ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/01/2021

By blogger on ಭಾನುವಾರ, ಜನವರಿ 17, 2021



                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/01/2021 

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 07/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 17.01.2021 ರಂದು ಮದ್ಯಾಹ್ನ 12:20 ಗಂಟೆಗೆ  ಫಿರ್ಯಾದಿ ಹೆಂಡತಿ ಮತ್ತು ಪಿರ್ಯಾಧಿಯ ಮೊಮ್ಮಗಳು ಟಂಟಂ ನಂ ಕೆಎ-33 ಎ-1069 ನೇದ್ದರಲ್ಲಿ ಕುಳಿತು ಅರಕೇರಾದಿಂದ ತಾತಲಗೇರಾಕ್ಕೆ ಬರುತ್ತಿರುವಾಗ  ನೇದ್ದರ ನೇದ್ದರ ಚಾಲಕನು ತನ್ನ ಟಂಟಂನ್ನು ಅತಿವೇಗ ನೀರ್ಲಕ್ಷತದಿಂದ ಚಾಲನೆ ಮಾಡಿ ಅರಕೇರಾದಿಂದ ತಾತಳಗೇರಾಕ್ಕೆ ಹೊಗುವ ರಸ್ತೆಯ ಮೇಲೆ ಬಸವನ ಗುಡಿಯ ಹತ್ತಿರ ರಸ್ತೆಯ ತಿರುವಿನ ಹತ್ತಿರ ಕಾಲಂ: 08 ರಲ್ಲಿಯವರಿಗೆ ಭಾರಿ ಹಾಗೂ ಸಾದಾ ಸ್ವರೂಪದ ಗಾಯಗಳಾಗಿದ್ದ ಬಗ್ಗೆ ಫಿರ್ಯಾದಿ ದೇವಪ್ಪನು ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂದ ಮೇಲಿಂದ ಠಾಣೆ ಗುನ್ನೆ ನಂಬರ 07/2021 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 06/2021 ಕಲಂ: 279, 337,338 ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ  : ದಿನಾಂಕ 16.01.2021 ರಂದು ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಯಿಂದ ಆರ್ಟಿಎ ಎಮ್ಎಲ್ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರೀ ಲಕ್ಕಪ್ಪ ತಂದೆ ಗಂಗಪ್ಪ ರಾಠೋಡ ಸಾ|| ಕಿರದಳ್ಳಿ ತಾಂಡಾ ಇವರ ಹೇಳಿಕೆ ಪಡೆದುಕೊಂಡು ಇಂದು ದಿ: 17/01/2021 ರಂದು 6.00 ಪಿಎಮ್ಕ್ಕೆ ಠಾಣೆಗೆ ಬಂದಿದ್ದು ಸದರಿ ಹೇಳಿಕೆ ಸಾರಾಂಶವೇನೆಂದರೆ, ದಿನಾಂಕ: 16/01/2021 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಒಂದು ಹಿರೋ ಹೊಂಡಾ ಸ್ಪ್ಲೆಂಡರ್ ಮೋಟರ ಸೈಕಲ್ ನಂಬರ ಕೆಎ 28 ಇಜಿ 