ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/11/2020

By blogger on ಮಂಗಳವಾರ, ನವೆಂಬರ್ 17, 2020

 


                                       ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/11/2020 

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 147/2020, ಕಲಂ, 323,324,354,504.506. ಸಂ.34 ಐ ಪಿ ಸಿ : ದಿನಾಂಕ: 15-11-2020 ಸಾಯಂಕಾಲ 06-10 ಗಂಟೆಗೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ ಪೊನ್ ಮೂಲಕ ಎಮ್ ಎಲ್ ಸಿ ಇದೆ ಅಂತಾ ತಿಳಿಸಿದ್ದು ಸರಕಾರಿ ಆಸ್ಪತ್ರೆಗೆ ಹೋಗಿ ಬೇಟಿ ನೀಡಿ ಅಲ್ಲಿ ಗಾಯಾಳುಗಳನ್ನು ವಿಚಾರಿಸಿದ್ದು ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ದಿನಾಂಕ: 15-11-2020 ರಂದು ಸಾಯಂಕಾಲ 05-00 ಗಂಟೆಗೆ ನಾನು ನನ್ನ ಗಂಡ ಮನೆಯ ಹತ್ತಿರ ಇರುವಾಗ ಆರೋಪಿತರು ಕೂಡಿಕೊಂಡು ಬಂದು ಯಾಕಲೆ ಸೂಳೆ ಮಕ್ಕಳೆ ನಮ್ಮ ಹೊ ಬೆರೆಯವರು ಮಾಡಿದರು ನೀವು ಎನ ಕೆಳಲಾಗಿರಿ ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಕಟ್ಟಿಗೆಯಿಂದ ಮತ್ತು ಕೈಯಿಂದ ನನಗೆ ನನ್ನ ಗಂಡನಿಗೆ ಹೊಡೆ ಬಡೆ ಮಾಡಿ ಲೇ ಸೂಳೆ ಲೇ ಸೂಳೆ ಮಕ್ಕಳೆ ನಿಮ್ಮದು ಯಾಕ ಬಹಳ ಸೊಕ್ಕು ಆಗಿದೆ ಇನ್ನೊಂದು ಸಲ ನಾವು ಹೇಳಿದಂತೆ ಕೇಳದಿದ್ದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಮಕ್ಕಳೆ ಅಂತಾ ಜೀವ ಬೇದರಿಕೆ ಹಾಕಿದ್ದು ಇರುತ್ತದೆ.

