By blogger on ಭಾನುವಾರ, ಡಿಸೆಂಬರ್ 14, 2014

                                                          ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
            ದಿನಾಂಕ 13/12/2014 ರಂದು 7-30 ಪಿಎಂಕ್ಕೆ ರಾಜೇಶ ಮತ್ತು ಮಂಜು ಇಬ್ಬರೂ ಕೂಡಿಕೊಂಡು ವಾಡಿಗೆ ಬರುವ ಕುರಿತು ಹೂಂಡಾಯಿ ಎಕ್ಸೆಂಟ ಕಾರ ನಂ.ಕೆಎ-05-ಎಂ.ಎಫ್.4449 ನೇದ್ದರಲ್ಲಿ ಬರುತ್ತಿರುವಾಗ ರಾಜೇಶ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ನಿದ್ದೆಯ ಕಣ್ಣಿನಲ್ಲಿ ರಾಜೇಶ ಈತನು ತನ್ನ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಕಾರಿನ ಸ್ಟೆರಿಂಗನ್ನು ಒಮ್ಮೇಲೆ ಬಲಕ್ಕೆ ಕಟ್ ಮಾಡಿದ್ದರಿಂದ ಕಾರು ರಸ್ತೆಯ ಬಲಬದಿಯ ತಗ್ಗಿನಲ್ಲಿರುವ ನೀಲಗಿರಿ ಗಿಡಕ್ಕೆ ಅಪ್ಪಳಿಸಿ ತಗ್ಗಿನಲ್ಲಿ ಬಿದ್ದಿದ್ದು ಇರುತ್ತದೆ.   ಸದರಿ ಅಪಘಾತದಲ್ಲಿ ಇಬ್ಬರಿಗೂ ಭಾರೀ ರಕ್ತಗಾಯಗಳಾಗಿ ಮತ್ತು ಗುಪ್ತ ಗಾಯಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟ್ದಿರುತ್ತಾರೆ. ಸದರಿ ಘಟನೆ ದಿನಾಂಕ 14/12/2014 ರಂದು ಬೆಳಿಗ್ಗೆ 4 ಎಎಂದಿಂದ 5 ಎಂಎಂದ ಅವದಿಯಲ್ಲಿ ಜರುಗಿದ್ದು ಇರುತ್ತದೆ. ಅಂತಾ ಕೊಟ್ಟ ಹೇಳಿಕೆಯ ಮೇಲಿಂದ ಈ ಮೇಲಿನಂತೆ ಪ್ರಕರಣ ದಾಖಲಾಗಿರುತ್ತದೆ.

                                                            ಯಾದಗಿರಿ ನಗರ ಪೊಲೀಸ್ ಠಾಣೆ
    ದಿನಾಂಕ; 13/12/2014 ರಂದು ಫಿರ್ಯಾದುದಾರರಾದ ಶ್ರೀಮತಿ. ಉಮರ್ಿಳಾ ಗಂಡ ಹಳ್ಳೆಪ್ಪ ಅರಗಲ್ ಹಾ:ವ: ಆದರ್ಶನಗರ ಯಾದಗಿರಿ. ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಸಾರಾಂಶವೇನೆಂದರೆ, ನನಗೆ ಈಗ 20 ವರ್ಷಗಳ ಹಿಂದೆ ಸುರಪೂರ ತಾಲೂಕಿನ ತಳವಾರಗೇರಾ ಗ್ರಾಮದ ಹಳ್ಳೆಪ್ಪ ಎಂಬುವವರೊಡನೆ ಮದುವೆಯಾಗಿದ್ದು ನಮ್ಮ ದಾಂಪತ್ಯದಲ್ಲಿ ನಮಗೆ ಮಕ್ಕಳಾಗಿರುವದಿಲ್ಲ. ನನ್ನ ಗಂಡ ಸದ್ಯ ಸೇಡಂ ತಾಲೂಕಿನ ಶಿಕ್ಷಣ ಇಲಾಖೆಯ ಮುಧೊಳದಲ್ಲಿ ಸಿ.ಆರ್.ಪಿ. (ಸಮೂಹ ಸಂಪನ್ಮೂಲ ವ್ಯಕ್ತಿ ) ಅಂತಾ ಕರ್ತವ್ಯ ಮಾಡುತ್ತಿದ್ದಾರೆ. ನಾವು ಗಂಡ ಹೆಂಡತಿಯಿಬ್ಬರೂ ಮಾದುವೆಯಾದ 4 ವರ್ಷಗಳವರೆಗೆ ಚೆನ್ನಾಗಿ ಸಂಸಾರಮಾಡಿದ್ದು ನಂತರ ನನ್ನ ಗಂಡ ನಿನಗೆ ಮಕ್ಕಳಾಗುವುದಿಲ್ಲ. ನೀನು ಸರಿಯಿಲ್ಲಾ ಅಂತಾ ಕೌಟುಂಬಿಕವಾಗಿ ತೊಂದರೆ ನೀಡುತ್ತಿದ್ದನು. ಆದರೂ ಸಹಿತ ನಾನು ಸಹಿಸಿಕೊಂಡು ಸುಮ್ಮನಾಗಿ ನಮ್ಮ ತವರು ಮನೆಯಲ್ಲಿ ನಮ್ಮ ತಂದೆ ತಾಯಿಯವರಿಗೆ ವಿಷಯ ತಿಳಿಸಿದಾಗ ಅವರು ಸಂಸಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಹೇಳಿದ್ದರಿಂದ ನಾನು ಹೊಂದಾಣಿಕೆ ಮಾಡಿಕೊಂಡು ಸಂಸಾರ ಮಾಡುತ್ತಿದ್ದೆನು. ಹೀಗಿರುವಾಗ ನಾನು ಈಗ ಸುಮಾರು 2 ತಿಂಗಳ ಹಿಂದೆ ಅಕ್ಟೋಬರ ತಿಂಗಳಲ್ಲಿ ತವರು ಮನೆಯಾದ ಯಾದಗಿರಿಗೆ ಬಂದು ವಾಸವಾಗಿದ್ದೆನು. ಹೀಗಿರುವಾಗ ದಿನಾಂಕ: 15/11/2014 ರಂದು ನಾನು ಮತ್ತು ನಮ್ಮ ತಂದೆ ದಾಮೋದರ ಕಟ್ಟಿಮನಿ ತಾಯಿ ಸುಮಿತ್ರಮ್ಮ ಕಟ್ಟಿಮನಿ ಮತ್ತು ನನ್ನ ತಮ್ಮ ವೇಣುಗೋಪಾಲ ಮೂರುಜನ ಮನೆಯಲ್ಲಿದ್ದಾಗ ನನ್ನ ಗಂಡನು ಮುಂಜಾನೆ 9-00 ಗಂಟೆಗೆ ನಮ್ಮ ತವರು ಮನೆಗೆ ಬಂದು ಮನೆಯ ಮುಂದೆ ನಿಂತು ಲೇ ಬೋಸಡಿ ತವರು ಮನೆಗೆ ಬಂದು ಇಲ್ಲೆ ಕುಳಿತಿಯಾ ನೀನು ನಿನಗೆ ಮಕ್ಕಳಾಗುವದಿಲ್ಲ ನಾನು ಎರಡನೇ ಮದುವ ೆಮಾಡಿಕೊಳ್ಳುತ್ತೇನೆ. ನೀನು ಅದಕ್ಕೆ ಒಪ್ಪು ಅಂತಾ ಅವಾಚ್ಯ ಶಬ್ದಗಳಿಂದ ಬೈದನು. ನಾನು ಯಾಕೆ ಈ ರೀತಿ ಮಾತನಾಡುತ್ತೀರಿ ಅಂತಾ ಕೇಳಿದ್ದಕ್ಕೆ ನನ್ನ ಗಂಡನು ನನಗೆ ಬೋಸಡಿ ನಿನಗೆ ಇವತ್ತು ಹೇಗೆ ಮಾಡುತ್ತೇನೆ ನೋಡು ಅಂತಾ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದನು. ಅಲ್ಲೆ ಇದ್ದ ನಮ್ಮ ತಮ್ಮ ವೇಣುಗೋಪಾಲ ಇವನು ಬಿಡಿಸಿ ಕೊಂಡನು. ನಮ್ಮ ತಂದೆ ತಾಯಿಯರು ಕೂಡಾ ಅಡ್ಡ ಬಂದು ಬಿಡಿಸಿದರು. ನನ್ನ ಗಂಡನು ನನಗೆ ದಿನಾಂಕ: 15/11/204 ರಂದು ಮುಂಜಾನೆ 9-00 ಗಂಟೆಗೆ ನಮ್ಮ ತವರು ಮನೆಗೆ ಬಂದು ಕೌಟುಂಬಿಕವಾಗಿ ತೊಂದರೆ ನೀಡಿ ಹೊಡೆದು ಅವಾಚ್ಯ ಶಬ್ದಗಳಿಂದ ಬೈದುಹೋಗಿದ್ದು ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಬಂದು ದೂರು ನೀಡುತ್ತಿದ್ದು ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.263/2014 ಕಲಂ.323, 504, 498(ಎ), ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.


