ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/11/2020
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 241/2020 ಕಲಂ: 279,338,304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕಃ 22-11-2020 ರಂದು 5-15 ಪಿ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಚಿಕಿತ್ಸೆ ಪಡೆಯುತ್ತಿದ್ದ ಹಣಮಂತ ತಂದೆ ಮರೆಪ್ಪ ಪೂಜಾರಿ ಸಾಃ ಡೊಣ್ಣಿಗೇರಿ ಸುರಪೂರ ಇತನ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ ನಾನು ಮತ್ತು ನನ್ನ ಅಣ್ಣನಾದ ಲಕ್ಷ್ಮಣ ಇಬ್ಬರೂ ಕೂಡಿ ನಮ್ಮ ಮೋ.ಸೈಕಲ್ ನಂಬರ ಕೆ.ಎ 33 ಆರ್ 8043 ನೇದ್ದರ ಮೇಲೆ ಬಸವನ ಬಾಗೇವಾಡಿ ನಗರಕ್ಕೆ ಹೋಗಿದ್ದೇವು. ಅಲ್ಲಿ ನಾವು ಹುಣಸೇಮರಗಳನ್ನು ಗುತ್ತಿಗೆ ಹಿಡಿಯುವ ಸಲುವಾಗಿ ತಿರುಗಾಡಿ ನೋಡಿಕೊಂಡು ಅಲ್ಲಿಂದ ಪುನಃ ತಾಳಿಕೋಟ, ಹುಣಸಗಿ, ಚಿಕ್ಕನಳ್ಳಿ ಮಾರ್ಗವಾಗಿ ಸುರಪೂರ ಕಡೆಗೆ ಬರುವಾಗ ನಾನು ಮೋ.ಸೈಕಲ್ ನಡೆಸುತ್ತಿದ್ದು, ನನ್ನ ಅಣ್ಣನು ಹಿಂದುಗಡೆ ಕುಳಿತಿದ್ದನು. ನಾವು ತಳವಾರಗೇರಾ ದಾಟಿ ಸುರಪೂರ ಕಡೆಗೆ ಬರುತ್ತಿರುವಾಗ ಸಾಯಂಕಾಲ 4-00 ಗಂಟೆಯ ಸುಮಾರಿಗೆ ತಳವಾರಗೇರಾ ಸಿಮಾಂತರದ ಮಾರಿಕೆಮ್ಮ ಹಳ್ಳದ ಸಮೀಪ ಹಿಂದಿನಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋ.ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ನಾವಿಬ್ಬರೂ ಅಣ್ಣ-ತಮ್ಮಂದಿರು ಮೋ.ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದೇವು. ಸದರಿ ಅಪಘಾತದಲ್ಲಿ ನನ್ನ ಬಲಗೈ ರಟ್ಟೆ, ಮೊಣಕೈಯಿಂದ ಹಸ್ತದ ವರೆಗೆ ತರಚಿ ತೊಗಲು ಕಿತ್ತಿರುವ ಭಾರಿ ರಕ್ತಗಾಯಗಳಾಗಿದ್ದು, ಬಲಮೊಣಕಾಲಿಗೆ ರಕ್ತಗಾಯವಾಗಿರುತ್ತದೆ. ನನ್ನ ಅಣ್ಣನ ತಲೆಯ ಹಿಂಭಾಗ ಭಾರಿರಕ್ತಗಾಯವಾಗಿದ್ದು, ಬಲಹಣೆಗೆ ಗುಪ್ತಗಾಯವಾಗಿ ಗುಮಟಿ ಬಂದು ಮೂಗಿನಿಂದ ಹಾಗು ಬಲಕಿವಿಯಿಂದ ರಕ್ತಸ್ರಾವ ಆಗುತಿತ್ತು. ಹಾಗು ಬಲಗೈ ಮುಂಡಿಯಿಂದ ಮೊಣಕೈವರೆಗೆ, ಬಲಗಡೆ ಬೆನ್ನಿನಿಂದ ಪಕ್ಕೆಲಬಿನವರೆಗೆ, ಎಡಪಕ್ಕಡಿಯಿಂದ ಹೊಟ್ಟೆ, ಟೊಂಕದ ವರೆಗೆ ತರಚಿದ ರಕ್ತಗಾಯಗಳಾಗಿರುತ್ತದೆ. ಮತ್ತು ಬಲಮೊಣಕಾಲಿಗೆ, ಗದ್ದದ ಬಲಭಾಗದಲ್ಲಿ ರಕ್ತಗಾಯಗಳಾಗಿ ಒದ್ದಾಡುತ್ತ 4-10 ಪಿ.