ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/01/2021

By blogger on ಬುಧವಾರ, ಜನವರಿ 13, 2021

 


                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/01/2021 

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 02/2021  ಕಲಂ 279,  337,  304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 12/01/2021 ರಂದು 2-30 ಎ.ಎಂ.ದ ಸುಮಾರಿಗೆ  ಯಾದಗಿರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾದಗಿರಿ-ಹೈದ್ರಾಬಾದ್ ಮುಖ್ಯ  ರಸ್ತೆಯ ಮೇಲೆ ಬರುವ ಇಂಪಿರಿಯಲ್ ಗಾರ್ಡನ್ ಫಂಕ್ಷನ್ ಹಾಲ್ ಮುಂದಿನ ಮುಖ್ಯ ರಸ್ತೆ  ಹತ್ತಿರ  ಈ ಕೇಸಿನ ಪಿಯರ್ಾದಿಯವರ ಗಂಡ ಮರತ ಭೀಮರಾಯ ಮತ್ತು ಗಾಯಾಳು ಈಶಪ್ಪ ಇಬ್ಬರು ಮೋಟಾರು  ನಂಬರ ಕೆಎ-33, ಎಕ್ಸ್-6715 ನೇದ್ದರಲ್ಲಿ ಯಾದಗಿರಿ ಬರುವಾಗ ಯಾವುದೋ ವಾಹನದ ಚಾಲಕನು ಯಾದಗಿರಿ ಕಡೆಯಿಂದ ಹೈದ್ರಾಬಾದ್ ರಸ್ತೆ ಕಡೆಗೆ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು  ಮೋಟಾರು ಸೈಕಲ್ ನೆದ್ದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಮೋಟಾರು ಸೈಕಲ್ ಸವಾರ ಭೀಮರಾಯ ಈತನಿಗೆ  ಮುಖಕ್ಕೆ ಬಹಳ ಗಂಭೀರ ಗಾಯಗಳಾಗಿದ್ದು, ಹಲ್ಲುಗಳು ಮುರಿದಿದ್ದು, ಹಣೆಗೆ, ಎದೆಗೆ, ತಲೆಗೆ ಭಾರೀ ಗುಪ್ತಗಾಯವಾಗಿದ್ದು, ಬಲಗೈ ಮುಂಗೈಗೆ ತರಚಿದ ರಕ್ತಗಾಯಗಳಾಗಿದ್ದು ಬಾಯಿಂದ ಮೂಗಿನಿಂದ ರಕ್ತ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಮೋಟಾರು ಸೈಕಲ್ ಹಿಂಬದಿ ಕುಳಿತಿದ್ದ ಗಾಯಾಳು ಈಶಪ್ಪನಿಗೆ ಸಣ್ಣ-ಪುಟ್ಟ ತರಚಿದ ರಕ್ತಗಾಯಗಳಾಗಿದ್ದು ಇರುತ್ತದೆ. ಅಪಘಾತಪಡಿಸಿದ ವಾಹನದ ಚಾಲಕನು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ.  ಈ ಬಗ್ಗೆ ಅಪಘಾತಪಡಿಸಿ ಓಡಿ ಹೋದ ಚಾಲಕನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ  ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 02/2021 ಕಲಂ 279, 337,  304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್  ನೇದ್ದರಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.    


ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 14/2021 ಕಲಂ: 143 147 148 323 324 307 504 506 ಸಂಗಡ 149 ಐಪಿಸಿ : 12/01/2021 ರಂದು 00-10 ಎ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ಗಾಯಾಳು ಶ್ರೀ ಅಂಬ್ರಣ್ಣ ತಂದೆ ಪಿಡ್ಡಪ್ಪ ಬುಂಕಲದೊಡ್ಡಿ ಸಾಃ ಹಂದ್ರಾಳ ಎಸ್.ಡಿ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನನ್ನ ದೊಡ್ಡಮ್ಮ ಹಂದ್ರಾಳ ಎಸ್.ಡಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಚುನಾವಣೆಗೆ ನಿಂತು ಗೆದ್ದಿರುತ್ತಾಳೆ. ನಮ್ಮೂರಿನ ಸಂಗಣ್ಣ ತಂದೆ ಭೀಮಣ್ಣ ಸಜರ್ಾಪೂರ, ಪರಮಪ್ಪ ತಾಯಿ ಸಾಬವ್ವ ಹಾಗು ಇತರರು ತಮ್ಮ ಪಕ್ಷದ ಅಭ್ಯಥರ್ಿ ಚುನಾವಣೆಯಲ್ಲಿ ಸೋತಿರುವದರಿಂದ ನಮ್ಮ ಮೇಲೆ ದ್ವೇಷ ಬೆಳೆಸಿಕೊಂಡಿರುತ್ತಾರೆ. ನಿನ್ನೆ ದಿನಾಂಕ: 11/01/2021 ರಂದು ರಾತ್ರಿ ನಾನು ಮತ್ತು ನಮ್ಮ ಅಣ್ಣ-ತಮ್ಮಕೀಯ ಭೀಮನಗೌಡ, ಹಣಮಂತರಾಯ, ಭೀಮಣ್ಣ ಎಲ್ಲರೂ ನಮ್ಮೂರಿನ ಹಣಮಂತ ದೇವರ ಗುಡಿಯ ಮುಂದೆ ಕುಳಿತಿದ್ದಾಗ 9-20 ಪಿ.ಎಮ್ ಸುಮಾರಿಗೆ ನಮ್ಮೊಂದಿಗೆ ದ್ವೇಷ ಬೆಳೆಸಿಕೊಂಡಿರುವ 1) ಪರಮಪ್ಪ ತಾಯಿ ಸಾಬವ್ವ ಇತನು ನಮಗೆ ಲೇ ಮಕ್ಕಳೇ ನೀವು ನನ್ನ ಹೆಂಡತಿಗೆ ಓಟ ಹಾಕಲಾರದ ಕಾರಣ ಸೋತಿದ್ದಾಳೆ, ನಿಮಗೆ ಸುಮ್ಮನೇ ಬಿಡುವದಿಲ್ಲ ಮಕ್ಕಳೇ ಅಂತ ಬೈಯ್ಯುತ್ತಿದ್ದಾಗ, ನಾವು ಯಾರು ಎಲೆಕ್ಷನ್ ನಿಂತಿಲ್ಲಪ್ಪಾ, ನೀನು ಸೋತಿದ್ದಕ್ಕೂ, ನಮಗೂ ಯಾವುದೇ ಸಂಬಂಧ ಇಲ್ಲಾ, ಸುಮ್ಮನೇ ನಮಗೆ ಬೈಯ್ಯಬೇಡಾ ನಡಿ ಇಲ್ಲಿಂದ ಅಂತ ಹೇಳಿದ್ದಕ್ಕೆ, ಪರಮಪ್ಪನು ನನಗೆ ನಡಿ ಅಂತ ಹೇಳುತ್ತಿರೇನಲೇ, ನಿಮ್ಮ ತಾಯಿನ ಹಡಾ ನಮ್ಮ ಕಡೆಯವರಿಗೆ ಕರೆಯುತ್ತೇನೆ ತಡಿ ಮಕ್ಕಳೇ ಅಂತ ಹೇಳಿ ನಮ್ಮೂರಿನ ತಿಪ್ಪಣ್ಣ ಪೂಜಾರಿಯವರ ಅಂಗಡಿ ಕಡೆಗೆ ಹೋಗಿ ಅಲ್ಲಿಂದ ತನ್ನ ಜೊತೆಯಲ್ಲಿ ನಮ್ಮೂರಿನ 2) ಸಂಗಣ್ಣ ತಂದೆ ಭೀಮಣ್ಣ 3) ಅಮರೇಶ ತಂದೆ ಭೀಮಣ್ಣ 4) ದೇವಪ್ಪ ತಂದೆ ಭೀಮಣ್ಣ 5) ಶಿವರಾಜ ತಂದೆ ಹಣಮಂತರಾಯ 6) ಶರಣಗೌಡ ತಂದೆ ಬಸನಗೌಡ 7) ದೇವಿಂದ್ರಪ್ಪ ತಂದೆ ಈರಬಸಪ್ಪ 8) ಬಸನಗೌಡ ತಂದೆ ನಿಂಗಪ್ಪಗೌಡ 9) ಬಸನಗೌಡ ತಂದೆ ಅಮರಣ್ಣ 10) ಮಲ್ಲಣ್ಣ ತಂದೆ ಸಂಗಣ್ಣ 11) ಶಾಂತ ತಂದೆ ಹಣಮಂತರಾಯ 12) ಸಂಗಣಗೌಡ ತಂದೆ ನಿಂಗಣ್ಣ 13) ಸಾಹೇಬಗೌಡ ತಂದೆ ಬಸಲಿಂಗಪ್ಪ 14) ವಿಶ್ವನಾಥರೆಡ್ಡಿ ತಂದೆ ಭೀಮನಗೌಡ 15) ಮಲ್ಲಿಕಾಜರ್ುನ ತಂದೆ ಬಸಲಿಂಗಪ್ಪ 16) ಗುರಡ್ಡಿ ತಂದೆ ಬಸಣ್ಣ 17) ಮಲ್ಲಿಕಾಜರ್ುನ ತಂದೆ ಗುರಡ್ಡಿ 18) ಹಣಮಂತರಾಯ ತಂದೆ ಸಂಗಣ್ಣ ಇವರೆಲ್ಲರೂ ಅಕ್ರಮಕೂಟ ಸೇರಿಕೊಂಡು ಬಂದವರೇ, ಅವರಲ್ಲಿ ಪರಮಪ್ಪನು ಲೇ ಮಕ್ಕಳೇ ನಾನು ಒಬ್ಬನೇ ಇದ್ದಾಗ ಇಲ್ಲಿಂದ ನಡಿ ಅಂತ ಹೇಳುತ್ತಿರೇನಲೇ, ಈಗ ನಿಮಗೆ ಸುಮ್ಮನೇ ಬಿಡುವದಿಲ್ಲ ಅನ್ನುತ್ತ ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಚೂಪಾದ ಕಲ್ಲಿನಿಂದ ನನ್ನ ತಲೆಯ ಮೇಲೆ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಸಂಗಣ್ಣನು ಭೀಮನಗೌಡನಿಗೆ ಕೊಲೆ ಮಾಡುವ ಉದ್ದೇಶದಿಂದ ಚೂಪಾದ ಕಲ್ಲಿನಿಂದ ಭೀಮನಗೌಡನ ಗದ್ದಕ್ಕೆ ಹೊಡೆದಿದ್ದರಿಂದ ಭಾರಿ ಗಾಯವಾಗಿರುತ್ತದೆ. ಅಮರೇಶನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಹಣಮಂತರಾಯನ ತಲೆಯ ಮೇಲೆ ಹೊಡೆದು ಗಾಯಪಡಿಸಿದ್ದು, ದೇವಪ್ಪನು ಕಲ್ಲಿನಿಂದ ಭೀಮಣ್ಣನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ನಂತರ ಅವರೆಲ್ಲರೂ ಕಲ್ಲು ತೂರಾಟ ಮಾಡಿದ್ದರಿಂದ ನನಗೆ ಮತ್ತು ಭೀಮಣ್ಣನಿಗೆ ಗಾಯಗಳಾಗಿದ್ದು, ಆಗ ಚನ್ನಬಸವ, ವಿನೋದಗೌಡ, ನಂದನಗೌಡ ಇವರು ಬಿಡಿಸಿದಾಗ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ವಗೈರೆ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 14/2021 ಕಲಂ: 143 147 148 323 324 307 504 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 15/2020 ಕಲಂ 279, 337, 338 ಐಪಿಸಿ ಮತ್ತು ಕಲಂ: 187 ಐಎಂವಿ ಯ್ಯಾಕ್ಟ : ಇಂದು ದಿನಾಂಕ: 12/01/2021 ರಂದು 11:30 ಪಿ.ಎಂ ಕ್ಕೆ ಸುರಪುರ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ತಿಳಿಸಿದ್ದರಿಂದ ಸುರಪರು ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುದಾರರಿಗೆ ವಿಚಾರಮಾಡಿ ಗಾಯಾಳುದಾರನಾದ ಖಾಜಾಸಾಬ ತಂದೆ ಖಾಜಾಸಾಬ ಖುರೇಷಿ ಸಾ|| ದೇವಾಪುರ ಇತನ ಪಿಯರ್ಾದಿ ಹೇಳಿಕೆ ಸಾರಾಂಶವೆನಂದರೆ, ನನಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಇಂದು ದಿನಾಂಕ:12/01/2021 ರಂದು ಮುಂಜಾನೆ 8 ಎ.ಎಂ ಸುಮಾರಿಗೆ ನಾನು ಮತ್ತು ನನ್ನ ಮಗ ಹುಸೇನ್, ನನ್ನ ತಮ್ಮಂದಿಯರಾದ ದಸ್ತಗಿರ, ಮೈಹಿಬೂಬ ಎಲ್ಲರು ಕೂಡಿ ಕುಂಬಾರಪೆಟ್ದಲ್ಲಿ ಕುರಿ ವ್ಯಾಪಾರ ಮಾಡಲು ಬಂದಿದ್ದು, ಕುರಿ ವ್ಯಾಪಾರ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೊಗುವ ಸಲುವಾಗಿ ಕುಂಬಾರಪೇಟ್ ಡವನಲ್ ಹತ್ತಿರ ರೋಡ ಸೈಡಗೆ ನಿಂತಾಗ ನಮ್ಮ ತಮ್ಮನಾದ ಮನಸೂರ ಇತನು ಸುರಪುರದಿಂದ ತನ್ನ ಮೋಟರ್ ಸೈಕಲ್ ನಂ. ಕೆಎ-33 ಡಬ್ಲ್ಯೂ-4007 ನೇದ್ದನ್ನು ತಗೆದುಕೊಂಡು ನಮ್ಮ ಹತ್ತಿರ ಬಂದು ಮೋಟರ್ ಸೈಕಲ್ ಸೈಡಿಗೆ ನಿಲ್ಲಿಸಿ ನಮ್ಮ ಜೊತೆ ಮಾತಾನಾಡುತ್ತಾ ನಿಂತಾಗ ಮುಂಜಾನೆ 10:20 ಎ.ಎಂ ಸುಮಾರಿಗೆ ಸುರಪುರ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನು ಬಸ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೊದಲು ಒಂದು ಆಕಳು ಮತ್ತು ಎಮ್ಮೆಗೆ ಡಿಕ್ಕಿ ಪಡಿಸಿಕೊಂಡು ನಂತರ ನಮಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಬಲಗೈ ಮುಷ್ಠಿಯ ಹತ್ತಿರ ಭಾರಿ ರಕ್ತಗಾಯ, ಬಲ ಹಣೆಗೆ ಕಟ್ಟಾದ ರಕ್ತ ಬಲಗಾಲ ಪಾದದ ಮೇಲೆ ರಕ್ತಗಾಯ, ಹೊಟ್ಟೆಗೆ ಭಾರಿ ಒಳಪೆಟ್ಟು ಆಗಿರುತ್ತದೆ. ನನ್ನ ಮಗ ಹುಸೇನ್ ಇತನಿಗೆ ಬಲಗೈ ಮೇಲೆ ಬಸ್ಸಿನ ಗಾಲಿ ಹಾದಿದ್ದರಿಂದ ಭಾರಿ ಮುರಿದ ರಕ್ತಗಾಯ, ಎಡ ಹಣೆಗೆ ಭಾರಿ ರಕ್ತಗಾಯ, ಮೂಗಿಗೆ ರಕ್ತಗಾಯ, ತಲೆಗೆ ರಕ್ತಗಾಯ, ಎದೆಗೆ ಒಳಪೆಟ್ಟು, ಬಲ ಕಪಾಳಕ್ಕೆ ತರಚಿದ ಗಾಯಗಳಾಗಿರುತ್ತದೆ. ನನ್ನ ತಮ್ಮನಾದ ದಸ್ತಗಿರ ಇತನಿಗೆ ತಲೆಗೆ ಭಾರಿ ಒಳಪೆಟ್ಟು. ಬಲಗಾಲ ಪಾದದ ಮೇಲೆ ಭಾರಿ ರಕ್ತಗಾಯ ಬೆರಳು ಮುರಿದಿರುತ್ತವೆ. ಇನ್ನೊಬ್ಬ ತಮ್ಮನಾದ ಮೈಹಿಬೂಬ ಇತನಿಗೆ ತಲೆಗೆ ಪೆಟ್ಟಾಗಿದ್ದರಿಂದ ಬಾಯಿಯಲ್ಲಿ ರಕ್ತ ಬಂದಿದ್ದು, ಕಪಾಳಕ್ಕೆ ತರಚಿದ ಗಾಯ, ಬಲಗಾಲ ಮೋಳಕಾಲಿಗೆ ತರಚಿದ ಗಾಯ ಆಗಿರುತ್ತದೆ. ತಮ್ಮ ಮನ್ಸೂರ ಇತನು ಅಪಘಾತದಿಂದ ತಪ್ಪಿಸಿಕೊಂಡಿರುತ್ತಾನೆ. ಅಲ್ಲೆ ಇದ್ದ ಮೋಟರ್ ಸೈಕಲ್ಗೆ ಡಿಕ್ಕಿಪಡಿಸಿ ಮೋಟರ್ ಸೈಕಲ್ ಜಕಂಗೊಂಡಿರುತ್ತದೆ. ನಂತರ ಬಸ್ ನಂಬರ ನೋಡಲಾಗಿ ಕೆಎ-28 ಎಫ್-2361 ನೇದ್ದು ಇದ್ದು ಅದರ ಚಾಲಕನು ನಮ್ಮ ಕಡೆ ನೋಡುತ್ತಾ ಓಡಿ ಹೊಗಿದ್ದು ಅವನನ್ನು ನೋಡಿದರೆ ಗುರುತ್ತಿಸುತ್ತೇವೆ. ನಂತರ ಅಪಘಾತದಲ್ಲಿ ಗಾಯಗೊಂಡ ನಮಗೆ ನಮ್ಮ ತಮ್ಮ ಮನ್ಸೂರ ಇತನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸುರಪುರಕ್ಕೆ ತಂದು ಸೇರಿಕೆ ಮಾಡಿದರು. ಕಾರಣ ನಮಗೆ ಅಪಘಾತ ಮಾಡಿದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ತಮ್ಮ ಮುಂದೆ ಈ ನನ್ನ ಪಿಯರ್ಾದಿ ಹೇಳಿಕೆ ನೀಡಿರುತ್ತೇನೆಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 15/2021 ಕಲಂ 279, 337, 338 ಐಪಿಸಿ ಮತ್ತು ಕಲಂ: 187 ಐಎಂವಿ ಯ್ಯಾಕ್ಟ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 01/2021 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ:12/01/2021 ರಂದು 07.30 ಪಿಎಂ ಕ್ಕೆ ಶ್ರೀ ಮಲ್ಲಪ್ಪ ಹೆಚ್.ಸಿ-100 ರವರು ಠಾಣೆಗೆ ಬಂದು ಒಂದು ವರದಿ ನಿಡಿದ್ದರ ಸಾರಂಶ ಏನಂದರೆ, ನಾನು ಮಲ್ಲಪ್ಪ ಹೆಚ್.