ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/11/2020
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 156/2020 ಕಲಂ 379 ಐಪಿಸಿ : ದಿನಾಂಕ 06/11/2020 ರಂದು ಬೆಳಿಗ್ಗೆ 8-45 ಎ.ಎಂ.ಕ್ಕೆ ಹೊರುಂಚಾ ಗ್ರಾ ಮದ ಸೀಮೆಯಲ್ಲಿ ಬರುವ ಸರಕಾರಿ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತನಾದ ಟ್ರ್ಯಾಕ್ಟರ ಚಾಲಕ ಇತನು ತನ್ನ ಟ್ರ್ಯಾಕ್ಟರಗೆ ನಂಬರ ಪ್ಲೇಟ ಇಲ್ಲದ್ದು, ಮಹೇಂದ್ರ ಕಂಪನಿಯದ್ದು, ಮಹೇಂದ್ರ-415ಆಘಿಕ ಚೆಸ್ಸಿ ನಂ ಒಃಓಉಂಂಗಿಏಉಐಚಇ00521 ಇಂಜಿನ ನಂ ಚಐಇಈಉಂ1239 ಅಂತಾಯಿದ್ದು, ಟ್ರ್ಯಾಲಿಗೆ ನಂಬರ ಇರುವದಿಲ್ಲ ನೆದ್ದರಲ್ಲಿ ಮರಳು ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಮತ್ತು ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 157/2020 ಕಲಂ 379 ಐಪಿಸಿ (ಮರಳು ಆಕ್ರಮ ಸಾಗಾಣಿಕೆ) : ಇಂದು ದಿನಾಂಕ 06-11-2020 ರಂದು 10-30 ಎ.ಎಮ್ ಕ್ಕೆ ಪಿ.ಎಸ್.ಐ (ಕಾಸು) ರವರು ಠಾಣೆಯಲ್ಲಿದ್ದಾಗ ಓರುಂಚಾ ಗ್ರಾಮದ ಕಡೆಯಿಂದ ಅಲ್ಲಿಪೂರ ಕಡೆಗೆ ಯಾರೋ ಟ್ರ್ಯಾಕ್ಟರದಲ್ಲಿ ಅನಧೀಕೃತವಾಗಿ ಕಳ್ಳತನದಿಂದ ಉಸುಕು ಕಳುವು ಮಾಡಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದರಿಂದ ಸಿಬ್ಬಂಧಿಯವರೊಂದಿಗೆ ಸ್ಥಳಕ್ಕೆ ಹೋಗಿ ಉಸುಕು ತಂಬಿದ ಟ್ರ್ಯಾಕ್ಟರ ನಂ; ಕೆ.ಎ-51/ಟಿ-6238 ಟ್ರೈಲಿಯ ನೊಂದಣೀ ನಂಬರ ಇರುವುದಿಲ್ಲಾ ಇದನ್ನು ಆರೋಪಿತನ ಸಮೇತ ಹಿಡಿದುಕೊಂಡು 1 ಪಿ.ಎಮ್ ಕ್ಕೆ ಠಾಣೆಗೆ ತಂದು ಮುಂದಿನ ಕ್ರಮಕ್ಕೆ ಹಾಜರುಪಡಿಸಿದ್ದು ಹಾಜರುಪಡಿಸಿದ್ದು ಜಪ್ತಿಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 157/2020 ಕಲಂ 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಮಹಿಳಾ ಪೊಲೀಸ ಠಾಣೆ ಗುನ್ನೆ ನಂ:-31/2020 ಕಲಂ: ಮಹಿಳೆ ಕಾಣೆಯಾದ ಬಗ್ಗೆ : ಇಂದು ದಿನಾಂಕ: 06.11.2020 ರಂದು ಮದ್ಯಾಹ್ನ 2.15 ಪಿ.