ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-11-2018
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 164/2018 ಕಲಂ.323,504 ಐಪಿಸಿ:-ದಿನಾಂಕ.14/11/2018 ರಂದು 7:00 ಪಿ.ಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 14/11/2018 ರಂದು 5-45 ಪಿಎಂಕ್ಕೆ ಶ್ರೀ ಶಂಕರಗುರು ತಂ. ಯಂಕಪ್ಪ ವಕೀಲರು ಸಾಃ ಮರ್ಕಲ್ ತಾಃಶಹಾಪೂರ ಜಿಃಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಹಾಜರಪಡಿಸಿದ್ದು ಅಜರ್ಿಯ ಸಾರಾಂಶವೆನೆಂದರೆ ನಿನ್ನೆ ದಿನಾಂಕ.13/11/2018 ರಂದು 4-30 ಪಿಎಂ ಸುಮಾರಿಗೆ ನಮ್ಮ ನ್ಯಾಯಾಲಯದ ಕಾರ್ಯಕಲಾಪ ಮುಗಿಸಿಕೊಂಡು ಹೊರಗೆ ಬರುವಾಗ ಗೋಪಿ ವಯಸ್ಸು 24 ವರ್ಷ ಸಾಃ ಸೌದಗರ ತಾಂಡ ತಾಃಜಿಃಯಾದಗಿರಿ ಆದ ಈತನು ಖಾಲಿ 20 ರೂ ಛಾಪಾ ಕಾಗ ತೆಗೆದಕೊಂಡು ಬಂದು ಪ್ರಮಾಣ ಪತ್ರ ಮಾಡಿಸಿಕೊಡು ಎಂದು ಕೇಳಿದ, ನೋಟರಿ ಮೂಲಕ ದೃಢಿಕರಿಸಿ ಕೇಳಿಕೊಂಡಿದ್ದರಿಂದ ನಾನು ಅದಕ್ಕೆ ಒಪ್ಪಿಗೆ ಹಣ ಕೊಡವ ವಿಷಯದಲ್ಲಿ ಅನವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಬಲಬುಜಕ್ಕೆ ಹೊಡೆದು ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮುಂದೆ ಅವಮಾನಿಸಿ ಹಲ್ಲೆ ಮಾಡುತ್ತಿದ್ದಾಗ ಹತ್ತಿರದಲ್ಲಿ ನಿಂತಿರುವ ವಕೀಲರು ಎ.ಎಚ್.ತಳವಾರ ಮತ್ತು ಸಿದ್ದು ಚವ್ಹಾಣ ಸಹಾಯಕ ಸಕರ್ಾರಿ ಗೃಹ ರಕ್ಷಕ ದಳ ಸಿಬ್ಬಂದಿ ಜಗಳ ಬಿಡಿಸುವಷ್ಟರಲ್ಲಿ ಗೋಪಿ ಎಂಬುವವನು ನ್ಯಾಯಾಲಯದ ಕಂಪೌಂಡ ಹಾರಿ ಓಡಿ ಹೋದನು. ಸದರಿ ವಿಷಯವು ನಮ್ಮ ವಕೀಲರ ಸಂಘದ ಅದ್ಯಕ್ಷರ ಗಮನಕ್ಕೆ ತಮದಿದ್ದರಿಂದ ಇಂದು ದಿನಾಂಕ.14/11/2018 ರಂದು ಬೆಳಿಗ್ಗೆ 10-30 ನಿಮಿಷಕ್ಕೆ ಸಭೆಯನ್ನು ಕರೆಯಲಾಗಿದ್ದು ಈ ಸಂಧರ್ಭದಲ್ಲಿ ಸಂಭಂದಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವಂತೆ ತೀಮರ್ಾನಿಸಿದ್ದರಿಂದ ಸದರಿ ದೂರನ್ನು ಕೊಡಲು ಕಾಲ ವಿಳಂಭವಾಗಿರುತ್ತದೆ. ಆದರೆ ದುರುದ್ದೇಶಪೂರ್ವಕವಾಗಿ ಕಾಲ ವಿಳಂಭ ಮಾಡಿರುವುದಿಲ್ಲಾ ನನಗೆ ನ್ಯಾಯಾಲಯದ ಆವರಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಸಾರ್ವಜನಿಕ ಸ್ಥಳದಲ್ಲಿ ನನ್ನ ವೈಯಕ್ತಿಕ ಗೌರವಕ್ಕೆ ಧಕ್ಕೆ ತಂದಿರುವ ಗೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ವಿನಂತಿ ಅಂತಾ ಅಜರ್ಿ ಕೊಟ್ಟಿದ್ದು ಸದರಿ ಪ್ರಕರಣವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಗುನ್ನೆ ನಂ.164/2018 ಕಲಂ.323,504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:-218/2018 ಕಲಂ 279, 304 (ಎ) ಐ.ಪಿ.ಸಿ ಸಂ: 187 ಐ.ಎಮ್.ವ್ಹಿ ಎಕ್ಟ:- ದಿನಾಂಕ: 13-11-2018 ರಂದು 10 ಪಿ.ಎಮ್ ಸುಮಾರಿಗೆ ಮೃತ ಬನ್ನಪ್ಪ ತಂದೆ ಭೀಮರಾಯ ಮಾಧವಾರ ವಯಾಃ 28 ವರ್ಷ ಸಾಃ ಕೊಯಿಲೂರ ಇತನು ಎಂದಿನಂತೆ ರಾತ್ರಿ ಮನೆಯಲ್ಲಿ ಊಟ ಮಾಡಿ ತನ್ನ ಹೊಲದಲ್ಲಿ ಸೇಂಗಾದ ಬೆಳೆಗಳಿಗೆ ನೀರು ಬಿಡುವ ಸಲುವಾಗಿ ಒಬ್ಬನೇ ಕೊಯಿಲೂರ ಮತ್ತು ಎಂ.ಹೊಸಳ್ಳಿ ರೋಡಿನ ಮೇಲೆ ಸರಕಾರಿ ಗೋದಾಮಿನ ಹತ್ತಿರ ಹೊರಟಾಗ ಅದೇ ವೇಳೆಗೆ ಯಾವುದೋ ಅಪರಿಚಿತ ಮೋಟಾರ ಸೈಕಲ ಅದರ ಸವಾರನು ತನ್ನ ಮೋಟಾರ ಸೈಕಲ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಮೃತ ಬನ್ನಪ್ಪನಿಗೆ ಡಿಕ್ಕಿಪಡಿಸಿದಾಗ ಬನ್ನಪ್ಪನು ಭಾರಿ ಗಾಯಗಳು ಹೊಂದಿ ಬೇವುಶಾಗಿ ರೋಡಿನ ಮೇಲೆ ಬಿದ್ದಾಗ ಅದೇ ವೇಳೆಗೆ ಹೊಲದಿಂದ ಮನೆ ಕಡೆಗೆ ಹೊರಟಿದ್ದ ಚಂದಪ್ಪ ಮುಸಂಡಿ ಸಾಃ ಕೊಯಿಲೂರ ಇತನು ಮತ್ತು ಇನ್ನೊಬ್ಬ ಮೃತನು ರೋಡಿನ ಮೇಲೆ ಬಿದ್ದುದನ್ನು ಮೃತನ ಮನೆಯವರಿಗೆ ತಿಳಿಸಿದಾಗ ಮೃತನ ಹೆಂಡತಿ ಸುಮಂಗಲಾ, ಅಣ್ಣ ಬಸಲಿಂಗಪ್ಪ ಮತ್ತು ತಾಯಿ ಬನ್ನಮ್ಮ ಹಾಗೂ ಇತರರು ಕೂಡಿ ಸ್ಥಳಕ್ಕೆ ಬಂದು ಮೃತನಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಉಪಚಾರಕ್ಕೆ ಸೇರಿಕೆ ಮಾಡಿದಾಗ ವೈಧ್ಯರ ಸಲಹೇ ಮೇರೆಗೆ ಮೃತನಿಗೆ ಹೆಚ್ಚಿನ ಉಪಚಾರಕ್ಕೆ ರಾಯಚೂರಿನ ರೀಮ್ಸ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ರಾಯಚೂರಿನ ರೀಮ್ಸ ಆಸ್ಪತ್ರೆಯಿಂದ ಮೃತ ಬನ್ನಪ್ಪನಿಗೆ ಹೆಚ್ಚಿನ ಉಪಚಾರಕ್ಕೆ ಬಳ್ಳಾರಿಯ ವೀಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿ ಮೃತ ಬನ್ನಪ್ಪನು ಉಪಚಾರ ಹೊಂದುತ್ತಾ ಇಂದು ಮಧ್ಯಾಹ್ನ 2-43 ಪಿ.ಎಮ್ ಕ್ಕೆ ಮೃತಪಟ್ಟಿರುತ್ತಾನೆ, ಸದರಿ ಪ್ರಕರಣದಲ್ಲಿ ಗಾಯಾಳು ಬನ್ನಪ್ಪ ಮೃತಪಟ್ಟಿದ್ದರಿಂದ ಈ ಪ್ರಕರಣದಲ್ಲಿ ಕಲಂ 304 (ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ವಿನಂತಿಸಿಕೊಂಡಿದ್ದು ಇರುತ್ತದೆ.
