ ಕೊಟ್ಟು ಮದುವೆ ಮಾಡಿದ್ದು, ನನ್ನಮಗಳಿಗೆ 2 ಜನ ಹೆಣ್ಣು ಮಕ್ಕಳು 1 ಗಂಡು ಮಗು ಇರುತ್ತದೆ. ನನ್ನ ಮಗಳಿಗೆ ಅಳಿಯ ವೀರೇಶ ಮತ್ತು ಅತ್ತೆ ಸಿದ್ದಮ್ಮ, ಮಾವ ಭೀಮಣ್ಣ ಇವರು 2-3 ವರ್ಷಗಳ ವರೆಗೆ ಚನ್ನಾಗಿ ನೋಡಿಕೊಂಡಿದ್ದು, ನಂತರ ಅವಳ ಗಂಡ ವಿರೇಶ ಮತ್ತು ಅತ್ತೆ, ಮಾವ ಇವರು ನನ್ನ ಮಗಳಿಗೆ ಕೆಲಸ ಮಾಡಲು ಬರುವದಿಲ್ಲ ಅಂತ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಿದ್ದ ಬಗ್ಗೆ ನನ್ನ ಮಗಳಿಗೆ ಆಗಾಗಾ ನಮ್ಮೂರಿಗೆ ಕರೆದುಕೊಂಡು ಬಂದಾಗ ಮನೆಯಲ್ಲಿ ವಿಷುಯ ಹೇಳಿದಾಗ ನಾನು ನನ್ನ ಹೆಂಡತಿ ಮಕ್ಕಳು ನನ್ನ ಮಗಳಿಗೆ ಸಮಾಧಾನ ಹೇಳಿ ಅವಳ ಗಂಡನ ಮನೆಗೆ ಕಳುಹಿಸಿದ್ದೆವು. ಹೀಗೆ ಇರುವಾಗ ದಿನಾಂಕ:03/05/2019 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ನನ್ನ ಅಳಿಯ ನಾಗಪ್ಪ  ಮಗನಾದ ಮುತ್ತಣ್ಣ ಇವರಿಗೆ ದೇವಮ್ಮನ ಹತ್ತಿರ ಹೋಗಿ ಬರ್ರಿ ಏನು ತೊಂದರೆಯಾಗಿದೆ ಅಂತಾ ಹೇಳಿ ಕಳುಹಿಸಿಕೊಟ್ಟಿದ್ದೆನು. ಅಳಿಯ ನಾಗಪ್ಪ, ಮಗ ಮುತ್ತಣ್ಣ ಇವರು ನನ್ನ ಮಗಳ ಹತ್ತಿ ಹೋಗಿ ಕಾಮನಟಗಿ ಗ್ರಾಮದ ಪ್ರಭು ತಂದೆ ಚಂದಪ್ಪ, ನಂದಪ್ಪ ತಂದೆ ಹಣಮಂತ, ಶಿವು ತಂದೆ ಸಂಜೀವಪ್ಪ ಇವರ ಸಮಕ್ಷಮದಲ್ಲಿ ಅಳಿಯ ವಿರೇಶನಿಗೆ ಬುದ್ದಿವಾದ ಹೇಳಿ ದೇವಮ್ಮಳಿಗೆ ತೊಂದರೆ ಕೊಡಬೇಡಿರಿ ಅಂತಾ ಹೇಳಿ ಬಂದು ನನಗೆ ವಿಷಯ ತಿಳಿದರು. ದಿನಾಂಕ:04/03/2019 ರಂದು ನಸಗಿನ ಜಾವ 4 ಗಂಟೆಯ ಸುಮಾರಿಗೆ ಗ್ವಾಸರ ದಿಬ್ಬಿ ಕಾಮನಟಗಿಯಿಂದ ಪ್ರಭು ತಂದೆ ಚಂದಪ್ಪ ಇವರು ನನ್ನ ಅಳಿಯ ನಾಗಪ್ಪನಿಗೆ ಫೋನ್ ಮಾಡಿ ನಿಮ್ಮ ಸೊಸೆಯಾದ ದೇವಮ್ಮಳು ರಾತ್ರಿ ಮನೆಯಲ್ಲಿ ಉರುಲು ಹಾಕಿಕೊಂಡು ಸತ್ತಿರುತ್ತಾಳೆ ಅಂತಾ ತಿಳಿಸಿದ್ದ ವಿಷಯವನ್ನು ನಾಗಪ್ಪನು ನನಗೆ ತಿಳಿಸಿದಾಗ ನಾನು ಗಾಭರಿಗೊಂಡು ಮನೆಯವರಿಗೆ ವಿಷಯ ತಿಳಿಸಿ ನಾನು ನನ್ನ ಹೆಂಡತಿಯಾದ ಸಿದ್ದಮ್ಮ ಮಗನಾದ ಮುತ್ತಣ್ಣ, ಅಳಿಯನಾದ ನಾಗಪ್ಪ ಮತ್ತು ಸಂಬಂಧಿಕಾರದ ಅಯ್ಯಪ್ಪ ತಂದೆ ಗಂಗಪ್ಪ ಹುಡೇದ್, ಹಣಮಂತ್ರಾಯ ತಂದೆ ನಾಗಪ್ಪ ಹಿರೇಕುರುಬರ್ ಎಲ್ಲರೂ ಕೂಡಿಕೊಂಡು ಕಾಮನಟಗಿಯ ಗ್ವಾಸರ ದಿಬ್ಬಿಗೆ ಬಂದು ನನ್ನ ಮಗಳ ಹತ್ತಿರ ಹೋಗಿ ನೋಡಲು ಮಗಳು ದೇವಮ್ಮಳು ಸತ್ತಿದ್ದು ನಿಜವಿತ್ತು. ಮಗಳು ದೇವಮ್ಮಳ ಕುತ್ತಿಗೆಯ ಮುಂಭಾಗದಲ್ಲಿ ಕುತ್ತಿಗೆ ಹಿಸುಕಿ ಸಾಯಿಸಿದ ಕಂದುಗಟ್ಟಿದ ಗುರುತು ಗಾಯವಾಗಿದ್ದು ಇತ್ತು. ನನ್ನ ಮಗಳಿಗೆ ನನ್ನ ಅಳಿಯ ವಿರೇಸ ತಂದೆ ಭೀಮಣ್ಣ ನಾಯ್ಕೊಡಿ ಈತನು ನನ್ನ ಮಗಳಿಗೆ ಕುತ್ತಿಗೆ ಹಿಸುಕಿ ಸಾಯಿಸಿ ಉರುಳು ಹಾಕಿಕೊಂಡು ಸತ್ತಿರುತ್ತಾಳೆ ಅಂತಾ ಸುದ್ದಿ ಹಬ್ಬಿಸಿ ಮನೆಯಿಂದ ಹೋಗಿರುತ್ತಾನೆ. ದಿನಾಂಕ:03/05/2019 ರಂದು ರಾತ್ರಿ ವೇಳೆಯಲ್ಲಿ ಅಳಿಯ ವಿರೇಶ ತಂದೆ ಭೀಮಣ್ಣ ಈತನು ನನ್ನಮಗಳಿಗೆ ಕುತ್ತಿಗೆ ಹಿಸುಕಿ ಸಾಯಿಸಿ ನಂತರ ಪತ್ಲದಿಂದ ಮನೆಯಲ್ಲಿಯ ಕಟ್ಟಿಗೆಯ ಗುಡಿಸಲದಲ್ಲಿ ಉರುಲು ಹಾಕಿದಂತೆ ಮಾಡಿ ಹೆಣವನ್ನು ಕೆಳಗೆ ಹಾಕಿ ಹೋಗಿರುತ್ತಾನೆ. ಅಲ್ಲದೇ ನನ್ನ ಮಗಳಿಗೆ ಅವಳ ಅತ್ತೆ ಸಿದ್ದಮ್ಮ ಗಂಡ ಭೀಮಣ್ಣ, ಮಾವ ಭೀಮಣ್ಣ ಇವರು ಮಾನಸಿಕ ಹಾಗು ದೈಹಿಕ  ಕಿರುಕುಳ  ನೀಡಿದ್ದು, ಕಾರಣ ನನ್ನ ಮಗಳಿಗೆ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಮತ್ತು ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:25/2019 ಕಲಂ:498(ಎ), 302 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಕೊಳ್ಳಲಾಗಿದೆ. 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 73/2019 ಕಲಂ: 143, 147, 148, 323, 324, 504, 506 ಸಂಗಡ 149 ಐಪಿಸಿ ಮತ್ತು ಕಲಂ: 3(1)(ಆರ್)(ಎಸ್)-ಎಸ್ಸಿ/ಎಸ್ಟಿ ಆಕ್ಟ್-1989:- ದಿನಾಂಕ 01.05.2019 ರಂದು ಬೆಳಗಿನ ಜಾವ 04:00 ಗಂಟೆಯ ಸುಮಾರಿಗೆ ಫಿರ್ಯಾದಿಯು ಕೊಟಗೇರಾ ಗ್ರಾಮದ ಮಹಿಬೂಬ ಸುಬಾನಿ ದಗರ್ಾದ ಎಡಭಾಗದಲ್ಲಿ ಸಿಸಿ ರಸ್ತೆಯ ಮೇಲೆ ಗಂಧದ ಮೆರವಣಿಗೆ ಮುಗಿದ ನಂತರ ಹಲಿಗೆ ಬಾರಿಸುತ್ತಿದ್ದು ಆತನ ಸುತ್ತ ಕೋಟಗೇರಾ ಗ್ರಾಮದ ಇತರರು ಕುಣಿಯುತ್ತಿದ್ದರು. ಆಗ ಎ-1 ಈತನು ಲೇ ಮಗನೆ ಹಣಮ್ಯಾ ನಮ್ಮ ಕಡೆಗೆ ಬಂದು ಹಲಿಗೆ ಹೊಡಿಲೆ ಅಂತಾ ಫಿರ್ಯಾದಿಯ ಕೈ ಹಿಡಿದು ಜಗ್ಗಿದು ಫಿರ್ಯಾದಿ ಬರುವುದಿಲ್ಲ ಬೇರೆಯವರನ್ನು ಕರಿಕೊ ಅಂತಾ ಹೇಳಿದಕ್ಕೆ ಎ-1 ಈತನು ಎ-2 ರಿಂದ ಎ-5 ನೇದ್ದವರನ್ನು ಕರೆದುಕೊಂಡು ಬಂದಿದ್ದು ಅವರು ಅವರು ಫಿರ್ಯಾದಿಯ ಕೊಳ್ಳಪಟ್ಟಿ ಹಿಡಿದು ಎಳೆದು ಹರಿದು ಹಾಕಿ, ಕಟ್ಟಿಗೆಯಿಂದ ಫಿರ್ಯಾದಿಯ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿ, ಕಾಲಿನಿಂದ ಮುಖಕ್ಕೆ ಒದ್ದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದಿದ್ದು ಅಲ್ಲದೇ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದವರ ಮೇಲೆ ಕೇಸ್ ಮಾಡು ಬಗ್ಗೆ ಫಿರ್ಯಾದಿಯು  ಮನೆಯಲ್ಲಿ ಹಾಗೂ ಊರಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ 04.05.2019 ರಂದು ಮಧ್ಯಾಹ್ನ 1:00 ಗಂಟೆಗೆ ಗುರುಮಠಕಲ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:73/2019 ಕಲಂ: 143, 147, 148, 323, 324, 504, 506 ಸಂಗಡ 149 ಐಪಿಸಿ ಮತ್ತು ಕಲಂ: 3(1)(ಆರ್)(ಎಸ್)-ಎಸ್ಸಿ/ಎಸ್ಟಿ ಆಕ್ಟ್-1989 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 101/2019 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ. ಆರ್.ಆಕ್ಟ 1957:- ದಿನಾಂಕ:04-05-2019 ರಂದು 9-30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿ ಐ ಸಾಹೇಬರು ಒಂದು ಮರಳು ತುಂಬಿದ ಟಿಪ್ಪರ ಮತ್ತು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:04-05-2019 ರಂದು 06:00 ಎ.ಎಮ್ ಸುಮಾರಿಗೆ  ಠಾಣೆಯಲ್ಲಿದ್ದಾಗ ರುಕ್ಮಾಪೂರ ಕಡೆಯಿಂದ  ಯಾರೋ ತಮ್ಮ ಟಿಪ್ಪರ ವಾಹನದಲ್ಲಿ ಹೇಮನೂರ ಸೀಮಾಂತರದ ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:50 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ 2) ಶ್ರಿ ಮಹೀಬೂಬ ತಂದೆ ಮುಸ್ತಪಸಾಬ ಮಕ್ಕಾ ವಯಾ:27 ವರ್ಷ ಉ:ಡೈವರ್ ಜಾ:ಮುಸ್ಲಿಂ ಸಾ:ರುಕ್ಮಾಪುರ ಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಮತ್ತು ಸಿಬ್ಬಂದಿಯವರಾದ 1) ಶ್ರೀ ಮನೋಹರ ಸಿಹೆಚ್ಸಿ-105 2)  ಸೋಮಯ್ಯ ಸಿ.