5473 ನೇದ್ದನ್ನು ತೆಗೆದುಕೊಂಡು ಸಂತೆ ಮಾಡುವ ಕುರಿತು ಮಗಳಾದ ಸೋನಾಬಾಯಿ ವಯಾ|| 18 ವರ್ಷ ಇವಳನ್ನು ಕರೆದುಕೊಂಡು ಕೆಂಭಾವಿಗೆ ಬಂದಿದ್ದೆನು. ಕೆಂಭಾವಿಯಲ್ಲಿ ಸಂತೆಯನ್ನು ಮುಗಿಸಿಕೊಂಡು ಊರಿಗೆ ಹೋಗುವ ಕುರಿತು ಮೋಟರ ಸೈಕಲ್ ನಂಬರ ಕೆಎ 28 ಇಜಿ 5473 ನೇದ್ದರಲ್ಲಿ ಮಗಳಾದ ಸೋನಾಬಾಯಿ ಇವಳಿಗೆ ಹಿಂಬದಿಯಲ್ಲಿ ಕೂಡಿಸಿಕೊಂಡು ಮದ್ಯಾಹ್ನ 3.30 ಗಂಟೆ ಸುಮಾರಿಗೆ ಕರಡಕಲ್ ಕ್ಯಾಂಪ್ ದಾಟಿ ಸ್ವಲ್ಪ ಮುಂದೆ ಇರುವ ಕೆನಾಲ ಬ್ರಿಜ್ ಹತ್ತಿರ ಹೋಗುತ್ತಿರುವಾಗ ಹಿಂದಿನಿಂದ ಒಂದು ಟಿಪ್ಪರ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಬಲವಾಗಿ ನಮ್ಮ ಮೋಟರ ಸೈಕಲ್ಗೆ ಡಿಕ್ಕಿಪಡಿಸಿದ್ದು ನಾನು ಹಾಗೂ ನನ್ನ ಮಗಳು ಇಬ್ಬರು ಮೋಟರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಬೆನ್ನಿಗೆ ಒಳಪೆಟ್ಟು ಆಗಿದ್ದಲ್ಲದೆ ಎಡಮೊಳಕಾಲಿನ ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಂತಾಗಿದ್ದು ಇರುತ್ತದೆ. ಮಗಳಾದ ಸೋನಿಬಾಯಿ ಇವಳಿಗೂ ಸಹ ತಲೆಯ ಹಿಂದ  ಭಾರಿ ರಕ್ತಗಾಯ ಹಾಗೂ ಎಡಗೈ ಹಾಗೂ ಬಲಗೈಗಳಿಗೆ ತರಚಿದ ಗಾಯಗಳಾಗಿ ಎಡಗಾಲ ಮೊಳಕಾಲ ಮೇಲೆ ಹಾಗೂ ಕೆಳಗಡೆ ಭಾರಿ ಗುಪ್ತಗಾಯಗಳಾಗಿ ಕಾಲು ಮುರಿದಂತಾಗಿರುತ್ತದೆ. ನಂತರ ನಮಗೆ ಅಪಘಾತ ಪಡಿಸಿದ ಟಿಪ್ಪರ್ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ನಿಲ್ಲಿಸಿ ಓಡಿಹೋಗಿದ್ದು, ಆತನ ಹೆಸರು ವಿಳಾಸ ತಿಳಿದುಬಂದಿರುವದಿಲ್ಲ ಸದರಿ ಚಾಲಕನನ್ನು ನೋಡಿದಲ್ಲಿ ಗುತರ್ಿಸುತ್ತೇನೆ. ನಂತರ ನಮಗೆ ಅಪಘಾತಪಡಿಸಿದ ಟಿಪ್ಪರ್ ನಂಬರ ನೋಡಲಾಗಿ ಕೆಎ 33 ಎ 8740 ಅಂತ ಇರುತ್ತದೆ. ನಂತರ ಯಾರೋ 108 ವಾಹನಕ್ಕೆ ಕಾಲ್ ಮಾಡಿದ್ದು ಸದರಿ ವಾಹನ ಬಂದ ನಂತರ ನಾನು ಹಾಗೂ ನನ್ನ ಮಗಳು ಇಬ್ಬರು ಕೂಡಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದುಕೊಂಡು, ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ಹೋಗಲು ಸೂಚಿಸಿದ ಪ್ರಕಾರ ಸದರ ಆಸ್ಪತ್ರೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಅಂತ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂಬರ 06/2021 ಕಲಂ 279, 337, 338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 13/2021 ಕಲಂ  ಕಲಂ. 