ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/11/2020

By blogger on ಶುಕ್ರವಾರ, ನವೆಂಬರ್ 13, 2020



                                      ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/11/2020 

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 105/2020 279,304(ಎ)ಐಪಿಸಿ : ಇಂದು ದಿನಾಂಕ:10/11/2020 ರಂದು 5-30 ಪಿ.ಎಮ್ ಕ್ಕೆ ಫಿರ್ಯಾದಿದಾರಳಾದ  ಶ್ರೀಮತಿ ಪ್ರೇಮಾ ಗಂಡ ಪವನ ಬಿರಾದರ ವ:28 ವರ್ಷ ಜಾ:ಲಿಂಗಾಯತ ಉ:ಮನೆಕೆಲಸ ಸಾ:ಬನ್ನೇಟ್ಟಿ (ಪಿ.ಎ) ತಾ:ಸಿಂದಗಿ ಜಿಲ್ಲಾ:ವಿಜಾಪೂರ ಫಿರ್ಯಾದಿಸಲ್ಲಸಿದ್ದರ ಸಾರಂಶವೆನಂದರೆ ಇಂದು ದಿನಾಂಕ:10/11/2020 ರಂದು ಮದ್ಯಾಹ್ನ 3 ಗಂಟೆಯಿ ಸುಮಾರಿಗೆ ಹುಣಸಗಿಯಿಂದ ಫಿರ್ಯಾದಿ ಮತ್ತು ಅವಳ  ಗಂಡ ಪವನ. ಮಾವ ಶರಣಗೌಡ ಅತ್ತೆ ಜಾನಕಿ ಹಾಗೂ ಮಗಳು ಕೃತಿಕಾಳೊಂದಿಗೆ ತಮ್ಮ ವಿಕೋ ಸ್ಪೋಟ್ಸ್ ಬ್ಲ್ಯಾಕ ಬಣ್ಣದ ಕಾರ ನಂ ಕೆ.ಎ.01 ಎಮ್.ಕೆ. 6984 ನೇದ್ದರಲ್ಲಿ ಪಾಲಿಗೆ ಮಾಡುವ ಸಲುವಾಗಿ ಕವಳಿ  ಹೊಲ ನೋಡಲು ಮಾಳನೂರ ಕೆಂಭಾವಿ ಮುಖ್ಯ ಕೆನಾಲದ ರಸ್ತೆಯಲ್ಲಿ ಹೋಗಿ ಮರಳಿ  ವಾಪಸ ಬರಲು 3-30 ಗಂಟೆಯ ಸುಮಾರಿಗೆ ಕಾರ ಚಲಾಯಿಸುತ್ತಿದ್ದ ಶರಣಗೌಡ ಈತನು ಹಿಂದೆ ಅತೀವೇಗದಿಂದ ಹಾಗೂ ನಿಷ್ಕಾಳೀಜಿತನದಿಂದ ರಿವರ್ಸ ತೆಗೆದುಕೊಳ್ಳೂವದಾಗ ನಿಯಂತ್ರಣ ತಪ್ಪಿ ಕಾರ ಕೆನಾಲ ನೀರಿನಲ್ಲಿ ಬಿದ್ದಾಗ  ಫಿರ್ಯಾದಿಯು 3 ವರ್ಷ ಮಗುವಿನ್ನೊಂದಿಗೆ ಕಾರ ಬಾಗಿಲು ತೆಗೆದು ಹೊರಗೆ ನೀರಿನಲ್ಲಿ ಬಂದು ಈಜುತ್ತಿದ್ದಾಗ ಒಬ್ಬ ವ್ಯಕ್ತಿಯು ನೋಡಿ ಲುಂಗಿಯಿಂದ ಫಿರ್ಯಾದಿ ಮತ್ತು ಮಗುವಿಗೆ ಹೊರಗೆ ತೆಗೆದಿದ್ದು, ಪವನ ಎಂಬುವನು ಇನ್ನೊಂದು ಬಾಗಿಲದಿಂದ ಹೊರಗೆ ನೀರಿನಲ್ಲಿ ಬಿದ್ದು ಮುಳಗಿಕೊಚ್ಚಿಕೊಂಡು ಹೋಗಿದ್ದು, ಕಾರಚಾಲಕ ಶರಣಗೌಡ ಮತ್ತು ಆತನ ಹೆಂಡತಿ ಜಾನಕಿಯು  ಕಾರದೊಂದಿಗೆ ನೀರಿನಲ್ಲಿ ಕೊಚ್ಚಿಕೊಂಡು ಹೊಗಿದ್ದು, ಪವನ ಈತನ ಶವವು ಇಸ್ಲಾಪೂರ ಹತ್ತಿರ ನೀರಿನಲ್ಲಿ ಜನರು ನೋಡಿ ತೆಗದಿದ್ದು, ಇತ್ಯಾದಿ ಫಿರ್ಯಾದಿ ಸಾರಂಶದ ಮೇಲಿಂದ  ಪ್ರಕರಣದ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.     

ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 236/2020 ಕಲಂ: 279, 304(ಎ) ಐಪಿಸಿ : ಇಂದು ದಿನಾಂಕಃ 10-11-2020 ರಂದು 1-15 ಪಿ.ಎಮ್ ಕ್ಕೆ ಶ್ರೀಮತಿ ಹಣಮವ್ವ ಗಂಡ ಹಣಮಂತ ಕೊಂಗಂಡಿ ಸಾಃ ಕುಂಬಾರಪೇಟ ಸುರಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ಅವರಲ್ಲಿ ಹಿರಿಯ ಮಗನಾದ ನಿಂಗಪ್ಪ ವಯಃ 22 ವರ್ಷ ಇತನು ಕಳೆದ 1 ವರ್ಷದಿಂದ ನಮ್ಮೂರಿನ ಹಣಮಂತ ತಂದೆ ಮರಚಪ್ಪ ದನಕಾಯಿ ಇವರ ಟ್ರಾಕ್ಟರ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ಇಂದು ದಿಃ 10/11/2020 ರಂದು ಮುಂಜಾನೆ 8-00 ಗಂಟೆಗೆ ನನ್ನ ಮಗನಾದ ನಿಂಗಪ್ಪ ತಂದೆ ಹಣಮಂತ ಕೊಂಗಂಡಿ ಇತನು ನಮ್ಮ ಮನೆಯಲ್ಲಿದ್ದಾಗ ಆತನ ಮಾಲಿಕರಾದ ಹಣಮಂತ ದನಕಾಯಿ ಇವರು ನಮ್ಮ ಮನೆಗೆ ಬಂದು ನಿಂಗಪ್ಪನಿಗೆ ತಿಳಿಸಿದ್ದೆನೆಂದರೆ, ಸುರಪೂರದಲ್ಲಿರುವ ಸ್ವರಾಜ ಟ್ರ್ಯಾಕ್ಟರ ಶೋ ರೂಮಿನಲ್ಲಿ ಹೊಸ ಟ್ರ್ಯಾಕ್ಟರ ಬುಕ್ ಮಾಡಿದ್ದು, ಈಗ ಶೋ ರೂಮಿಗೆ ಹೋಗಿ ಟ್ರ್ಯಾಕ್ಟರ ಡೆಲಿವರಿ ಮಾಡಿಕೊಂಡು, ಮೊದಲಿಗೆ ನಮ್ಮ ಸಂಪ್ರದಾಯ ಹಾಗು ದೈವಿ ನಂಬಿಕೆಯಂತೆ ನಮ್ಮ ಮನೆ ದೇವರಾದ ಕವಡಿಮಟ್ಟಿ ಗ್ರಾಮದ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಒಂದು ಟ್ರಿಪ್ ಮಣ್ಣು (ಮರಮ್) ಹಾಕಿ ಪೂಜೆ ಮಾಡಿಕೊಂಡು ಬರೋಣಾ ಅಂತ ಹೇಳಿ ಕರೆದುಕೊಂಡು ಹೋದರು. ಬಳಿಕ ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಹಣಮಂತ ತಂದೆ ಮರಚಪ್ಪ ದನಕಾಯಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾವು ಶೋ ರೋಮಿನಿಂದ ಟ್ರ್ಯಾಕ್ಟರ ತಗೆದುಕೊಂಡು ಅದರೊಂದಿಗೆ ನಮ್ಮ ಹಳೆಯ ಟ್ರ್ಯಾಲಿ ಹಾಕಿಕೊಂಡು, ನಿಮ್ಮ ಮಗ ನಿಂಗಪ್ಪನು ಟ್ರ್ಯಾಕ್ಟರ ನಡೆಸಿಕೊಂಡು ನಾವು ಕುಂಬಾರಪೇಟ ಸೀಮೆಯ ಅಡ್ಡಿಮಡ್ಡಿ ಗುಡ್ಡಕ್ಕೆ ಹೊದೇವು. ಅಲ್ಲಿ ನಾನು, ನಿಮ್ಮ ಮಗ ನಿಂಗಪ್ಪ ಹಾಗು ನಮ್ಮ ಓಣಿಯ ನಾಗಪ್ಪ ಐಕೂರ, ಹಣಮಂತ ಐಕೂರ ಎಲ್ಲರೂ ಕೂಡಿ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಮಣ್ಣು ಲೋಡ ಮಾಡಿದೇವು. ಬಳಿಕ ನಿಂಗಪ್ಪನು ಟ್ರ್ಯಾಕ್ಟರ ನಡೆಸಿಕೊಂಡು ಕವಡಿಮಟ್ಟಿ ಪಾಂಡುರಂಗ ದೇವಸ್ಥಾನದ ಕಡೆಗೆ ಹೊರಟಿದ್ದಾಗ ಕವಡಿಮಟ್ಟಿ ಗ್ರಾಮದ ಪಂಡರಾಪೂರ ಓಣಿಯಲ್ಲಿ ಗೋಪಾಲ ಟಣಮಕಲ್ ಇವರ ಮನೆಯ ಹತ್ತಿರದ ದಿಬ್ಬದ ಮೇಲಿರುವ ಸಾರ್ವಜನಿಕ ಸಿ.ಸಿ ರಸ್ತೆ ಮೇಲೆ ನಿಂಗಪ್ಪನು ಅತಿವೇಗ ಮತ್ತು ಅಲಕ್ಷತನದಿಂದ ಟ್ರ್ಯಾಕ್ಟರ ನಡೆಸಿಕೊಂಡು ಹೋಗುವಾಗ ಮಣ್ಣಿನ ಲೋಡ ಇರುವ ಟ್ರ್ಯಾಕ್ಟರ ಎತ್ತರದ ದಿಬ್ಬ ರಸ್ತೆ ಎರದೇ ಇಳಿಜಾರಿನಲ್ಲಿ ಹಿಂದಕ್ಕೆ ಚಲಿಸಿದ್ದರಿಂದ ಬ್ರೆಕ್ ಹಿಡಿದು ಟ್ರ್ಯಾಕ್ಟರ ನಿಲ್ಲಿಸಿ ಪುನಃ ದಿಬ್ಬದ ರಸ್ತೆ ಏರಿಸುವಾಗ ವೇಗದಲ್ಲಿ ಟ್ರ್ಯಾಕ್ಟರ ಇಂಜಿನ್ ಮುಂದಿನಿಂದ ಗಾಲಿಗಳು ಎದ್ದು ಹಿಂದಕ್ಕೆ ಪಲ್ಟಿಯಾಗಿದ್ದರಿಂದ ಟ್ರಾಕ್ಟರ ನಡೆಸುತ್ತಿದ್ದ ನಿನ್ನ ಮಗ ನಿಂಗಪ್ಪನು ಟ್ರ್ಯಾಕ್ಟರ ಇಂಜಿನ್ ಹಾಗು ಟ್ರ್ಯಾಲಿಯ ಮುಂದಿನ ಬಂಪರ  ನಡುವೆ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದ್ದನು. ತಕ್ಷಣ ನಾನು ಮತ್ತು ಸಮೀಪದ ಮನೆಯವರಾದ ಗೋಪಾಲ ಟಣಮಕಲ್, ಮಲ್ಲಿಕಾಜರ್ುನ ಆಳೇರ ಎಲ್ಲರೂ ಹೋಗಿ ನೋಡಿದ್ದು, ನಾನು ಬೇಗನೆ ಜೆ.