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 130/2020 ಕಲಂ: 504,341,324,506 ಸಂ 34 ಐಪಿಸಿ : ಇಂದು ದಿನಾಂಕ:15/11/2020 ರಂದು 5-45 ಪಿಎಮ್ ಕ್ಕೆ ಶ್ರೀ ಸಿದ್ದಣ್ಣಗೌಡ ತಂದೆ ವೆಂಕಟರೆಡ್ಡಿ ಕುರಿಹಾಳ, ವ:40, ಜಾ:ಲಿಂಗಾಯತರೆಡ್ಡಿ, ಉ:ಒಕ್ಕಲುತನ ಸಾ:ಮಾಚನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮಾಚನೂರು ಗ್ರಾಮದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನನ್ನ ಹೊಲದ ಜೊತೆಗೆ ನಮ್ಮೂರು ತಮ್ಮಣ್ಣಗೌಡ ತಂದೆ ವೆಂಕಣ್ಣಗೌಡ ಸಾ:ಮಾನಚೂರು ಇವರ ಸುಮಾರು 10 ಎಕರೆ ಗದ್ದೆಯನ್ನು ನಾನು ಸುಮಾರು 2 ವರ್ಷಗಳಿಂದ ಲೀಜಿಗೆ ಮಾಡುತ್ತಾ ಬರುತ್ತಿದ್ದೇನೆ. ಆದರೆ ನಮ್ಮೂರ ತಿಮ್ಮಪ್ಪಗೌಡ ತಂದೆ ಭೀಮಣ್ಣಗೌಡ ಪೊಲೀಸ್ ಪಾಟಿಲ್ ಮತ್ತು ಈತನ ಮಗನಾದ ಭೀಮಣ್ಣಗೌಡ ತಂದೆ ತಿಮ್ಮಪ್ಪಗೌಡ ಪೊಲೀಸ್ ಪಾಟಿಲ್ ಇಬ್ಬರೂ ಸೇರಿ ನನಗೆ ಸುಮಾರು ದಿವಸಗಳಿಂದ ಸದರಿ ತಮ್ಮಣ್ಣಗೌಡ ಈತನ ಗದ್ದೆಯನ್ನು ನೀನು ಲೀಜಿಗೆ ಯಾಕೆ ಮಾಡುತ್ತಿ, ನೀನು ಲೀಜು ಮಾಡಬಾರದು ಆ ಗದ್ದೆಯಲ್ಲಿ ನಮಗೆ ಪಾಲು ಬರುವುದಿದೆ ಎಂದು ನನ್ನೊಂದಿಗೆ ತಕರಾರು ಮಾಡುತ್ತಾ ಬರುತ್ತಿದ್ದಾರೆ. ಹೀಗಿದ್ದು ಇಂದು ದಿನಾಂಕ: 15/11/2020 ರಂದು ಬೆಳಗ್ಗೆ ಸದರಿ ನಾನು ಲೀಜಿಗೆ ಮಾಡಿದ ಗದ್ದೆಗೆ ಹೋಗಿ ನಮ್ಮ ಸ್ವಂತ ಹೊಲಕ್ಕೆ ಬರುತ್ತಿದ್ದಾಗ ಬೆಳಗ್ಗೆ 7-30 ಗಂಟೆ ಸುಮಾರಿಗೆ ನಮ್ಮ ಸ್ವಂತ ಹೊಲದ ದಾರಿ ಮೇಲೆ 1) ತಿಮ್ಮಪ್ಪಗೌಡ ತಂದೆ ಭೀಮಣ್ಣಗೌಡ ಪೊಲೀಸ್ ಪಾಟಿಲ್ ಮತ್ತು ಈತನ ಮಗನಾದ ಭೀಮಣ್ಣಗೌಡ ತಂದೆ ತಿಮ್ಮಪ್ಪಗೌಡ ಪೊಲೀಸ್ ಪಾಟಿಲ್ ಇಬ್ಬರೂ ಸಾ:ಮಾಚನೂರು ಸೇರಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಭೊಸುಡಿ ಮಗನೆ ನೀನು ತಮ್ಮಣ್ಣಗೌಡ ಇವರ ಗದ್ದೆ ಲೀಜ ಮಾಡಬೇಡ ಎಂದು ಹೇಳಿದರು ಲೀಜಿಗೆ ಮಾಡಿದಿ, ಮಗನೆ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಜಗಳ ತೆಗೆದವರೆ ತಿಮ್ಮಪ್ಪಗೌಡನು ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ಆತನ ಮಗನಾದ ಭೀಮಣ್ಣಗೌಡನು ಅಲ್ಲೆ ಬಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ತೆಲೆಗೆ ಹೊಡೆಯಲು ಬಂದಾಗ ನಾನು ನನ್ನ ಎಡಗೈ ಅಡ್ಡ ಒಯ್ದಾಗ ಆ ಏಟು ನನ್ನ ಎಡಗೈ ಕಿರು ಬೆರಳಿಗೆ ಬಿದ್ದು, ರಕ್ತಗಾಯವಾಯಿತು. ಅವನು ಅದೇ ಕಟ್ಟಿಗೆಯಿಂದ ಬಲ ಮೊಳಕಾಲಿಗೆ ಹೊಡೆದು ಒಳಪೆಟ್ಟು ಮಾಡಿದನು. ಆಗ ಜಗಳವನ್ನು ಅಲ್ಲಿಯೇ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದು, ಬಸವರಾಜ ತಂದೆ ಸಿದ್ರಾಮರೆಡ್ಡಿ ಮತ್ತು ವೆಂಕಟರೆಡ್ಡಿ ತಂದೆ ಬಸಣ್ಣಗೌಡ ಇಬ್ಬರೂ ಬಂದು ಬಿಡಿಸಿದರು. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿ ಸೂಳೆ ಮಗನೆ ಇನ್ನೊಂದು ಸಲ ಸಿಕ್ಕಿರೆ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಕಾರಣ ಗದ್ದೆ ಲೀಜಿಗೆ ಮಾಡಬೇಡ ಎಂದು ಜಗಳ ತೆಗೆದು ನನಗೆ ತಡೆದು ನಿಲ್ಲಿಸಿ, ಹೊಡೆಬಡೆ ಮಾಡಿದ ಮೇಲ್ಕಂಡ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 130/2020 ಕಲಂ: 504,341,324,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ: 173/2020 ಕಲಂ: ಮಹಿಳೆ ಕಾಣೆ : ಇಂದು ದಿನಾಂಕ: 15/11/2020 ರಂದು 02.00 ಪಿ.ಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಜೆಟ್ಟೆಪ್ಪ ತಂದೆ ಸಿದ್ದಪ್ಪ ಮಳಕೇರಿ ವಯಸ್ಸು: 60 ಜಾತಿ: ಮಾದಿಗ  ಉ: ಕೂಲಿಕೆಲಸ ಸಾ: ಕೆಂಭಾವಿ ತಾ: ಸುರಪುರ ಇದ್ದು ತಮ್ಮಲ್ಲಿ ಪಿರ್ಯಾದಿ ಅಜರ್ಿ ಸಲ್ಲಿಸುವುದೆನೆಂದರೆ ನನಗೆ ಐದು ಜನ ಹೆಣ್ಣು ಮಕ್ಕಳು ಹಾಗು ಇಬ್ಬರು ಗಂಡು ಮಕ್ಕಳಿರುತ್ತಾರೆ. ಅವರಲ್ಲಿ ಮೂರು ಜನ ಹೆಣ್ಣು ಮಕ್ಕಳ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಾಲ್ಕನೇಯ ಮಗಳಾದ ಕುಮಾರಿ ಸಾವಿತ್ರಿ ತಂದೆ ಜೆಟ್ಟೆಪ್ಪ ಮಳಕೇರಿ ವ|| 20 ಇವಳು ಹೋದ ವರ್ಷ ಪಿಯುಸಿ ದ್ವಿತೀಯ ವರ್ಷ ಪಾಸಾಗಿ ಮನೆಯಲ್ಲಿಯೇ ಇರುತ್ತಿದ್ದಳು. ನಾನು ನನ್ನ ಎರಡು ಜನ ಗಂಡು ಮಕ್ಕಳೊಂದಿಗೆ ಬೆಂಗಳೂರಿಗೆ ದುಡಿಯಲು ಹೋಗಿದ್ದೆನು. ನಮ್ಮ ಮನೆಯಲ್ಲಿ ನನ್ನ ಹೆಂಡತಿ ಭೀಮವ್ವ ಇವಳು ಮಗಳು ಸಾವಿತ್ರಿ ಇವಳ ಶಾಲೆಯ ಸಲುವಾಗಿ ಕೆಂಭಾವಿಯಲ್ಲಿಯೇ ಇದ್ದಳು. ಹೀಗಿದ್ದು ದಿನಾಂಕ 06.11.2020 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ನಾನು ಬೆಂಗಳೂರಿನಲ್ಲಿದ್ದಾಗ  ನನ್ನ ಹೆಂಡತಿ ಭೀಮವ್ವ ಇವಳು  ನನಗೆ ಪೋನ ಮಾಡಿ ಮಗಳಾದ ಸಾವಿತ್ರಿ ಇವಳು ಇಂದು ದಿನಾಂಕ 06.11.2020 ರಂದು ಸಾಯಂಕಾಲ 05.30 ಗಂಟೆಯ ಸುಮಾರಿಗೆ ಮನೆಯಿಂದ ಬಹಿದರ್ೆಸೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಅಂತ ತಿಳಿಸಿದಾಗ ನಾನು ದಿನಾಂಕ 07.11.2020 ರಂದು ಬೆಂಗಳೂರಿನಿಂದ ನೇರವಾಗಿ ನಮ್ಮ ಮನೆಗೆ ಬಂದು ನನ್ನ ಹೆಂಡತಿಗೆ ವಿಚಾರಿಸಿ ನಂತರ ನಮ್ಮ ಸಂಬಂದಿಕರ ಊರುಗಳಾದ ಸಗರ, ಉಮರದೊಡ್ಡಿ, ಕರಡಕಲ ಹಾಗು ಸುರಪೂರಕ್ಕೆ ಹೋಗಿ ವಿಚಾರಿಸಲು ಮಗಳು ಸಾವಿತ್ರಿ ಎಲ್ಲಿಯೂ ಸಿಗಲಿಲ್ಲವಾದ್ದರಿಂದ ಇಂದು ತಡವಾಗಿ ಠಾಣೆಗೆ ಹಾಜರಾಗಿ ಕಾಣೆಯಾದ ನನ್ನ ಮಗಳು  ಕುಮಾರಿ ಸಾವಿತ್ರಿ ತಂದೆ ಜೆಟ್ಟೆಪ್ಪ ಮಳಕೇರಿ ವ|| 20 ಇವಳನ್ನು ಹುಡುಕಿಕೊಡಬೇಕು ಅಂತ ಈ ಫಿಯರ್ಾದಿ ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾಣೆಯಾದ ಮಗಳು ಸೌಮ್ಯ ಇವಳ ಚಹರೆ ಪಟ್ಟಿ- ದುಂಡು ಮುಖ, ಕೆಂಪು ಬಣ್ಣ, ನೀಟಾದ ಮೂಗು, ದಪ್ಪ ಮೈಕಟ್ಟು, ಎತ್ತರ 5 ಫೀಟ್ 1 ಇಂಚ ,ಇದ್ದು ಸದರಿಯವಳು ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಉಟ್ಟುಕೊಂಡು ಹೋಗಿದ್ದು  ಇರುತ್ತದೆ. ಕಾರಣ ನನ್ನ ಮಗಳು ಸಾವಿತ್ರಿ ಇವಳು ನಮ್ಮ ಮನೆಯಿಂದ ಬಹಿದರ್ೆಸೆಗೆಂದು ಹೋದವಳು ವಾಪಸ್ಸು ಇಲ್ಲಿಯವರಗೆ ಮರಳಿ ಮನೆಗೆ ಬಾರದೇ ಎಲ್ಲಿಯೋ ಕಾಣೆಯಾಗಿದ್ದು ಸದರಿಯವಳನ್ನು ಹುಡುಕಿಕೊಡಲು ವಿನಂತಿ ಇರುತ್ತದೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 173/2020 ಕಲಂ: ಮಹಿಳೆ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಯಿತು.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!