ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/11/2020

By blogger on ಮಂಗಳವಾರ, ಡಿಸೆಂಬರ್ 1, 2020



                                     ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/11/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 14/2020 ಕಲಂ: 109 ಸಿ.ಆರ್.ಪಿ.ಸಿ : ಇಂದು ದಿನಾಂಕ; 24/11/2020 ರಂದು 6-00 ಎಎಮ್ ಕ್ಕೆ ಶಿವಶಂಕರ ಹೆಚ್.ಸಿ-175 ರವರು ಒಬ್ಬ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ಒಂದು ವರದಿಯನ್ನು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಶಿವಶಂಕರ  ಹೆಚ್.ಸಿ. 175  ಯಾದಗಿರಿ ನಗರ ಪೊಲೀಸ್ ಠಾಣೆ ಮಾನ್ಯರವರಲ್ಲಿ ಸಲ್ಲಿಸುವ ವರದಿ ಏನೆಂದರೆ, ಇಂದು ದಿನಾಂಕ: 24/11/2020 ರಂದು 05-30 ಎ,ಎಮ್ ಸುಮಾರಿಗೆ ನಾನು  ಯಾದಗಿರಿ ನಗರದ  ಗಂಜ ಏರಿಯಾದಲ್ಲಿ ಪಟ್ರೋಲಿಂಗ್ ಮಾಡುತ್ತಾ ಹೋರಟಿದ್ದಾಗ ಗಂಜ ಏರಿಯಾದ ಬಸವೇಶ್ವರ ವೃತ್ತದ ಹತ್ತಿರ ಒಬ್ಬ ವ್ಯಕ್ತಿ  ಅನುಮಾನಸ್ಪದವಾಗಿ ತಿರುಗಾಡುತ್ತಾ ನನ್ನನ್ನು ನೋಡಿದ ಕೂಡಲೇ ಆತನು ತನ್ನ ಇರುವಿಕೆಯ ಬಗ್ಗೆ ಮರೆಮಾಚುವ ದೃಷ್ಟಿಯಿಂದ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸುತ್ತಿರುವಾಗ ನಾನು  ಸದರಿಯವನನ್ನು  ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅಜಯ ತಂದೆ ರಾಜು ಮುತ್ನಾಳ ವ; 26 ಉ; ಗೌಂಡಿಕೆಲಸ ಸಾ; ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನು ಅನುಮಾನಸ್ಪದವಾಗಿ ತಿರುಗಾಡುತ್ತಿದರಿಂದ ಹಾಗೆಯೇ ಬಿಟ್ಟಲ್ಲಿ ಯಾವುದೇ ಸ್ವತ್ತಿನ ಅಪರಾಧ ಮಾಡುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನಿಂದ  ಜರುಗಬಹುದಾದ ಸಂಭವನಿಯ ಅಪರಾಧಗಳನ್ನು ತಡೆಗಟ್ಟುವಗೋಸ್ಕರ ಮುಂಜಾಗೃತಾ ಕ್ರಮ ಕುರಿತು ಸದರಿಯವರನ್ನು ಹಿಡಿದುಕೊಂಡು 6-00 ಎ.ಎಮ್ ಕ್ಕೆ ಠಾಣೆಗೆ ಬಂದು ಆರೋಪಿತನನ್ನು ಹಾಜರುಪಡಿಸಿ ವರದಿ ಸಲ್ಲಿಸಲಾಗಿದೆ ಅಂತಾ ಮಾನ್ಯರವರಲ್ಲಿ ವಿನಂತಿ ಇರುತ್ತದೆ. ಅಂತಾ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಪಿ.ಎ.ಆರ್ ನಂ.14/2020 ಕಲಂ.109 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 286/2020. ಕಲಂ 323, 324, 504,506 ಸಂಗಡ 34 ಐ.ಪಿ.ಸಿ. : ದಿನಾಂಕ: 23-11-2020 ರಂದು ಫಿರ್ಯಾದಿಯ ಮಗ ಸೋಯಲ್ ನ ಮೇಲೆ ಆರೋಪಿತನು ಮುಸುರಿ ನೀರು ಚೆಲ್ಲಿದ್ದಕ್ಕೆ ಹಾಗೇ ಏಕೆ ಮುಸುರಿ ನಿರು ಚೆಲ್ಲುತ್ತಿಯಾ ಅಂತಾ  ಫಿರ್ಯಾದಿ ಕೇಳಿದ್ದಕ್ಕೆ ಆರೋಪಿತೆಲ್ಲರೂ ಕುಡಿ ಫಿರ್ಯಾದಿದಾರನಿಗೆ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ  ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಗಾಯ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆೆ ಅಂತಾ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.286/2020 ಕಲಂ. 323, 324, 504, 506 ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.  


