Yadgir District Reported Crimes Updated on 17-07-2018

By blogger on ಮಂಗಳವಾರ, ಜುಲೈ 17, 2018

                                        Yadgir District Reported Crimes
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ ;- 168/2018 ಕಲಂ. 323 324 504 506 ಸಂ. 34 ಐಪಿಸಿ;- ದಿನಾಂಕ:15/07/2018 ರಂದು ಬೆಳಿಗ್ಗೆ 9.00 ಗಂಟೆಯ ಸುಮಾರಿಗೆ ಪಿಯರ್ಾದಿ ತನ್ನ ಮನೆಯ ಮುಂದೆ ತನ್ನ ತಂದೆಯಾದ ಆರೋಪಿ ನಿಂಗಪ್ಪನಿಗೆ ಅಪ್ಪಾ ನನಗೂ ಹೆಂಡತಿ ಮಕ್ಕಳೂ ಇದ್ದಾರೆ ನನಗೆ ಬರಬೇಕಾದ ಹೊಲದಲ್ಲಿ ಪಾಲನ್ನು ಕೊಡು ಅಂತಾ ಕೇಳುತ್ತಿದ್ದಾ ಪಿಯರ್ಾದಿ ಇನ್ನೊಬ್ಬ ಅಣ್ಣನಾದ ಆರೋಪಿ ಭೀರಪ್ಪ ಈತನು ಪಾಲು ಕೇಳುತ್ತಿಯಾ ಮಗನೇ ಅಂತಾ ಬಡಿಗೆಯಿಂದಾ ತೆಲೆಗೆ ಹೊಡೆದು ರಕ್ತಗಾಯ ಮಾಡಿದ್

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ ;- 134/2018 ಕಲಂ 143, 147, 148, 323, 324, 354, 504, 506 ಸಂ: 149 ಐಪಿಸಿ;- ದಿನಾಂಕ 16/07/2018 ರಂದು 07.30 ಎಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದಿಂದ ಪೋನ್ ಮೂಲಕ ಹರ್ಟ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳು ಪಿಯರ್ಾದಿ ಶ್ರೀ. ರಮೇಶ ತಂದೆ ಸೇವು ಚವ್ಹಾಣ ಸಾ: ಧಮರ್ಾನಾಯಕ ತಾಂಡಾ ಉಕ್ಕನಾಳ ಇವರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ನಮ್ಮ ತಾಂಡಾದ ಮನೆಯ ಮುಂದೆ ನಾವು ನಮ್ಮ ಮನೆಗೆ ಅಂತಾ ಸ್ವಲ್ಪ ಕೊತಂಬರಿ ಕಾಯಿಪಲ್ಲೆ ಹಾಕಿರುತ್ತೇವೆ. ನಿನ್ನ ನಮ್ಮ ಕೊತಂಬರಿಯನ್ನು ಯಾರೊ ಕಿತ್ತುಕೊಂಡು ಹೋದಾಗ ನನ್ನ ಹೆಂಡತಿ ಸಂಗೀತಾ ಇವಳು ಯಾರು ಕಿತ್ತಿಕೊಂಡು ಹೋಗಿದ್ದಾರೆ ಅಂತಾ ಒದರಾಡಿದ್ದಳು. ಅದರಿಂದ ನಮ್ಮ ಪಕ್ಕದ ಮನೆಯವರಾದ ವಿನೋದ ತಂದೆ ಕೇಸುನಾಯ್ಕ ರಾಠೋಡ ಇವರ ಮನೆಯವರು ನಮ್ಮ ಮನೆಗೆ ಬಂದು ನಮ್ಮ ಹೆಣ್ಣುಮಕ್ಕಳ ಜೋತೆ ಜಗಳ ಮಾಡಿ ಬೈಯ್ದು ಹೋಗಿದ್ದರು.
        ಹೀಗಿದ್ದು ಇಂದು ದಿನಾಂಕ:16/06/2018 ರಂದು ಬೆಳಿಗ್ಗೆ 06.30 ಎಎಂ ಸುಮಾರಿಗೆ ನಾನು ಇನ್ನು ಮಲಗಿಕೊಂಡಿರುವಾಗ ನನ್ನ ಹೆಂಡತಿಯು ನಿನ್ನೆ ಅಲ್ಲದೆ ಇವತ್ತು ಮತ್ತೆ ಯಾರೋ ಕೋತಂಬಿರಿ ಕಿತ್ತಿಕೊಂಡು ಹೋಗಿದ್ದಾರೆ ಅವರ ಕೈ ಹಾಳಾಗಿ ಹೋಗಲಿ ಅಂತಾ ಒದಾರಡತೊಡಗಿದ್ದಳು, ಆಗ ನಾನು ಮತ್ತು ನಮ್ಮ ತಾಯಿ ಇಬ್ಬರು ಇರಲಿ ಬಿಡು ಅವರಿಗೆ ತಿಳಿದಾಗ ಕಳವು ಮಾಡುವದು ಬಿಡುತ್ತಾರೆ ಅಂತಾ ಹೇಳುತ್ತಿದ್ದಾಗ, ನಮ್ಮ ಪಕ್ಕದ ಮನೆಯವರಾದ 1) ವಿನೋದ ತಂದೆ ಕೇಸುನಾಯ್ಕ ರಾಠೋಡ 2) ಗೋಪಾಲ ತಂದೆ ಧಮರ್ಾನಾಯಕ ಚವ್ಹಾಣ 3) ಮೋತಿಬಾಯಿ ಗಂಡ ಕೇಸುನಾಯ್ಕ ರಾಠೋಡ 4) ಸವಿತಾ ಗಂಡ ವಿನೋದ ರಾಠೋಡ 5) ವಕೀಲಾಬಾಯಿ ಗಂಡ ಧಮರ್ು ಚವ್ಹಾಣ ಎಲ್ಲರೂ ಧಮರ್ಾನಾಯಕ ತಾಂಡಾ ಉಕ್ಕನಾಳ 6) ಬಸವರಾಜ ತಂದೆ ಭೀಮಸಿಂಗ್ ಚವ್ಹಾಣ 7) ತಾರಿಬಾಯಿ ಗಂಡ ಬಸವರಾಜ ಚವ್ಹಾಣ ಇಬ್ಬರು ಹೋಸ್ಕೆರಾ ತಾಂಡಾ ಇವರೆಲ್ಲರು ಕೂಡಿ ಒಮ್ಮೆಲೆ ಬಡಿಗೆ ಮತ್ತು ಕಲ್ಲಲುಗಳನ್ನು ಹಿಡಿದುಕೊಂಡು ಬಂದು ಸೂಳೆ ಮಕ್ಕಳೆ ನಿಮ್ಮದು ಬಾಳ ಆಗಿದೆ ರಂಡಿಮಕ್ಕಳೆ ಅಂತಾ ಬೈಯುತ್ತಾ ಎಲ್ಲರೂ ಕೂಡಿ ನನ್ನ ಹೆಂಡತಿಗೆ ಸುತ್ತಗಟ್ಟಿದರು, ಆಗ ಗೋಪಾಲ ಮತ್ತು ಬಸವರಾಜ ಇವರುಗಳು ನನ್ನ ಹೆಂಡತಿಯ ಮಾನ ಭಂಗ ಮಾಡುವ ಉದ್ದೇಶದಿಂದ ಅವಳ ಸೀರೆಯ ಸೆರಗು ಹಿಡಿದು ಎಳೆದು ನಿನ್ನ ಗಂಡನಿಗೆ ಕರಿ ಏನ ಸೆಂಟಾ ಕಿತ್ತಿಕೊಳ್ಳುತ್ತಾನೆ ನೋಡೊನ ಅಂತಾ ಅವಾಚ್ಯವಾಗಿ ಬೈಯತೊಡಗಿದರು. ಆಗ ನಾನು ಮತ್ತು ನನ್ನ ತಾಯಿ ಶಾಂತಿಬಾಯಿ ಇಬ್ಬರು ಬಿಡಿಸಿಕೊಳ್ಳಲು ಹೊದಾಗ ವಿನೋದ ಈತನು ಕೈಯಿಂದ ನನ್ನ ಬೆನ್ನಿಗೆ ಹೊದೆಬನು, ಗೋಪಾಲ ಈತನು ನನ್ನ ಹೆಂಡತಿಯ ಸೀರೆ ಬಿಟ್ಟು ಒಂದು ಬಡಿಗೆಯಿಂದ ನನ್ನ ತಲೆಗೆ ಹೊಡೆದು ತಲೆಯ ಎಡಗಡೆ ಮತ್ತು ಬಲಗಡೆಗೆ ರಕ್ತಗಾಯ ಮಾಡಿದ, ಬಸವರಾಜ ಈತನು ಒಂದು ಬಡಿಗೆಯಿಂದ ನನ್ನ ಬೆನ್ನಿಗೆ ಮತ್ತು ಮೊಳಕಾಲಿಗೆ ಹೊಡೆದು ಗುಪ್ತಗಾಯ ಮಾಡಿದ ಆಗ ವಕೀಲಾಬಾಯಿ ಮತ್ತು ತಾರಿಬಾಯಿ ಇವರು ನನ್ನ ತೊಡೆ ಸಂದಿಗೆ ಹೊಡೆದಿರುತ್ತಾರೆ. ಅದರಿಂದ ನನ್ನ ತೊಡ್ಡಿಗೆ ನೋವು ಆಗಿರುತ್ತದೆ. ಅಷ್ಟರಲ್ಲಿ ನನ್ನ ತಮ್ಮನಾದ ಸುನೀಲ ಈತನು ಬಂದು