ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 16-11-2018
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 309/2018 ಕಲಂ: 317 ಐಪಿಸಿ:-ದಿನಾಂಕ 13.11.2018 ರಂದು ಸಂಜೆ 5:00 ಗಂಟೆಯ ಸುಮಾರಿಗೆ ಸುಮಾರು 20-25 ವರ್ಷದ ಹೆಣ್ಣು ಮಗಳು ಗುರುಮಠಕಲ್ ಪಟ್ಟಣದ ವಿ.ಸಿ ಮೈತ್ರಿ ಆಸ್ಪತ್ರೆಗೆ ದಾಖಲಾಗಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ನಂತರ ಆ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದು ನಂತರ ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಬಂದು ಆ ಮಗುವನ್ನು ವಶಕ್ಕೆ ಪಡೆದುಕೊಂಡು ಉಪಚಾರಕ್ಕಾಗಿ ದಿನಾಂಕ 14.11.2018 ರಂದು ಮಧ್ಯಾಹ್ನ 1:00 ಗಂಟೆಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ನಂತರ ಮೇಲಾಧಿಕಾರಿಗಳೊಂದಿಗೆ ಚಚರ್ಿಸಿ ಇಂದು ದಿನಾಂಕ 15.11.2018 ರಂದು ಸಂಜೆ 5:00 ಗಂಟೆ ಠಾಣೆಗೆ ಬಂದು ಅನಾಥ ಹೆಣ್ಣು ಮಗುವಿನ ತಂದೆ-ತಾಯಿಯನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 309/2018 ಕಲಂ: 317 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಶೋರಾಪುರ ಪೊಲೀಸ್ ಠಾಣೆ ಗುನ್ನೆ ನಂ:- 364/2018 ಕಲಂ: 279, 338 ಐಪಿಸಿ:-ದಿನಾಂಕಃ 15/11/2018 ರಂದು 7-00 ಪಿ.ಎಮ್ ಕ್ಕೆ ಶ್ರೀಮತಿ ಶಶಿಕಲಾ ಗಂಡ ನಾಗರಾಜ ಗುಳಬಾಳ ಸಾಃ ಸಿದ್ದಾಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ದಾಪೂರ ಗ್ರಾಮದಿಂದ ತವರೂರು ಆದ ದೇವತಕಲ್ ಗ್ರಾಮಕ್ಕೆ ಬಂದಿದ್ದು, ದಿನಾಂಕಃ 13-11-2018 ರಂದು ಮದ್ಯಾಹ್ನ ನನ್ನ ಗಂಡನಾದ ನಾಗರಾಜ ತಂದೆ ತಿಮ್ಮಯ್ಯ ಗುಳಬಾಳ ಇವರು ಸಹ ದೇವತಕಲ್ ಗ್ರಾಮಕ್ಕೆ ಬಂದಿದ್ದರು. ನಂತರ ಸಾಯಂಕಾಲ 4-30 ಗಂಟೆಯ ಸುಮಾರಿಗೆ ನನ್ನ ಗಂಡನಾದ ನಾಗರಾಜ ಹಾಗು ಆತನ ಸ್ನೇಹಿತನಾದ ನಮ್ಮೂರಿನ ಲಕ್ಷ್ಮಣ ತಂದೆ ಹಣಮಂತರಾಯ ಡೊಣ್ಣಗೇರಿ ಇಬ್ಬರೂ ಭತ್ತದ ಬೆಳೆಗೆ ಸಿಂಪರಣೆ ಮಾಡಲು ಕ್ರಿಮಿನಾಶಕ ಔಷಧ ತಗೆದುಕೊಂಡು ಬರುವದಕ್ಕಾಗಿ ಸುರಪೂರಕ್ಕೆ ಹೋಗಿ ಬರುತ್ತೇವೆ ಅಂತ ಹೇಳಿ ಲಕ್ಷ್ಮಣ ಈತನ ಮೋಟರ ಸೈಕಲ್ ನಂಬರ ಕೆ.