ಎಂಕ್ಕೆ ಪಿರ್ಯಾಧಿ ಶ್ರೀ ರಾಮಣ್ಣ ತಂದೆ ನಿಂಗಪ್ಪ ಪೂಜಾರಿ ವಯಾ-60 ಜಾತಿ-ಕಬ್ಬಲೀಗ ಉ-ನಿವೃತ್ತಿ ನೌಕರ ಸಾ-ಬೋಯಿವಾಡಾ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಅದರ ಸಾರಂಶವೇನೆಂಧರೆ ನನಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳಿರುತ್ತಾರೆ. ನನ್ನ ಹಿರಿಯ ಮಗಳು ಮೇಘಶ್ರೀ ವಯಾ-19 ವರ್ಷ ಇಕೆಯು ಯಾದಗಿರಿ ನಗರದ ಸಕರ್ಾರಿ ಪದವಿ ಪೂರ್ವ ಕಾಲೇಲಿನಲ್ಲಿ ಪಿ.ಯು.ಸಿ ದ್ವೀತಿಯ ವರ್ಷದಲ್ಲಿ ಓದುತ್ತಿರುತ್ತಾಳೆ. ನಿನ್ನೆ ದಿನಾಂಕ: 05.11.2020 ರಂದು ಬೆಳಿಗ್ಗೆ 11.30 ಎ.ಎಂಕ್ಕೆ ನಾನು ಕೆಲಸಕ್ಕೆಂದು ಹೋದಾಗ ನನ್ನ ಮಗಳು ಮೇಘಶ್ರೀ ಈಕೆಯು ಮನೆಯಲ್ಲಿ ನೀರು ಇಲ್ಲದ ಕಾರಣ ಬೋರಿಂಗಿಗೆ ಹೋಗಿ ನೀರು ತರುತ್ತೇನೆಂದು ನನ್ನ ಹೆಂಡತಿ ವಿಜಯಲಕ್ಷ್ಮಿಗೆ ಹೋಗಿರುತ್ತಾಳೆ. ತುಂಬಾ ಸಮದವರಗೆ ನನ್ನ ಮಗಳು ನನ್ನ ಮಗಳು ಮನೆಗೆ ಬಾರದೇ ಇದ್ದರಿಂದ ನನ್ನ ಮಗಳು ಮೇಘಶ್ರೀ ಈಕೆಯು ಎಲ್ಲೂ ಕಾಣದೇ ಇದ್ದರಿಂದ ನಮ್ಮ ಮಗಳು ಬೋರಿಂಗಿಗೆ ಹೋಗಿ ನೀರು ತರುತ್ತೇನೆಂದು ಹೇಳಿ ಹೋದವಳು ಮರಳಿ ಮನಗೆ ಬಾರದೇ ಕಾಣೆಯಾಗಿರುತ್ತಾಳೆ ಅಂತ ತಿಳಿಸಿದಾಗ ಯಾದಗಿರಿ ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮಗಳು ಎಲ್ಲೂ ಕಾಣಲಿಲ್ಲ. ಹಾಗೂ ಸಂಬಂಧಿಕರ ಮನೆಗಳಿಗೆ ಪೋನ್ ಮಾಢಿ ವಿಚಾರಿಸಲಾಗಿ ನನ್ನ ಮಗಳು ಮೇಘಶ್ರೀ ಅಲ್ಲಿಗೂ ಬಂದಿಲ್ಲ ಅಂತ ತಿಳಿಯಿತು. ಆದ್ದರಿಂದ ಕಾಣೆಯಾದ ನನ್ನ ಮಗಳು ಮೇಘಶ್ರೀ ಇವಳನ್ನು ಪತ್ತೆ ಮಾಡಿ ಕೊಡಬೇಕು ಅಂತ ಕೊಟ್ಟ ದೂರಿನ ಮೇಲಿಂದ ಯಾದಗಿರಿ ಮಹಿಳಾ ಠಾಣೆಯಲ್ಲಿ ಗುನ್ನೆ ನಂ: 31/2020 ಕಲಂ: ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೇದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ: 274/2020.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್. : ಇಂದು ದಿನಾಂಕ 06/11/2020 ರಂದು 8.00 ಎ.ಎಂ ಕ್ಕೆ ಸಕರ್ಾರಿ ತಪರ್ೇ ಫಿಯರ್ಾದಿದಾರರಾದ ಶ್ರೀ ಚಂದ್ರಕಾಂತ ಪಿ.ಎಸ್.ಐ(ಕಾ.ಸು) ಶಹಾಪೂರ ರವರು ಠಾಣೆಗೆ ಬಂದು ತಾವು ಜಪ್ತಿ ಮಾಡಿದ ಒಂದು ಮರಳು ತುಂಬಿದ ಟಿಪ್ಪರ್, ಜಪ್ತಿ ಪಂಚನಾಮೆ, ಮತ್ತು ಒಬ್ಬ ಆರೋಪಿತನಿಗೆ ಹಾಜರಪಡಿಸಿ ವರದಿ ಕೊಟ್ಟ ಸಾರಾಂಶವೇನೆಂದರೆ ಇಂದು ದಿನಾಂಕ 06/11/2020 ರಂದು ಬೆಳಿಗ್ಗೆ 5.30 ಎ.