ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/01/2021

By blogger on ಬುಧವಾರ, ಜನವರಿ 13, 2021                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/01/2021 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 03/2021 ಕಲಂ 279, 337, 338 ಐಪಿಸಿ : ದಿನಾಂಕ 13/01/2021 ರಂದು ಬೆಳಿಗ್ಗೆ 7-30 ಗಂಟೆಗೆ ಫಿರ್ಯಾದಿದಾರನು ತನ್ನ ಟ್ಯಾಂಕರ ಲಾರಿ ನಂ ಎಮ್.ಎಚ್-04-ಕೆ.ಎಫ್-6584 ನೆದ್ದನ್ನು ಓಡಿಸಿಕೊಂಡು ಬಾಂಬೆಗೆ ಕಡೆಗೆ ಹೋಗುತ್ತಿದ್ದೆನು, ಮಾರ್ಗಮಧ್ಯ ಯಾದಗಿರಿ-ನಾಲವಾರ ರೋಡಿನ ಮೇಲೆ ಯರಗೋಳ ಗ್ರಾಮದ ಬೈಪಾಸ್ ರೋಡಿನ ಮೇಲೆ ಹೋಗುವಾಗ ನನ್ನ ಎದುರುಗಡೆ ನಾಲವಾರ ಕಡೆಯಿಂದ ಒಂದು ಟಿಪ್ಪರ ಲಾರಿ ನಂ ಕೆ.ಎ-33-ಬಿ-0987 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯತ್ರಣ ಕಳೆದುಕೊಂಡು ತನ್ನ ಸೈಡನ್ನು ಬಿಟ್ಟು ನಾನು ಓಡಿಸಿಕೊಂಡು ಹೋಗುತ್ತಿದ್ದ ಸೈಡಿಗೆ ಬಂದು ನನ್ನ ಟ್ಯಾಂಕರಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ, ಈ ಅಪಘಾತದಲ್ಲಿ ಟಿಪ್ಪರ ಚಾಲಕ ಮತ್ತು ಕ್ಲೀನರಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆಗಿರುತ್ತವೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 04/2020 323, 324, 354, 504, 506 ಸಂ: 34 ಐಪಿಸಿ : ಇಂದು ದಿನಾಂಕ: 13/01/2021 ರಂದು 2-10 ಪಿಎಮ್ಕ್ಕೆ ಅಜರ್ಿದಾರನಾದ ಪರಶುರಾಮ ತಂದೆ ಹಣಮಂತ ಪೂಜಾರಿ ಸಾ|| ಮಹಲರೋಜಾ ಇವರು ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿಸಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾನು 2020 ನೇ ಸಾಲಿನಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆ ಆಯ್ಕೆಯಾಗಿರುತ್ತೇನೆ.  ನಾನು ಚುನಾವಣೆಯಲ್ಲಿ ಗೆದ್ದಿದ್ದರಿಂದ ನಮ್ಮ ಊರಲ್ಲಿ ಅಭಿನಂದನಾ ಸಮಾರಂಭವನ್ನು  ದಿನಾಂಕ: 11/01/2021 ರಂದು ಇಟ್ಟುಕೊಂಡಿದ್ದು, ಕಾರ್ಯಕ್ರಮ ಮುಗಿದ ನಂತರ ಊಟದ ವ್ಯವಸ್ಥೆ ಮಾಡಿದ್ದು, ಊಟದ ಪ್ಲೇಟ ತರಲು ನನ್ನ ತಮ್ಮನಾದ ಕೃಷ್ಣಾ ತಂದೆ ಹಣಮಂತ್ರಾಯ ಪೂಜಾರಿ ಇತನು ಸಗರ ಗ್ರಾಮಕ್ಕೆ ಹೋಗುವಾಗ ನಮ್ಮೂರ ಅಭಿಮಾನ ತಂದೆ ಯಲ್ಲಪ್ಪ ಪೂಜಾರಿ ಮತ್ತು ದೇವಪ್ಪ ತಂದೆ ಹಣಮಂತ ನಾಟೇಕಾರ ಇವರು ಅವನಿಗೆ ' ಏನಲೇ ನಿಮ್ಮ ಅಣ್ಣ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಾನ ಅಂತಾ ನಿಮಗೆ ಸೊಕ್ಕು ಬಂದ್ಯಾದ ಸೂಳೆ ಮಕ್ಕಳೇ ' ಅಂತಾ ಅವಾಚ್ಯವಾಗಿ ಬೈದಿದ್ದು,  ನನ್ನ ತಮ್ಮನು ಈ ವಿಷಯವನ್ನು ನನ್ನ ಮುಂದೆ ಹೇಳಿದ್ದು, ಆಗ ನಾನು ಇರಲಿ ಬಿಡು ಅಂತಾ ಸುಮ್ಮನಾದೇವು.  