ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/01/2021

By blogger on ಶುಕ್ರವಾರ, ಜನವರಿ 8, 2021
                        ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/01/2021 

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 08/2021  ಕಲಂ 279, 304(ಎ) ಐ.ಪಿ.ಸಿ : ಇಂದು ದಿನಾಂಕ 08/01/2021 ರಂದು ಮದ್ಯಾಹ್ನ 13-00 ಗಂಟೆಗೆ ಫಿಯರ್ಾದಿ ಶ್ರೀ ಬಸವರಾಜ ತಂದೆ ಈರಸಂಗಪ್ಪ ಕಾಮನಟಗಿ ವಯ 48 ವರ್ಷ ಜಾತಿ ಲಿಂಗಾಯತ ಉಃ ಕಿರಾಣಾ ವ್ಯಾಪಾರ ಸಾಃ ಪೇಠ ಅಮ್ಮಾಪೂರ ತಾಃ ಸುರಪೂರ ಜಿಃ ಯಾದಗಿರಿ ಇವರು ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 08/01/2021 ರಂದು ಮುಂಜಾನೆ 09-30 ಗಂಟೆಗೆ ಪೇಠ ಅಮ್ಮಾಪೂರದಿಂದ ಫಿಯರ್ಾದಿಯು ತನ್ನ ಮಗ ಶಿವಕುಮಾರನೊಂದಿಗೆ ತಮ್ಮ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂಬರ ಏಂ-33-ಙ-5958  ನೇದ್ದರ ಮೇಲೆ, ಈ ದಿನ ಶಹಾಪೂರದಲ್ಲಿ ಶುಕ್ರವಾರ ಸಂತೆ ಇದ್ದುದ್ದರಿಂದ ಜೋಳ ಖರೀದಿ ಮಾಡಲು ಬಂದಿದ್ದು, ಶಹಾಪೂರದ ಗಂಜ ಏರಿಯಾದಲ್ಲಿ ಜೋಳ ಖರೀದಿ ಮಾಡಿ ವಾಹನದಲ್ಲಿ ಹಾಕಿ ಊರಿಗೆ ಕಳುಹಿಸಿದ್ದು. ನಂತರ ಶಹಾಪೂಋದ ಗಂಜ ಏರಿಯಾದಿಂದ ಫಿಯರ್ಾದಿಯವರು ತನ್ನ ಮಗನೊಂದಿಗೆ  ಮೋಟರ್ ಸೈಕಲ್ ಮೇಲೆ ಕುಳಿತುಕೊಂಡು ಊರಿಗೆ ಹೋಗುತಿದ್ದರು,  ಶಿವಕುಮಾರ ಮೋಟರ್ ಸೈಕಲ್ ಚಲಾಯಿಸುತಿದ್ದನು, ಫಿಯರ್ಾದಿ ಹಿಂದುಗಡೆ ಕುಳಿತುಕೊಂಡಿದ್ದನು. ಇಂದು ಮುಂಜಾನೆ 11.45 ಗಂಟೆಯ ಸುಮಾರಿಗೆ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿದ್ದಾಗ ಮನೆಗೆ ಏನಾದರೂ ಬೇಕರಿ ವಸ್ತುಗಳನ್ನು ತೆಗೆದುಕೊಂಡು ಹೋದರಾಯಿತು ಅಂತಾ ತಿಳಿಸಿ ಶಿವಕುಮಾರನು ತನಗೆ ಸುರಪುರ ರೋಡಿಗೆ ಇಳಿಸಿ ತಾನು ಮೋಟರ ಸೈಕಲ್ದಲ್ಲಿ ಬಸವೇಶ್ವರ ವೃತ್ತದಲ್ಲಿರುವ ಉಪ್ಪಿನ ಅವರ ಗೊಬ್ಬರ ಅಂಗಡಿ ಕಡೆಗೆ ಹೋಗುತ್ತಿದ್ದಾಗ ಎದರುಗಡೆಯಿಂದ ಅಂದರೆ ಹಳೆ ಬಸ್ ನಿಲ್ದಾಣದ ಕಡೆಯಿಂದ ಒಂದು ಲಾರಿ ನಂಬರ ಒಕ-06-ಊಅ-1576 ನೇದ್ದರ ಚಾಲಕನಾದ ಕೈಸರ್ ಶಾಹೀಮ್ ತಂದೆ ನಬಿ ಶರೀಫ್, ಜಗ್ ಮಗ್ ವಯ 52 ವರ್ಷ ಜಾತಿ ಮುಸ್ಲಿಂ ಸಾಃ ಕುಂಬಾರವಾಡಿ ಏರಿಯಾ ಯಾದಗಿರಿ ಹಾಲಿವಸತಿ ಶಾಲಿಮಿಜರ್ಾ ಮಸೀದ ಹತ್ತಿರ ಆಸರ ಮೊಹಲ್ಲಾ ಯಾದಗಿರಿ ಇವನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ  ಮಗನಿಗೆ ಡಿಕ್ಕಿಪಡಿಸಿದ್ದರಿಂದ ಶಿವಕುಮಾರನು ಮೋಟರ ಸೈಕಲ್ ಸಮೇತವಾಗಿ ರೋಡಿನ ಮೇಲೆ ಬಿದ್ದ ಪರಿಣಾಮ ತನ್ನ ಮಗನಿಗೆ  ಬಲಭಾಗದ ಕಿವಿ ಹರಿದು ಕಟ್ಟಾಗಿ ಭಾರೀ ರಕ್ತಗಾಯವಾಗಿರುತ್ತದೆ, ತಲೆ ಎಡಭಾಗಕ್ಕೆ ಭಾರೀ ರಕ್ತಗಾಯವಾಗಿ ಎಡ ಕಿವಿಯ ಮೇಲ್ಭಾಗದಲ್ಲಿ ತರಚಿ ತಲೆಯ ಕೂದುಲು ಕಿತ್ತಿರುತ್ತವೆ. ಎರಡೂ ಕಿವಿ, ಮೂಗು ಮತ್ತು ಬಾಯಿ ಇಂದ ರಕ್ತ ಬಂದಿರುತ್ತದೆ. ಎಡ ಭುಜಕ್ಕೆ ತರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ತನ್ನ ಮಗ ಶಿವಕುಮಾರನ  ಸಾವಿಗೆ ಕಾರಣನಾದ ಲಾರಿ ನಂಬರ ಒಕ-06-ಊಅ-1576 ನೇದ್ದರ ಚಾಲಕನ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 08/2021 ಕಲಂ 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 08/2021 ಕಲಂ: 279, 337, 304(ಎ) ಐಪಿಸಿ ಸಂ 122 ಐಎಮ್ಐ ಎಕ್ಟ್ : ಇಂದು ದಿನಾಂಕ:08/01/2021 ರಂದು ಮೃತ ಶರಣಪ್ಪ ತಂದೆ ಲಕ್ಷ್ಮಣ ಈತನು ಜೇವಗರ್ಿಯಿಂದ ತನ್ನ ಮೋಟರ್ ಸೈಕಲ್ ನಂ. ಕೆಎ 33 ವೈ 0155 ನೇದ್ದರ ಮೇಲೆ ಶಹಾಪೂರ ಮಾರ್ಗವಾಗಿ ಯಾದಗಿರಿಗೆ ಹೊರಟಿದ್ದು, ಶಹಾಪೂರ-ಯಾದಗಿರಿ ಮೇನ ರೋಡ ನಾಯ್ಕಲ್ ಪೆಟ್ರೋಲ್ ಬಂಕ ಸಮೀಪ ರಾತ್ರಿ 8 ಪಿಎಮ್ ಸುಮಾರಿಗೆ ಮುಂದುಗಡೆ ಟ್ರ್ಯಾಕ್ಟರ ನಂ. ಕೆಎ 33 ಟಿಎ 4887 ಟ್ರ್ಯಾಲಿ ನಂ. ಇರುವುದಿಲ್ಲ. ಇದರ ಚಾಲಕ ಮಲ್ಲಪ್ಪನು ಟ್ರ್ಯಾಕ್ಟರ ಟ್ರ್ಯಾಲಿಗೆ ಹಿಂದುಗಡೆ ರೇಡಿಯಂ ಸ್ಟಿಕ್ಕರ ವೈಗೆರೆ ಹಚ್ಚದೆ ನಿರ್ಲಕ್ಷ ವಹಿಸಿ, ಟ್ರ್ಯಾಕ್ಟರನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ, ಹೊರಟವನು ಒಮ್ಮೆಲೆ ಬ್ರೆಕ್ ಹಾಕಿದ್ದರಿಂದ ಶರಣಪ್ಪನು ಮೋಟರ್ ಸೈಕಲನ್ನು ಟ್ರ್ಯಾಕ್ಟರ ಟ್ರ್ಯಾಲಿಗೆ ಗುದ್ದಿ, ಎದೆಗೆ ಭಾರಿ ಒಳಪೆಟ್ಟಾಗಿ ಎಲುಬು ಮುರಿದು, ಅಲ್ಲಲ್ಲಿ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಕಾಲು ಇಳೆ ಬಿಟ್ಟು ಕುಳಿತುಕೊಂಡಿದ್ದ ರಾಧಮ್ಮ ಇವಳ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 08/2021 ಕಲಂ: 279, 337, 304(ಎ) ಐಪಿಸಿ ಸಂ 122 ಐಎಮ್ಐ ಎಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!