ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/01/2021

By blogger on ಮಂಗಳವಾರ, ಜನವರಿ 5, 2021

 



                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/01/2021 

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 01/2021 ಕಲಂ. 174 ಸಿಆರ್ಪಿಸಿ : ದಿನಾಂಕ. 04.01.2021 ರಂದು  ರಾತ್ರಿ 9.00  ಗಂಟೆಗೆ ಸರಕಾರಿ ಆಸ್ಪತ್ರೆ, ನಾರಾಯಣಪೇಟದಿಂದ ಡೆತ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಎಮ್.ಎಲ್.ಸಿ ಕುರಿತು ಹೋದ ಶ್ರೀ ರುಕ್ಮಣ್ಣ ಹೆಚ್.ಸಿ-35 ಇವರು ತಮ್ಮ ಸಂಗಡ ಕರೆದುಕೊಂಡು ಹೋದ ಪಿಸಿ-234 ರವರ ಸಂಗಡ ಫಿಯರ್ಾದಿ  ಶ್ರೀಮತಿ ಅಂಜಮ್ಮ ಗಂಡ ದಿ. ದೇವಪ್ಪ ದಯಾಳ್ ವಯ|| 40ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಜೈಗ್ರಾಮ ತಾ|| ಗುರುಮಠಕಲ  ಇವಳ ಹೇಳಿಕೆ ಪಡೆದು ಕಳಿಸಿದ್ದು, ಸಾರಾಂಶವೇನೆಂದರೆ, ನನ್ನ ಮಗಳು ರೇಣುಕಾ ಇವಳಿಗೆ ಈಗ 5-6 ತಿಂಗಳಿನಿಂದ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಹೊಟ್ಟೆ ನೋವು ಔಷಧ ಕುಡಿದರು ಕಡಿಮೆಯಾಗಿರುವದಿಲ್ಲ ತೀರಾ ಅನಾರೋಗ್ಯ ಇರುವದಾಗಿ ನನ್ನ ತಂದೆ ನನಗೆ ಆಗಾಗ ನನಗೆ ಫೋನ ಮಾಡಿ ಹೇಳುತ್ತಿದ್ದರು. ಈಗ ಒಂದು ತಿಂಗಳ ಹಿಂದೆ ನಾನು ಜೈಗ್ರಾಮಕ್ಕೆ ಬಂದು ನನ್ನ ಮಗಳಿಗೆ ನಾರಾಯಣಪೇಟಗೆ ಕರೆದುಕೊಂಡು ಹೋಗಿ ದವಾಖಾನೆಗೆ ತೋರಿಸಿ ಔಷಧ ಕೊಡಿಸಿ ಹೋಗಿದ್ದೆನು. ಹೊಟ್ಟೆ ನೋವಿನಿಂದ ಸುಸ್ತಾದ ನನ್ನ ಮಗಳು ರೇಣುಕಾ ಇವಳು ಅರೆಪ್ರಜ್ಞಾವಸ್ಥೆಯಲ್ಲಿ ದಿನಾಂಕ 04.01.2021 ರಂದು ಸಾಯಂಕಾಲ 5-30 ಗಂಟೆಗೆ ಮನೆಯಲ್ಲಿ ಬಿದ್ದಿದ್ದನ್ನು ನೋಡಿದ ನನ್ನ ತಂದೆ ಏನಾಗಿದೆ ನಿನಗೆ ಯಾಕೇ ಈ ರೀತಿ ಬಿದ್ದಿದ್ದೀಯಾ ಅಂತ ಕೇಳಿದಾಗ ನನ್ನ ಮಗಳು ಹೊಟ್ಟೆನೋವು ತಾಳಲಾರದೇ ಸಾಯಂಕಾಲ 5-00 ಗಂಟೆ ಸುಮಾರಿಗೆ ಮನೆಯವರೆಲ್ಲರೂ ಹೊಲಕ್ಕೆ ಹೋದಾಗ ಕ್ರಿಮಿನಾಶಕ ವಿಷ ಸೇವಿಸಿದ ಬಗ್ಗೆ ನನ್ನ ತಂದೆಗೆ ತಿಳಿಸಿರುತ್ತಾಳೆ. ಕೂಡಲೇ ನನ್ನ ತಂದೆ-ತಾಯಿ ಮತ್ತು ನನ್ನ ತಮ್ಮ ಮಲ್ಲೇಶ ಎಲ್ಲರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ನಾರಾಯಣಪೇಟ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ.  ಸದರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ನನ್ನ ಮಗಳು  ದಿನಾಂಕ. 04.01.2021 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಸದರಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾಳೆ. ಸದರಿ ವಿಷಯವನ್ನು ನಿರಂತರವಾಗಿ ನನಗೆ ಫೋನ ಮಾಡಿ ನನ್ನ ತಮ್ಮ ಮಲ್ಲೇಶ ಈತನು ತಿಳಿಸಿದ್ದು, ನಾನು ಬೆಂಗಳೂರಿನಿಂದ-ನಾರಾಯಣಪೇಟಗೆ ಬಂದು ನನ್ನ ಮಗಳು ಕ್ರಿಮಿನಾಶಕ ವಿಷ ಸೆವನೆ ಮಾಡಿ ಸತ್ತಿರುವದನ್ನು ನೋಡಿರುತ್ತೇನೆ.     ನನ್ನ ಮಗಳು ದಿ. ದೇವಪ್ಪ ದಯಾಳ್ ವಯ|| 40ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಜೈಗ್ರಾಮ ತಾ|| ಗುರುಮಠಕಲ ಜಿ|| ಯಾದಗಿರಿ ಹೊಟ್ಟೆನೋವಿನಿಂದಾಗಿ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕವನ್ನು ಸೇವಿಸಿ ಮೃತಪಟ್ಟಿದ್ದು ಸದರಿಯವಳ ಸಾವಿನಲ್ಲಿ ಯಾರ ಮೇಲೂ ಯಾವುದೇ ಸಂಶಯ, ದೂರು ಇರುವದಿಲ್ಲ ಮುಂದಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ ಸಾರಾಂಶದ ಮೇಲಿಂದ ಇಂದು ದಿನಾಂಕ. 05.01.2021 ರಂದು ಬೆಳಿಗ್ಗೆ 8.30 ಗಂಟೆಗೆ ಸೈದಾಪೂರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/2021 ಕಲಂ. 174 ಸಿ.ಆರ್.ಪಿಸಿ ನೇದ್ದರಲ್ಲಿ ಪ್ರಕರಣದ ದಾಖಲಿಸಿಕೊಂಡೆನು. 


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ. 279, 337, 304(ಎ) ಐಪಿಸಿ.  ಮತ್ತು 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ. 05.01.2021 ರಂದು ಬೆಳಿಗ್ಗೆ 7-00 ಗಂಟೆಗೆ ಫಿಯರ್ಾದಿ ಶ್ರೀ ಮಹಾದೇವ ತಂದೆ ತಾಯಪ್ಪ ವಡ್ಡರ ವಯಾ || 55 ವರ್ಷ ಜಾ|| ಎಸ್.ಸಿ ವಡ್ಡರ  ಉ|| ಕೂಲಿ ಕೆಲಸ ಸಾ|| ಅಲ್ಲೂರ (ಕೆ)  ತಾ|| ಚಿತಾಪೂರ ಜಿಲ್ಲಾ||  ಕಲಬುರಗಿ ಈತನು ಠಾಣೆಗೆ ಬಂದು ಹೇಳಿಕೆ ನೀಡಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ್ದು ಸದರಿ ಹೇಳಿಕೆ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 