ಸಿ.ಬಿ ತರಿಸಿ ಟ್ರ್ಯಾಕ್ಟರ ಇಂಜಿನ್ ಸರಿ ಮಾಡಿ ನಿಮ್ಮ ಮಗ ನಿಂಗಪ್ಪನಿಗೆ ಹೊರಗಡೆ ತಗೆದು ನೋಡಲಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದರು. ಆಗ ಗಾಬರಿಯಾಗಿ ನಾವು ಒಂದು ಅಟೋರಿಕ್ಷಾದಲ್ಲಿ ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು, ನನ್ನ ಮಗ ನಿಂಗಪ್ಪನ ಹಣೆಗೆ, ಎದೆ, ಕುತ್ತಿಗೆ, ಎಡಗೈ ಮೇಲೆ, ಹಾಗು ಎಡಪಕ್ಕಡಿಗೆ ತರಚಿದಂತೆ ಕಂದುಗಟ್ಟಿರುವ ಭಾರಿ ಗುಪ್ತಗಾಯಗಳಾಗಿ, ಎರಡು ಕಿವಿಗಳಿಂದ ರಕ್ತಸ್ರಾವ ಆಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಪಘಾತವಾದ ಹೊಸ ಟ್ರ್ಯಾಕ್ಟರ ಮೇಲೆ ನೊಂದಣಿ ನಂಬರ ಇರುವದಿಲ್ಲ. ಟ್ರ್ಯಾಕ್ಟರ ಇಂಜಿನ್ ಚೆಸ್ಸಿ ನಂಬರ ಒಃಓಂಕ48ಂಆಐಖಿಒ00724 ಇದ್ದು, ಟ್ರ್ಯಾಲಿಯ ಚೆಸ್ಸಿ ನಂ. ಔಂಃ1 ಇರುತ್ತದೆ. ಅಪಘಾತ ಆದಾಗ ಸಮಯ 11-30 ಎ.ಎಮ್ ಆಗಿರಬಹುದು ಅಂತ ವಗೈರೆ  ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 236/2020 ಕಲಂ. 279, 304(ಎ) ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು. 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 158/2020 ಕಲಂ 420 ಐ.ಪಿ.ಸಿ : ಇಂದು ದಿನಾಂಕ 10/11/2020 ರಂದು ಮಧ್ಯಾಹ್ನ 12-15 ಗಂಟೆಗೆ ಶ್ರೀ ಗಿರೀಶ ತಂದೆ ವಿಧ್ಯಾಸಾಗರ ರಾಯಕೋಟಿ ಕಂದಾಯ ನಿರೀಕ್ಷಕರು ಯಾದಗಿರಿ ವಲಯ ಇವರು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರಪಡಿಸಿದ್ದೆನೆಂದರೆ ಮೇಲಿನ ವಿಷಯದನುಸಾರವಾಗಿ ಅರಿಕೆ ಮಾಡಿಕೊಳ್ಳುವುದೆನೆಂದರೆ ನಿನ್ನೆ ದಿನಾಂಕ 09-11-2020 ರಂದು ಮಧ್ಯಾಹ್ನ 12-00 ಪಿ.ಎಂ. ಸುಮಾರಿಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ನನಗೆ ಮತ್ತು ಗ್ರಾಮ ಲೆಕ್ಕಿಗರಾದ ಶ್ರೀಧರ ಬಡಿಗೇರ ರವರಿಗೆ ಮುಂಡರಗಿ ಹತ್ತಿರ ಇರುವ ಅಶೋಕನಗರ ಕ್ಕೆ ಸ್ಥಳ ತನಿಖೆ ಕುರಿತು ಹೋಗುವದಿದೆ ಅಂತಾ ಬರಲು ತಿಳಿಸಿದ್ದರಿಂದ ನಾನು ಮತ್ತು ಶ್ರೀಧರ ಕೂಡಿಕೊಂಡು ನಮ್ಮ ಮೋಟಾರ ಸೈಕಲ್ ಮೇಲೆ ಹೋದಾಗ ಅಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಇದ್ದು, ಅಲ್ಲಿ ಸ್ಥಳ ಪರಿಶೀಲನೆ ಮಾಡಿಕೊಂಡು ಮರಳಿ ಯಾದಗಿರಿಗೆ ಬರಬೇಕು ಅಂತಾ ಪಾಪಸ್ ಬರುತ್ತಿರುವಾಗ ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಯಾದಗಿರಿ-ಹೈದ್ರಾಬಾದ ರೋಡಿನ ಹತ್ತಿರ ಮೌಲಾಲಿ ಅನಪೂರ ರವರ ಅಕ್ಕಿ ಗಿರಣಿ ಪಕ್ಕದಲ್ಲಿ ಅಮೀರಲಿ ತಂದೆ ಮೊಹ್ಮದ್ ಅಲಿ ಚಟ್ನಳ್ಳಿ ಸಾಃ ನಾಯ್ಕಲ್ ಇವರು ಹತ್ತಿ ಖರೀದಿ ಮಾಡುತ್ತಿದ್ದದನ್ನು ಕಂಡು ಬಂದಿದ್ದು, ರೈತರಿಂದ ತಿಳಿದು ಬಂದಿದ್ದೆನೆಂದರೆ ಪ್ರತಿ ರೈತರಿಂದ ಒಂದು ಕ್ವಂಟಾಲ ಹತ್ತಿಗೆ 2 ಕೆ.