Yadgir District Reported Crimes Updated on 04-07-2018

By blogger on ಬುಧವಾರ, ಜುಲೈ 4, 2018


                                          Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 342/2018 ಕಲಂ 399, 402 ಐ.ಪಿ.ಸಿ;- ದಿನಾಂಕ 03/07/2018 ರಂದು ಬೆಳಗಿನ ಜಾವ 01-45 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ.ಜಿ. ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ ಠಾಣೆ ರವರು 3 ಜನ ಆರೋಪಿ, ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 02/07/2018 ರಂದು ರಾತ್ರಿ 22-30 ಗಂಟೆಗೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಡಿಗ್ರಿ ಕಾಲೇಜ್ ಹತ್ತಿರ ಇರುವ ದಿಗ್ಗಿ ಸಂಗಮೇಶ್ವರ ದೇವಸ್ಥಾನಕ್ಕೆ ಹೋಗುವ ರೋಡಿನ ಕಮಾನ ಹತ್ತಿರ 7-8 ಜನ ವಯಸ್ಕರು ಒಂದು ಕಾರ ಮತ್ತು ಒಂದು ಮೋಟರ ಸೈಕಲದೊಂದಿಗೆ ಬಂದು ದರೋಡೆ ಮಾಡಲು ಸಿದ್ದತೆ ಮಾಡಿಕೊಳ್ಳುತಿದ್ದ ಬಗ್ಗೆ ಖಚಿತಿ ಮಾಹಿತಿ ಬಂದ ಮೇರೆಗೆ ಸದರಿ ಫಿರ್ಯಾದಿವಯವರು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಮೂರು ಜನ ಆರೋಪಿತರನ್ನು ಹಿಡಿದಿದ್ದು, 5 ಜನ ಆರೋಪಿತರು ಓಡಿ ಹೋಗಿದ್ದು ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಸೀಲ್ವರ ಬಣ್ಣದ ಫೋರ್ಡ ಕಂಪನಿಯ ಕಾರ ನಂ ಕೆಎ-05-ಎಮ್.ಬಿ-7927  ಅಂ.ಕಿ 3 ಲಕ್ಷ ರೂಪಾಯಿ 1)  ಒಂದು ಸೀಲ್ವರ ಬಣ್ಣದ ಹಿರೋ ಹೆಚ್.ಎಪ್ ಡಿಲಕ್ಸ ಮೋಟರ ಸೈಕಲ್ ನಂ ಕೆಎ-33-ಎಸ್-0826 ಅಂ.ಕಿ 30,000-00 ರೂಪಾಯಿವುಳ್ಳವು. 3] ಕೃತ್ಯಕ್ಕೆ ಉಪಯೋಗಿಸಿದ ಕಬ್ಬಿಣದ ರಾಡ, ಕಪ್ಪು ಬಣ್ಣದ ಮುಖವಾಡ, ಒಂದು ಮಚ್ಚ, ಎರಡು ಬಿದರ ಬಡಿಗೆ, ಒಂದು ಸೈಕಲ್ ಚೈನ್ ಎರಡು ಕಬ್ಬಿಣದ ಹಾರಿ, ಅಂದಾಜು 100 ಗ್ರಾಂ ನಷ್ಟು ಖಾರದಪುಡಿಯ ಪೊಟ್ಟಣ. ಅಂ.ಕಿ-00 ನೇದ್ದವುಗಳನ್ನು ದಿನಾಂಕ 02/07/2018 ರಂದು ರಾತ್ರಿ 23-40 ಗಂಟೆಯಿಂದ ದಿನಾಂಕ 03/07/2018 ರಂದು ಬೆಳಗಿನ ಜಾವ 01-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಆರೋಪಿತರ ವಿರುದ್ದ ಠಾಣೆ ಗುನ್ನೆ ನಂ 342/2018 ಕಲಂ 399, 402 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.   
                          
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 343/2018. ಕಲಂಃ 420,464 ಐಪಿಸಿ;-ದಿನಾಂಕ: 03/07/2018 ರಂದು ಬೆಳಗ್ಗೆ 10-30 ಎ,ಎಂ ಕ್ಕೆ ಠಾಣೆಗೆ ಪಿಯರ್ಾದಿ ಶ್ರೀ ತಿಪ್ಪಣ್ಣ ತಂ/ ಮಡಿವಾಳಪ್ಪ ಅರಳಹಳ್ಳಿ ಸಾ||ಅರಳಹಳ್ಳಿ ತಾ|| ಶಹಾಪೂರ ರವರು ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ.       ನಾನು ಅಜರ್ಿದಾರನಾದ ಶ್ರೀ ತಿಪ್ಪಣ್ಣ ತಂದೆ ಮಡಿವಾಳಪ್ಪ ವಯ|| 38 ಉ|| ಒಕ್ಕಲತನ ಸಾ|| ಅರಳಹಳ್ಳಿ ತಾ|| ಶಹಾಪೂರ ಜಿ|| ಯಾದಗೀರ ಇದ್ದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವದೆನೇಂದರೆ. ನನ್ನ ಹೆಸರಿನಲ್ಲಿರುವ ಶಹಾಪೂರ ತಾಲೂಕಿನ ಅರಳಹಳ್ಳಿ ಸೀಮಾಂತರದಲ್ಲ್ಲಿ ಬರುವ ಸವರ್ೆ ನಂ: 6/1 ಕ್ಷೇತ್ರ 6 ಎಕರೆ 12 ಗುಂಟೆ ಜಮೀನಿನಲ್ಲಿ ಶಿವಾ ಆಗ್ರೋ ಕೇಂದ್ರ ಶಹಾಪೂರ ರವರ ಮುಖಾಂತರ ಸಜ್ಜೆ ಬೀಜ (ಹೈಟೆಕ 4201) ಬೀಜ ಪಡೆದಿದ್ದು ನನಗೆ ಸದರಿ ಅಂಗಡಿ ಮಾಲಿಕರು ಕಳಪೆ ಸಜ್ಜೆ ಬೀಜ ಕೊಟ್ಟಿದ್ದು ಸಜ್ಜೆ ಬೇಳೆ ಕಾಳು ಕಟ್ಟದೆ ಹಾನಿ ಯಾಗಿದ್ದು ಅಂಗಡಿ ಮಾಲಿಕರ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿಸಿಕೊಳ್ಳುತ್ತೆನೆ. ಈಗಾಗಲೆ ನಾವುಗಳು ಅಂಗಡಿ ಮಾಲಿಕರಿಗೆ ತಿಳಿಸಲಾಗಿದೆ. ಹಾಗೂ ಕೃಷಿಗೆ ಸಂಬಂದ ಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳೀಸಲಾಗಿದೆ. ಇವರು ಕೂಡಾ ಕ್ರಮ ಕೈ ಕೊಂಡಿಲ್ಲ ಕೃಷಿ ಅಧಿಕಾರಿಗಳಿಗೆ ಕೃಷಿ ವಿಶ್ವ ವಿದ್ಯಾಲಯ ರಾಯಚೂರ ಬೆಳೆಗೆ ಸಂಬಂದ ಪಟ್ಟ ವಿಜ್ಞಾನಿಗಳು ಮುಂದಿನ ಕರ್ಮಕ್ಕಾಗಿ ಪತ್ರ ಬರೆದಿದ್ದಾರೆ. ಕೃಷಿ ಅಧಿಕಾರಿಗಳು ಇಲ್ಲಿಯವರೆಗೆ ಏನು ಕ್ರಮ ಕೈಕೊಂಡಿಲ್ಲ. ನಮಗೆ ಒಟ್ಟು 2.50000/- ರೂ ನಷ್ಟ ಉಂಟಾಗಿದ್ದು ಉತ್ತಮವಾಗಿ ಬೀಜ ಕೊಟ್ಟಿದ್ದರೆ. ನಮಗೆ ಪ್ರತಿ ಎಕರೆಗೆ 25 ಚೀಲ ಬೆಳೆ ಬರುತ್ತಿತ್ತು. ಒಟ್ಟು 150 ಚೀಲ ಬೆಳೆ ಬರುತ್ತದೆ ತಾಔಉಗಳು ಇದರ ಬಗ್ಗೆ ಕುಲಂಕುಶವಾಗಿ ತನಿಖೆ ಮಾಡಿ ಪರಿಶಿಲನೆ ಮಾಡಿ ಸದರಿ ಅಧಿಕಾರಿಗಳ ವಿರುದ್ದ ಮತ್ತು ಅಮಗಡಿ ಮಾಲಿಕರ ವಿರುದ್ದ ಹಗೂ ಕಂಪನಿ (ಹೈಟೆಕ್ ಸಿಡ ಇಂಡಿಯಾ ಪ್ರಾವೇಟ ಲಿಮಿಟೆಡ್) ಪ್ಲಾಟ ನಂಬರ 119, 2ನೇ ಮಹಡಿ ಗ್ರಿನ ಪಾರ್ಕ ಅವಿನ್ಯೂ ಸುಚಿತ್ರಾ ಜಂಕಷನ ಮೆಡಿಕಲ್ ಹೈವೆ ಹೈದ್ರಾಬಾದ- 500067 ಇವರ ವಿರುದ್ದ ಕ್ರಮ ಜರುಗಿಸ ಬೇಕು.