ಪಿಸಿ-235  ಹಾಗೂ ಜೀಪ ಚಾಲಕನಾದ 3) ಶ್ರೀ ಮಾಹಾಂತೇಶ ಎಪಿಸಿ-48 ಎಲ್ಲರೂ ಕೂಡಿ ಸದರಿ ಪಂಚರೊಂದಿಗೆ ಸರಕಾರಿ ಠಾಣೆಯ ಸರಕಾರಿ ಜೀಪ್ ನಂ: ಕೆಎ-33, ಜಿ-0238 ವಾಹನದಲ್ಲಿ ಠಾಣೆಯಿಂದ 06-30 ಎ.ಎಮ್ಕ್ಕೆ ಹೊರಟು 07:00 ಎ.ಎಮ್ ಕ್ಕೆ ಬೈಪಾಸ ರಸ್ತೆಯ ರುಕ್ಮಾಪೂರ ಕ್ರಾಸ ಶ್ರೀಧರ ದಾಭಾದ ಹತ್ತಿರ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಕುಂಬಾರ ಪೇಠ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ನಮ್ಮ ಜೀಪನ್ನು ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದು ಸದರಿ ಟಿಪ್ಪರನ್ನು ಕೈ ಮಾಡಿ ತಡೆದು ನಿಲ್ಲಿಸಲಾಗಿ ಸದರಿ ಟಿಪ್ಪರ ಚಾಲಕನು ನಾವು ಕೈ ಮಾಡುತ್ತಿದಂತೆ ನಮ್ಮನ್ನು ನೋಡಿ ಸ್ವಲ್ಪ ದೂರದಲ್ಲಿಯೆ ಟಿಪ್ಪರನ್ನು ಸೈಡಿಗೆ ನಿಲ್ಲಿಸಿ ಟಿಪ್ಪರ ಬಿಟ್ಟು ಕೆಳಗೆ ಇಳಿದು ಓಡಿಹೊದನು ಸದರಿ ನಂತರ ನಾವು ಟಿಪ್ಪರ ಹತ್ತಿರ ಹೋಗಿ ಪರೀಶಿಲಿಸಲು ಒಂದು ಬಾರತಬೆಂಜ ಕಂಪನಿಯ ಹೊಸ ಟಿಪ್ಪರ ಇದ್ದು ನಂಬರ ಇರುವದಿಲ್ಲ ಅದರ ಇಂಜಿನ ನಂಬರ-400952ಆ0083530 ಚೆಸ್ಸಿ ನಂಬರ-ಒಈಅ24168ಅಏಕ082800 ನೇದ್ದು ಇರುತ್ತದೆ. ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು, ಅದರ ಅ.ಕಿ 10400/- ರೂಗಳು ಆಗುತ್ತದೆ. ಸದರಿ ಟಿಪ್ಪರ ಚಾಲಕನು ಹೇಮನೂರ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟಿಪ್ಪರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ 07:00 ಎ.ಎಮ್ ದಿಂದ 08-00 ಎ.ಎಮ್ ದವರೆಗೆ ಪಂಚನಾಮೆಯನ್ನು ಬರೆದುಕೊಂಡು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಓಡಿ ಹೋದ ಚಾಲಕನ ಹೆಸರು ನಾಗರಾಜ ತಂದೆ ಅಂಬ್ಲಯ್ಯಾ ನಾಯ್ಕೋಡಿ ವಯಾ:30 ವರ್ಷ ಉ: ಡ್ರೈವರ ಜಾತಿ: ಬೇಡರ ಸಾ: ಬಾಣತಿಹಾಳ ತಾ:ಶಹಾಪೂರ ಅಂತಾ ನಂತರ ಗೊತ್ತಾಗಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟಿಪ್ಪರದಲ್ಲಿ ಒಟ್ಟು 10400/- ರೂ ಕಿಮ್ಮತ್ತಿನ ಅಂದಾಜು 13 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಮರಳು ತುಂಬಿದ ಟಿಪ್ಪರನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ ಅಂತಾ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 74/2019 ಕಲಂ: 143, 147, 148, 323, 324, 307, 109, 504, 506 ಸಂಗಡ 149 ಐಪಿಸಿ:-ದಿನಾಂಕ 01.05.2019 ರಂದು ಬೆಳಿಗಿನ ಜಾವ 04:00 ಗಂಟೆಯ ಸುಮಾರಿಗೆ ಫಿರ್ಯಾದಿದಾರ ಮತ್ತು ಕ್ರ.