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 162/2020 ಕಲಂ. 87 ಕೆ.ಪಿ ಎಕ್ಟ್ 1963 : ಇಂದು ದಿನಾಂಕ 24/11/2020 ರಂದು ರಾತ್ರಿ 8-40 ಕ್ಕೆ ಶ್ರೀ ಸುರೇಶಕುಮಾರ ಪಿ.ಎಸ್.ಐ(ಕಾ.ಸು) ರವರು ಠಾಣೆಗೆ ಬಂದು ಜ್ಞಾಪನ ಪತ್ರ ನೀಡಿದ ಸಾರಾಂಶವೆನೆಂದರೆ ನಾನು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅಬ್ಬೆತುಮಕೂರ ಗ್ರಾಮದ ಸೀಮೆಯಲ್ಲಿ ಚಟ್ಟಿ ಬಾಬು ಇವರ ಹೊಲದ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಂಡು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಪರವಾನಿಗೆ ಕೊಡಲು ಮಾನ್ಯರವರಲ್ಲಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ. ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಸದರಿ ಜ್ಞಾಪನ ಪತ್ರದಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 162/2020 ಕಲಂ 87 ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 132/2020 ಕಲಂ: 279,337,338 ಐಪಿಸಿ : ಇಂದು ದಿನಾಂಕ: 24/11/2020 ರಂದು 8-45 ಪಿಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ನಮ್ಮ ಠಾಣೆಯ ಶ್ರೀ ಶಿವಪುತ್ರ ಹೆಚ್.ಸಿ 82 ರವರಿಗೆ ಕಳುಹಿಸಲಾಗಿದ್ದು, ಸದರಿಯವರು ಎಮ್.ಎಲ್.ಸಿ ವಿಚಾರಣೆ ಮಾಡಿಕೊಂಡು 10-45 ಪಿಎಮ್ ಕ್ಕೆ ಮರಳಿ ಬಂದು ಶ್ರೀ ರಾಮಚಂದ್ರ ತಂದೆ ಶರಣಪ್ಪ ವಡ್ಡರ, ವ:40, ಜಾ:ವಡ್ಡರ, ಉ:ಕೂಲಿ ಸಾ:ಬೋಳಾರಿ ತಾ:ವಡಗೇರಾ ಈತನು ಕೊಟ್ಟಿರುವ ದೂರನ್ನು ಹಾಜರಪಡಿಸಿದ್ದರ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ಇಂದು ದಿನಾಂಕ: 24/11/2020 ರಂದು ನಾನು ಕೆಲಸದ ನಿಮಿತ್ಯ ಖಾನಾಪೂರದಲ್ಲಿ ಇದ್ದಾಗ ನಮ್ಮ ಅಳಿಯನಾದ ಮಹೇಶ ತಂದೆ ಹುಲಿಗೆಪ್ಪ ವ:22 ವರ್ಷ ಸಾ:ಬೋಳಾರಿ ಮತ್ತು ಅವನ ಗೆಳೆಯ ರಂಗಪ್ಪ ಇಬ್ಬರೂ ಮೋಟರ್ ಸೈಕಲ್ ಮೇಲೆ ಯಾದಗಿರಿಯಿಂದ ತಡಿಬಿಡಿ ಬರುತ್ತಿರುವಾಗ ಸಂಜೆ 6 ಗಂಟೆ ಸುಮಾರಿಗೆ ಮೋಟರ್ ಸೈಕಲಗಳ ಮದ್ಯ ಅಪಘಾತವಾಗಿರುತ್ತದೆ ಎಂದು ರಂಗಪ್ಪ ತಂದೆ ಸೋಮಲಿಂಗಪ್ಪ ಈತನು ನನಗೆ ಫೊನ ಮಾಡಿ ಹೇಳಿದನು. ಆಗ ನಾನು ಮತ್ತು ಇನ್ನು ಇತರರು ಕೂಡಿ ತಕ್ಷಣ ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ಅಳಿಯನಾದ ಮಹೇಶ ಮತ್ತು ಅವನ ಗೆಳೆಯ ರಂಗಪ್ಪ ಇಬ್ಬರು ಅಪಘಾತದಲ್ಲಿ ಭಾರಿ ಗಾಯಗೊಂಡಿದ್ದರು. ಗಾಯಾಳು ರಂಗಪ್ಪನಿಗೆ ವಿಚಾರಿಸಿದಾಗ ಅವನು ಹೇಳಿದ್ದೇನಂದರೆ ನಾನು ಮತ್ತು ಮಹೇಶ ಇಬ್ಬರೂ ಮೋಟರ್ ಸೈಕಲ್ ನಂ. ಕೆಎ 07 ವ್ಹಿ 7128 ನೇದ್ದರ ಮೇಲೆ ಯಾದಗಿರಿಯಲ್ಲಿ ಕೆಲಸ ಮುಗಿಸಿಕೊಂಡು ತಡಿಬಿಡಿ ಗ್ರಾಮಕ್ಕೆ ಹೋಗುತ್ತಿದ್ದಾಗ ಸಂಜೆ 6 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಖಾನಾಪೂರ ಕ್ಯಾಂಪ ಹತ್ತಿರ ಹೊರಟಾಗ ಮಹೇಶನು ಮೋಟರ್ ಸೈಕಲನ್ನು ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೊರಟನು. ಅದೇ ವೇಳೆಗೆ ಎದುರುಗಡೆಯಿಂದ ಮೋಟರ್ ಸೈಕಲ್ ನಂ. ಎಮ್.ಹೆಚ್ 12 ಇಪಿ 5003 ನೇದ್ದನ್ನು ಅದರ ಸವಾರ ದೇಶ್ಯಪ್ಪ ತಂದೆ ರಾಮು ಚವ್ಹಾಣ ಸಾ:ಉಳ್ಳೆಸೂಗೂರು ತಾಂಡಾ ಈತನು ಕೂಡಾ ತನ್ನ ಮೋಟರ್ ಸೈಕಲ್ ಅನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದು, ಇಬ್ಬರೂ ಮೋಟರ್ ಸೈಕಲ್ ಸವಾರರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪರಸ್ಪರ ಎದಿರು-ಬದಿರಾಗಿ ಡಿಕ್ಕಿಪಡಿಸಿದರು. ಸದರಿ ಅಪಘಾತದಲ್ಲಿ ನನಗೆ ಬಲ ಹಣೆಯ ಮೇಲೆ ರಕ್ತಗಾಯ, ಬಲಗಡೆ ರಕ್ತಗಾಯ ಆಗಿತ್ತು. ಮಹೇಶನಿಗೆ ಎಡ ಹಣೆಯ ಮೇಲೆ ಭಾರಿ ರಕ್ತ ಮತ್ತು ಗುಪ್ತ ಗಾಯವಾಗಿ ಕಿವಿಯಿಂದ ರಕ್ತ ಬಂದಿರುತ್ತದೆ. ಸೊಂಟಕ್ಕೆ ಭಾರಿ ಒಳಪೆಟ್ಟಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು. ದೇಶ್ಯಪ್ಪನಿಗೆ ಎಡಗೈಗೆ ಮತ್ತು ಎಡಗಾಲಿಗೆ ತರಚಿದ ಗಾಯವಾಗಿತ್ತು. ಆಗ ಅವರಿಗೆ 108 ಅಂಬ್ಯುಲೇನ್ಸನಲ್ಲಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ಕಾರಣ ಸದರಿ ಅಪಘಾತವು ಇಬ್ಬರೂ ಮೋಟರ್ ಸೈಕಲಗಳ ಸವಾರರ ನಿರ್ಲಕ್ಷತನದಿಂದ ಜರುಗಿರುತ್ತದೆ. ಸದರಿ ಇಬ್ಬರೂ ಮೋಟರ್ ಸೈಕಲಗಳ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 132/2020 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!