ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-02-2019

By blogger on ಗುರುವಾರ, ಫೆಬ್ರವರಿ 7, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-02-2019 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 33/2019 ಕಲಂ 279,338 ಐ.ಪಿ.ಸಿ. :- ದಿನಾಂಕ: 06-02-2019 ರಂದು 5 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ  ಶ್ರೀ ಆನಂದವಮರ್ಾ ತಂದೆ ಓಂ ಪ್ರಕಾಶ ವಮರ್ಾ ಸುರಪುರ ಇವರು ಠಾಣೆಗೆ ಬಂದು ಒಂದು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಮ್ಮ ದೊಡ್ಡಪ್ಪನಾದ ಶ್ರೀ ವಿಜಯಕುಮಾರ ವಮರ್ಾ ತಂದೆ ರಾಮಚಂದ್ರ ವಮರ್ಾ ವಯಾ:63 ವರ್ಷ ಇವರು ಶಹಾಪೂರದಲ್ಲಿ ಬಂಗಾರದ ಅಂಗಡಿ ವ್ಯಾಪಾರ ಮಾಡಿಕೊಂಡು ಶಹಾಪೂರದಲ್ಲಿಯೆ ವಾಸವಾಗಿದ್ದು, ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರಲ್ಲಿ ಒಬ್ಬರು ಅಮೇರಿಕದಲ್ಲಿ ಹಾಗೂ ಇನ್ನೊಬ್ಬರು ಬೆಂಗಳೂರದಲ್ಲಿರುತ್ತಾರೆ. ಹಿಗಿದ್ದು ದಿನಾಂಕ:02-02-2019 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಹೈದ್ರಾಬಾದಲ್ಲಿರುವಾಗ ನಮ್ಮ ದೊಡ್ಡಪ್ಪನ ಕಾರ ಚಾಲಕನಾದ ಜಗದೀಶ ತಂದೆ ಯಂಕಣ್ಣ ತುಳೇರ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಇಂದು ಸಾಯಂಕಾಲ ಸುಮಾರಿಗೆ ಶಹಾಪೂದಿಂದ ಹುಬ್ಬಳಿಗೆ ಹೋಗುವ ಕುರಿತು ಶಹಾಪೂರದಿಂದ ಹೊಸ ಕಾರ ತಗೆದುಕೊಂಡು ಹೊರಟಿದ್ದು ಕಾರನ್ನು ನಾನು ನಡೆಸುತ್ತಿದ್ದು ಮಾಲೀಕರಾದ ವಿಜಯಕುಮಾರ ವಮರ್ಾ ಇವರು ನನ್ನ ಎಡಗಡೆ ಸೈಡಿಗೆ ಸಿಟಿನಲ್ಲಿ ಕುಳಿತಿದ್ದು ಅಂದಾಜು 4-40 ಗಂಟೆ ಸುಮಾರಿಗೆ ಸುರಪುರ-ಬೆಂಗಳೂರ ಮುಖ್ಯ ರಸ್ತೆಯ ಕವಡಿಮಟ್ಟಿ ಗ್ರಾಮದ ಮೀನು ಸಾಗಾಣಿಕೆ ಹೊಲದ ಹತ್ತಿರ ರೋಡಿನಲ್ಲಿ ಬೆಂಗಳೂರ ಕಡೆಗೆ ಹೋಗುತ್ತಿರುವಾಗ ಒಮ್ಮೆಲೆ ರಸ್ತೆಯಲ್ಲಿ ದನಗಳು ಅಡ್ಡ ಬಂದ್ದಿದ್ದು ದನಗಳಿಗೆ ಕಟ್ಟ ಹೊಡೆದು ಸೈಡ ತಗೆದುಕೊಳ್ಳಲು ಹೋದಾಗ ಕಾರ ಆಯಾ ತಪ್ಪಿ ರೋಡಿನ ಬಲಬದೆಯ ಗುಟಗಲ್ಲಿಗೆ ಡಿಕ್ಕಿಯಾಗಿ ರೋಡಿನ ಬಲಬದಿಯ ತಗ್ಗಿನಲ್ಲಿ ಬಿದ್ದಿದ್ದು,  ಒಳಗಡೆ ಕುಳಿತ ಮಾಲೀಕರಾದ ವಿಜಯವಮರ್ಾ ಇವರ ಬಲಗಾಲ ತೊಡೆಯ ಹತ್ತಿರ ಕಾಲು ಮರಿದು ಭಾರಿಗಾಯವಾಗಿದ್ದು, ನನಗೆ ಯಾವುದೆ ಗಾಯ ಆಗಿರುವದಿಲ್ಲ ಮಾಲೀಕರನ್ನು 108 ಅಂಬುಲೇನ್ಸ ವಾಹನ ತರಿಸಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಕರೆದುಕೊಂಡು ಹೋಗುತ್ತಿದ್ದೆನೆ. ಅಂತಾ ವಿಷಯ ತಿಳಿಸಿದ ಕೂಡಲೆ  ನಾನು ಅಂದೆ ರಾತ್ರಿ ಕಲಬುರಗಿಗೆ ಬಂದು ಕಲಬುರಗಿಯ ಪಿಜಿಶಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ನಮ್ಮ ದೊಡ್ಡಪ್ಪನಿಗೆ ನೋಡಲು ಮೇಲೆ ಹೇಳಿದಂತೆ ಗಾಯವಾಗಿದ್ದನ್ನು ನೋಡಿದೆನು. ನಮ್ಮ ದೊಡ್ಡಪ್ಪನ ಹತ್ತಿರ ಯಾರು ಇರದ ಕಾರಣ ನಾನು ಕಲಬುರಗಿಯಲ್ಲಿಯೆ ಇದ್ದು ಅವರಿಗೆ ಉಪಚಾರ ಮಾಡಿಸಿ ನಿನ್ನೆ ದಿನಾಂಕ:05-02-2019 ರಂದು ಆಪ್ರೆಶನ್ ಆದ ನಂತರ ಇಂದು ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ನಮ್ಮ ದೊಡ್ಡಪ್ಪರದು ಪೋರ್ಡ ಪ್ರಿ ಸ್ಟೈಲ್ ಹೊಸ ಕಾರ ಇದ್ದು ಅದರ ಟಿಪಿ ನಂಬರ ಕೆಎ/32/ಟಿಎಮ್ಪಿ/2018/20698 ಇಂಜಿನ ನಂಬರ-ಎಕ10924  ಚೆಸ್ಸಿ ನಂಬರ-ಒಂಎಉಘಿಘಿಒಖಿಏಉಎಕ10924 ನೇದ್ದು ಇರುತ್ತದೆ. ಈ ಘಟನೆ ಕಾರ ಚಾಲಕನಾದ ಜಗದೀಶ ಈತನು ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಪಲ್ಟಿ ಮಾಡಿದ್ದರಿಂದ ಸಂಬವಿಸಿದ್ದು ಇರುತ್ತದೆ ಕಾರ ಚಾಲಕ ಜಗದೀಶ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 31/2019 ಕಲಂ. ಮನುಷ್ಯ ಕಾಣೆಯಾದ ಬಗ್ಗೆ:- ದಿನಾಂಕ; 21.01.2019 ರಂದು ಸಾಯಂಕಾಲ 4.00 ಗಂಟೆ ಸುಮಾರಿಗೆ ಮನೆಯಲ್ಲಿ ನನ್ನ ತಾಯಿ ಚಂದಮ್ಮ 50 ವರ್ಷ, ಇವಳಿಗೆ ಜಮೀನು ನೋಡಿಕೊಂಡು ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋದ ನನ್ನ ತಂದೆ  ಮರಳಿ ಮನೆಗೆ ಬಂದಿರುವದಿಲ್ಲ. ನನ್ನ ತಾಯಿ ನಂತರ ಎಲ್ಲಾ ಹುಡುಕಿದ್ದು ಸಿಗದ ಕಾರಣ ನನಗೆ ಫೋನ ಮಾಡಿ ವಿಷಯ ತಿಳಿಸಿದ್ದು ನಾನು ಬೆಂಗಳೂರಿನಿಂದ ಬಂದು ನನ್ನ ತಂದೆಯನ್ನು ಎಲ್ಲಾ ಕಡೆಗೆ ಹುಡುಕಿ ನಮ್ಮ ಸಂಬಂದಿಕರಲ್ಲಿ ವಿಚಾರಿಸಿದ್ದು ಇಲ್ಲಿಯವರೆಗೆ ನನ್ನ ತಂದೆ ಎಲ್ಲಿ ಇರುತ್ತಾನೆ ಅಂತ ಸುಳಿವು ಸಿಕ್ಕಿರುವದಿಲ್ಲ. ಕಾರಣ ಇಂದು ದಿನಾಂಕ.06.02.2019 ರಂದು ತಡವಾಗಿ ಠಾಣೆಗೆ ಬಂದು ನನ್ನ ತಂದೆ ನಾಪತ್ತೆ ಆದ ಬಗ್ಗೆ ದೂರು ನೀಡುತ್ತಿದ್ದು, ನನ್ನ ತಂದೆ ಮನೆಯಿಂದ ಹೋಗುವಾಗ ಮೈಗೆ ಕಪ್ಪು ಬಣ್ಣದ ಸ್ವೇಟರ ಧರಿಸಿದ್ದು,, ತಲೆಗೆ ಕೆಂಪು ಬಣ್ಣದ ಶಲ್ಯಾ ಧರಿಸಿದ್ದು,ಬಿಳಿ ಪೈಜಾಮ ಅಂಗಿ, ಬಿಳಿ ಬಣ್ಣದ ಧೋತರ ಧರಿಸಿದ್ದುಇರುತ್ತದೆ,ಮತ್ತು ಕಪ್ಪು-ಬಿಳಿ ಮಿಶ್ರಿತ ಗಡ್ಡ ಬಿಟ್ಟಿದ್ದು ಇರುತ್ತದೆ. ಕಾರಣ ನನ್ನ ತಂದೆ ಗುಂಜಲಪ್ಪ ತಂದೆ ಯಲ್ಲಪ್ಪ ಮೈಲಾಪೂರದೋರ ವಯ:57 ವರ್ಷ,ಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ಆಶಾಪೂರ ತಾಂಡಾ ತಾ: ಗುರುಮಠಕಲ ಜಿ: ಯಾದಗಿರಿ ಈತನನ್ನು ಎಲ್ಲಿಯಾದರು ಸಿಕ್ಕಲ್ಲಿ ಪತ್ತೆ ಹಚ್ಚಿ ಕೊಡಬೇಕೆಂದು ಹೇಳಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 31/2019 ಕಲಂ: ಮನುಷ್ಯ ಕಾಣೆಯಾದ ಬಗ್ಗೆ  ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 17/2019 ಕಲಂ 78[3] ಕೆಪಿ ಯ್ಯಾಕ್ಟ :- ದಿನಾಂಕ 06/02/2019 ರಂದು 3.30 ಪಿಎಮ್ ಕ್ಕೆ  ಹೋತಪೇಟ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ   ಮಲ್ಲಣ್ಣ ತಂದೆ ಬಸಣ್ಣ ಗೌಡಗೇರಿ ವ:45, ಜಾ:ಲಿಂಗಾಯತ, ಉ:ಹೋಟಲಕೆಲಸ ಸಾ:ಹೋತಪೇಟ  ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1440=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 3.30 ಪಿಎಮ್ ದಿಂದ 4.30 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 5 ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 6 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 17/2019 ಕಲಂ 78[3] ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 14/2019 ಕಲಂ:323, 324 504, 506 34 ಐ.ಪಿ.