ಸಂ-2 & 3 ನೇ ಗಾಯಾಳುದಾರರು ಕೋಟಗೇರಾ ಗ್ರಾಮದ ಮಹಿಬೂಬ ಸುಬಾನಿ ದಗರ್ಾದ ಹತ್ತಿರ ಇದ್ದಾಗ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲು-ಕಟ್ಟಿಗೆ ಬಡಿಗೆ ಹಿಡಿದುಕೊಂಡು ಬಂದು ಫಿರ್ಯಾದಿಗೆ ಮತ್ತು ಗಾಯಾಳುದಾರರಿಗೆ ಅವಾಚ್ಯವಾಗಿ ಬೈದು ಕೈಯಿಂದ, ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಕಲ್ಲು ಎತ್ತಿ ಹಾಕಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಹಾಗೂ ಜಗಳವಾಡುವಂತೆ ದುಷ್ಪ್ರೇರಣೆ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿಯು ತನ್ನ ತಂದೆ ಹಾಗೂ ಊರಲ್ಲಿ ಹಿರಿಯರಿಗೆ ವಿಷಯವನ್ನು ತಿಳಿಸಿದ ನಂತರ ತಡವಾಗಿ ಠಾಣೆಗೆ ಬಂದು ಒಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 74/2019 ಕಲಂ: 143, 147, 148, 323, 324, 307, 109, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 66/2019  ಕಲಂ 498(ಎ) ಸಂ 149 ಐ.ಪಿ.ಸಿ & 3 ಮತ್ತು 4 ಡಿ.ಪಿ ಕಾಯ್ದೆ:- ದಿನಾಂಕ 04/05/2019 ರಂದು 8-30 ಪಿ.ಎಂ. ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಹಣಮಂತಿ ಗಂಡ ಮಾನಪ್ಪ ಗೊಲ್ಲರ ಸಾಃ ಬೆಳಗೇರಾ ತಾಃಜಿಃ ಯಾದಗಿರಿ ಹಾಲಿ ವಸತಿ: ಪೇಠ ಅಮ್ಮಾಪೂರ ತಾಃ ಸುರಪೂರ ಜೀಃ ಯಾದಗಿರಿ ಇವರು ಠಾಣೆಗೆ ಬಂದು ಅಜರ್ಿ ಕೊಟ್ಟಿದ್ದೆನೆಂದರೆ ನಾನು ಹಣಮಂತಿ ಗಂಡ ಮಾನಪ್ಪ ಗೊಲ್ಲ ವಯಾ: 28 ವರ್ಷ ಜಾ: ಗೊಲ್ಲ ಉ: ಕೂಲಿಕೆಲಸ ಸಾ: ಬೆಳಗೇರಾ ಹಾ:ವ: ಪೇಠ ಅಮ್ಮಾಪೂರ ಇದ್ದು, ಈ ಮೂಲಕ ಫಿರ್ಯಾಧಿ ಸಲ್ಲಿಸುವದೆನೆಂದರೆ, ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಕೂಲಿಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನನಗೆ ಸುಮಾರು 6 ವರ್ಷಗಳ ಹಿಂದೆ ಬೆಳಗೇರಾ ಗ್ರಾಮದ ನಿವಾಸಿತನಾದ ಮಾನಪ್ಪ ತಂದೆ ಬುಗ್ಗಪ್ಪ ಗೊಲ್ಲ ಇವನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ, ಮದುವೆಯಾಗಿ ಒಂದು ವರ್ಷದವರೆಗೆ ನನ್ನ ಗಂಡ ಮಾನಪ್ಪ ಮತ್ತು ಅವನ ಮನೆಯವರಾದ ನನ್ನ ಅತ್ತೆ ಮಲ್ಲಮ್ಮ ಗಂಡ ಬುಗ್ಗಪ್ಪ ಗೊಲ್ಲ, ಮಾವ ಬುಗ್ಗಪ್ಪ ತಂದೆ ರಾಜೇಂದ್ರ ಗೊಲ್ಲ, ಮೈದುನನಾದ ಸಾಬಣ್ಣ ತಂದೆ ಬುಗ್ಗಪ್ಪ ಗೊಲ್ಲ, ನಾದಿನಿಯರಾದ ಸಾಬಮ್ಮ ತಂದೆ ಬುಗ್ಗಪ್ಪ ಗೊಲ್ಲ ಮತ್ತು ಲಕ್ಷ್ಮಿ ತಂದೆ ಬುಗ್ಗಪ್ಪ ಗೊಲ್ಲ ಇವರೆಲ್ಲರೂ ನನ್ನ ಜೋತೆಗೆ ಅನೊನ್ಯವಾಗಿ ಇದ್ದರು, ಕೆಲವು ತಿಂಗಳುಗಳು ಆದ ನಂತರ ನನಗೆ ಮೊದಲನೇ ಹೆರಿಗೆ ಆಗಿ ಹೆಣ್ಣು ಮಗು ಹುಟ್ಟಿತು, ಆ ಮಗು ಕೆಲವೇ ದಿನಗಳಲ್ಲಿ ಸತ್ತು ಹೋಯಿತು, ನನ್ನ ಎರಡನೇ ಹೇರಿಗೆಗೆ ನಾನು ನನ್ನ ತವರು ಮನೆಗೆ ಹೋದೆನು, ಅಲ್ಲಿ ನನಗೆ ಎರಡನೇ ಹೆಣ್ಣು ಮಗು ಜನನವಾಯಿತು, ನನ್ನ ಎರಡನೇ ಹೆರಿಗೆ ಕುರಿತು ನನ್ನ ಗಂಡನಿಗೆ ವಿಷಯ ತಿಳಿಸಿದಾಗ ನನ್ನ ಗಂಡನು ಸಿಟ್ಟಾಗಿ ನಿನ್ನ್ನನು ಕರೆದುಕೊಂಡು ಬರುವದಿಲ್ಲ, ನೀನು ಹೆಣ್ಣುಮಗುವಿಗೆ ಜನನ ನೀಡಿದೆ, ನೀನು ನಿನ್ನ ತವರು ಮನೆಯಿಂದ ನಮ್ಮ ಮನೆಗೆ ಬರಬೇಕಾದರೆ ನನಗೆ 2 ಲಕ್ಷ ರೂಪಾಯಿ ನಗದು ಹಣ ಮತ್ತು 5 ತೊಲೆ ಬಂಗಾರ ತರಬೇಕು ಇಲ್ಲವಾದರೆ ನಿನ್ನನ್ನು ನಮ್ಮ ಮನೆಗೆ ಕರೆದುಕೊಂಡು ಬರುವದಿಲ್ಲ ಮತ್ತು ನಡೆಸಿಕೊಳ್ಳುವುದಿಲ್ಲವೆಂದು ನನಗೆ ಬೆದರಿಕೆ ಹಾಕಿರುತ್ತಾನೆ, ನನ್ನ ಗಂಡನು ನನ್ನ ಜೋತೆಗೆ ಆಡಿದ ಮಾತನ್ನು ನಾನು ನನ್ನ ತಾಯಿ ನಾಗಮ್ಮ ಗಂಡ ಮಲ್ಲಯ್ಯ ಕೊಕ್ಕಾನೊರ, ನನ್ನ ಕಾಕಾ ಸಣ್ಣಮಲ್ಲಪ್ಪ ತಂದೆ ರಾಯಪ್ಪ ಕೊಕ್ಕಾನೊರ ಮತ್ತು