ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/11/2020

By blogger on ಭಾನುವಾರ, ನವೆಂಬರ್ 15, 2020

 


                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/11/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 104/2020 ಕಲಂ 379 ಐಪಿಸಿ : ಇಂದು ದಿನಾಂಕ: 14/11/2020 ರಂದು 10-45 ಎಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್. ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಟಾಣೆಗೆ ಬಂದು ಜ್ಞಾಪನಾ ಪತ್ರ ಮತ್ತು ಮುದ್ದೆ ಮಾಲನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ನಾನು ಮತ್ತು  ಸಿಬ್ಬಂದಿಯವರೊಂದಿಗೆ ಠಾಣೆಯ ಭೀಮಾ ಜೀಪ್ ನಂಬರ ಕೆಎ.32.ಜಿ.416 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಹತ್ತಿಕುಣಿ ಕ್ರಾಸ ಮುಖಾಂತರ ಗಂಗಾನಗರ ಕ್ರಾಸ ಕಡೆಗೆ ಹೋಗುತ್ತಿರುವಾಗ ಬೆಳಗ್ಗೆ 10-00 ಗಂಟೆ ಸುಮಾರಿಗೆ ಗಂಗಾನಗರ ಕ್ರಾಸದಲ್ಲಿ ಗಂಗಾನಗರ ಹಳ್ಳದ ಬ್ರಿಡ್ಜ ಕಡೆಯಿಂದ ನಮ್ಮ ಎದುರುಗಡೆ ಒಂದು ಟಿಪ್ಪರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದು ಆಗ ನಾವು ಕೈ ಮಾಡಿ ನಿಲ್ಲಿಸುವಂತೆ ಸೂಚನೆ ಮಾಡಿದಾಗ ಆಗ ಚಾಲಕನು ಟಿಪ್ಪರನ್ನು ನಿಲ್ಲಿಸಿದವನೇ ಓಡಿ ಹೋಗಿದ್ದು ನಂತರ ಟಿಪ್ಪರನ್ನು ಪರಿಶೀಲಿಸಿ ನೋಡಲಾಗಿ ಟಿಪ್ಪರ ನಂ. ಕೆಎ.33.ಎ.9739 ನೇದ್ದು ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಟಿಪ್ಪರ ಚಾಲಕನು ಟಿಪ್ಪರ ಚಾವಿ ಬಿಟ್ಟು ಓಡಿ ಹೋಗಿದ್ದರಿಂದ ಸದರಿ ಟಿಪ್ಪರದಲ್ಲಿ ಮರಳು ತುಂಬಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಾತ್ರಿಪಡಿಸಿಕೊಂಡಿದ್ದು, ಟಿಪ್ಪರ ಚಾಲಕನು ಓಡಿ ಹೋಗಿದ್ದರಿಂದ ಚಾಲಕ ಮತ್ತು ಮಾಲೀಕನ ಹೆಸರು ತಿಳಿದು ಬಂದಿರುವುದಿಲ್ಲ. ಟಿಪ್ಪರ ಚಾಲಕ ಮತ್ತು ಮಾಲೀಕರು ಕೂಡಿಕೊಂಡು ರಾಯಲ್ಟಿ ಪಡೆಯದೇ ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಟಿಪ್ಪರನ್ನು ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 10-30 ಎಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರ ನಂ. ಕೆಎ.33.ಎ.9739 ನೇದ್ದು ಅ.ಕಿ.6,00,000/-ರೂ, ಮತ್ತು ಮರಳು ಅ.