ಜಿ. ಹತ್ತಿ ಸೂಟ ಅಂತಾ ಕಡಿತಗೊಳಿಸಿ 98 ಕೆ.ಜಿ. ಯ ಹಣ ಪಾವತಿ ಮಾಡುತ್ತಿರುವದಾಗಿ ಮತ್ತು ಕ್ವಿಂಟಲ್ ಹತ್ತಿ ಖರೀದಿಗೆ 20/ರೂ ಹಮಾಲಿ ದರವೆಂದು ರೈತನ ಸಂದಾಯವಾಗುವ ಹಣದಲ್ಲಿ ಕಡಿತಗೊಳಿಸಿ ಮೋಸ ಮಾಡುತ್ತಿರುವದಾಗಿ ತಿಳಿಸಿದರು, ಆಗ ಖರೀದಿರಾನಿಗೆ ವಿಚಾರಿಸಲಾಗಿ ತನ್ನ ಹೆಸರು ಅಮೀರಅಲಿ ತಂದೆ ಮೊಹ್ಮದಲಿ ಚಟ್ನಳ್ಳಿ ಸಾಃ ನಾಯ್ಕಲ್ ಅಂತಾ ತಿಳಿದು ಬಂದಿದ್ದು ಇರುತ್ತದೆ, ನಂತರ ಅದರಂತೆ ಮುಂಡರಗಿ ಗ್ರಾಮದ ಕೆ.ಎಸ್.ಆರ್.ಟಿ.ಸಿ. ವರ್ಕಶಾಪ ಎದುರುಗಡೆ ಇನ್ನೊಬ್ಬ ಅಜ್ಮಲ್ ತಂದೆ ಮಹ್ಮದಹುಸೇನ ಸಾಃ ಯಾದಗಿರಿ ಈತನು ಕೂಡಾ ಈ ಮೇಲಿನಂತೆ ಹತ್ತಿ ಖರೀದಿಯಲ್ಲಿ ರೈತರಿಗೆ ಮೋಸ ಮಾಡುತ್ತಿರುವ ಬಗ್ಗೆ ತಿಳಿಸಿದರು, ನಂತರ ನನಗೆ ಮಾನ್ಯ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಠಾಣೆಗೆ ಹೋಗಿ ಆರೋಪಿತರ ಮೇಲೆ ಕೇಸು ಮಾಡಲು ಸೂಚಿಸಿದ್ದರಿಂದ ತಡವಾಗಿ ಇಂದು ದಿನಾಂಕ 10-11-2020 ರಂದು ಮಧ್ಯಾಹ್ನ 12-00 ಗಂಟೆಗೆ ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿದ ಅಜರ್ಿ ಕೊಟ್ಟಿದ್ದು, ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ, ಸದರಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 158/2020 ಕಲಂ 420 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:  10/2020 ಕಲಂ 107 ಸಿ.ಆರ್.ಪಿ.ಸಿ : ಇಂದು ದಿನಾಂಕ 10/11/2020 ರಂದು ಬೆಳಿಗ್ಗೆ 10-00 ಎ.ಎಂ. ಕ್ಕೆ ಶ್ರೀ ಲಾಲಹ್ಮದಸಾಬ ಸಿಪಿಸಿ-367 ರವರು ಠಾಣೆಗೆ ಬಂದು ವರದಿ ಕೊಟ್ಟಿದ್ದೆನೆಂದರೆ ನಾನು ಲಾಲಹ್ಮದಸಾಬ ಸಿಪಿಸಿ-367 ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಈ ಮೂಲಕ ವರದಿ ಕೊಡುವುದೆನೆಂದರೆ ಇಂದು ದಿನಾಂಕ 10/11/2020 ರಂದು ಮಾನ್ಯರವರ ಆಧೇಶದ ಮೇರೆಗೆ ಅಜರ್ಿದಾರನಾದ ಶ್ರೀ ಮಹಿಮೂದಖಾನ ತಂದೆ ಅಬ್ದುಲಹಮೀದಖಾನ ಸಾಃ ಹೆಡಗಿಮದ್ರಿ ಇವರು ಕೊಟ್ಟಿರುವ ಅಜರ್ಿ ವಿಚಾರಣೆ ಕುರಿತು ಎದುರಾಳಿದಾರರನ್ನು ಕರೆದುಕೊಂಡು ಬರುವ ಕುರಿತು ಬೆಳಿಗ್ಗೆ 9-00 ಗಂಟೆಗೆ ಹೆಡಗಿಮದ್ರಿ ಗ್ರಾಮಕ್ಕೆ ಹೋಗಿದ್ದೆನು, ಅಲ್ಲಿ ಬಾತ್ಮಿ ಬಂದಿದ್ದೆನೆಂದರೆ ಎದುರಾಳಿದಾರರಾದ ವಿಶ್ವರಾಧ್ಯ ತಂದೆ ಬಸವರಾಜ ವಾರದ ಇವರು ಮಹಿಮೂದಖಾನ ಇವರ ಹೊಲ ಸವರ್ೆ ನಂ 139 ನೆದ್ದರ ಆಕಾರ 5 ಎಕರೆ 10 ಗುಂಟೆ ಹೊಲ ಖರೀದಿ ಮಾಡಿರುತ್ತಾರೆ ಅಂತಾ ಹೇಳುತ್ತಿದ್ದು, ಆದರೆ ಮಹಿಮೂದಖಾನ ತಂದೆ ಅಬ್ದುಲಹಮೀದಖಾನ ಇವರು ನಮ್ಮ ಹೊಲ ಮಾರಾಟ ಮಾಡಿರುವದಿಲ್ಲ ಅಂತಾ ಹೇಳುತ್ತಾರೆ,   ಆ ಹೊಲ ನನ್ನದು ಇದೆ, ನಿನ್ನದು ಅಲ್ಲಾ ಅಂತಾ ಈ ಮೇಲ್ಕಂಡ ಎರಡು ಇನರು ಈ ಹಿಂದಿನಿಂದಲೂ ತಕರಾರು ಮಾಡುತ್ತಾ ಬಂದಿರುತ್ತಾರೆ ಮತ್ತು ಒಂದನೇ ಪಾಟರ್ಿಯವರಾದ ಮಹಿಮೂದಖಾನ ತಂದೆ ಅಬ್ದುಲಹಮೀದಖಾನ ಸಾಃ ಹೆಡಗಿಮದ್ರಿ ಮತ್ತು ಎರಡನೇ ಪಾಟರ್ಿಯವರಾದ 1)ವಿಶ್ವರಾಧ್ಯ ತಂದೆ ಬಸವರಾಜ ವಾರದ ಮತ್ತು ಮಲ್ಲಿಕಾಜರ್ುನ ತಂದೆ ಬಸವರಾಜ ವಾರದ ಸಾಃ ಇಬ್ಬರೂ ಹೆಡಗಿಮದ್ರಿ ಇವರೆಲ್ಲರೂ ಕೂಡಿ ಹೆಡಗಿಮದ್ರಿ ಗ್ರಾಮದಲ್ಲಿ ಹೊಲ ಸವರ್ೆ ನಂ 139 ನೆದ್ದರ 5 ಎಕರೆ 10 ಗುಂಟೆ  ಹೊಲ ಸಂಬಂಧ ಹೊಲದಲ್ಲಿ ನನಗೆ ಪಾಲು ಬರುತ್ತದೆ, ನಿನಗೆ ಪಾಲು ಬರುತ್ತದೆ ಅಂತಾ ವೈಮನಸ್ಸಿನಿಂದ ಎರಡು ಪಾಟರ್ಿಯ ಜನರು ತಮ್ಮ ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಗ್ರಾಮದಲ್ಲಿ ತಿರುಗಾಡುತ್ತಾ ಸಾರ್ವಜನಿಕರ ಶಾಂತಿಯನ್ನು ಕದಡುತ್ತಾ ತಿರುಗಾಡುತ್ತಿದ್ದಾರೆ, ಮತ್ತು ಎರಡು ಪಾಟರ್ೀಯ ಜನರು ಯಾವುದೇ ಸಮಯದಲ್ಲಿ ಆಸ್ತಿ ಹಾನಿ ಮತ್ತು ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವವಿರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿದ್ದರಿಂದ ನಂತರ ಮರಳಿ ಠಾಣೆಗೆ ಬೆಳಿಗ್ಗೆ 10-00 ಎ.ಎಮ್ ಕ್ಕೆ ಬಂದು ಸದರಿ ಒಂದನೇ ಪಾಟರ್ಿಯವರಾದ ಮಹಿಮೂದಖಾನ ತಂದೆ ಅಬ್ದುಲಹಮೀದಖಾನ ಸಾಃ ಹೆಡಗಿಮದ್ರಿ ಇವರ ವಿರುದ್ದ ಮುಂಜಾಗೃತಾ ಕೈಕೊಳ್ಳಲು ವಿನಂತಿ, ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್. ನಂ 10/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ: 11/2020 ಕಲಂ 107 ಸಿ.ಆರ್.ಪಿ.ಸಿ : ಇಂದು ದಿನಾಂಕ 10/11/2020 ರಂದು ಬೆಳಿಗ್ಗೆ 10-45 ಎ.ಎಂ. ಕ್ಕೆ ಶ್ರೀ ಲಾಲಹ್ಮದಸಾಬ ಸಿಪಿಸಿ-367 ರವರು ಠಾಣೆಗೆ ಬಂದು ವರದಿ ಕೊಟ್ಟಿದ್ದೆನೆಂದರೆ ನಾನು ಲಾಲಹ್ಮದಸಾಬ ಸಿಪಿಸಿ-367 ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಈ ಮೂಲಕ ವರದಿ ಕೊಡುವುದೆನೆಂದರೆ ಇಂದು ದಿನಾಂಕ 10/11/2020 ರಂದು ಮಾನ್ಯರವರ ಆಧೇಶದ ಮೇರೆಗೆ ಅಜರ್ಿದಾರನಾದ ಶ್ರೀ ಮಹಿಮೂದಖಾನ ತಂದೆ ಅಬ್ದುಲಹಮೀದಖಾನ ಸಾಃ ಹೆಡಗಿಮದ್ರಿ ಇವರು ಕೊಟ್ಟಿರುವ ಅಜರ್ಿ ವಿಚಾರಣೆ ಕುರಿತು ಎದುರಾಳಿದಾರರನ್ನು ಕರೆದುಕೊಂಡು ಬರುವ ಕುರಿತು ಬೆಳಿಗ್ಗೆ 9-00 ಗಂಟೆಗೆ ಹೆಡಗಿಮದ್ರಿ ಗ್ರಾಮಕ್ಕೆ ಹೋಗಿದ್ದೆನು, ಅಲ್ಲಿ ಬಾತ್ಮಿ ಬಂದಿದ್ದೆನೆಂದರೆ ಎದುರಾಳಿದಾರರಾದ ವಿಶ್ವರಾಧ್ಯ ತಂದೆ ಬಸವರಾಜ ವಾರದ ಇವರು ಮಹಿಮೂದಖಾನ ಇವರ ಹೊಲ ಸವರ್ೆ ನಂ 139 ನೆದ್ದರ ಆಕಾರ 5 ಎಕರೆ 10 ಗುಂಟೆ ಹೊಲ ಖರೀದಿ ಮಾಡಿರುತ್ತಾರೆ ಅಂತಾ ಹೇಳುತ್ತಿದ್ದು, ಆದರೆ ಮಹಿಮೂದಖಾನ ತಂದೆ ಅಬ್ದುಲಹಮೀದಖಾನ ಇವರು ನಮ್ಮ ಹೊಲ ಮಾರಾಟ ಮಾಡಿರುವದಿಲ್ಲ ಅಂತಾ ಹೇಳುತ್ತಾರೆ,   ಆ ಹೊಲ ನನ್ನದು ಇದೆ, ನಿನ್ನದು ಅಲ್ಲಾ ಅಂತಾ ಈ ಮೇಲ್ಕಂಡ ಎರಡು ಇನರು ಈ ಹಿಂದಿನಿಂದಲೂ ತಕರಾರು ಮಾಡುತ್ತಾ ಬಂದಿರುತ್ತಾರೆ ಮತ್ತು ಒಂದನೇ ಪಾಟರ್ಿಯವರಾದ ಮಹಿಮೂದಖಾನ ತಂದೆ ಅಬ್ದುಲಹಮೀದಖಾನ ಸಾಃ ಹೆಡಗಿಮದ್ರಿ ಮತ್ತು ಎರಡನೇ ಪಾಟರ್ಿಯವರಾದ 1)ವಿಶ್ವರಾಧ್ಯ ತಂದೆ ಬಸವರಾಜ ವಾರದ ಮತ್ತು 2)ಮಲ್ಲಿಕಾಜರ್ುನ ತಂದೆ ಬಸವರಾಜ ವಾರದ ಸಾಃ ಇಬ್ಬರೂ ಹೆಡಗಿಮದ್ರಿ ಇವರೆಲ್ಲರೂ ಕೂಡಿ ಹೆಡಗಿಮದ್ರಿ ಗ್ರಾಮದಲ್ಲಿ ಹೊಲ ಸವರ್ೆ ನಂ 139 ನೆದ್ದರ 5 ಎಕರೆ 10 ಗುಂಟೆ  ಹೊಲ ಸಂಬಂಧ ಹೊಲದಲ್ಲಿ ನನಗೆ ಪಾಲು ಬರುತ್ತದೆ, ನಿನಗೆ ಪಾಲು ಬರುತ್ತದೆ ಅಂತಾ ವೈಮನಸ್ಸಿನಿಂದ ಎರಡು ಪಾಟರ್ಿಯ ಜನರು ತಮ್ಮ ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಗ್ರಾಮದಲ್ಲಿ ತಿರುಗಾಡುತ್ತಾ ಸಾರ್ವಜನಿಕರ ಶಾಂತಿಯನ್ನು ಕದಡುತ್ತಾ ತಿರುಗಾಡುತ್ತಿದ್ದಾರೆ, ಮತ್ತು ಎರಡು ಪಾಟರ್ೀಯ ಜನರು ಯಾವುದೇ ಸಮಯದಲ್ಲಿ ಆಸ್ತಿ ಹಾನಿ ಮತ್ತು ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವವಿರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿದ್ದರಿಂದ ನಂತರ ಮರಳಿ ಠಾಣೆಗೆ ಬೆಳಿಗ್ಗೆ 10-45 ಎ.ಎಮ್ ಕ್ಕೆ ಬಂದು ಸದರಿ ಎರಡನೇ ಪಾಟರ್ಿಯವರಾದ 1)ವಿಶ್ವರಾಧ್ಯ ತಂದೆ ಬಸವರಾಜ ವಾರದ ಮತ್ತು 2)ಮಲ್ಲಿಕಾಜರ್ುನ ತಂದೆ ಬಸವರಾಜ ವಾರದ ಸಾಃ ಇಬ್ಬರೂ ಹೆಡಗಿಮದ್ರಿ ಇವರ ವಿರುದ್ದ ಮುಂಜಾಗೃತಾ ಕೈಕೊಳ್ಳಲು ವಿನಂತಿ,  ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಪಿ.ಎ.ಆರ್. ನಂ 11/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 128/2020 ಕಲಂ: 143,147,504,341,323,506 ಸಂ 149 ಐಪಿಸಿ : ಇಂದು ದಿನಾಂಕ:10/11/2020 ರಂದು 5-45 ಪಿಎಮ್ ಕ್ಕೆ ಶ್ರೀ ಆನಂದ ತಂದೆ ಮಲ್ಲಣ್ಣ ವಿಶ್ವಕರ್ಮ, ವ:32, ಜಾ:ವಿಶ್ವಕರ್ಮ, ಉ:ವೆಲ್ಡಿಂಗ ಸಾ:ತಡಿಬಿಡಿ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ತಡಿಬಿಡಿ ಗ್ರಾಮದಲ್ಲಿ ವೆಲ್ಡಿಂಗ ಅಂಗಡಿ ಹಾಕಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು ನಮ್ಮ ಮನೆ ಮುಂದೆ ಖುಲ್ಲಾ ಜಾಗ ಇದ್ದು, ನಾವು ಸದರಿ ಜಾಗದಲ್ಲಿ ನಮ್ಮ ಸಣ್ಣಪುಟ್ಟ ಹಳೆ ಸಾಮಾನುಗಳನ್ನು ಇಟ್ಟುಕೊಂಡಿರುತ್ತೇವೆ. ಆದರೆ ನಮ್ಮ ಮನೆ ಮುಂದೆ ಇರುವ ರಮೇಶ ತಂದೆ ಮೋನಪ್ಪ ಮತ್ತು ಅವರ ಅಣ್ಣತಮ್ಮಂದಿರು ನಮ್ಮ ಖಾಲಿ ಜಾಗದಲ್ಲಿ ದನಕರು ತಂದು ಕಟ್ಟುವುದು, ಬಚ್ಚಲ ನೀರು ಬಿಡುವುದು ಮಾಡುತ್ತಿದ್ದು, ನಾವು ನಮ್ಮ ಜಾಗದಲ್ಲಿ ಯಾಕೆ ದನಕರು ಕಟ್ಟವುದು ಅಂಗಳದಲ್ಲಿ ಬಚ್ಚಲ ನೀರು ಬಿಡುವುದು ಮಾಡುತ್ತಿರಿ ಎಂದು ಹೇಳಿದರೆ ನನಗೆ ಮಗನೆ ನೀನು ಸುಮ್ಮನೆ ಇದ್ದರೆ ಪಾಡು ಇಲ್ಲಂದ್ರೆ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕುತ್ತಾ ಬರುತ್ತಿದ್ದರು. ನಿನ್ನೆ ದಿನಾಂಕ: 09/11/2020 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಕೆಲಸದಿಂದ ನಮ್ಮ ಮನೆಗೆ ಹೋಗುತ್ತಿದ್ದಾಗ ರಮೇಶ ಈತನು ಬಂದು ನಮ್ಮ ಜಾಗದಲ್ಲಿ ಕರು