ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/11/2020

By blogger on ಮಂಗಳವಾರ, ನವೆಂಬರ್ 17, 2020



                                          ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/11/2020 

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 20/2020 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 16/11/2020 ರಂದು 02.30 ಎಎಮ್ ಕ್ಕೆ ಅಜರ್ಿದಾರರಾದ ಶ್ರೀ. ಶಂಕ್ರಪ್ಪ ತಂದೆ ಬಸವರಾಜ ಗುತ್ತೆದಾರ  ವಯ|| 32 ಉ|| ಕೂಲಿ ಕೆಲಸ ಜಾ|| ಈಳಗೇರ ಸಾ|| ನಡಿಹಾಳ ತಾ: ಶಹಾಪೂರ  ಜಿ: ಯಾದಗಿರಿ. ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ನಮ್ಮ ಅಜ್ಜ ಶಿವಯ್ಯ ತಂದೆ ಚಂದಯ್ಯ ಗುತ್ತೆದಾರ ವಯ|| 65 ಉ|| ಒಕ್ಕಲುತನ ಜಾತಿ|| ಈಳಗೇರ ಸಾ|| ನಡಿಹಾಳ ರವರಿಗೆ ಒಬ್ಬ ಗಂಡು ಮಗ ಹುಲುಗಯ್ಯ 40 ವರ್ಷ ಇವರು ಬೆಂಗಳೂರಿಗೆ ಡುಡಿಯಲು ಹೋಗಿದ್ದು, ಶಿವಯ್ಯ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ದೋಡ್ಡ ಮಗಳ ಮಗ ನಾನಾಗಿದ್ದು ಎರಡೆನೇಯ ಮಗಳು ಇವರು ಮಂಗಳೂರ ತಾ|| ಸುರಪೂರ  ದಲ್ಲಿ ಇರುತ್ತಾರೆ ಮನೆಯಲ್ಲಿ ನಾನು ನನ್ನ ಹೆಂಡತಿ ಕಾಶಿಭಾಯಿ ಹಾಗೂ ನನ್ನ ಅಜ್ಜ ಶಿವಯ್ಯ ಕೂಡಿದ್ದು ನನ್ನ ಅಜ್ಜ ಒಕ್ಕಲುತನ ಮಾಡುತ್ತಾ 1 ಎಕರೆ 28 ಗುಂಟೆ ಹೊಲ ಖರಿದಿಸಿದ್ದು ಅದರ ಸವರ್ೇ ನಂಬರ :42 ನಡಿಹಾಳ ಸಿಮಾಂತರದಲ್ಲಿದ್ದು ಸದರಿ ಕೃಷಿ ಕೆಲಸಕ್ಕಾಗಿ ವ್ಯ.ಸ.ಸಂ ನಿಯಮಿತದಲ್ಲಿ 2500/- ರೂಪಾಯಿ ಸಾಲ ಮಾಡಿದ್ದು ಮತ್ತು ಊರಲ್ಲಿ ಸುಮಾರು 2-3 ಲಕ್ಷ ಖಾಸಗಿ ಸಾಲ ಮಾಡಿಕೊಂಡಿದ್ದು ಸದರಿ ಸಾಲ ತೀರಿಸುವುದು ಹೇಗೆ ಅಂತಾ ಚಿಂತೆ ಮಾಡುತ್ತಿದ್ದ ಆಗ ನಾನು ನನ್ನ ಹೆಂಡತಿ ಇಬ್ಬರೂ ಕೂಡಿ ನಿನ್ನ ಮಗ ಅಂದರೆ ಹುಲುಗಯ್ಯ ದುಡಿಯಲು ಬೆಂಗಳೂರಿಗೆ ಹೋಗಿದ್ದು ನಾವು ದುಡಿಯುತ್ತೆವೆ ಎಲ್ಲರೂ ಕೂಡಿ ದುಡಿದು ಮುಟ್ಟಿಸುತ್ತೆವೆ ನೀನು ಚಿಂತೆ ಮಾಡಬೇಡ ಅಂತಾ ಹೇಳಿದ್ದು ಆದರೆ ಈ ವರ್ಷ ಮಳೆ ಹೆಚ್ಚಾಗಿದ್ದರಿಂದ ತೋಗರಿ ಬೆಳೆ ಸರಿಯಾಗಿ ಬರುವುದಿಲ್ಲಾ ಅಂತಾ ಚಿಂತಿಸುತ್ತಿದ್ದ ಹೀಗಿದ್ದು ನಿನ್ನೆ ದಿನಾಂಕ:15/11/2020 ರಂದು ಸಾಯಂಕಾಲ 7 ಪಿ.ಎಮ್ ಸುಮಾರಿಗೆ  ನಾನು ನನ್ನ ಹೆಂಡತಿ ನನ್ನ ಅಜ್ಜ ಶಿವಯ್ಯ ಎಲ್ಲರೂ ಊಟ ಮಾಡಿ 7-30 ಪಿ.ಎಮ್ ಸುಮಾರಿ ಮಲಗಿಕೊಂಡೆವು ಮಲಗುವಾಗ ಕೂಡ ಸಾಲದ ಬಗ್ಗೆ ಚಿಂತೆ ಮಾಡಿ ಮಲಗಿದ್ದು ನಂತರ ಇಂದು ಬೆಳಿಗ್ಗೆ 5-30 ಎ.ಎಮ್ ಸುಮಾರಿಗೆ ನಾನು ಎಂದಿನಂತೆ ಎದ್ದು ಹೋರಗೆ ಬಂದಾಗ ನನ್ನ ಅಜ್ಜ ಮನೆಯಲ್ಲಿ ಇರುವುದಿಲ್ಲಾ ನಾನು ಹೋಲಕ್ಕೆ ಅಥವಾ ಬಹಿರದಸೆಗೆ ಹೋಗಿದ್ದಾನೆ ಅಂತಾ ಸುಮ್ಮಾನಾದೆವು ನಂತರ 7-30 ಎ.ಎಮ್ ಸುಮಾರು ಆದರು ನನ್ನ ಅಜ್ಜ ಮನೆಗೆ ಬರಲಿಲ್ಲಾ ಆಗ ನಾನು ಆ ಕಡೆ ಈ ಕಡೆ ಹುಡುಕಿದೆವು ಎಲ್ಲಿಯು ಕಾಣಲಿಲ್ಲಾ ನಂತರ ಎವೂರ, ಮಂಗಳೂರ ಮುಂತಾದ ಕಡೆ ಸಂಬಂದಿಕರಿಗೆ ಫೋನ್ ಮಾಡಿ ವಿಚಾರಿಸಿದೆವು ಇಲ್ಲಿಯು ಬಂದಿಲ್ಲಾ ಎಂದು ತಿಳಿಯಿತು ನಂತರ ನಾನು ಮತ್ತು ನಾಗಪ್ಪಗೌಡ ತಂದೆ ಬಸ್ಸಪ್ಪಗೌಡ ಬಿರಾದಾರ ಹಾಗೂ ಮಲ್ಲಯ್ಯ ತಂದೆ ಖತಲ್ಸಾ ಎಲ್ಲರೂ ಕೂಡಿ ಹುಡುಕಾಡಿದೆವು ನಮ್ಮ ಊರಿನ ಕೃಷ್ಣಪ್ಪ ಸಾಹು ಇವರ ಹೋಲದಲ್ಲಿಯ ಭಾವಿಯಲ್ಲಿ ಒಂದು ಗಂಡು ಶವ ತೇಲುತ್ತಿದ್ದು ನೋಡಿ ಅವನ ಚಹರ ಪಟ್ಟಿಯಿಂದ ಸದರಿ ಶವ ನನ್ನ ಅಜ್ಜ ಶಿವಯ್ಯ ಗುತ್ತೆದಾರ ಅಂತಾ ಗುರುತಿಸಿದೆವು ನಮ್ಮ ಅಜ್ಜ ತನ್ನ ಸಾಲ ತೀರಿಸುವುದು ಹೇಗೆ ಅಂತಾ ಚಿಂತೆ ಮಾಡುತ್ತಾ ಅದೆ ಚಿಂತೆಯಲ್ಲಿ ನಿನ್ನೆ ದಿನಾಂಕ:15/11/2020 ರಂದು 7-30 ಪಿ.ಎಮ್ ದಿಂದ ಬೆಳಿಗ್ಗೆ 6-00 ಎ.