                                                             ಶಹಾಪೂರ ಪೊಲೀಸ್ ಠಾಣೆ
         ದಿನಾಂಕ 13/12/2014 ಮುಂಜಾನೆ 10-00 ಗಂಟೆ ಸುಮಾರಿಗೆ ಫಿಯರ್ಾದಿ ಮತು ಆತನ ಮಕ್ಕಳಾದ ಈಶಯ್ಯ , ನಾಗಯ್ಯ ಹಾಗು ನನ್ನ ತಮ್ಮ ಬಸಲಿಂಗಯ್ಯನ ಮಗನಾದ ಸೂಗಯ್ಯ ನಾಲ್ಕು ಜನರು ಮಾತಮಾಡುತ್ತ ಕುಳಿತ್ತಿದ್ದಾಗ  ಫಿಯರ್ಾದಿಯ ತಮ್ಮನಾದ ಮಲ್ಲಿಕಾಜರ್ುನಯ್ಯ ತಂದೆ ಶರಣಯ್ಯ ಹೀರೆಮಠ ಹಾಗೂ ಅವನ ಮಕ್ಕಳಾದ ಶರಣಯ್ಯ, ಬಸಯ್ಯ, ಸೂಗಯ್ಯ ನಾಲ್ಕು ಜನರು ಕೂಡಿ ಬಂದು ಫಿಯರ್ಾದಿಗೆ ಏನಲೆ ಸೂಳೆ ಮಗನೆ ನಮ್ಮ ಗುಂಡಳ್ಳಿ ಸೀಮಾಂತರದಲ್ಲಿರುವ ಹೊಲದಲ್ಲಿ ನನಗೆ ಏಕೆ? ಪಾಲು ಕೊಡುವದಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು ಜಗಳ ತಗೆದು ಕೈಯಿಂದ ಹಾಗು ಕಲ್ಲಿನಿಂದ ಹೊಡೆ ಬಡೆ ಮಾಡಿ ಅಂತ ಜೀವದ ಭಯ ಹಾಕಿರುತ್ತಾರೆ ಅಂತ ಇತ್ಯಾದಿ ದೂರಿನ ಮೇಲೆ ಠಾಣಾ ಗುನ್ನೆ ನಂ 318/2014 ಕಲಂ 323,324,504,506  ಸಂ 34 ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

                                                                        ಗೋಗಿ ಪೊಲೀಸ್ ಠಾಣೆ
         ಮೃತನಾದ ಅವಿನಾಶ ತಂದೆ ಮಲ್ಲಿನಾಥ ಕಟ್ಟಿಮನಿ ವಯ 30 ಸಾ: ಹಾರಣಗೇರಾ ಇತನು ಮನೆಯಲ್ಲಿ ಇರುವ ಸಂಸಾರದದ ಸಣ್ಣಪುಟ್ಟ ವಿಷಯಗಳು ಬಗೆಹರಿದಿಲ್ಲಾ ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜಿವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 13-12-2014 ರಂದು 2-30 ಪಿ.ಎಂಕ್ಕೆ ತನ್ನ ಮನೆಯಲ್ಲಿ ಕ್ರಿಮಿನಾಶಕ ಔಷದವನ್ನು ಸೇವನೆ ಮಾಡಿ 3 ಪಿ.ಎಂಕ್ಕೆ ಮೃತಪಟ್ಟಿದ್ದು ಇರುತ್ತದೆ.

 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!