ನನ್ನ ಅಣ್ಣ ರಾಯಪ್ಪ ತಂದೆ ಮಲ್ಲಯ್ಯ ಕೊಕ್ಕಾನೊರ ಇವರಿಗೆ ತಿಳಿಸಿದಾಗ ಅವರು ಇರಲಮ್ಮ ಸ್ವಲ್ಪ ದಿನ ತಾಳು ನಂತರ ನಾವು ಅವನಿಗೆ ಬುದ್ದಿ ಹೇಳುತ್ತೆವೆ ಅಂತಾ ನನಗೆ ಸಮಾಧಾನ ಪಡಿಸಿದರು, ಈ ಮೊದಲು ಕೂಡಾ ನನಗೆ ಆಗಾಗ ನೀನು ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲವಾದರೆ ನನ್ನ ಮನೆಯಲ್ಲಿ ಇರಬೇಡ ಎಂದು ಹೊಡೆಬಡೆ ಮಾಡುತ್ತಿದ್ದನು, ಆದರೂ ಕೂಡಾ ನಾನು ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದನು, ಈ ಮೊದಲನೇಯ ಹೆಣ್ಣು ಜನ್ಮವಾದಾಗ ನನ್ನ ಗಂಡನು ನನ್ನ ಜೋತೆಯಲ್ಲಿ ಜಗಳವಾಡಿದ್ದನು, ಈ ವಿಷಯದ ಬಗ್ಗೆ ನಾಲ್ಕು ಜನ ಹಿರಿಯರನ್ನು ಕೂಡಿಸಿ ಬುದ್ದಿವಾದ ಹೇಳಿದರೂ ಕೂಡಾ ನನ್ನ ಗಂಡನು ಮಾತು ಕೇಳಲಿಲ್ಲ, ಆಗ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದಾಗ ಅಲ್ಲಿ ಪೊಲೀಸ ಅಧಿಕಾರಿಗಳು ನನ್ನ ಗಂಡನಿಗೆ ಕರೆಯಿಸಿ ಆತನಿಗೆ ಬುದ್ದಿ ಹೇಳಿ ಬಂದೋಬಸ್ತ ಮಾಡಿ ನನ್ನ್ನನು ಕಳುಹಿಸಿದರು, ಆಗ ನನ್ನ ಗಂಡನು ಒಂದು ತಿಂಗಳು ಸುಮ್ಮನಿದ್ದರು, ನಂತರ ಆತನು ಮೊದಲಿನ ಚಾಳಿ ಮುಂದುವರೆಸಿ ನನಗೆ ಹೊಡೆಯುವದು ಮತ್ತು ಬೈಯುವದು ಮಾಡ ತೊಡಗಿದನು, ಆಗ ನಾನು ಆತನಿಗೆ ನೀನು ಪದೇ ಪದೇ ವರದಕ್ಷಿಣೆ ತೆಗೆದುಕೊಂಡ ಬಾ ಎಂದು ಕಿರುಕೂಳ ನೀಡಬೇಡ ಮದುವೆಯ ಸಮಯದಲ್ಲಿ ಸಾಕಷ್ಟು ದುಡ್ಡು ನಮ್ಮ ತಂದೆ ತಾಯಿ ಕೊಟ್ಟಿರುತ್ತಾರೆ, ಈಗ ಎಲ್ಲಿಂದ ತಂದು ಕೊಡಬೇಕು ನಮ್ಮ ತಂದೆ ತಾಯಿಯವರು ತುಂಬಾ ಬಡವರಿದ್ದಾರೆ ಎಂದು ಅಂಗಲಾಚಿ ಬೇಡಿಕೊಂಡರು, ಆತನು ಕೇಳದೇ ಲೇ ಬೋಸಡಿ ಸೂಳಿ ನೀನು ನನಗೆ ಹೇಳಕ್ಕೆ ಬರುತ್ತೆನೆ ಎಂದು ನನಗೆ ಮತ್ತೊಷ್ಟು ಕಿರುಕುಳ ನೀಡತೊಡಗಿದನು, ನನ್ನ ಅತ್ತೆಯಾದ ಮಲ್ಲಮ್ಮ ಗಂಡ ಬುಗ್ಗಪ್ಪ ಈಕೆಯು ಇವಳಿಗೆ ಇಷ್ಟೆ ಬಿಟ್ಟರೆ ನಿನ್ನ ಮಾತು ಕೇಳುವದಿಲ್ಲ ಅವಳಿಗೆ ಹೊಡೆದು ವರದಕ್ಷಿಣೆ ತರುವವರೆಗೆ ಮನೆಯೊಳಗೆ ಕರೆದುಕೊಳ್ಳಬೇಡ ಎಂದು ನನ್ನ ಗಂಡನಿಗೆ ಪ್ರಚೋದನೆ ನೀಡುತ್ತಿದ್ದಳು, ಮತ್ತು ನನ್ನ ಮಾವ ಬುಗ್ಗಪ್ಪ ತಂದೆ ರಾಜೇಂದ್ರ ಇತನು ಕೂಡಾ ನೀನು ವರದಕ್ಷಿಣೆ ತರಬೇಕು ಇಲ್ಲವಾದರೆ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುತ್ತೆವೆ, ನೀನು ಮನೆ ಬಿಟ್ಟು ಹೋಗು ನಿನಗ ನಾಚಿಕೆ ಬರುವದಿಲ್ಲ ಏನು ಇಲ್ಲಿ ಇರುವದಕ್ಕೆ ಅಂತಾ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದನು, ನನ್ನ ಮೈದುನನದ ಸಾಬಣ್ಣ ತಂದೆ ಬುಗ್ಗಪ್ಪ ಮತ್ತು ನನ್ನ ನಾದಿನಿಯರಾದ ಸಾಬಮ್ಮ ತಂದೆ ಬುಗ್ಗಪ್ಪ, ಲಕ್ಷ್ಮಿ ತಂದೆ ಬುಗ್ಗಪ್ಪ ಇವರೆಲ್ಲರೂ ಕೂಡಿ ನನಗೆ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದರು, ಪದೇ ಪದೇ ನನಗೆ ಬೈಯ್ಯುವದು, ನೀನು ನಮ್ಮ ಮನೆಯಲ್ಲಿ ಇರಬೇಡ ನಿನ್ನಂತ ದರಿದ್ರ ಸೂಳಿಯನ್ನು ನಮ್ಮ ಅಣ್ಣ ಕಟ್ಟಿಕೊಂಡಿದ್ದಾನೆ, ನೀನು ಬರಿ ಹೆಣ್ಣು ಮಕ್ಕಳು ಹಡಿತಿದ್ದಿ, ನೀನು ನಿನ್ನ ತವರು ಮನೆಗೆ ಹೋಗಿ ನಮ್ಮ ಅಣ್ಣ ಹೇಳಿದಷ್ಟು ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲವಾದರೆ ಅಲ್ಲೆ ಬಿದ್ದು ಸಾಯಿ ಸೂಳಿ ನಮ್ಮ ಅಣ್ಣನಿಗೆ ಇನ್ನೊಂದು