ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/11/2020

By blogger on ಭಾನುವಾರ, ನವೆಂಬರ್ 8, 2020

 



                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/11/2020 

ಕೋಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 86/2020 ಕಲಂ: 143, 147, 323, 354, 354(ಎ), 354(ಬಿ), 114, 504, 506, ಸಂಗಡ 149 ಐಪಿಸಿ : ದಿನಾಂಕ:08.11.2020 ರಂದು ಮಧ್ಯಾಹ್ನ 2:05  ಗಂಟೆಗೆ  ಪಿರ್ಯಾಧಿ ಶ್ರೀಮತಿ ರೇಣುಕಾ ಗಂಡ ನಂದಪ್ಪ ಮೇಟಿ ವ||45ವರ್ಷ ಜಾ||ಹಿಂದೂ ಕುರುಬರ ಉ||ಚಹದ ಅಂಗಡಿ ಸಾ||ಏದಲಬಾವಿ ತಾ|| ಹುಣಸಗಿ ಜಿ|| ಯಾದಗಿರ ಇವರು ಠಾಣೆಯಲ್ಲಿ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೆನೇಂದರೆ ತನಗೆ ಪರಶುರಾಮ, ಪರಮಣ್ಣ ಅಂತಾ ಇಬ್ಬರೂ ಗಂಡು ಮಕ್ಕಳು ಇದ್ದು ಅವರಿಗೆ ಮದುವೆ ಮಾಡಿರುತ್ತೇನೆ. ನಮ್ಮೂರ ಭೀಮಣ್ಣ ತಂದೆ ಬಸಪ್ಪ ಸಾಲವಾಡಗಿ ಇವರ ಕಡೆಯಿಂದ ಸುಮಾರು 11ವರ್ಷಗಳ ಹಿಂದೆ ನಮ್ಮೂರಿಗೆ ಹೊಂದಿಕೊಂಡಿರುವ ಏದಲಬಾವಿ ಸೀಮಾಂತರದ ಹೊಲದ ಸವರ್ೇ ನಂ.1ರಲ್ಲಿ ಪೂರ್ವ-ಪಶ್ಚಿಮ 40ಪೀಟ್, ಉತ್ತರ-ದಕ್ಷಿಣ 30ಪೀಟ್ ಜಾಗೆಯನ್ನು ನನ್ನ ಗಂಡನು ಖರೀದಿ ಮಾಡಿ ಗೆದ್ದಲಮರಿ ಪಂಚಾಯತದಲ್ಲಿ ನನ್ನ ಹೆಸರಲ್ಲಿ ನೊಂದಣಿ ಮಾಡಿಸಿದ್ದು ಇರುತ್ತದೆ. ಈ ಜಾಗೆಯಲ್ಲಿ ನಾವು ಎರಡು ಕೊಣೆಯ ಮನೆಯನ್ನು ಕಟ್ಟಿಸಿ ಮುಂದೆ ಜಾಗೆ ಉಳಿಸಿದ್ದು ಇರುತ್ತದೆ. ಸುಮಾರು ಎರಡು ವರ್ಷಗಳ ಹಿಂದಿನಿಂದ ಭೀಮಣ್ಣ ತಂದೆ ಬಸಪ್ಪ ಸಾಲವಾಡಗಿ ಇವರು ಮತ್ತು ಇವರ ಕುಟುಂಬದವರು ನಮ್ಮ ಮನೆಯ ಮುಂದೆ ಉಳಿಸಿದ ನಮ್ಮ ಖುಲ್ಲಾ ಜಾಗೆಯಲ್ಲಿ ಎನನ್ನು ಕಟ್ಟಲು ಬಿಡದೆ ನಮ್ಮೊಂದಿಗೆ ತಂಟೆತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ಈಗ ನಾವು ಒಂದು ವಾರದ ಹಿಂದೆ ನಮ್ಮ ಮನೆಯ ಮುಂದಿನ ಖುಲ್ಲಾ ಜಾಗೆಯಲ್ಲಿ ಚಹದ ಅಂಗಡಿಯನ್ನು ಇಟ್ಟುಕೊಳ್ಳಲು ಪತ್ರಸ್ಗಳನ್ನು ಹಾಕಿದ್ದು ಇರುತ್ತದೆ. ಇಂದು ದಿನಾಂಕ:08/11/2020 ರಂದು ಮುಂಜಾನೆ 9:15 ಗಂಟೆಯ ಸುಮಾರಿಗೆ ನಾನು, ನನ್ನ ಗಂಡ ನಂದಪ್ಪ, ನಮ್ಮ ಮಕ್ಕಳಾದ ಪರಶುರಾಮ, ಪರಮಣ್ಣ, ಸೊಸೆಯಂದಿರಾದ ನಿಂಗಮ್ಮ, ದೇವಮ್ಮ ಕೂಡಿಕೊಂಡು ನಮ್ಮ ಮನೆಯ ಮುಂದೆ ನಾವು ಹಾಕಿದ ಚಹದ ಅಂಗಡಿಯ ಜಾಗದಲ್ಲಿ ಗರ್ಚನ್ನು ಹಾಕಿಸಿ ಕೆಲಸ ಮಾಡುತ್ತಿದ್ದಾಗ ಬಂದ ನಮ್ಮೂರ 1) ಜಟ್ಟೆಪ್ಪ ತಂದೆ ಬಸ್ಸಪ್ಪ ಸಾಲವಾಡಗಿ, 2) ಭೀಮಣ್ಣ ತಂದೆ ಬಸ್ಸಪ್ಪ ಸಾಲವಾಡಗಿ, 3) ಬಸ್ಸಪ್ಪ ತಂದೆ ಜಟ್ಟೆಪ್ಪ ಸಾಲವಾಡಗಿ, 4) ಸೋಮಪ್ಪ ತಂದೆ ಜಟ್ಟೆಪ್ಪ ಸಾಲವಾಡಗಿ 5) ಹಣಮಪ್ಪ ತಂದೆ ಜಟ್ಟೆಪ್ಪ ಸಾಲವಾಡಗಿ, 6) ನಿಂಗಪ್ಪ ತಂದೆ ಭೀಮಣ್ಣ ಸಾಲವಾಡಗಿ 7) ಮುತ್ತಪ್ಪ @ ಬಸ್ಸಪ್ಪ ತಂದೆ ಭೀಮಣ್ಣ ಸಾಲವಾಡಗಿ 8) ಸಿದ್ದಪ್ಪ ತಂದೆ ಮಲ್ಲಪ್ಪ ಹೊಸಮನಿ, 9) ಯಲ್ಲಮ್ಮ ಗಂಡ ಭೀಮಣ್ಣ ಸಾಲವಾಡಗಿ 10) ಸಾವಿತ್ರಮ್ಮ ಗಂಡ ನಿಂಗಪ್ಪ ಗೋಡಿಹಾಳ ಸಾ|| ಎಲ್ಲರೂ ಏದಲಬಾವಿ ಇವರುಗಳು ಬಂದು ನಮಗೆ ಲೇ ಸೂಳಿ ಮಕ್ಕಳೆ ಮನೆಯನ್ನು ಕಟ್ಟಿಸಿಕೊಂಡ ಜಾಗೆ ಮಾತ್ರ ನಿಮಗೆ ಸೇರಿದ್ದು ಅದರ ಮುಂದಿನ ಜಾಗೆಯಲ್ಲಿ ನೀವು ಏನು ಮಾಡುವಂತಿಲ್ಲ ಚಹದ ಅಂಗಡಿಯನ್ನು ಇಡುವಂತಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ನಾನು ಮತ್ತು ನನ್ನ ಗಂಡ ಅವರಿಗೆ  ಈ ಜಾಗವನ್ನು ನಾವು ಖರೀದಿ ಮಾಡಿದ್ದು ಖರೀದಿ ಮಾಡಿದ ಜಾಗೆಯಲ್ಲಿ ಮಾತ್ರ ಚಹದ ಅಂಗಡಿಯನ್ನು ಹಾಕುತ್ತಿದ್ದೆವೆ ಅಂತಾ ಕೇಳಿದಾಗ ಅವರು ನಮಗೆ ಎದರು ಮಾತನಾಡುತ್ತಿರಾ ನಿಮಗೆ ಇವತ್ತು ಬಿಡುವುದಿಲ್ಲ, ಖಲಾಸ್ ಮಾಡುತ್ತೇವೆ ಅಂತಾ ಬೈದು ನನಗೆ ಜಟ್ಟೆಪ್ಪ ತಂದೆ ಬಸ್ಸಪ್ಪ ಸಾಲವಾಡಗಿ, ನಿಂಗಪ್ಪ ತಂದೆ ಭೀಮಣ್ಣ ಸಾಲವಾಡಗಿ, ಮುತ್ತಪ್ಪ @ ಬಸ್ಸಪ್ಪ ತಂದೆ ಭೀಮಣ್ಣ ಸಾಲವಾಡಗಿ ಇವರುಗಳು ನನ್ನ ಸೀರೆ ಹಿಡಿದು ಜಗ್ಗಾಡಿ ಕೈ ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿದ್ದು ನನ್ನ ಗಂಡನಿಗೆ ಭೀಮಣ್ಣ ತಂದೆ ಬಸ್ಸಪ್ಪ ಸಾಲವಾಡಗಿ, ಬಸಪ್ಪ ತಂದೆ ಜಟ್ಟೆಪ್ಪ ಸಾಲವಾಡಗಿ ಇವರು ಕೈಯಿಂದ ಹೊಡೆಬಡೆ ಮಾಡಿದ್ದು ಉಳಿದವರು ನಮಗೆ ಭೋಸೂಡಿ ಮಕ್ಕಳೆ ನಿಮಗೆ ಈ ಜಾಗೆಯಲ್ಲಿ ಚಹದ ಅಂಗಡಿಯನ್ನು ಹಾಕಲು ಬಿಡುವುದಿಲ್ಲ ಅಂತಾ ಬೈದಿದ್ದು ಅಲ್ಲಿಯೇ ದಾರಿಯ ಮೇಲೆ ಹೊರಟಿದ್ದ ಸಂಗಮ್ಮ ಗಂಡ ಹಣಮಂತ್ರಾಯ ಗುರಿಕಾರ, ಮಾನಮ್ಮ ಗಂಡ ಅಮರಪ್ಪ ನಾಲತವಾಡ ಇವರು ಮತ್ತು ಶ್ರೀ ವಾಲ್ಮೀಕಿ ವೃತ್ತದ ಹತ್ತಿರ ನಿಂತಿದ್ದ ನಮ್ಮೂರ ಬಸ್ಸಣ್ಣ ತಂದೆ ಭೀಮರಾಯ ಕೋಸಗಿ, ಅಂಬ್ರಪ್ಪ ತಂದೆ ಸಂಗಪ್ಪ ನಾಲತವಾಡ ಇವರು ಬಂದು ಜಗಳವನ್ನು ಬಿಡಿಸಿರುತ್ತಾರೆ. ಹೋಗುವಾಗ ಅವರೆಲ್ಲರು ನಮಗೆ ಲೇ ಸೂಳಿ ಮಕ್ಕಳೆ ಇವತ್ತು ಉಳಿದಿರಿ ಇನ್ನೊಮ್ಮೆ ನಿಮ್ಮನ್ನ ಬಿಡುವುದಿಲ್ಲ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ಕಾರಣ ನಮಗೆ ಹೊಡೆ-ಬಡೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.86/2020 ಕಲಂ: 143, 147, 323, 354, 354(ಎ), 354(ಬಿ), 114, 504, 506 ಸಂ 149 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.  