143, 147  , 447 323,  504, 506 ಸಂಗಡ 149 ಐ.ಪಿ.ಸಿ. : ಇಂದು ದಿನಾಂಕ: 17-01-2021 ರಂದು 3:45 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಬಾಗಣ್ಣ ತಂದೆ ಅಜರ್ುನಪ್ಪ ಗೊಲಪಲ್ಲಿ ವಯ: 60 ವರ್ಷ ಜಾ: ಗೊಲ್ಲ ಉ: ಒಕ್ಕಲುತನ ಸಾ: ಗೋಲಗೇರಾ ತಾ: ಶಹಾಪುರ ದಿನಾಂಕ : 09-01-2021  ರಂದು 10:00 ಗಂಟೆಗೆ ನಮ್ಮ ತಮ್ಮನಾದ ಕರೆಪ್ಪ ತಂದೆ ಅಜರ್ುನಪ್ಪ ಗೊಲಪಲ್ಲಿ , ನನ್ನ ಮಗನಾದ ಮೈಲಾರಪ್ಪ ತಂದೆ ಭಾಗಪ್ಪ ಗೊಲಪಲ್ಲಿ ನಮ್ಮ ಅಳಿಯನಾದ ಸಿದ್ದಲಿಂಗಪ್ಪ  ತಂದೆ ಹೊನ್ನಪ್ಪ ಆಡಿನ  ನಮ್ಮ ತಮ್ಮನ ಮಗನಾದ ಮಲ್ಲಪ್ಪ ತಂದೆ ತಿಮ್ಮಯ್ಯ ಎಲ್ಲರೂ  ತಿಪ್ಪನಳ್ಳಿ ಸೀಮಾಂತರದ ನಮ್ಮ ಹೊಲದಲ್ಲಿ  ಕೆಲಸ ಮಾಡುತ್ತಿದ್ದಾಗ ವಿಭೂತಿಹಳ್ಳಿ ಗ್ರಾಮದ 1) ದೇವಪ್ಪ ತಂದೆ ಹೊನ್ನಪ್ಪ ಅನಸೂರ ಮತ್ತು 2) ಮರೆಪ್ಪ ಹೊನ್ನಪ್ಪ ಅನಸೂರ ಇವರು ಕುರಿ ಮೇಯಿಸಲು ಬಂದು ನಮ್ಮ ಹೊಲ ಸವರ್ೆ ನಂಬರ 42/2 ರಲ್ಲಿ ಹೆಸರು ಮತ್ತು ಸಜ್ಜಿ ಬೆಳೆಯಲ್ಲಿ ಕುರಿ ಬಿಟ್ಟಿದ್ದು ಬೆಳೆಯನ್ನು ಕುರಿ ತಿಂದಿರುತ್ತವೆ. ಆಗ ನಾನು ಅವರಿಗೆ ಕುರಿ ಹೊಲದಲ್ಲಿ ಏಕೆ ಬಿಟ್ಟಿರಿ ಗೊತ್ತಾಗುವುದಿಲ್ಲೇನು ಎಂದು ಗದರಿಸಿ ಕಳಿಸಿದ್ದೆನು. ಅದಕ್ಕೆ ಮರೆಪ್ಪ  ಮತ್ತು ದೇವಪ್ಪ ಇಬ್ಬರೂ ಕೂಡಿ ಮಗನೆ ನಿಮಗೆ ತೋರಿಸುತ್ತೇನೆ ನಮಗೆ  ಗದರಿಸುತ್ತೀಯಾ ಎಂದು ಹೇಳಿ ಹೊದರು. ಸಾಯಂಕಾಲ 4:00 ಗಂಟೆಗೆ ಇಬ್ಬರೂ ಕೂಡಿ ತಮ್ಮ ಸಂಭಂದಿಕರಾದ  3) ಶಿವಪ್ಪ ತಂದೆ ಹೈಯಾಳಪ್ಪ ರಜದವರ, 4) ನಿಂಗಪ್ಪ ತಂದೆ ದೇವಪ್ಪ ಅನ್ಸೂರ, 5) ಹೊನ್ನಪ್ಪ ತಂದೆ ಹಣಮಂತ ಅನ್ಸೂರ 6) ದೇವಪ್ಪ ತಂದೆ ನಾಗಪ್ಪ ಅನ್ಸೂರ, 7) ಬೀರಪ್ಪ ತಂದೆ ಪಾಂಡೇಶ ಅನ್ಸೂರ 8) ಬೀರಪ್ಪ ತಂದೆ ಬಸಪ್ಪ ಅನ್ಸೂರ , 9) ದೇವಪ್ಪ ತಂದೆ ಸೋಪಣ್ಣ ಅನ್ಸೂರ 10) ದೇವಪ್ಪ ತಂದೆ ತಮ್ಮಣ್ಣ ರಸ್ತಾಪುರ ಮತ್ತು 11) ಶಿವಪ್ಪ ತಂದೆ ಮಲ್ಲಪ್ಪ ಅನ್ಸೂರ ಇವರೆಲ್ಲರನ್ನು ಕರೆದುಕೊಂಡು ನಮ್ಮ ಹೊಲಕ್ಕೆ ಬಂದು ಏಕಾಏಕಿ ಏ ಸೂಳಿ ಮಕ್ಕಳೆ ಗೊಲ್ಲರ್ಯಾ ನಿಮ್ಮ ತಿಂಡಿ ಬಹಳ ಐತಿ ಕುರಿ ಮೇಯಿದರೆ ಏನಾಯಿತು ಅಂತಾ ಅಂದವರೆ ಎಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈದು ಅವರಲ್ಲಿಯ ಮರೆಪ್ಪನು ನನಗೆ ಕೈಯಿಂದ  ಕಪಾಳಕ್ಕೆ ಹೊಡೆದನು ಇನ್ನುಳಿದವರು ಹೊಡೆಯಲು ಬಂದಾಗ ನಮ್ಮ ತಮ್ಮನಾದ ಕರೆಪ್ಪ ತಂದೆ ಅಜರ್ುನಪ್ಪ , ನನ್ನ ಮಗನಾದ ಮೈಲಾರಪ್ಪ , ಅಳಿಯನಾದ ಸಿದ್ದಲಿಂಗಪ್ಪ  ತಂದೆ ಹೊನ್ನಪ್ಪ ಆಡಿನ  ನಮ್ಮ ತಮ್ಮನ ಮಗನಾದ ಮಲ್ಲಪ್ಪ ತಂದೆ ತಿಮ್ಮಯ್ಯ ಇವರು ಬಿಡಿಸಲು ಬಂದಾಗ ಅವರಿಗೂ ಸಹಿತ ಎಲ್ಲರೂ ಕೂಡಿ ಸೂಳೆ ಮಕ್ಕಳೆ ನಿಮ್ಮನ್ನು ಬಿಡುವುದಿಲ್ಲ ನಿವೇಷ್ಟರವರು ಅಂತಾ ಹೇಳಿ ಎಲ್ಲರಿಗೂ ಕೈಯಿಂದ  ಹೊಡೆದು ಕಾಲಿನಿಂದ ಒದ್ದು  ಒಳಪೆಟ್ಟು ಮಾಡಿರುತ್ತಾರೆ. ಆಗ ಅಲ್ಲೇ ಇದ್ದ ನನ್ನ ಇನ್ನೊಬ್ಬ ಹಣಮಂತ ತಂದೆ ಭಾಗಪ್ಪ  ಮತ್ತು ನಾನು ಅವರಿಗೆ ಕೈ ಮುಗಿದು ಹೊಡೆಬೇಡಿರಿ ಅಂತಾ ಕೆಳಿಕೊಂಡಿದ್ದು ನಮ್ಮೂರ ಸಾಯಬಣ್ಣ ತಂದೆ ತಿಪ್ಪಣ್ಣ ಗೊಲಪಲ್ಲಿ ಈತನೂ ಕೂಡಾ ಹೇಳಿ ಜಗಳ ಬಿಡಿಸಿಕೊಂಡನು.  ಅವರೆಲ್ಲರೂ ಕೂಡಿ ನಮಗೆೆ ಮಕ್ಕಳೇ ಇವತ್ತು ಉಳಿದಿರಿ ಇನ್ನೊಮ್ಮೆ ನಾವು ಹೇಳಿದಂಗ ಕೇಳದಿದ್ದರೆ ನಿಮ್ಮನ್ನು ಉಳಿಸೋದಿಲ್ಲವೆಂದು ಜೀವದ ಬೆದರಿಕೆ ಹಾಕಿ ಹೋದರು. ನಾನು ಮನೆಯಲ್ಲಿ ನನ್ನ ಮಕ್ಕಳಿಗೆ ವಿಚಾರ ಮಾಡಿ ಇಂದು ದಿನಾಂಕ: 17-01-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಲು ಬಂದಿದ್ದೇನೆ.ಆದ್ದರಿಂದ ದಿನಾಂಕ: 09-01-2021 ರಂದು 4:00 ಗಂಟೆಗೆ ನಮ್ಮ ಹೊಲದಲ್ಲಿ ಕುರಿ ಮೇಯಿಸಿದ್ದಲ್ಲದೇ ಎಲ್ಲರೂ ಕೂಡಿ ನಮ್ಮ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ. 13/2021 ಕಲಂ. 143, 147, 447, 323, 504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.                     