ಮದುವೆ ಮಾಡಿ ನೆಮ್ಮದಿಯಾಗಿರುವದಕ್ಕೆ ಅನುಕೂಲ ಮಾಡಿಕೊಡುತ್ತೆವೆ ಎಂದು ಎಲ್ಲರೂ ಕೂಡಿಕೊಂಡು ನನಗೆ ಹೊಡೆಬಡೆ ಮಾಡುತ್ತಿದ್ದರು, ಅಷ್ಟರಲ್ಲಿ ನಾನು ಇನ್ನೊಂದು ಮಗುವಿಗೆ ಗಭರ್ಿಣಿಯಾಗಿದ್ದೆ, ಈಗ ಡೆಲಿವರಿಗೆ ಎಂದು ಬಂದವಳಿಗೆ ನನ್ನನ್ನು ಕರೆದುಕೊಂಡು ಹೋಗದೆ ನನ್ನನ್ನು 10 ತಿಂಗಳುಗಳಿಂದ ತವರು ಮನೆಯಲ್ಲಿ ಬಿಟ್ಟು ಕಿರುಕುಳ ನೀಡುತ್ತಿದ್ದಾರೆ, ದಿನಾಂಕ 06/07/2015 ರಿಂದ ಇಲ್ಲಿಯವರೆಗೆ ಕಿರುಕೂಳ ನೀಡುತ್ತಿದ್ದಾರೆ, ಆದ್ದರಿಂದ ದಯಾಳುಗಳಾದ ತಾವುಗಳು ನನ್ನ ಗಂಡ ಮತ್ತು ಅವರ ಮನೆಯವರ ಮೇಲೆ ಕಾನೂನು ರೀತಿ ಕ್ರಮ ಕೈಕೊಂಡು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಮಾನ್ಯರವರಲ್ಲಿ ಈ ದೂರನ್ನು ಸಲ್ಲಿಸುತ್ತಿದ್ದೆನೆ. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 66/2019 ಕಲಂ 498(ಎ) ಸಂ 149 ಐಪಿಸಿ ಮತ್ತು 3, 4 ಡಿಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 27/2019  ಕಲಂ 279, 337, 338 ಐಪಿಸಿ:-ದಿನಾಂಕ 04/05/2019 ರಂದು ಸಾಯಂಕಾಲ  7-30 ಪಿ.ಎಂ.ಕ್ಕೆ ಈ ಕೇಸಿನ ಫಿಯರ್ಾದಿಯವರು ತಮ್ಮ ಸ್ನೇಹಿತೆಯಾದ ಗಾಯಾಳು ರಾಧಾ ಇವರಿಬ್ಬರು ಕೂಡಿಕೊಂಡು ಮೋಟಾರು ಸೈಕಲ್ ಸ್ಕ್ಯೂಟಿ ನಂಬರ ಕೆಎ-36, ಇಎ-6237 ನೇದ್ದರ ಮೇಲೆ ಯಾದಗಿರಿಯಿಂದ ಅಬ್ಬೆತುಮಕುರ ಮಠಕ್ಕೆ ಹೋಗುವಾಗ ರಾಧಾ ಇವರು ಸ್ಕ್ಯೂಟಿಯನ್ನು ನಡೆಸಿಕೊಂಡು ಹೊರಟಾಗ ಮಾರ್ಗ ಮದ್ಯೆ  ಯಾದಗಿರಿ-ವಾಡಿ ಮುಖ್ಯ ರಸ್ತೆ ಮೇಲೆ ಬರುವ ಡಾನ್ ಬೋಸ್ಕೋ ಶಾಲೆಯ ಹತ್ತಿರ ಅಬ್ಬೆತುಮಕುರ ಕ್ರಾಸ್ ಹತ್ತಿರ ಎಡಕ್ಕೆ ಟರ್ನ ಮಾಡುತ್ತಿದ್ದಾಗ ಆರೋಪಿತ ತನ್ನ ಮೋಟಾರು ಸೈಕಲ್ ನಂಬರ ಕೆಎ-32, ಇಜಿ-5365 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ಫಿಯರ್ಾದಿಯವರ ಮೋಟಾರು ಸೈಕಲ್ ನೇದ್ದಕ್ಕೆ ಹಿಂದಿನಿಂದ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಪಿಯರ್ಾದಿ ಮತ್ತು ಗಾಯಾಳು ರಾಧಾ ಇವರು ಮೋಟಾರು ಸೈಕಲ್ ಮೇಲಿಂದ ಕೆಳಕ್ಕೆ ಬಿದ್ದಾಗ ಫಿಯರ್ಾದಿಗೆ ತಲೆಗೆ ಭಾರೀ ಗುಪ್ತಗಾಯವಾಗಿ ವಾಂತಿಯಾಗಿದ್ದು ಅಲ್ಲದೇ ಕಿವಿಯಲ್ಲಿ ರಕ್ತ ಬಂದಿದ್ದು ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದು  ಮತ್ತು ಮೋಟಾರು ಸೈಕಲ್ ಸ್ಕ್ಯೂಟಿ ನಡೆಸುತ್ತಿದ್ದ ರಾಧಾ ಇವರಿಗೆ ಎಡಗಾಲು ಮೊಣಕಾಲಿಗೆ, ಪಾದಕ್ಕೆ ತರಚಿದ ರಕ್ತಗಾಯವಾಗಿ ಎದೆಗೆ, ಸೊಂಟಕ್ಕೆ, ಹೊಟ್ಟೆಗೆ ಗುಪ್ತಗಾಯವಾಗಿದ್ದು ಇರುತ್ತದೆ ಮತ್ತು ಮೋಟಾರು ಸೈಕಲ್ ಸವಾರನಿಗೆ ಕೂಡ ತಲೆಗೆ ಗುಪ್ತಗಾಯವಾಗಿದ್ದು, ಗದ್ದಕ್ಕೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಘಟನೆಯು ಮೋಟಾರು ಸೈಕಲ್ ನಂಬರ ಕೆಎ-32, ಇಜಿ-5365 ನೇದ್ದರ ಸವಾರನ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಜರುಗಿದ್ದು  ಆತನ ಮೇಲೆ ಕಾನೂನಿನ ಕ್ರಮ ಜರುಗಿಸುವ ಕುರಿತು ಫಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 67/2019  ಕಲಂ 323, 324, 504, 506  ಐ.ಪಿಸಿ :- ದಿನಾಂಕ 04-05-2019 ರಂದು 5 ಪಿ.