ಬಿಡಿಸಿಕೊಳ್ಳಲು ಬಂದಾಗ ವಿನೋದ ಮತ್ತು ಸವಿತಾ ಇವರುಗಳು ಕೈಯಿಂದ ಹೊಡೆದಿದ್ದು, ಇದನ್ನು ನೋಡಿದ ಅಲ್ಲೆ ಇದ್ದ 1) ಪ್ರಶಾಂತ ತಂದೆ ಟೀಕು ಚವ್ಹಾಣ, 2) ಲಾಲು ತಂದೆ ಬಾಂಬ್ಲಾ ನಾಯಕ ರಾಠೋಡ 3) ಶಿವಾ ತಂದೆ ಸೀತಾರಾಮ ರಾಠೋಡ ಇವರುಗಳು ನೋಡಿ ಬಿಡಿಸಿಕೊಂಡರು. ಆಗ ಸದರಿಯವರೆಲ್ಲರೂ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ನಂತರ ನನಗೆ ರಕ್ತಗಾಯ ಆಗಿದ್ದರಿಂದ 108 ಅಂಬೂಲೆನ್ಸಗೆ ಪೋನ ಮಾಡಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇನೆ.
         ನನಗೆ ಕೈಯಿಂದ ಬಡಿಗೆಯಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿ, ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಹೆಂಡತಿಯ ಸೀರೆ ಹಿಡಿದು ಎಳೆದು, ಜೀವದ ಬೆದರಿಕೆ ಹಾಕಿರುವ ಮೇಲಿನ ಏಳು (7) ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ಠಾಣೆಗೆ 08.45 ಪಿಎಂ ಕ್ಕೆ ಬಂದು ಠಾಣಾ ಗುನ್ನೆ ನಂ: 134/2018 ಕಲಂ: 143, 147, 148, 323, 324, 354, 504, 506 ಸಂ: 149 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ ;- 135/2018 323, 324, 354, 504, 506 ಸಂ: 34 ಐಪಿಸಿ;- ದಿನಾಂಕ 16/07/2018 ರಂದು 07.55 ಎಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದಿಂದ ಪೋನ್ ಮೂಲಕ ಹರ್ಟ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳು ಪಿಯರ್ಾದಿ ಶ್ರೀಮತಿ. ತಾರಿಬಾಯಿ ಗಂಡ ಬಸವರಾಜ ಚವ್ಹಾಣ ಸಾ: ಹೋಸ್ಕೇರಾ ತಾಂಡಾ ತಾ: ಶಹಾಪೂರ ಇವರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ನಿನ್ನೆ ದಿನಾಂಕ: 15/07/2018 ರಂದು ನನ್ನ ತವರೂ ಮನೆ ಇರುವಂತಹ ಧಮರ್ಾನಾಯಕ ತಾಂಡಾ ಉಕ್ಕನಾಳಕ್ಕೆ ನಾನು ನನ್ನ ಗಂಡ ಮಕ್ಕಳು ಹೋಗಿದ್ದೆವು. ಸಾಯಮಕಾಲ ನನ್ನ 2 ವರ್ಷದ ಮಗು ನಮ್ಮ ಪಕ್ಕದ ಮನೆಯವರಾದ ರಮೇಶ ತಂದೆ ಸೇವು ಚವ್ಹಾಣ ಇವರ ಮನೆಯ ಮುಂದಿನ ಕೋತಂಬರಿ ಗಿಡ ಕಿತ್ತಿದ್ದನು. ಅದಕ್ಕೆ ರಮೇಶನ ಹೆಂಡತಿ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ನನ್ನ ತಾಯಿ ಮೋತಿಬಾಯಿ ಮತ್ತು ನಮ್ಮ ಅಕ್ಕ ವಕೀಲಾಬಾಯಿ ಮೂರು ಜನರು ನಮ್ಮ ಹುಡಗನು ಗೊತ್ತಾಗದೆ ಕೋತಂಬರಿ ಕಿತ್ತಿದ್ದಾನೆ ಹೋಗಲಿ ಬಿಡು ಅಂತಾ ಹೇಳಿದರು ಕೇಳದೆ ಸಂಗೀತಾ ಇವಳು ನಮಗೆ ಅವಾಚ್ಯ ಸಂಬ್ದಗಳಿಂದ ಬೈಯ್ದಿದ್ದಳು. ನಾವು ಹೊಗಲಿ ಬುಡು ಅಂತಾ ಬಿಟ್ಟಿದ್ದೆವು. ನಂತರ ರಾತ್ರಿ ರಮೇಶ ತಂದೆ ಸೇವು ಈತನು ಕೂಡ ಅವಾಚ್ಯವಾಗಿ ಬೈಯುತ್ತಿದ್ದನು. ನಾವೂ ಸುಮ್ಮನೆ ನಮ್ಮ ಮನೆಯಲ್ಲಿ ಇದ್ದೆವು.
        ಹೀಗಿದ್ದು ಇಂದು ಇಂದು ದಿನಾಂಕ:16/07/2018 ರಂದು ಬೆಳಿಗ್ಗೆ 06.30 ಎಎಂ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಕಸ ಗೂಡಿಸುವಾಗ ಸಂಗೀತಾ ಇವಳು ಮತ್ತೆ ನಮ್ಮನ್ನು ನೋಡಿ ರಂಡಿ ಬೋಸಡಿ ಅಂತಾ ಕಳು ಮಾಡಿ ತಿಂತಾರ ಅಂತಾ ಬೈಯತೊಡಗಿದಳು ಆಗ ನಾನು ಯಾಕೆ ಸುಮ್ಮನೆ ಬೈಯುತ್ತಿ, ಕೊತಂಬರಿ ನಾವು ಕಳವು ಮಾಡಿಲ್ಲ ನಮ್ಮ ಹುಡುಗ ತಿಳಿಯದೆ ಕಿತ್ತಿದ್ದಾನೆ, ಅಂತಾ ಹೇಳುತ್ತಿದ್ದಾಗ 1) ರಮೇಶ ತಂದೆ ಸೇವು ಚವ್ಹಾಣ 2) ಪಾಟೀಲ @ ಸುನೀಲ ತಂದೆ ಸೇವು ಚವ್ಹಾಣ 3) ಶಾಂತಾಬಾಯಿ ಗಂಡ ಸೇವು ಚವ್ಹಾಣ ಮತ್ತು 4) ಸಂಗೀತಾ ಗಂಡ ರಮೇಶ ಚವ್ಹಾಣ ಸಾ: ಎಲ್ಲರು ಧಮರ್ಾನಾಯಕ ತಾಂಡಾ ಉಕ್ಕನಾಳ ಇವರುಗಳು ಕೂಡಿ ಸೂಳಿ ನಮ್ಮ ಕೊತ್ತಂಬರಿ ಕಿತ್ತಿ ನಮಗೆ ಬುದ್ದಿ ಹೇಳಲು ಬರುತ್ತಿಯೇನು ಅಂತಾ ಅವಾಶ್ಚ ಶಬ್ದಗಳಿಂದ ಬೈಯುತ್ತಾ ಬಂದು ಶಾಂತಿಬಾಯಿ ಇವಳು ನನ್ನ ಕೂದಲು ಹಿಡಿದು ಬೆನ್ನಿಗೆ ಕೈಯಿಂದ ಹೊಡೆದಳು ಆಗ ರಮೇಶ ಈತನು ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಸೆರಗು ಹಿಡಿದು ಎಳೆದು ಒಂದು ಬಡಿಗೆಯಿಂದ ನನ್ನ ಎಡಗೈ ಹೆಬ್ಬೆರಳಿನ ಹತ್ತಿರ ಹೊಡೆದು ರಕ್ತಗಾಯ ಮಾಡಿದ ಆಗ ಇದನ್ನು ನೋಡಿ ಬಿಡಿಸಲು ಬಂದ ನಮ್ಮ ಅಕ್ಕ ವಕೀಲಾಬಾಯಿಗೆ ರಮೇಶ ಈತನು ಅದೆ ಬಡಿಗೆಯಿಂದ ಬೆನ್ನಿಗೆ, ಎಡಗಡೆಯ ಹೆಡಕಿನ ಹತ್ತಿರ ಮತ್ತು ಎಡಗೈಗೆ ಹೊಡೆದು ಗುಪ್ತಗಾಯ ಮಾಡಿದ, ಸಂಗೀತಾ ಮತ್ತು ಸುನಿಲ ಇವರು ಹೊಲಸು ಬೈಯುತ್ತಿದ್ದರು. ಆಗ ನನ್ನ ಗಂಡ ಬಸವರಾಜ ತಂದೆ ಭೀಮಸಿಂಗ ಚವ್ಹಾಣ ಮತ್ತು ಅಲ್ಲೆ ಹೊರಟಿದ್ದ ಸೇವು ತಂದೆ ಪೀರು ರಾಠೋಡ ಇವರುಗಳು ನಮಗೆ ಹೊಡೆಯುವದು ಬೈಯುವದನ್ನು ನೋಡಿ ಬಿಡಿಸಿಕೊಂಡರು ಆಗ ಆರೋಪಿತರೆಲ್ಲರೂ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ಕೋತಂಬರಿ ಕಿತ್ತಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವದಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. 
     ನಮಗೆ ಕೈಯಿಂದ ಬಡಿಗೆಯಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿ, ಜೀವದ ಬೆದರಿಕೆ ಹಾಕಿರುವ ಮೇಲಿನ ನಾಲ್ಕು (4) ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ಠಾಣೆಗೆ 11.15 ಎಎಂ ಕ್ಕೆ ಬಂದು ಠಾಣಾ ಗುನ್ನೆ ನಂ: 135/2018 ಕಲಂ: 323, 324, 354, 504, 506 ಸಂ: 34 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
 
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 51/2018 ಕಲಂ 279, 337, 338 ಐಪಿಸಿ;-ದಿನಾಂಕ 16/07/2018 ರಂದು ಸಮಯ ರಾತ್ರಿ 9 ಪಿ.ಎಂ.ಕ್ಕೆ ಯಾದಗಿರಿ ನಗರದ ಅಂಬೇಡ್ಕರ್-ಶಾಸ್ತ್ರಿ ವೃತ್ತದ  ಮುಖ್ಯ ರಸ್ತೆಯ ಮೇಲೆ ಬರುವ ಸಭಾ ಕಾಲೇಜು ಹತ್ತಿರ ಮೋಟಾರು ಸೈಕಲ್ ನಂ. ಕೆಎ-33, ಕೆ-8338 ನೇದ್ದರ  ಮತ್ತು ಮೋಟಾರು ಸೈಕಲ್ ನಂ. ಕೆಎ-33, ಎಸ್-9623 ನೇದ್ದರ ಈ ಎರಡು ವಾಹನಗಳ ಸವಾರರ ಅತೀವೇಗ ಮತ್ತು ಅಲಕ್ಷ್ಯತನದಿಂದ  ಎದುರು ಬದರು ಡಿಕ್ಕಿ ಪಡಿಸಿಕೊಂಡು ಅಪಘಾತ ಜರುಗಿದ್ದು   ಸದರಿ ಅಪಘಾತದಲ್ಲಿ  ಎರಡು ಮೋಟಾರು  ಸೈಕಲ್ ಸವಾರರಿಗೆ ಬಾರೀ ರಕ್ತಗಾಯ ಮತ್ತು ಸಾದಾ ರಕ್ತಗಾಯವಾಗಿದ್ದರ ಬಗ್ಗೆ  ಹಾಗೂ  ಎರಡು ಮೋಟಾರು ವಾಹನ ಸವಾರರ ಮೇಲೆ ಮುಂದಿನ ಕ್ರಮ ಜರುಗಿಸುವ ಬಗ್ಗೆ  ನೀಡಿದ ಫಿಯರ್ಾದಿ ಇರುತ್ತದೆ.  ದು, ತಂದೆ ಕಾಲಿನಿಂದಾ ಬೆನ್ನಿಗೆ ಒದ್ದ ಜೀವ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿ ಹೇಳಿಕೆ ದೂರಿನ ಮೇಲಿಂದಾ  ಕ್ರಮ ಜರುಗಿಸಲಾಗಿದೆ.   


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!