ಎ 33 ಘ 1475 ನೇದ್ದರ ಮೇಲೆ ಹೋದರು. ನಂತರ ನಾವು ಮನೆಯಲ್ಲಿದ್ದಾಗ ನಮ್ಮೂರಿನ ಪ್ರಭು ತಂದೆ ರಂಗಣ್ಣ ಮಾಲಿಪಾಟೀಲ್ ಎಂಬುವವರು ನನ್ನ ಅಣ್ಣನಾದ ಸಾಹೇಬಗೌಡ ಇವರ ಮೊಬೈಲಿಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಮ್ಮೂರಿನ ಲಕ್ಷ್ಮಣ ಡೊಣ್ಣಗೇರಿ ಇತನು ತನ್ನ ಮೋ.ಸೈಕಲ್ ಮೇಲೆ ಹಿಂದುಗಡೆ ನಿಮ್ಮ ತಂಗಿಯ ಗಂಡನಾದ ನಾಗರಾಜನಿಗೆ ಕೂಡಿಸಿಕೊಂಡು ದೇವಾಪೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಮೋ.ಸೈಕಲ್ ನಡೆಸಿಕೊಂಡು ಬರುವಾಗ ಈಗ್ಗೆ 7-45 ಪಿ.ಎಮ್ ಸುಮಾರಿಗೆ ನಮ್ಮೂರಿನ ಸಮೀಪದಲ್ಲಿರುವ ಚನ್ನಪಟ್ಟಣ ದವರ ದಾಬಾ ಹತ್ತಿರ ವೇಗದಲ್ಲಿ ಮೋ.ಸೈಕಲ್ ನಿಯಂತ್ರಣ ತಪ್ಪಿ ಸ್ಕ್ರೀಡ್ ಆಗಿ ಡಾಂಬರ ರಸ್ತೆಯ ಮೇಲೆ ಬಿದ್ದಿದ್ದರಿಂದ ಅಪಘಾತದಲ್ಲಿ ನಿಮ್ಮ ತಂಗಿಯ ಗಂಡ ನಾಗರಾಜನ ತಲೆಗೆ ಭಾರಿ ರಕ್ತಗಾಯಗಳಾಗಿರುವದಲ್ಲದೇ, ಎಡಗಣ್ಣಿನ ಮೇಲೆ ಹುಬ್ಬಿಗೆ, ಗದ್ದಕ್ಕೆ, ಭುಜದ ಮೇಲೆ ಅಲ್ಲಲ್ಲಿ ಗಾಯಗಳಾಗಿ ಪ್ರಜ್ಞೆ ತಪ್ಪಿರುತ್ತಾನೆ ಅಂತ ತಿಳಿಸಿದನು. ಆಗ ಗಾಬರಿಯಾಗಿ ನಾನು ಮತ್ತು ನನ್ನ ಅಣ್ಣ ಇಬ್ಬರೂ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು, ನನ್ನ ಗಂಡನಿಗೆ ಭಾರಿ ರಕ್ತಗಾಯಗಳಾಗಿ ರಕ್ತಸ್ರಾವ ಆಗುತ್ತಿದ್ದು, ಅಪಘಾತ ಪಡಿಸಿದ ಲಕ್ಷ್ಮಣ ಇತನಿಗೆ ಯಾವುದೇ ಗಾಯಗಳಾಗಿರಲಿಲ್ಲ. ನಂತರ ನಾವು ನನ್ನ ಗಂಡನಿಗೆ ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತೇವೆ ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಮೋ.ಸೈಕಲ್ ನಡೆಸಿ ನನ್ನ ಗಂಡನಿಗೆ ಅಪಘಾತ ಪಡಿಸಿ ಭಾರಿ ರಕ್ತಗಾಯ ಪಡಿಸಿರುವವನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿರ್ಯದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 364/2018 ಕಲಂಃ 279, 338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ.ೆ
Hello There!If you like this article Share with your friend using