ಎಮ್ ಮದ್ಯದ ಅವಧಿಯಲ್ಲಿ ಕೈಯಲ್ಲಿ  ಸದರಿ ಭಾವಿ ಹುಡುಕಿಕೊಂಡು  ಹೋಗಿ ಜೀವನದಲ್ಲಿ ಜಿಗುಪ್ಸೆಗೊಂಡು ಭಾವಿಗೆ ಬಿದ್ದು ಮೃತಪಟ್ಟಿರುತ್ತಾನೆ. ನಮ್ಮ ಅಜ್ಜನ ಸಾವಿನ ವಿಷಯದಲ್ಲಿ ಯಾವುದೇ ರೀತಯ ಸಂಶಯ ಇರುವುದಿಲ್ಲಾ  ತಾವು ಮುಂದಿನ ಕ್ರಮ ಕೈಗೊಳ್ಳಬೇಕೆಂದು ನಮ್ಮೂರ ಲಕ್ಷ್ನಣಗೌಡ ತಂದೆ ಶರಣಗೌಡ ಪಾಟೀಲ ಇವರ ಕಡೆಯಿಂದ ಈ ಅಜರ್ಿ ಬರೆಯಿಸಿದ್ದು ಮಾನ್ಯರು ಮುಂದಿನ ಕ್ರಮ ಕೈಗೊಳ್ಳಬೇಕೆಂದು ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ: 20/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 281/2020.ಕಲಂ 323 324 504 506 ಸಂ 34 ಐ.ಪಿ.ಸಿ. : ದಿನಾಂಕ 16/11/2020 ರಂದು ಬೆಳಿಗ್ಗೆ 7-45 ಗಂಟೆಗೆ ಪಿಯರ್ಾದಿ ಶ್ರೀ ಕೃಷ್ಣಾಜಿ ತಂದೆ ಲಿಂಗಣ್ಣ ಅಬಕಾರಿ ವ|| 76 ಜಾ|| ಮರಾಠ ಉ|| ಕೂಲಿ ಸಾ|| ಹೈಯಾಳ (ಬಿ) ಹಾ||ವ|| ಜೀವೇಶ್ವರ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಹೀಗಿದು ದಿನಾಂಕ 15/11/2020 ರಂದು ನಮ್ಮೂರಾದ ಹೈಯಾಳ (ಬಿ) ಗ್ರಾಮಕ್ಕೆ ಹೋಗಿ ಶ್ರೀ ಹೈಯಾಳ ಲಿಂಗೇಶ್ವರ ದರ್ಶನಕ್ಕೆ ಮದ್ಯಾಹ್ನ 1-00 ಗಂಟೆಗೆ ಹೋದಾಗ ನಮ್ಮ ಅಣ್ಣತಮಕಿಯ ಮೈಹಿಬೂಬಸಾಬನು ಐಕೂರದ ಹೋಲದ ಪಾಲದ ಸಂಬಂದ ಕೆಳಿದ್ದು ಸಾಯಂಕಾಲ ಮಾತನಾಡೋಣ ಅಂತ ಹೇಳಿದೆನು, ನಂತರ ನಾನು ನನ್ನ ಅಳಿಯ ಸುರೇಶನ ಮನೆಗೆ ಹೋಗಿ ನಂತರ ಅವರ ಮನೆಯ ಪಕ್ಕದಲ್ಲಿರುವ ಬೆವಿನ ಗಿಡದ ಕಟ್ಟಿಯ ಹತ್ತಿರ ನಾನು ಮತ್ತು ಸುರೇಶ ತಂದೆ ನಿಂಗಣ್ಣ ಕಾಂಬ್ಳೇಕರ್, ಪುನೀತ ತಂದೆ ಸುಬಾಶ್ಚ್ಚಂದ್ರ ಕಾಂಬ್ಳೇಕರ್, ಲಿಂಗಾರಾಜ ತಂದೆ ಸುಬಾಶ್ಚಂದ್ರ ಕಾಂಬ್ಳೇಕರ್, ಮಹೇಶ ತಂದೆ ಲಿಂಗಣ್ಣ ಕಾಂಬ್ಳೇಕರ್, ಎಲ್ಲರು ಮಾತನಾಡುತ್ತ ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಿಂತಾಗ ನನ್ನ ಅಣ್ಣತಮಕಿಯವರಾದ 1] ಮಹಿಬೂಬ ತಂದೆ ಸೋಪಣ್ಣ 2] ಯಲ್ಲೋಜಿ ತಂದೆ ಹೀರೋಜಿ 3] ಸೋಪಣ್ಣ ತಂದೆ ಮಹಿಬೂಬ 4] ಲಿಂಗರಾಜ ತಂದೆ ಮಹಿಬೂಬ ಇವರೆಲ್ಲರು ಬಂದವರೆ ಲೇ ಕೃಷ್ಣ್ಯಾ ಸೂಳಿಮಗನೆ ಐಕೂರದ ನಮ್ಮ ಹೀರಿಯರ ಹೋಲದಲ್ಲಿ ನಮಗೆ ಸರಿಯಾಗಿ ಪಾಲುಕೋಡದೆ ನಮ್ಮೊಂದಿಗೆ ತಕರಾರು ಮಾಡುತ್ತಿ ಅಂತ ಅಂದಾಗ, ನಾನು ನಿಮಗೆ ಸರಿಯಾಗಿ ಪಾಲು ಕೊಟ್ಟಿರುತ್ತೆನೆ ವಿನಾಕಾರಣ ನನ್ನೊಂದಿಗೆ ಯಾಕೆ ಜಗಳ ಮಾಡುತ್ತಿರಿ ಅಂತ ಅಂದಾಗ, ಮಹಿಬೂಬನು ಎದರು ಮಾತನಾಡುತ್ತಿ ಎನಲೇ ಅಂತ ಅಂದವನೆ ತನ್ನ ಕಾಲಿನಿಂದ ನನಗೆ ಎಡಗಾಲ ಮೋಳಕಾಲಿಗೆ ಒದ್ದನು. ಯಲ್ಲೊಜಿ ಈತನು ತನ್ನ ಕೈಯಿಂದ ಸುರೇಶ ಈತನಿಗೆ ಬಾಯಿಗೆ, ಬೆನ್ನಿಗೆ ಹೊಡೆದನು, ಯಲ್ಲೋಜಿ ಈತನು ಅಲ್ಲೆ ಬಿದ್ದಿದ್ದ ಒಂದು ಬಡಿಗೆಯಿಂದ ಸುರೇಶನ ಬಲಗೈ ತೋರುಬೆರಳಿಗೆ ಹೋಡೆದ್ದಿದ್ದರಿಂದ ತರಚಿದ ಗಾಯವಾಗಿದು, ಯಲ್ಲೋಜಿ ಅದೆ ಬಡಿಗೆಯಿಂದ ಮಹೇಶ ಈತನ ಬಲಗೈ ಮೋಳಕೈ ಕೆಳಗೆ ಹೋಡೆದ್ದಿದ್ದರಿಂದ  ತರಚಿದ ಗಾಯವಾಗಿದ್ದು, ಯಲ್ಲೋಜಿ ಈತನು ತನ್ನ ಕೈಯಿಂದ ಮಹೇಶನ ತುಟಿಗೆ ಹೋಡೆದನು. ಸೋಪಣ್ಣ ಈತನು ತನ್ನ ಕೈಯಿಂದ ಪುನೀತನ ಎಡ ಮೋಳಕೈಗೆ ಹೋಡೆದನು. ಸೋಪಣ್ಣ ಮತ್ತು ಲಿಂಗರಾಜ ಇಬ್ಬರು ಕೂಡಿ ಲಿಂಗರಾಜ ತಂದೆ ಸುಬಾಶ್ಚಂದ್ರ ಈತನಿಗೆ ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ  ಬಲಗಡೆ ಬುಜಕ್ಕೆ ತರಚಿದ ಗಾಯ ಮತ್ತು ಬಲಗಡೆ ಎದೆಗೆ ಗುಪ್ತಗಾಯವಾಗಿದು ಇರುತ್ತದೆ. ಸದರಿ ಜಗಳ ಸಪ್ಪಳ ಕೇಳಿ ಬಂದ ಸುನೀತಾ ಗಂಡ ಸುಬಾಶ್ಚಂದ್ರ, ಅಲ್ಲೆ ಹೋರಟಿದ್ದ ನಮ್ಮೂರ ಮಾರ್ತಂಡಪ್ಪ ತಂದೆ ಸಣ್ಣನಿಂಗಪ್ಪ ಪೂಜಪ್ಪನೋರ, ಇವರು ಬಂದು ಜಗಳ ನೋಡಿ ಬಿಡಿಸಿಕೊಂಡರು, ಆಗ ಅವರೆಲ್ಲರು ನಮಗೆ ಇವತ್ತು ಉಳಿದು ಕೋಡಿದ್ದಿರಿ ಮಕ್ಕಳೆ ಇನ್ನೋಮ್ಮಿ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಬೆದರಿಕೆ ಹಾಕಿ ಹೋದರು ಆಗ ಸುನೀತಾ ಇವಳು ನನಗೆ ಮತ್ತು ಸುರೇಶ. ಪುನೀತ, ಲಿಂಗರಾಜ, ಮಹೇಶ, ಎಲ್ಲರಿಗು ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದರಿಂದ ಉಪಚಾರ ಪಡೆದಿದ್ದು ಇರುತ್ತದೆ. ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದು. ಸದರಿ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 281/2020 ಕಲಂ 323.324.504.506. ಸಂ 34 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ: 138/2020 ಕಲಂ 279, 338 ಐ.