ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/11/2020
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 283/2020 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ: 18/11/2020 ರಂದು 6.00 ಪಿ.ಎಂ. ಸುಮಾರಿಗೆ ಶ್ರೀ ನಾಗರಾಜ ತಂ/ ಭೀಮರಾಯ ರಾಮಸ್ವಾಮಿ ಸಾ|| ಮಹಲರೋಜಾ ತಾ|| ಶಹಾಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಸಾರಾಂಶ ಏನೆಂದರೆ ನನ್ನ ಹೆಂಡತಿ ಮಲ್ಲಮ್ಮ ಇವಳು ತನ್ನ ತವರು ಮನೆಯಾದ ದೋರನಳ್ಳಿಯಲ್ಲಿ ಮರೆಮ್ಮ ದೇವಿಯ ಮೂತರ್ಿ ಪ್ರತಿಷ್ಠಾಪನೆ ಕಾರ್ಯಕ್ರಮ ಇದೆ ಅಂತಾ 15 ದಿವಸಗಳ ಹಿಂದೆ ದೋರನಳ್ಳಿಗೆ ಬಂದಿದ್ದಳು. ಹೀಗಿದ್ದು, ನನ್ನ ಹೆಂಡತಿ-ಮಕ್ಕಳನ್ನು ಕರೆದುಕೊಂಡು ಬಂದರಾಯಿತು ಅಂತಾ ಇಂದು ದಿನಾಂಕ:18/11/2020 ರಂದು ಬೆಳಿಗ್ಗೆ ದೋರನಳ್ಳಿಗೆ ಬಂದಿದ್ದೆನು. ಸಾಯಂಕಾಲ 5.00 ಪಿ.ಎಂ. ಸುಮಾರಿಗೆ ದೋರನಳ್ಳಿ-ಮಹಾಂತೇಶ್ವರ ಗುಡ್ಡ ರೋಡಿನಲ್ಲಿ ಇರುವ ನಮ್ಮ ಮಾವ ದೇವಪ್ಪ ರಸ್ತಾಪುರ ರವರ ಮನೆಯ ಮುಂದೆ ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಕುಳಿತಿದ್ದಾಗ 5.10 ಪಿ.ಎಂ. ಸುಮಾರಿಗೆ ನನ್ನ ಕಿರಿಯ ಮಗಳು ಗೀತಾ ಇವಳು ರಸ್ತೆಯ ಆಕಡೆ ಇರುವ ಹಿರಿಯ ಮಗಳು ಭವಾನಿಯ ಹತ್ತಿರ ಹೋಗಲು ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಯಾದಗಿರಿ-ಶಹಾಪುರ ಮುಖ್ಯರಸ್ತೆಯ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ರಸ್ತೆ ದಾಟುತ್ತಿದ್ದ ನನ್ನ ಕಿರಿಯ ಮಗಳ ಮೇಲೆ ಟಿಪ್ಪರ ಹಾಯಿಸಿಕೊಂಡು ಸ್ವಲ್ಪ ಮುಂದೆ ಹೋಗಿ ಟಿಪ್ಪರ ನಿಲ್ಲಿಸಿದನು. ಹತ್ತಿರ ಹೋಗಿ ನೋಡಲಾಗಿ ಟಿಪ್ಪರ ಟೈರ್ ನನ್ನ ಮಗಳ ತಲೆಯ ಮೇಲೆ ಹಾದು ಹೋಗಿದ್ದರಿಂದ ತಲೆ ನುಜ್ಜುಗುಜ್ಜಾಗಿ ತಲೆಯಿಂದ ಮಾಂಸ ಖಂಡ ಹೊರಗೆ ಬಂದಿರುತ್ತದೆ. ಅಲ್ಲಿಯೇ ಇದ್ದ ಟಿಪ್ಪರ ನಂಬರ ನೋಡಲಾಗಿ ಕೆಎ-33 ಎ-9887 ಅಂತಾ ಇದ್ದು, ಅದರ ಚಾಲಕನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಆನಂದ ತಂ/ ಶಂಕರ ಜಾದವ ಸಾ|| ದೇವರ ಹಿಪ್ಪರಗಿ ತಾಂಡಾ ಅಂತಾ ಹೇಳಿ ಜನ ಸೇರುವುದನ್ನು ನೋಡಿ ಓಡಿ ಹೋದನು. ಕಾರಣ ಈ ಅಪಘಾತಕ್ಕೆ ಕಾರಣನಾದ ಅಶೋಕ ಲೈಲ್ಯಾಂಡ್ ಟಿಪ್ಪರ್.