ಕಟ್ಟುತ್ತಿದ್ದಾಗ ನಾನು ಅವನಿಗೆ ಇಲ್ಲಿ ನಮ್ಮ ಜಾಗದಲ್ಲಿ ಕರು ಕಟ್ಟಬೇಡ ಎಂದು ಹೇಳಿದೆನು. ಆಗ 1) ರಮೇಶ ತಂದೆ ಮೋನಪ್ಪ ವಿಶ್ವಕರ್ಮ, 2) ಮೋನಪ್ಪ ತಂದೆ ಅಯ್ಯಣ್ಣ ವಿಶ್ವಕರ್ಮ, 3) ನಾಗರಾಜ ತಂದೆ ಮೋನಪ್ಪ ವಿಶ್ವಕರ್ಮ, 4) ಮುತ್ತಪ್ಪ ತಂದೆ ಮೋನಪ್ಪ ವಿಶ್ವಕರ್ಮ, 5) ಬಸವರಾಜ ತಂದೆ ಅಯ್ಯಣ್ಣ ವಿಶ್ವಕರ್ಮ ಮತ್ತು ಪಾರ್ವತಿ ಗಂಡ ಬಸವರಾಜ ವಿಶ್ವಕರ್ಮ ಎಲ್ಲರೂ ಸಾ:ತಡಿಬಿಡಿ ಇವರೆಲ್ಲರೂ ಸೇರಿ ಅಕ್ರಮಕೂಟ ಕಟ್ಟಿಕೊಂಡು ಬಂದವರೆ ಮನೆಗೆ ಹೋಗುತ್ತಿದ್ದ ನನಗೆ ನಮ್ಮ ಅಂಗಳದಲ್ಲಿ ತಡೆದು ನಿಲ್ಲಿಸಿ, ಭೊಸುಡಿ ಮಗನೆ ನಮಗೆ ಈ ಜಾಗದಲ್ಲಿದನಕರು ಕಟ್ಟಬೇಡ ಎನ್ನುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಜಗಳ ತೆಗೆದವರೆ ಮೋನಪ್ಪ ಮತ್ತು ನಾಗರಾಜ ಇಬ್ಬರೂ ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ರಮೇಶನು ಕೈ ಮುಷ್ಟಿ ಮಾಡಿ ನನ್ನ ಎದೆಗೆ ಮತ್ತು ಮುಖಕ್ಕೆ ಗುದ್ದಿ ಒಳಪೆಟ್ಟು ಮಾಡಿದನು. ಮುತ್ತಪ್ಪ ಮತ್ತು ಬಸವರಾಜ ಇಬ್ಬರೂ ಬಂದು ನನಗೆ ಕೆಳಗೆ ಕೆಡವಿ ಕಾಲಿನಿಂದ ಹೊಟ್ಟೆಗೆ ಪಕ್ಕೆಗೆ ಒದ್ದರು. ಬಿಡಿಸಲು ಬಂದ ನನ್ನ ಹೆಂಡತಿಗೆ ಪಾರ್ವತಿ ಇವಳು ಬಂದು ನಿಂದು ಭಾಳ ಆಗ್ಯಾದ ಎಂದು ತೆಲೆ ಮೇಲಿನ ಕೂದಲೂ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದಳು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ಬೈಲಪ್ಪ ಕರಿಗುಡ್ಡ ಮತ್ತು ಮಲ್ಲಣ್ಣ ತಂದೆ ಬಸವರಾಜ ಹೊಸಮನಿ ಇವರು ಬಂದು ಜಗಳ ಬಿಡಿಸಿದರು. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಂದು ಸಲ ದನಕರು ಕಟ್ಟುವುದಕ್ಕೆ ಅಡ್ಡಿ ಮಾಡಿದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೊದರು. ಅಲ್ಲದೆ ನಿನ್ನೆ ದಿವಸ ಮದ್ಯಾಹ್ನ 1 ಗಂಟೆ ಸುಮಾರಿಗೆ ರಮೇಶನು ಫೋನ ನನಗೆ ಮಾಡಿ ಮಗನೆ ನೀನು ಪೊಲೀಸ್ ಕೇಸ ಅಂತಾ ಏನಾದರು ಮಾಡಿದರೆ ನಿನಗೆ ಜೀವಂತ ಬಿಡುವುದಿಲ್ಲ ಎಂದು ತನ್ನ ಮೊಬೈಲ್ ನಂ. 9980758380 ನೇದ್ದರಿಂದ ನಮ್ಮ ನಂಬರ ಮೊ. ನಂ. 9611261669 ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾನೆ. ಕಾರಣ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ನಮ್ಮ ಜಾಗದಲ್ಲಿ ಬಂದು ದನಕರು ಕಟ್ಟಿ ನಮಗೆ ತಡೆದು ನಿಲ್ಲಿಸಿ, ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 128/2020 ಕಲಂ: 143,147,504,341,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 159/2020 ಕಲಂ. 