ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/11/2020

By blogger on ಮಂಗಳವಾರ, ಡಿಸೆಂಬರ್ 1, 2020



                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/11/2020 
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 166/2020 ಕಲಂ: 00 ಒಕ : ದಿನಾಂಕ 18.11.2020 ರಂದು ರಾತ್ರಿ 10:00 ಗಂಟೆಗೆ ಫಿರ್ಯಾದಿ ಮತ್ತು ಆತನ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿ ಊಟ ಮಾಡಿದ ನಂತರ ಕಾಣೆಯಾದ ಪ್ರೀಯಾಂಕಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸಂಬಂದಿಸಿದಂತೆ ಎಲ್ಲಾರು ರಾತ್ರಿ 11:30 ಗಂಟೆಯ ವರೆಗೆ ಆಕೆಯೊಂದಿಗೆ ಮಾತನಾಡುತ್ತ ಕುಳಿತು ನಂತರ ತಮ್ಮ-ತಮ್ಮ ರೂಮ್ಗಳಿಗೆ ಹೋಗಿ ಮಲಗಿರುತ್ತಾರೆ. ನಂತರ ದಿನಾಂಕ 19.11.2020 ರಂದು ಬೆಳಿಗ್ಗೆ 5:00 ಗಂಟೆಯ ಸುಮಾರಿಗೆ ಫಿರ್ಯಾದಿಯು ಎಂದಿನಂತೆ ಕಾಲು ಮಡಿಯಲು ಎದ್ದಾಗ ತನ್ನ ಮಗಳು ಪ್ರೀಯಾಂಕಳ ರೂಮಿಗೆ ಹೊರಗಿನಿಂದ ಕೊಂಡಿ ಹಾಕಿದ್ದನ್ನು ಕಂಡು ಬೆಳಗಿನ ಕ್ರಿಯಾ ಕಾರ್ಯಗಳಿಗೆ ಹೋಗಿರಬೇಕು ಅಂತಾ ತಿಳಿದು ಸುಮ್ಮನಾಗಿ ನಂತರ ಎಷ್ಟೊತ್ತಾದರು ತನ್ನ ಮಗಳು ಕಾಣಿಸದೇ ಇರುವುದರಿಂದ ಮನೆಯಲ್ಲಿದ್ದ ತನ್ನ ಹೆಂಡತಿ, ಮಗನಿಗೆ ಎಬ್ಬಿಸಿ ವಿಷಯ ತಿಳಿಸಿದ ನಂತರ ಸಂಬಂದಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ವಿಚಾರಿಸಿದ್ದು ಅಲ್ಲದೇ ಗುಲಬಗರ್ಾಕ್ಕೆ ಹೋಗಿ ಹುಡುಕಲಾಗಿ ಎಲ್ಲಿಯೂ ತನ್ನ ಮಗಳು ಕಾಣದೇ ಇದ್ದ ಬಗ್ಗೆ ತಡವಾಗಿ ಠಾಣೆ ಬಂದು ತನ್ನ ಮಗಳನ್ನು ಹುಡುಕಿ ಕೊಡುವಂತೆ ಇಂದು ದಿನಾಂಕ 21.11.2020 ರಂದು ಬೆಳಿಗ್ಗೆ 9:00 ಗಂಟೆಗೆ ಠಾಣೆಗೆ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 167/2020 ಕಲಂ: 00 ಒಕ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ: 175/2020 ಕಲಂ: 87 ಕೆಪಿ ಆಕ್ಟ: ಇಂದು ದಿನಾಂಕ: 21.11.2020 ರಂದು 4 ಎಎಮ್ ಕ್ಕೆ ಪಿರ್ಯಾದಿದಾರರು ರಾತ್ರಿ ಗಸ್ತ ಚೆಕ್ಕಿಂಗ್ ಕುರಿತು ಕೆಂಭಾವಿ ಪಟ್ಟಣದಲ್ಲಿದ್ದಾಗ ಬೈಚಬಾಳ ಗ್ರಾಮದ ಸಣ್ಣ ಹನುಮಾನ ದೇವರ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0228 ನೇದ್ದರಲ್ಲಿ ಸದರ ಬೈಚಬಾಳ ಗ್ರಾಮದ ಸಣ್ಣ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 05.05 ಎಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 02 ಜನ ಆರೋಪಿತರು ಸಿಕ್ಕಿದ್ದು  ಮತ್ತು ಒಟ್ಟು 3280/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು & 1 ಬರಕಾ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 06.30 ಎ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 02.15  ಪಿಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 175/2020 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಮಹಿಳಾ ಪೊಲೀಸ ಠಾಣೆ ಗುನ್ನೆ ನಂ:- 35/2020 ಕಲಂ: 498(ಎ) 504, 506 ಐ.