ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/11/2020

By blogger on ಮಂಗಳವಾರ, ಡಿಸೆಂಬರ್ 1, 2020

                       


                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/11/2020 

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 166/2020 ಕಲಂ: 00 ಒಕ : ದಿನಾಂಕ 26.10.2020 ರಂದು ಬೆಂಗಳೂರಿನಿಂದ ಕಾಣೆಯಾಗಿದ್ದ ಮನುಷ್ಯ ನರಸಪ್ಪನು ಗಾಜರಕೊಟ್ ಗ್ರಾಮಕ್ಕೆ ಬಂದು ನಂತರ ಊರಲ್ಲಿ ಎಲ್ಲಾರಿಗೆ ಮಾತನಾಡಿಸಿದ ನಂತರ ದಿನಾಂಕ 30.10.2020 ರಂದು ಮತ್ತೆ ತನ್ನ ಹೆಂಡತಿಯಲ್ಲಿಗೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ತನ್ನ ಅಜ್ಜಿಯ ಹತ್ತಿರ 500/- ರೂ ಗಳನ್ನು ಖಚರ್ಿಗೆ ತೆಗೆದುಕೊಂಡು ಹೋಗಿದ್ದು ಫಿರ್ಯಾದಿಯು ದಿನಾಂಕ 31.10.2020 ರಂದು ಬೆಂಗಳೂರಿನಲ್ಲಿರುವ ತನ್ನ ಸೊಸೆಗೆ ಫೋನ್ ಮಾಡಿ ವಿಚಾರಿಸಿದಾಗ ನರಸಪ್ಪನು ಬೆಂಗಳೂರಿಗೆ ಹೋಗದೇ ಇದ್ದ ಬಗ್ಗೆ ಮಾಹಿತಿ ಗೊತ್ತಾಗಿ ಫಿರ್ಯಾದಿ ಮತ್ತು ಆತನ ಸೊಸೆ ಸಾಬಮ್ಮ ಇಬ್ಬರು ಕೂಡಿ ತಮ್ಮ ಸಂಬಂದಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ವಿಚಾರಿಸಿದ್ದು ಅಲ್ಲದೇ ಹೈದ್ರಾಬಾದ, ಚಿತ್ತಾಪೂರ, ಬೂದೂರ ಗ್ರಾಮಗಳಿಗೆ ಹೋಗಿ ವಿಚಾರಿಸಲಾಗಿ ಅಲ್ಲಿಯು ಇಲ್ಲದೇ ಇರುವುದರಿಂದ ಫಿರ್ಯಾದಿಯು ಕಾಣೆಯಾದ ತನ್ನ ಮಗ ನರಸಪ್ಪ ತಂದೆ ನರಸಪ್ಪ ಜೂಗ ವ||26 ವರ್ಷ ಜಾ||ಮಾದಿಗ ಉ||ಕೂಲಿ ಕೆಲಸ ಸಾ||ಗಾಜರಕೊಟ್ ತಾ||ಗುರುಮಠಕಲ್ ಹಾ||ವ||ರಾಮಸಮುದ್ರ, ಜಿ||ಯಾದಗಿರಿ ಈತನನ್ನು ಪತ್ತೆ ಮಾಡಿ ಕೊಡವಂತೆ ತಡವಾಗಿ ಖುದ್ದಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 166/2020 ಕಲಂ: 00 ಒಕ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 284/2020. ಕಲಂ. 279.337.338 429. ಐ.ಪಿ.ಸಿ. & 187 ಐಎಂವಿ ಯಾಕ್ಟ : ಇಂದು ದಿನಾಂಕ: 19/11/2020 ರಂದು 14-30 ಗಂಟೆಗೆ ಪಿಯರ್ಾದಿ ಶ್ರೀ ಮಲ್ಲಪ್ಪ ತಂದೆ ಭೀಮಣ್ಣ ಮಾಲಿ ಪಾಟೀಲ್ ವ|| 30 ಜಾ|| ಕುರುಬರ ಉ|| ಚಾಲಕ ಸಾ|| ದರಿಯಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 16/11/2020 ರಂದು ಬೆಳಿಗ್ಗೆ ನನ್ನ ಟಂಟಂದಲ್ಲಿ ನಮ್ಮೂರಿನಿಂದ ಲೇಬರ ಕರೆದುಕೊಂಡು ಯಕ್ಷಿಂತಿ ಗ್ರಾಮದ ನನಗೆ ಪರಿಚಯದವರಾದ ಮಲ್ಲಪ್ಪ ತಂದೆ ಅಯ್ಯಪ್ಪ ಇವರ ಹೋಲಕ್ಕೆ ಬಂದು ಲೇಬರ ಬಿಟ್ಟು, ನಂತರ ನಾನು ನನ್ನ ಟಂಟಂಗೆ ಟೈರ್ ಬೇಕಾಗಿದ್ದರಿಂದ ಯಕ್ಷಿಂತಿ ಗ್ರಾಮದ ಮಲ್ಲಪ್ಪ ತಂದೆ ಅಯ್ಯಪ್ಪ ದೊಡ್ಡಮನಿ ಇವರಿಗೆ ನಾನು ಶಹಾಪುರ ಕ್ಕೆ ಹೋಗಿ ಟಂಟಂಕ್ಕೆ ಟೈರ್ ತೆಗೆದುಕೊಂಡು ಬರುತ್ತೇನೆ ಎಂದು ಮಲ್ಲಪ್ಪ ಇವರಿಗೆ ತಮ್ಮ ಮೋಟರ್ ಸೈಕಲ್ ಕೊಡಲು ಕೇಳಿದಾಗ ತೆಗೆದುಕೊಂಡು ಹೋಗಿ ಬರಿ ಅಂತ ತೀಳಿಸಿ ಮೋಟರ್ ಸೈಕಲ್ ಕೊಟ್ಟಿದ್ದರಿಂದ, ಸದರಿ ಮೋಟರ್ ಸೈಕಲ್ ನಂ ಕೆಎ-33ವಿ-0114 ನೇದ್ದನ್ನು ತೆಗೆದುಕೊಂಡು ನಾನು ಮತ್ತು ನನ್ನ ಹಾಗೆ ಲೇಬರ ತೆಗೆದುಕೊಂಡು ಬಂದಿದ್ದ ನಮ್ಮೂರ ಬಸವರಾಜ ತಂದೆ ಖಂಡಪ್ಪ ಮಾಲಿ ಪಾಟೀಲ್ ಇಬ್ಬರೂ ಕೂಡಿಕೊಂಡು ಸದರಿ ಮೋಟರ್ ಸೈಕಲ್ ಮೇಲೆ ಶಹಾಪೂರಕ್ಕೆ ಬಂದು ಟೈರ್ ತೆಗೆದುಕೊಂಡು ಮರಳಿ ಶಹಾಪೂರದಿಂದ ಯಕ್ಷಿಂತಿ ಗ್ರಾಮಕ್ಕೆ ಸದರಿ ಮೋಟರ್ ಸೈಕಲ್ ಮೇಲೆ ನಾನು ಮತ್ತು ಬಸವರಾಜ ಇಬ್ಬರು ಹೊರಟು ಸದರಿ ಮೋಟರ್ ಸೈಕಲ್ ನಾನು ಚಲಾಯಿಸುತ್ತಿದ್ದೆನು. ನನ್ನ ಹಿಂದೆ ಬಸವರಾಜ ಕುಳಿತುಕೊಂಡಿದ್ದನು ನಾನು ನನ್ನ ಮೋಟರ್ನ್ನು ಚಲಾಯಿಸುತ್ತ ಸುರಪೂರ-ಶಹಾಪೂರ ಮುಖ್ಯ ರಸ್ತೆಯ ಮೇಲೆ ನನ್ನ ಸೈಡಿಗೆ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ನಾನು ಹೋಗುತ್ತಿರುವಾಗ ಹತ್ತಿಗುಡೂರ ಕೆಇಬಿ ಗೇಟ ಇನ್ನು ಅಂದಾಜು 100 ಮೀಟರ್ ಮುಂದೆ ಇರುವಾಗ ಒಂದು ಎಮ್ಮೆ ರಸ್ತೆ ಪಕ್ಕದಲ್ಲಿ ಇದ್ದಾಗ ನಾನು ಎಮ್ಮೆ ದಾಟಿ ಹೋಗುತ್ತಿರುವಾಗ ನನ್ನ ಹಿಂದಿನಿಂದ ಶಹಾಪೂರ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎಮ್ಮೆಗೆ ಡಿಕ್ಕಿಪಡಿಸಿ ನಮ್ಮ ಮೋಟರ್ ಸೈಕಲ್ಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾವು ಮೋಟರ್ ಸೈಕಲ್ ಸಮೇತವಾಗಿ ರಸ್ತೆಯ ಮೇಲೆ ಬಿದ್ದೆವು. ಸದರಿ ಅಪಘಾತದಲ್ಲಿ ನನಗೆ ಎಡಗೈ ಹಿಂದಿನ ಜುಬ್ಬಕ್ಕೆ ಗುಪ್ತಗಾಯವಾಗಿರುತ್ತದೆ, ಬಸವರಾಜ ತಂದೆ ಖಂಡಪ್ಪ ಇವರಿಗೆ ನೋಡಲಾಗಿ ಬಲಗೈ ತೋಳಿಗೆ, ಮೊಳಕೈಗೆ ಭಾರಿ ರಕ್ತಗಾಯ, ಬಲಗಾಲು ತೊಡೆಗೆ, ಮೊಳಕಾಲು ಕೆಳಗೆ ತರಚಿದ ಗಾಯವಾಗಿರುತ್ತದೆ. ಸದರಿ ಎಮ್ಮೆಗೆ ಮುಖಕ್ಕೆ, ಕಾಲಿಗೆ, ಹೊಟ್ಟೆಗೆ, ಭಾರಿ ಗಾಯವಾಗಿ ಮೃರಪಟ್ಟಿರುತ್ತದೆ. ಮೃತಪಟ್ಟ ಸದರಿ ಎಮ್ಮಿಯ ಎಮ್ಮಿಕಾಯುತ್ತಿದ್ದವನಿಗೆ ವಿಚಾರಿಸಲಾಗಿ ತನ್ನ ಹೆಸರು ಭೀಮಣ್ಣ ತಂದೆ ಕಾಮಣ್ಣ ಕಜೆ ಸಾ|| ವಿಭೂತಿಹಳ್ಳಿ ಅಂತ ತಿಳಿಸಿದನು, ಸದರಿ ಅಪಘಾತಮಾಡಿದ ಟಿಪ್ಪರ ಪಕ್ಕದಲ್ಲಿ ಇದ್ದ ಅದರ ಚಾಲಕನಿಗೆ ಹೆಸರು ವಿಚಾರಿಸಲಾಗಿ ತನ್ನ ಹೆಸರು ಅಂಬಲಪ್ಪ ತಂದೆ ಭೀಮರಾಯ ನಾಟೇಕಾರ ಸಾ|| ಬೆನಕನಹಳ್ಳಿ ಅಂತ ತಿಳಿಸಿದನು. ಸ್ವಲ್ಪ ಇದ್ದ ಆಗೆ ಮಾಡಿ ಹೋದನು, ಸದರಿ ಅಪಘಾತ ಮಾಡಿದ ಟಿಪ್ಪರ್ ನೋಡಲಾಗಿ ನಂಬರ ಕೆಎ-33ಎ-2991 ನೇದ್ದು ಮತ್ತು ನನ್ನ ಮೋಟರ್ ಸೈಕಲ್ ನಂಬರ ಕೆಎ-33-ವಿ-0114 ನೇದ್ದವು ಜಖಂ ಗೊಂಡಿರುತ್ತದೆ. ಸದರಿ ಅಪಘಾತವು ಮದ್ಯಾಹ್ನ 2-30 ಗಂಟೆಗೆ ಜರುಗಿರುತ್ತದೆ. ಆಗ ಅಲ್ಲೇ ಹೊರಟಿದ್ದ ನಮ್ಮೂರ ಮಾಳಪ್ಪ ತಂದೆ ಹಣಮಂತ ಹೊಸಮನಿ ಈತನು ಬಂದು ನೋಡಿ ವಿಚಾರಿಸಿದ್ದು ಮಾಳಪ್ಪನು ಅಂಬುಲೇನ್ಸಕ್ಕೆ ಪೋನ ಮಾಡಿದ್ದರಿಂದ ಅಂಬುಲೆನ್ಸ ಬಂದ ನಂತರ ಅದರಲ್ಲಿ ನನಗೆ ಮತ್ತು ಬಸವರಾಜನಿಗೆ ಹಾಕಿಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನಮಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೊಗಲು ತಿಳಿಸಿದ್ದರಿಂದ ಅಪಘಾತದ ಸುದ್ದಿಕೆಳಿ ಬಂದ ನಮ್ಮೂರ ಸಾಯಬಣ್ಣ ತಂದೆ ಚಂದ್ರಾಮಪ್ಪ ಇನಾಂದಾರ ಈತನು ನನಗೆ ಮತ್ತು ಬಸವರಾಜನಿಗೆ ಒಂದು ಅಂಬುಲೇನ್ಸದಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದು ನಂತರ ಬಸವರಾಜನಿಗೆ ಹೆಚ್ಚಿನ ಉಪಚಾರ ಕುರಿತು ಜಿ.ಎಸ್.ಕುಲಕರಣಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಾನು ಉಪಚಾರ ಪಡೆದು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರುನೀಡಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 284/2020 ಕಲಂ: 279, 337, 338, 429, ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.    


 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!