Yadgir District Reported Crimes Updated on 30-08-2018

By blogger on ಗುರುವಾರ, ಆಗಸ್ಟ್ 30, 2018


Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 183//2018 ಕಲಂ 143, 147, 323, 504, 504, 506, 354 ಸಂಗಡ 149  ಐ.ಪಿ.ಸಿ;- ದಿನಾಂಕ 28-08-2018 ರಂದು 5 ಪಿ.ಎಮ್ ಕ್ಕೆ  ಫಿರ್ಯಾಧಿದಾರರಾದ ಶ್ರೀಮತಿ ರಾಮಿಭಾಯಿ ಗಂಡ ನಾಮ್ಯಾ ಜಾಧವ ವಯಾ:43 ಉ:ಒಕ್ಕಲುತನ ಜಾ: ಲಂಬಾಣಿ ಸಾ: ಜೀನಕೇರಾ ತಾಂಡಾ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ನನ್ನ ಗಂಡನಿಗೆ 4 ಜನ ಅಣ್ಣತಮ್ಮಂದಿರರಿದ್ದು. ನನ್ನ ಗಂಡನೇ ಹಿರಿಯವನಿದ್ದು ಎರಡನೇಯ ದೇವ್ಯಾ. ಮೂರನೇಯ ಹೀರ್ಯಾ ನಾಲ್ಕನೇಯ ರಮೇಶ ಮತ್ತು ಕೋನೆಯವ ಅಮೀನಾ ಅಂತಾ ಇದ್ದು ಎಲ್ಲರೂ ನಮ್ಮ ಹಿರಿಯರಿಂದ ಬಂದಂತಹ ಆಸ್ತಿಯನ್ನು ಪಾಲು ಮಾಡಿಕೊಂಡು ಬೇರೆ ಬೇರೆಯಾಗಿ ಉಪಜೀವಿಸುತ್ತಾರೆ. ಆದರೇ ಇಲ್ಲಿಯವರೆಗೂ ಹಿರಿಯರ ಹೋಲದಲ್ಲಿ ಪಾಲು ಆಗಿಲ್ಲಾ. ನನ್ನ  ನಮ್ಮ ಹಾಗೂ ಮೇಲ್ಕಂಡ ನಮ್ಮ ಮೈದುನರ ಮನೆಗಳು ಮನೆಗಳು ಅಕ್ಕಪಕ್ಕದಲ್ಲಿಯೇ ಇರುತ್ತವೆ. ನಾವು ಹಿರಿಯರಿಂದ ಬಂದಂತಹ ಹಳೆಯ ಮನೆಯಲ್ಲಿ ವಾಸವಿದ್ದು ನಮಗೆ ವಾಸಿಸಲು ಮನೆ ಇರದ ಕಾರಣ ನಾವು ಈಗ ಮನೆ ಕಟ್ಟಿಕೊಳ್ಳುವ ಸಲುವಾಗಿ ಎಲ್ಲಾ ಸಾಮಾನುಗಳನ್ನು ಸಂಗ್ರಹ ಮಾಡಿಕೊಳ್ಳುತ್ತಿದ್ದೆವೆ. ನಮ್ಮ ಮೈದುನರ ಮನೆಯ ಮುಂದೆ ಮನೆಯ ಕಟ್ಟುವ ಸಾಮಾನುಗಳು ಬಿದ್ದ ಕಾರಣ ಅವರು ನಮ್ಮೊಂದಿಗೆ ಈಗ ಮೊದಲಿನಿಂದಲೂ ಕಿರಿಕಿರಿ ಮಾಡುತ್ತಾ ಬಂದಿರುತ್ತಾರೆ. 
