ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/01/2021
ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 16/2021 ಕಲಂ: 279, 304(ಎ) ಐಪಿಸಿ : ಇಂದು ದಿನಾಂಕಃ 14/01/2021 ರಂದು 11-15 ಎ.ಎಮ್ ಕ್ಕೆ ಶ್ರೀ ನಿಂಗಣ್ಣ ತಂದೆ ಶಂಕ್ರಪ್ಪ ಬಾಕ್ಲಿ ಸಾ: ವಜ್ಜಲ್ ತಾಃ ಹುಣಸಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾಧಿ ನೀಡಿದ್ದರ ಸಾರಾಂಶವೆನೆಂದರೆ, ನಾವು ಪ್ರತಿವರ್ಷ ಸುರಪೂರ ತಾಲೂಕಿನ ಹೆಮ್ಮಡಗಿ ಗ್ರಾಮದಲ್ಲಿರುವ ಬಸವಣ್ಣ ದೇವರ ಜಾತ್ರೆಗೆ ದರ್ಶನಕ್ಕಾಗಿ ಹೋಗುತ್ತ ಬಂದಿದ್ದು, ಅದರಂತೆ ಮೊನ್ನೆ ದಿನಾಂಕಃ 12/01/2021 ರಂದು ಜಾತ್ರೆ ಇದ್ದ ಪ್ರಯುಕ್ತ ನಾನು ಮತ್ತು ನನ್ನ ತಮ್ಮನಾದ ಭೀಮಣ್ಣ, ತಮ್ಮನ ಹೆಂಡತಿ ಸತ್ಯಮ್ಮ ಗಂಡ ಭೀಮಣ್ಣ ಬಾಕ್ಲಿ ವಯಃ 30 ವರ್ಷ ಉಃ ಕೂಲಿ, ಮೂವರು ಬೆಳಗಿನ ಜಾವ 4 ಗಂಟೆಗೆ ಎದ್ದು ಜಾತ್ರೆಗೆ ಹೋಗಲು ತಯಾರಾದೇವು. ಅಂದು ನಮ್ಮ ಮನೆಯಲ್ಲಿದ್ದ ಸತ್ಯಮ್ಮ ಇವಳ ಅಣ್ಣನಾದ ಜಕ್ಕಪ್ಪ ತಂದೆ ಮರೆಪ್ಪ ಅಂಬಿಗೇರ ಸಾ: ಚೌಡೇಶ್ವರಿಹಾಳ ಇತನು ಸಹ ನಾನು ಹೆಮ್ಮಡಿಗೆ ಜಾತ್ರೆಗೆ ಬರುತ್ತೇನೆ ಅಂತ ಹೇಳಿ ತಯಾರಾದನು. ಬಳಿಕ ನನ್ನ ತಮ್ಮ ಭೀಮಣ್ಣನು ನಮ್ಮ ಮೋ.ಸೈಕಲ್ ನಂಬರ ಕೆ.ಎ 36 ಇ.ಎಸ್ 8331 ನೇದ್ದರ ಮೇಲೆ ತನ್ನ ಹೆಂಡತಿ ಸತ್ಯಮ್ಮಳನ್ನು ಕುಡಿಸಿಕೊಂಡಿದ್ದು, ಜಕ್ಕಪ್ಪನ ಮೋ.ಸೈಕಲ್ ಮೇಲೆ ನಾನು ಕುಳಿತುಕೊಂಡು ನಾವು ವಜ್ಜಲ್ ಗ್ರಾಮದಿಂದ ಹೊರಟು ದೇವಾಪೂರ ಕ್ರಾಸ್ ಮಾರ್ಗವಾಗಿ ಸುರಪೂರ ಕಡೆಗೆ ಹೋಗುವ ಮುಖ್ಯರಸ್ತೆಯ ಮೇಲೆ ಹೊರಟಿದ್ದಾಗ ನನ್ನ ತಮ್ಮನು ಮುಂದುಗಡೆ ಅತಿವೇಗ ಮತ್ತು ಅಲಕ್ಷತನದಿಂದ ಮೋ.ಸೈಕಲ್ ನಡೆಸಿಕೊಂಡು ಹೊರಟಿದ್ದು, 5-00 ಎ.ಎಮ್ ಸುಮಾರಿಗೆ ಹಾವಿನಾಳ ಕ್ರಾಸ್ ಹತ್ತಿರ ತಿರುವು ರಸ್ತೆಯಲ್ಲಿ ನನ್ನ ತಮ್ಮನ ಮೋ.ಸೈಕಲ್ ವೇಗದಲ್ಲಿ ಡಾಂಬರ ರಸ್ತೆಯ ಪಕ್ಕದ ಕಚ್ಚಾ ರಸ್ತೆಯಲ್ಲಿ ಇಳಿದಿದ್ದರಿಂದ ಜಂಪಿನಲ್ಲಿ ಹಿಂದುಗಡೆ ಕುಳಿತಿದ್ದ ಆತನ ಹೆಂಡತಿ ಸತ್ಯಮ್ಮ ಇವಳು ಮೋ.