ಎಮ್ ಕ್ಕೆ ಫಿರ್ಯಾಧಿಯದಾರರು ತಮ್ಮ ಕುರಿಗಳನ್ನು ಎಂದಿನಂತೆ ಹೊಡೆದುಕೊಂಡು ಅಡವಿಯಲ್ಲಿ ಮೇಯಿಸುತ್ತಾ  ಯಾದಗಿರಿ ದೊಡ್ಡ ಕೆರೆಯ ಭಾಗದಲ್ಲಿ ಇರುವ ಆರೋಪಿತನ ಖಾಲಿ ಹೋಲದಲ್ಲಿ ಕುರಿಗಳು ಹೋದಾಗ  ಆಗ ಫಿರ್ಯಾಧೀದಾರರು ಅವುಗಳನ್ನು ಹೊಡೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಅಷ್ಟರಲ್ಲಿ ಆರೋಪಿತನು ಫಿರ್ಯಾಧೀಗೆೆ ಒಮ್ಮೇಲೆ ಎಲೇ ಬೋಸಡಿ ಮಗನೇ ನಮ್ಮ ಹೋಲದಲ್ಲಿ ಏಕೆ ಕುರಿ ಬಿಟ್ಟಿದ್ದಿ ನಿನ್ನ ಕುರಿಗಳು ನಮ್ಮ ಹೋಲ ಹಾಳು ಮಾಡುತ್ತವೆ  ಅಂತಾ ಬೈಯ್ಯಹತ್ತಿದನು. ಆಗ ಫಿರ್ಯಾಧಿಯು ಹೀಗೇಕೆ ಬೈಯ್ಯುತ್ತಿರುವಿ ಇದು ಖಾಲಿ ಹೋಲವಿದೆ ನಿಮ್ಮ ಬೇಳೆಗಳು ಹಾಳು ಮಾಡಿಲ್ಲಾ. ಅಷ್ಟಾದರೂ ನಾನು ಕುರಿಗಳನ್ನು ಹೋಡೆದುಕೊಂಡು ಹೋಗುತ್ತಿದ್ದೆನೆ ಆಕಸ್ಮಾತಾಗಿ 2-3 ಕೂರಿಗಳು ನಿಮ್ಮ ಕಾಲಿ ಹೋಲದಲ್ಲಿ ಬಂದಿವೆ ಹೀಗೇಲ್ಲಾ ಹೋಲಸು ಬೈಯ್ಯುವುದು ಸರಿಯಲ್ಲಾ ಅಂತಾ ಅಂದಾಗ ಅದಕ್ಕೆ ಆರೋಪಿತನು ರಂಡಿ ಮಗನೇ ನನಗೆ ಎದುರು ಮಾತಾಡುತ್ತಿ ಅಂತಾ ಅಂದವನೇ ಒಂದು ಬಡಿಗೆಯನ್ನು ತೆಗೆದುಕೊಂಡು ಜೋರಾಗಿ ಫಿರ್ಯಾಧಿಯ ತೆಲೆಯ ಮೇಲೆ ಮತ್ತು ಬಲಗೈಯ ಹೆಬ್ಬರಳಿಗೆ ಹೋಡೆದು ರಕ್ತಗಾಯ ಮಾಡಿದ್ದು ಅಲ್ಲದೇ ಕೈಮುಷ್ಟಿ ಮಾಡಿ ಹೊಟ್ಟೆಗೆ ಗುದ್ದಿದ್ದು ಇರುತ್ತದೆ. ತನಗೆ ಹೊಡೆಬಡಿ ಮಾಡಿದವನ ಹೆಸರು ಗೊತ್ತಾಗಿಲ್ಲಾ ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ್ದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 67/2019 ಕಲಂ 323, 324, 504, 506, ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಸೈದಾಪೂರು ಪೊಲೀಸ್ ಠಾಣೆ ಗುನ್ನೆ ನಂ:- 46/2019 ಕಲಂ. 504 304 ಐಪಿಸಿ:-ದಿನಾಂಕ : 05-05-2019 ರಂದು ರಾತ್ರಿ 02-00 ಗಂಟೆಗೆ ಪಿಯರ್ಾಧಿದಾರಳಾದ ಶ್ರೀಮತಿ ಈರಮ್ಮ ಗಂಡ ಮಾಣಿಕಪ್ಪ ಬೊಮ್ಮನೋರ ವ|| 50 ವರ್ಷ ಜಾ|| ಕಬ್ಬಲಿಗ ಉ|| ಹೊಲಮನೆಕೆಲಸ ಸಾ|| ಕಾಳಬೆಳಗುಂದಿ ತಾ|| ಗುರಮಿಠಕಲ್ ಜಿ|| ಯಾದಗಿರಿ ಇವರು ಠಾನೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ನಾನು ಈ ಮೇಲಿನ ಹೆಸರು ವಿಳಾಸದ ನಿವಾಸಿಯಾಗಿದ್ದು ಹೊಲಮನೆ ಕೆಲಸ ಮಾಡಿಕೊಂಡು ಇರುತ್ತೇನೆ ನನಗೆ 1) ಭದ್ರಪ್ಪ 2) ಬನ್ನಮ್ಮ 3) ಹಣಮಂತ 4) ತಾಯಪ್ಪ 5) ತಾರಮ್ಮ 6) ಅಂಜಪ್ಪ 7) ಮಹೇಶ ಅಂತಾ ಒಟ್ಟು 7 ಜನ ಮಕ್ಕಳಿರುತ್ತಾರೆ, ಹಣಮಂತ ಮತ್ತು ತಾಯಪ್ಪ ಇಬ್ಬರು ಬೆಂಗಳೂರಿಗೆ ದುಡಿಯಲು ಹೋಗಿರುತ್ತಾರೆ  ಅಂಜಪ್ಪ ಇತನು ಯಾದಗಿರಿಯಲ್ಲಿ ಪೋಟೊ ಸ್ಟುಡಿಯೊದಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ ಮನೆಯಲ್ಲಿ ನಾನು ನನ್ನ ಮಕ್ಕಳಾದ ಬನ್ನಮ್ಮ, ತಾರಮ್ಮ ಮತ್ತು ನನ್ನ ದೊಡ್ಡಮಗ ಭದ್ರಪ್ಪ ಮತ್ತು ಸಣ್ಣಮಗ ಮಹೇಶ ಇರುತ್ತೇವೆ. ನಮ್ಮ ಮನೆ ಮತ್ತು ಆಶಪ್ಪ ತಂದೆ ಭದ್ರಪ್ಪ ಇವರ ಮನೆ ಅಕ್ಕಪಕ್ಕದಲ್ಲಿ ಇರುತ್ತವೆ ಈಗ ನಮ್ಮ ಮನೆಯ ಹಿಂದೆ 15 ದಿಗಳಿಂದೆ ಬಟ್ಟೆ ತೊಳೆಯಲು ನೀರಿನ ಗಡಗಿ ಇಟ್ಟಿದ್ದೆವು.