05.01.2021 ರಂದು ಸಾಯಂಕಾಲ ನನ್ನ ಮಗ ಸ್ವಾಮಿ ಕೂಲಿಕೆಲಸದ ಮೇಲೆ ಟ್ಯಾಕ್ಟರದಲ್ಲಿ ಪಸರ್ಿ ತೆಗೆದುಕೊಂಡು ಸೈದಾಪೂರಕ್ಕೆ ಹೋಗುವದಾಗಿ ಮನೆಯಲ್ಲಿ ಹೇಳಿ ಹೋಗಿದ್ದು, ದಿನಾಂಕ. 05.01.2021 ರಂದು ಮಧ್ಯರಾತ್ರಿ ವೇಳೆಯಲ್ಲಿ ನನಗೆ ಮಂಜುಗೌಡ ತಂದೆ ಭಾಗಣ್ಣ ಅಮರಣ್ಣೋರ ಈತನು ಫೋನ ಮಾಡಿ ನನ್ನ ಮಗ ಟ್ಯಾಕ್ಟರದಲ್ಲಿ ಸೈದಾಪೂರಕ್ಕೆ ಟ್ಯಾಕ್ಟರದಲ್ಲಿ ಪಸರ್ಿ ತೆಗೆದುಕೊಂಡು ಹೊರಟಾಗ ಯಾದಗಿರಿ-ರಾಯಚೂರ ಮೇನ ರೋಡ ಮೇಲೆ ಹಿಂದಿನಿಂದ ಲಾರಿ ಡಿಕ್ಕಿಪಡಿಸಿದ್ದು ಅಪಘಾತದಲ್ಲಿ ಮೃತ ಪಟ್ಟಿರುತ್ತಾನೆ ಸೈದಾಪೂರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಅಂತ ವಿಷಯ ತಿಳಿಸಿದ ಮೇರೆಗೆ ನಾನು ಮತ್ತು ಮನೆಯವರು ಸೇರಿ ಸೈದಾಪೂರ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗನಿಗೆ ನೋಡಲಾಗಿ, ತಲೆಗೆ ಬಲಗಡೆ ಮೆಲುಕಿನ ಹತ್ತಿರ, ಮುಖದ ಮೇಲೆ ಎಡಗಡೆ ಹಣೆಯ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಬಲಗೈ ತೋಳ ಬಳಿ ಮತ್ತು ಮತ್ತು ಎರಡೂ ಕಾಲಿನ ತೊಡೆ ಮೂಳೆ ಮುರಿದಂತೆ ಕಂಡುಬಂದಿದ್ದು, ಎರಡೂ ಕಾಲಿನ ಹಿಮ್ಮಡಿ, ಬೆರಳಗಳ ಹತ್ತಿರ ಕಲ್ಲಿನಿಂದ ಕೊರೆದ ರಕ್ತಗಾಯವಾಗಿ ನನ್ನ ಮಗನು ಮೃತಪಟ್ಟಿದ್ದನು. ಸದರಿ ಘಟನೆ ಹೇಗಾಯಿತು ಅಂತ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಮಂಜುಗೌಡ ತಂದೆ ಭಾಗಣ್ಣ ಅಮರಣ್ಣೋರ ಇವನಿಗೆ ವಿಚಾರಿಸಲಾಗಿ ಸದರಿಯವರು ತಿಳಿಸಿದ್ದೇನೆಂದರೆ, ದಿನಾಂಕ. 04.01.2021 ರಂದು ಸಾಯಂಕಾಲ ಅಲ್ಲೂರ(ಕೆ) ಗ್ರಾಮದಲ್ಲಿ ನಮ್ಮ ಸ್ವರಾಜ ಕಂಪನಿ ಟ್ಯಾಕ್ಟರ ಇಂಜಿನ ನಂ. ಕೆ.ಎ-32 ಟಿಬಿ-5721   ಚೆಸ್ಸಿ ನಂ. ಘ2ಅಐ43606108920 ಮತ್ತು ಟ್ರಾಲಿ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರದಲ್ಲಿ ಕಲ್ಲಿನ ಪಸರ್ಿ ತುಂಬಿಕೊಂಡು  ನಾನು, ಟ್ಯಾಕ್ಟರ ಚಾಲಕ ಶಿವರಾಜ ಪಕ್ಕದಲ್ಲಿ ಕುಳಿತಿದ್ದು ಸ್ವಾಮಿ ಹಿಂದಿನ ಟ್ರಾಲಿಯಲ್ಲಿ ಕುಳಿತಿದ್ದನು. 3 ಜನ ಕೂಡಿ ಕಲ್ಲಿನ ಪಸರ್ಿ ಲೋಡ ಇಳಿಸಲು ಸೈದಾಪೂರಕ್ಕೆ ಹೊರಟಾಗ ಬಳಿಚಕ್ರ ಗ್ರಾಮದ ಡಿ.ಪಿ.