ಹೀಗಿದ್ದು ದಿನಾಂಕ: 12/01/2021 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಕಸ್ತೂರಿಬಾಯಿ ಕೂಡಿ ಮನೆಯಲ್ಲಿ ಊಟ ಮಾಡಿ ಮನೆಯಲ್ಲಿದ್ದಾಗ ನಮ್ಮೂರ 1) ಅಭಿಮಾನ ತಂದೆ ಯಲ್ಲಪ್ಪ ಪೂಜಾರಿ ಇತನು ಕೈಯಲ್ಲಿ ಬಡಿಗೆ ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದು ' ಲೇ ಪರಶ್ಯಾ ಸೂಳೇ ಮಗನೇ ಗ್ರಾಮ ಪಂಚಾಯತಿ ಚುನಾವನೆಯಲ್ಲಿ ಗೆದ್ದಿದೀ ಅಂತಾ ನಿನಗೆ ಸೊಕ್ಕು ಬಂದಾದ ಮಗನೇ ' ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ, ನಾನು ಮನೆಯಿಂದ ಹೊರಗೆ ಬಂದು ಯಾಕೆ ಹೀಗೆ ಬೈಯುತ್ತಿ ಅಂತಾ ಅಂದಿದ್ದು, ನಮ್ಮ ನಡುವೆ ಬಾಯಿಮಾತಿನ ತಕರಾರು ಆಗತ್ತಿರುವಾಗ ಅದೇ ಸಮಯಕ್ಕೆ  2) ಯಲ್ಲಪ್ಪ ತಂದೆ ಗೂಳಪ್ಪ ಪೂಜಾರಿ 3) ಭೀಮವ್ವ ಗಂಡ ಯಲ್ಲಪ್ಪ ಪೂಜಾರಿ ಸಾ|| ಎಲ್ಲರೂ ಮಹಲರೋಜಾ ಗ್ರಾಮ ಕೂಡಾ ಬಂದು ಎಲ್ಲರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಅವರಲ್ಲಿ ಆಭಿಮಾನ ಈತನು ಕೈಯಲ್ಲಿರುವ ಬಡಿಗೆಯಿಂದ ನನಗೆ ಹೊಡೆಯಲು ಬಂದಿದ್ದು ನಾನು ತಪ್ಪಸಿಕೊಂಡೆನು.  ಜಗಳದ ಸಪ್ಪಳ ಕೇಳಿ ನನ್ನ ತಮ್ಮ ಕೃಷ್ಣಾ ಮತ್ತು ನನ್ನ ತಾಯಿ ಶರಣಮ್ಮ ಹಾಗೂ ಶಾಂತಮ್ಮ ಗಂಡ ಪ್ರಕಾಶ ಪೂಜಾರಿ ಇವರು ನಡುವೆ ಬಂದು ಜಗಳ ಬಿಡಿಸಲು ಬಂದಾಗ ಅಭಿಮಾನ ತಂದೆ ಯಲ್ಲಪ್ಪ ಪೂಜಾರಿ ಈತನು ಶಾಂತಮ್ಮ ಇವಳಿಗೆ ಕೈ ಹಿಡಿದು ಎಳೆದಾಡಿ ಅಲ್ಲೇ ಬಿದ್ದ ಒಂದು ಕಲ್ಲು ತೆಗೆದುಕೊಂಡು ಶಾಂತಮ್ಮ ಇವಳ ಹಣೆಗೆ ಹೊಡೆದು ರಕ್ತಗಾಯ ಪಡಿಸಿದನು. ಶರಣಮ್ಮ ಇವಳಿಗೆ ಕೈಯಿಂದ ಮೈಗೆ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ. ಆಗ ನಮ್ಮ ಓಣಿಯ ಪರಶುರಾಮ ತಂದೆ ಯಲ್ಲಪ್ಪ, ಪರಶುರಾಮ ತಂದೆ ಭೀಮಪ್ಪ ಇವರು ಬಂದು ಜಗಳ ನೋಡಿ ಬಿಡಿಸಿಕೊಂಡರು.  ಇಲ್ಲದಿದ್ದರೆ ಅವರು ನಮಗೆ ಇನ್ನೂ ಹೊಡೆಯುತ್ತಿದ್ದರು. ಆರೋಪಿತರೆಲ್ಲರೂ ಹೊಡೆದು ಹೋಗುವಾಗ ' ಮಕ್ಕಳೇ ಇವತ್ತು ಉಳಿದುಕೊಂಡಿರಿ ಇನ್ನೊಮ್ಮೆ ಸಿಕ್ಕಾಗ ನಿಮಗೆ ಜೀವದಿಂದ ಹೊಡೆದು ಖಲಾಸ ಮಾಡುತ್ತೇವೆ ' ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ.  ನಮ್ಮ ತಾಯಿ ಶರಣಮ್ಮ ಇವರಿಗೆ ಹೆಚ್ಚಿಗೆ ಗಾಯವಾಗಿರುವುದಿಲ್ಲಾ ದವಾಖಾನೆಗೆ ತೋರಿಸಿರುವುದಿಲ್ಲಾ.  ಶಾಂತಮ್ಮ ಇವರಿಗೆ ಹಣೆಗೆ ರಕ್ತಗಾಯವಾಗಿದ್ದರಿಂದ ನಾನು ಮತ್ತು ನನ್ನ ತಮ್ಮ ಕೃಷ್ಣಾ ಕೂಡಿ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗ ಸೇರಿಕೆ ಮಾಡಿದ್ದು, ಅಲ್ಲಿಯ ವೈದ್ಯಾಧಿಕಾರಿಗಳ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ನನ್ನ ತಮ್ಮ ಕೃಷ್ಣಾ ಈತನು ಕರೆದುಕೊಂಡು ಹೋಗಿರುತ್ತಾನೆ.


ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 03/2021 ಕಲಂ: 365,396, 302 ಐಪಿಸಿ : ದಿನಾಂಕ:13/01/2021 ರಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ಫಿರ್ಯಾದಿ ಮಗನಾದ ನರೇಂದ್ರ ತಂದೆ ಜಗಧೀಶ ಸಿರವಿ ವ:22 ವರ್ಷ ಈತನು ಹುಣಸಗಿ ಪಟ್ಟಣದ ರಾಚಯ್ಯ ಸ್ವಾಮಿ ಓಣಿಯಲ್ಲಿರುವ ತಮ್ಮ ಮನೆಯ ಮೊದಲನೇಯ ಅಂತಸ್ತಿನಲ್ಲಿ ಕೊಣೆಯಲ್ಲಿ ಇದ್ದಾಗ ಯಾರೋ ಅಪರಿಚಿತ  ದುಷ್ಕಮರ್ಿಗಳು  ಅಲ್ಲಿಗೆ ಹೋಗಿ ನರೇಂದ್ರನಿಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆಮಾಡಿ, ನಂತರ ಮನೆಯಲ್ಲಿದ್ದ 1]ಅಂದಾಜು ಒಂದು ಕೆ.ಜಿ. ಬಂಗಾರ ಅ.ಕಿ 50,00,000=00 2]ಅಂದಾಜು 2 ಕೆ.ಜಿ ಬೆಳ್ಳಿ ಆಭರಣಗಳು ಅ.ಕಿ.1,20,000=00 ಕಿಮ್ಮತ್ತಿನವುಗಳನ್ನು ಕಳ್ಳತನ ಮಾಡಿ ಕೊಂಡು, ಫಿರ್ಯಾದಿ ಅಂಗಡಿಯಲ್ಲಿ ಕೆಲಸಮಾಡುವ ಕೀಶೋರ ಎಂಬುವವನಿಗೆ ಅಪರಿಸಿಕೊಂಡು ಹೊದ  ಬಗ್ಗೆ ಇತ್ಯಾದಿ ಫಿರ್ಯಾದಿ ದೂರಿನ ಸಾರಂಶದ ಮೇಲಿಂದ ಮೇಲ್ಕಂಡ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ


ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 09/2021 ಕಲಂ:279,337,338 ಐಪಿಸಿ: ಇಂದು ದಿನಾಂಕ:13/01/2021 ರಂದು 8-15 ಪಿಎಮ್ ಕ್ಕೆ ಶ್ರೀ ಕಾಸಿಂಸಾಬ ತಂದೆ ಬಾಷಾಸಾಬ ಶಹಾಪೂರವಾಲೆ, ವ:60, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಟಿ. ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನನಗೆ 4 ಜನ ಮಕ್ಕಳಿರುತ್ತಾರೆ. ಸದರಿ ನನ್ನ ಮಕ್ಕಳು ಮತ್ತು ನನ್ನ ಹೆಂಡತಿಯೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ: 10/01/2021 ರಂದು ಸಂಜೆ 3 ಗಂಟೆ ಸುಮಾರಿಗೆ ನನ್ನ ಮಗ ಶಬ್ಬೀರ ಈತನು ನಮ್ಮ ಮನಗೆ ಬಂದಿದ್ದ ತನ್ನ ಸಣ್ಣಮ್ಮನ ಮಗಳಾದ ಯಾಸ್ಮಿನ ಬೇಗಂ ತಂದೆ ಗನಿಸಾಬ ಸಾ:ಟೋಕಾಪೂರ ಇವಳಿಗೆ ಬಟ್ಟೆ ಕೊಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಮೋಟರ್ ಸೈಕಲ್ ಮೇಲೆ ಯಾದಗಿರಿಗೆ ಕರೆದುಕೊಂಡು ಹೋದನು. ನಾನು ಮನೆಯಲ್ಲಿದ್ದೆನು. ಸಾಯಂಕಾಲ 4-15 ಗಂಟೆ ಸುಮಾರಿಗೆ ನನ್ನ ಹೆಂಡತಿ ತಂಗಿ ಮಗಳಾದ ಯಾಸ್ಮಿನ ಇವಳು ನಮಗೆ ಫೋನ ಮಾಡಿ ತಿಳಿಸಿದ್ದೇನಂದರೆ ನಾನು ಮತ್ತು ಅಣ್ಣ ಇಬ್ಬರೂ ಮೋಟರ್ ಸೈಕಲ್ ಮೇಲೆ ಯಾದಗಿರಿಗೆ ಹೋಗುತ್ತಿದ್ದಾಗ ಹತ್ತಿಗೂಡುರು-ಖಾನಾಪೂರ ಮೇನ ರೋಡ ಖಾನಾಪೂರ ಸಮೀಪ 4 ಪಿಎಮ್ ಸುಮಾರಿಗೆ ಶಬ್ಬೀರ ಅಣ್ಣನೂ ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮೋಟರ್ ಸೈಕಲ್ ಸ್ಕಿಡ್ಡ ಮಾಡಿ ಬಿಳಿಸಿದ್ದರಿಂದ ನಾವು ಇಬ್ಬರೂ ಗಾಡಿ ಸಮೇತ ಕೆಳಗೆ ಬಿದ್ದಿದ್ದು, ನಮಗಿಬ್ಬರಿಗೆ ಭಾರಿ ಮತ್ತು ಸಾದಾಗಾಯಗಳಾಗಿರುತ್ತವೆ ಎಂದು ಗಾಬರಿಯಾಗಿ ನನಗೆ ಫೋನ ಮಾಡಿ ಹೇಳಿದ್ದರಿಂದ ತಕ್ಷಣ ನಾನು ಮತ್ತು ಇತರರು ಸೇರಿ ನಮ್ಮೂರಿಂದ ಖಾನಾಪೂರ ಹತ್ತಿರ ಅಪಘಾತ ಸ್ಥಳಕ್ಕೆ ಬಂದು ನೋಡಿದಾಗ ಅಪಘಾತದಲ್ಲಿ ನನ್ನ ಮಗ ಶಬ್ಬೀರನಿಗೆ ತೆಲೆಗೆ ಭಾರಿ ಒಳಪೆಟ್ಟಾಗಿ ಕಿವಿ ಮತ್ತು ಮೂಗಿನಿಂದ ರಕ್ತಸ್ರಾವವಾಗಿತ್ತು. ಯಾಸ್ಮಿನ ಬೇಗಂ ಇವಳಿಗೆ ಎಡ ಕಣ್ಣಿಗೆ, ಎಡಗೈಗೆ ಮತ್ತು ಎಡ ಕಾಲಿಗೆ ತರಚಿದ ಸಣ್ಣಪುಟ್ಟ ಗಾಯಗಳಾಗಿದ್ದವು. ಮೋಟರ್ ಸೈಕಲ್ ನೋಡಲಾಗಿ ನಂ. ಕೆಎ 33 ಯು 2094 ಇತ್ತು. ನನ್ನ ಮಗ ಶಬ್ಬೀರನು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. ಯಾಸ್ಮೀನ ಬೇಗಂ ಇವಳಿಗೆ ಅಪಘಾತದ ಬಗ್ಗೆ ಕೇಳಿದಾಗ ಮೇಲಿನಂತೆ ಹೇಳಿದಳು. ಆಗ ನಾವು ಇಬ್ಬರಿಗೆ ಉಪಚಾರ ಕುರಿತು ಕಲಬುರಗಿ ಯುನೈಟೆಡ್ ಖಾಸಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದೇವು. ಇಲ್ಲಿನ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದ್ದು, ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ಕೇಸು ಕೊಡುವುದಿದ್ದರೆ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಮಗ ಶಬ್ಬೀರ ಈತನು ಮೋಟರ್ ಸೈಕಲ್ ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಸ್ಕಿಡ್ ಮಾಡಿಕೊಂಡು ಬಿದ್ದು, ಭಾರಿ ಗಾಯಗೊಂಡಿದ್ದಲ್ಲದೆ ಯಾಸ್ಮಿನ ಬೇಗಂ ಇವಳಿಗೆ ಕೂಡಾ ಸಣ್ಣಪುಟ್ಟ ಗಾಯಗಳಾಗುವಂತೆ ಮಾಡಿರುತ್ತಾನೆ. ಆದ್ದರಿಂದ ಸದರಿ ಶಬ್ಬೀರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 09/2021 ಕಲಂ:279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!