ದಿನಾಂಕ:04-05-2019 ರಂದು ಸಾಯಂಕಾಲ 04-00 ಗಂಟೆಗೆ ಸುಮಾರಿಗೆ ನನ್ನ ಮಗ ಮನೆಯಿಂದ ಹೊರಗೆ ಹೋಗಿದ್ದನು ಮನೆಯಲ್ಲಿ ನಾನು ನನ್ನ ಮಕ್ಕಳಾದ ಬನ್ನಮ್ಮ ಹಾಗೂ ತಾರಮ್ಮ ನಮ್ಮ ಅಂಗಳದಲ್ಲಿ ಇರುವಾಗ ನಮ್ಮೂರಿನ ನಮ್ಮ ಅಣ್ಣತಮ್ಮಕೀಯರ ಪೈಕಿ ಆಶಪ್ಪ ತಂದೆ ಭದ್ರಪ್ಪ ಬೊಮ್ಮನೋರ ಇತನು ಬಂದು ನಮಗೆ ಯಾಕಮ್ಮ ನಮ್ಮ ಜಾಗದಲ್ಲಿ ನೀರಿನ ಗಡಗಿ ಇಟ್ಟಿದಿರಲ್ಲಾ ನಮ್ಮ ಜಾಗದಲ್ಲಿ ಇಡಬೇಡಿರಿ ಅಂತಾ ಅದನ್ನು ತೆಗೆಯಿರಿ ಅಂತಾ ಹೊದರಾಡುತಿದ್ದನು ಅದಕ್ಕೆ ನಾವು ನಮ್ಮ ಜಾಗದಲ್ಲಿ ಗಡಗಿ ಇಟ್ಟರೆ ನಿನಗೆ ಏನು ಆಗುತ್ತದೆ ಅಂತಾ ಹೇಳಿದಾಗ ಆಗ ಆತನು ಗಡಗಿ ತೆಯಿತಿರಿಲ್ಲಾ ಇಲ್ಲಂದರೆ ಗಡಗಿ ಒಡೆದು ಹಾಕುತ್ತೇನೆ ಅಂತಾ ಕಲ್ಲು ತೆಗೆದುಕೊಂಡು ಗಡಗಿ ಮೇಲೆ ಕಲ್ಲು ಹಾಕಿ ಗಡಗಿಯನ್ನು ಒಡಾಕಿದನು, ಅವನ ಜೊತೆ ಏನು ಜಗಳ ಮಾಡುವದು ಹೊಗಲಿ ಬಿಡು ಅಂತಾ ನಾವು ಸುಮ್ಮನಾಗಿದ್ದೆವು ನಂತರ ರಾತ್ರಿ 08-30 ಗಂಟೆ ಸುಮಾರಿಗೆ ಮತ್ತೆ ಆಶಪ್ಪ ಇತನು ಮನೆಯ ಮುಂದೆ ಅಂಗಳದಲ್ಲಿ ಬಂದು ನೀರಿನ ಗಡಿ ಇಡಬ್ಯಾಡ ಅಂದರು ಗಡಗಿ ಇಟ್ಟಿದ್ದರಿ ಅದಕ್ಕೆ ಅದನ್ನು ಒಡಾಕಿರುತ್ತೇನೆ ಅಂತಾ ಹೊದರಾಡುತಿದ್ದನು ಅದಕ್ಕೆ ನನ್ನ ಮಗ ಯಾಕಮ್ಮ ಆತ ಹೊದರಾಡುತ್ತಾನಲ್ಲ ಏನಾಯಿತು ಅಂತಾ ಕೇಳಿದನು ಸಾಯಂಕಾಲ 4 ಗಂಟೆಗೆ ನಮ್ಮ ಜೊತೆ ಬಾಯಿ ಮಾತಿನ ಜಗಳ ಮಾಡಿ ಮನೆ ಹಿಂದೆ ಇಟ್ಟ ನೀರಿನ ಗಡಗಿ ಒಡಕಿದಾನೆ ಅಂತಾ ಹೇಳಿದೆನು ಅದಕ್ಕೆ ನನ್ನ ಮಗ ಯಾಕಪ್ಪ ನಮ್ಮ ತಾಯಿ ಸಂಗಡ ಜಗಳ ಮಾಡಿ ಗಡಗಿ ಒಡಾಕಿದಿ ಅಂತಾ ಕೇಳಿದಾಗ ಅವರದ್ದು ಮುಗಿತು ಈಗ ನಿನು ಒಬ್ಬವ ಜಗಳಕ್ಕೆ ಬವಂದೆನಲೆ ಲಂಗಾ ಸೂಳೆ ಮಗನೆ ಅಂತಾ ಅಂದು ಆತನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಹಿಂದಕ್ಕೆ ಜಾಡಿಸಿ ನೂಕಿಸಿಕೊಟ್ಟನು ನೂಕಿಸಿಕೊಟ್ಟಾಗ ನನ್ನ ಮಗ ಕೆಳಗೆ ಬಿದ್ದನು ಆಗ ನಾವು ನನ್ನ ಮಗನಿಗೆ ಎಬ್ಬಿಸಿ ಮಾತಾಡಿಸಿದರೆ ಮಾತನಾಡಲಿಲ್ಲ ಆಗ ನಾವು ಆತನಿಗೆ ಬಾಯಿಯಲ್ಲಿ ನೀರು ಹಾಕಿದೆವು ಆಗ ಕೂಡ ಆತನು ಮಾತನಾಡಲಿಲ್ಲ. ಆಗ ನಾನು ನನ್ನ ಮಗಳಾದ ತಾರಮ್ಮ ಈಕೆಗೆ ಯಾವದಾನೊಂದು ಆಟೋ ಕರೆದುಕೊಂಡು ಬಾ ಸೈದಾಪೂರಕ್ಕೆ ಹೊದರಾಯಿತು ಅಂತಾ ಹೇಳಿದೆನು ನನ್ನ ಮಗಳು ನಮ್ಮೂರಿನ ಅನೀಲ್ ತಂದೆ ತಾಯಪ್ಪ ಇತನ ಆಟೋ ಕರೆದುಕೊಂಡು ಬಂದಾಗ ನನ್ನ ಮಗನಿಗೆ ಆ ಆಟೋದಲ್ಲಿ ಹಾಕಿಕೊಂಡು ಸೈದಾಪೂರ ಆಸ್ಪತ್ರೆಗೆ ಬಂದೆವು ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯವರು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಮನುಷ್ಯ ದೊಬ್ಬಸಿಕೊಟ್ಟರೆ ನೆಲಕ್ಕೆ ಬಿದ್ದು ಸಾಯುತ್ತಾನೆ ಅಂತಾ ಗೊತ್ತಿದ್ದರು ಸಹ ನನ್ನ ಮಗನಿಗೆ ದೊಬ್ಬಸಿದ್ದರಿಂದ ಕೆಳಗೆ ಬಿದ್ದು ತಲೆಗೆ ಗುಪ್ತ ಪೆಟ್ಟಾಗಿದ್ದರಿಂದಲೆ ನನ್ನ ಮಗ ಭದ್ರಪ್ಪ ತಂದೆ ಮಾಣೀಕಪ್ಪ ವ|| 28 ವರ್ಷ ಇತನು ಮೃತಪಟ್ಟಿರುತ್ತಾನೆ ನನ್ನ ಮಗನ ಸಾವಿಗೆ ಕಾರಣರಾದ ಆಶಪ್ಪ ತಂದೆ ಭದ್ರಪ್ಪ ಸಾ|| ಕಾಳಬೆಳಗುಂದಿ ಇತನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.46/2019 ಕಲಂ.504, 304 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಳಿಸಿಕೊಂಡು ತನಿಖೆ ಕೈಗೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!