ಕಿ.15,000/-ರೂ ನೇದ್ದವುಗಳನ್ನು ಒಪ್ಪಿಸಿ, ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿದ ಫಿರ್ಯಾಧಿಯನ್ನು 10-45 ಎಎಮ್ ಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ,  ಟಿಪ್ಪರ ಚಾಲಕ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ. ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.104/2020 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- ಪಿ.ಎ.ಆರ್ ನಂ. 13/2020 ಕಲಂ 109 ಸಿ.ಆರ್.ಪಿ.ಸಿ : ಶ್ರೀ ಶ್ರೀನಿವಾಸರೆಡ್ಡಿ ಹೆಚ್.ಸಿ 111 ಯಾದಗಿರಿ ನಗರ ಪೊಲೀಸ್ ಠಾಣೆ ರವರು  ವರದಿ ಸಲ್ಲಿಸಿದೇನೆಂದರೆ,  ದಿನಾಂಕ: 14/11/2020 ರಂದು 05-30 ಎ,ಎಮ್ ಸುಮಾರಿಗೆ  ಯಾದಗಿರಿ ನಗರದ  ಸ್ಟೇಷನ ಏರಿಯಾದ ಸುಭಾಷ ವೃತ್ತದ ಹತ್ತಿರ ಪಟ್ರೋಲಿಂಗ್ ಮಾಡುತ್ತಾ ಹೋರಟಿದ್ದಾಗ  ಒಬ್ಬ ವ್ಯಕ್ತಿ  ಅನುಮಾನಸ್ಪದವಾಗಿ ತಿರುಗಾಡುತ್ತಾ ನನ್ನನ್ನು ನೋಡಿದ ಕೂಡಲೇ ಆತನು ತನ್ನ ಇರುವಿಕೆಯ ಬಗ್ಗೆ ಮರೆಮಾಚುವ ದೃಷ್ಟಿಯಿಂದ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸುತ್ತಿರುವಾಗ ನಾನು  ಸದರಿಯವನನ್ನು  ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ರೂಪಸಿಂಗ್ ತಂದೆ ಪೋಮು ರಾಠೋಡ ವಯಾ: 27 ಉ: ಆಟೋ ಡ್ರೈವರ ಜಾತಿ: ಲಮಾಣಿ ಸಾ: ಮುದ್ನಾಳ ದೊಡ್ಡ ತಾಂಡ (ಭೀಮಾ ನಗರ ) ಯಾದಗಿರಿ   ತಿಳಿಸಿದ್ದು ಸದರಿಯವನು ಅನುಮಾನಸ್ಪದವಾಗಿ ತಿರುಗಾಡುತ್ತಿದರಿಂದ ಹಾಗೆಯೇ ಬಿಟ್ಟಲ್ಲಿ ಯಾವುದೇ ಸ್ವತ್ತಿನ ಅಪರಾಧ ಮಾಡುವ ಸಾದ್ಯತೆಗಳು ಇದ್ದುದ್ದರಿಂದ ಸದರಿಯವನಿಂದ  ಜರುಗಬಹುದಾದ ಸಂಭವನಿಯ ಅಪರಾಧಗಳನ್ನು ತಡೆಗಟ್ಟುವಗೋಸ್ಕರ ಮುಂಜಾಗೃತಾ ಕ್ರಮ ಕುರಿತು ಸದರಿಯವರನ್ನು ಹಿಡಿದುಕೊಂಡು 6-00 ಎ.ಎಮ್ ಕ್ಕೆ ಠಾಣೆಗೆ ಬಂದು ಆರೋಪಿತನನ್ನು ಹಾಜರುಪಡಿಸಿ ವರದಿ ಸಲ್ಲಿಸಿದ್ದು  ಇರುತ್ತದೆ. ಸದರಿ ವರದಿ ಸಾರಾಂಶ ಮೇಲಿಂದ  ಆರೋಪಿತನ ವಿರುದ್ದ ಠಾಣೆ ಪಿ.ಎ.ಆರ್ ನಂ 13/2020 ಕಲಂ 109 ಸಿ,ಆರ್,ಪಿ,ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡನು.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ: 160/2020 ಕಲಂ. ಯುವತಿ ಕಾಣೆಯಾದ ಬಗ್ಗೆ. : ಇಂದು ದಿನಾಂಕ 14.11.2020 ರಂದು ಬೆಳಿಗ್ಗೆ 10.00 ಗಂಟೆಗೆ  ಫಿಯರ್ಾದಿ ಖುದ್ದಾಗಿ ಠಾಣೆಗೆ ಬಂದು ಹಾಜರಾಗಿ ಹೇಳಿಕೆ ನೀಡಿದ್ದು, ನನ್ನ ಮಗಳು ಅರುಣಕುಮಾರಿ  ದಿನಾಂಕ:11.11.2020 ರಂದು ಸಾಯಂಕಾಲ 6.00 ಗಂಟೆ ವೇಳೆಗೆ ನಾನು ನನ್ನ ಹೆಂಡತಿ ಸಿದ್ದಮ್ಮ, ಮಗ ಅಂಬ್ರೇಶ ಮನೆಯಲ್ಲಿ ಇದ್ದಾಗ. ನನ್ನ ಮಗಳು ಅರಣುಕುಮಾರಿ ಇವಳು ನನ್ನ ತಂಗಿಯಾದ ಶಕುಂತಲಾ ಇವರ ಮನೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವಳು ರಾತ್ರಿ ವೇಳೆಯಾದರು ಮನೆಗೆ ಬರದೇ ಇದ್ದಾಗ ನನ್ನ ತಂಗಿ ಮನೆಗೆ ನನ್ನ ಹೆಂಡತಿ ಸಿದ್ದಮ್ಮ ಇವಳು ಹೋಗಿ ಕೇಳಿದ್ದು. ನಮ್ಮ ಮನೆಗೆ ಬಂದು ಹೋಗಿದ್ದಾಗಿ ತಿಳಿಸಿದ್ದು ನಂತರ ನಾವೆಲ್ಲರೂ ಗುರುಮಠಕಲ್ಲದಲ್ಲಿ ರಾತ್ರಿಯೆಲ್ಲಾ ಹುಡುಕಾಡಿದ್ದು. ನನ್ನ ಮಗಳು ಸಿಕ್ಕಿರುವದಿಲ್ಲಾ ಮರ ದಿವಸ ಯಾದಗಿರಿಯಲ್ಲಿರುವ ನಮ್ಮ ಬೀಗರಾದ ಉಮಾಶಂಕರರವರಿಗೆ ಪೋನ್ ಮಾಡಿ ಕೇಳಿದ್ದು ಅವರು ನಮ್ಮ ಮನೆಗೆ ಬಂದಿರುವದಿಲ್ಲಾ ಅಂತ ತಿಳಿಸಿದರು.  ನಾವು ನಮ್ಮ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಿದ್ದು ಎಲ್ಲಯೂ ಸುಳಿವು ಸಿಕ್ಕಿರುವದಿಲ್ಲ. ನನ್ನ ಮಗಳು ಮನೆಯಿಂದ ಹೋಗುವಾಗ ಪುಲ್ ತೊಳಿನ ಬೂದು ಬಣ್ಣದ ಟಿ ಶರ್ಟ, ಕಪ್ಪು ಬಣ್ಣದ ಜೀನ್ಸ್ ಟೈಟ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಕ್ರಾಪ್ ಧರಿಸಿದ್ದು. ನನ್ನ ಮಗಳು ದಪ್ಪ ಇದ್ದು ಅಗಲವಾದ ಮುಖ, ಮೊಂಡು ಮೂಗು ಕೆಂಪು ಬಣ್ಣ ಹೊಂದಿದ್ದು. ಕನ್ನಡ, ತೆಲಗು ಹಿಂಡಿ ಭಾಷೆ ಮಾತನಾಡುತ್ತಾಳೆ.ಎಲ್ಲಾ ಕಡೆಗೂ ನನ್ನ ಮಗಳನ್ನು ಹುಡುಕಾಡಿ, ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ: 161/2020  ಕಲಂ. 454, 457, 380 ಐ.ಪಿ.ಸಿ : ಇಂದು ದಿನಾಂಕ 14.11.2020 ರಂದು ಸಾಯಂಕಾಲ 5-30 ಗಂಟೆಗೆ ದೂರುದಾರ ಠಾಣೆಗೆ ಬಂದು ಗಣಕಯಂತ್ರದಲ್ಲಿ ಟೈಪ ಮಾಡಿದ ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಚಪೇಟ್ಲಾ ಗ್ರಾಮದ ಅಂದಾಜು 1 ಫಲರ್ಾಂಗ ದೂರದ ಬೆಟ್ಟದ ಮೇಲಿರುವ ಶ್ರೀ ಮಾತಾ ಮಹೇಶ್ವರಿ ದೇವಿಯ ದೇವಸ್ಥಾನದ ಬೀಗ ಹಾಕುವ ಬಾಗಿಲದ ಕೊಂಡಿಯನ್ನು ಯಾರೋ ಕಳ್ಳರು ದಿನಾಂಕ. 13.11.2020 ರಂದು ಸಂಜೆ 6-15 ಗಂಟೆಯಿಂದ ದಿನಾಂಕ. 14.11.2020 ರಂದು ಬೆಳಿಗ್ಗೆ 7-00 ಗಂಟೆವರೆಗಿನ ಮಧ್ಯದ ಅವಧಿಯಲ್ಲಿ ಬಾಗಿಲದ ಕೊಂಡಿ ಮುರಿದು ಒಳಗೆ ಪ್ರವೇಶಿಸಿ ದೇವಿಯ ಮೂತರ್ಿಯ ಮೇಲಿರುವ ಕಾಲಂ. ನಂ-10 ರಲ್ಲಿ ತೋರಿಸಿರುವ ಅಂದಾಜು ಕಿಮ್ಮತ್ತು 54,000/- ರೂ ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡು, ಕಳ್ಳತನ ಮಾಡಿದವರನ್ನು ಮತ್ತು ದೇವಿಯ ಆಭರಣಗಳನ್ನು ಪತ್ತೆ ಮಾಡಬೇಕೆಂದು ದೂರು ಸಾರಾಂಶ ಇರುತ್ತದೆ