     ಹೀಗಿದ್ದು ದಿನಾಂಕ 27-08-2018 ರಂದು ರಾತ್ರಿ ಸುಮಾರು 9 ಗಂಟೆಗೆ ನಮ್ಮ ತಾಂಡಾದ ಲಚ್ಚ್ಯಾ ತಂದೆ ಶಂಕ್ರೆಪ್ಪಾ ಜಾಧವ ಇವನಿಗೆ ನಮ್ಮ ಮನೆಗೆ ಕರೆದು ನಮಗೆ ಈಗ ಮನೆ ಕಟ್ಟಲು ಹಣದ ಅವಶ್ಯಕತೆ ಇದೆ ಈಗ ನೀನು ಟ್ರ್ಯಾಕ್ಟರ ಮಾರಿದ್ದಿ ನಿನ್ನ ಹತ್ತಿರ ಹಣವಿದ್ದರೇ ನಮಗೆ ಕೈಗಡ ರೂಪದಲ್ಲಿ ಕೊಡು ಮತ್ತೆ ನಿನಗೆ ಮರಳಿ ಕೊಡುತ್ತೆವೆ ಅಂತಾ ಆತನ ಹತ್ತಿರ ಹಣ ಕೇಳುತ್ತಿದ್ದೆವು. ಆ ವೇಳೆಯಲ್ಲಿ ಮನೆಯಲ್ಲಿ ನಾನು ಮತ್ತು ನನ್ನ ಮಗ ಚನ್ನಪ್ಪಾ ಇಬ್ಬರು ಇದ್ದೆವು. ಅದೇ ವೇಳೆಗೆ ನಮ್ಮ ಮ್ಯದುನರಾದ  1) ದೇವ್ಯಾ ತಂದೆ ಮೋತ್ಯಾ, 2) ಹೀರ್ಯಾ ತಂದೆ ಮೋತ್ಯಾ 3) ಅಮೀನಾ ತಂದೆ ಮೋತ್ಯಾ ಮತ್ತು 4) ಕಮಲಿಬಾಯಿ ಗಂಡ ಹೀರ್ಯಾ ಮತ್ತು 5) ರತ್ನಿಬಾಯಿ ಗಂಡ ದೇವ್ಯಾ ಎಲ್ಲರೂ ನಮ್ಮ ಮನೆಯ ಮುಂದುಗಡೆ ಬಂದು ನನಗೆ ಏ ರಂಡಿ ಈ ಮೊದಲು ನಮಗೂ ಮತ್ತು ನಮಗೂ ಲಚ್ಚ್ಯಾ ತಂದೆ ಶಂಕ್ರೆಪ್ಪಾ ಜಾಧವ ಇತನೇ ಜಗಳಾ ಹಚ್ಚಿದ್ದಾನೆ ಈಗ ಮತ್ತೆ ಅವನಿಗೆ ಮನೆಯಲ್ಲಿ ಕೂಡಿಸಿದ್ದಿ ರಂಡಿ ಭೋಸಡಿ ಅಂತಾ ಬೈಹತ್ತಿದನು. ಆಗ ನಾನು ಮನೆಯಿಂದ ಹೊರಗಡೆ ಬಂದು ಹೀಗೆಕೆ ಬೈಯ್ಯುತ್ತಿದ್ದರಿ ನಮಗೆ ಮನೆ ಕಟ್ಟಿಕೊಳ್ಳಲು ಹಣದ ತೊಂದರೆ ಇದರೆ ಆದ್ದರಿಂದ ಆತನಿಗೆ ಹಣ ಕೇಳಲು ಮನೆಗೆ ಕರೆಸಿಕೊಂಡಿದ್ದೆನೆ ಅಂತಾ ಅವರಿಗೆ ಹೇಳಿದರೂ ಕೂಡಾ ಅವರಲ್ಲಿ ಹೀರ್ಯಾ ತಂದೆ ಮೋತ್ಯಾ ಮತ್ತು ಅಮೀನಾ ತಂದೆ ಮೋತ್ಯಾ ಇಬ್ಬರೂ ಈ ರಂಡಿದು ತಾಂಡಾದಲ್ಲಿ ಬಾಳ ಆಗಿದೆ ಅಂತಾ ಅಂದವರೇ ಅವರಿಬ್ಬರೂ ನನಗೆ ಹೊಟ್ಟೆಯ ಮೇಲೆ ಜೋರಾಗಿ ಒದ್ದರು. ಆಗ ನಾನು ಅಂಗಾತಾಗಿ ಕೆಳಗಡೆ ಬಿದ್ದಾಗ ದೇವ್ಯಾ ತಂದೆ ಮೋತ್ಯಾ ಇತನು ನಮಗೆ ಎದುರು ಮಾತಾಡುತ್ತಿ ಚೀನಾಲಿ ಅಂತಾ ನನ್ನ ಸೀರೇ ಹಿಡಿದು ನೆಲದ ಮೇಲೆ ಎಳೆದಾಡಿ ಕೈಯಿಂದ ಎದೆಯ ಮೇಲೆ ಹೊಡೆದು ಮಾನಭಂಗ ಮಾಡಲು ಪ್ರಯತ್ನಿಸಿದನು. ಆಗ ನಾನು ಚೀರಾಡುವುದು ಒದರಾಡುವುದು ಮಾಡುತ್ತಿದ್ದಾಗ ಕಮಲಿಬಾಯಿ ಗಂಡ ಹೀರ್ಯಾ ಜಾದವ ಮತ್ತು ರತ್ನೀಬಾಯಿ ಗಂಡ ದೇವ್ಯಾ ಜಾಧವ ಇವರಿಬ್ಬರೂ ನನಗೆ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದರು. ಆಗ ಅಲ್ಲಿಯೇ ಇದ್ದ ನನ್ನ ಮಗ ಚನ್ನಪ್ಪಾ ಮತ್ತು ನಮ್ಮ ಪಕ್ಕದ ಮನೆಯವರಾದ ರಮೇಶ ತಂದೆ ಅವರ್ಯಾ ಜಾಧವ ಇವರಬ್ಬರೂ ಅಡ್ಡ ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆದರೂ ಅವರು ಇನ್ನೊಮ್ಮೆ ಸೀಗು ಸೂಳೇ ಮಗಳೆ ನಿನಗೆ ಖಲಾಸ ಮಾಡುತ್ತೆವೆ ಅಂತಾ ಜೀವದ ಭಯ ಹಾಕಿ ಹೋದರು. ನಂತರ ಗಾಯ ಹೊಂದಿದ ನನಗೆ ಅಂದೇ ರಾತ್ರಿ  ನನ್ನ ಮಗ ಯಾದಗಿರಿಯ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಆಗ ಪೋಲಿಸರು ನಮ್ಮ ಹೇಳಿಕೆಯನ್ನು ಪಡೆದುಕೊಳ್ಳಲು ಆಸ್ಪತ್ರೆಗೆ ಬಂದಾಗ ನಾವು ನಮ್ಮ ಹೀರಿಯರೊಂದಿಗೆ ವಿಚಾರ ಮಾಡಿ ನೇರವಾಗಿ ಠಾಣೆೆಗೆ ಬಂದು ಫಿರ್ಯಾಧಿ ಸಲ್ಲಿಸುವುದಾಗಿ ತಿಳಿಸಿದ್ದು ಇರುತ್ತದೆ. ಈ ವಿಷಯದ ಬಗ್ಗೆ ನಾವು ಹಿರಿಯರೊಂದಿಗೆ ವಿಚಾರ ಮಾಡಿ ಠಾಣೆಗೆ ಬಂದು ಹೇಳಿಕೆ ಫಿರ್ಯಾಧಿಯನ್ನು ಸಲ್ಲಿಸಿದ್ದು, ಕಾರಣ ನನಗೆ ಹೊಟ್ಟೆಯ ಮೇಲೆ ಒದ್ದು ಕೈಯಿಂದ ಹೊಡೆ ಬಡಿ ಮಾಡಿ ಮಾನ ಭಂಗ ಮಾಡಲು ಪ್ರಯತ್ನಿಸಿ ಜೀವದ ಭಯ ಹಾಕಿದ ಮೇಲ್ಕಂಡ 5 ಜನರ ವಿರುದ್ದ  ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 183//2018 ಕಲಂ 143, 147, 323, 504, 504, 506, 354 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 184//2018 ಕಲಂ 323, 324, 504, 504, 506, 341 ಸಂಗಡ 34  ಐ.ಪಿ.ಸಿ;- ದಿನಾಂಕ 29-08-2018 ರಂದು 5-15 ಪಿ.ಎಮ್ ಕ್ಕೆ ಪುನ: ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ಸದರಿ ಗಾಯಾಳುವಿಗೆ ವಿಚಾರಣೆ ಮಾಡಿದಾಗ ಶ್ರೀ ಮೋತ್ಯಾ ತಂದೆ ಆಲ್ಯಾ ಜಾಧವ ಇವರು ಸದರಿ ಹೇಳಿಕೆ ಫಿರ್ಯಾಧಿಯನ್ನು ನಿಡಿದ್ದು ಅದರ ಸಾರಾಂಶವೆನೆಂದರೆ ನಮ್ಮ ಮನೆಯ ಹತ್ತಿರ ನಮ್ಮ ತಾಂಡಾದ ಲಚ್ಚ್ಯಾ ತಂದೆ ಶಂಕ್ರೆಪ್ಪಾ ಜಾದವ ಇವರ ಮನೆಯಿದ್ದು  ನಮ್ಮಿಬ್ಬರ ಮನೆಯ ಮುಂದೆ ಸಿಸಿ ರೋಡ ಇರುತ್ತದೆ. ನಮ್ಮ ಮನೆಯ ದನಗಳು ಸದರಿ ಲಚ್ಚ್ಯಾ ತಂದೆ ಶಂಕ್ರೆಪ್ಪಾ ಜಾಧವ ಇವರ ಮನೆಯ ಮುಂದಿನಿಂದ ಹೋಗುವುದು