ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/11/2020

By blogger on ಮಂಗಳವಾರ, ನವೆಂಬರ್ 10, 2020                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/11/2020 

ಯಾದಗಿರ ಪೊಲೀಸ ಠಾಣೆ ಗುನ್ನೆ ನಂ:- 102/2020 ಕಲಂ; 420, ಐಪಿಸಿ: ಇಂದು ದಿನಾಂಕ.09/11/2020 ರಂದು 9-30 ಪಿಎಂಕ್ಕೆ ಶ್ರೀ ಗಿರೀಶ ತಂದೆ ವಿದ್ಯಾಸಾಗರ ರಾಯಕೋಟಿ  ಕಂದಾಯ ನಿರೀಕ್ಷರು ಯಾದಗಿರಿ ವಲಯ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿಯನ್ನು ಹಾಜರಪಡಿಸಿದ್ದು ಅಜರ್ಿಯ ಸಾರಾಂಶವೆನೆಂದರೆ, ಇಂದು ದಿನಾಂಕ.09/11/2020 ರಂದು 12-00 ಪಿಎಂ ಸುಮಾರಿಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ನನಗೆ ಮತ್ತು ಗ್ರಾಮ ಲೆಕ್ಕಿಗರಾದ ಶ್ರೀಧರ ಬಡೀಗೇರ ರವರಿಗೆ ಮುಂದಡರಗಿ ಹತ್ತಿರ ಇರುವ ಅಶೋಕ ನಗರಕ್ಕೆ ಸ್ಥಳ ತನಿಖೆ ಕುರಿತು ಹೋಗುವುದಿದೆ ಅಂತಾ ಬರಲು ತಿಳಿಸಿದ್ದರಿಂದ ನಾನು ಮತ್ತು ಶ್ರಿಧರ ಕೂಡಿಕೊಂಡು ನಮ್ಮ ಮೋಟಾರ ಸೈಕಲ ಮೇಲೆ ಅಶೋಕ ನಗರಕ್ಕೆ ಹೋದಾಗ ಅಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಇದ್ದು ಅಲ್ಲಿ ಸ್ಥಳ ಪರೀಸಿಲನೆ ಮಾಡಿಕೊಂಡು ಮರಳಿ ಯಾದಗಿರಿಗೆ ಬರಬೇಕೆಂದು ವಾಪಸ್ ಬರುತ್ತಿರುವಾಗ ಮದ್ಯಾಹ್ನ 1-00 ಗಂಟೆ ಸುಮಾರಿಗೆ ಯಾದಗಿರಿ-ಹೈದ್ರಾಬಾದ ಇಂಪಿರಿಯಲ್ ಗಾರ್ಡನ್ ಫಂಕ್ಷನ್ ಹಾಲ ಹತ್ತಿರ ಎದುರುಗಡೆಗೆ ಹತ್ತಿ ಖರಿದಿ ಮಾಡುತ್ತಿದ್ದನ್ನು ಕಂಡು ಮಾನ್ಯ ಜಿಲ್ಲಾಧಿಕಾಗಳು ಸ್ಥಳಕ್ಕೆ ಬೇಟಿ ನೀಡಿದ್ದು ಆಗ ಅಲ್ಲಿ ರೈತರಿಂದ ಹತ್ತಿ ಖರೀದಿ ಮಾಡುತ್ತಿದ್ದು, ರೈತರಿಂದ ತಿಳಿದು ಬಂದಿದ್ದೆನೆಂದರೆ, ಪ್ರತಿರೈತರಿಂದ ಒಂದು ಕ್ವಿಂಟಾಲ ಹತ್ತಿಗೆ 2 ಕೆ.ಜಿ ಸೂಟ ಅಂತಾ ಕಡಿತಗೊಳಿಸಿ 98 ಕೆ.ಜಿ ಹತ್ತಿಯ ಹಣ ಪಾವತಿ ಮಾಡುತ್ತಿರುವುದಾಗಿ, ಮತ್ತು ಕ್ವಿಂಟಲ್ ಹತ್ತಿ ಖರೀದಿಗೆ 20/-ರೂ. ಹಮಾಲಿ ದರವೆಂದು ರೈತನ ಸಂದಾಯವಾಗುವ ಹಣದಲ್ಲಿ ಕಡಿತಗೊಳಿಸಿ ಮೋಸ ಮಾಡುತ್ತಿರುವುದಾಗಿ ತಿಳಿಸಿದರು. ಆಗ ಖರೀದಾರನಿಗೆ ವಿಚಾರಿಸಲು ತನ್ನ ಹೆಸರು ಮೊಹಮ್ಮದ ಸೀರಾಜ ತಂದೆ ಜಲಾಲಸಾಬ ಬಲಕಲ್ ಸಾಃ ನಾಯ್ಕಲ್ ಅಂತಾ ತಿಳಿದು ಬಂದಿದ್ದು ಇರುತ್ತದೆ. ನಂತರ ಅದರಂತೆ ಅಲ್ಲೆ ಪಕ್ಕದಲ್ಲಿದ್ದ ಇನ್ನೋಬ್ಬನಾದ ಮಲ್ಲಿಕಾಜರ್ುನ ತಂದೆ ಅಯ್ಯಣ್ಣ ಹಿರೇಮಠ ಸಾಃ ಯಾದಗಿರ ಈತನು ಕೂಡಾ ಈ ಮೇಲೆನಂತೆ ಹತ್ತಿ ಖರೀಯಲ್ಲಿ ರೈತರಿಗೆ ಮೋಸ ಮಾಡುತ್ತಿರುವ ಬಗ್ಗೆ ತಿಳಿಸಿದರು. ನಂತರ ನನಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ನನಗೆ ಠಾಣೆಗೆ ಹೋಗಿ ಆರೋಪಿತರ ಮೇಲೆ ಕೇಸು ದಾಖಲು ಮಾಡಲು ತಿಳಿಸಿರುತ್ತಾರೆ. ಕಾರಣ ಈ ಮೇಲಿನಂತೆ ರೈತರಿಗೆ ಮೋಸ ಮಾಡುತ್ತಿರುವ 1.ಮೊಹಮ್ಮದ ಸೀರಾಜ ತಂದೆ ಜಲಾಲಸಾಬ ಬಲಕಲ್ ಸಾಃ ನಾಯ್ಕಲ್. 2. ಮಲ್ಲಿಕಾಜರ್ುನ ತಂದೆ ಅಯ್ಯಣ್ಣ ಹಿರೇಮಠ ಸಾಃ ಯಾದಗಿರ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.102/2020 ಕಲಂ.420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.     

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 158/2020 ಕಲಂ:143,147,148,341,323,324,504,506 ಸಂ 149 ಐಪಿಸಿ : ನಿನ್ನೆ ದಿನಾಂಕ 08.11.2020 ರಂದು ಬೆಳಿಗ್ಗೆ 11:00 ಗಂಟೆಗೆ ಫಿರ್ಯಾದಿ ಮತ್ತು ಆತನ ತಾಯಿ ಸಾಬವ್ವ ಇಬ್ಬರು ಕೂಡಿ ಅವರು ಸುಮಾರು 8 ವರ್ಷಗಳ ಹಿಂದೆ ಆರೋಪಿ ದೊಡ್ಡ ಹುಸೇನಪ್ಪನಿಂದ ಖರೀದಿ ಮಾಡಿದ ರಾಂಪೂರ ಸಿಮಾಂತರದ ಜಮೀನು ಸವರ್ೇ ನಂಬರ 203/2 ಮತ್ತು 203/4 ನೇದ್ದರಲ್ಲಿ ಹೊಲವನ್ನು ಬಿತ್ತಲು ಗಳ್ಯಾ ಹೊಡಕೊಂಡು ಹೋಗುತ್ತಿದ್ದಾಗ ಆರೋಪಿತರೆಲ್ಲಾರು ಏಕೊದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಮತ್ತು ಆತನ ತಾಯಿಗೆ ತಡೆದು ನಿಲ್ಲಿಸಿ, ಅವರಿಗೆ ಕೈಯಿಂದ ಹೊಡೆ-ಬಡೆ ಮಾಡಿ, ಫಿರ್ಯಾದಿಗೆ ಕೊಡಲಿಯಿಂದ ಹೊಡೆದು ರಕ್ತಗಾಯ ಮಾಡಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ನಂತರ ಆರೋಪಿತರೆಲ್ಲಾರು ಅಲ್ಲಿಂದ ಹೋದ ನಂತರ ಫಿರ್ಯಾದಿ ಮತ್ತು ಆತನ ತಾಯಿ ಇಬ್ಬರು ಹೊಲಕ್ಕೆ ಹೋಗಿ ಬಿತ್ತುತ್ತ ಫಿರ್ಯಾದಿಯು ತನ್ನ ತಂದೆಗೆ  ಫೋನ್ ಮಾಡಿ ವಿಷಯ ತಿಳಿಸಿದ್ದು ನಂತರ ಆತ ಬಂದ ಮೇಲೆ ಫಿರ್ಯಾದಿಗೆ ಚಿಕಿತ್ಸೆ ಕುರಿತು ಗುರುಮಠಕಲ್ ಸರಕಾರಿ ದವಾಖಾನೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಂತರ ಅಲ್ಲಿಯ ವೈಧ್ಯರ ಸಲಹೇಯ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ ಬಗ್ಗೆ ಫಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 158/2020 ಕಲಂ: 143, 147, 