354(ಎ), 504, 506 ಐಪಿಸಿ : ದಿನಾಂಕ. 05.11.2020 ರಂದು ನನ್ನ ಮಗ ಮಣಿಕಂಠನಿಗೆ ತೋರಿಸಿಕೊಂಡು ಬರುವ ಸಲುವಾಗಿ ಮಧ್ಯಾಹ್ನ 12:30 ಗಂಟೆಯ ಸುಮಾರಿಗೆ ನನ್ನ ಗಂಡ ದವಾಖಾನೆಗೆ ಹೋಗಿದ್ದ. ಆಗ ನಾನು ನನ್ನ ಅಕ್ಕಳಿಗೆ ಮಾತನಾಡಿಸಿಕೊಂಡು ಬರಲು ನಮ್ಮ ಮನೆಯಿಂದ ನನ್ನ ಅಕ್ಕ ಲಕ್ಷ್ಮಿಯ ಮನೆಗೆ ಹೋದೆ. ಆಗ ಸಮಯ ಮಧ್ಯಾಹ್ನ 1:00 ಗಂಟೆಯಾಗಿತ್ತು. ಅಲ್ಲಿ ಮನೆಯಲ್ಲಿ ನನ್ನ ಅಕ್ಕ ಲಕ್ಷ್ಮಿ ಇರಲಿಲ್ಲ. ಆಕೆಯ ಗಂಡನಾದ (ಭಾವ)ತಿಪ್ಪಣ್ಣ ಇದ್ದನು. ಆಗ ಅಕ್ಕ ಎಲಿದ್ದಾಳೆ ಎಂದು ಕೇಳಿದೆ ಅದಕ್ಕೆ ಆತ ನಿಮ್ಮಕ್ಕ ಇಲ್ಲ ಆಡು ಮೇಯಿಸಿಕೊಂಡು ಬರಲು ಹೋಗಿದ್ದಾಳೆ, ಮನೆಯಲ್ಲಿ ನಾನೊಬ್ಬನೇ ಇದ್ದೆನೆ ಒಳಗೆ ಬಾ ಅಂತಾ ಕರೆದನು. ಆಗ ನಾನು ಅವರ ಮನೆಯ ಒಳಗೆ ಹೋದೆ. ಅಷ್ಟರಲ್ಲಿ ಆತ ಮನೆಯ ಬಾಗಿಲನ್ನು ಮುಚ್ಚಿದ ಆಗ ನಾನು ಯಾಕೆ ಬಾಗಿಲು ಮುಚ್ಚುತಿ ಅಂತಾ ಕೇಳಿದಾಗ ಏನಿಲ್ಲ ಅಂತಾ ಹೇಳಿ ನನ್ನ ಮೈ ಮುಟ್ಟಿ ಲೈಂಗಿಕ ಕ್ರೀಯೇಗೆ ಬರುವಂತೆ ಜಬರದಸ್ತಿ ಮಾಡಿ ನನ್ನನ್ನು ತನ್ನೆಡೆಗೆ ಎಳೆದುಕೊಂಡು ತೆಕ್ಕೆಯಲ್ಲಿ ಹಿಡಿದುಕೊಂಡನು. ಅಷ್ಟರಲ್ಲಿ ಹೊರಗಿನಿಂದ ಮೋಟಾರು ಸೈಕಲ್ ಶಬ್ದ ಕೇಳಿ ನನಗೆ ಬಿಟ್ಟ ಕೂಡಲೇ ನಾನು ಬಾಗಿಲು ತೆಗೆದು ಹೊರಗೆ ಹೋಗಿ ನೋಡಿದಾಗ. ನನ್ನ ಗಂಡ ರಮೇಶ ಬಂದಿದ್ದ ನಾನು ಅಳುತ್ತ ನನ್ನ ಗಂಡನಿಗೆ ವಿಷಯ ತಿಳಿಸಿದೆ. ಆಗ ನನ್ನ ಗಂಡ ನನ್ನ ಭಾವನಲ್ಲಿಗೆ ಹೋಗಿ ಹೀಗೇಕೆ ಮಾಡಿದೆ ಅಂತಾ ಕೇಳೀದಾಗ ಆತ ಲೇ ಸೂಳೆ ಮಗನೇ ನನಗೇನ್ ಕೇಳತಿ ಹೋಗಲೇ ಅಂತಾ ನನ್ನ ಗಂಡನಿಗೆ ಅವಾಚ್ಯವಾಗಿ ಬೈದನು. ಆಗ ನನ್ನ ಗಂಡನು ನಿನಗೆ ಸುಮ್ಮನೆ ಬಿಡೋದಿಲ್ಲ ಅಂತಾ ಹೇಳುತ್ತ ನನಗೆ ಕರೆದುಕೊಂಡು ನಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ತಿಪ್ಪಣ್ಣನು ನಿನ್ನಿಂದ ನನಗೇನು ಮಾಡಿಕೊಳ್ಳಲು ಆಗುವದಿಲ್ಲ ಸೂಳೆ ಮಗನೇ ಸುಮ್ಮನೆ ನಿನ್ನ ಹೆಂಡತಿಯನ್ನು ಕರೆದುಕೊಂಡು ಮನೆಗೆ ಹೋಗು ಇಲ್ಲಾ ಅಂದ್ರೇ ನಿನಗೆ ಖಲಾಸ ಮಾಡುತ್ತೆನೆ ನೋಡು ಅಂತಾ ಜೀವ ಬೆದರಿಕೆ ಹಾಕಿದನು. ನಂತರ ನನ್ನ ಗಂಡನು ನನಗೆ ಕರೆದುಕೊಂಡು ನಮ್ಮ ಮನೆಗೆ ಹೋಗಿ ಮಯರ್ಾದೆಗೆ ಅಂಜಿ ಮನೆಯಲ್ಲಿ ಇದ್ದೆವು. ನಂತರ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ದಿನಾಂಕ 10.11.2020 ರಂದು ತಡವಾಗಿ ಪೊಲೀಸ ಸ್ಟೇಷನ್ಗೆ ಬಂದು ನನಗೆ ಬಲವಂತವಾರಿ ಲೈಂಗಿಕ ಕ್ರೀಯೆಗೆ ಪ್ರಚೋದಿಸಿ ತಬ್ಬಿಕೊಂಡಿದ್ದು ಅಲ್ಲದೇ ಅದನ್ನು ಕೇಳಿದ ನನ್ನ ಗಂಡನಿಗೆ ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿದ ನನ್ನ ಭಾವನಾದ ತಿಪ್ಪಣ್ಣ ತಂದೆ ಬಾಲಪ್ಪ ತೂಮ ಮುಕ್ಕಾಂ: ಚಂಡ್ರಕಿ ಗ್ರಾಮ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನಾನು ತೆಲುಗು ಭಾಷೆಯಲ್ಲಿ ಹೇಳಿದನ್ನು ನಮ್ಮ ಸಂಬಂದಿ ಮಹಿಪಾಲ ತಂದೆ ಬಾಲಪ್ಪ ದೊಡ್ಡಮನಿ ಮುಕ್ಕಾಂ: ಯಾನಾಗುಂದಿ ಇವರು ಕನ್ನಡದಲ್ಲಿ ಟೈಪ್ ಮಾಡಿಸಿ ಪುನಃ ನನಗೆ ಓದಿ ಹೇಳಿದ್ದು ಅದು ನಾನು ಹೇಳಿದಂತೆ ಇರುತ್ತದೆ ಅಂತಾ ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಗುರುಮಠಕಲ್ ಠಾಣೆ ಗುನ್ನೆ ನಂಬರ 159/2020 ಕಲಂ:354(ಎ) 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!