ಸೈಕಲ್ ಮೇಲಿಂದ ಪುಟಿದು ಬೋರಲಾಗಿ ಡಾಂಬರ ರಸ್ತೆಯ ಮೇಲೆ ಬಿದ್ದಳು. ಆಗ ನಾವು ಸತ್ಯಮ್ಮಳಿಗೆ ಎಬ್ಬಿಸಿ ನೋಡಲಾಗಿ ಆಕೆಯ ಎಡಹಣೆಯ ಮೇಲೆ ತರಚಿದ ರಕ್ತಗಾಯಗಳಾಗಿದ್ದು ಹಾಗು ತಲೆಯಲ್ಲಿ ಭಾರಿಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವ ಆಗಲಾರಂಭಿಸಿತು. ಹಾಗು ಮೂಗಿನ ಮೇಲೆ, ಬಲಗಣ್ಣಿನ ಪಕ್ಕ, ಅಲ್ಲಲ್ಲಿ ಎರಡು ಕೈಗಳಿಗೆ, ಬಲಮೊಣಕಾಲಿಗೆ ರಕ್ತಗಾಯಗಳಾಗಿದ್ದು, ಬಲಗಾಲಿನ ಪಾದಕ್ಕೆ ಭಾರಿಗುಪ್ತಗಾಯಗಳಾಗಿ ಅರೆಪ್ರಜ್ಞಾವಸ್ಥೆಯಲ್ಲಿ ನರಳಾಡುತ್ತಿದ್ದಳು. ಆಗ ನಾವು 108 ಅಂಬ್ಯೂಲೇನ್ಸ್ ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ನನ್ನ ತಮ್ಮನ ಹೆಂಡತಿಗೆ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಪ್ರಥಮೋಪಚಾರ ಮಾಡಿಸಿಕೊಂಡು ಅಲ್ಲಿಂದ ಕಲಬುರಗಿಯಲ್ಲಿರುವ ಜೀವನಜ್ಯೋತಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದೇವು. ಆದರೆ ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ಅಪಘಾತದಲ್ಲಿ ಆಗಿರುವ ಭಾರಿಗಾಯಗಳಿಂದಾಗಿ ನನ್ನ ತಮ್ಮ ಹೆಂಡತಿ ಸತ್ಯಮ್ಮ ಇವಳು ನಿನ್ನೆ ದಿನಾಂಕ: 13/01/2021 ರಂದು ರಾತ್ರಿ 10-40 ಪಿ.ಎಮ್ ಸುಮಾರಿಗೆ ಆಸ್ಪತ್ರೆಯಲ್ಲೆ ಮೃತಪಟ್ಟಿದ್ದರಿಂದ ನಾವು ಆಕೆಯ ಶವವನ್ನು ಅಲ್ಲಿಂದ ತಗೆದುಕೊಂಡು ಬಂದು ಇಂದು ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿರುತ್ತೇವೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಮೋ.ಸೈಕಲ್ ನಡೆಸಿದ ನನ್ನ ತಮ್ಮನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 16/2021 ಕಲಂ. 279, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 17/2021 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 14/01/2021 ರಂದು 7 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ ಪಿಐ ಸಾಹೇಬರು ಇಬ್ಬರು ಆರೋಪಿತರೊಂದಿಗೆ, ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:14/01/2021 ರಂದು 4:30 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಪುರ ಪಟ್ಟಣದ ದರಬಾರ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಇಬ್ಬರು ಕೂಡಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್ಸಿ-105, 3) ಮಂಜುನಾಥ ಪಿಸಿ-271, 4) ಪರಮೇಶ ಸಿಪಿಸಿ-142 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1)ಶ್ರೀ ಮಹ್ಮದ್ ಯೂಸೂಪ್ ತಂದೆ ಮೂಬಾರಕ್ ಹೈಮದ್ ವಚವಚಿ ವ|| 30 ವರ್ಷ ಜಾ|| ಮುಸ್ಲಿಂ ಉ|| ಟೈಲರ್ ಸಾ|| ರಂಗಂಪೇಠ ಸುರಪುರ 2) ಶ್ರೀ ಜಲಾಲ್ ತಂದೆ ಬಡೆಸಾಬ್ ಚೌದರಿ ವ|| 50 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ್ ಸಾ|| ದೇವಾಪೂರ ತಾ|| ಸುರಪುರ ಇವರನ್ನು 4:45 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 5 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 5:15 ಪಿ.ಎಮ್ ಕ್ಕೆ ಸುರಪುರ ಪಟ್ಟಣದ ದರಬಾರ ಮುಂದೆ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ದರಬಾರ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಒಬ್ಬನು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಿದ್ದು, ಇನ್ನೋಬ್ಬನು ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5:20 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಇಬ್ಬರು ಜನರು ಸಿಕ್ಕಿದ್ದು ಅವರ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ಅವರ ಹೆಸರು 1) ದೇವಿಂದ್ರಪ್ಪ ತಂದೆ ಚಂದ್ರಾಮಪ್ಪ ಅಂಬೇಡ್ಕರ್ ವ|| 40 ವರ್ಷ ಜಾ|| ಪ. ಜಾತಿ ಉ|| ಕೂಲಿ ಸಾ|| ಶೆಟ್ಟಗೇರಿ ತಾ|| ಶಹಾಪೂರ ಅಂತಾ ತಿಳಿಸಿದ್ದು 2) ಗುರುಲಿಂಗಯ್ಯ ತಂದೆ ಗುಂಡಯ್ಯ ಹಿರೇಮಠ ವ|| 42 ವರ್ಷ ಜಾ|| ಜಂಗಮ ಉ|| ಒಕ್ಕಲುತನ ಸಾ|| ಅಸಂತಾಪೂರ ತಾ|| ದೇವರಹಿಪ್ಪರಗಿ ಜಿ|| ವಿಜಯಪೂರ ಅಂತಾ ತಿಳಿಸಿದ್ದು, ಸದರಿಯವರ ಅಂಗಶೋಧನೆ ಮಾಡಲಾಗಿ ಅವರ ಹತ್ತಿರ ಒಟ್ಟು ನಗದು ಹಣ 7460=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:20 ಪಿ.ಎಮ್ ದಿಂದ 6:20 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಇಬ್ಬರು ಜನ ಆರೋಪಿತರೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ :- 07/2021 ಕಲಂ.419,465,420,468 ಐಪಿಸಿ. : ಇಂದು ದಿನಾಂಕ.14/01/2021 ರಂದು 8-30 ಪಿಎಂಕ್ಕೆ ಶ್ರೀ ಯರನಾಥರೆಡ್ಡಿ ತಂದೆ ಭೀಮರೆಡ್ಡಿ ವಃ65 ಜಾಃ ಲಿಂಗಾಯತರೆಡ್ಡಿ ಉಃ ನಿವೃತ್ತ ಲೆಕ್ಕಾದಿಕಾರಿಗಳು ಸಾಃ ಮ.