ಪಿ.ಸಿ  : ಇಂದು ದಿನಾಂಕ: 21.11.2020 ರಂದು ರಆತ್ರಿ 10 ಗಂಟೆಗೆ ಶ್ರೀಮತಿ ಜ್ಯೋತಿ ಗಂಡ ಶರಣಬಸವ ಯರಗೋಳ್ ವಯಾ-30 -ವಾಣಿಜ್ಯ ತೆರಿಗೆ ಅಧಿಕಾರಿಗಳು ಸಾ=ಬಸವೇಶ್ವರ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಹಾಜರಪಡಿಸಿದ್ದು ಸಾರಂಶವೇನೆಂದರೆ ದಿನಾಂಕ: 13.11.2016 ರಂದು ನನ್ನ ಮದುವೆಯು ಯಾದಗಿರಿಯ ಶರಣಬಸವ ತಂದೆ ಚನ್ನಬಸಪ್ಪ ಯರಗೋಳ್ ಇವರೊಟ್ಟಿಗೆ ಯಾದಗಿರಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ್ದು ಇರುತ್ತದೆ. ನನ್ನ ಗಂಡ ಶರಣಬಸವ ಇವರು ಪುಣೆ ನಗರದಲ್ಲಿ ಸಾಪ್ಟ್ವೇರ ಇಂಜೀನಿಯರ್ ಅಂತ ಕೆಲಸ ಮಾಡಿಕೊಂಡಿರುತ್ತಾರೆ. 2018-19 ನೇ ಸಾಲಿನಲ್ಲಿ ನಾನು ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ನೇಮಕವಾಗಿದ್ದು, ನಾನು ನೇಮಕವಾದ ವಿಷಯ ನನ್ನ ಗಂಡನಿಗೆ ಇಷ್ಟ ಇರಲಿಲ್ಲ ಅದೇ ವಿಷಯವಾಗಿ ನನ್ನ ಗಂಡ ನನ್ನನ್ನು ನೌಕರಿ ಬಿಟ್ಟು ಬರಲು ಹೇಳಿದ್ದು ನೀನು ನನ್ನ ಹತ್ತಿರ ಇರಬೇಕಾದರೆ ನೌಕರಿ ಬಿಟ್ಟು ನನ್ನ ಬಳಿ ಇರಬೇಕು ಅಂತ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ. ನಮ್ಮಿಬ್ಬರ ಮಧ್ಯ ಮನಸ್ತಾಪವಾಗಿದ್ದರಿಂದ ನಾನು ತವರು ಮನೆಯಲ್ಲಿ ಬಂದು ಇದ್ದೇನು. ನಂತರ ನನ್ನ ಗಂಡ ಶರಣಬಸವ ಇವರು ನೀನು 15 ದಿವಸಗಳಗೊಳಗಾಗಿ ನನ್ನ ಹತ್ತಿರ ಬರಬೇಕು ಅಂತ ದಿನಾಂಕ: 06.11.2020 ರಂದು ನನಗೆ ಲೀಗಲ್ ನೊಟೀಸ್ ಕಳುಹಿಸಿಕೊಟ್ಟಿದ್ದರು. ನಾನು ಇಂದು ದಿನಾಂಕ:  21.11.2020 ರಂದು ನನ್ನ ತಂದೆ ತಾಯಿಯೊಟ್ಟಿಗೆ ಯಾದಗಿರಿಗೆ ನನ್ನ ಗಂಡನ ಮನೆಗೆ ಬಂದಿದ್ದಾಗ ನನ್ನ ಗಂಡ ನನ್ನನ್ನು ಮಾನಸಿಕವಾಗಿ ಕಿರುಕುಳ ನೀಡಿ ನೀನು ನಮ್ಮ ಮನೆಯಲ್ಲಿ ಇರಬ್ಯಾಡ ಅಂತ ಹೇಳಿ ನನ್ನ ಬಟ್ಟೆ ಬರೆಗಳನ್ನು ಹೊರಗಡೆ ಎಸೆದು ನನ್ನನ್ನು ಅವ್ಯಾಚವಾಗಿ ಬೈದು ನೀನು ನಮ್ಮ ಮನೆಯಲ್ಲಿ ಇದ್ದರೇ ನಿನ್ನ ಜೀವ ತೆಗೆಯುತ್ತೇನೆಂದು ಹೇಳಿ ಕುತ್ತಿಗಿಗೆ ಕೈ ಹಾಕಿ ಪ್ರಾಣ ಬೆದರಿಕೆ ಹಾಕಿರುತ್ತಾನೆ. ನಂತರ ನನ್ನನ್ನು ದಬ್ಬಿಕೊಟ್ಟಿರುತ್ತಾನೆ. ಈ ರೀತಿ ಮಾಡಿದ ನನ್ನ ಗಂಡ ಶರಣಬಸವ ತಂದೆ ಚನ್ನಬಸಪ್ಪ  ಇವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು  ಕೋರಲಾಗಿದೆ ಅಂತ ಕೊಟ್ಟ ದೂರಿನನ್ವಯ ಯಾದಗಿರಿ ಮಹಿಳಾ ಠಾಣೆಯಲ್ಲಿ ಗುನ್ನೆ ನಂ: 35/2020 ಕಲಂ: 498(ಎ), 504, 506 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!