ಈ ಕೆಳಕಂಡ ಕೃಷಿ ವಿಶ್ವ ವಿದ್ಯಾಲಯ ರಾಯಚೂರ ತಂಡದ ಸದಸ್ಯರಾದ
1.    ಡಾ|| ಪಿ.ಹೆಚ್. ಕುಚನೂರ ಪ್ರಾದ್ಯಾಪಕರು ಕೃಷಿ ವಿಶ್ವ ವಿದ್ಯಾಲಯ ಭಿಮರಾಯನಗುಡಿ.
2.    ಡಾ|| ಮಲ್ಲಿಕಾಜರ್ುನ ಕೆಂಗನಾಳ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ
3.    ಡಾ|| ಎಸ್.ಎನ್.ಹೊನ್ನಳ್ಳಿ ಸಹಾಯಕ ಪ್ರಾದ್ಯಾಪಕರು ಬೇಸಾಯ ಶಾಸ್ತ್ರ ಕೃಷಿ ವಿಶ್ವ ವಿದ್ಯಾಲಯ ಭೀಮರಾಯನ ಗುಡಿ
4.    ಡಾ|| ಬಸವರಾಜ ಕಲ್ಮಠ ಸಹಾಯಕ ಪ್ರಾದ್ಯಾಪಕರು ಕೀಟ ಶಾಸ್ತ್ರ ಕೃಷಿ ವಿಶ್  ವಿದ್ಯಾಲಯ ಭಿವ್ಮರಯನ ಗುಡಿ
5.    ಕೃಷಿ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಮತ್ತು ಅಂಗಡಿ ಮಾಲಿಕನು ಸೇರಿಕೊಂಡು ಸುಳ್ಳು ಕಗದ ಪತ್ರಗಳನ್ನು ಸೃಷ್ಟಿ ಮಾಡಿದ್ದಾರೆ ರೈತರಿಗೆ ಮೋಸ ಮಾಡಿದ್ದಾರೆ.
ಇವರೆಲ್ಲರೂ ಕೂಡಿಕೊಂಡು ಸುಳ್ಳು ವರದಿ ನೀಡಿರುತ್ತಾರೆ. ನಮ್ಮ ಪ್ರಕಾರ ಸಜ್ಜೆ ಬೆಳೆಗೆ ಯಾವುದೆ ರೋಗ ಬರುವದಿಲ್ಲ ಎಣ್ಣೆ ಹೋಡೆಯುವ ಅವಶ್ಯಕತೆ ಇರುವದಿಲ್ಲ ವಿನಾಃ ಕಾರಣ ಸುಳ್ಳು ಹೇಳುತ್ತಿದ್ದಾರೆ. ಮತ್ತು ಬೇಳೆ ತುಂಬಾ ದಟ್ಟಣೆಯಾಗಿ ಬಿತ್ತಿದ್ದರಿಂದ ಈ ರಿತಿಯಗಿದೆ ಎಂದು ವರದಿ ನೀಡಿರುತ್ತಾರೆ. ಸಜ್ಜೆ ಬೆಳೆಗೆ ಹುಳ ಮತ್ತು ಕಾಂಡ ಕೊರಕದಿಂದ ಬೆಳೆ ಹಾನಿಯಾಗಿದೆ ಎಂದು ಸುಳ್ಳು ವರದಿ ನೀಡಿರುತ್ತಾರೆ. ತಾವುಗಳು ಅಂಗಡಿ ಮಾಲಿಕ್ಪರಿಗೆ ಹಗು ಅಧಿಕಾರಿಗಳ ಮೇಲೆ ಕ್ರಮ ಕೈ ಕೊಳ್ಳಬೆಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿ ಕೊಳ್ಳುತ್ತೆನೆ. ಅಂತ ಕೊಟ್ಟ ಲಿಖಿತ ಪಿಯರ್ಾದಿ ಸಾರಾಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ: 343/2018 ಕಲಂ.420 464 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 345/2018 ಕಲಂ 279 304[ಎ] ಐ.ಪಿ.ಸಿ;- ದಿನಾಂಕ 03/07/2018 ರಂದು ರಾತ್ರಿ 11:00 ಪಿಎಂ ಗಂಟೆಗೆ ಫಿರ್ಯಾದಿ ಶ್ರೀ ವಿಜಯಕುಮಾರ ತಂದೆ ಅಮರಣಗೌಡ ಪೊಲೀಸ್ ಪಾಟೀಲ್ ವ|| 38 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹತ್ತಿಗುಡುರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ತಮ್ಮ ಶರಣಗೌಡನು ಇಂದು ದಿನಾಂಕ:03/07/2018 ರಂದು ಸಾಯಂಕಾಲ 04:00 ಪಿಎಂ ಸುಮಾರಿಗೆ ಶಹಾಪೂರಕ್ಕೆ ಹೊಗಿ ಕಿರಾಣಿ ಮಾಲು ತಗೆದುಕೊಂಡು ಬರುತ್ತೇನೆ ಅಂತ ಹೇಳಿ ನಮ್ಮ ಮೋಟರ ಸೈಕಲ್ ಮೇಲೆ ಕೆಎ-33 ಆರ್-1367 ನೇದ್ದನ್ನು ತಗೆದುಕೊಂಡು ಹೋಗಿದ್ದನು. ನಂತರ ರಾತ್ರಿ 09:40 ಪಿಎಂ ಸುಮಾರಿಗೆ ನಮ್ಮೂರ ದೇವಿಂದ್ರಪ್ಪ ತಂದೆ ಶಿವಪ್ಪ ಮಹಾಮನಿ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದೆನಂದರೆ, ನಾನು ಮತ್ತು ವೀರಣ್ಣ ತಂದೆ ಬಸಣ್ಣ ಅಂಗಡಿ ಇಬ್ಬರು ಕೂಡಿ ಸಾಯಂಕಾಲ 06:00 ಪಿಎಂ ಸುಮಾರಿಗೆ ಶಹಾಪುರದಲ್ಲಿ ಕೆಲಸ ಇದ್ದುದರಿಂದ ಶಹಾಪೂರಕ್ಕೆ ಬಂದಿದ್ದು, ಕೆಲಸ ಮುಗಿಸಿಕೊಂಡು ರಾತ್ರಿ 09:15 ಪಿಎಂ ಸುಮಾರಿಗೆ ನಾವಿಬ್ಬರು ಹತ್ತಿಗುಡುರಕ್ಕೆ ಹೊರಟಾಗ ಅಂದಾಜು 09:30 ಪಿಎಂ ಸುಮಾರಿಗೆ ಶಹಾಪೂರ-ಹತ್ತಿಗುಡುರ ಮುಖ್ಯ ರಸ್ತೆಯ ರಸ್ತಪೂರ ಕಮಾನ ದಾಟಿ ಅಂದಾಜು 500 ಮೀಟರ ಅಂತರದಲ್ಲಿ ಹತ್ತಿಗುಡುರ ಕಡೆಗೆ ರೋಡಿನಲ್ಲಿ ಹೋಗುವಾಗ ನಮ್ಮ ಮುಂದೆ ಒಬ್ಬ ವ್ಯಕ್ತಿ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ ರೋಡಿನ ಮೇಲೆ ಹೊರಟಿದ್ದ ಎಮ್ಮೆಗಳ ಹಿಂಡಿನಲ್ಲಿಯ ಒಂದು ಎಮ್ಮೆಗೆ ಡಿಕ್ಕಿಪಡಿಸಿ ಮೋಟರ್ ಸೈಕಲ್ ಸಮೇತವಾಗಿ ರೋಡಿನ ಮೇಲೆ ಬಿದ್ದನು. ಎಲ್ಲಾ ಎಮ್ಮೆಗಳು ಹೆದರಿ ಒಡಿ ಹೋದವು ಹತ್ತಿರ ಹೋಗಿ ನೋಡಲಾಗಿ ಹಿರೋ ಫ್ಯಾಷನ್ ಪ್ರೋ ಮೋಟರ ಸೈಕಲ್ ನಂ. ಕೆಎ-33 ಆರ್-1367 ಇದ್ದು, ರೋಡಿನ ಮೇಲೆ ಬಿದ್ದದ್ದ ವ್ಯಕ್ತಿ ನಿಮ್ಮ ತಮ್ಮ ಶರಣಗೌಡ ಇರುತ್ತಾನೆ. ಅವನಿಗೆ ತಲೆಯ ಹಿಂದೆ ಬಾರಿ ರಕ್ತಗಾಯ, ಎಡಗಣ್ಣಿಗೆ ರಕ್ತಗಾಯವಾಗಿ, ಕಿವಿಂದ ರಕ್ತ ಬಂದು ತನಗಾದ ಗಾಯ ಪಟ್ಟಿನಿಂದ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಅಂತ ತಿಳಿಸಿದಾಗ ನಾವು ಎಲ್ಲರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಅಪಘಾತವಾದ ಸ್ಥಳಕ್ಕೆ ಬಂದು ನಮ್ಮ ತಮ್ಮನ ಶವ ನೋಡಿದಾಗ ಮೇಲೆ ಹೇಳಿದ್ದಂತೆ ಗಾಯ ಪೆಟ್ಟು ಹೊಂದಿ ಮೃತ ಪಟ್ಟಿದ್ದನು. ಮೃತ ದೇಹವನ್ನು ಶಹಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಿ ಠಾಣೆಗೆ ಬಂದಿರುತ್ತೇನೆ. 