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 04/2021 ಕಲಂ: 279, 337, 338, 304(ಎ) ಐಪಿಸಿ & 187 ಐ.ಎಂ.ವ್ಹಿ ಆಕ್ಟ : ದಿನಾಂಕ 11/01/2021 ರಂದು ಎಂ.ಎಲ್ ಸಿ ವಿಚಾರಣೆ ಕುರಿತು ದೊಡ್ಡನಗೌಡ ಹೆಚ್.ಸಿ 145 ರವರು ಕಟ್ಟಿ ಆಸ್ಪತ್ರೆಗೆ ಬೆಟಿನೀಡಿ ರಸ್ತೆ ಅಪಘಾತದಲ್ಲಿ  ಗಾಯಹೊಂದಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ಮಲ್ಲೇಶಿ ತಂದೆ ಸಂಗಪ್ಪ ಜಾದವ ಈತನ ಅಣ್ಣನಾದ ಚಂದ್ರಕಾಂತ ತಂದೆ ಸಂಗಪ್ಪ ಜಾದವ ಸಾ: ಸಣ್ಣಚಾಪಿತಾಂಡಾ ಈತನ ಹೇಳಿಕೆಯನ್ನು ಪಡೆದುಕೊಂಡಿದ್ದು ಪಿಯರ್ಾದಿದಾರರು ತಮ್ಮ ಹೇಳಿಕೆಯಲ್ಲಿ ತಾನು ಮತ್ತು ತನ್ನ ತಮ್ಮ ಮಲ್ಲೇಶಿ ಇಬ್ಬರು ಜೋಗುಂಡಬಾವಿ ಸೀಮಾಂತರದಲ್ಲಿರುವ ಮಹಾಂತೇಶ ತಂದೆ ಪಿಡ್ಡಪ್ಪ ಗೌಡರ್ ಸಾ|| ಜೋಗುಂಡಭಾವಿ ಇವರ ಹೊಲದಲ್ಲಿ ಕಬ್ಬು ಕಠಾವು ಕೆಲಸಕ್ಕೆ ದಿನಾಂಕ:10/01/2021 ರಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ಕೂಲಿ ಕೆಲಸಕ್ಕೆ ಹೋಗಿ ಹೊಲದಲ್ಲಿ ಕಬ್ಬು ಕಠಾವು ಕೆಲಸ ಮಾಡುತ್ತಿದ್ದಾಗ ನಮ್ಮ ತಮ್ಮನಾದ ಮಲ್ಲೇಶ ಜಾದವ ಈತನು ಖಾಸಗಿ ಕೆಲಸದ ನಿಮಿತ್ಯ ನಾರಾಯಣಪೂರಕ್ಕೆ ಹೋಗಿ ಬರುತ್ತೇನೆ ಎಂದು ನಮಗೆ ತಿಳಿಸಿ ನಮ್ಮ ಕೆಂಪು ಬಣ್ಣದ ಸ್ಪ್ಲೇಂಡರ್ ಪ್ರೋ ಮೋಟರ್ ಸೈಕಲ್ ನಂ.ಕೆಎ-33. ಕೆ-0278 ನೇದ್ದನ್ನು ತೆಗೆದುಕೊಂಡು ಮಹಾಂತೇಶ ಗೌಡರ್ ಇವರ ಹೊಲದಿಂದ 12:00 ಪಿಎಮ್ ಸುಮಾರಿಗೆ ನಾರಾಯಣಪೂರಕ್ಕೆ ಹೋದನು. ನಂತರ ದಿನಾಂಕ:10/01/2021 ರಂದು ಮದ್ಯಾಹ್ನ 1:40 ಪಿಎಮ್ ಸುಮಾರಿಗೆ ನಮ್ಮ ಅಳಿಯನಾದ ಕಿರಣ ತಂದೆ ಥಾವರೆಪ್ಪ ರಾಠೋಡ ವ|| 15ವರ್ಷ ಸಾ||ನಾರಾಯಣಪೂರ ಐಬಿ ತಾಂಡಾ ಈತನು ನಾವು ಕೂಲಿ ಕೆಲಸ ಮಾಡುತ್ತಿದ್ದ ಕಬ್ಬಿನ ಹೊಲಕ್ಕೆ ಓಡಿ ಬಂದು ನಮಗೆ ತಿಳಿಸಿದ್ದುಎನೇಂದರೆ ಇಂದು ಮದ್ಯಾಹ್ನ ನಾನು ನಾರಾಯಣಪೂರದಲ್ಲಿದ್ದಾಗ ನಾರಾಯಣಪೂರಕ್ಕೆ ಬಂದಿದ್ದ ನನ್ನ ಮಾವನಾದ ಮಲ್ಲೇಶ ಜಾದವ ಈತನು ಮೋಟರ್ ಸೈಕಲ್ ಮೇಲೆ ಅಲ್ಲಿಂದ ಕಬ್ಬಿನ ಹೊಲಕ್ಕೆ ನನಗೆ ಕರೆದುಕೊಂಡು ಬರುತ್ತಿದ್ದಾಗ ನಾರಾಯಣಪೂರ-ಕೊಡೇಕಲ್ ಮುಖ್ಯ ರಸ್ತೆಯ ಮೇಲೆ 1:30 ಪಿಎಮ್ ಸುಮಾರಿಗೆ ಬರುತ್ತಿದ್ದಾಗ ನಮ್ಮ ಮೋಟರ್ ಹಿಂದುಗಡೆಯಿಂದ ನಾರಾಯಣಪೂರ ಕಡೆಯಿಂದ ಚಲಾಯಿಸಿಕೊಂಡು ಬಂದ ಕಾರ ಚಾಲಕನು ಕಾರನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ನಮ್ಮ ಮೋಟರ್ ಸೈಕಲ್ಗೆ ಡಿಕ್ಕಿಪಡೆಸಿ ಕಾರ್ನ್ನು ಬಿಟ್ಟು ಓಡಿ ಹೋಗಿದ್ದು ನಾನು ಕಾರ್ ಚಾಲಕನಿಗೆ ನೋಡದರೆ ಗುರುತು ಹಿಡಿಯುತ್ತೇನೆ ಅಪಘಾತದಲ್ಲಿ ನಮ್ಮ ಮಾವನಿಗೆ ಪೆಟ್ಟಾಗಿ ಅಲ್ಲಿಯೇ ಬಿದ್ದಿರುತ್ತಾನೆ ನನಗೆ ಎನು ಪೆಟ್ಟು ಆಗಿರುವುದಿಲ್ಲ ಅಂತಾ ತಿಳಿಸಿದಾಗ ಹೊಲದಲ್ಲಿದ್ದ ನಾನು ಮತ್ತು ನನ್ನ ಜೊತೆ ಕೂಲಿಕೆಲಸಕ್ಕೆ ಬಂದಿದ್ದ ತಿರುಪತಿ ತಂದೆ ಕೃಷ್ಣಪ್ಪ ರಾಠೋಡ ಸಾ|| ರಾಜನಕೋಳುರ ಪರ್ಥನಾಯಕ ತಾಂಡಾ, ಹನಮಂತ ತಂದೆ ಖೀರಪ್ಪ ರಾಠೋಡ ಸಾ||ನಾರಾಯಣಪೂರ ಐಬಿ ತಾಂಡಾ, ಚಂದ್ರು ತಂದೆ ಈರಪ್ಪ ಜಾದವ ಸಾ|| ಸಣ್ಣಚಾಪಿ ತಾಂಡಾ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ಇದು ನಾರಾಯಣಪೂರ-ಕೊಡೇಕಲ್ಲ ಮುಖ್ಯ ರಸ್ತೆಯ ಮೇಲಿನ ತಿರ್ಥಪ್ಪ ತಂದೆ ಬಸಪ್ಪ ಬಡಿಗೇರ ಸಾ|| ಜೋಗುಂಡಬಾವಿ ಇವರ ಹೊಲದ ಹತ್ತಿರದ ಜಾಗೆ ಆಗಿದ್ದು ಸ್ಥಳದಲ್ಲಿ ಇದ್ದ ನಮ್ಮ ತಮ್ಮನಿಗೆ ನೋಡಲಾಗಿ ಬೆನ್ನು ಬಾಗಕ್ಕೆ ಭಾರಿ ರಕ್ತಗಾಯ, ಸೊಂಟಕ್ಕೆ ಭಾರಿ ರಕ್ತಗಾಯ, ಎಡಗಾಲಿನ ತೊಡೆಯ ಎಲುಬು ಮುರಿದಿದ್ದು, ಎಡಗಾಲಿನ ಮೀನುಗಂಡಕ್ಕೆ ಭಾರಿ ರಕ್ತಗಾಯ ವಾಗಿದ್ದು ನಮ್ಮ ತಮ್ಮನಿಗೆ ಮಾತನಾಡಿಸಿದಾಗ ಮಾತಾಡಲಿಲ್ಲ. ನಮ್ಮ ತಮ್ಮನ ಮೋಟರ್ ಸೈಕಲಗೆ ಡಿಕ್ಕಿ ಪಡೆಸಿದ ಕಾರ್ನ್ನು ನೋಡಲಾಗಿ ಬಿಳಿಯ ಬಣ್ಣದಾಗಿದ್ದು ಅದರ ನಂ.ಕೆಎ-28, ಡಿ-3761 ಇದ್ದು ಅದರ ಚಾಲಕನು ಅಪಘಾತವಾದ ಸ್ಥಳದಲ್ಲಿಯೇ ಕಾರ್ನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ನಂತರ ನಾನು ಮತ್ತು ಅಪಘಾತದ ಸ್ಥಳಕ್ಕೆ ಬಂದಿದ್ದ ನಮ್ಮ ಚಿಕ್ಕಪ್ಪ ಬಾಲಚಂದ್ರ ತಂದೆ ತುಳಜಪ್ಪ ಜಾದವ ಹಾಗೂ ನಮ್ಮ ತಂದೆ ಸಂಗಪ್ಪ ತಂದೆ ಲಕ್ಕಪ್ಪ ಜಾದವ ಸಾ|| ಸಣ್ಣಚಾಪಿತಾಂಡ ಕೂಡಿ ನಮ್ಮ ತಮ್ಮನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕರೆದುಕೊಂಡು ಬಂದು ಈ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಉಪಚಾರ ಕೊಡಿಸುತ್ತಿದ್ದು ನಮ್ಮ ತಮ್ಮನು ಇನ್ನೂ ಮಾತನಾಡುತ್ತಿಲ್ಲ. ನಮ್ಮ ತಮ್ಮನ ಮೋಟರ್ ಸೈಕಲ್ ನಂ.ಕೆಎ-33. ಕೆ-0278 ನೇದ್ದಕ್ಕೆ ಹಿಂಬದಿಯಿಂದ ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಸಿ ಸ್ಥಳದಲ್ಲಿಯೇ ಕಾರ್ನ್ನು ಬಿಟ್ಟು ಓಡಿ ಹೋದ ಕಾರ್ ನಂ.ಕೆಎ-28, ಡಿ-3761 ನೇದ್ದರ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿಯರ್ಾದಿಯನ್ನು ಪಡೆದುಕೊಂಡು ದಿನಾಂಕ 11/01/2021 ರಂದು 7:30 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ದೊಡ್ಡನಗೌಡ ಹೆಚ್.ಸಿ-145 ರವರು  ಠಾಣಾ ಗುನ್ನೆ ನಂ.04/2021 ಕಲಂ: 279, 337, 338 ಐಪಿಸಿ ಸಂಗಡ 187 ಐಎಮ್ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ಇಂದು ದಿನಾಂಕ 17/01/2021 ರಂದು ಬೆಳಿಗಿನ ಜಾವ 3:00 ಎ.