ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-04-2019

By blogger on ಸೋಮವಾರ, ಏಪ್ರಿಲ್ 29, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-04-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 42/2019 ಕಲಂ 454, 457, 380 ಐಪಿಸಿ:-ದಿನಾಂಕ 19/04/2019 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿ ರೀಯಾನ ಬೇಗಂ ಇಬ್ಬರು ನಮ್ಮ ಮನೆಯ ಬೀಗ ಹಾಕಿಕೊಂಡು, ನನ್ನ ಹೆಂಡತಿ ಅಣ್ಣನಾದ ಅಮೀನಸಾಬ್ ಇವರ ಮದುವೆ ಇದ್ದ ಕಾರಣ ಮದುವೆ ಸಂತೆ ಮಾಡಿಕೊಂಡು ಬಂದರಾಯಿತು ಅಂತಾ ಮಾಕರ್ೆಟ್ಗೆ ಹೋದೆವು. ಸಂತೆ ಮಾಡಿಕೊಂಡು ನಮ್ಮ ಅತ್ತೆ ಮಾವರ ಮನೆಗೆ ಹೋಗಿ ಮರಳಿ ರಾತ್ರಿ 11-00 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ನಮ್ಮ ಮನೆಯ ಬೀಗದ ಚಿಲಕ ಮುರಿದ್ದು, ಬಾಗಿಲು ಸ್ವಲ್ಪ ಮುಚ್ಚಿದಂತೆ ಕಂಡು ಬಂತು. ಗಾಭರಿಯಾಗಿ ಮನೆಯ ಒಳಗಡೆ ಹೋಗಿ ನೋಡಲಾಗಿ, ಬೆಡ್ ರೂಮಿನಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದಿದ್ದು, ಅಲಮರಿ ತೆರೆದಿತ್ತು. ಅಲಮರಿಯಲ್ಲಿ ಇದ್ದ ಸಾಮಾನುಗಳು ನೋಡಲಾಗಿ 1) ಒಂದು 20 ಗ್ರಾಂ. ಬಂಗಾರದ ನೆಕಲೆಸ್, ಅ.ಕಿ 60,000/ ರೂ||, 2) ಒಂದು 10. ಗ್ರಾಂ. ಬಂಗಾರದ ಒಂದು ಉಂಗುರ, ಅ.ಕಿ 30,000/ ರೂ||, 3) ತಲಾ 5 ಗ್ರಾಂ, ಬಂಗಾರದ (ಒಟ್ಟು 10. ಗ್ರಾಂ) 2 ಉಂಗುರ, ಅ.ಕಿ 30,000/ ರೂ||,  4) ತಲಾ ಒಂದು ಗ್ರಾಂಮಿನ ಒಟ್ಟು 5 ಗ್ರಾಂ.ದ 5 ಬಂಗಾರದ ಹುಡುಗರ ಉಂಗುರ, ಅ.ಕಿ 15,000/ ರೂ|| ಗಳು. 5) 20 ತೊಲೆ ಬೆಳ್ಳಿಯ ಒಂದು ಜೊತೆ ಕಾಲು ಚೈನ್, ಅ.ಕಿ 8000/ ರೂ|| ಹಾಗೂ 6) ನಗದು ಹಣ 20,000/ ರೂ|| ಕಾಣಲಿಲ್ಲ. ಸದರಿಯವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದಂತೆ ಕಂಡು ಬಂತು. ಕೂಡಲೆ ನಾನು ಸದರಿ ವಿಷಯವನ್ನು ನಮ್ಮ ಅಳಿಯ ಅಮೀನಸಾಬ್ ಈತನಿಗೆ ಪೋನ್ ಮಾಡಿ ತಿಳಿಸಿದಾಗ ಅಳಿಯ ಅಮೀನಸಾಬ್ ಮತ್ತು ಸುದ್ದಿ ತಿಳಿದು ನಮಗೆ ಬೇಕಿದ್ದವರಾದ ಚೆನ್ನಾರೆಡ್ಡಿ ತಂದೆ ಶಿವರೆಡ್ಡಿ ಅಲಿಪೂರ ಇವರು ಮನೆಗೆ ಬಂದು ನೋಡಿದರು. ಕಾರಣ ಇಂದು ದಿನಾಂಕ 19/04/2019 ರಂದು ಮಧ್ಯಾಹ್ನ 03-00 ಗಂಟೆಯಿಂದ ರಾತ್ರಿ 11-00 ಗಂಟೆಯ ಅವಧಿಯಲ್ಲಿ ನಮ್ಮ ಮನೆಯ ಬೀಗ ಹಾಕಿಕೊಂಡು ಮಾಕರ್ೆಟ್ಗೆ ಹೋದಾಗ ಯಾರೋ ಕಳ್ಳರು ನಮ್ಮ ಮನೆಯ ಬೀಗದ ಚಿಲಕ ಮುದಿದು ಮನೆ ಒಳಗೆ ಬಂದು, ಮನೆಯ ಬೆಡ್ ರೋಮಿನ ಅಲಮರಿ ಮುರಿದು, ಅದರಲ್ಲಿ ಇದ್ದ ಒಟ್ಟು 1,63,000/ ರೂಪಾಯಿ ಕಿಮ್ಮತ್ತಿನ ಬಂಗಾರ, ಬೆಳ್ಳಿಯ ಆಭರಣಗಳು ಮತ್ತು ನಗದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಹುಡುಕಾಡಿ, ಮನೆಯಲ್ಲಿ ವಿಚಾರಣೆ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 42/2019 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 59/2019 ಕಲಂ 279, 338 ಐ.ಪಿ.ಸಿ:- ದಿನಾಂಕ:28/04/2019 ರಂದು 4 ಪಿ.ಎಮ್ ಸುಮಾರಿಗೆ ಗಾಯಾಳು ಶಿವಲಿಂಗಮ್ಮ ಇವಳು ಮದುವೆಗೆ ಬಂದ ತನ್ನ ಸಂಬಂಧಿಕರಿಗೆ ಕಳಿಸಿಕೊಡಲು ಅಂತಾ ಕೆಬಿಜೆಎನ್ಎಲ್ ಆಡಳಿತ ಕಛೇರಿ ಕ್ರಾಸ್ ಹತ್ತಿರ ಶಹಾಪುರ ಜೇವಗರ್ಿ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಂತಾಗ ಆರೋಪಿ ಅಂಬ್ರೇಶ ಈತನು ಜೇವಗರ್ಿ ಕಡೆಯಿಂದ ತನ್ನ ಬಜಾಜ ಪ್ಲಾಟಿನಾ ಮೋಟರ್ ಸೈಕಲ್ ನಂ:ಕೆಎ-33, ಡಬ್ಲು-9702 ನೇದ್ದರ ಮೇಲೆ ತನ್ನ ಹಿಂದೆ ಗಾಯಾಳು ಕಿರಣ ಈತನಿಗೆ ಕೂಡಿಸಿಕೊಂಡು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಮೋಟರ್ ಸೈಕಲ್ ಚಾಲಕನ ನಿಯಂತ್ರಣ ತಪ್ಪಿ ಶಿವಲಿಂಗಮ್ಮ ಇವಳಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಸದರಿ ಅಪಘಾತದಲ್ಲಿ ಶಿವಲಿಂಗಮ್ಮ ಇವಳ ಬಲತಲೆಗೆ ಭಾರಿ ರಕ್ತಗಾಯವಾಗಿದ್ದು, ಬಲಗೈ, ಬಲಗಾಲಿಗೆ ರಕ್ತಗಾಯಗಳಾಗಿದ್ದು, ಬಲ ಎದೆಗೆ ಒಳಪೆಟ್ಟಾಗಿದ್ದು ಕಿರಣ ಈತನ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ. ಕಾರಣ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 100/2019 ಕಲಂ 379 ಐ.ಪಿ.ಸಿ. ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:29-04-2019 ರಂದು 10-45 ಪಿ.ಎಂ.ಕ್ಕೆ ಠಾಣೆಯಎಸ್ ಹೆಚ್ ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಗುರುಬಸಪ್ಪತಂದೆ ಕಾಶಿರಾಯ ಪಾಟೀಲ ವಯಾ:50 ವರ್ಷ ಉ: ಕಂದಾಯ ನಿರೀಕ್ಷಕರು ಸುರಪುರರವರುಜಪ್ತಿ ಪಂಚನಾಮೆ ಹಾಜರು ಪಡಿಸಿದ್ದು ಒಂದುಅಜರ್ಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ :29-04-2019 ರಂದು ಮಧ್ಯಾಹ್ನ ಸುಮಾರಿಗೆ  ನಾನು ತಹಸೀಲ ಕಾರ್ಯಲದಲ್ಲಿ ಹಾಜರಿದ್ದ ಶೀ ಕಿರಣಡಿ.ಆರ್ ಭೂ ವಿಜ್ಷಾನಿಗಳು ಗಣಿ ಮತ್ತು ಭೂ ವಿಜ್ಷಾನ ಇಲಾಖೆ ಯಾದಗಿರಿ, ಶ್ರೀ ಸುಭಾಶ್ವಂದ್ರ ಸಹಾಯಕಇಂಜಿನಿಯರ ಲೊಕೋಪಯೋಗಿ ಇಲಾಖೆ ಸುರಪೂರ, ಶ್ರೀನಿವಾಸ ದೇಶಪಾಂಡೆಗ್ರಾಮ ಲೇಖಪಾಲಕರು ಹೇಮನೂರ, ಶ್ರೀ ದುಶ್ಯಂತಕಮ್ಮಾರಗ್ರಾಮ ಲೇಖಪಾಲಕರುಕವಡಿಮಟ್ಟಿ, ರವಿ ಓ.ಹೆಚ್ಗ್ರಾಮ ಲೇಖಪಾಲಕರುದೇವತ್ಕಲ್ಲ, ಶ್ರೀ ನಟರಾಜಗ್ರಾಮಲೇಖಪಾಲಕರು ಗೂಡಿಹಾಳ ಟಿ, ಶ್ರೀ ಯಲ್ಲಪ್ಪತಂದೆ ಬೀಮಪ್ಪಗೋಲ್ಗ್ರಾಮ ಸಹಾಯಕರು ಹೇಮನೂರ, ಶ್ರೀ ಶಿವಕುಮಾರ ತಂದೆ ಸಿದ್ರಾಮಪ್ಪ ಸಿಪಾಯಿ ತಹಸೀಲ ಕಾಯರ್ಾಲಯ ಸುರಪೂರಇವರೆಲ್ಲರಿಗೂ ಮಾನ್ಯ ಶ್ರೀ ಸುರೇಶ ಅಂಕಲಗಿ ತಹಸೀಲ್ದಾರರು ಸುರಪುರ ಸಾಹೇಬರುಇಬ್ಬರು ಪಂಚರಾದ 1) ಅನೀಲಕುಮಾರತಂದೆಚಂದ್ರಾಮ ಬಜಾರ ವಯಾ:33 ವರ್ಷ ಉ:ದ್ವಿತಿಯ ದಜರ್ೆ ಸಹಾಯಕರು ಲೊಕೋಪಯೋಗಿ ಇಲಾಖೆ ಸುರಪೂರ,  ಸಾ:ಸುರಪೂರ 2) ಶ್ರೀ ಖುಷರ್ಿದ ಪಾಶಾ ತಂದೆಅಬ್ದುಲ್ ಹಮೀದ ವಯಾ:55 ವರ್ಷಜಾತಿ:ಮುಸ್ಲಿಂ ಉ:ಕೆಲಸ ನಿರೀಕ್ಷಕರು ಲೊಕೊಪಯೋಗಿಕಾಯರ್ಾಲಯ ಸುರಪೂರಇವರನ್ನು ತಹಸೀಲ ಕಾರ್ಯಲಯಕ್ಕೆ ಬರಮಾಡಿಕೊಂಡುನ ನಮ್ಮೆಲ್ಲರಿಗೂ ವಿಷಯ ತಿಳಿಸಿದ್ದೆನೆಂದರೆ ಹೇಮನೂರ ಸಿಮಾಂತರದಲ್ಲಿ ಯಾರೋತಮ್ಮತಮ್ಮ ಹೊಲಗಳಲ್ಲಿ ಕೃಷ್ಣಾ ನಧಿಯಿಂದ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಮಾರಾಟ ಮಾಡುವಉದ್ದೇಶದಿಂದಅಕ್ರಮವಾಗಿ ಹೊಲಗಳಲ್ಲಿ ಸಂಗ್ರಹ ಮಾಡಿರುತ್ತಾರೆ. ಅಂತಾ  ಮಾಹಿತಿ ಮಾಹಿತಿ ಬಂದಿದ್ದು ದಾಳಿ ಕುರಿತು ಹೋಗೊಣಅಂತಾಎಲ್ಲರಿಗೂ ವಿಷಯ ತಿಳಿಸಿ ಮೇಲ್ಕಾಣಿಸಿದ ಎಲ್ಲಾ ಅಧಿಕಾರಿಗಳು ತಮ್ಮತಮ್ಮ ಸರಕಾರಿ ವಾಹನಗಳಲ್ಲಿ 1-30 ಪಿ.ಎಂ.ಕ್ಕೆ ಸುರಪೂರ ತಹಸೀಲ ಕಾಯರ್ಾಲಯದಿಂದ ಹೊರಟು ಹೇಮನೂರ ಸೀಮಾಂತರದ ಹೇಮನೂರ ಸೀಮಾಂತರ ಕೃಷ್ಣಾ ನಧಿಗೆ ಹೋಗುವ ಮಾರ್ಗದ ಮುಖಾಂತದ ಕೃಷ್ಣಾ ನಧಿಯಕಡೆಗೆ ಹೊರಟಿರುವಾಗ ಸುಮಾರು 2-15 ಪಿ.ಎಂ.ಕ್ಕೆ ತಲುಪೀಅಲ್ಲಿಂದ ನದಿಯ ಮಾರ್ಗದ ಮುಖಾಂರರ ಹೊರಟಿರುವಾಗ ಮಾರ್ಗದ ಪಕ್ಕದ ಹೋಲದಲ್ಲಿ  ಮರಳು ಸಂಗ್ರಗಣೆ ಮಾಡಿರುವದನ್ನುಕಂಡು  ಸದರಿ ಹೊಲದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಪರೀಶಿಲನೆ ಮಾಡಿಕಂದಾಯ ದಾಖಲೆಗಳನ್ನು ಪರೀಶಿಲನೆ ಮಾಡಿದಾಗ ಹೇಮನೂರ ಸಿಮಾಂತರದ 1) ಸವರ್ೇ ನಂಬರ 105/1 ರ ಪಟ್ಟೆದಾರರಾದತಿಮ್ಮಯ್ಯಾತಂದೆ ಹಣಮಯ್ಯಾ ಸಾ:ಹೇಮನೂರಇವರುತಮ್ಮಜಮೀನುನಲ್ಲಿ 294 ಘನ ಮೀಟರ ಮರಳು ಅ.ಕಿ 235200/-ರೂಗಳು 2) ಸವರ್ೇ ನಂಬರ 106/1 ರ ಪಟ್ಟೆದಾರರಾದ ಹಣಮಂತ್ರಾಯತಂದೆದೇವಪ್ಪ ಸಾ:ಹೇಮನೂರಇವರುತಮ್ಮಜಮೀನುನಲ್ಲಿ 72  ಘನ ಮೀಟರ ಮರಳು ಅ.ಕಿ 57600/-ರೂಗಳು 3) ಸವರ್ೇ ನಂಬರ 106/4 ರ ಪಟ್ಟೆದಾರರಾದ ಬಸವರಾಜತಂದೆದೇವಪ್ಪ ಸಾ:ಹೇಮನೂರಇವರುತಮ್ಮಜಮೀನುನಲ್ಲಿ 48.75 ಘನ ಮೀಟರ ಮರಳು ಅ.ಕಿ 39000/-ರೂಗಳು 4) ಸವರ್ೇ ನಂಬರ 106/12 ರ ಪಟ್ಟೆದಾರರಾದಅಜೀತಕುಮಾರತಂದೆ ಬಾಲದಂಡಪ್ಪ ಮಕಾಶಿ ಸಾ:ಹೇಮನೂರಇವರುತಮ್ಮಜಮೀನುನಲ್ಲಿ 87.5 ಘನ ಮೀಟರ ಮರಳು ಅ.ಕಿ 70,000/-ರೂಗಳು 5) ಸವರ್ೇ ನಂಬರ 149/3 ರ ಪಟ್ಟೆದಾರರಾದಯಲ್ಲಮ್ಮಗಂಡ ಹಣಮಂತ ಮಕಾಶಿ ಸಾ:ಹೇಮನೂರಇವರುತಮ್ಮಜಮೀನುನಲ್ಲಿ 544 ಘನ ಮೀಟರ ಮರಳು ಅ.