ಜೈನ ಕಂಪನಿ ಹತ್ತಿರ ದಿನಾಂಕ 05.01.2021 ರಂದು ರಾತ್ರಿ 00-30 ಗಂಟೆಗೆ ಯಾದಗಿರಿ-ರಾಯಚೂರ ಮೇನ ರೋಡ ಮೇಲೆ ಹಿಂದಿನಿಂದ ಬಂದ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಪಸರ್ಿ ಟ್ಯಾಕ್ಟರಗೆ ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ ನನಗೆ ತಲೆಗೆ ಮತ್ತು ಬಲಗಡೆ ಕಣ್ಣಿನ ಹತ್ತಿರ ಒಳಪೆಟ್ಟಾಗಿದ್ದು,   ಟ್ಯಾಕ್ಟರ ಟ್ರಾಲಿಯಲ್ಲಿ ಕುಳಿತಿದ್ದ ಸ್ವಾಮಿ ಈತನು ಕೆಳಗೆ ಬಿದ್ದಿದ್ದು ಅವನ ಮೇಲೆ ಟ್ಯಾಕ್ಟರದಲ್ಲಿದ್ದ ಪಸರ್ಿ ಕಲ್ಲುಗಳು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಟ್ಯಾಕ್ಟರ ಚಾಲಕ ಶಿವರಾಜನಿಗೆ ಬಲಗೈಗೆ ಒಳಪೆಟ್ಟಾಗಿದ್ದು, ಮೈಕೈಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ನಮಗೆ ಡಿಕ್ಕಿಪಡಿಸಿದ ಲಾರಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಅಲ್ಲಿಂದ ಓಡಿಹೋಗಿದ್ದು, ಸದರಿ ಲಾರಿ ನಂಬರ ನೋಡಲಾಗಿ ಲಾರಿ ನಂಬರ ಪಿ.ಬಿ-13 ಬಿ.ಇ-2822  ಆಗ ನಾವು ಬಿದ್ದಿದ್ದನ್ನು ನೋಡಿ ಯಾರೋ ಒಂದು ಖಾಸಗಿ ಅಟೋದಲ್ಲಿ ಉಪಚಾರಕ್ಕಾಗಿ ಸೈದಾಪೂರಕ್ಕೆ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತ ತಿಳಿಸಿದನು.     ಅತೀ ವೇಗ ಹಾಗೂ ಅಲಕ್ಷತನದಿಂದ ಲಾರಿಯನ್ನು ಓಡಿಸಿ ನನ್ನ ಮಗ ಕುಳಿತು ಹೊರಟಿದ್ದ ಸ್ವರಾಜ  ಟ್ಯಾಕ್ಟರಗೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತಪಡಿಸಿ ಅಲ್ಲಿಂದ ಓಡಿ ಹೋದ ಸದರಿ ಘಟನೆಗೆ ಕಾರಣವಾದ ಲಾರಿ ನಂಬರ ಪಿ.ಬಿ-13 ಬಿ.ಇ-2822 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 04.2021 ಕಲಂ. 279, 337, 304(ಎ) ಐಪಿಸಿ 187 ಐ.ಎಮ್.ವಿ ಆಕ್ಟ ನೇದ್ದರಲ್ಲಿ ಪ್ರಕರಣದಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 04/2021 ಕಲಂ: 00 ಒಕ ಕಅ : ಸುಮಾರು 8 ತಿಂಗಳುಗಳ ಹಿಂದೆ ಫಿರ್ಯಾದಿಯು ನವನೀತಾ ಎಂಬಾಕೆಯನ್ನು ಮದುವೆಯಾಗಿರುತ್ತಾನೆ. ನಂತರ ದಿನಾಂಕ:01.01.2021 ರಂದು ಮನೆಯಲ್ಲಿ ಊಟ ಮಾಡಿದ ನಂತರ ರಾತ್ರಿ 10:30 ಗಂಟೆ ಸುಮಾರಿಗೆ ಮಲಗಿದ್ದು ದಿನಾಂಕ:02.01.2021 ರ ಬೆಳಗಿನ ಜಾವ 3:30 ಗಂಟೆಯ ಸುಮಾರಿಗೆ ಫಿರ್ಯಾದಿಯು ಕಾಲು ಮಡಿಲಿಕ್ಕೆ ಅಂತಾ ಎದ್ದು ನೋಡಿದಾಗ ತನ್ನ ಹೆಂಡತಿ ಕಾಣಿಸಲಿಲ್ಲ. ನಂತರ ಹೊರಗಡೆ ನೋಡಿದಾಗ ಎಲ್ಲಿಯೂ ಕಾಣಿಸದೇ ಇದ್ದಾಗ ತನ್ನ ಅತ್ತೆಗೆ, ಸಂಬಂದಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ವಿಚಾರಿಸಿದ್ದು ಅಲ್ಲದೇ ಗುರುಮಠಕಲ್ ಪಟ್ಟಣದಲ್ಲಿ ಹಾಗೂ ಹೈದ್ರಾಬಾದನಲ್ಲಿ ಹುಡುಕಾಡಿದ್ದು ಎಲ್ಲಿಯೂ ಸಹ ತನ್ನ ಹೆಂಡತಿ ಕಾಣಿಸದೇ ಇದ್ದಾಗ ತಡವಾಗಿ ಇಂದು ದಿನಾಂಕ:05.01.2021 ರಂದು ಖುದ್ದಾಗಿ ಠಾಣೆಗೆ ಬಂದು ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿ ಕೊಡುವಂತೆ ಹೇಳಿಕೆ ನೀಡಿ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:  04/2021 ಕಲಂ: 00 ಒಕ ಕಅ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಗುರಮಿಠಕಲ್  ಪೊಲೀಸ ಠಾಣೆ ಗುನ್ನೆ ನಂ:-. 05/2021 ಕಲಂ: 143,147,341,323,504,506 ಸಂ.149 ಐಪಿಸಿ : ನಿನ್ನೆ ದಿನಾಂಕ 04.01.2021 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಫಿರ್ಯಾದಿಯು ತಾನು 2020 ನೆ ಸಲಿನಲ್ಲಿ ನಡೆದದ 2 ನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತ್ತಿದ್ದ ವಿಚಾರವಾಗಿ ತನ್ನ ಹೆಂಡತಿಗೆ ನೋಡ್ಲೆ ನಮ್ಮ ಓಣಿಯವರು ನಾನು ಕಳೆದ ವರ್ಷ ನಮ್ಮ ಓಣಿಯ  ಜನರಿಗೆ ಕಷ್ಟದ ಕಾಲಕ್ಕೆ ಸಹಾಯ ಮಾಡಿದ್ದನ್ನು ನೆನಪು ಮಾಡಿಕೊಂಡಾದರೂ ನನಗೆ ಗೆಲ್ಲಿಸಬೇಕಿತ್ತು ಅಂತಾ ಹೇಳಿ ತನ್ನ ಮನೆಯ ಹಿಂದೆ ಕಾಲು ಮಡಿಯಲು ಹೋಗುತ್ತಿದ್ದಾ ಆರೋಪಿತರೆಲ್ಲಾರು ಏಕೊದ್ದೆಶದರಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು ಕೈಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ತನಗೆ ಯಾವುದೇ ಗಾಯಗಳು ಆಗದೇ ಇರುವುದರಿಂದ ಮನೆಗೆ ಹೋಗಿ ವಿಚಾರ ಮಾಡಿದ ನಂತರ ತಡವಾಗಿ ಇಂದು ದಿನಾಂಕ 05.01.2021 ರಂದು ಸಂಜೆ 5:00  ಗಂಟೆಗೆ ಠಾಣೆಗೆ ಬಂದು ಬಾಯಿ ಮಾತಿನ ಹೇಳಿಕೆ ನೀಡಿ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 05/2021 ಕಲಂ: 143,147,341,323,504,506 ಸಂ.149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!