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 129/2020 ಕಲಂ: 379 ಐಪಿಸಿ : ಇಂದು ದಿನಾಂಕ: 14/11/2020 ರಂದು 5-30 ಪಿಎಮ್ ಕ್ಕೆ ಶ್ರೀ ಶ್ರೀಧರ ತಂದೆ ಕುಬೇರಪ್ಪ ಸುಣಗಾರ ಆಡಳಿತಾಧಿಕಾರಿ ರಿನಿವ ವಿಂಡ ಎನಜರ್ಿ (ಬುದ್ಧ-3) ಪ್ರೈ ಲಿ. ಐಕೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ಸೋಲಾರ ಘಟಕದ ಐಸಿಆರ್-1 ರ ಬಳಿ ಇರುವ ಸೋಲಾರ ವಿದ್ಯುತ ಉತ್ಪಾದನೆ ಕಡಿಮೆಯಾಗಿರುವುದು ದಿನಾಂಕ: 11/11/2020 ರಂದು ನಮ್ಮ ಗಮನಕ್ಕೆ ಬಂದಾಗ ಕಾರಣ ತಿಳಿಯಲು ನಮ್ಮ ಇಂಜನೀಯರಗಳು ಸೋಲಾರ ಪ್ಯಾನೆಲಗಳನ್ನು ತಪಾಸಣೆ ಮಾಡಲಾಗಿ ಐಸಿಆರ್-1 ಗೆ ಸಂಪರ್ಕ ಕಲ್ಪಿಸಿರುವ ಸುಮಾರು 260 ಸೋಲಾರ ಪ್ಯಾನಲ್ಗಳು (ಮಾಡ್ಯೂಲ್ಸಗಳು) ಒಂದಕ್ಕೊಂದು ವಿದ್ಯುತ ಸಂಪರ್ಕ ಕಲ್ಪಿಸಲು ಜೋಡಣೆ ಮಾಡಲಾಗಿದ್ದ ಕೇಬಲಗಳನ್ನು ಯಾರೋ ನಮ್ಮ ಘಟಕದೊಳಗೆ ಬಂದು ತುಂಡು ಮಾಡಿ ಕಳುವು ಮಾಡಿಕೊಂಡು ಹೋಗಿರುವುದು ಗಮನಕ್ಕೆ ಬಂತು. ಈ ಕೆಬಲಗಳನ್ನು ಸರಿಯಾಗಿ ಜೋಡಿಸಲು ಸೋಲಾರ ಪ್ಯಾನಲಗಳ ಕೆಳಭಾಗದಲ್ಲಿ ಜಂಕ್ಷನ ಬಾಕ್ಸ ಇರುತ್ತದೆ. ಕಳ್ಳರು ಸದರಿ ಜಂಕ್ಷನ ಬಾಕ್ಸನ ಸಮಕ್ಕೆ ಸರಿಯಾಗಿ ಕತ್ತರಿಸಿ, ಕಳ್ಳತನ ಮಾಡಿಕೊಂಡು ಒಯ್ದ ಪರಿಣಾಮ ಸುಮಾರು 260 ಪ್ಯಾನೆಲಗಳು ಸಂಪೂರ್ಣ ಡ್ಯಾಮೇಜ್ ಆಗಿರುತ್ತದೆ. ಕಳ್ಳತನವಾದ ಕೆಬಲಗಳ ಬೆಲೆ ಅಂದಾಜು 40,000/- (ನಲವತ್ತು ಸಾವಿರ) ರೂ. ಗಳು ಆಗಬಹುದು. ಇದರಿಂದ 260 ಪ್ಯಾನೆಲಗಳನ್ನು ಬದಲಿಸಿ, ಹೊಸ ಪ್ಯಾನೆಲಗಳನ್ನು ಅಳವಡಿಸಿಬೇಕಾಗಿತ್ತದೆ. ಸದರಿ ಕಳ್ಳತನವು ದಿನಾಂಕ: 09/11/2020 ರ ರಾತ್ರಿಯಿಂದ 11/11/2020 ರ ಬೆಳಗಿನ ಒಳಗಡೆ ನಡೆದಿರುತ್ತದೆ. ಯಾರೋ ಕಳ್ಳರು ಕೆಬಲ್ನ್ನು ಕತ್ತರಿಸಿ, ಕಳುವು ಮಾಡಿಕೊಂಡು ಹೋಗಿರುತ್ತಾರೆ. ಆದ ಕಾರಣ ತಾವು ಈ ಬಗ್ಗೆ ತನಿಖೆ ನಡೆಸಿ, ಸಂಬಂಧಪಟ್ಟವರನ್ನು ಬಂಧಿಸಿ, ಕಳ್ಳತನವಾದ ಮಾಲನ್ನು ವಾಪಸ ಕೂಡಿಸಿ, ಆದ ನಷ್ಟವನ್ನು ಭರಿಸಿ, ನಮಗೆ ನ್ಯಾಯ ದೊರಕಿಸಿ ಕೊಡಲು ವಿನಂತಿ. ಈ ವಿಷಯದಲ್ಲಿ ನಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ, ಈ ದಿವಸ ಠಾಣೆಗೆ ಬಂದು ದೂರು ಕೊಡುತ್ತಿದ್ದೆನೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 129/2020 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!