ಎಂ ಕ್ಕೆ ಸಂಚಾರಿ ಪೊಲೀಸ ಠಾಣೆ ಬಾಗಲಕೋಟದಿಂದ ಪ್ರಕರಣದಲ್ಲಿ ಉಪಚಾರ ಹೊಂದಿತ್ತಿದ್ದ ಗಾಯಾಳು ಮಲ್ಲೇಶಿ ತಂದೆ ಸಂಗಪ್ಪ ಜಾದವ ವ:21 ವರ್ಷ ಈತನು ಉಪಚಾರ ಹೊಂದುತ್ತಿದ್ದಾಗ ಇಂದು ದಿನಾಂಕ 17/01/2021 ರಂದು ಬೆಳಗಿನ ಜಾವ 1:30 ಎ.ಎಂ ಸುಮಾರಿಗೆ ಉಪಚಾರ ಫಲಿಸದೆ ಅಪಘಾತದಲ್ಲಿ ಆದ ಗಾಯಗಳಿಂದ ಮೃತಪಟ್ಟಿರುತ್ತಾನೆ ಅಂತಾ ಡೆತ್ ಎಂ.ಎಲ್.ಸಿ ವಸೂಲಾಗಿದ್ದು ಇರುತ್ತದೆ. ಪ್ರಕರಣದಲ್ಲಿ ಗಾಯಾಳು ಮಲ್ಲೇಶಿ ತಂದೆ ಸಂಗಪ್ಪ ಜಾದವ ವ:21 ವರ್ಷ ಈತನು ಮೃತಪಟ್ಟಿದ್ದರಿಂದ ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ 04/2021 ಕಲಂ 279,337,338 ಐಪಿಸಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪತ್ರದ ಮೂಲಕ ವಿನಂತಿಸಿಕೊಂಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 20/2021 ಕಲಂ  87 ಕೆ.ಪಿ. ಕಾಯ್ದೆ : ದಿನಾಂಕ: 17-01-2021 ರಂದು 6:30 ಎ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸಾಹೇಬರು 9 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:17/01/2021 ರಂದು 3 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಸೋಮಯ್ಯ ಪಿಸಿ-235, 3) ಶ್ರೀ ಚಂದ್ರಾಮ ಪಿಸಿ-175, 4) ಶ್ರೀ ದೇವಿಂದ್ರಪ್ಪ ಪಿಸಿ-184, 5) ಶ್ರೀ ಮಾನಯ್ಯ ಪಿಸಿ-372, 6) ಶ್ರೀ ರವಿಕುಮಾರ ಪಿಸಿ-278  ಇವರೆಲ್ಲರಿಗೂ ವಿಷಯ ತಿಳಿಸಿ,  ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು  ಇಬ್ಬರು ಪಂಚರಾದ 1) ಶ್ರೀ ಭೀಮರಾಯ ತಂದೆ ನಿಂಗನಗೌಡ ಪೊಲೀಸ್ ಪಾಟೀಲ್ ವಯಾ:41 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ನಾಗರಾಳ ತಾ:ಸುರಪೂರ 2) ಶ್ರೀ ಶಿವಪ್ಪ ತಂದೆ ನಿಂಗಪ್ಪ ಕಟ್ಟಿಮನಿ ವಯಾ:35 ವರ್ಷ ಜಾ:ಮಾದಿಗ ಉ:ಒಕ್ಕಲುತನ ಸಾ:ನಾಗರಾಳ ತಾ|| ಸುರಪುರ ಇವರನ್ನು 3:30 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3:45 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33.ಜಿ-0238 ನೇದ್ದರಲ್ಲಿ ಠಾಣೆಯಿಂದ ಹೊರಟು 4:30 ಪಿ.ಎಂ ಕ್ಕೆ ನಾಗರಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹತ್ತಿರಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 4:35 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 09 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ತಿಪ್ಪಣ್ಣ ತಂದೆ ಹೊನ್ನಯ್ಯ ಪೊಲೀಸ್ ಪಾಟೀಲ್ ವಯಾ:38 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 2) ನಂದಪ್ಪ ತಂದೆ ರಾಮಲಿಂಗಪ್ಪ ಇಸ್ಲಾಂಪೂರ ವಯಾ:51 ವರ್ಷ ಜಾ: ಮಾದಿಗ ಉ:ಒಕ್ಕಲುತನ ಸಾ:ಆಶ್ರಯ ಕಾಲೋನಿ ಹುಣಸಗಿ ಹಾ||ವ|| ಬಸ್ ಡಿಪೋ ಎದುರುಗಡೆ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 850/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಭೀಮಣ್ಣ ತಂದೆ ನಿಂಗಪ್ಪ ಪೂಜಾರಿ ವಯಾ:52 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಮಲ್ಲಿಕಾಜರ್ುನ ತಂದೆ ಯಮನಪ್ಪ ಗಂಗನಾಳ ವಯಾ:38 ವರ್ಷ ಜಾ:ಕುರುಬರ ಉ:ಕೂಲಿ ಸಾ:ಹಸನಾಪೂರ ಸುರಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 5) ರಮೇಶ ತಂದೆ ಶರಣಪ್ಪ ಹಡಪದ ವಯಾ:33 ವರ್ಷ ಜಾ:ಹಡಪದ ಉ:ಕ್ಷೌರಿಕ ಸಾ:ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 750/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಬಲಭೀಮ ತಂದೆ ಬಸಣ್ಣ ಪೂಜಾರಿ ವಯಾ:32 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1150/- ರೂಗಳು ವಶಪಡಿಸಿಕೊಳ್ಳಲಾಯಿತು. 7) ವೀರಣ್ಣ ತಂದೆ ನಿಂಗನಗೌಡ ಪಾಟೀಲ್ ವಯಾ:38 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 850/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಮಾನಪ್ಪ ತಂದೆ ಮಲ್ಲಣ್ಣ ಹುಲಕಲ್ ವಯಾ:53 ವರ್ಷ ಜಾ:ಕುರುಬರ ಸಾ;ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 9) ಈರಪ್ಪ ತಂದೆ ಪರಮಣ್ಣ ಚನ್ನೂರ ವಯಾ: 50 ವರ್ಷ ಜಾ:ಕುರುಬರ ಸಾ; ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 850/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 15,500-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 22,700/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 4:35 ಪಿ.ಎಮ್ ದಿಂದ 5:35 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 9 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 20/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!