ನಂ.5-5-99/30 ವಿವೇಕಾನಂದ ನಗರ ಹೊಸ ಬಸ್ ನಿಲ್ದಾಣ ಎದುರುಗಡೆ ಯಾದಗಿರಿ. ರವರು ಒಂದು ಅಜರ್ಿಯನ್ನು ತಂದು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಈ ಮೂಲಕ ದೂರು ಅಜರ್ಿ ನೀಡುವುದೆನೆಂದರೆ, ನಾನು ಈ ಹಿಂದೆ ದಿನಾಂಕ.29/01/1990 ರಂದು ಯಾದಗಿರಿ ನಗರದ ಶ್ರೀ ಏಜಾಜ್ ಅಹ್ಮದ ತಂ. ನಜ್ಮೂಲ ಗಣಿ ರವರಿಗೆ ಸೇರಿದ ಯಾದಗಿರಿ (ಬಿ) ಗ್ರಾಮದ ಸವರ್ೆ ನಂ.248 ರಲ್ಲಿ 30*40 ಸುತ್ತಳತೆಯ ಪ್ಲಾಟ ನಂ.33 ನೇದ್ದನ್ನು 6000/-ರೂಗಳಿಗೆ ಖರಿದಿ ಮಾಡಿರುತ್ತೇನೆ. ನನ್ನ ಪ್ಲಾಟ ನಂ. 33 ರ ಖರೀದಿ ಪತ್ರ ಸಂ.1026/89-90 ದಿನಾಂಕ.29-01-1990 ಇದ್ದು ನಗರಸಭೆಯಲ್ಲಿ ದಿನಾಂಕ.08/09/2011 ರಂದು ಮೊಟೇಷನ್ ಮಾಡಿಸಿಕೊಂಡಿರುತ್ತೇನೆ. ಸದರಿ ಪ್ಲಾಟನ ಮೂಲ ದಾಖಲಾತಿಗಳು ನನ್ನ ಹತ್ತಿರ ಇರುತ್ತವೆ. ನಾನು ದಿನಾಂಕ.12-01-2021 ರಂದು ನನ್ನ ಪ್ಲಾಟ ನಂ.33 ನೇದ್ದನ್ನು ನೋಡಿಕೊಂಡು ಬರಲು ಹೋದಾಗ ನನ್ನ ಪ್ಲಾಟಿನಲ್ಲಿ ಯಾರೋ ಕಂಪೌಂಡವಾಲ ಕಟ್ಟಿದ್ದನ್ನು ನೋಡಿ ಗಾಬರಿಯಾಗಿ ನಾನು ಕೂಡಲೇ ಯಾದಗಿರಿಯ ಹಿರಿಯ ಉಪ ನೊಂದಣಾದಿಕಾರಿಗಳ ಕಾಯರ್ಾಲಯಕ್ಕೆ ಮತ್ತು ನಗರಸಬೆ ಕಾಯರ್ಾಲಯ ಯಾದಗಿರಿ ಹೋಗಿ ದಾಖಲಾತಿಗಳನ್ನು ತೆಗೆಯಿಸಿ ಪರೀಸಿಲಿಸಲು ಶರಣಪ್ಪ ತಂ. ಗುರುಬಸ್ಸಪ್ಪ ಎಂಬುವವರು ಮೋಸ ಮಾಡುವ ಉದ್ದೇಶದಿಂದ ಶ್ರೀ ಏಜಾಜ್ ಅಹ್ಮದ ತಂ. ನಜ್ಮೂಲ ಗಣಿ ರವರಿಂದ ಖರೀದಿ ಮಾಡಿದಂತೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ತನ್ನ ಹೆಸರಿಗೆ ಮಾಡಿಕೊಂಡು ಅದಕ್ಕೆ ಸಾಕ್ಷಿದಾರರು ಅಂತಾ ಹಣಮಂತ ತಂದೆ ಮಾರುತಿ ಸೂಕ್ತಿ ಮತ್ತು ಮಾರುತಿ ಬಿಸೆ ಅಂತಾ ಸಹಿ ಮಾಡಿದ್ದು, ನನ್ನ ಮಾಲಿಕತ್ವದ ಮೇಲ್ಕಂಡ ಪ್ಲಾಟನ್ನು ನೊಂದಣಿ ಮಾಡಿಸಿಕೊಂಡಿದ್ದು ನಂತರ ನನ್ನ ಮಾಲಿಕತ್ವದ ಪ್ಲಾಟನ್ನು ತಾನೇ ಮಾಲಿಕನೆಂದು ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಯಾಸ್ಮೀನ ಗಂ. ಮಹಮದ ಮಹೆಬೂಬ ಸಾಃ ಶಿವನಗರ ಯಾದಗಿರಿ ರವರಿಗೆ ದಿನಾಂಕ.17/07/2019 ರಂದು ಹಿರಿಯ ಉಪನೊಂದಣಿಗಳ ಕಾಯರ್ಾಲಯ ಯಾದಗಿರಿದಲ್ಲಿ ಖೊಟ್ಟಿ ನೊಂದಣಿ ಪತ್ರ ಸಂ. 2164/19-20 ಪ್ರಕಾರ ನೊಂದಣಿ ಮಾಡಿಸಿಕೊಟ್ಟಿದ್ದು ಇದಕ್ಕೆ ಸಾಕ್ಷಿದಾರರು ಅಂತಾ ಶೇಖಮಹಿಬೂಬ ತಂ. ಶೇಖಸಾಬ ಸಾಃ ಯಾದಗಿರಿ, ರಾಜೇಶ ತಂ. ಹಣಮಂತ ಸಾಃಶಹಾಪೂರ, ಅಶೋಕ ತಂ. ಮುಕ್ಕಣ್ಣ ಮುಕ್ಕೆ ರವರು ಸಹಿ ಮಾಡಿದ್ದು ನಗರ ಸಬೇ ಕಾಯರ್ಾಲಯದಲ್ಲಿ ಮೊಟೆಷನ್ ಮಾಡಿಸಿಕೊಂಡಿರುತ್ತಾಳೆ. ತಿಳಿದು ಬಂದಿತು ನಂತರ ನಾನು ನನ್ನ ಪ್ಲಾಟ ನಂ. 33 ಕ್ಕೆ ಸಂಭಂದಿಸಿದಂತೆ ಮೋಸ ಮಾಡಿದ ಬಗ್ಗೆ ಝರಾಕ್ಸ ಪ್ರತಿಗಳನ್ನು ಸಂಭಂದ ಪಟ್ಟ ಇಲಾಖೆಗಳಿಂದ ಪಡೆದುಕೊಂಡು ನನ್ನ ಮೂಲ ದಾಖಲಾತಿಗಳಿಗೆ ಹೊಲಿಸಿ ನೋಡಲಾಗಿ ಒಂದಕ್ಕೊಂದು ಸಂಭಂದ ಇರದ ಕಾರಣ ಮೇಲ್ಕಂಡ ಆರೋಪಿತರು ಮೋಸ, ವಂಚನೆ ಮಾಡುವ ಉದ್ದೇಶದಿಂದ ಆರೋಪಿತರು ಕೂಡಿಕೊಂಡು ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ನನ್ನ ಹೆಸರಿನಲ್ಲಿದ್ದ ಪ್ಲಾಟ ನಂ. 33 ನೇದ್ದನ್ನು ತಮ್ಮ ಹೆಸರಿಗೆ ನೋದಣಿ ಮಾಡಿಕೊಂಡು ಮೋಸ ಮಾಡಿರುತ್ತಾರೆ. ಕಾರಣ ಮೇಲೆ ತೋರಿಸಿದ ಆರೋಪಿತರಾದ 1. ಶರಣಪ್ಪ ತಂ. ಗುರುಬಸ್ಸಪ್ಪ ಸಾಃಹಂಚಿನಾಳ ತಾಃ ಶಹಾಪೂರ 2.ಹಣಮಂತ ತಂ.ಮಾರುತಿ ಸೂಕ್ತಿ ಸಾಃ ಯಾದಗಿರಿ 3. ಮಾರುತಿ ಬಿಸೆ ಸಾಃ ಯಾದಗಿರಿ 4. ಯಾಸ್ಮೀನ ಗಂ. ಮಹಮ್ಮದ ಮಹೆಬೂಬ ಸಾಃಯಾದಗಿರಿ 5. ಶೇಖ ಮಹಿಬೂಬ ತಂ. ಶೇಖಸಾಬ ಸಾಃ ಯಾದಗಿರಿ 6.ರಾಜೇಶ ತಂ. ಹಣಮಂತ ಸಾಃ ಶಹಾಪೂರ 7. ಅಶೋಕ ಕುಮಾರ ತಂ. ಮುಕ್ಕಣ್ಣ ಮುಕ್ಕೆ ಸಾಃ ಯಾದಗಿರಿ ಎಲ್ಲರೂ ಕೋಡಿಕೊಂಡು ಮೋಸ ಮಾಡುವ ಉದ್ದೇಶದಿಂದ ನನ್ನ ಹೆಸರಿನಲ್ಲಿರುವ ಪ್ಲಾಟ ನಂ.33 ನೇದ್ದನ್ನು ತಮ್ಮದೆಂಬಂತೆ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ನೊಂದಣಿ ಮಾಡಿಸಿಕೊಂಡು ಮೋಸ ವಂಚನೆ ಮಾಡಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.07/2021 ಕಲಂ.419,420,465,468,ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ :- 04/2021 ಕಲಂ 279 ಐಪಿಸಿ : ಇಂದು ದಿನಾಂಕ 14/01/2021 ರಂದು 8-15 ಪಿ.