ಸಿ-100 ಗೋಗಿ ಪೊಲೀಸ್ ಠಾಣೆ ಇದ್ದು ಗುನ್ನೆ ನಂ: 11/2019 ಕಲಮ; ಮನುಷ್ಯ ಕಾಣೆ ಪ್ರಕರಣದಲ್ಲಿ ಕಾಣೆಯಾದವನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಇಂದು ದಿನಾಂಕ: 12/01/2021 ರಂದು 05.00 ಪಿಎಂ ಕ್ಕೆ ಗುಂಡಾಪೂರ ಗ್ರಾಮದ ಬೇಟಿ ಮಾಡಿದಾಗ ಬಾತ್ಮಿದಾರರಿಂದ ಮತ್ತು ಗ್ರಾಮದಲ್ಲಿನ ಜನರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ಗುಂಡಾಪೂರ ಗ್ರಾಮದಲ್ಲಿನ ನಿವಾಸಿತರಾದ 1) ಭೀಮನಗೌಡ ತಂದೆ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ ವಯಾ: 25 ಉ:ಒಕ್ಕಲುತನ 2) ಮುದಕಪ್ಪ ತಂದೆ ಬಾಲಪ್ಪ ಜೇವಗರ್ಿ ವಯಾ:21 ಉ: ಒಕ್ಕಲುತನ 3) ಬಸವರಾಜ ತಂದೆ ನಿಂಗಪ್ಪ ಹೊಸಮನಿ ವಯಾ: 22 ಉ: ಒಕ್ಕಲುತನ 4) ಶೇಖಪ್ಪ ತಂದೆ ನಿಂಗಪ್ಪ ಹೊಸಮನಿ ವಯಾ: 23 ಉ: ಒಕ್ಕಲುತನ  5) ಯಮನಪ್ಪ ತಂದೆ ಜ್ಞಾನಪ್ಪ ಹೊಸಮನಿ ವಯಾ: 22 ಉ: ಒಕ್ಕಲುತನ 6) ಯಮನಪ್ಪ ತಂದೆ ಮರಲಿಂಗಪ್ಪ ಹೊಸಮನಿ ವಯಾ: 40 ಉ: ಒಕ್ಕಲುತನ 7) ಯಮನಪ್ಪ ತಂದೆ ಬಸ್ಸಣ್ಣ ಸಗರ ವಯಾ: 35 ಉ: ಒಕ್ಕಲುತನ 8) ಮಾಳಪ್ಪ ತಂದೆ ಮುದಕಪ್ಪ ಹೊಸಮನಿ ವಯಾ: 22 ಉ: ಒಕ್ಕಲುತನ 9) ಯಮನಪ್ಪ ತಂದೆ ಸೂಗಪ್ಪ ಹಳ್ಳಿ ವಯಾ:25 ಉ: ಒಕ್ಕಲುತನ 10) ಕಾಳಪ್ಪ ತಂದೆ ಸಿದ್ದಪ್ಪ ಬಳಬಟ್ಟಿ ವಯಾ: 24 ಉ: ಒಕ್ಕುತನ 11) ಮಾಳಪ್ಪ ತಂದೆ ನಿಂಪ್ಪ ಜೇವಗರ್ಿ ವಯಾ: 38 ಉ: ಒಕ್ಕಲುತನ 12) ಭಿಮಾಶಂಕರ ತಂದೆ ಶರಣಪ್ಪ ಹಳ್ಳಿ ವಯಾ: 26 ಉ: ಒಕ್ಕಲುತನ 13) ಮಲ್ಲಿಕಾಜರ್ುನ ತಂದೆ ಯಮನಪ್ಪ ಹೊಸಮನಿ ವಯಾ:23 ಉ: ಒಕ್ಕಲುತನ 14) ಹಯ್ಯಾಳಪ್ಪ ತಂದೆ ನಿಂಗಪ್ಪ ಹಳ್ಳಿ ವಯಾ:25 ಉ: ಒಕ್ಕಲುತನ 15) ಬಾಪೂಗೌಡ ತಂದೆ ಮಹಾದೇವಪ್ಪಗೌಡ ವಯಾ: 35 ಉ: ಒಕ್ಕಲುತನ 16) ಲಕ್ಷ್ಮಣ ತಂದೆ ದ್ಯಾವಪ್ಪ ಸಗರ ವಯಾ:30 ಉ: ಒಕ್ಕಲುತನ 17) ಭೀಮಾಶಂಕರ ತಂದೆ ಶರಣಪ್ಪ ಹಳ್ಳಿ ವಯಾ: 25 ಉ: ಒಕ್ಕಲುತನ 18) ದೇವಪ್ಪ ತಂದೆ ಹಣಮಂತ್ರಾಯ ದೊಡ್ಡಮನಿ ವಯಾ: 30 ಉ: ಒಕ್ಕಲುತನ 19) ಮಾಳಪ್ಪ ತಂದೆ ಬಾಲಪ್ಪ ಜೇವಗರ್ಿ ವಯಾ: 30 ಉ: ಒಕ್ಕಲುತನ 20) ನಾಗಪ್ಪ ತಂದೆ ಭಿಮರಾಯ ಹಳ್ಳಿ ವಯಾ: 40 ಉ: ಒಕ್ಕಲುತನ  21) ದೇವಪ್ಪ ತಂದೆ ಬಸ್ಸಣ್ಣ ಪೂಜಾರಿ ವಯಾ: 38 ಉ: ಒಕ್ಕಲುತನ 22) ಸಿದ್ದಪ್ಪ ತಂದೆ ಹಣಮಂತ್ರಾಯ ಜೇವಗರ್ಿ ವಯಾ: 40 ಉ: ಒಕ್ಕಲುತನ 23) ದೇವಿಂದ್ರಪ್ಪ ತಂದೆ ಮಾಳಪ್ಪ ಹಳ್ಳಿ ವಯಾ: 30 ಉ: ಒಕ್ಕಲುತನ  24) ಸಿದ್ದಪ್ಪ ತಂದೆ ಮಾಳಪ್ಪ ಹಳ್ಳಿ ವಯಾ: 45 ಉ: ಒಕ್ಕಲುತನ 25) ಕರೆಪ್ಪ ತಂದೆ ಮಾಳಪ್ಪ ಹಳ್ಳಿ ವಯಾ: 25 ಉ: ಒಕ್ಕಲುತನ  26) ಹಣಮಂತ ತಂದೆ ಪರಮಣ್ಣ ಇಜೇರಿ ವಯಾ:30 ಉ: ಒಕ್ಕಲುತನ  27) ನಿಂಗಪ್ಪ ತಂದೆ ಪರಮಣ್ಣ ಇಜೇರಿ ವಯಾ: 28 ಉ: ಒಕ್ಕಲುತನ 28) ಮಲ್ಲಿಕಾಜರ್ುನ ತಂದೆ ನಿಂಗಪ್ಪಗೌಡ ಬಿರಾದಾರ ವಯಾ: 40 ಉ: ಒಕ್ಕಲುತನ 29) ಭೀಮಣ್ಣ ತಂದೆ ನಿಂಗಪ್ಪ ಹದ್ದನೂರ ವಯಾ:40 ವರ್ಷ ಉ: ಒಕ್ಕಲುತನ 30) ಶೇಖಪ್ಪ ತಂದೆ ದ್ಯಾವಪ್ಪ ಸಗರ ವಯಾ: 22 ಉ: ಕೂಲಿ. ಎಲ್ಲರೂ ಜಾ: ಕುರುಬರ ಸಾ: ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ. ಇವರುಗಳು, ವನದುಗರ್ಾ ಗ್ರಾಮದವರೇ ಆದ ಗುರುರಾಜ ತಂದೆ ಸುಭಾಸ್ ಹಾದಿಮನಿ ವಯಾ: 21 ಉ: ಕೂಲಿ ಜಾ: ಮಾದರ ಸಾ: ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರೊಂದಿಗೆ ಗುಂಡಾಪುರ ಗ್ರಾಮದಲ್ಲಿನ ಕನಕದಾಸ ಕಟ್ಟೆ ಮತ್ತು ಸಂಗೊಳ್ಳೀ ರಾಯಣ್ಣನ ಕಟ್ಟೆ ಮೇಲೆ ಮಲಗಿ ಬೂಟ ಹಾಕಿಕೊಂಡು ಕಟ್ಟೆ ಮೇಲೆ ಕಾಲು ಇಟ್ಟಿರುವ ವಿಷಯದಲ್ಲಿ ಪಾಟರ್ಿಯ ಜನರ ನಡುವೆ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 30 ಜನರ ವಿರುದ್ಧ ಕ್ರಮ ಜರುಗಿಸಬೇಕು ಅಂತಾ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಇಂದು ದಿನಾಂಕ:12/01/2021 ರಂದು 07.30 ಪಿಎಂಕ್ಕೆ ಠಾಣೆ ಪಿ.ಎ.ಆರ್ ನಂ: 01/2021 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.


ಗೋಗಿ  ಪೊಲೀಸ ಠಾಣೆ ಗುನ್ನೆ ನಂ:- 02/2021 ಕಲಂ 107 ಸಿಆರ್ಪಿಸಿ: ಇಂದು ದಿನಾಂಕ:12/01/2021 ರಂದು 08.30 ಪಿಎಂ ಕ್ಕೆ ಶ್ರೀ ಮಲ್ಲಪ್ಪ ಹೆಚ್.ಸಿ-100 ರವರು ಠಾಣೆಗೆ ಬಂದು ಒಂದು ವರದಿ ನಿಡಿದ್ದರ ಸಾರಂಶ ಏನಂದರೆ, ನಾನು ಮಲ್ಲಪ್ಪ ಹೆಚ್.ಸಿ-100 ಗೋಗಿ ಪೊಲೀಸ್ ಠಾಣೆ ಇದ್ದು ಗುನ್ನೆ ನಂ: 11/2019 ಕಲಮ; ಮನುಷ್ಯ ಕಾಣೆ ಪ್ರಕರಣದಲ್ಲಿ ಕಾಣೆಯಾದವನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಇಂದು ದಿನಾಂಕ: 12/01/2021 ರಂದು 05.00 ಪಿಎಂ ಕ್ಕೆ ಗುಂಡಾಪೂರ ಗ್ರಾಮದ ಬೇಟಿ ಮಾಡಿದಾಗ ಬಾತ್ಮಿದಾರರಿಂದ ಮತ್ತು ಗ್ರಾಮದಲ್ಲಿನ ಜನರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ಗುಂಡಾಪೂರ ಗ್ರಾಮದಲ್ಲಿನ ನಿವಾಸಿತರಾದ 1) ಗುರುರಾಜ ತಂದೆ ಸುಭಾಸ್ ಹಾದಿಮನಿ ವಯಾ: 21 ಉ: ಕೂಲಿ 2) ಸುಭಾಸ್ ತಂದೆ ಭಿಮಪ್ಪ ಹಾದಿಮನಿ ವಯಾ: 60 ಉ: ಕೂಲಿ 3) ಯಮನಪ್ಪ ತಂದೆ ಭಿಮಪ್ಪ ಹಾದಿಮನಿ ವಯಾ: 58 ವರ್ಷ ಉ: ಕೂಲಿ 4) ಭೀಮಣ್ಣ ತಂದೆ ಮರಳಪ್ಪ ಹಾದಿಮನಿ ವಯಾ: 40 ಉ: ಡ್ರೈವರ 5) ಚಂದ್ರಶೇಖರ ತಂದೆ ಮರಳಪ್ಪ ಹಾದಮನಿ ವಯಾ: 34 ಉ: ಕೂಲಿ 6) ವಿಜಯಕುಮಾರ ತಂದೆ ಸುಭಾಸ್ ಹಾದಿಮನಿ ವ:25 ಉ: ಕೂಲಿ 7) ಮರಳಪ್ಪ ತಂದೆ ಭಿಮಪ್ಪ ಹಾದಿಮನಿ ವಯಾ: 76 ಉ: ಕೂಲಿ 8) ಮಹೇಶ ತಂದೆ ಯಮನಪ್ಪ ಹಾದಿಮನಿ ವಯಾ:22 ಉ: ಕೂಲಿ  ಎಲ್ಲರೂ ಜಾ: ಮಾದಿಗ  ಸಾ: ಎಲ್ಲರು ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರುಗಳು, ವನದುಗರ್ಾ ಗ್ರಾಮದವರೇ ಆದ ಭೀಮನಗೌಡ ತಂದೆ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ ವಯಾ: 25 ಉ: ಒಕ್ಕಲುತನ ಸಾ: ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರೊಂದಿಗೆ ಗುಂಡಾಪುರ ಗ್ರಾಮದಲ್ಲಿನ ಕನಕದಾಸ ಕಟ್ಟೆ ಮತ್ತು ಸಂಗೊಳ್ಳೀ ರಾಯಣ್ಣನ ಕಟ್ಟೆ ಮೇಲೆ ಮಲಗಿ ಬೂಟ ಹಾಕಿಕೊಂಡು ಕಟ್ಟೆ ಮೇಲೆ ಕಾಲು ಇಟ್ಟಿರುವ ವಿಷಯದಲ್ಲಿ ಪಾಟರ್ಿಯ ಜನರ ನಡುವೆ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 08 ಜನರ ವಿರುದ್ಧ ಕ್ರಮ ಜರುಗಿಸಬೇಕು ಅಂತಾ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಇಂದು ದಿನಾಂಕ:12/01/2021 ರಂದು 08.30 ಪಿಎಂಕ್ಕೆ ಠಾಣೆ ಪಿ.ಎ.ಆರ್ ನಂ: 02/2021 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 01/2021 ಕಲಂ: ಮಹಿಳೆಯರು ಕಾಣೆಯಾದ ಬಗ್ಗೆ. : ಇಂದು ದಿನಾಂಕ:12.01.2021 ರಂದು 8:30 ಎಎಮ್ ಕ್ಕೆ ಪಿರ್ಯಾಧಿ  ಶ್ರೀಮತಿ ಸುಮಿತ್ರಾ ಗಂಡ ಗುಂಡಪ್ಪ ಹಂದ್ರಾಳ ವ: 28 ವರ್ಷ ಜಾ: ಹಿಂದು ಮಾದರ ಉ: ಕೂಲಿಕೆಲಸ ಸಾ: ಗೆದ್ದಲಮರಿ ತಾ: ಹುಣಸಗಿ  ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಹೇಳಿಕೆಯನ್ನು ಹೇಳಿ ಗಣಕೀಕರಿಸಿದ್ದು ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ  ನನ್ನ ತವರೂರು ಮತ್ತು ಗಂಡನ ಮನೆ ಗೆದ್ದಲಮರಿ ಗ್ರಾಮವಾಗಿದ್ದು ನನ್ನ ತಂದೆತಾಯಿಗೆ ನಾನು ಲಲಿತಾ,ರೇಖಾ,ಸರಸ್ವತಿ ಮತ್ತು ಪರಶುರಾಮ ಅಂತ ನಾಲ್ಕು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದು, ನಮ್ಮ ತಂದೆ ತಾಯಿಯವರು ನನಗೆ ಈಗ 8 ವರ್ಷಗಳ ಹಿಂದೆ ನಮ್ಮೂರ ಹುಲಗಪ್ಪ ಹಂದ್ರಾಳ ರವರ ಮಗನಾದ ಗುಂಡಪ್ಪನೊಂದಿಗೆ ಮದುವೆ ಮಾಡಿದ್ದು ನಾನು ಗಂಡನ ಮನೆಯಲ್ಲಿಯೇ ಇದ್ದು ನನ್ನ ತಂಗಿಯರದು ಕೂಡಾ ಮದುವೆಯಾಗಿದ್ದು, ಅವರು ತಮ್ಮ ತಮ್ಮ ಗಂಡನ ಮನೆಯಲ್ಲಿ ಇರುತ್ತಾರೆ. ಮದುವೆಯಾದ ನಂತರ ನಾನು ನನ್ನ ಗಂಡನ ಮನೆಯಲ್ಲಿಯೇ ಇದ್ದು, ನನ್ನ ಗಂಡನ ಮನೆ ಮತ್ತು ತವರು ಮನೆ ಅಕ್ಕಪಕ್ಕದಲ್ಲಿಯೇ ಇರುತ್ತದೆ. ನನ್ನ ತವರು ಮನೆಯಲ್ಲಿ ನನ್ನ ತಂದೆ ಯಲ್ಲಪ್ಪ ತಾಯಿ ರೇಣುಕಾ ತಮ್ಮ ಪರಶುರಾಮ ರವರು ಇರುತ್ತಾರೆ. ನಾನು ಆಗಾಗ್ಗೆ ನನ್ನ ತಂದೆ ತಾಯಿಯವರ ಮನೆಗೆ ಹೋಗಿ ಬರುವದು ಮಾಡುತ್ತಿರುವೆನು.ಹೀಗಿರುವಾಗ ಮೊನ್ನೆ ದಿನಾಂಕ 10.01.2021 ರಂದು ರವಿವಾರ ದಿವಸ ನಾನು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನನ್ನ ತವರು ಮನೆಗೆ ಹೋದಾಗ ಮನೆಯಲ್ಲಿ ನನ್ನ ತಾಯಿ ರೇಣುಕಾ ಗಂಡ ಯಲ್ಲಪ್ಪ ಗೋಜಗೆರ ವ-50ವರ್ಷ ಇವರು ಮನೆಯಲ್ಲಿದ್ದು ನನ್ನ ತಾಯಿಯು ನನಗೆ ತಿಳಿಸಿದ್ದೆನೆಂದರೆ ನನ್ನ ಮೈಯಲ್ಲಿ ಆರಾಮ ಇರುವದಿಲ್ಲ ನಿಮ್ಮ ಚಿಗವ್ವ ಹಣಮವ್ವ ಗಂಡ ಸೋಮಪ್ಪ ಗೋಜಗೆರ ಇವರಿಗೆ ಕರೆದುಕೊಂಡು ಉಪಚಾರಕ್ಕಾಗಿ ಸಿಂಧನೂರಗೆ ಹೋಗುತ್ತೇನೆ ಅಂತ ತಿಳಿಸಿ ನನ್ನ ತಾಯಿ ರೇಣುಕಾಳು ಚಿಗವ್ವ ಹಣಮವ್ವಳೊಂದಿಗೆ ತಮ್ಮ ಮನೆಯಿಂದ ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಹೋಗಿದ್ದು ನಂತರ ನಾನು ನಾವು ಹೊಸ ಮನೆ ಕಟ್ಟುವ ಜಾಗೆ ಕಡೆಗೆ ಹೋಗಿದ್ದು ಇರುತ್ತದೆ. ನನ್ನ ತಾಯಿ ರೇಣುಕಾ ಹಾಗೂ ಚಿಗವ್ವ ಹಣಮವ್ವ ರವರು ರವಿವಾರ ದಿವಸ ರಾತ್ರಿಯಾದರೂ ಮನೆಗೆ ಬರಲಿಲ್ಲ, ಪೋನ್ ಹಚ್ಚಬೇಕೆಂದರೆ ಅವರ ಹತ್ತಿರ ಪೋನ್ ಇದ್ದಿರುವದಿಲ್ಲ. ನಾನು ಆ ದಿವಸ ನನ್ನ ತಾಯಿ ಮತ್ತು ಚಿಗವ್ವ ರವರು ಆಸ್ಪತ್ರೆಗೆ ತೋರಿಸಿಕೊಳ್ಳಲು ತಡವಾಗಿ ಬಸ್ ಸಿಗದೇ ಅಲ್ಲಯೇ ಉಳಿದಿರಬಹುದು ಅಂತ ತಿಳಿದುಕೊಂಡಿದ್ದು, ನಿನ್ನೆ ದಿನ ಮದ್ಯಾಹ್ನವಾದರೂ ನನ್ನ ತಾಯಿ ಮತ್ತು ಚಿಗವ್ವ ರವರು ಮನೆಗೆ ಬರದೇ ಇದ್ದುದರಿಂದ ನಾವು ಗಾಬರಿಯಾಗಿ ನನ್ನ ಗಂಡ ಗುಂಡಪ್ಪ ತಂದೆ ಹುಲಗಪ್ಪ ಹಂದ್ರಾಳ ಚಿಗವ್ವ ಹಣಮವ್ವಳ ಮಗನಾದ ಮುದೆಪ್ಪ ತಂದೆ ಸೋಮಪ್ಪ ಗೋಜಗರ ಹಾಗೂ ನನ್ನ ಗಂಡನ ಅಣ್ಣನಾದ ರಾಮಪ್ಪ ತಂದೆ ಹುಲಗಪ್ಪ ಹಂದ್ರಾಳ ಹಾಗೂ ಅಣ್ಣತಮ್ಮಕಿಯ ಮೈದುನನಾದ ಗದ್ದೆಪ್ಪ ತಂದೆ ದುರ್ಗಪ್ಪ ಹಂದ್ರಾಳ ರವರು ಕೂಡಿ ನಮ್ಮ ಸಂಬಂಧಿಕರ ಊರುಗಳಾದ ರತ್ತಾಳ,ಅಗತೀರ್ಥ,ಅಗ್ನಿ,ಸದಬ,ಗುಂಡಲಗೇರಾ,ತಿಂಥಣಿ ಬ್ರೀಜ್,ಕಕ್ಕೇರಾ ಮತ್ತು ಹುಣಸಗಿಗೆ ಹೋಗಿ ಇಲ್ಲಿಯವರೆಗೆ ವಿಚಾರಿಸಿದ್ದು ನಮ್ಮ ಸಂಬಂಧಿಕರು ತಮ್ಮ ಊರಿಗೆ ನನ್ನ ತಾಯಿ ಹಾಗೂ ಚಿಗವ್ವ ರವರು ಬಂದಿರುವದಿಲ್ಲ ಅಂತ ತಿಳಿಸಿದ್ದು, ನನ್ನ ತಾಯಿ ರೇಣುಕಾ ಇವರು ತೆಳ್ಳನೆ ಮೈಕಟ್ಟು,ಕಪ್ಪು ಬಣ್ಣ, ಉದ್ದನೆಯ ಮೂಗು,ಕಪ್ಪು ಕೂದಲು ಹೊಂದಿದ್ದು, ಸುಮಾರು 5.0 ಫೀಟ್ ಎತ್ತರ ಇದ್ದು, ಇಲಕಲ್ಲ ದಡಿಯ ಗಾಡ ಹಸಿರು ಮತ್ತು ಕೆಂಪು ಬಣ್ಣದ ಸೀರೆ, ಗುಲಾಬಿ ಬಣ್ಣದ ಜಂಪರ್ ಧರಿಸಿದ್ದು. ಕನ್ನಡ  ಭಾಷೆ ಮಾತನಾಡುತ್ತಿದ್ದು, ಓದಲು, ಬರೆಯಲು ಬರುವದಿಲ್ಲ. ನನ್ನ ಚಿಗವ್ವ ಹಣಮವ್ವಳು ದಪ್ಪನೆಯ ಮೈಕಟ್ಟು, ಕಪ್ಪು ಬಣ್ಣ,ದುಂಡು ಮುಖ,ನೆಟ್ಟನೆಯ ಮೂಗು,ಕಪ್ಪು ಬಣ್ಣದ ಕೂದಲು ಹೊಂದಿದ್ದು ಎತ್ತರ ಸುಮಾರು 4.10 ಪೀಟ್ ಹೊಂದಿದ್ದು. ಹಸಿರು ಬಣ್ಣದ ಸೀರೆ ಹಾಗೂ ಗಾಡ ಹಳದಿ ಬಣ್ಣದ ಜಂಪರ್ ಧರಿಸಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ. ಓದಲು ಬರೆಯಲು ಬರುವದಿಲ್ಲ. ನನ್ನ ತಾಯಿ ರೇಣುಕಾ ಗಂಡ ಯಲ್ಲಪ್ಪ ಗೋಜಗೆರ ವ-50 ವರ್ಷ ಉ-ಮನೆಗೆಲಸ ಹಾಗೂ ನನ್ನ ಚಿಗವ್ವ ಹಣಮವ್ವ ಗಂಡ ಸೋಮಪ್ಪ ಗೋಜಗೆರ ವ-35 ವರ್ಷ ಉ-ಕೂಲಿಕೆಲಸ ಇವರುಗಳು ದಿನಾಂಕ 10.01.2021 ರಂದು ಮದ್ಯಾಹ್ನ 2:30 ಗಂಟೆಗೆ ನನ್ನ ತಾಯಿಯ ಮನೆಯಿಂದ ಉಪಚಾರಕ್ಕಾಗಿ ಸಿಂಧನೂರ ಆಸ್ಪತ್ರೆಗೆ ಹೋಗಿ ಬರುತ್ತೇವೆ ಅಂತ ಹೇಳಿ ಹೋದವರು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವದಿಲ.್ಲ ಮತ್ತು ನಾವು ಹುಡುಕಾಡಿದರೂ ಇಲ್ಲಿಯವರೆಗೂ ಸಿಕ್ಕಿರುವದಿಲ್ಲ, ಕಾಣೆಯಾದ ನನ್ನ ತಾಯಿ ಹಾಗೂ ಚಿಗವ್ವ ರವರನ್ನು ಪತ್ತೆ ಮಾಡಿ ಕೊಡಬೇಕು ಅಂತಾ ಪಿರ್ಯಾಧಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:01/2021 ಕಲಂ: ಮಹಿಳೆಯರು ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 02/2021 ಕಲಂ:143, 147, 148, 323, 324, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 12.01.2021 ರಂದು ಮದ್ಯಾಹ್ನ 1:00 ಗಂಟೆಗೆ ಫಿಯರ್ಾದಿ ಶ್ರೀ ದ್ಯಾವಪ್ಪ ತಂದೆ ಹುಲಗಪ್ಪ ಜೋಗಂಡಬಾವಿ  ವ:55 ವರ್ಷ ಜಾ: ಹಿಂದೂ ಕುರುಬರ ಉ: ಒಕ್ಕಲುತನ ಸಾ: ಕಡದರಾಳ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿಯನ್ನು ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಯವರಿಗೆ ನಾನು ನಿಂಗಪ್ಪ, ಮಲ್ಲಣ್ಣ, ಪರಸಪ್ಪ ಅಂತ ನಾಲ್ಕು ಜನ ಗಂಡು ಮಕ್ಕಳಿದ್ದು ನಾವು ನಾಲ್ಕು ಜನರದು ಮದುವೆಯಾಗಿದ್ದು, ನಮ್ಮ ತಂದೆ ತಾಯಿಯವರು ನಮ್ಮ ಮದುವೆಯಾದ ನಂತರ ಸುಮಾರು 20 ವರ್ಷಗಳ ಹಿಂದೆ ಸತ್ತಿದ್ದು ನಂತರ ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಬೇರೆಬೇರೆಯಾಗಿದ್ದು ನಮ್ಮ ತಂದೆಯವರು ಕಟ್ಟಿದ ಹಳೆ ಮನೆಯಲ್ಲಿ ನಮ್ಮ ತಮ್ಮಂದಿರಾದ ಮಲ್ಲಣ್ಣ ಮತ್ತು ಪರಸಪ್ಪ ರವರು ಇದ್ದು ನನಗೆ ಹಳೆ ಮನೆಯಲ್ಲಿ ವಾಸಿಸಲು ಜಾಗ ಬರದೇ ಇದ್ದುದರಿಂದ ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಕೂಡಿ ಇರುವ ವೇಳೆಯಲ್ಲಿ ನಮ್ಮೂರ ಮುಖ್ಯ ರಸ್ತೆಗೆ ಹೊಂದಿ ಒಂದು ಖುಲ್ಲಾ ಜಾಗೆಯನ್ನು ತೆಗೆದುಕೊಂಡಿದ್ದು ಆ ಜಾಗೆಯಲ್ಲಿ ನಾನು ಈಗ 10 ವರ್ಷಗಳ ಹಿಂದೆ ಮನೆಯನ್ನು ಕಟ್ಟಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ಇಲ್ಲಿಯವರೆಗೆ ನನ್ನ ತಮ್ಮಂದಿರಾದ ಮಲ್ಲಣ್ಣ ಮತ್ತು ಪರಸಪ್ಪ ರವರು ಸುಮ್ಮನೆ ಇದ್ದು ಈಗ 3-4 ದಿನಗಳಿಂದ ಅವರ ಬೀಗರಾದ ಹಣಮಂತ್ರಾಯ ತಂದೆ ಹುಲಗಪ್ಪ ಕುರಿಯರ ಹಾಗೂ ಪರಸಪ್ಪ ತಂದೆ ಹಣಮಂತ್ರಾಯ ಕುರಿಯರ ಇವರ ಮಾತನ್ನು ಕೇಳಿ ನನ್ನ ತಮ್ಮಂದಿರು ನನಗೆ ಸೂಳೆ ಮಗನೇ ನಮ್ಮ ಪಾಲಿಗೆ ಬರುವ ಜಾಗೆಯಲ್ಲಿ ನೀನು ಮನೆ ಕಟ್ಟಿದಿ ಮನೆ ಕಟ್ಟುವಾಗ ನಮಗೆ ತಿಳಿಸಿರುವದಿಲ್ಲ, ಅಂತ ಮನೆ ತನಕ ಬಂದು ಬೈದಾಡುವದು ಮಾಡಹತ್ತಿದ್ದು ನಾನು ನನ್ನ ತಮ್ಮಂದಿರಿಗೆ ನೀವು ಹಳೆ ಮನೆಯಲ್ಲಿ ಇದ್ದುದರಿಂದ ನಿಮಗೆ ಹೇಳಿಯೇ ನಾನು ಮನೆ ಕಟ್ಟಿಕೊಂಡಿರುತ್ತೇನೆ ಅಂತ ಹೇಳಿದರೂ ಕೂಡಾ ಅವರು ನನ್ನ ಮೇಲೆ ಸಿಟ್ಟಾಗಿ ನೀನು ಕಟ್ಟಿದ ಮನೆಯನ್ನು ನಮಗೆ ಬಿಟ್ಟು ಕೊಡಬೇಕು ಅಂತ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ.ಹೀಗಿರುವಾಗ ಇಂದು ದಿನಾಂಕ 12.01.2021 ರಂದು ಮುಂಜಾನೆ 07:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಕುಳಿತಿದ್ದಾಗ ನನ್ನ ತಮ್ಮಂದಿರಾದ 1)ಮಲ್ಲಣ್ಣ ತಂದೆ ಹುಲಗಪ್ಪ ಜೋಗಂಡಬಾವಿ 2)ಪರಸಪ್ಪ ತಂದೆ ಹುಲಗಪ್ಪ ಜೋಗಂಡಬಾವಿ ಹಾಗೂ ನನ್ನ ತಮ್ಮಂದಿರ ಹೆಂಡತಿಯರಾದ 3)ಹುಲಗವ್ವ ಗಂಡ ಪರಸಪ್ಪ ಜೋಗಂಡಬಾವಿ 4) ನಿಂಗಮ್ಮ ಗಂಡ ಮಲ್ಲಣ್ಣ ಜೋಗಂಡಬಾವಿ ಹಾಗೂ ನನಗೆ ಅಳಿಯನಾಗಬೇಕಾದ 5) ಹಣಮಂತ್ರಾಯ ತಂದೆ ಹುಲಗಪ್ಪ ಕುರಿಯರ ಮತ್ತು ಇವರ ಮಗನಾದ 6) ಪರಸಪ್ಪ ತಂದೆ ಹಣಮಂತ್ರಾಯ ಕುರಿಯರ ಇವರೆಲ್ಲರೂ ಗುಂಪಾಗಿ ನಾನು ಕುಳಿತಲ್ಲಿಗೆ ನಮ್ಮ ಮನೆಯ ಮುಂದೆ ಬಂದು ನನಗೆ ಸೂಳೆ ಮಗನೇ ದ್ಯಾವ್ಯಾ ನಿನ್ನ ಸೊಕ್ಕು ಬಾಳ ಆಗಿದೆ ನಮ್ಮ ಜಾಗೆಯಲ್ಲಿ ನೀನು ಮನೆ ಕಟ್ಟಿದಿ, ನಿನ್ನ ಮನೆಯನ್ನು ನಮಗೆ ಬಿಡಬೇಕು ಇಲ್ಲದಿದ್ದರೆ ನಿನಗೆ ಸುಮ್ಮನೇ ಬಿಡುವದಿಲ್ಲ ಅಂತ ಒದರಾಡ ಹತ್ತಿದ್ದು ಆಗ ನಾನು ಅವರಿಗೆ ನೀವು ಹಳೆಯ ಮನೆಯಲ್ಲಿ ಇದ್ದಿರಿ ನಾನು ದುಡಿದು ನನ್ನ ಹಣದಲ್ಲಿ ಮನೆ ಕಟ್ಟಿಕೊಂಡಿದ್ದೇನೆ ಅಂತ ಅನ್ನುತ್ತಿರುವಾಗಲೇ ನನ್ನ ತಮ್ಮ ಮಲ್ಲಣ್ಣ ತಂದೆ ಹುಲಗಪ್ಪ ಇತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ಜೋರಾಗಿ ನನ್ನ ಹಣೆಯ ಬಲಬಾಜುವಿಗೆ ತಲೆಯ ಮುಂಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ಹಣಮಂತ್ರಾಯ ತಂದೆ ಹುಲಗಪ್ಪ ಕುರಿಯರ ಇತನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಕಂದುಗಟ್ಟಿದ ಗಾಯ ಮಾಡಿದ್ದು ಪರಸಪ್ಪ ತಂದೆ ಹುಲಗಪ್ಪ ಜೋಗಂಡಬಾವಿ, ಪರಸಪ್ಪ ತಂದೆ ಹಣಮಂತ್ರಾಯ ಕುರಿಯರ ಇವರುಗಳು ನನಗೆ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿದ್ದು ನಾನು ನೆಲಕ್ಕೆ ಬಿದ್ದಾಗ ಇಬ್ಬರು ನನ್ನ ಮೈಮೇಲೆಲ್ಲಾ ಒದ್ದು ತುಳಿದು ಗುಪ್ತಗಾಯ ಮಾಡಿದ್ದು ಆಗ ನಾನು ಚೀರಾಡ ಹತ್ತಿದಾಗ ಬಿಡಿಸಲು ಬಂದ ನನ್ನ ಹೆಂಡತಿ ಅಕ್ಕಮ್ಮ ರವರಿಗೆ ಹುಲಗವ್ವ ಗಂಡ ಪರಸಪ್ಪ ಜೋಗಂಡಬಾವಿ ಮತ್ತು ನಿಂಗಮ್ಮ ಗಂಡ ಮಲ್ಲಣ್ಣ ಜೋಗಂಡಬಾವಿ ಇಬ್ಬರೂ ಸೂಳೆ ಬಿಡಿಸಲಿಕ್ಕೆ ಬಂದಿಯಾ ಅಂತ ಬೈದು ಹುಲಗವ್ವಳು ಕೈಯಿಂದ ನನ್ನ ಎಡಕಪಾಳದ ಮೇಲೆ ಹೊಡೆದಿದ್ದು ನಿಂಗಮ್ಮಳು ಕೈ ಮುಷ್ಠಿ ಮಾಡಿ ನನ್ನ ಬೆನ್ನಿನ ಮೇಲೆ ಗುದ್ದಿ ಒಳಪೆಟ್ಟು ಮಾಡಿದ್ದು ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಚೀರಾಡಲು ದಾರಿಯ ಮೇಲಿಂದ ಹೋಗುತ್ತಿದ್ದ ನಮ್ಮೂರ ಬಸಣ್ಣ ತಂದೆ ಜಟ್ಟೆಪ್ಪ ಮೆಟ್ಟಿನವರ, ನಿಂಗಪ್ಪ ತಂದೆ ನರಸಪ್ಪ ಕಕ್ಕೇರಾ, ಅಂಬ್ರೇಶ ಸಿದ್ದಾಪೂರ ರವರು ಬಂದು ನೋಡಿ ನಮಗೆ ಹೊಡೆಯುವದನ್ನು ಬಿಡಿಸಿದ್ದು ಇವರು ಬಂದು ಬಿಡಿಸದಿದ್ದರೆ ಅವರೆಲ್ಲರೂ ನಮಗೆ ಇನ್ನೂ ಹೊಡೆಯುತ್ತಿದ್ದರು. ಹೋಗುವಾಗ ಮೇಲೆ ನಮೂದಿಸಿದ 6 ಜನರು ಸೂಳೆ ಮಕ್ಕಳೇ ಇವತ್ತು ನಮ್ಮ ಕೈಯಲ್ಲಿ ಉಳಿದಿದ್ದಿರಿ ಇನ್ನೊಂದು ಸಲ ಸಿಕ್ಕಾಗ ನಿಮಗೆ ಜೀವಂತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ಈ ಘಟನೆಯಲ್ಲಿ ನನ್ನ ಹೆಂಡತಿಗೆ ಅಷ್ಟೇನೂ ಪೆಟ್ಟಾಗಿರುವದಿಲ್ಲ, ಆಸ್ಪತ್ರೆಗೆ ಉಪಚಾರಕ್ಕಾಗಿ ಹೋಗುವದಿಲ್ಲ ನನಗೆ ಉಪಚಾರಕ್ಕೆ ಕಳುಹಿಸಿ ಕೊಡಬೇಕು ಹಾಗೂ ನನಗೆ ಮತ್ತು ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 6 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ  ಪಿರ್ಯಾಧಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:02/2021 ಕಲಂ: 143, 147, 148, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 03/2021 ಕಲಂ: 143, 147, 148, 341, 323, 324, 504, 506, ಸಂಗಡ 149 ಐಪಿಸಿ : ಇಂದು ದಿನಾಂಕ:12.01.2021 ರಂದು ಸಾಯಂಕಾಲ 4:00  ಗಂಟೆಗೆ  ಪಿರ್ಯಾಧಿ ಶ್ರೀ ಬಸವರಾಜ ತಂದೆ ಹಣಮಂತ್ರಾಯ ಕುರಿ ವ||32ವರ್ಷ ಜಾ||ಹಿಂದೂ ಕುರುಬರ ಉ||ಒಕ್ಕಲುತನ ಸಾ||ಕಡದರಾಳ ತಾ|| ಹುಣಸಗಿ ಜಿ|| ಯಾದಗಿರಿಇವರು ಠಾಣೆಗೆ ತನ್ನ ಹೇಳಿಕೆ ಫಿಯರ್ಾದಿಯನ್ನು ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೇಂದರೆ ನಮ್ಮ ತಂದೆ ತಾಯಿಯವರಿಗೆ ಪರಸಪ್ಪ, ನಾನು ಮತ್ತು ನಿಂಗಣ್ಣ ಅಂತ ಮೂರು ಜನ ಗಂಡು ಮಕ್ಕಳು ಹಾಗೂ ಹುಲಗಮ್ಮ, ವಿಜಯಲಕ್ಷ್ಮೀ ಅಂತ ಇಬ್ಬರು ಹೆಣ್ಣು ಮಕ್ಕಳಿದ್ದು ನನ್ನದು ಮತ್ತು ಅಣ್ಣ ಪರಸಪ್ಪ ರವರದು ಮದುವೆಯಾಗಿದ್ದು ಹಾಗೂ ನನ್ನ ತಂಗಿಯರಾದ ಹುಲಗಮ್ಮ,ವಿಜಯಲಕ್ಷ್ಮೀ ರವರದ್ದು ಮದುವೆಯಾಗಿದ್ದು ತಂಗಿ ಹುಲಗಮ್ಮಳಿಗೆ ನಮ್ಮೂರಲ್ಲಿಯೇ ಪರಸಪ್ಪ ತಂದೆ ಹುಲಗಪ್ಪ ರವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಮ್ಮ ಮಾವ ಪರಸಪ್ಪ ರವರು 4 ಜನ ಅಣ್ಣ ತಮ್ಮಂದಿರಿದ್ದು 4 ಜನರು ಬೇರೆಬೇರೆಯಾಗಿದ್ದು ಅವರು 4 ಜನ ಅಣ್ಣತಮ್ಮಂದಿರಲ್ಲಿ ನನ್ನ ತಂಗಿ ಹುಲಗಮ್ಮಳ ಗಂಡನಾದ ಪರಸಪ್ಪನಿಗೆ ನಮ್ಮೂರ ಮುಖ್ಯ ರಸ್ತೆಗೆ ಹೊಂದಿ ಒಂದು ಖುಲ್ಲಾ ಜಾಗ ಅವನ ಪಾಲಿಗೆ ಬಂದಿದ್ದು ನನ್ನ ಮಾವನ ಪಾಲಿಗೆ ಬಂದ ಖುಲ್ಲ ಜಾಗೆಯಲ್ಲಿ ಅವನ ಅಣ್ಣನಾದ ದ್ಯಾವಪ್ಪನು ಈಗ 10 ವರ್ಷಗಳ ಹಿಂದೆ ಮಾವ ಪರಸಪ್ಪನಿಗೆ ಹಾಗೂ ಯಾರಿಗೂ ಹೇಳದೆ ಮನೆಯನ್ನು ಕಟ್ಟಿಕೊಂಡಿದ್ದು ನಮ್ಮ ಮಾವ ಪರಸಪ್ಪನು ತನ್ನ ಅಣ್ಣ ದ್ಯಾವಪ್ಪನಿಗೆ ನನ್ನ ಜಾಗೆಯಲ್ಲಿ ಯಾಕೆ ಮನೆ ಕಟ್ಟಿದಿ ಅಂತ ಕೇಳಿದ್ದಕ್ಕೆ ನನ್ನ ಮಾವ ಪರಸಪ್ಪನ ಮೇಲೆ ಹಾಗೂ ನಮ್ಮ ಮೇಲೆ ದ್ಯಾವಪ್ಪನು ಈಗ ಕೆಲ ದಿನಗಳಿಂದ ಸಿಟ್ಟಾಗಿ ಬೈದಾಡುತ್ತಾ ತಿರುಗಾಡುತ್ತಿದ್ದು ನಾವು ಅವನಿಗೆ ಯಾಕೆಬೈದಾಡುತ್ತಾ ತಿರುಗಾಡುತ್ತೀ ಅಂತ ಅಂದರೆ ಆ ಜಾಗ ನನ್ನದು ಇರುತ್ತದೆ ಅಂತ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ.ಹೀಗಿರುವಾಗ ಇಂದು ದಿನಾಂಕ 12.01.2021 ರಂದು ಮುಂಜಾನೆ 08:00 ಗಂಟೆಯ ಸುಮಾರಿಗೆ ನಾನು ನನ್ನ ಮಾವ ಪರಸಪ್ಪನ ಜಾಗೆಯಲ್ಲಿ ಮನೆ ಕಟ್ಟಿದ ದ್ಯಾವಪ್ಪನ ಮನೆಯ ಪಕ್ಕದಲ್ಲಿಯ ರಸ್ತೆಯಯ ಮೇಲಿಂದ ನಡೆದುಕೊಂಡು ಹೋಗುತ್ತಿರುವಾಗ ದ್ಯಾವಪ್ಪನ ಮನೆಯ ಮುಂದೆ 1) ದ್ಯಾವಪ್ಪ ತಂದೆ ಹುಲಗಪ್ಪ ಜೋಗಂಡಬಾವಿ ಹಾಗೂ ಆತನ ಹೆಂಡತಿಯಾದ 2) ಅಕ್ಕಮ್ಮ ಗಂಡ ದ್ಯಾವಪ್ಪ ಜೋಗಂಡಬಾವಿ ಹಾಗೂ ಕೊಟೆಗುಡ್ಡ ಗ್ರಾಮದ ದ್ಯಾವಪ್ಪನ ಮಗಳಾದ 3) ರೇಣಮ್ಮ ಗಂಡ ಸಿದ್ದಪ್ಪ ಹೀರೆಕುರುಬರ ಮತ್ತು ಈಕೆಯ ಗಂಡನಾದ 4) ಸಿದ್ದಪ್ಪ ತಂದೆ ನಿಂಗಪ್ಪ ಹೀರೆಕುರುಬರ ಸಾ:ಕೊಟೆಗುಡ್ಡ ಮತ್ತು ಬೂದಿಹಾಳ ಗ್ರಾಮದ 5) ಬಸಣ್ಣ ತಂದೆ ಮಲ್ಲಣ್ಣ ಚಿನ್ನಾಕರ ಹಾಗೂ 6) ಬೀರಪ್ಪ ತಂದೆ ಬಸಣ್ಣ ಚಿನ್ನಾಕರ ಇವರೆಲ್ಲರೂ ಕುಳಿತಿದ್ದು ನನ್ನನ್ನು ನೋಡಿದವರೆ ಇವರೆಲ್ಲರೂ ನನ್ನ ಹತ್ತಿರ ಬಂದವರೇ ನನಗೆ ತಡೆದು ನಿಲ್ಲಿಸಿ ಬೋಸಡಿ ಮಗನೇ ನಾವು ನಾವು ಅಣ್ಣ ತಮ್ಮಂದಿರು ಇದ್ದು ನೀನು ನಿನ್ನ ಮಾವ ಪರಸಪ್ಪನ ಜಾಗೆಯಲ್ಲಿ ನಾವು ಮನೆ ಕಟ್ಟಿದ್ದೇವೆ ಅಂತ ಪದೆಪದೆ ನಿಮ್ಮ ಮಾವನ ಜೊತೆ ಬಂದು ನಮ್ಮೊಂದಿಗೆ ತಕರಾರು ಮಾಡಿತ್ತೀರಿ ಸೂಳೆ ಮಗನೇ ಇವತ್ತು ನಿನೊಬ್ಬನೇ ನಮ್ಮ ಕೈಯಲ್ಲಿ ಸಿಕ್ಕಿದಿ ಇವತ್ತು ನಿನಗೆ ಬಿಡುವದಿಲ್ಲ ಅಂತ ಬೈದವರೇ ಅವರಲ್ಲಿಯ ದ್ಯಾವಪ್ಪ ತಂದೆ ಹುಲಗಪ್ಪ ಜೋಗಂಡಬಾವಿ ಇತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿನ ಮೇಲೆ ಮತ್ತು ಬಲಗಾಲ ತೊಡೆಯ ಮೇಲೆ ಹೊಡೆದು ಕಂದುಗಟ್ಟಿದ ಗಾಯ ಮಾಡಿದ್ದು ಬಸಣ್ಣ ತಂದೆ ಮಲ್ಲಪ್ಪ ಚಿನ್ನಾಕರ ಇತನು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಜೋರಾಗಿ ಬಿಸಿದ್ದು ನಾನು ಅದರಿಂದ ತಪ್ಪಿಸಿಕೊಂಡಿದ್ದು, ಸಿದ್ದಪ್ಪ ತಂದೆ ನಿಂಗಪ್ಪ ಹೀರೆಕುರುಬರ ಹಾಗೂ ಬೀರಪ್ಪ ತಂದೆ ಬಸಣ್ಣ ಚಿನ್ನಾಕರ ಇವರುಗಳು ನನ್ನ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿದ್ದು ನಾನು ನೆಲದ ಮೇಲೆ ಬಿದ್ದಾಗ ಅಕ್ಕಮ್ಮ ಗಂಡ ದ್ಯಾವಪ್ಪ ಮತ್ತು ರೇಣಮ್ಮ ಗಂಡ ಸಿದ್ದಪ್ಪ ಹೀರೆಕುರುಬರ ಇವರುಗಳು ನನ್ನ ಎದೆಯ ಮೇಲೆ ಹೊಟ್ಟೆಯ ಮೇಲೆ ಕಾಲಿನಿಂದ ಒದ್ದು ತುಳಿದು ಗುಪ್ತಗಾಯ ಪಡಿಸಿದ್ದು ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತ ಚೀರಾಡಲು ಅಲ್ಲಿಂದಲೇ ದಾರಿಯ ಮೇಲೆ ಹೋಗುತ್ತಿದ್ದ ನಮ್ಮೂರ ನಿಂಗಪ್ಪ ತಂದೆ ಕವಡೆಪ್ಪ ಜೋಗಂಡಬಾವಿ, ನೀಲಪ್ಪ ತಂದೆ ಮಾಳಪ್ಪ ಹೀರೆಕುರುಬರ, ದಂಡಪ್ಪ ತಂದೆ ಜುಮ್ಮಣ್ಣ ಮೇಟಿ, ಪರಸಪ್ಪ ತಂದೆ ತಿಪ್ಪಣ್ಣ ಹರಿಜನ ಇವರುಗಳು ಬಂದು ನೋಡಿ ಬಿಡಿಸಿದ್ದು ಹೋಗುವಾಗ ಅವರೆಲ್ಲರೂ ಸೂಳೆ ಮಗನೇ ಬಸ್ಯಾ ಇವತ್ತು ನಮ್ಮ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ನಾನು ನನ್ನ ಸಂಬಂಧಿಕರೊಂದಿಗೆ ಈ ಬಗ್ಗೆ ವಿಚಾರ ಮಾಡಿ ತಡವಾಗಿ ಈಗ ಬಂದು ದೂರು ಕೊಡುತ್ತಿದ್ದು ಕಾರಣ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 6 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.03/2021 ಕಲಂ:143, 147, 148, 341, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.  


ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 04/2021 ಕಲಂ: 363 ಐಪಿಸಿ : ಇಂದು ದಿನಾಂಕ:12.01.2021 ರಂದು ರಾತ್ರಿ 10:00  ಗಂಟೆಗೆ  ಪಿರ್ಯಾದಿ ಶ್ರೀ ತಿರುಪತಿ ತಂದೆ ಶಟ್ಟೆಪ್ಪ ರಾಠೋಡ ವ||31ವರ್ಷ ಜಾ||ಹಿಂದೂ ಲಂಬಾಣಿ ಉ||ಒಕ್ಕಲುತನ ಸಾ||ಗೆದ್ದಲಮರಿ ತಾಂಡಾ ತಾ|| ಹುಣಸಗಿ ಜಿ|| ಯಾದಗಿರಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಫಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೇಂದರೆ ನಮ್ಮ ತಂದೆ ತಾಯಿಗೆ ನಾನು, ಲಕ್ಷ್ಮಣ, ಮಂಗಲಾಬಾಯಿ ಅಂತ ಮೂರು ಜನ ಮಕ್ಕಳಿದ್ದು ನಮ್ಮೆಲ್ಲರದು ಮದುವೆಯಾಗಿದ್ದು ನನ್ನ ತಮ್ಮ ಲಕ್ಷಣನು ತನ್ನ ಕುಟುಂಬದೊಂದಿಗೆ ಬೇರೆ ಮನೆ ಮಾಡಿಕೊಂಡು ಇದ್ದು ನನ್ನ ತಂದೆ ಶಟ್ಟೆಪ್ಪ ತಾಯಿ ದಾನಾಬಾಯಿ ರವರು ನನ್ನ ಸಂಗಡ ಇರುತ್ತಾರೆ. ನನಗೆ ರಾಜೇಶ,ರಾಜೇಶ್ವರಿ,ಸಾಗರ ಅಂತ ಮೂರು ಜನ ಮಕ್ಕಳು ಇರುತ್ತಾರೆ. ಹೀಗಿದ್ದು ನನ್ನ ಹೆಂಡತಿ ನಾಗಮಣಿ ವ:26 ವರ್ಷ ಉ:ಮನೆಗೆಲಸ ಇವರು 2020 ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ನಡೆದ ಗ್ರಾಮ ಪಂಚಾಯತ ಚುಣಾವಣೆಯಲ್ಲಿ ಗೆದ್ದಲಮರಿ ಗ್ರಾಮ ಪಂಚಾಯತದಿಂದ ನಮ್ಮ ತಾಂಡಾದ ವಾರ್ಡ ನಂ 3 ರಿಂದ ಸ್ವತಂತ್ರ ಅಭ್ಯಥರ್ಿಯಾಗಿ ಚುಣಾವಣೆಯಲ್ಲಿ ಸ್ಪಧರ್ಿಸಿ ವಿಜೇತಳಾಗಿದ್ದು ಇರುತ್ತದೆ. ನನ್ನ ತಂದೆ ಶಟ್ಟೆಪ್ಪನು ಇಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನಮ್ಮ ಹೊಲಕ್ಕೆ ಹೋಗಿದ್ದು ನಂತರ ನಾನು ಕೊಡೆಕಲ್ಲದಲ್ಲಿ ಕೆಲಸವಿದ್ದುದರಿಂದ ಕೊಡೆಕಲ್ಲಕ್ಕೆ ಬಂದಿದ್ದು ಮನೆಯಲ್ಲಿ ನನ್ನ ತಾಯಿ ದಾನಾಬಾಯಿ ನನ್ನ ಹೆಂಡತಿ ನಾಗಮಣಿ ಹಾಗೂ ಮಕ್ಕಳಾದ ರಾಜೇಶ, ರಾಜೇಶ್ವರಿ, ಸಾಗರ ರವರು ಇದ್ದು, ನಂತರ ನಾನು ಇಂದು ದಿನಾಂಕ 12.01.2021 ರಂದು ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ಕೊಡೆಕಲ್ಲದಲ್ಲಿದ್ದಾಗ ನನ್ನ ತಾಯಿ ದಾನಾಬಾಯಿಯು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ಈಗ ಸ್ವಲ್ಪ ಹೊತ್ತಿನ ಹಿಂದೆ ಮದ್ಯಾಹ್ನ 12:30 ಗಂಟೆಯ ಸುಮಾರಿಗೆ ನಮ್ಮ ತಾಂಡಾದ ಕೃಷ್ಣ ತಂದೆ ಹಣಮಂತ ಜಾಧವ ಹಾಗೂ ಬಸವರಾಜ @ ಗುಂಡಪ್ಪ ತಂದೆ ಕೃಷ್ಣಪ್ಪ ಜಾಧವ ಮತ್ತು ಶಾಂತಿಲಾಲ ತಂದೆ ಸಕ್ರೆಪ್ಪ ಪವಾರ ಇವರು ಬಂದು ನಿನ್ನ ಹೆಂಡತಿ ನಾಗಮಣಿಗೆ ಮತ್ತು ಮೊಮ್ಮಕ್ಕಳಾದ ರಾಜೇಶ ಹಾಗೂ ಸಾಗರ ರವರಿಗೆ ಒತ್ತಾಯ ಪೂರ್ವಕವಾಗಿ ಸೈಕಲ್ ಮೋಟರಗಳ ಮೇಲೆ ಕೂಡಿಸಿಕೊಂಡು ಹೋಗ ಹತ್ತಿದ್ದು ಆಗ ನಿನ್ನ ಹೆಂಡತಿ ನಾಗಮಣಿಯು ಯಾಕೆ ನನ್ನನ್ನು ಕರೆದುಕೊಂಡು ಹೋಗುತ್ತೀದ್ದಿರಿ ಅಂತ ಅಂದರೂ ಕೂಡ ಅವರು ಒತ್ತಯ ಪೂರ್ವಕವಾಗಿ ಮೋಟರ್ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗಿದ್ದಾಗಿ ಮತ್ತು ಈ ವೇಳೆ ನಿನ್ನ ತಮ್ಮ ಲಕ್ಷ್ಮಣ ಹಾಗೂ ನಿಮ್ಮ ಕಾಕ ಹೇಮಲಪ್ಪ ಮತ್ತು ನಮ್ಮ ತಾಂಡಾದ ವೆಂಕಟೇಶ ತಂದೆ ಹೇಮಲಪ್ಪ ಜಾಧವ ರವರು ಇದ್ದು ನಾವೆಲ್ಲರು ಅವರಿಗೆ ಎಷ್ಟೇ ಹೇಳಿದರೂ ಕೂಡ ಬಿಡದೆ ನಿನ್ನ ಹೆಂಡತಿ ಮತ್ತು ಮಕ್ಕಳಿಗೆ ಒತ್ತಾಯ ಪೂರ್ವಕವಾಗಿ ಸೈಕಲ್ ಮೋಟರಗಳ ಮೇಲೆ ಕೂಡಿಸಿಕೊಂಡು ಹೋಗ ಹತ್ತಿದ್ದು ಆಗ ನಿನ್ನ ಹೆಂಡತಿ ನಾಗಮಣಿಯನ್ನು ಹಾಗೂ ನಿನ್ನ ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದು ನಾವು ಅವರು ತಂದ ಮೋಟರ್ ಸೈಕಲಗಳ ನಂಬರ ನೋಡಿರುವದಿಲ್ಲ. ಮೋಟರ್ ಸೈಕಲ್ ನೋಡಿದರೆ ಗುರುತಿಸುತ್ತೇವೆ ಅಂತ ತಿಳಿಸಿದ್ದು ಕೂಡಲೇ ನಾನು ಕೊಡೆಕಲ್ಲದಿಂದ ನಮ್ಮ ತಾಂಡಾಕ್ಕೆ ಹೋಗಿ ನನ್ನ ತಾಯಿಗೆ ವಿಚಾರಿಸಲಾಗಿ ಪೋನಿನಲ್ಲಿ ತಿಳಿಸಿದಂತೆ ಹೇಳಿದ್ದು ನಮ್ಮ ತಾಂಡಾದ ಕೃಷ್ಣ ತಂದೆ ಹಣಮಂತ ಜಾಧವ ಹಾಗೂ ಬಸವರಾಜ @ ಗುಂಡಪ್ಪ ತಂದೆ ಕೃಷ್ಣಪ್ಪ ಜಾಧವ ಮತ್ತು ಶಾಂತಿಲಾಲ ತಂದೆ ಸಕ್ರೆಪ್ಪ ಪವಾರ ಇವರುಗಳು ಮುಂದೆ ನಡೆಯುವ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆಯಲ್ಲಿ ನನ್ನ ಹೆಂಡತಿಯನ್ನು ಆಯ್ಕೆ ಮಾಡುವ ಸಲುವಾಗಿ ಬೆಂಬಲಿಸಬೇಕು ಅಂತ ಉದ್ದೇಶದಿಂದ ನನ್ನ ಹೆಂಡತಿಗೆ ಹಾಗೂ ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದು ಅಪಹರಣವಾದ ನನ್ನ ಹೆಂಡತಿ ನಾಗಮಣಿಯ ವಯ:26 ವರ್ಷ ಹಾಗೂ ನನ್ನ ಮಕ್ಕಳಾದ ರಾಜೇಶನ ವಯ:5 ವರ್ಷ 6 ತಿಂಗಳು, ಸಾಗರನ ವಯ:3 ವರ್ಷ ಇದ್ದು ಅಪಹರಣಕ್ಕೊಳಗಾದ ನನ್ನ ಹೆಂಡತಿ ಮತ್ತು ಮಕ್ಕಳನ್ನು ಪತ್ತೆ ಮಾಡಿ ಕೊಡಬೇಕು ಹಾಗೂ ಇವರನ್ನು ಅಪಹರಿಸಿಕೊಂಡು ಹೋದ ಕೃಷ್ಣ, ಬಸವರಾಜ @ ಗುಂಡಪ್ಪ ಮತ್ತು ಶಾಂತಿಲಾಲ ಪವಾರ ಇವರ ಮೇಲೆ ಸೂಕ್ತ ಕಾನೂನು ಕ್ರಮ  ಜರುಗಿಸಲು ವಿನಂತಿ.ಅಂತ ಫಿಯರ್ಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.04/2021 ಕಲಂ:363 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.


ಶಹಪೂರ ಪೊಲೀಸ ಠಾಣೆ ಗುನ್ನೆ ನಂ:- 10/2021 ಕಲಂ  ಕಲಂ. 143, 147 148, 447 323, 324, 504, 506 ಸಂಗಡ 149 ಐ.ಪಿ.ಸಿ. : ಇಂದು ದಿನಾಂಕ: 12-01-2021 ರಂದು ಮುಂಜಾನೆ 11:00 ಎ.ಎಮ್.ಕ್ಕೆ ಕಲಬುರಗಿಯ ಸರಕಾರಿ ಆಸ್ಪತ್ರೆಗೆ ಎಮ್.ಎಲ್.ಸಿ. ವಿಚಾರಣೆಗೆ ಹೋಗಿದ್ದ ಶ್ರೀ ಕಾಶಿನಾಥ ಹೆಚ್.ಸಿ. 48 ರವರು 8:15 ಪಿ.ಎಮ್.ಕ್ಕೆ ಠಾಣೆಗೆ ಬಂದು ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಮಲ್ಲಾರೆಡ್ಡಿ ತಂದೆ ಸಿದ್ರಾಮರೆಡ್ಡಿ ಯಾಳವಾರ ವ||66 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಹಬ್ಬಳ್ಳಿ ತಾ|| ಶಹಾಪೂರ ರವರ ನೀಡಿದ ಹೆಳಿಕೆ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಏನಂದರೆ ನಮ್ಮ ತಂದೆ ತಾಯಿಯರಿಗೆ 3 ಜನ ಮಕ್ಕಳಿದ್ದು ನಾನು ಹಿರಿಯವನಾಗಿದ್ದು 2 ನೇಯವನು ಪಂಪಾರೆಡ್ಡಿ ಮತ್ತು 3 ನೇಯವನು ಚೆನ್ನಾರೆಡ್ಡಿ ಇದ್ದು ನಾವು 15 ವರ್ಷಗಳ ಹಿಂದೆ ಬೇರೆಯಾಗಿ ಆಸ್ತಿಯನ್ನು ಪಾಲು ಮಾಡಿಕೊಂಡಿದ್ದೇವೆ. ಪಂಪಾರೆಡ್ಡಿ ಇತನು ತನ್ನ ಪಾಲಿಗೆ ಬಂದ 09 ಎಕರೆ 19 ಗುಂಟೆ ಆಸ್ತಿಯಲ್ಲಿ 04 ಎಕರೆ ಚೆನ್ನಾರೆಡ್ಡಿಗೆ ಮತ್ತು ಉಳಿದ 05 ಎಕರೆ 19 ಗುಂಟೆ ಜಮೀನನ್ನು ನಮ್ಮೂರ ಶರಣಪ್ಪ ತಂದೆ ಭೀಮಪ್ಪ ದೋರಿ ಇತನಿಗೆ ಮಾರಾಟ ಮಾಡಿರುತ್ತಾನೆ. ಮತ್ತು ಪಂಪಾರೆಡ್ಡಿಯು 02 ವರ್ಷಗಳ ಹಿಂದೆ ಮೃತಪಟ್ಟಿರುತ್ತಾನೆ. ನಮ್ಮ ತಮ್ಮನ ಹೋಲ ಖರೀದಿಸಿದ ಶರಣಪ್ಪ ದೋರಿ ಮತ್ತು ಅವರ ಮನೆಯವರು 06 ವರ್ಷಗಳ ಹಿಂದಿನಿಂದ ಸಾಗುವಳಿ ಮಾಡುತ್ತಾ ಬಂದಿದ್ದು ನಮ್ಮ ಹೋಲ ಮತ್ತು ಶರಣಪ್ಪನು ಖರೀದಿಸಿದ ಹೋಲದ ಮಧ್ಯೆ ಒಂದು ಬಂದಾರಿ(ಒಡ್ಡು) ಇದ್ದು ಶರಣಪ್ಪ ಮತ್ತು ಅವರ ಮನೆಯವರು ಬಂದಾರಿ ಕಡಿದು ಅವರ ಹೋಲದಲ್ಲಿನ ಮಳೆ ನೀರು ಉದ್ದೇಶಪೂರ್ವಕವಾಗಿ ನಮ್ಮ ಹೋಲದಲ್ಲಿ ಬಿಟ್ಟು ನಮ್ಮ ಬೆಳೆಯು ಹಾಳಾಗುವಂತೆ ಮಾಡುತ್ತಾ ಬಂದಿದ್ದು ಇದೇ ವಿಷಯ 5 ವರ್ಷಗಳ ಹಿಂದೆ ಕೇಳಲು ಹೋದರೆ ನಮ್ಮ ಮೇಲೆ ವಿನಾಃ ಕಾರಣ ಅಟ್ರಾಸಿಟಿ ಕೇಸ ಮಾಡಿದ್ದು ನಾವು ಈಗಲೂ ಯಾದಗಿರಿಯ ಕೋರ್ಟಗೆ ತಿರುಗಾಡುತ್ತೀದ್ದೇವೆ. ಹಿಗಿದ್ದು ನಾನು ನಿನ್ನೆ ದಿನಾಂಕ-11/01/2021 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನಮ್ಮ ಹೋಲಕ್ಕೆ ಹೋಗಿ ಹೋಲವು ತಿರುಗಾಡಿ ನೋಡಿ ಬಾಂದಾರಿಗೆ ಹೋಗಿ ನೋಡಲಾಗಿ ಬಾಂದಾರಿ(ಒಡ್ಡು) ಕಡಿದು ಹಾಳು ಮಾಡಿದ್ದನ್ನು ನೋಡಿ ಮನೆಗೆ ಬಂದು ನಮ್ಮೂರ ದ್ಯಾಮವ್ವನ ಗುಡಿಯ ಹತ್ತೀರ ನಿಂತಿದ್ದೆ ನನ್ನ ಮಗನಾದ ಶರಣಗೌಡನಿಗೆ ನಾನು ಬೈಯುತ್ತಿದ್ದಾಗ ತಮಗೆ ಬೈಯುತ್ತೀದ್ದೇನೆ ಅಂತಾ ತಿಳಿದು ಈರಪ್ಪ ತಂದೆ ಅಯ್ಯಪ್ಪ ದೋರಿ ಇತನು ಏಕಾಏಕಿ ಬಂದು ನನಗೆ ಹೋಡೆದನು .ಅವನು ಹೋಡೆಯುವುದು ನನ್ನ ಮಗನಾದ ಶರಣಗೌಡನು ಬಿಡಿಸಿಕೊಂಡನು. ನಂತರ ನಾನು ಮನೆಗೆ ಹೋಗಿ ಊಟ ಮಾಡಿ ಮತ್ತೆ ಹೋಲಕ್ಕೆ ಹೋದೆನು. ಹೋಲದಲ್ಲಿ ಕೆಲಸ ಮಾಡುತ್ತಿದ್ದಾಗ 1. ಈರಪ್ಪ ತಂದೆ ಅಯ್ಯಪ್ಪ ದೋರಿ 2.ನಾಗರಾಜ ತಂದೆ ಭೀಮಪ್ಪ ದೋರಿ 3.ಅಯ್ಯಪ್ಪ ತಂದೆ ಹೋನ್ನಪ್ಪ ಬಡಿಗೇರ 4.ಭೀಮಪ್ಪ ತಂಧೆ ಹೋನ್ನಪ್ಪ ಬಡಿಗೇರ 5.ಶರಣಪ್ಪ ತಂದೆ ಭೀಮಪ್ಪ ಬಡಿಗೇರ ಇವರೆಲ್ಲರೂ ಕೂಡಿ ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದು ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಏನಲೇ ಮಲ್ಲ್ಯ ಹೋಲದಲ್ಲಿ ಏನು ಕೆಲಸ ಮಾಡುತ್ತಿದ್ದಿ ನಿಮ್ಮ ಹೋಲ ನಾವು ಹಾಳು ಮಾಡುತ್ತೇವೆ ಏನ್ ಮಾಡಿಕೊತ್ತಿದಿ ಬೋಸಡಿ ಮಗನೇ ಅನ್ನುತ್ತಾ ನನ್ನೊಂದಿಗೆ ಜಗಳಕ್ಕೆ ಬಿದ್ದು ನನಗೆ ನೇಲಕ್ಕೆ ಕೆಡವಿ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದರು. ಬಡಿಗೆಯಿಂದ, ಕಲ್ಲಿನಿಂದ ಮತ್ತು ಕೈಯಿಂದ ನನ್ನ ಸೊಂಟಕ್ಕೆ ಕಾಲಿಗೆ ಹೋಡೆದು ಗುಪ್ತಗಾಯ ಮಾಡಿದರು. ನನಗೆ ತಲೆಯಿಂದ ರಕ್ತ ಬಂದ ಕಾರಣ ಅಸ್ವಸ್ಥನಾಗಿ ಸತ್ತೆನೆಪ್ಪೊ ಅಂತಾ ನೇಲಕ್ಕೆ ಬಿದ್ದು ಹೊದ್ದಾಡುತ್ತಿದ್ದಾಗ ನನ್ನ ಮಕ್ಕಳಾದ ಶರಣಗೌಡ ಮತ್ತು ಅಮೀನರೆಡ್ಡಿ ಇವರು ಬಂದು ಜಗಳ ಬಿಡಿಸಿದ್ದು ಇದೊಂದು ಸಲ ಬಿಟ್ಟಿದಿವಿ ಇನ್ನೊಮ್ಮ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬೀಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ನನಗೆ ಹೋಲದಲ್ಲಿ ಹೋಡೆಯುವಾಗ ಅಂದಾಜು ಸಮಯ ಮದ್ಯಾಹ್ನ 01-00 ಗಂಟೆ ಆಗಿತ್ತು ನಾನು ಗಾಯಗೊಂಡು ಬಿದ್ದುದ್ದನ್ನು ನೋಡಿ ನನ್ನ ಮಕ್ಕಳಿಬ್ಬರೂ ಕೂಡಿ ನನಗೆ ಶಹಾಪೂರದ ಸರಕಾರಿ ದವಖಾನೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ಸದ್ಯ ಸ್ವಲ್ಪ ಆರಾಮವಾಗಿರುತ್ತದೆ. ನಿನ್ನೆ ನಾನು ಅಸ್ವಸ್ಥನಾಗಿದ್ದರಿಂದ ಅವಸರದಲ್ಲಿ ಆಸ್ಪತ್ರೆಗೆ ಬಂದಿದ್ದರಿಂದ ದೂರು ನೀಡಲು ಆಗಿರುವದಿಲ್ಲ ಆದ್ದರಿಂದ ಹೋಲದ ವಿಷಯದಲ್ಲಿ ದುರುದ್ದೇಶದಿಂದ ನಮ್ಮೊಂದಿಗೆ ಜಗಳ ಮಾಡಿ ಕೈಯಿಂದ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೋಡೆದು ಗಾಯಗೊಳಿಸಿ ಜೀವದ ಬೇದರಿಕೆ ಹಾಕಿದ ಈರಪ್ಪ, ನಾಗರಾಜ, ಅಯ್ಯಪ್ಪ, ಭೀಮಪ್ಪ ಮತ್ತು ಶರಣಪ್ಪ ಇವರ ಮೇಲೆ ಕೇಸು ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿ ಬರೆಯಿಸಿದ ಹೇಳಿಕೆ ನೀಜವಿರುತ್ತದೆ.  ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 10/2020 ಕಲಂ. 143, 147 148, 447, 323, 324, 504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ  ಪ್ರಕಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು                                                              


ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 03/2021  ಕಲಂ 279,   338 ಐಪಿಸಿ : ನಿನ್ನೆ ದಿನಾಂಕ 11/01/2021 ರಂದು ಮದ್ಯಾಹ್ನ 12 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ  ಬರುವ ಮಾನ್ಯ ಎಸ್.ಪಿ ಸಾಹೇಬರ ಕಾಯರ್ಾಲಯದ ಬಳಿ ಈ ಕೇಸಿನ ಫಿಯರ್ಾದಿಯ ಮಗನಾದ ಗಾಯಾಳು ಅಮೂಲ್ ಈತನು  ತನ್ನ ಟ್ಯೂಷನ್ ತರಗತಿಯಿಂದ ಬಿಟ್ಟು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ಆರೋಪಿತ ಮೋಟಾರು ಸೈಕಲ್ ನಂಬರ ಕೆಎ-33, ವಾಯ್-0555 ನೇದ್ದನ್ನು  ಯಾದಗಿರಿ ಕಡೆಯಿಂದ ವಾಡಿ ರಸ್ತೆ ಕಡೆಗೆ  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ  ಹಿಂದಿನಿಂದ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಗಾಯಾಳು ಅಮೂಲ್ ಈತನಿಗೆ ತಲೆಗೆ ಭಾರೀ ಗುಪ್ತಗಾಯ, ಬಲಗಡೆ ಕಣ್ಣಿಗೆ ಭಾರೀ ಒಳಪೆಟ್ಟಾಗಿದ್ದು ಇರುತ್ತದೆ.  ಈ ಘಟನೆ ಬಗ್ಗೆ ಪಿಯರ್ಾದಿ ಗಾಯಾಳು ಈತನಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಮತ್ತು ತನ್ನ ಮನೆಯವರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 12/01/2021 ರಂದು ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಪಿಯರ್ಾದಿ ದೂರು ನೀಡಿದ್ದು ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.03/2021 ಕಲಂ 279,  338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!