       ಕಾರಣ ಈ ಅಪಘಾತಕ್ಕೆ ಕಾರಣಿಭೂತನಾದ ನನ್ನ ತಮ್ಮ ಶರಣಗೌಡ ತಂ/ ಅಮರಣಗೌಡ ಪೊಲೀಸ್ ಪಾಟೀಲ್ ಸಾ|| ಹತ್ತಿಗುಡೂರ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 345/2018 ಕಲಂ 279, 304[ಎ] ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೇ ಕೈಕೊಂಡಿದ್ದು ಇರುತ್ತದೆ. 
 
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 131/2018 ಕಲಂ 143, 147, 148, 323, 324, 504, 506 ಸಂ: 149 ಐಪಿಸಿ ;- ದಿನಾಂಕ 03/07/2018 ರಂದು 10.30 ಎಎಮ್ ಕ್ಕೆ ಪಿಯರ್ಾದಿ ಶ್ರೀ. ಬಸವರಾಜ ತಂದೆ ಭೀಮಣ್ಣ ಬಡದಲ ಸಾ: ವನದುಗರ್ಾ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ಸದರಿ ಹೇಳಿಕೆ ಸಾರಂಶ ಏನಂದರೆ, ಸಾರಂಶವೆನಂದರೆ. ಇಂದು ದಿನಾಂಕ: 03/07/2018 ರಂದು ಬೆಳಿಗ್ಗೆ 08.00 ಎಎಮ್ ಸುಮಾರಿಗೆ ನಮ್ಮ ಮನೆಯ ಮುಂದೆ ಅಂಗಳದಲ್ಲಿ ನಾನು, ನಮ್ಮ ಅಕ್ಕ ಯಲ್ಲಮ್ಮ ಮತ್ತು ನಮ್ಮ ತಂದೆ ಭೀಮಣ್ಣ ಎಲ್ಲರೂ ಕೂಡಿ ನಮ್ಮ ಅಂಗಳದ ಜಾಗ ಸ್ವಚ್ಚ ಮಾಡುತ್ತಿದ್ದಾಗ ನಮ್ಮ ಪಕ್ಕದ ಮನೆಯವರಾದ ದೇವಪ್ಪ ತಂದೆ ನಿಂಗಯ್ಯ ಹವಾಲ್ದಾರ ಈತನು ಬಂದು ಇಲ್ಲಿ ನಮ್ಮ ಜಾಗ ಬರುತ್ತದೆ ಅಂತಾ ವಿನಾಃ ಕಾರಣ ಜಗಳ ತಗೆದು ಸೂಳೆ ಮಕ್ಕಳೆ ಇಲ್ಲಿ ಯಾಕ ಸ್ವಚ್ಚ ಮಾಡುತ್ತಿದ್ದಿರಿ ಅಂತಾ ಬೈಯತೊಡಗಿದನು. ಆಗ ನಾನು ಮತ್ತು ನಮ್ಮ ತಂದೆ, ಆತನಿಗೆ ನಿಮ್ಮ ಜಾಗ ಬಿಟ್ಟು ನಮ್ಮ ಜಾಗದಲ್ಲಿ ಸ್ವಚ್ಚ ಮಾಡುತ್ತಿದ್ದೇವೆ, ನೀನು ಹೊಲಸು ಬೈಯಬೇಡ ಅಂತಾ ಅಂದಿದ್ದಕ್ಕೆ ಆರೊಪಿತರು ಎಲ್ಲರೂ ಕೂಡಿ ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈಯುತ್ತಾ ಬಂದವರೆ ಮುದಕಪ್ಪ @ ಭೀಮಣ್ಣ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ಶಿವರಾಜ ಈತನು ಕೈಯಿಂದ ನನ್ನ ಬೆನ್ನಿಗೆ ಹೊಡೆದನು. ಸೋಮಶೇಖರ ಈತನು ಬಡಿಗೆಯಿಂದ ನನ್ನ ತಲೆಗೆ ಹೊಡದು, ನನ್ನ ತಲೆಯ ಮೇಲೆ ರಕ್ತಗಾಯ ಮಾಡಿದ ಆಗ ದೇವಪ್ಪ ಈತನು ಕಲ್ಲಿನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು, ನನ್ನ ತಲೆಯ ಮೇಲೆ ಎರಡು ಕಡೆ ರಕ್ತಗಾಯ ಆಯಿತು. ಮುದಕಪ್ಪ, ಶಿವರಾಜ ಮತ್ತು ನಿಂಗಯ್ಯ ಈ ಸೂಳೆ ಮಗನಿಗೆ ಬಿಡಬೇಡರಿ ಅಂತಾ ಕಾಲಿನಿಂದ ನನ್ನ ಕಾಲಿಗೆ ಒದ್ದಿರುತ್ತಾರೆ. ಆಗ ನನ್ನ ಅಕ್ಕ ಯಲ್ಲಮ್ಮ ಮತ್ತು ನನ್ನ ತಂದೆ ಭೀಮಣ್ಣ ಇಬ್ಬರು ಬಿಡಿಸಿಕೊಳ್ಳಲು ಬಂದಾಗ ಯಲ್ಲಮ್ಮ ಗಂಡ ನಿಂಗಯ್ಯ ಮತ್ತು ಚಂದ್ರಕಲಾ ತಂದೆ ನಿಂಗಯ್ಯ ಇವರು ಅವರಿಬ್ಬರಿಗೂ ದಬ್ಬಿಕೊಟ್ಟಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ಅಣ್ಣ ಮಾನಯ್ಯ ತಂದೆ ಭೀಮಣ್ಣ ಮತ್ತು ನಾಗಪ್ಪ ತಂದೆ ಮುತ್ತುರಾಜ ಇಬ್ಬರು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಸದರಿ ಎಲ್ಲ ಜನರು ಮಕ್ಕಳೆ ಇನ್ನೊಮ್ಮೆ ನಮ್ಮ ಜಾಗದ ಕಡೆಗೆೆ ಬಂದರೆ ನಿಮ್ಮನ್ನು ಜೀವದಿಂದ ಹೊಡೆದು ಕಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ.. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ: 131/2018 ಕಲಂ: 143, 147, 148, 323, 324, 504, 506 ಸಂ: 149 ಐಪಿಸಿ ನೇದ್ದರ ಅಡಿಯಲ್ಲಿ  ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ ;-. 132/2018 ಕಲಂ 143, 147, 148, 323, 324, 504, 506 ಸಂ: 149 ಐಪಿಸಿ;- ದಿನಾಂಕ 03/07/2018 ರಂದು ಶ್ರೀ ಸೋಮಲಿಂಗಪ್ಪ ಹೆಚ್.ಸಿ-10 ರವರು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳು ಶ್ರೀ. ನಿಂಗಯ್ಯ ತಂದೆ ಭೀಮಣ್ಣ ಹವಾಲ್ದಾರ ಸಾ: ವನದುಗರ್ಾ ಇವರ ಹೇಳಿಕೆ ಪಡೆದುಕೊಂಡು 02.30 ಪಿಎಂ ಕ್ಕೆ ಹಾಜರ ಪಡೆಸಿದ್ದು ಸದರಿ ಹೇಳಿಕೆ ಸಾರಂಶ ಏನಂದರೆ, ಇಂದು ದಿನಾಂಕ: 03/07/2018 ರಂದು ಬೆಳಿಗ್ಗೆ 08.00 ಎಎಮ್ ಸುಮಾರಿಗೆ ನಮ್ಮ ಮನೆಯ ಪಕ್ಕದ ಮನೆಯವರಾದ ಬಸವರಾಜ ತಂದೆ ಭಿಮಣ್ಣ ಬಡದಲ ಇವರು ನಮ್ಮ ಜಾಗದಲ್ಲಿ ಗ್ವಾಡಿ ಕಟ್ಟಲು ಆರಂಬಿಸಿದ್ದರು. ಆಗ ನಾನು ನನ್ನ ಹೆಂಡತಿ ಯಲ್ಲಮ್ಮ ಮತ್ತು ನನ್ನ ಮಗ ದೇವಿಂದ್ರಪ್ಪ ಮೂರು ಜನರು ಬಸವರಾಜ ಈತನ ಹತ್ತಿರ ಹೋಗಿ ನಮ್ಮ ಜಾಗ ಬಿಟ್ಟು ನೀವು ನಿಮ್ಮ ಗ್ವಾಡಿ ಕಟ್ಟಿಕೊಳ್ಳಿರಿ ನಮ್ಮ ಜಾಗದಲ್ಲಿ ಯಾಕೆ ಸ್ವಚ್ಚ ಮಾಡುತ್ತಿದ್ದಿರಿ ಅಂತಾ ಅಂದದ್ದಕ್ಕೆ, ಬಸವರಾಜ ಈತನು ಬೋಳಿ ಮಕ್ಕಳೆ ನಿಮ್ಮ ಜಾಗ ಇಲ್ಲಿ ಯಾವುದು ಇಲ್ಲ ನಾವು ಗ್ವಾಡಿ ಕಟ್ಟುತ್ತೇವೆ ನೀವೇನು ಕಿತ್ತಿಕೊಳ್ಳುತ್ತೀರಿ ಕಿತ್ತಿಕೊಳ್ಳಿರಿ ಅಂತಾ ಬೈಯತೊಡಗಿದರು. ಆಗ ನಾವು ಅವಾಚ್ಯವಾಗಿ ಬೈಯಬ್ಯಾಡ ಅಂತ ಹೇಳಿತ್ತಿದ್ದಾಗ, ಆರೋಪಿತರು ಎಲ್ಲರೂ ವನದುಗರ್ಾ ಎಲ್ಲರೂ ಕೂಡಿ ನಮಗೆ ರಂಡಿ ಮಕ್ಕಳಾ ಅಂತಾ ಅವಾಚ್ಯವಾಗಿ ಬೈಯುತ್ತಾ ಬಂದವರೆ ಬಸವರಾಜ ಈತನು ನನ್ನ ಬೆನಿಗೆ ಕೈಯಿಂದ ಹೊಡೆದು ದಬ್ಬಿಕೊಟ್ಟನು, ಅದರಿಂದಾಗಿ ನಾನು ಕೆಳಗೆ ಬಿದ್ದೆನು. ನನ್ನ ಮೋಳಕಾಲಿಗೆ ತರಚಿದ ಗಾಯ ಆಗಿರುತ್ತದೆ. ದೇವಮ್ಮ ಇವಳು ನನ್ನ ಹೆಂಡತಿಗೆ ದಬ್ಬಿಕೊಟ್ಟಳು ಅವಳಿಗೂ ಮೊಳಕಾಲಿಗೆ ತರಚಿದ ಗಾಯವಾಗಿರುತ್ತದೆ. ಆಗ ಮಾನಯ್ಯ ತಂದೆ ಭಿಮಣ್ಣ ಈತನು ಒಂದು ಬಡಿಗೆಯಿಂದ ನನ್ನ ಮಗ ದೇವಿಂದ್ರಪ್ಪ ಈತನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಉಳಿದವರೆಲ್ಲರು ಕೈಯಿಂದ ನನ್ನ ಮಗನಿಗೆ ಹೊಡೆದು ದಬ್ಬಾಡಿರುತ್ತಾರೆ. ಮತ್ತು ಅವಾಚ್ಯವಾಗಿ ಬೈಯುತ್ತಿದ್ದರು. ಅಗ ನಾನು, ನನ್ನ ಹೆಂಡತಿ, ಮತ್ತು ಅಲ್ಲೆ ಹೊರಟಿದ್ದ ತಿಮ್ಮಪ್ಪ ತಂದೆ ಯಮನಪ್ಪ ದೋರಿ ಸಾ: ವನದುಗರ್ಾ ಮತ್ತು ಕ್ರೀಷ್ಣಾ ತಂದೆ ಶ್ರಿನಿವಾಸ ನಾಯಕ ಯಗನಪಲ್ಲಿ ಸಾ: ವನದುಗರ್ಾ ಇಬ್ಬರು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಸದರಿ ಎಲ್ಲ ಜನರು ಮಕ್ಕಳೆ ಇನ್ನೊಮ್ಮೆ ಜಾಗದ ಸಮೀಪ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನಮಗೆ ಏನು ಗೊತ್ತಾಗದೆ ನೇರವಾಗಿ ನಾನು ನನ್ನ ಹೆಂಡತಿ ಯಲ್ಲಮ್ಮ ಮತ್ತು ಮಗ ದೆವಿಂದ್ರಪ್ಪ ಮೂರು ಜನರು ಶಹಾಪೂರ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕೆ ಅಂತಾ ಸೇರಿಕೆ ಆಗಿರುತ್ತೇವೆ.

      ನಮ್ಮ ಜಾಗದಲ್ಲಿ ಗ್ವಾಡಿ ಕಟ್ಟ ಬೇಡಿರಿ ಅಂತಾ ಅಂದಿದ್ದಕ್ಕೆ ನಮಗೆ ಕೈಯಿಂದ ಬಡಿಗೆಯಿಂದ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಮೇಲಿನ ಆರು ಜನರ ಮೇಲೆ ಕಾನೂನು ಕ್ರಮ ಜರುಗಿಸಬೆಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ: 132/2018 ಕಲಂ: 143, 147, 148, 323, 324, 504, 506 ಸಂ: 149 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 281/2018 ಕಲಂ: 279,304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್;- ದಿ: 03/07/2018 ರಂದು 11-00 ಎ.ಎಮ್ ಕ್ಕೆ ಶ್ರೀ ಶಾಂತಗೌಡ ತಂದೆ ನಿಂಗನಗೌಡ ಕರಡಿಗುಡ್ಡಾ ಸಾಃ ಕುಪಗಲ್ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಕಿರಿಯ ಮಗನಾದ ರಂಗಣ್ಣ ಇತನು ಸುರಪೂರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ನಾವು ಬಡವರಿರುವ ಕಾರಣ ನನ್ನ ಮಗ ರಂಗಣ್ಣನು ಆಗಾಗ ರಜೆ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದನು. ಅದರಂತೆ ಇಂದು ಮುಂಜಾನೆ ನಮ್ಮೂರಿನ ಹಣಮಂತ ತಂದೆ ಶಿವಪ್ಪ ವಡ್ಡರ ಇತನೊಂದಿಗೆ ಸ್ವರಾಜ ಟ್ರ್ಯಾಕ್ಟರ ನಂಬರ ಕೆ.