ಸಿ :- ದಿನಾಂಕ 06/02/2019 ರಂದು 6 ಪಿ ಎಮ್ ಕ್ಕೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಸಾರಾಂಶವೇನಂದರೆ ದಿನಾಂಕ 06.02.2019 ರಂದು ಮುಂಜಾನೆ 09.00 ಘಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಕಾಕ 1] ನಿಂಗನಗೌಡ ತಂದೆ ಅಯ್ಯಪ್ಪಗೌಡ ತುಂಬಗಿ ಹಾಗು ಅವರ ಮಕ್ಕಳಾದ 2] ಭೀಮಣಗೌಡ ತಂದೆ ನಿಂಗನಗೌಡ ತುಂಬಗಿ 3] ಬಸನಗೌಡ ತಂದೆ ಸಾಹೇಬಗೌಡ ತುಂಬಗಿ 4] ಹಣಮಗೌಡ ತಂದೆ ಸಾಹೆಬಗೌಡ ತುಂಬಗಿ ಈ ನಾಲ್ಕು ಜನರು ನಮ್ಮ ಮನೆಗೆ ಬಂದು ಏನಲೇ ರಂಡಿ ಮೈತ್ರಿ ನೀನು ನಿನ್ನ ಗಂಡನ ಮನೆಯಲ್ಲಿ ಇರುವದನ್ನು ಬಿಟ್ಟು ಇಲ್ಲಿ ಬಂದು ನಿಮ್ಮ ತಮ್ಮನ ಬೋರಿನಿಂದ ನೀರು ತೆಗೆದುಕೊಳ್ಳಲು ಬೇಡ ಅನ್ನುವಳು ನೀನ್ಯಾರೆ ಸದ್ಯ ನೀನು ನಾಟಕ ಮಾಡಲಿಕ್ಕೆ ಹತ್ತಿದಿ ಅಂತ ಅಂದಾಗ ನಾನೇನು ನಾಟಕ ಮಾಡಿದ್ದೇನೆ ಅಂತ ಅಂದಾಗ ಎಲ್ಲರೂ ಈ ಸೂಳೆಯದು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿ ಬಸನಗೌಡ ಈತನು ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಭೀಮನಗೌಡ ಈತನು ಸಹ ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಎಡಗೈ ಬೆರಳಿಗೆ ಹೊಡೆದು ರಕ್ತಗಾಯ ಪಡಿಸಿದನು. ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನನ್ನ ತಾಯಿಯಾದ ಅವ್ವಮ್ಮ ಗಂಡ ಅಚ್ಚಪ್ಪಗೌಡ ತುಂಬಗಿ ಇವಳು ಬಂದು ಚೀರಾಡಿದಾಗ ಸದರಿಯವರು ನನಗೆ ಹೊಡೆಯುವದನ್ನು ಬಿಟ್ಟು ಹೋದರು. ನಂತರ ಸದರಿಯವರೆಲ್ಲರೂ ಸೂಳೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಸದರಿ ಜಗಳದಲ್ಲಿ ನನ್ನ ಕೊರಳಲ್ಲಿದ್ದ 5 ತೊಲಿ ಬಂಗಾರದ ಚೆಪ್ಲರ ಸಹ ಕಳೆದುಹೋಗಿದ್ದು ಇರುತ್ತದೆ. ಕಾರಣ ನನ್ನೊಂದಿಗೆ ವಿನಾಕಾರಣವಾಗಿ ಜಗಳ ತೆಗೆದ ನಮ್ಮ ಕಾಕ ಹಾಗು ಅವರ ಮಕ್ಕಳ ವಿರುದ್ದ ಸೂಕ್ತ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 14/2019 ಕಲಂ 323 324 504 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 34/2019 ಕಲಂ 323,324,504,506 ಸಂ.34 ಐ.ಪಿ.ಸಿ. :- ದಿನಾಂಕ:06-02-2019 ರಂದು 6 ಪಿ.ಎಂ. ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ಸರಕಾರಿ ಆಸ್ಪತ್ರೆ ಸುರಪುರದಿಂದ ಎಮ್ ಎಲ್ ಸಿ ಇದೆ ಅಂತಾ ಪೋನ ಮೂಲಕ ಮಾಹಿತಿ ತಿಳಿಸಿದ ಮೇರೆಗೆ 6-15 ಪಿ.ಎಂ.ಕ್ಕೆ ಆಸ್ಪತ್ರೆ ಬೇಟಿ ಗಾಯಾಳುದಾರನಾದ ಬೀರಲಿಂಗ ತಂದೆ ಮಲ್ಲಿಕಾಜರ್ುನ ಜಂಬಲದಿನ್ನಿ ಸಾ:ದಿವಳಗುಡ್ಡಾ ಈತನ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ:06-02-2019 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ನಮ್ಮ ಊರ ಮುಂದ ಇರುವ ಹಳ್ಳದ ಹತ್ತಿರ ಹೋಗಿ ಹಳ್ಳದ ಬದಿಗೆ ಇರುವ ಸರಕಾರಿ ಜಾಲಿ ಕಟ್ಟಿಗೆ ಕಡೆಯುತ್ತಿರುವಾಗ ಗ್ರಾಮದ 1) ನಿಂಗಪ್ಪ ತಂದೆ ಪಿಡ್ಡಪ್ಪ ವನಕೇರಿ 2) ಮರೆಪ್ಪ ತಂದೆ ಬೀಮಪ್ಪ ಹಾದಿಮನಿ ಇಬ್ಬರು ಜಾತಿ:ಕುರುಬರ ಇವರು ನನ್ನ ಹತ್ತಿರ ಬಂದವರೆ ಅವರಲ್ಲಿಯ ಮರೆಪ್ಪ ಈತನು ಲೇ ಬೋಸಡಿ ಸುಳೆ ಮಗನೆ ನಮ್ಮ ತಂಗಿ ನಾಗಮ್ಮಳ ಸಂಗಡ ಇದ್ದಿಯಂತ ಮಗನೇ ಅಂತಾ ಅವಾಚ್ಯ ಬೈದು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ನನ್ನ ತಲೆಗೆ ಬೆನ್ನಿಗೆ ಸೊಂಟಕ್ಕೆ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದನು.  ನಿಂಗಪ್ಪ ಈತನು ಕೆಳಗೆ ಬಿದ್ದ ನನಗೆ ಕಾಲಿನಿಂದ ನನ್ನ ಬೆನ್ನಿಗೆ ಸೊಂಟಕ್ಕೆ ಒದ್ದು ಒಳಪೆಟ್ಟಿ ಪಡಿಸಿ ಇಬ್ಬರು ಕೂಡಿ ಹೊಡೆ ಬಡೆ ಮಾಡುತ್ತಿರುವಾಗ ನಾನು ಚೀರಾಡು ಅಳುತ್ತಿರುವಾಗ ಇನ್ನೊಮ್ಮೆ ನಮ್ಮ ತಂಗಿ ತಂಟೆಗೆ ಬಂದರೆ ನೀನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ನನಗೆ ಹೊಡೆಯುವದನ್ನು ಬಿಟ್ಟು ಹೊರಟು ಹೋಗಿದ್ದು ಇರುತ್ತದೆ. ನಂತರ ಸುದ್ದಿ ತಿಳಿದು ನಮ್ಮ ದೊಡ್ಡವ್ವ ನನ್ನ ಹತ್ತಿರ ಬಂದು ನನ್ನನ್ನು ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಉಪಚಾರ ಕುರಿತು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನನಗೆ ಹೊಡೆ ಬಡೆ ಮಾಡಿ ಗಾಯಗೊಳಿಸಿ ಜೀವದ ಬೇದರಿಕೆ ಹಾಕಿದ ನಿಂಗಪ್ಪ ಮತ್ತು ಮರೆಪ್ಪ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಬರೆಯಿಸಿದ್ದು ನಿಜವಿರುತ್ತದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!