ನಂ. ಕೆಎ-33 ಎ-9887 ನೇದ್ದರ ಚಾಲಕ ಆನಂದ ತಂ/ ಶಂಕರ ಜಾದವ ಸಾ|| ದೇವರ ಹಿಪ್ಪರಗಿ ತಾಂಡಾ ಇವನ ವಿರುದ್ದ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ. 283/2020ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 105/2020 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನನ್ನ ಅಳಿಯನಾದ ದೇವಿಂದ್ರಪ್ಪ ತಂದೆ ನಿಂಗಪ್ಪ ನಾಯ್ಕೋಡಿ ಸಾ|| ಗಡ್ಡೆಸುಗೂರ ಈತನು ಊರಲ್ಲಿ ಮನೆ ನಿಮರ್ಾಣ ಮಾಡುತ್ತಿದ್ದು, ಮನೆ ನಿಮರ್ಾಣಕ್ಕಾಗಿ ದುಡ್ಡಿನ ಅವಶ್ಯಕತೆ ಇದ್ದರಿಂದ ನನ್ನ ಹತ್ತಿರ 2,000,00/- ರೂ|| ಹಣ ಕೇಳಿದ್ದನು. ಸದರಿ ಹಣ ದಿನಾಂಕ 12/11/2020 ರಂದು ನಾನು ಕೊಡುತ್ತೇನೆ ಬಾ ಅಂತಾ ಹೇಳಿದ್ದರಿಂದ ಅಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ನನ್ನ ಅಳಿಯ ದೇವಿಂದ್ರಪ್ಪ ಈತನು ನನ್ನ ಮನೆಗೆ ಬಂದಿದ್ದನು. ದಿನಾಂಕ 12/11/2020 ರಂದು ನಾನು ನನ್ನ ಅಳಿಯ ದೇವಿಂದ್ರಪ್ಪ ಈತನಿಗೆ 02 ಲಕ್ಷ ರೂಪಾಯಿ ನಗದು ಹಣವನ್ನು ನನ್ನ ಮನೆಯಲ್ಲಿ ಕೊಟ್ಟೆನು. ನಂತರ ದೇವಿಂದ್ರಪ್ಪ ಈತನು ಸದರಿ ಹಣ ತೆಗೆದುಕೊಂಡು ಹೋಗಲು ನಾನು ಒಬ್ಬನೆಯಾಗುತ್ತೇನೆ. ನನ್ನ ಸಂಗಡ ಊರಿನ ವರೆಗೆ ಬಾ ಅಂತಾ ನನಗೆ ಅಂದಿದ್ದರಿಂದ ನಾನು ನನ್ನ ಸ್ಕೂಟಿ ಮೋಟರ್ ಸೈಕಲ್ ನಂ ಕೆ.ಎ 04 ಹೆಚ್.ಎ 0462, ನೇದ್ದನ್ನು ತೆಗೆದುಕೊಂಡು ನನ್ನ ಅಳಿಯನಿಗೆ ಸ್ಕೂಟಿ ಹಿಂದೆ ಕೂಡಿಸಿ, ಹಣದ ಚೀಲವನ್ನು ನಾನು ಒಂದು ಚೀಲದಲ್ಲಿ ಹಾಕಿ ಸ್ಕೂಟಿ ಮುಂದೆ ಸಿಗಾಕಿದೆನು. ಮನೆಯಿಂದ, ಗಂಜ್ ಕ್ರಾಸ್, ಹೊಸಳ್ಳಿ ಕ್ರಾಸ್ದಿಂದ ಕೋಟರ್್ ಹತ್ತಿರ ಇರುವ ಕೆ.ಇ.ಬಿಗೆ ಹೋಗಿ ಕೆ.ಇ.