ಬರುವುದು ಮಾಡುತ್ತಿದ್ದರಿಂದ ಈ ವಿಷಯದಲ್ಲಿ ಲಚ್ಚ್ಯಾ ತಂದೆ ಶಂಕ್ರೆಪ್ಪಾ  ಇತನು ನಿಮ್ಮ ದನಗಳು ನಮ್ಮ ಮನೆಯ ಮುಂದೆ ಬಿಡಬೇಡರಿ ಒಂದು ವೇಳೆ ಬಿಟ್ಟರೆ ನಿಮ್ಮ ಪರಿಸ್ಥತಿ ನೆಟ್ಟಗಾಗುವುದಿಲ್ಲಾ ಅಂತಾ ಅದೇ ವಿಷಯದಲ್ಲಿ ಆಗಾಗ ನಮ್ಮ ಜೋತೆ ಲಚ್ಚ್ಯಾ ತಂದೆ ಶಂಕ್ರೆಪ್ಪಾ ಮತ್ತು ಆತನ ಹೆಂಡತಿ ನೀಲಿಬಾಯಿ  ಇವರು ಜಗಳಾ ಮಾಡುತ್ತಾ ಬಂದಿದ್ದು ಇದು ಸಾರ್ವಜನಿಕ ರಸ್ತೆ ಇದೆ ಅಂತಾ ನಾವು ಈ ಬಗ್ಗೆ ತಲೆ ಕೆಡೆಸಿಕೊಂಡಿರಲಿಲ್ಲಾ.
         ಹೀಗಿದ್ದು ಇಂದು ದಿನಾಂಕ 29-08-2018 ರಂದು ಬೆಳಗ್ಗೆ 10 ಗಂಟೆಗೆ ನಾನು ದನಗಳು ಹೊಡೆದುಕೊಂಡು ಮೇಯಿಸಲು ಹೋಗಬೇಕೆಂದು ಸದರಿ ಲಚ್ಚ್ಯಾ ತಂದೆ ಶಂಕ್ರೆಪ್ಪಾ ಜಾಧವ ಇವರ ಮನೆಯ ಮುಂದಿನಿಂದ ಹೊರಟಿದ್ದೆನು. ಅದೇ ವೇಳೆಗೆ ಲಚ್ಚ್ಯಾ ತಂದೆ ಶಂಕ್ರೆಪ್ಪಾ ಜಾಧವ ಮತ್ತು ಆತನ ಹೆಂಡತಿಯಾದ ನೀಲಿಬಾಯಿ ಇಬ್ಬರು ನನಗೆ ಮುಂದೆ ಹೋಗದಂತೆ ತಡೆದು ಅಡ್ಡಗಟ್ಟಿ ನನಗೆ ಏಲೆ ಬೊಸಡಿ ಮಗನೇ ನಿಮ್ಮ ದನಗಳು ನಮ್ಮ ಮುಂದಿನಿಂದ ಹೊಡೆದುಕೊಂಡು ಹೋಗಬೇಡ ಅಂತಾ ನಿನಗೆ ಎಷ್ಟು ಸಲ ಹೇಳಬೇಕು ಅಂತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿದನು. ಆಗ ನಾನು ಇದ್ದು ಸಕರ್ಾರಿ ರಸ್ತೆ ನಮಗೆ ಹೋಗಲು ಮತ್ತು ಬರಲು ಒಂದೆ ರಸ್ತೆ ಇದೆ ನಾವು ಎಲ್ಲಿಂದ ಹೋಗಬೇಕು, ನೀನು ಈ ರೀತಿ ಸುಮ್ಮನೇ ವಿನಾಕಾರಣ ಜಗಳಾ ಮಾಡುವುದು ಸರಿಯಲ್ಲಾ ಅಂತಾ ಅವರಿಗೆ ಹೇಳಿದಾಗ ಒಮ್ಮೇಲೆ ಲಚ್ಚ್ಯಾ ಇತನು ಅಲ್ಲಿಯೇ ಬಿದ್ದ ಒಂದು ಬಡಿಗೆಯನ್ನು ಎತ್ತಿಕೊಂಡು ನನ್ನ ಬಲಗೈ ಮಣಿಕಟ್ಟಿನ ಹತ್ತಿರ ಹೊಡೆದು ಗುಪ್ತಗಾಯ ಮಾಡಿದನು. ಮತ್ತು ಕೈಯಿಂದ ಎದೆಗೆ, ಬೆನ್ನಿಗೆ ಹಾಗೂ ಕುತ್ತಿಗೆಗೆ ಗುದ್ದಿದನು. ಮತ್ತು ಅವನು ನನಗೆ ತೆಕ್ಕೆಗೆ ಹಿಡಿದುಕೊಂಡಾದ ಆತನ ಹೆಂಡತಿಯಾದ ನೀಲಿಬಾಯಿ ಇವಳು ಕೂಡಾ ನನಗೆ ಕೈಯಿಂದ ಕಪಾಳದ ಮೇಲೆ ಹೊಡೆದಳು. ಆಗ ನಾನು ಚೀರಾಡುತ್ತಿದ್ದಾಗ ಅಲ್ಲಿಯೇ ಜಗಳಾ ನೋಡುತ್ತಾ ನಿಂತಿದ್ದ ನಮ್ಮ ತಾಂಡಾದ ಮೋನಪ್ಪಾ ತಂದೆ ಪಾಲಪ್ಪಾ ಜಾಧವ ಮತ್ತು ಬುಗ್ಗಪ್ಪಾ ತಂದೆ ಆಮ್ಯಾ ಜಾಧವ ಮತ್ತು ನನ್ನ ಹೆಂಡತಿಯಾದ ಧಾನಿಬಾಯಿ ಇವರು ಬಂದು ನನಗೆ ಹೊಡೆಯುವುದನ್ನು ಬಿಡಿಸಿ ಅವರಿಗೆ ಸಮುಜಾಯಿಸಿ ಅಲ್ಲಿಂದ ಕಳಿಸಿದರು. ಅವರು ಮತ್ತೆ ಇನ್ನೊಮ್ಮೆ ಸಿಗು ಸೂಳೆ ಮಗನೇ ನಿನಗೆ ಖಲಾಸ ಮಾಡುತ್ತೆವೆ ಅಂತಾ ಜೀವದ ಭಯ ಹಾಕಿದರು. ನಂತರ ನಾನು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಆಸ್ಪತ್ರೆಗೆ ನನ್ನ ಹೇಳಿಕೆ ಪಡೆದುಕೊಳ್ಳಲು ಪೋಲಿಸರು ಬಂದಿದ್ದು, ನಾನು ಹಿರಿಯರೊಂದಿಗೆ ವಿಚಾರ ಮಾಡಿ ಹೇಳಿಕೆ ನಿಡುವುದಾಗಿ ತಿಳಿಸಿ ಈಗ ಹೇಳಿಕೆ ಪಿರ್ಯಾಧಿಯನ್ನು ನೀಡುತ್ತಿದ್ದೆನೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ 6-10 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೇಳಿಕೆ ಫಿರ್ಯಾಧಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 184/2018 ಕಲಂ 323, 324, 341, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ ;- 234/2018 ಕಲಂ: 341, 323, 324, 504, 506, ಸಂ 34ಐಪಿಸಿ;- ದಿನಾಂಕ 29/08/2018 ರಂದು 11.15 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಸೈಯದ್ಹುಸೇನ್ ತಂದೆ ಸೈಯದ್ ಇಸೂಫ್ ಹುಸೇನ ತುರ್ಕಮಾನ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮ ಸಂಬಂದಿಕರಾದ ಸೈಯದ್ ಕಾಶೀಂ ತಂದೆ ಸೈಯದ್ ಮೈನುದ್ದೀನ್ ತುರ್ಕಮಾನ ಇವರಿಗೂ ನಮಗೂ ಮಾಸುಂಪೀರ ದಗರ್ಾದ ಉಸ್ತುವಾರಿ ಕುರಿತು ನಮ್ಮಿಬ್ಬರ ಮದ್ಯ ತಕರಾರು ನಡೆದು ಸದರಿಯವರು ನನ್ನ ಮೇಲೆ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ಇಂದು ದಿನಾಂಕ 29/08/2018 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ನಾನು ನಮ್ಮ ಸಂಬಂದಿಕರಾದ ಸೈಯದ ಖಾಸಿಂ ಇವರ ಮನೆಯ ಮುಂದೆ ಹಾದು ದಗರ್ಾದ ಕಡೆ ಹೋಗುತ್ತಿದ್ದಾಗ ಅಲ್ಲಿಯೇ ಇದ್ದ ಆರೋಪಿತರು ನನ್ನನ್ನು ತಡೆದು ಏನಲೆ ಸೂಳೆಮಗನೆ ಮಾಸುಂಪೀರ ದಗರ್ಾ ನಮ್ಮ ಉಸ್ತುವಾರಿಯಲ್ಲಿದ್ದು ನಿನೇಕೆ ಬರುತ್ತಿ ಅಂತ ಕೇಳಿದಾಗ ನನಗೂ ಅದರಲ್ಲಿ ಹಕ್ಕು ಇದೆ ಅಂತ ಅಂದಾಗ ಸದರಿ 4 ಜನರು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದೆಯುತ್ತಿದ್ದಾಗ ಸೈಯದ ನೂರುಲ್ಲಾ ಈತನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಎಡಗಾಲ ತೊಡೆಗೆ ಹಾಗೂ ಎಡಗೈ ಮೊಣಕೈ ಹತ್ತಿರ ಚುಚ್ಚಿ ರಕ್ತಗಾಯಪಡಿಸಿದ್ದು ಇರುತ್ತದೆ. ಸೈಯದ ಖಾಸಿಂ ಈತನು ನನ್ನ ತರಡು ಬೀಜಕ್ಕೆ ಹೊಡೆದು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಈ ಅಜರ್ಿಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 234/18 ಕಲಂ: 341, 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 60/2018  ಕಲಂ 279, 338 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ;- ದಿನಾಂಕ 29/08/2018 ರಂದು ಮದ್ಯಾಹ್ನ 12 ಪಿ.ಎಂ. ಸುಮಾರಿಗೆ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ  ಹತ್ತಿರದ ಹಳೆ ಐಬಿಯ ಮುಂದಿನ ಮುಖ್ಯ ರಸ್ತೆಯ ಮೇಲೆ  ಫಿಯರ್ಾದಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ  ಆರೋಪಿತನು ತನ್ನ ಮೋಟಾರು ಸೈಕಲ್ ನಂಬರ ಕೆಎ-05, ಜೆ.ಎಮ್-4738 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ  ನಡೆಸಿಕೊಂಡು ಬಂದು ಫಿಯರ್ಾದಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು  ಸದರಿ ಅಪಘಾತದಲ್ಲಿ ಫಿಯರ್ಾದಿಗೆ ಬಲತೊಡೆಗೆ ಭಾರೀ ಗುಪ್ತಗಾಯ ಮತ್ತು  ಹಣೆಯ ಬಲಗಡೆ ಸಾದಾಗಾಯಗಳಾಗಿದ್ದು  ಮೋಟಾರು ಸೈಕಲ್ ಸವಾರನು ಅಪಘಾತ ಪಡಿಸಿ ಓಡಿಹೋದ ಬಗ್ಗೆ ಫಿಯರ್ಾದಿ ಅದೆ.

ಸೈದಾಪುರ ಪೊಲೀಸ್ ಠಾಣೆ ಗುನ್ನೆ ನಂ. 151/2018 ಕಲಂ, 279, 337, 338,  ಐಪಿಸಿ;- ದಿನಾಂಕ: 29/08/2018 ರಂದು 19-15 ಪಿಎಮ್ಕ್ಕೆ ಠಾಣೆಯಲ್ಲಿದ್ದಾಗ ಶ್ರೀ. ಶರಬಣ್ಣ ಹೆಚ್.ಸಿ-69 ರವರು ಕಲಬುರಗಿಯ  ಯುನೈಟೇಡ್ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ವಸೂಲಾದ ಮೇರೆಗೆ ಸದರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ಗಂಡನಾದ ಪಿಯರ್ಾದಿ ಈರಪ್ಪನ ಹೇಳಿಕೆ ಪಡೆದುಕೊಂಡಿದ್ದು, ಅದರ ಸಾರಾಂಶವೆನೆಂದರೆ, ದಿ:28/08/2018 ರಂದು 05:00 ಪಿ.ಎಂ ಸುಮಾರಿಗೆ ಅಯ್ಯಪ್ಪ ತಂದೆ ರಾಮಪ್ಪ ಇತನು ಫೋನ ಮಾಡಿ ತಿಳಿಸಿದ್ದೆನಂದರೆ ನಿನ್ನ ಹೆಂಡತಿಗೆ ಅಪಘಾತವಾಗಿದೆ ಬೇಗ ಶಹಾಪೂರ ಆಸ್ಪತ್ರೆಗೆ ಬಾ ಅಂತಾ ತಿಳಿಸಿದ್ದ ಮೇರೆಗೆ ನಾನು ಶಹಾಪೂರ ಆಸ್ಪತ್ರೆಗೆ ಹೋಗಿ ವಿಚಾರಿಸಲಾಗಿ, ಚಿನ್ನುಗೆ ಆಸ್ಪತ್ರೆ ತೋರಿಸಲು ಶಹಾಪೂರಕ್ಕೆ ಹೋಗುವಾಗ ಅಂದಾಜು ಸಮಯ 04:30 ಪಿ.ಎಂ ಸುಮರಿಗೆ ಗೋಗಿ ದಾಟಿ ಬಸವ ಪೇಟ್ರೊಲ್ ಬಂಕ ಹತ್ತಿರ ಹೋಗುವಾಗ ಮಲ್ಲಪ್ಪ ಇತನು ತಾನು ನಡೆಸುತ್ತಿದ್ದ ನನ್ನ ಮೋಟಾರ ಸೈಕಲ ನಂ. ಕೆ.ಎ-33 ಎಂ-4339 ನೇದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುವಾಗ ಪೇಟ್ರೋಲ ಬಂಕ ಹತ್ತಿರ ದನಗಳು ಅಡ್ಡ ಬಂದ ಕರಣ ಒಮ್ಮಲೇ ಕಟ್ ಹೋಡದಿದ್ದರಿಂದ ವಾಹನವು ಸ್ಕೀಡ್ ಆಗಿ ಕೆಳಗಿ ಬಿದ್ದಿತ್ತು, ಮಲ್ಲಪ್ಪ ಮತ್ತು ನನ್ನ ಹೆಂಡತಿ ರಂಜೀತ ಮತು ನನ್ನ ಮಗಳು ಚಿನ್ನು ಕೆಳಗೆ ಬಿದ್ದರು, ಹಿಂದೆ ಬರುತ್ತಿದ್ದ ಅಯ್ಯಪ್ಪ ತಂದೆ ರಾಮಪ್ಪ ಜಮಖಂಡಿ ಮತ್ತು ಪರಶುರಾಮ ತಂದೆ ಮರೇಪ್ಪ ಬಿರಾಳ ಇಬ್ಬರೂ ಕೂಡಿ ಎಬ್ಬಸಿ ನೀರು ಕುಡಿಸಿ ಒಂದು ಅಟೋದಲ್ಲಿ ಶಹಾಪೂರ ಆಸ್ಪತ್ರೆ ಸೇರಿಕೆ ಮಾಡಿದ್ದರು. ನಾನು ಸದರಿಯವರಿಗೆ ನೋಡಲಾಗಿ ಮಲ್ಲಪ್ಪ ಇತನಿಗೆ ಮೋಳಕಾಲಿಗೆ ಸಣ್ಣ ಪುಟ್ಟ ಗಾಯವಾಗಿದ್ದು. ನನ್ನ ಹೆಂಡತಿ ರಂಜೀತ ಇವರಿಗೆ  ತೇಲೆಗೆ ಭಾರಿ ರಕ್ತ ಗಾಯವಾಗಿದ್ದು ಮತ್ತು ಕುತ್ತಗೆಯ ಕೆಳಗೆ ಬಲಬಾಗದ ಎಲುಬಿಗೆ ಮತ್ತು ಬಲಮೋಳಕೈಗೆ ಗುಪ್ತ ಪೆಟ್ಟಾಗಿದ್ದು. ವೈದ್ಯಾಧಿಕಾರಿಗಳ ಸಲಹೇ ಮೇರೆಗೆ ಹೇಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೆಟೇಡ ಆಸ್ಪತ್ರೆಗೆ ದಾಖಲೂಮಾಡಿದ್ದು ಇರುತ್ತದೆ. ನನ್ನ ಹೆಂಡತಿ ರಂಜೀತ ಗಂಡ ಈರಪ್ಪ ವಯಾ 35 ವರ್ಷ ಜಾ|| ಹೋಲೇಯಾ ಉ|| ಕೂಲಿ ಮಾತನಾಡುವ ಸ್ಥಿತಿಯಲ್ಲಿರುವದಿಲ್ಲ.  