ಪಿ.ಸಿ : ದಿನಾಂಕ: 15/11/2020 ರಂದು 8.30 ಪಿ.ಎಮ್ ಸುಮಾರಿಗೆ ಫಿಯರ್ಾದಿಯ ಮಗ ಖಾಜಾಮೈನುದ್ದೀನ್ ಈತನು ಆರೋಪಿತನ ಹಿಂದೆ ಮೋಟರ್ ಸೈಕಲ್ ನಂ:ಕೆಎ-32, ಇಆರ್-0132 ನೇದ್ದರ ಮೇಲೆ ಕುಳಿತು ಕಲಬುರಗಿಯಿಂದ ಊರ ಕಡೆಗೆ ಹೊರಟಾಗ ಆರೋಪಿನು ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ರೋಡಿನ ಮೇಲಿರುವ ತೆಗ್ಗಿನಲ್ಲಿ ಮೋಟರ್ ಸೈಕಲ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಖಾಜಾಮೈನುದ್ದೀನ್ ಈತನ ಬಲಗಾಲಿಗೆ ಮತ್ತು ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿದ್ದು, ತಲೆಗೆ ರಕ್ತಗಾಯವಾಗಿದ್ದು, ಆರೋಪಿತನಿಗೆ ಸಣ್ಣಪುಟ್ಟ ಸಾದಾಗಾಯಗಳಾದ ಬಗ್ಗೆ ದೂರು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 164/2020 ಕಲಂ 279, 337, 338 ಐಪಿಸಿ : ಇಂದು ದಿನಾಂಕ 16.11.2020 ರಂದು ಸಂಜೆ 6:00 ಗಂಟೆಗೆ ಫಿರ್ಯಾದಿ ಮತ್ತು ಆಕೆಯ ಗಂಡ ಇಬ್ಬರು ತಮ್ಮ ಹೊಲದಿಂದ ಎತ್ತಿನ ಬಂಡಿಯನ್ನು  ಹೊಡೆದುಕೊಂಡು ಮರಳಿ ಊರ ಕಡೆಗೆ ಬರುತ್ತಿದ್ದಾಗ ಆರೋಪಿತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33-ಜೆ-2075 ನೇದ್ದರ ಮೇಲೆ ಇಟಕಲ್ ಕಡೆಯಿಂದ ಗುರುಮಠಕಲ್ ಕಡೆಗೆ ಬರುತ್ತಿದ್ದಾಗ ತನ್ನ ಮೋಟಾರು ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಂಡಿಯಲ್ಲಿ ಹಿಂದೆ ಕುಳಿತ್ತಿದ್ದ ಫಿರ್ಯಾದಿದಾರಳಿಗೆ ಅಪಘಾತಪಡಿಸಿ ತಾನೂ ಗಾಯಗೊಂಡಿದ್ದು  ಸದರಿ ಅಪಘಾತದಲ್ಲಿ ಫಿರ್ಯಾದಿಗೆ ಮತ್ತು ಆರೋಪಿತನಿಗೆ ಸಾದಾ ಹಾಗೂ ಬಾರಿ ಸ್ವರೂಪದ ಗಾಯಗಳಾಗಿದ್ದ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂಬರ 164/2020 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!