148, 341, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ್ ನಂ 21/2020 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ 09.11.2020 ರಂದು 1.30 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ  ಸಾಮುವೇಲ್ ಧನರಾಜ ತಂದೆ ಸುಭಾಸ ಪಾದ್ರಿ ವಯಾ|| 36 ಜಾ|| ಕ್ರಿಶ್ಚಿಯನ್ ಉ|| ಸಮಾಜಸೇವೆ ಸಾ|| ಚಾಮನಾಳ ತಾ|| ಶಹಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶವೇನಂದರೆ, ಚಾಮನಾಳ ಬಸ್ ನಿಲ್ದಾಣದಲ್ಲಿ ಅಂಜನಮ್ಮ ವಯಸ್ಸು|| 60 ಈಕೆಯು ಮಾನಸಿಕ ಅಸ್ವಸ್ಥಳಿದ್ದು, ಅಲ್ಲಿ ಇಲ್ಲಿ ಬಿಕ್ಷಾಟನೆ ಮಾಡುತ್ತಾ ಬದುಕುತ್ತಿದ್ದಳು. ಇವಳ ವಿಳಾಸ ತಿಳಿದುಬಂದಿರುವದಿಲ್ಲ. ಈಕೆ ಸುಮಾರು 4-5 ವರ್ಷಗಳಿಂದ ಚಾಮನಾಳ ಬಸ್ ನಿಲ್ದಾಣದಲ್ಲಿಯೇ ಇರುತ್ತಿದ್ದಳು. ಸದರಿಯವಳಿಗೆ ಬಲಗಾಲಿಗೆ ಗ್ಯಾಂಗ್ರೀನ ಆಗಿದ್ದರಿಂದ ಆವಾಗವಾಗ ಆರಾಮವಿಲ್ಲದೆ ಚಾಮನಾಳ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದಳು. ಯಾರೂ ಅವಳ ಸಂಭಂದಿಕರು ಇಲ್ಲಿಯವರೆಗೆ ಬಂದಿದ್ದು ನಮಗೆ ಕಂಡುಬಂದಿರುವದಿಲ್ಲ.       ಹೀಗಿದ್ದು ಸದರಿ ಅಂಜನಮ್ಮ ಇವಳು ತನ್ನ ಬಲಗಾಲಿಗೆ ಆದ ಗ್ಯಾಂಗ್ರೀನನಿಂದ ಆರಾಮವಿಲ್ಲದೆ ಬಳಲುತ್ತಾ ಇದ್ದುದರಿಂದ, ನಾನು ಹಾಗೂ ಚಾಮನಾಳ ಬಸ್ ನಿಲ್ದಾಣದಲ್ಲಿ ಇದ್ದ ಜನರು ಸೇರಿ ದಿನಾಂಕ: 21/10/2020 ರಂದು 108 ಅಂಬ್ಯಲೆನ್ಸ್ನಲ್ಲಿ ಶಹಾಪುರ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ: 08/11/2020 ರಂದು 3:30 ಪಿಎಮ್ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ ಅಂತ ತಿಳಿದುಬಂದಿದ್ದು ಇರುತ್ತದೆ. ಆದರೆ ಇಲ್ಲಿಯವರೆಗೆ ಸದರಿ ಹೆಣದ ಬಗ್ಗೆ ಯಾರು ವಾರಸುದಾರರು ಬಂದಿರುವದಿಲ್ಲಾ.   ಕಾರಣ ಅಂಜನಮ್ಮ ಇವಳು ಮಾನಸಿಕ ಅಸ್ವಸ್ಥಳಿದ್ದು ತನ್ನ ಬಲಗಾಲಿಗೆ ಆದ ಗ್ಯಾಂಗ್ರೀನನಿಂದ ಬಳಲುತ್ತಿದ್ದವಳು ಆಸ್ಪತ್ರೆಗೆ ದಾಖಲಾಗಿ ಉಪಚಾರ ಫಲಕಾರಿಯಾಗದೇ ಮೃತಪಟ್ಟಿದ್ದು ಸದರಿಯವಳ ಸಾವಿನಲ್ಲಿ ಯಾರ ಮೇಲೂ ಯಾವುದೇ ಸಂಶಯ ಇರುವದಿಲ್ಲ  ತಾವು ಬಂದು ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂಬರ 21/2020 ಕಲಂ 174 ಸಿಆರ್ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!