ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/01/2021

By blogger on ಶನಿವಾರ, ಜನವರಿ 9, 2021

 


                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/01/2021 

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 01/2021  ಕಲಂ 279,   338 ಐಪಿಸಿ : ನಿನ್ನೆ ದಿನಾಂಕ 08/01/2021 ರಂದು ಮದ್ಯಾಹ್ನ 2 ಪಿ.ಎಂ.ದ ಸುಮಾರಿಗೆ ಯಾದಗಿರಿ ನಗರದ ಸುಭಾಷ್ ವೃತ್ತದ ಬಳಿ ಮುಖ್ಯ ರಸ್ತೆಯ ಮೇಲೆ ಈ ಕೇಸಿನ ಫಿಯರ್ಾದಿಯ ತಂದೆಯಾದ ಗಾಯಾಳು ಮೋಹನಕುಮಾರ ಇವರು ಸುಬಾಷ್ ವೃತ್ತದ ಕಡೆಯಿಂದ  ಹಳೆ ಬಸ್ ನಿಲ್ದಾಣದ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ಆರೋಪಿತ ಮೋಟಾರು ಸೈಕಲ್ ನಂಬರ ಕೆಎ-33, ಜೆ-4287 ನೇದ್ದನ್ನು  ಸುಭಾಷ್ ವೃತ್ತದ ಕಡೆಯಿಂದ ಹಳೆ ಬಸ್ ನಿಲ್ದಾಣದ ಕಡೆಗೆ  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ  ಹಿಂದಿನಿಂದ  ಹೋಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಸೊಂಟಕ್ಕೆ, ಎಡಗಾಲಿನ ತೊಡೆಯ ಭಾಗಕ್ಕೆ ಭಾರೀ ಒಳಪೆಟ್ಟಾಗಿರುತ್ತದೆ. ಎಡಗೈ ಮಣಿಕಟ್ಟಿನ ಹತ್ತಿರ ಭಾರೀ ಗುಪ್ತಗಾಯವಾಗಿ ಮುರಿದಿದ್ದು ಇರುತ್ತದೆ.  ಈ ಘಟನೆ ಬಗ್ಗೆ ಪಿಯರ್ಾದಿ/ಗಾಯಾಳು ತನ್ನ ಮನೆಯವರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 09/01/2021 ರಂದು 12-30 ಪಿ.ಎಂ.ಕ್ಕೆ ಹಾಜರಾಗಿ ದೂರು ನೀಡಿದ್ದು ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.01/2021 ಕಲಂ 279,  338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 02/2021 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 09/01/2021 ರಂದು 02.30 ಪಿ.ಎಮ್.ಕ್ಕೆ ಮುಡಬೂಳ ಗ್ರಾಮದ ಚೌಡಿ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 04.00 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5.15 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 2170=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 05/2021 ಕಲಂ: 195(ಎ),506 ಸಂ.34 ಐಪಿಸಿ : ಇಂದು ದಿನಾಂಕ.09/01/2021 ರಂದು 8-30 ಪಿಎಂಕ್ಕೆ ಪಿರ್ಯಾಧಿ ಶ್ರೀ ಮರಿಲಿಂಗಪ್ಪ ತಂದೆ ತಿಮ್ಮಣ್ಣ ಕನ್ನಳ್ಳಿ ವ;46 ಜಾ; ಬೇಡರು ಉ; ಜಿಲ್ಲಾ ಪಂಚಾಯತ ಸದಸ್ಯರು ಸಾ; ಕನರ್ಾಳ ತಾ; ಶೋರಾಪೂರ ಹಾ.ವ; ವಿಶ್ವರಾಧ್ಯ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಜಿಲ್ಲಾ ಪಂಚಾಯತ ಸದಸ್ಯನಿದ್ದು ಜಿಲ್ಲಾ ಪಂಚಾಯತಿಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದು ಯಾದಗಿರಿಯ ವಿಶ್ವರಾಧ್ಯ ನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ದಿನಾಂಕ;24/06/2020 ರಂದು ಯಾದಗಿರಿ-ಚಿತ್ತಾಪೂರ ರಸ್ತೆಯ ಮೇಲೆ ಬರುವ ಬಿರನಕಲ್ ಹಣಮೇಗೌಡ ಇವರ ಮನೆಗೆ ಹೋಗುವ ಕ್ರಾಸಿನ ರಸ್ತೆಯಲ್ಲಿ ನನಗೆ ಕೆಲವರು ಹೊಡೆಬಡೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಬಗ್ಗೆ ಯಾದಗಿರಿ ನಗರ ಠಾಣೆಯಲ್ಲಿ ಗುನ್ನೆ ನಂ.52/2020 ಕಲಂ.307 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.  ಹಿಗೀದ್ದು ಇಂದು ದಿನಾಂಕ;  09/01/2021 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸಂಗಡ ಅಳಿಯಂದಿರಾದ ಯಲ್ಲಪ್ಪ ತಂದೆ ಮಹಾದೇವಪ್ಪ ಪೂಜಾರಿ, ರಂಗಪ್ಪ ತಂದೆ ಮಲ್ಲಯ್ಯ ನಾಗುಂಡಿ ಸಾ; ಇಬ್ಬರೂ ಕನರ್ಾಳ ಹಾಗೂ ನಮ್ಮ ವಾಹನದ ಚಾಲಕನಾದ ಮಡಿವಾಳಪ್ಪ ತಂದೆ ಹಳೆಪ್ಪ ಬಿರಾದಾರ ಸಾ; ಉಳ್ಳೆಸೂಗೂರು ಕೂಡಿಕೊಂಡು ಯಾದಗಿರಿ ನಗರದ ಡಾನಬೊಸ್ಕೋ ಶಾಲೆಯ ಹತ್ತಿರದ ಗುರುಸುಣಗಿ ಬೈಪಾಸ ರೈಲ್ವೆ ಬ್ರಿಡ್ಜ ಮೇಲೆ ನಮ್ಮ ವಾಹನವನ್ನು ನಿಲ್ಲಿಸಿ ವಾಕಿಂಗ್ ಮಾಡುತ್ತಿರುವಾಗ ನನ್ನ ಸಂಗಡ ಇದ್ದ ಮೂರು ಜನರು ಸುಸ್ತಾಗಿ ರೈಲ್ವೆ ಬ್ರಿಡ್ಜ ಮೇಲೆ ಉಳಿದುಕೊಂಡರು. ನಾನು ಹಾಗೆಯೇ ವಾಕಿಂಗ್ ಮಾಡುತ್ತಾ ಮುಂದೆ ಅಬ್ಬೆ ತುಮಕೂರು ಬೈಪಾಸ ಕ್ರಾಸ ಹತ್ತಿರ ಹೊರಟಾಗ 6-45 ಪಿಎಮ್ ಸುಮಾರಿಗೆ ಯಾರೋ 3-4 ಜನರು ಅಪರಿಚಿತ ವ್ಯಕ್ತಿಗಳು ನನ್ನ ಹತ್ತಿರ ಬಂದು ನೀನು ನಮ್ಮವರ ವಿರುದ್ದ ಕೇಸು ಮಾಡಿಸಿದ್ದಿ ನೀನು ಅವರ ವಿರುದ್ದ ಸಾಕ್ಷಿ ನುಡಿಯಬೇಡ ಒಂದು ವೇಳೆ ಅವರ ವಿರುದ್ದ ಸಾಕ್ಷಿ ನುಡಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿದ್ದು ಆಗ ನಾನು ಹಿಂದಕ್ಕೆ ತಿರುಗಿ ನನ್ನ ಸಂಗಡ ಬಂದಿದ್ದ ಯಲ್ಲಪ್ಪ, ರಂಗಪ್ಪ, ಮಡಿವಾಳಪ್ಪ ಇವರಿಗೆ ಕೂಗಿದಾಗ ಅವರು ನನ್ನ ಕಡೆಗೆ ಬರುತ್ತಿರುವುದನ್ನು ಕಂಡು ಅವರೆಲ್ಲರೂ ನಿನಗೆ ಇನ್ನೊಂದು ಸಲಾ ಸೀಗು ಮಗನೇ ನೋಡಿಕೊಳ್ಳುತ್ತೇವೆ ಅಂತಾ ಅಲ್ಲಿಂದ ಹೊರಟು ಹೋದರು. ಸದರಿಯವರನ್ನು ನಾನು ನೋಡಿದಲ್ಲಿ ಗುತರ್ಿಸುತ್ತೇನೆ. ಕಾರಣ ಹಿಂದೆ ಜರುಗಿದ ಘಟನೆಗೆ ಸಂಭಂಧಿಸಿದಂತೆ  ಅಪರಿಚಿತ ವ್ಯಕ್ತಿಗಳು ನನಗೆ ಕೋರ್ಟ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.05/2021 ಕಲಂ.195(ಎ),506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!