ಬಿ ಬಿಲ್ ಹಣ ಭತರ್ಿ ಮಾಡಿ, ಅದೇ ಸ್ಕೂಟಿ ಮೇಲೆ ನಾನು ನನ್ನ ಅಳಿಯ ದೇವಿಂದ್ರಪ್ಪ ಇಬ್ಬರು ಕೂಡಿ, ಕಾಡ್ಲೂರು ಪೆಟ್ರೋಲ್ ಬಂಕ್ ಮುಂದಿನಿಂದ, ಮುಂದೆ ಹೋಗುತ್ತಿರುವಾಗ, ವಾಟರ್ ಸವರ್ಿಸ್ ಮುಂದೆ ಯಾರೋ ಅಪರಿಚಿತರಿಬ್ಬರು ಒಂದು ಪಲ್ಸರ್ ಮೋಟರ್ ಸೈಕಲ್ ಮೇಲೆ ನಮ್ಮ ಎದರುಗಡೆಯಿಂದ ನಮ್ಮ ಹತ್ತಿರ ಬಂದು, ಸರ್ ನಿಮ್ಮ ಜೇಬಿನಿಂದ ಅಲ್ಲಿ ಹಣ ಬಿದ್ದಾವೆ ನೋಡಿ ಅಂತಾ ಅಂದಾಗ, ರೋಡಿನ ಮೇಲೆ 100/ ರೂ|| 4 ನೋಟುಗಳು ಬಿದ್ದಿದ್ದು ನಾವು ನೋಡಿ ಸದರಿ ನೋಟ್ಗಳು ನಮ್ಮವೇ ಅಂತಾ ತಿಳಿದು, ಅವುಗಳನ್ನು ನಾನು ನನ್ನ ಅಳಿಯ ಇಬ್ಬರು ತೆಗೆದುಕೊಂಡು ಬರುವಷ್ಠರಲ್ಲಿ ಸ್ಕೂಟಿಯ ಮುಂದೆ ನಮ್ಮ ಕೈ ಚೀಲದಲ್ಲಿ ಸಿಗಾಕಿದ ನಮ್ಮ 2,00000/ ಲಕ್ಷ ರೂಪಾಯಿಗಳು ನಮಗೆ ಗೊತ್ತಿಲ್ಲದಂತೆ ಸದರಿಯವರೆ ತೆಗೆದುಕೊಂಡು ಹೋಗಿರುತ್ತಾರೆ. ನಂತರ ನಾವು ಅವರಿಗಾಗಿ ಅಲ್ಲಿ ಅಲ್ಲಿ ಹುಡುಕಿದರು ಅವರು ಸಿಗಲಿಲ್ಲ. ನಂತರ ನಾನು ನಮ್ಮ ಗೆಳೆಯರಾದ ಪ್ರಹ್ಲಾದ ಜೋಷಿ ತಂದೆ ಅಶೋಕಕುಮಾರ ಮತ್ತು ಆನಂದ ತಂದೆ ಜಂಭಣ್ಣ ಮಾಜನಶೆಟ್ಟಿ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದರು. ಎಲ್ಲರು ಕೂಡಿ ಯಾದಗಿರಿಯ ವಿವಿಧ ಕಡೆಗಳಲ್ಲಿ ತಿರುಗಾಡಿ ನೋಡಿದರು. ಅವರು ಸಿಗಲಿಲ್ಲ. ಸದರಿ ಘಟನೆ ದಿನಾಂಕ 12/11/2020 ರಂದು ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ನಡೆದಿರುತ್ತದೆ. ಇಲ್ಲಿಯ ವರೆಗೆ ನಾವು ಅವರಿಗೆ ಹುಡುಕಾಡಿದರು ಸಿಗದ ಕಾರಣ ಮತ್ತು ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ನಮ್ಮ ಗಮನ ಬೇರೆಡೆ ಸೆಳೆದು ನಗದು ಹಣ 02 ಲಕ್ಷ ರೂಪಾಯಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವರನ್ನು ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 105/2020 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ: 165/2020 ಕಲಂ 279, 337, 338 ಐಪಿಸಿ ಮತ್ತು 177 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ 18.11.2020 ರಂದು ಸಮಯ ಮಧ್ಯಾಹ್ನ 12:00 ಗಂಟೆಗೆ ಪ್ರಕರಣದ ಫಿರ್ಯಾದಿ ಮತ್ತು ಗಾಯಾಳುದಾರರಾದ ಹಣಮಂತ ನಸಲವಾಯಿ, ಸಂಟೆಪ್ಪ ನಿರಟ್ಟಿ ಕೂಡಿಕೊಂಡು ಯಾವುದೇ ನೋಂದಣಿ ಸಂಖ್ಯೆ ಹಾಕಿಸದೇ ಇರುವ ಆರೋಪಿ ಭಾಗ್ಯಪ್ಪ ಇತನ ಟಂ ಟಂನಲ್ಲಿ ಯಡೇಪಲ್ಲಿ ಗ್ರಾಮದಿಂದ ಗುರುಮಠಕಲ್ ಪಟ್ಟಣಕ್ಕೆ ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದಾಗ ನಜರಾಪೂರ ಗ್ರಾಮ ದಾಟಿದ ನಂತರ ಟಂ ಟಂ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊಗಿದ್ದು ಅದೇ ವೇಳೆಗೆ ಗುರುಮಠಕಲ್ ಕಡೆಯಿಂದ ಮೋಟಾರು ಸೈಕಲ್ ನಂಬರ ಕೆಎ-32-ಡಬ್ಲೂ-8857 ನೇದ್ದರ ಮೇಲೆ ಆರೋಪಿ ಸದಾಶಿವರಡ್ಡಿ ಈತನು ಉಮೇಶನಿಗೆ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ಪರಸ್ಪರ ಮುಖಾ-ಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ಅಪಘಾತ ಸಂಭವಿಸಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 165/2020 ಕಲಂ 279, 337, 338 ಐಪಿಸಿ ಮತ್ತು 177 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 148/2020 ಕಲಂ 332, 353,504,506 ಐಪಿಸಿ : ಇಂದು ದಿನಾಂಕ: 18-11-2020 ರಂದು ಸಾಯಂಕಾಲ 05-30 ಗಂಟೆಗೆ ಪಿಯಾಧಿದಾರರಾರ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 17-11-2020 ರಂದು ನಾನು ಮತ್ತು ಗ್ರಾಮಸಹಾಯಕ ರಮೇಶ ಇಬ್ಬರೂ ಕೂಡಿ ಬಸ್ಸಾಪೂರ ಗ್ರಾಮಕ್ಕೆ ಹೋಗಿ ಅಲ್ಲಿ ಆಂಜನೇಯ ಗುಡಿಯ ಹತ್ತಿರ ಕುಳಿತು ಪಿಂಚಿಣಿದಾರರ ಆಧಾರ ಕಾರ್ಡ ತೆಗೆದುಕೊಳ್ಳುವ ಮತ್ತು ರೈತರಿಗೆ ಹೊಲ್ಡಿಂಗ್ ಪತ್ರ ಕೊಡುತ್ತಿರುವಾಗ ಸಾಯಂಕಾಲ 05-30 ಗಂಟೆಗೆ ಏಕಾ ಏಕಿ ಬಸ್ಸಾಪೂರ ಗ್ರಾಮದ ಶಕೀಲ್ ಅಹ್ಮದ್ ತಂದೆ ಬಾಲೆಸಾಬ ವ|| 28 ವರ್ಷ ಈತನು ಬಂದು ನನಗೆ ಹೆಗ್ಗರಿ ಕಾಲಿನಿಂದ ಬಲ ಭುಜಕ್ಕೆ ಒದ್ದು ಕೈಯಿಂದ ಹೊಟ್ಟೆಗೆ ಮನ ಬಂದಂತೆ ಗುದ್ದಿ. ಲೇ ರಂಡಿ ಸೂಳೆ ಮಗನೆ ಯಾಕೆ ನಮ್ಮ ಊರಿಗೆ ಬರುತ್ತಲೆ ಸೂಳೆ ಮಗನೆ ಅಂತಾ ಬೈಯುತಿದ್ದು ಆಗ ನಾನು ಆತನಿಗೆ ನನ್ನ ಕರ್ತವ್ಯ ಮಾಡಲು ಬಂದಿದ್ದೆನೆ ಅಂತಾ ಹೇಳಿದಾಗ ಆತನು ನೀನು ಎನ ಕರ್ತವ್ಯ ಮಾಡುತಿ ನಡಿ ಮಗನೆ ಅಂತಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದನು, ಮುಂದೆ ಊರಿಗೆ ಹೇಂಗ ಬರುತ್ತಿ ಬಾ ಊರಿಗೆ ಬಂದು ಹೆಂಗ ಕರ್ತವ್ಯ ಮಾಡುತಿ ಮಾಡು ಬಾ ಅಂತಾ ಬೇದರಿಕೆ ಹಾಕಿ ಇನ್ನೂ ಮುಂದೆ ನೀನು ನಮ್ಮೂರಲ್ಲಿ ಹೆಂಗ ಓಡಾಡುತಿ ನೋಡುತ್ತೇನೆ ನಿಮ್ಮ ಡಿಪಾಟಮೇಂಟದವರು ಎನ ಮಾಡದಿಲ್ಲ ನೀನು ಎನ ಮಾಡುತಿ ಮಾಡು ಬಂದದ್ದು ನಾನು ನೋಡಿಕೊಳ್ಳುತ್ತೇನೆ ಮಗನೆ ಅಂತಾ ಬೈದು ಇನ್ನೊಂದು ಸಲ ನಮ್ಮೂರಿಗೆ ಬಂದರೆ ನಿನಗೆ ಜೀವ ಸಹಿತ ಬೀಡುವದಿಲ್ಲ ಮಗನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 131/2020 ಕಲಂ: 504,341,323 ಸಂ 34 ಐಪಿಸಿ : ಇಂದು ದಿನಾಂಕ: 18/11/2020 ರಂದು 5-15 ಪಿಎಮ್ ಕ್ಕೆ ಶ್ರೀ ಶಿವಪ್ಪ ತಂದೆ ದೊಡ್ಡಯಲ್ಲಪ್ಪ ಕೊರವರ, ವ:20, ಜಾ:ಭಜಂತ್ರಿ, ಉ:ಕುಲಕಸಬು ಸಾ:ಐಕೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಐಕೂರು ಗ್ರಾಮದಲ್ಲಿ ನಮ್ಮ ಕುಲಕಸಬು ಮಾಡಿಕೊಂಡು ವಾಸವಾಗಿರುತ್ತೇನೆ. ಸದರಿ ನನ್ನ ಕುಲಕಸಬು ಜೊತೆಗೆ ಗ್ರಾಮ ಪಂಚಾಯಿತಿಯ ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ಖಾತ್ರಿ ಕೆಲಸವನ್ನು ಕೂಡಾ ಮಾಡುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ: 17/11/2020 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಾನು ನನ್ನ ಉದ್ಯೋಗ ಖಾತ್ರಿ ಕೆಲಸದ ಜಾಬ್ ಕಾರ್ಡನ್ನು ಝರಾಕ್ಸ ಮಾಡಿಸಿಕೊಂಡು ಮರಳಿ ಬರುತ್ತಿದ್ದಾಗ ನಮ್ಮೂರ ಕುಂಬಾರ ಅಶೋಕನ ಅಂಗಡಿ ಹತ್ತಿರ ನಮ್ಮೂರ 1) ನಾಗಪ್ಪ ತಂದೆ ಈರಪ್ಪ ದೊರೆ ಮತ್ತು 2) ಸಾಬಣ್ಣ ತಂದೆ ಶಂಕ್ರೆಪ್ಪ ಪೂಜಾರಿ ಇಬ್ಬರೂ ಸಾ:ಐಕೂರು ಇಬ್ಬರೂ ಸೇರಿಕೊಂಡು ಬಂದವರೆ ಮನೆಗೆ ಹೋಗುತ್ತಿದ್ದ ನನಗೆ ಎದೆ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ, ಲೇ ಮಗನೆ ಶಿವ್ಯಾ ನೀನು ಉದ್ಯೋಗ ಖಾತ್ರಿ ಕೂಲಿ ಕೆಲಸ ಯಾಕೆ ಮಾಡುತ್ತಿ, ನಾವು ಜೆ.ಸಿ.ಬಿಯಿಂದ ಕೆಲಸ ಮಾಡಿಸುತ್ತೇವೆ. ಭೋಸುಡಿ ಮಗನೆ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಜಗಳ ತೆಗೆದವರೆ ಸಾಬಣ್ಣನು ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ನಾಗಪ್ಪನು ಕೈ ಮುಷ್ಟಿ ಮಾಡಿ ನನ್ನ ಹೊಟ್ಟೆ ಮತ್ತು ಬೆನ್ನಿಗೆ ಗುದ್ದಿದನು. ಅಲ್ಲಿಯೇ ದಾರಿ ಮೇಲೆ ಹೋಗುತ್ತಿದ್ದ ನಮ್ಮ ಚಿಕ್ಕಪ್ಪ ಸಣ್ಣ ಯಲ್ಲಪ್ಪನು ಬಿಡಿಸಲು ಬಂದರೆ ಅವನಿಗೆ ಸಾಬಣ್ಣನು ಕೈಯಿಂದ ಎಡ ಕಿವಿಗೆ ಜೋರಾಗಿ ಹೊಡೆದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮ ಚಿಕ್ಕಪ್ಪನ ಹೆಂಡತಿ ಕಲ್ಲಮ್ಮ ಗಂಡ ಚಿಕ್ಕ ಯಲ್ಲಪ್ಪ ಇವಳು ಬಂದು ಜಗಳ ಬಿಡಿಸಿರುತ್ತಾರೆ. ಕಾರಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮನುಷ್ಯರಿಗೆ ಕೂಲಿ ಹಚ್ಚಿ ಕೆಲಸ ಮಾಡಿಸದೆ ಜೆ.ಸಿ.ಬಿ ಯಿಂದ ಕೆಲಸ ಮಾಡುತ್ತಿದ್ದು, ನಾನು ಕೂಲಿ ಕೆಲಸ ಮಾಡುತ್ತೇನೆ ಎಂದು ನನ್ನೊಂದಿಗೆ ಜಗಳ ತೆಗೆದು ನನಗೆ ತಡೆದು ನಿಲ್ಲಿಸಿ, ಕೈಯಿಂದ ಹೊಡೆದ ಮಾಡಿದ ಮೇಲ್ಕಂಡ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 131/2020 ಕಲಂ: 504,341,323 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 22/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ 18/11/2020 ರಂದು ಮದ್ಯಾಹ್ನ ನಾನು ಸಂಗಡ ಬೀಟ ಸಿಬ್ಬಂದಿ ಶಿವನಗೌಡ ಸಿಪಿಸಿ-141 ಇವರೊಂದಿಗೆ ಹಳ್ಳಿ ಭೇಟಿ ಕುರಿತು ಮದ್ರಕಿ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಮದ್ರಕಿ ಸೀಮಾಂತರದ ಸವರ್ೆ ನಂ:412 ರಲ್ಲಿನ 4 ಎಕರೆ 20 ಜಮೀನ ವಿಷಯದಲ್ಲಿ ಮದ್ರಕಿ ಗ್ರಾಮದ ದಸ್ತಗೀರಸಾಬ ತಂದೆ ಅಮೀನಸಾಬ ಕುಮಸಗಿ ಹಾಗೂ ಅದೇ ಗ್ರಾಮದ ಪ್ರತಿವಾದಿದಾರರಾದ ಇಮಾಮಸಾಬ ತಂದೆ ಮದರಸಾಬ ಕುಮಸಗಿ ಸಂಗಡ ಇಬ್ಬರು ಇವರ ನಡುವೆ ಆಸ್ತಿಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಿನಾಂಕ 06/11/2020 ರಂದು ಜಗಳ ಮಾಡಿಕೊಂಡು ಠಾಣೆಯಲ್ಲಿ ಗುನ್ನೆ ಮತ್ತು ಪ್ರತಿಗುನ್ನೆ ದಾಖಲಾಗಿರುತ್ತವೆ. ಪ್ರತಿವಾದಿಗಳ ಮೇಲೆ ಠಾಣೆ ಗುನ್ನೆ ನಂ: 133/2020 ಕಲಂ 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆಸ್ತಿಯ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಇಂದು ದಿನಾಂಕ: 18/11/2020 ರಂದು 6.30 ಪಿ.ಎಮ್.ಕ್ಕೆ ಠಾಣೆಗೆ ಬಂದು ಠಾಣೆಯ ಪಿ.ಎ.ಆರ್ ನಂ: 22/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 23/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ 18/11/2020 ರಂದು ಮದ್ಯಾಹ್ನ ನಾನು ಸಂಗಡ ಬೀಟ ಸಿಬ್ಬಂದಿ ಶಿವನಗೌಡ ಸಿಪಿಸಿ-141 ಇವರೊಂದಿಗೆ ಹಳ್ಳಿ ಭೇಟಿ ಕುರಿತು ಮದ್ರಕಿ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಮದ್ರಕಿ ಸೀಮಾಂತರದ ಸವರ್ೆ ನಂ:412 ರಲ್ಲಿನ 4 ಎಕರೆ 20 ಜಮೀನ ವಿಷಯದಲ್ಲಿ ಮದ್ರಕಿ ಗ್ರಾಮದ ಇಮಾಮಸಾಬ ತಂದೆ ಮದರಸಾಬ ಕುಮಸಗಿ ಹಾಗೂ ಅದೇ ಗ್ರಾಮದ ಪ್ರತಿವಾದಿದಾರರಾದ ಅಮಿನುದ್ದೀನ ತಂದೆ ದಸ್ತಗೀರಸಾಬ ಕುಮಸಗಿ ಸಂಗಡ ಇಬ್ಬರು ಇವರ ನಡುವೆ ಆಸ್ತಿಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಿನಾಂಕ 06/11/2020 ರಂದು ಜಗಳ ಮಾಡಿಕೊಂಡು ಠಾಣೆಯಲ್ಲಿ ಗುನ್ನೆ ಮತ್ತು ಪ್ರತಿಗುನ್ನೆ ದಾಖಲಾಗಿರುತ್ತವೆ. ಪ್ರತಿವಾದಿಗಳ ಮೇಲೆ ಠಾಣೆ ಗುನ್ನೆ ನಂ: 134/2020 ಕಲಂ 341, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆಸ್ತಿಯ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಇಂದು ದಿನಾಂಕ: 18/11/2020 ರಂದು 07.00 ಪಿ.ಎಮ್.ಕ್ಕೆ ಠಾಣೆಯ ಪಿ.ಎ.ಆರ್ ನಂ: 23/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:-. 174/2020 ಕಲಂ: 279,338 ಐ.ಪಿ.