ಕಿ 435200/-ರೂಗಳು 6) ಸವರ್ೇ ನಂಬರ 149/1 ರ ಪಟ್ಟೆದಾರರಾದ ಲಕ್ಷ್ಮಿನಾರಾಯಣತಂದೆ ಬೀಮಯ್ಯಾಕಡೆಚೂರ ಸಾ:ಹೇಮನೂರಇವರುತಮ್ಮಜಮೀನುನಲ್ಲಿ 129 ಘನ ಮೀಟರ ಮರಳು ಅ.ಕಿ 103200/-ರೂಗಳು 7) ಸವರ್ೇ ನಂಬರ 147/2 ರ ಪಟ್ಟೆದಾರರಾದ ಬೀಮಾಶಂಕರತಂದೆ ಹಣಮಂತ್ರಾಯ  ಸಾ:ಹೇಮನೂರಇವರುತಮ್ಮಜಮೀನುನಲ್ಲಿ 616.50 ಘನ ಮೀಟರ ಮರಳು ಅ.ಕಿ 493200/-ರೂಗಳು 8) ಸವರ್ೇ ನಂಬರ 231/1 ರ ಪಟ್ಟೆದಾರರಾದರಂಗಪ್ಪತಂದೆಯಂಕಪ್ಪ ಸಾ:ಹೇಮನೂರಇವರುತಮ್ಮಜಮೀನುನಲ್ಲಿ 96 ಘನ ಮೀಟರ ಮರಳು ಅ.ಕಿ 76800/-ರೂಗಳು 9) ಸವರ್ೇ ನಂಬರ 103 ರ ಪಟ್ಟೆದಾರರಾದತಿರುಪತಿತಂದೆ ವೆಂಕಟಗೀರಿ ಸಾ:ಹೇಮನೂರಇವರುತಮ್ಮಜಮೀನುನಲ್ಲಿ 120 ಘನ ಮೀಟರ ಮರಳು ಅ.ಕಿ 96000/-ರೂಗಳು ಹಾಗೂ ಅದೆ ಸವರ್ೇ ನಂಬರದ ಪಟ್ಟೆದಾರನಾದ 10) ಗೋಪಾಲಪ್ಪತಂದೆ ಪರಪ್ಪ ಸಾ:ಹೇಮನೂರಇವರುತಮ್ಮಜಮೀನುನಲ್ಲಿ 260 ಘನ ಮೀಟರ ಮರಳು ಅ.ಕಿ 208000/-ರೂಗಳು 11) ಸವರ್ೇ ನಂಬರ 104/2 ರ ಪಟ್ಟೆದಾರರಾದದೇವಿಂದ್ರಪ್ಪತಂದೆದೊಡ್ಡರಂಗಯ್ಯಾ ಮಕಾಶಿ ಸಾ:ಹೇಮನೂರಇವರುತಮ್ಮಜಮೀನುನಲ್ಲಿ 170 ಘನ ಮೀಟರ ಮರಳು ಅ.ಕಿ 136000/-ರೂಗಳು ಇವರೆಲ್ಲರೂತಮ್ಮತಮ್ಮ ಹೊಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಹೀಗೆ ಒಟ್ಟು 2437.75 ಘನ ಮೀಟರ ಮರಳು ಅ.ಕಿ 19,50,200/-ರೂಗಳ ನೈಸಗರ್ಿಕ ಮರಳನ್ನು  ಹೆಮನೂರ ಸೀಮಾಂತರದ ಕೃಷ್ಣಾ ನಧಿಯಿಂದ ಕಳ್ಳತನ ಮಾಡಿ ಮಾರಾಟ ಮಾಡುವಉದ್ದೇಶದಿಂದಅಕ್ರಮಾಗಿ ಸಂಗ್ರಹಣೆ ಮಾಡಿದ್ದುಇರುತ್ತದೆ. ಸದರಿಅಕ್ರಮವಾಗಿ ಸಂಗ್ರಹಸಿದ ಮರಳನ್ನು ಪಂಚರ ಸಮಕ್ಷಮಜಪ್ತಿ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು ಸದರಿಯವರ ವಿರುದ್ದದೂರುದಾಖಲಿಸುವಂತೆ ಮಾನ್ಯ ತಹಸೀಲ್ದಾರ ಸಾಹೇಬರು ನನಗೆ ಸೂಚಿಸಿದ ಮೇರೆಗೆ ಸದರಿಜಪ್ತಿ ಪಂಚನಾಮೆದೊಂದಿಗೆಠಾಣೆಗೆ ಬಂದುದೂರು ಸಲ್ಲಿಸುತ್ತಿದ್ದುಅಕ್ರಮ ಮರಳು ಸಂಗ್ರಹಣೆ ಮಾಡಿರುವವರ ವಿರುದ್ದ ಕಾನೂನು ಕ್ರಮಜರುಗಿಸಲು ವಿನಂತಿಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!