       ಕಾರಣ ನನ್ನ ಹೆಂಡತಿ ರಂಜಿತಾ ಇವಳನ್ನು ಮೋಟಾರ ಸೈಕಲ ಮೇಲೆ ಕರೆದುಕೊಂಡು ಹೋದ ಮಲ್ಲಪ್ಪ ತಂದೆ ಭಿಮಪ್ಪ ಇತನು ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಪಡಿಸಿದ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿರ್ಯಾಧಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 07-15 ಪಿಎಮ್ ಕ್ಕೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 151/2018 ಕಲಂ, 279, 337, 338,  ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 391/2017.ಕಲಂಃ 78(3) ಕೆ.ಪಿ.ಆ್ಯಕ್ಟ;- ದಿನಾಂಕಃ 29-08-2018 ರಂದು 16-00 ಗಂಟೆಗೆ ಸ|| ತ|| ಪಿಯರ್ಾದಿ ನಾಗರಾಜ. ಜಿ, ಪಿ.ಐ. ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಇಂದು ದಿನಾಂಕ 29/08/2018 ರಂದು ಮದ್ಯಾಹ್ನ 13-00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಸಗರ (ಬಿ) ಗ್ರಾಮದ ವಾಲ್ಮೀಕಿ ಚೌಕ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದಾನೆ ಅಂತ ಮಾಹಿತಿ ಬಂದಮೇರೆಗೆ  ಠಾಣೆಯ ಸಿಬ್ಬಂದಿಯವರಾದ ಸಂಗನಬಸಪ್ಪ ಹೆಚ್.ಸಿ. 60. ಶಿವನಗೌಡ ಪಿ.ಸಿ.141. ದೇವರಾಜ ಪಿ.ಸಿ. 282. ಭೀಮನಗೌಡ ಪಿ.ಸಿ.402. ಜೀಪ ಚಾಲಕ ನಾಗರೆಡ್ಡಿ ಎ.ಪಿ.ಸಿ.161, ರವರಿಗೆ ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ಶಿವನಗೌಡ ಪಿ.ಸಿ.141, ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಅವರು ಇಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 13-20 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.
        ಮಾನ್ಯ ಡಿ,ವೈ,ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು  ನಾನು ಪಂಚರು ಸಿಬ್ಬಂದಿಯವರು ಠಾಣೆಯ ಜೀಪ ನಂ ಕೆಎ-33-ಜಿ-0138 ನ್ನೆದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 13-30 ಗಂಟೆಗೆ ಹೊರಟು ಸಗರ (ಬಿ) ಗ್ರಾಮದ ವಾಲ್ಮೀಕಿ ಚೌಕ ಹತ್ತಿರ 14-00 ಗಂಟೆಗೆ ಹೋಗಿ ಜೀಪಿನಿಂದ ಇಳಿದು ನಡೆದುಕೊಂಡು ಹೋಗಿ 14-10 ಗಂಟೆಗೆ ಮನೆಗಳ ಮತ್ತು ಹೋಟೆಲ್ಗಳ ಮರೆಯಲ್ಲಿನಿಂತು ನಿಗಾಮಾಡಿ ನೊಡಲಾಗಿ ವಾಲ್ಮೀಕಿ ಚೌಕ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದನು ಆಗ ನಾವೆಲ್ಲರೂ ಸದರಿಯವನು ಸಾರ್ವಜನಿಕರಿಂದ ಹಣಪಡೆದು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು ಮದ್ಯಾಹ್ನ 14-20 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಸಾರ್ವಜನಿಕರಿಗೆ ಕೂಗಿ ಹೇಳುತ್ತಾ  ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿವನು ಸಿಕ್ಕಿಬಿದ್ದಿದ್ದು, ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ. ದಾಳಿಯಲ್ಲಿ ಸಿಕ್ಕ ಒಬ್ಬ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸಾಹೇಬಗೌಡ ತಂದೆ ಶಿವಪ್ಪ ಶಿದ್ರಾ ವ|| 55 ಜಾ|| ಗಾಣಿಗ ಉ|| ಕೂಲಿಕೆಲಸ ಸಾ|| ಸಗರ (ಬಿ) ಅಂತ ಹೇಳಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 640/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ:00-00 ರೂ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 14-30 ರಿಂದ 15-30 ರವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 16-00 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ ಒಂದು ವರದಿಯನ್ನು ತಯ್ಯಾರಿಸಿ 16-30 ಗಂಟೆಗೆ ಮುಂದಿನ ಕ್ರಮಕೈಕೊಳ್ಳುವಂತೆ ವರದಿ ಹಾಜರಪಡಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ,ನಂ 23/2018 ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ದಾಖಲಿಸಿಕೊಂಡು. ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು  ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಸುರೇಶ ಕದಂ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 17-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 391/2018 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                                                          



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!