ಗುರುಮಠಕಲ್ ಪೊಲೀಸ್ ಠಾಣೆ. ಗುನ್ನೆ ನಂ:- 308/2018 ಕಲಂ:323, 324, 354, 504, 506, ಸಂಗಡ 34 ಐಪಿಸಿ:-ದಿನಾಂಕ 20.08.2018 ರಂದು ಆರೋಪಿತರು ಫಿರ್ಯಾದಿಯ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ತಮ್ಮ ಶೌಚಾಲಯನ್ನು ಕಟ್ಟುತ್ತಿದ್ದಾಗ ಅದನ್ನು ಕೇಳಿದ ಫಿರ್ಯಾದಿಗೆ ಆರೋಪಿತರು ಅವಾಚ್ಯವಾಗಿ ಬೈದು ಹೊಡೆ-ಬಡೆ ಜೀವದ ಬೆದರಿಕೆ ಮಾನ್ಯ ನ್ಯಾಯಾಲಯದಿಂದ ಫಿರ್ಯಾದಿಯು ದೂರು ಅಲ್ಲಿಸಿದ್ದು ಸದರಿ ಫಿರ್ಯಾದಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 308/2018 ಕಲಂ: 323, 324, 354, 504, 506, ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 166/2018 ಕಲಂ, 78(3) ಕೆ.ಪಿ.ಆ್ಯಕ್ಟ್ :- ದಿನಾಂಕ: 14/11/2018ರಂದು02.25 ಪಿಎಮ್ ಕ್ಕೆ ಠಾಣೆಯಎಸ್.ಹೆಚ್.ಡಿಕರ್ತವ್ಯದಲ್ಲಿದ್ದಾಗ ಶ್ರೀ ಸುರೇಶ ಬಾಬು ಪಿ.ಎಸ್.ಐ ಸಾಹೇಬರುಒಬ್ಬಆರೋಪಿ ಮತ್ತುಜಪ್ತಿಪಂಚನಾಮೆ ಮುದ್ದೇಮಾಲುದೊಂದಿಗೆಠಾಣೆಗೆ ಬಂದುಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: ದಿನಾಂಕ: 14/11/2018 ರಂದು 12.50 ಪಿಎಮ್ ಕ್ಕೆ ವನದುಗರ್ಾಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರಸ್ತೆಯ ಮೇಲೆ ಆರೋಪಿತನಾಧರಂಗಣ್ಣತಂದೆ ಭಾಗಣ್ಣ ಹುಣಸಿಗಿಡದವರ ವಯಾ: 28 ಜಾ:ಬೇಡರ ಉ: ಒಕ್ಕಲುತನ ಸಾ: ವನದುಗರ್ಾತಾ: ಶಹಾಪೂರಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ3200/- ರೂ. ಹಾಗೂ ಒಂದು ಮಟಕಾಚೀಟಿ ಮತ್ತುಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣದಾಖಲಿಸಲು ಸೂಚಿಸಿದ ವರದಿಯಸಾರಂಶದಮೇಲಿಂದ ಮಾನ್ಯ ನ್ಯಾಯಾಲಯದಅನುಮತಿ ಪಡೆದುಕೊಂಡು03.25 ಪಿಎಮ್ ಕ್ಕೆ ಠಾಣೆಗುನ್ನೆ ನಂ: 166/2018 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.
Hello There!If you like this article Share with your friend using