ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/11/2020

By blogger on ಶುಕ್ರವಾರ, ನವೆಂಬರ್ 13, 2020

 


                                        ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/11/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 103/2020 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನನ್ನ ಗೆಳೆಯನಾದ ಶಾಧಿಕ್ ಖುರೇಶಿ ತಂದೆ ಮೌಲಾನಾ ಸಾ|| ಶೇಟ್ಟಿಗೇರಾ ತಾ|| ಜಿ|| ಯಾದಗಿರಿ ಈತನದು ಒಂದು ಬಜಾಜ್ ಪ್ಲಾಟೀನ್ ಮೋಟರ್ ಸೈಕಲ್ ನಂ ಕೆ.ಎ 33 ಙ 1731,  ಅಂತಾ ಇರುತ್ತದೆ. ಅದರ ಇಟಿರಟಿಜ ಓಠ- ಕಈಙಘಏಅ44135,  ಅಚಿ ಓಔ-ಒಆ2ಂ76ಂಙ4ಏಘಅ24,  ಅ.ಕಿ 30,000/ ರೂಪಾಯಿಗಳು, ನನ್ನ ಗೆಳೆಯ ಜನೇವರಿ-2020 ರಂದು ದುಡಿಯಲು ಬಾಂಬೆಗೆ ಹೋಗಿದ್ದದರಿಂದ ಅವನ ಮೋಟರ್ ಸೈಕಲ್ ನನಗೆ ಉಪಯೋಗ ಮಾಡಲು ಹೇಳಿ ನನ್ನ ಹತ್ತಿರ ಬಿಟ್ಟು ಹೋಗಿದ್ದನು. ನಾನು ಸದರಿ ಮೋಟರ್ ಸೈಕಲ್ ಇಲ್ಲಿಯ ವರೆಗೆ ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು  ದಿನಾಂಕ 05/11/2020 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ಪ್ರತಿ ನಿತ್ಯದಂತೆ ನಾನು ನನ್ನ ಅಂಗಡಿಯಿಂದ ಮನೆಗೆ ಬಂದು, ಮೋಟರ್ ಸೈಕಲ್ ನಂ ಕೆ.ಎ 33 ಙ 1731, ನೇದ್ದನ್ನು ಲಾಕ್ ಮಾಡಿ ನನ್ನ ಮನೆಯ ಮುಂದೆ ನಿಲ್ಲಿಸಿ, ಮನೆಯಲ್ಲಿ ಉಳಿದುಕೊಂಡೆನು. ನಂತರ ದಿನಾಂಕ 06/11/2020 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಎದ್ದು ನೋಡಿದಾಗ ಸದರಿ ಮೋಟರ್ ಸೈಕಲ್ ನಮ್ಮ ಮನೆಯ ಮುಂದೆ ಇರಲಿಲ್ಲ. ನಂತರ ನಾನು ಮನೆಯ ಅಕ್ಕ-ಪಕ್ಕದಲ್ಲಿ ನೋಡಿದರೂ ಮೋಟರ್ ಸೈಕಲ್ ಪತ್ತೆಯಾಗಲಿಲ್ಲ. ನಂತರ ನಾನು ನನ್ನ ಗೆಳೆಯರಾದ ಪ್ರವೀಣರಾಜ ತಂದೆ ಪಿ.