ಎಂ. ದ ಸುಮಾರಿಗೆ ಪಿಯರ್ಾದಿ ಶ್ರೀ ಭೀಮರೆಡ್ಡಿ ತಂದೆ ನಾಗರೆಡ್ಡಿ ಶೇಕರೆಡ್ಡಿ ವಯ;35 ವರ್ಷ, ಜಾ;ಲಿಂಗಾಯತ್ರೆಡ್ಡಿ, ಉ;ಒಕ್ಕುಲುತನ, ಸಾ;ಗುರುಸುಣಗಿ, ತಾ;ವಡಗೇರಾ, ಜಿ;ಯಾದಗಿರಿ ರವರು ಠಾಣೆಗೆ ಖುದ್ದಾಗಿ ಹಾಜರಾಗಿ ತಮ್ಮದೊಂದು ಹೇಳಿಕೆ ಫಿಯರ್ಾಧಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಒಕ್ಕುಲುತನ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ಹೀಗಿದ್ದು ಇಂದು ದಿನಾಂಕ 14/01/2021 ರಂದು ಅಮಾವಾಸೆ ಇದ್ದ ಕಾರಣ ನಾನು ಮತ್ತು ನಮ್ಮೂರಿನ ಮಲ್ಲಿಕಾಜರ್ುನ ತಂದೆ ಸೋಮಯ್ಯ ಗುಡಿಮಠ, ಅಶೋಕ ತಂದೆ ಚಿದಾನಂದ ಪತ್ತಾರ ಸೇರಿಕೊಂಡು ನಮ್ಮ ನಮ್ಮ ಮೋಟಾರು ಸೈಕಲ್ ಮೇಲೆ ಮೈಲಾಪುರ ಮಲ್ಲಯ್ಯನ ದರ್ಶನಕ್ಕೆ ಹೋಗಿದ್ದೆವು. ಮರಳಿ ಬರುವಾಗ ಯಾದಗಿರಿ ನಗರ ಗಂಜ್ ಏರಿಯಾದಲ್ಲಿ ಬರುವ ವರ್ಕನಳ್ಳಿ ಕ್ರಾಸ್ ಹತ್ತಿರ ನಾವುಗಳು ಚಹಾ ಕುಡಿದರಾಯಿತು ಅಂತಾ ನಮ್ಮ ನಮ್ಮ ಮೋಟಾರು ಸೈಕಲ್ಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದೆವು. ನಾವು ಚಹಾ ಕುಡಿಯುತ್ತಿರುವಾಗ ನಾವುಗಳು ನೋಡು ನೋಡುತ್ತಿದ್ದಂತೆ ಒಬ್ಬ ಲಾರಿ ಚಾಲಕನು ತನ್ನ ಲಾರಿ ನಂಬರ ಕೆಎ-32, ಸಿ-5970 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಹಿಂದಕ್ಕೆ (ರಿವರ್ಸ) ತೆಗೆದುಕೊಳ್ಳುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ನಿಲ್ಲಿಸಿದ್ದ ನನ್ನ ಬಜಾಜ್ ಪಲ್ಸರ್ ಮೋಟಾರು ಸೈಕಲ್ ನಂಬರ ಕೆಎ-33, ಇಎ-5575 ನೇದ್ದಕ್ಕೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ನನ್ನ ಮೋಟಾರು ಸೈಕಲ್ ಜಖಂಗೊಂಡಿದ್ದು ಇರುತ್ತದೆ. ಈ ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಅಪಘಾತಪಡಿಸಿದ ಲಾರಿ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಲಾಹು ತಂದೆ ಉತ್ತಮ ಪವಾರ್ ಸಾ;ಕಲಬುರಗಿ ಅಂತಾ ತಿಳಿಸಿರುತ್ತಾನೆ. ಈ ಘಟನೆಯು ಇಂದು ದಿನಾಂಕ 14/01/2021 ರಂದು ಸಾಯಂಕಾಲ 5 ಪಿ.ಎಂ.ಕ್ಕೆ ಯಾದಗಿರಿ ಗಂಜ್ ವೃತ್ತದ ಹತ್ತಿರ ವರ್ಕನಳ್ಳಿ ಕಡೆಗೆ ಹೋಗುವ ರಸ್ತೆ ಮೇಲೆ ಜರುಗಿದ್ದು ಇರುತ್ತದೆ ಅಪಘಾತ ಪಡಿಸಿದ ಲಾರಿ ನಂಬರ ಕೆಎ-32, ಸಿ-5970 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ನೀಡಿದ ಫಿಯರ್ಾದಿ ಇರುತ್ತದೆ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-04/2021 ಕಲಂ-279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.