ಎ 33 ಟಿ 5452 ನೇದ್ದರಲ್ಲಿ ನನ್ನ ಮಗ ಹಾಗು ನಾಗಪ್ಪ ಮಕಾಶಿ, ಭೀಮಣ್ಣ ಮಾಲಿಪಾಟೀಲ್ ಹೀಗೆ ಮೂವರು ಕೂಲಿಕೆಲಸಕ್ಕಾಗಿ ಮುಂಜಾನೆ 7-00 ಗಂಟೆಯ ಸುಮಾರಿಗೆ ಮನೆಯಿಂದ ಹೋಗಿದ್ದನು. ನಂತರ ನಾವು ಮನೆಯಲ್ಲಿದ್ದಾಗ 9-15 ಗಂಟೆಯ ಸುಮಾರಿಗೆ ನನ್ನ ಮಗನೊಂದಿಗೆ ಟ್ರ್ಯಾಕ್ಟರದಲ್ಲಿ ಕೂಲಿಕೆಲಸಕ್ಕೆ ಹೋಗಿದ್ದ ನಾಗಪ್ಪ ಮಕಾಶಿ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾವು ನದಿಯಿಂದ ಮರಳು ತುಂಬಿಕೊಂಡು ಮರಳಿ ಚೌಡೇಶ್ವರಿಹಾಳ ಕ್ರಾಸ್ ಮಾರ್ಗವಾಗಿ ಕುಪಗಲ್ ಕಡೆಗೆ ಬರುತ್ತಿದ್ದಾಗ, ಟ್ರ್ಯಾಕ್ಟರ ಚಾಲಕನಾದ ನಮ್ಮೂರಿನ ಹಣಮಂತ ತಂದೆ ಶಿವಪ್ಪ ವಡ್ಡರ ಇತನು ಟ್ರ್ಯಾಕ್ಟರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು 9-00 ಎ.ಎಮ್ ಸುಮಾರಿಗೆ ಕನರ್ಾಳ ಸಿಮಾಂತರದ ಕೊಟ್ರಯ್ಯಸ್ವಾಮಿ ಇವರ ಹೊಲದ ಹತ್ತಿರ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಟ್ರ್ಯಾಕ್ಟರ ರಸ್ತೆಯ ಎಡಭಾಗದಲ್ಲಿ ಪಲ್ಟಿಯಾಗಿ ಬಿದ್ದಿದ್ದು, ಟ್ರ್ಯಾಲಿಯಲ್ಲಿ ಉಸುಕಿನ ಮೇಲೆ ಕುಳಿತಿದ್ದ ನಾನು ಮತ್ತು ಭೀಮಣ್ಣ ಇಬ್ಬರೂ ಬಲಕ್ಕೆ ಜಿಗಿದಿದ್ದು, ನಿನ್ನ ಮಗ ರಂಗಣ್ಣನು ಎಡಗಡೆ ಜಿಗಿದಾಗ ಟ್ರ್ಯಾಕ್ಟರ ಪಲ್ಟಿಯಾಗಿ ಇಂಜಿನಿನ ದೊಡ್ಡ ಗಾಲಿ ಆತನ ಬೆನ್ನಿನ ಮೇಲೆ ಹೋಗಿದ್ದು, ಆತನು ಗಾಲಿಯ ಕೆಳಗಡೆ ಸಿಕ್ಕಿಹಾಕಿಕೊಂಡಿದ್ದರಿಂದ ಸಂಪೂರ್ಣ ಬೆನ್ನು ಹೊಟ್ಟೆ, ಎದೆಭಾಗ ಚಪ್ಪಟೆಯಾಗಿ ಭಾರಿ ಗುಪ್ತಗಾಯವಾಗಿ, ಮೂಗು ಹಾಗು ಭಾಯಿಯಿಂದ ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದನು. ಆಗ ನಾವು ಗಂಡ-ಹೆಂಡತಿ ಅಳುತ್ತ ಸ್ಥಳಕ್ಕೆ ಹೋಗಿ ನನ್ನ ಮಗನ ಶವವನ್ನು ನೋಡಿದ್ದು, ಅಪಘಾತ ಪಡಿಸಿದ ಚಾಲಕನು ಸ್ಥಳದಿಂದ ಓಡಿಹೋಗಿರುತ್ತಾನೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಟ್ರ್ಯಾಕ್ಟರ ನಡೆಯಿಸಿ ಪಲ್ಟಿ ಮಾಡಿದ್ದರಿಂದ ನನ್ನ ಮಗನು ಮೃತಪಟ್ಟಿದ್ದು, ಅಪಘಾತ ಪಡಿಸಿ ಓಡಿ ಹೋಗಿರುವ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 281/2018 ಕಲಂಃ 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!