ರಾಮಲಿಂಗಪ್ಪ ಬೋರನೋರ ಮತ್ತು ವಿಶ್ವನಾಥ ತಂದೆ ರಾಜಶೇಖರ ದಾಸನಕೇರಿ ಇವರಿಗೆ ತಿಳಿಸಿದಾಗ ಅವರು ಕೂಡ ಮನೆಗೆ ಬಂದು ನೋಡಿದರು. ಎಲ್ಲರು ಕೂಡಿ ಯಾದಗಿರಿಯ ವಿವಿದ ಕಡೆಗಳಲ್ಲಿ ತಿರುಗಾಡಿ ನೋಡಿದರೂ ಮೋಟರ್ ಸೈಕಲ್ ಸಿಗಲಿಲ್ಲ. ಇಲ್ಲಿಯ ವರೆಗೆ ನಾನು ಮೋಟರ್ ಸೈಕಲ್ ಹುಡುಕಾಡಿದರೂ ಸಿಗದೇ ಇದ್ದ ಕಾರಣ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ಮೋಟರ್ ಸೈಕಲ್ ಪತ್ತೆಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 103/2020 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 279/2020. ಕಲಂ 379 ಐ.ಪಿ.ಸಿ : ದಿನಾಂಕ:27-10-2020 ರಂದು 6:00 ಪಿ.ಎಮ್.ದಿಂದ   7:00 ಪಿ.ಎಮ್.ದ ಮದ್ಯದ ಅವಧಿಯಲ್ಲಿ ಶಹಾಪೂರದ ನಗರದ ಹಳೇ ಬಸ್ ನಿಲ್ದಾಣದ ಆವರಣದಲ್ಲಿ ನಿಲ್ಲಿಸಿದ ಫಿರ್ಯಾದಿಯವರ  ಸ್ಪ್ಲೆಂಡರ ಪ್ರೋ ಮೊಟಾರ ಸೈಕಲ್ ನಂ  ಕೆ.ಎ.32-ಇ.ಎಫ್. 4859 ಅ.ಕಿ.30000/-ರೂ. ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆ ಹಚ್ಚಿ  ಮೊಟಾರ ಸೈಕಲ್ ನ್ನು ಹುಡುಕಿ ಕೊಡಲು ತಮ್ಮಲ್ಲಿ ವಿನಂತಿ.ಅಂತಾ ಇದ್ದ  ಫಿಯರ್ಾದಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ.279/2020 ಕಲಂ. 379 ಐ.ಪಿ.ಸಿ. ಅಡಿಯಲ್ಲಿ  ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗೋಗಿ ಪೊಲೀಸ ಠಾಣೆ ಗುನ್ನೆ ನಂ:  32/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ: 12/11/2020 ರಂದು 11.30 ಎಎಂಕ್ಕೆ ಶ್ರೀ. ಲಕ್ಕಪ್ಪ ಸಿಪಿಸಿ-198 ಗೋಗಿ ಠಾಣೆ ರವರು ಒಂದು ವರದಿ ಹಾಜರ ಪಡೆಸಿದ್ದು, ಸದರಿ ವರದಿ ಸಾರಂಶದ ಏನಂದರೆ, ನಾನು ಲಕ್ಕಪ್ಪ ಸಿಪಿಸಿ-198 ಗೋಗಿ ಪೊಲೀಸ್ ಠಾಣೆ, ಮಾನ್ಯರವರ ಆದೇಶದಂತೆ ಗೋಗಿ ಕೆ ಗ್ರಾಮದ ಬೀಟ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಮೂಲಕ ಸರಕಾರಿ ತಪರ್ೆ ಫಿರ್ಯಾದಿ ವರದಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ: 12/11/2020 ರಂದು 10.30 ಎಎಂಕ್ಕೆ ನಾನು ಠಾಣೆಗೆ ಬರುತ್ತಿದ್ದಾಗ ಬಾತ್ಮಿ ಬಂದಿದ್ದೇನಂದರೆ, ಗೋಗಿ ಕೆ ಗ್ರಾಮದಲ್ಲಿ ದಿನಾಂಕ:04/08/2020 ರಿಂದ  ಗೋಗಿ ಪೇಠ ಗ್ರಾಮದಲ್ಲಿನ ನಿವಾಸಿತರಾದ 1) ಸಿದ್ರಾಮರೆಡ್ಡಿ ತಂದೆ ಗುರುನಾಥರೆಡ್ಡಿ ದೇವಣಗಾಂವ ವ:55 ಜಾ: ಲಿಂಗಾಯತರೆಡ್ಡಿ ಉ: ಹಾಸ್ಟೇಲ್ ಸುಪರಿಂಟೆಂಡೆಂಟ ಸಾ:ಗೋಗಿ(ಕೆ) 2) ಮಲ್ಲಿಕಾಜರ್ುನರೆಡ್ಡಿ ತಂದೆ ಸಿದ್ರಾಮರೆಡ್ಡಿ ದೇವಣಗಾಂವ ವಯಾ:30 ಉ: ಒಕ್ಕಲುತನ ಜಾ: ಲಿಂಗಾಯತ ರೆಡ್ಡಿ ಸಾ: ಗೋಗಿ ಕೆ 3) ಆತ್ಮಾನಂಧರೆಡ್ಡಿ ತಂದೆ  ಸಿದ್ರಾಮರೆಡ್ಡಿ ದೇವಣಗಾಂವ ವಯಾ:28 ಉ: ಒಕ್ಕಲುತನ ಜಾ: ಲಿಂಗಾಯತ ರೆಡ್ಡಿ ಸಾ: ಗೋಗಿ ಕೆ ಎಲ್ಲರೂ ಹಾ:ವ: ಬಾಪೂಗೌಡ ನಗರ ಶಹಾಪೂರ ಇವರುಗಳು, ಅದೆ ಗ್ರಾಮದವರೇ ಆದ ಚನ್ನಾರೆಡ್ಡಿ ತಂದೆ ಗುರುನಾಥರೆಡ್ಡಿ ದೇವಣಗಾಂವ ಸಂಗಡ ಇನ್ನು ಇಬ್ಬರು ಇವರೊಂದಿಗೆ ಗೋಗಿ.ಕೆ  ಗ್ರಾಮ ಸೀಮಾಂತರ ಹೊಲ ಸವರ್ೇ ನಂ: 146/2 ನೇದ್ದರಲ್ಲಿ ಸಾಗುವಳಿ ಮಾಡುವ ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡಿರುತ್ತಾರೆ. ಭತ್ತದ ನಾಟಿ ಮಾಡುವ ಸಮಯದಲ್ಲಿ ಗೋಗಿ ಠಾಣೆ ಗುನ್ನೆ ನಂ:88/2020 ಕಲಂ: 447, 504, 506 ಸಂ: 34 ಐಪಿಸಿ ಪ್ರಕರಣ ವರದಿಯಾಗಿದ್ದು, ಸದರಿ ವಿಷಯದಲ್ಲಿ ಸದ್ಯ ಭತ್ತದ ಕಟಾವು ಮಾಡುವ ಹಂತಕ್ಕೆ ಬಂದಿದ್ದು, ಸದರಿ ಭತ್ತದ ರಾಶಿ ಮಾಡುವ ಬಗ್ಗೆ ಕೂಡ ಎರಡೂ ಪಾಟರ್ೀ ಜನರಲ್ಲಿ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ ಜನರ ವಿರುದ್ಧ ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಲು ವಿನಂತಿ ಅಂತಾ ವರದಿ ಸಾರಂಶದ ಮೇಲಿಂದ ಠಾಣೆಯ ಪಿಎಆರ್ ನಂ:32/2020 ಕಲಂ: 107 ಸಿ.ಅರ್.ಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.           

ಗೋಗಿ ಪೊಲೀಸ ಠಾಣೆ ಗುನ್ನೆ ನಂ: 33/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ: 12/11/2020 ರಂದು 12.30 ಪಿಎಂಕ್ಕೆ ಶ್ರೀ. ಲಕ್ಕಪ್ಪ ಸಿಪಿಸಿ-198 ಗೋಗಿ ಠಾಣೆ ರವರು ಒಂದು ವರದಿ ಹಾಜರ ಪಡೆಸಿದ್ದು, ಸದರಿ ವರದಿ ಸಾರಂಶದ ಏನಂದರೆ, ನಾನು ಲಕ್ಕಪ್ಪ ಸಿಪಿಸಿ-198 ಗೋಗಿ ಪೊಲೀಸ್ ಠಾಣೆ, ಮಾನ್ಯರವರ ಆದೇಶದಂತೆ ಗೋಗಿ ಕೆ ಗ್ರಾಮದ ಬೀಟ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಮೂಲಕ ಸರಕಾರಿ ತಪರ್ೆ ಫಿರ್ಯಾದಿ ವರದಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ: 12/11/2020 ರಂದು 10.30 ಎಎಂಕ್ಕೆ ನಾನು ಠಾಣೆಗೆ ಬರುತ್ತಿದ್ದಾಗ ಬಾತ್ಮಿ ಬಂದಿದ್ದೇನಂದರೆ, ಗೋಗಿ ಕೆ ಗ್ರಾಮದಲ್ಲಿ ದಿನಾಂಕ:04/08/2020 ರಿಂದ  ಗೋಗಿ ಪೇಠ ಗ್ರಾಮದಲ್ಲಿನ ನಿವಾಸಿತರಾದ 1) ಚನ್ನಾರೆಡ್ಡಿ ತಂದೆ ಗುರುನಾಥರೆಡ್ಡಿ ದೇವಣಗಾಂವ ವಯಾ:50 ಉ: ಒಕ್ಕಲುತನ ಜಾ: ಲಿಂಗಾಯತ ರೆಡ್ಡಿ ಸಾ: ಗೋಗಿ ಕೆ ತಾ: ಶಹಾಪೂರ. 2) ವಿಶ್ವನಾಥ ರೆಡ್ಡಿ ತಂದೆ ಗುರುನಾಥರೆಡ್ಡಿ ದೇವಣಗಾಂವ ವಯಾ:45 ಉ; ಒಕ್ಕಲುತನ ಜಾ: ಲಿಂಗಾಯತ ಸಾ: ಗೋಗಿ ಕೆ ತಾ: ಶಹಾಪೂರ. 3) ಮಲ್ಲಪ್ಪ ತಂದೆ ಮರೆಪ್ಪ ಗಡ್ಡದ ವಯಾ:36 ವರ್ಷ ಉ:ಒಕ್ಕಲುತನ ಜಾ: ಎಸ್.ಸಿ ಸಾ: ಗೋಗಿ ಕೆ ತಾ: ಶಹಾಪೂರ ಇವರುಗಳು, ಅದೆ ಗ್ರಾಮದವರೇ ಆದ ಸಿದ್ರಾಮರೆಡ್ಡಿ ತಂದೆ ಗುರುನಾಥರೆಡ್ಡಿ ದೇವಣಗಾಂವ ಸಂಗಡ ಇನ್ನು ಇಬ್ಬರು ಇವರೊಂದಿಗೆ ಗೋಗಿ. ಕೆ  ಗ್ರಾಮ ಸೀಮಾಂತರ ಹೊಲ ಸವರ್ೇ ನಂ: 146/2 ನೇದ್ದರಲ್ಲಿ ಸಾಗುವಳಿ ಮಾಡುವ ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡಿರುತ್ತಾರೆ. ಭತ್ತದ ನಾಟಿ ಮಾಡುವ ಸಮಯದಲ್ಲಿ ಗೋಗಿ ಠಾಣೆ ಗುನ್ನೆ ನಂ:88/2020 ಕಲಂ: 447, 504, 506 ಸಂ: 34 ಐಪಿಸಿ ಪ್ರಕರಣ ವರದಿಯಾಗಿದ್ದು, ಸದರಿ ವಿಷಯದಲ್ಲಿ ಸದ್ಯ ಭತ್ತದ ಕಟಾವು ಮಾಡುವ ಹಂತಕ್ಕೆ ಬಂದಿದ್ದು, ಸದರಿ ಭತ್ತದ ರಾಶಿ ಮಾಡುವ ಬಗ್ಗೆ ಕೂಡ ಎರಡೂ ಪಾಟರ್ೀ ಜನರಲ್ಲಿ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ ಜನರ ವಿರುದ್ಧ ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಲು ವಿನಂತಿ ಅಂತಾ ವರದಿ ಸಾರಂಶದ ಮೇಲಿಂದ ಠಾಣೆಯ ಪಿಎಆರ್ ನಂ:33/2020 ಕಲಂ: 107 ಸಿ.ಅರ್.ಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.           

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 13/2020 107 ಸಿ.ಆರ್.ಪಿ.ಸಿ  : ಇಂದು ದಿನಾಂಕ: 12/11/2020 ರಂದು 4:00 ಎ.ಎಂಕ್ಕೆ ನಾನು ಸಂಗಡ ಪಿಸಿ-90 ದೇವಿಂದ್ರಪ್ಪ ರವರೊಂದಿಗೆ ಹಳ್ಳಿ ಬೇಟಿಗೆಂದು ಜೊಗಂಡಬಾವಿ ಗ್ರಾಮಕ್ಕೆ ಹೋದಾಗ ಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಹುಲಗಮ್ಮ ಗಂಡ ಸೋಮಪ್ಪ ಬಪ್ಪರಗಿ ಮತ್ತು ಅವರ ಸಂಗಡಿಗರು ಹಾಗೂ ಚಿದಾನಂದಪ್ಪ ತಂದೆ ಬಲವಂತಪ್ಪ ಬಪ್ಪರಗಿ ಮತ್ತು ಅವರ ಸಂಗಡಿಗರ ಮದ್ಯ ಜೊಗಂಡಬಾವಿ ಸೀಮಾಂತರದ ಹೊಲ ಸವರ್ೆ ನಂ 19 ರಲ್ಲಿಯ ಎರಡು ಎಕರೆ ಜಮೀನಿನ ವಿಷಯದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ತಕರಾರು ನಡೆದಿದ್ದು ಅಂದಿನಿಂದ ಎರಡು ಪಾಟರ್ಿಯವರ ಮದ್ಯ ಗಾಡವಾದ ವೈಷಮ್ಯ ಬೆಳದಿದ್ದು, ಮುಂಬರುವ ದಿನಗಳಲ್ಲಿ ಎರಡು ಪಾಟರ್ಿಯವರು ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿದ್ದರಿಂದ ಮರಳಿ ಠಾಣೆಗೆ ಬಂದು ಹುಲಗಮ್ಮ ಗಂಡ ಸೋಮಪ್ಪ ಬಪ್ಪರಗಿ  ಮತ್ತು ಸಂಗಡಿಗರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 14/2020 107 ಸಿ.ಆರ್.ಪಿ.ಸಿ : ಸಾರಾಂಶ ಮಾನ್ಯರವರಲ್ಲಿ ನಾನು ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪುರ ಪೊಲೀಸ ಠಾಣೆ ಈ ಮೂಲಕ ಸಲ್ಲಿಸುವ ವರದಿ ಏನೆಂದರೆ, ಇಂದು ದಿನಾಂಕ: 12/11/2020 ರಂದು 4:00 ಪಿ.ಎಂಕ್ಕೆ ನಾನು ಸಂಗಡ ಪಿಸಿ-90 ದೇವಿಂದ್ರಪ್ಪ ರವರೊಂದಿಗೆ ಹಳ್ಳಿ ಬೇಟಿಗೆಂದು ಜೊಗಂಡಬಾವಿ ಗ್ರಾಮಕ್ಕೆ ಹೋದಾಗ ಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಚಿದಾನಂದಪ್ಪ ತಂದೆ ಬಲವಂತಪ್ಪ ಬಪ್ಪರಗಿ ಮತ್ತು ಅವರ ಸಂಗಡಿಗರು ಮತ್ತು ಹುಲಿಗೆಮ್ಮ ಗಂಡ ಸೋಮಪ್ಪ ಬಪ್ಪರಗಿ ಮತ್ತು ಅವರ ಸಂಗಡಿಗರ ಮದ್ಯ ಜೊಗಂಡಬಾವಿ ಸೀಮಾಂತರದ ಹೊಲ ಸವರ್ೆ ನಂ 19 ರಲ್ಲಿಯ ಎರಡು ಎಕರೆ ಜಮೀನಿನ ವಿಷಯದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ತಕರಾರು ನಡೆದಿದ್ದು ಅಂದಿನಿಂದ ಎರಡು ಪಾಟರ್ಿಯವರ ಮದ್ಯ ಗಾಡವಾದ ವೈಷಮ್ಯ ಬೆಳದಿದ್ದು, ಮುಂಬರುವ ದಿನಗಳಲ್ಲಿ ಎರಡು ಪಾಟರ್ಿಯವರು ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ.  ಆದ್ದರಿಂದ ಚಿದಾನಂದಪ್ಪ ಮತ್ತು ಅವರ ಸಂಗಡಿಗರ ವಿರುದ್ದ ಮುಂಜಾಂಗ್ರತಾ ಕ್ರಮ ಜರುಗಿಸಲಾಗಿದೆ. 


 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!