ಸಿ : ಇಂದು ದಿನಾಂಕ 18.11.2020 ರಂದು ಕಾಮರೆಡ್ಡಿ ಆಸ್ಪತ್ರೆ ಕಲಬುಗರ್ಿಯಿಂದ ಆರ್ಟಿಎ ಎಮ್ಎಲ್ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರೀ ಸಿದ್ದನಗೌಡ ತಂದೆ ಶಾಂತಗೌಡ ಕಚಕನೂರ ವ|| 36 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಯಾಳಗಿ ತಾ|| ಸುರಪೂರ ಇವರ ಅರ್ಜಿ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 17/11/2020 ರಂದು ಸಾಯಂಕಾಲ 6:30 ಗಂಟೆ ಸುಮಾರಿಗೆ ನಾನು ಯಾಳಗಿಯಿಂದ ಕೆಂಭಾವಿಗೆ ಹೋಗುವ ಕುರಿತು ಮೋಟರ ಸೈಕಲ್ ನಂ ಕೆಎ 23 ವೈ 6858 ನೇದ್ದರ ಮೇಲೆ ಹೋಗುತ್ತಿದ್ದಾಗ ಯಾಳಗಿ ಹಾಗೂ ಯಾಳಗಿ ತಾಂಡಾದ ಮದ್ಯ ಹಳ್ಳದ ಹತ್ತಿರ ಹೋಗುತ್ತಿದ್ದಾಗ ನಮ್ಮ ಮೋಟರ ಸೈಕಲ್ ಚಾಲಕ ಗೋಸಯ್ಯ ತಂದೆ ರಾಚಯ್ಯ ಮಠ ಸಾ|| ಕೆಂಭಾವಿ ಈತನು ತನ್ನ ಮೋಟರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಒಮ್ಮೆಲೆ ಒಂದು ಎಮ್ಮೆ ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ರೋಡಿನ ಎಡಮಗ್ಗಲಿಗೆ ಮೋಟರ ಸೈಕಲ್ ಕೆಡವಿದ್ದು ನಾನು ಬಲವಾಗಿ ಮೋಟರ ಸೈಕಲದಿಂದ ಬಲವಾಗಿ ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ಬಲಗಾಲ ಮೊಳಕಾಲ ಕೆಳಗೆ ಕಾಲು ಮುರಿದಂತಾಗಿ ಭಾರಿ ಗುಪ್ತಗಾಯವಾಗಿದ್ದು ಅಲ್ಲದೆ ಬಲಗಾಲ ಪಾದದ ಮೇಲೂ ಸಹ ಭಾರಿ ರಕ್ತಗಾಯವಾಗಿದ್ದು ಸದರಿ ಅಪಘಾತದಲ್ಲಿ ಚಾಲಕ ಗೋಸಯ್ಯ ಈತನಿಗೆ ಯಾವುದೇ ಗಾಯ ವಗೈರೆ ಆಗಿರುವದಿಲ್ಲ ನಂತರ ನಾನು ನಮ್ಮ ಮನೆಗೆ ಫೋನ್ ಮಾಡಿ ತಿಳಿಸಿದಾಗ ನಮ್ಮ ತಮ್ಮನಾದ ಶಿವನಗೌಡ ಕಚಕನೂರ ಈತನು ಬಂದಿದ್ದು, ನನ್ನನ್ನು ನೋಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನಂತರ ವೈದ್ಯಾಧಿಕಾರಿಗಳು ಕೆಂಭಾವಿ ರವರು ಹೆಚ್ಚಿನ ಉಪಚಾರ ಕುರಿತು ಬೇರೆ ಕಡೆ ಹೋಗಲು ತಿಳಿಸಿದ ಮೇರೆಗೆ ನನ್ನ ತಮ್ಮ ಶಿವನಗೌಡ ಈತನು ನನಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ನಾನು ಕುಳಿತು ಹೊರಟ ಮೋಟರ ಸೈಕಲ್ ನಂಬರ ಕೆಎ 23 ವೈ 6858 ನೇದ್ದರ ಚಾಲಕ ಗೋಸಯ್ಯ ತಂದೆ ರಾಚಯ್ಯ ಮಠ ಸಾ|| ಕೆಂಭಾವಿ ಈತನ ಅತಿವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 174/2020 ಕಲಂ 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.