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 17/2020 ಕಲಂ. 174  ಸಿಆರ್ಪಿಸಿ : ದಿನಾಂಕ: 08-11-2020 ರಂದು ಬೆಳಿಗ್ಗೆ 06-00 ಗಂಟೆಗೆ  ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಶವೆನೆಂದರೆ     ದಿನಾಂಕ: 07-11-2020 ರಂದು ಬೆಳಿಗ್ಗೆ 10-00 ಗಂಟೆಗೆ ಮಕ್ತಲ್ ದಿಂದ ನನ್ನ ಮಗಳು ಮತ್ತು ನನ್ನ ಅಳಿಯ ನಿಂಗಪ್ಪ ಇವರು 9 ದಿನದ ಬಟ್ಟೆ ಮಾಡುವ ಕಾರ್ಯಕ್ರಮಕ್ಕೆ ಬಂದಿದ್ದರು  ಅಂದು ನಾವು ಮದ್ಯಾಹ್ನ ನನ್ನ ಮಗಳಿಗೆ ಮತ್ತು ನನ್ನ ಅಳಿಯನಿಗೆ ಬಟ್ಟೆ ಮಾಡುವ ಕಾರ್ಯಕ್ರಮ ಮಾಡಿ ಮುಗಿಸಿದ್ದೆವು ಮದ್ಯಾಹ್ನ 02-00 ಗಂಟೆಗೆ ಎಲ್ಲರೂ ಊಟ ಮಾಡಿದೆವು ಊಟ ಮಾಡಿದ ನಂತರ ನನ್ನ ಅಳಿಯ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು ನನ್ನ ಮಗಳು ರಾಜೇಶ್ವರಿ ಈಕೆಯು  ಮದ್ಯಾಹ್ನ 03-00 ಗಂಟೆ ಸುಮಾರಿಗೆ ಹೊಸ ಸೀರೆಯನ್ನು ಬಿಟ್ಟು ಬೇರೆ ಸೀರೆಯನ್ನು ಹಾಕಿಕೊಳ್ಳುತ್ತೇನೆ ಅಂತಾ ಹೇಳಿ ಒಂದು ಕೊಣೆಗೆ ಹೋದವಳು ಬಹಳ ಸಮಯವಾದರು ಬರದೆ ಇದ್ದ ಕಾರಣ ನಾವು ಮನೆಯವರು ಆ ಕೊಣೆಯೊಳಗೆ ಹೋಗಿ ನೋಡಲಾಗಿ ನನ್ನ ಮಗಳು ರಾಜೇಶ್ವರಿ ಈಕೆಯು ಹತ್ತಿ ಹೊಲಕ್ಕೆ ಹೊಡೆಯುವ ಕ್ರೀಮಿನಾಷಕ ಔಷಧ ಕುಡಿದು ಒದ್ದಾಡುತಿದ್ದಳು ಆಗ ನಾವು ಆಕೆಗೆ ವೈದ್ಯಕೀಯ ಉಪಚಾರ ಕುರಿತು ಒಂದು ವಾಹನದಲ್ಲಿ ಹಾಕಿಕೊಂಡು ಮಕ್ತಲ್ ಗೆ ಹೋಗಿದ್ದು ಅಲ್ಲಿಂದ ಹೆಚ್ಚಿನ  ಉಪಚಾರ ಕುರಿತು  ಮಹಿಬೂಬನಗರ ಸರಕಾರಿ ಆಸ್ಪತ್ರೆಗೆ ತೆಗದುಕೊಂಡು ಹೋಗಿ ಸೇರಿಕೆ ಮಾಡಿದ್ದು ನನ್ನ ಮಗಳು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಉಪಚಾರ ಫಲಕಾರಿಯಾಗದೆ ದಿನಾಂಕ: 08-11-2020 ರಂದು ಮದ್ಯರಾತ್ರಿ 01-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ. ನನ್ನ ಮಗಳು ರಾಜೇಶ್ವರಿ ಗಂಡ ನಿಂಗಪ್ಪ ವ|| 19 ವರ್ಷ  ಜಾ|| ಕುರಬರ ಉ|| ಮನೆಕೆಲಸ ಸಾ|| ಸಂಕ್ಲಾಪೂರ ಹಾ|| ವ|| ಮಕ್ತಲ್ ಈಕೆಯು ತನಗೆ ಆದ ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿ ಇಟ್ಟಿರುವ ಕ್ರೀಮಿನಾಷಕ ಔಷಧಿಯನ್ನು ಸೇವನೆ ಮಾಡಿ ಮೃತಪಟ್ಟಿರುತ್ತಾಳೆ ಈಕೆಯ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲ ತಾವು ಮುಂದಿನ ಕಾನೂನು ಕ್ರಮ ಜರುಗಿಸಬೇಕಂತ ವಿನಂತಿ ಅಂತಾ ಪಿಯರ್ಾಧಿ ಇರುತ್ತದೆ.