ಎಮ್ ಸುಮಾರಿಗೆ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಪಘಾತ ಪಡಿಸಿದ ಲಾರಿ ಚಾಲಕನು ಲಾರಿ ನಿಲ್ಲಿಸಿ ಓಡಿ ಹೋಗಿದ್ದು, ಲಾರಿ ನಂಬರ ಕೆ.ಎ 33 ಬಿ 0563 ಇರುತ್ತದೆ. ಲಾರಿ ಚಾಲಕನ ಹೆಸರು, ವಿಳಾಸ ಗೊತ್ತಾಗಿರುವದಿಲ್ಲ. ಆಗ ನಾನು ಈ ಬಗ್ಗೆ ನನ್ನ ಅಣ್ಣನಾದ ಹುಲಗಪ್ಪನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಸ್ಥಳಕ್ಕೆ ಬಂದು ನೋಡಿರುತ್ತಾರೆ. ಅಷ್ಟರಲ್ಲಿ 108 ಅಂಬ್ಯೂಲೇನ್ಸ್ ಬಂದಿದ್ದರಿಂದ ನನಗೆ ಅದರಲ್ಲಿ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಕಾರಣ ನಮಗೆ ಅಪಘಾತ ಪಡಿಸಿ ಓಡಿ ಹೋಗಿರುವ ಲಾರಿ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 241/2020 ಕಲಂ. 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ: 107/2020 457, 380 ಐಪಿಸಿ : ಇಂದು ದಿನಾಂಕ:22/11/2020 ರಂದು ಬೆಳಿಗ್ಗೆ 09.30 ಗಂಟೆಗೆ ಪಿಯರ್ಾದಿ ಹಾಜರಾಗಿ ಒಂದು ಟೈಪ್ ಮಾಡಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದೆರೆ, ನನ್ನದು ಹುಣಸಗಿ ಪಟ್ಟಣದ ಬಸ್ನಿಲ್ದಾಣದ ಎದುರುಗಡೆ ಮೊಬೈಲ್ ಅಂಗಡಿ ಇದ್ದು, ಪ್ರತಿ ದಿವಸದಂತೆ ದಿ:21/11/2020 ರಂದು ಬೆಳಿಗ್ಗೆ 09.00 ಗಂಟೆಗೆ ಅಂಗಡಿಯನ್ನು ತೆರೆದು ವ್ಯಾಪ್ಯಾರ ಮಾಡಿ ನಂತರ ರಾತ್ರಿ 08.30 ಗಂಟೆಗೆ ಅಂಗಡಿಯನ್ನು ಮುಚ್ಚಿಕೊಂಡು ಕೀಲಿ ಹಾಕಿ ಮನೆಗೆ ಹೋಗಿದ್ದು ಇರುತ್ತದೆ. ದಿ:21/11/2020 ರಂದು ರಾತ್ರಿ 12 ಗಂಟೆಯಿಂದ ದಿನಾಂಕ:22/11/2020 ರಂದು ಬೆಳಗಿನ 5 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಅಂಗಡಿಯ ಕೀಲಿ ಹಾಕಿದ ಕೊಂಡಿಯನ್ನು ಮುರಿದು ಅಂಗಡಿಯಲ್ಲಿರುವ ಒಟ್ಟು ಅ:ಕಿ:24000/- ರೂ.ಗಳ ಒಟ್ಟು 4 ಮೊಬೈಲ್ಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ನನ್ನ ಕಳುವಾದ ಮೊಬೈಲ್ಗಳು ಪತ್ತೆ ಹಚ್ಚಿ, ಕಾಯ್ದೆಸಿರಿ ಕ್ರಮಕೈಕೊಳ್ಳಬೇಕಾಗಿ ವಿನಂತಿ ಅಂತಾ ಇತ್ಯಾದಿ ಟೈಪ್ ಮಾಡಿಸಿದ ದೂರಿನ ಮೇಲಿಂದಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.