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 155/2020 ಕಲಂ 279, 337, 338 ಐಪಿಸಿ : ನಿನ್ನೆ ದಿನಾಂಕ 07.11.2020 ರಂದು ಸಮಯ ಮಧ್ಯಾಹ್ನ 3:30 ಗಂಟೆಗೆ ಫಿರ್ಯಾದಿ ಮತ್ತು ಆತನ ತಮ್ಮ ಗಾಯಾಳು ಕವಿ  ಕವಿನಮಠ ಇಬ್ಬರು ತಮ್ಮ ಮೋಟಾರು ಸೈಕಲ್ ನಂಬರ ಎಮ್.ಹೆಚ್.-04-ಜೆ.ಎಫ್.-5465 ನೇದ್ದರ ಮೇಲೆ ಗುರುಮಠಕಲ್ ದಿಂದ ಬೋರಬಂಡಾ ಗ್ರಾಮದ ಮಾರ್ಗವಾಗಿ ಮಾದ್ವಾರ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಬೋರಬಂಡಾ ಗ್ರಾಮದ ಹತ್ತಿರ ರೋಡಿನ ಮೇಲೆ ಎದುರಿಗೆ ಬಂದ ಟಿಪ್ಪರ ನಂ: ಕೆಎ-51-ಎ.ಎ.-3356 ನೇದ್ದರ ಚಾಲಕನು ತಮ್ಮ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಯಂತ್ರಿಸಲು ಸಾಧ್ಯವಾಗದೇ ಮೋಟಾರು ಸೈಕಲ್ ಎಮ್.ಹೆಚ್.-04-ಜೆ.ಎಫ್.-5465 ನೇದ್ದಕ್ಕೆ ಡಿಕ್ಕಿಪಡಿಸಿ ಫಿರ್ಯಾಗೆ ಮತ್ತು ಆತನ ತಮ್ಮನಿಗೆ ಸಾಧಾ ಹಾಗೂ ಭಾರಿ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿದ್ದು ಆ ಬಗ್ಗೆ ಫಿರ್ಯಾದಿಯು ಉಪಚಾರ ಪಡೆದುಕೊಂಡು ನಂತರ ಇಂದು ದಿನಾಂಕ 08.11.2020 ರಂದು ಖುದ್ದಾಗಿ ಠಾಣೆಗೆ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 155/2020 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:  32/2020 ಕಲಂ. 174 ಸಿಆರ್.ಪಿಸಿ : ಇಂದು ದಿನಾಂಕ 08.11.2020 ರಂದು ಮಧ್ಯಾಹ್ನ 3-30 ಗಂಟೆಗೆ ಫಿಯರ್ಾದಿ ಠಾಣೆಗೆ ಬಂದು ಹಾಜರಾಗಿ ಹೇಳಿಕೆ ನೀಡಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ್ದು, ಸಾರಾಂಶವೇನೆಂದರೆ, ತನ್ನ ಗಂಡ ಮೃತ ಮಲ್ಲಪ್ಪ ಈತನು ಜಮೀನು ಸಾಗುವಳಿ ಕೆಲಸಕ್ಕಾಗಿ ಮತ್ತು ಸಂಸಾರದ ಅಡಚಣೆಗಾಗಿ ಪಿಕೆಜಿಬಿ ಬ್ಯಾಂಕ ಯಾದಗಿರಿದಲ್ಲಿ ಮತ್ತು ಪರಿಚಯದವರ ಬಳಿ ಒಟ್ಟು 2-50 ಲಕ್ಷ ರೂ. ಕೈಗಡ ಸಾಲ ಮಾಡಿದ್ದು, ತಾನು ಮಾಡಿದ ಬ್ಯಾಂಕ ಸಾಲ ಮತ್ತು ಕೈಗಡ ಸಾಲ ತೀರಿಸಲಾಗದೆ ಮಲ್ಲಪ್ಪ ತಂದೆ ಲಕ್ಷ್ಮಪ್ಪ ಶಿವಪ್ಪನ್ನೋರ ತಮ್ಮ ಮೇವು ಹಾಕುವ ದೊಡ್ಡಿ ಜಾಗದಲ್ಲಿನ ಹುಣಸೇ ಮರದ ಟೊಂಗೆಗೆ ನೂಲಿನ ಹಗ್ಗದಿಂದ ನೇಣು ಬಿಗಿದುಕೊಡು ದಿನಾಂಕ 08.11.2020 ರಂದು ಬೆಳಿಗ್ಗೆ 6-00 ಗಂಟೆಯಿಂದ ಮಧ್ಯಾಹ್ನ 2-30 ಗಂಟೆವರೆಗಿನ ಅವಧಿಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಸದರಿಯವನ ಸಾವಿನಲ್ಲಿ ಯಾರ ಮೇಲೂ ಯಾವುದೇ ರೀತಿಯ ದೂರು, ಸಂಶಯ ವಗೈರೆ ಇರುವದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ: 278/2020.ಕಲಂ 87 ಆ್ಯಕ್ಟ : ಇಂದು ದಿನಾಂಕ: 08/11/2020 ರಂದು 20-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ ಚನ್ನಯ್ಯ ಎಸ್ ಹಿರೇಮಠ ಪಿಐ ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ 10 ಜನ ಆರೋಪಿತರು ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ದಿನಾಂಕ 08/11/2020 ರಂದು 17-40 ಠಾಣೆಯಲ್ಲಿದ್ದಾಗ ಶಹಾಪೂರ ಪಟ್ಟಣದ ಚಾಮುಂಡೇಶ್ವರಿ ನಗರದ ಅಲ್ಲಾವುದ್ದೀನ್ ದಗರ್ಾದ ಹತ್ತೀರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಏಲೆಗಳ ಸಹಾಯದಿಂದ ಅಂದರ ಬಾಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ 18-00 ಗಂಟೆಗೆ ನ್ಯಾಯಾಲಯದ ಅನುಮತಿ ಪಡೆದುಕೊಂಡು ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಶಹಾಪೂರ ಪಟ್ಟಣದ ಚಾಮುಂಡೇಶ್ವರಿ ನಗರದ ಅಲ್ಲಾವುದ್ದೀನ್ ದಗರ್ಾದ ಹತ್ತೀರ ಹೋಗಿ ಜೂಜಾಟ ಆಡುತ್ತಿರುವದನ್ನು ಪಂಚರ ಸಮಕ್ಷಮದಲ್ಲಿ ಖಚಿತಪಡಿಸಿಕೊಂಡು ದಾಳಿ ಮಾಡಿದ್ದು 10 ಜನ ಆರೋಪಿತರು ಸಿಕ್ಕಿದ್ದು ಅವರ ಹತ್ತಿರ ಮತ್ತು ಕಣದಲ್ಲಿ ಹೀಗೆ ಒಟ್ಟು 9520/- ರೂ ಹಾಗೂ 52 ಇಸ್ಪೇಟ ಏಲೆಗಳು ಸಿಕ್ಕಿದ್ದು ಮುದ್ದೆಮಾಲಗಳನ್ನು ದಿನಾಂಕ 08/11/2020 ರಂದು 18-45 ಗಂಟೆಯಿಂದ 19-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ 20-30 ಗಂಟೆಗೆ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ ಆರೋಪಿತರ ವಿರುದ್ದ ಠಾಣೆ ಗುನ್ನೆ ನಂ 278/2020 ಕಲಂ 87 ಕೆ.ಪಿ.ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!