ಎಂ ಕ್ಕೆ ಮಾಹಿತಿ ಬಂದಿದ್ದೇನೆಂದರೆ, ಹಯ್ಯಾಳ ಹತ್ತಿರದ ಕೃಷ್ಣಾ ನದಿಯಿಂದ ದೋರನಳ್ಳಿ ಮಾರ್ಗವಾಗಿ ಮೇನ ರೋಡ ಮುಖಾಂತರ ಒಂದು ಟಿಪ್ಪರದಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಭಾಗಣ್ಣ ಪಿಸಿ 194 2) ಗೋಕುಲಹುಸೇನ ಪಿಸಿ 172 ರವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೋಗುವ ನಿಮಿತ್ಯ ಗೋಕುಲಹುಸೇನ ಪಿಸಿ 172 ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ಗೋಕುಲಹುಸೇನ ಪಿಸಿ 172 ರವರು ಇಬ್ಬರು ಪಂಚರಾದ 1) ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ|| 27 ವರ್ಷ ಉ|| ಕೂಲಿಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ ತಾ|| ಶಹಾಪೂರ 2) ಶ್ರೀ ನಿಂಗರಾಜ ತಂದೆ ಭೀಮರಾಯ ಮಂಡಗಳ್ಳಿ ವ|| 25 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ|| ಇಂದಿರಾ ನಗರ ಶಹಾಪೂರ ಇವರಿಗೆ 5.45 ಎ.ಎಂ ಕ್ಕೆ ಕರೆದುಕೊಂಡು ಬಂದರು. ಸದರಿಯವರಿಗೆ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರಾಗಲು ಅವರು ಒಪ್ಪಿಕೊಂಡರು. ನಂತರ ದಾಳಿ ಕುರಿತು ಎಲ್ಲರೂ ಕೂಡಿ 5.50 ಎ.ಎಂ ಕ್ಕೆ ಠಾಣೆಯ ಜೀಪ್ ನಂ ಕೆಎ 32 ಜಿ 0618 ನೇದ್ದರಲ್ಲಿ ಹೊರಟು ಶಹಾಪೂರ ಯಾದಗಿರಿ ಮುಖ್ಯ ರಸ್ತೆಯ ಶಹಾಪೂರ ಹೊರವಲಯದ ರೈಲ್ವೆ ಬ್ರಿಜ್ ಹತ್ತಿರ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ 6.10 ಎ.ಎಂ ಕ್ಕೆ ನಿಂತೆವು. ನಿಂತಾಗ ದೋರನಳ್ಳಿ ಕಡೆಯಿಂದ 6.15 ಎ.ಎಂ ಕ್ಕೆ ಒಂದು ಮರಳು ತುಂಬಿದ ಟಿಪ್ಪರ ಬಂತು ನಾವು ಅದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ(ರಾಜಧನ) ತೆಗೆದು ಕೊಂಡು ಬರಲು ಹೇಳಿದಾಗ ಟಿಪ್ಪರ ಚಾಲಕನು ಯಾವುದೇ ಕಾಗದ ಪತ್ರ ಇರುವದಿಲ್ಲಾ ನಮ್ಮ ಮಾಲೀಕರಾದ ಮಲ್ಲಿಕಾಜರ್ುನ ತಂದೆ ಚಂದ್ರಯ್ಯಗೌಡ ಸಾ|| ಬೀರನಕಲ್ ತಾ|| ವಡಗೇರಾ ರವರು ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಹಯ್ಯಾಳ ಗ್ರಾಮದ ಹತ್ತಿರ ಇರುವ ಕೃಷ್ಣಾ ನದಿಯ ದಂಡೆಯಿಂದ ತುಂಬಿ ಕಳುಹಿಸಿದ್ದು ನಾನು ತೆಗೆದುಕೊಂಡು ಹೋಗುತ್ತಿದ್ದೇನೆ ಅಂತ ಹೇಳಿದ್ದರಿಂದ ಸದರಿ ಟಿಪ್ಪರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಾರ್ಕಂಡೇಶ ತಂದೆ ನಿಂಗಪ್ಪ ಹೊಸಪೇಟ ವ|| 28ವರ್ಷ ಜಾ|| ಬೇಡರ ಉ|| ಚಾಲಕ ಸಾ|| ಐಕೂರ ತಾ|| ವಡಗೇರಾ ಅಂತಾ ತಿಳಿಸಿದ್ದು, ಅವನನ್ನು ವಶಕ್ಕೆ ಪಡೆದುಕೊಂಡಿದ್ದು ಟಿಪ್ಪರ ನಂಬರ ನೋಡಲಾಗಿ ಭಾರತ್ ಬೆಂಜ್ ಟಿಪ್ಪರ್ ನಂ ಕೆಎ 33 ಎ 9836 ಇದ್ದು ಅದರಲ್ಲಿ ಅಂದಾಜು 4 ಬ್ರಾಸ್ ಮರಳು ತುಂಬಿದ್ದು ಅದರ ಅ|| ಕಿ|| 6000=00 ರೂ ಆಗಬಹುದು ಮತ್ತು ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ ನಂ ಕೆಎ 33 ಎ 9836 ನೇದ್ದರ ಅ|| ಕಿ|| 20,00,000-00 ರೂ ಇರಬಹುದು. ಸದರಿ ಟಿಪ್ಪರ ಚಾಲಕನಿಗೆ ಟಿಪ್ಪರ ಮಾಲೀಕ ಎಲ್ಲಿದ್ದಾನೆ ಅಂತಾ ವಿಚಾರಿಸಲಾಗಿ ಮರಳು ತುಂಬಿ ಕಳುಹಿಸಿ ತಮ್ಮ ಊರಿಗೆ ಹೋಗಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ. ಸದರಿ ಟಿಪ್ಪರ ಚಾಲಕನು ಮಾಲೀಕರ ಮಾತು ಕೇಳಿ ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ 6.20 ಎ.ಎಮ್. ದಿಂದ 7.20 ಎ.ಎಮ್ದ ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟಿಪ್ಪರ ಚಾಲಕನ ಮೂಲಕ ಸಿಬ್ಬಂದಿಯವರ ಸಹಾಯದಿಂದ ಸದರಿ ಮರಳು ತುಂಬಿದ ಟಿಪ್ಪರನ್ನು ಠಾಣೆಗೆ ತಂದು ನಿಲ್ಲಿಸಿ ವರದಿಯನ್ನು ತಯ್ಯಾರಿಸಿ ಸದರಿ ಟಿಪ್ಪರ್ ಚಾಲಕ ಮತ್ತು ಟಿಪ್ಪರ ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ಬೆಳಿಗ್ಗೆ 8.00 ಎ.ಎಂ.ಕ್ಕೆ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 274/2020 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೋಡೇಕಲ್ ಪೊಲೀಸ ಠಾಣೆ ಗುನ್ನೆ ನಂ: 235/2020 ಕಲಂ: 78 () ಕೆ.ಪಿ. ಕಾಯ್ದೆ: ಇಂದು ದಿನಾಂಕ:06/11/2020 ರಂದು 6-45 ಪಿ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಚಂದ್ರಶೇಖರ್ ಪಿಎಸ್ಐ (ಕಾ&ಸು-2) ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:06/11/2020 ರಂದು 4:15 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಮಾಪುರ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್ಸಿ-105 3) ಶ್ರೀ ಮಂಜುನಾಥ ಪಿಸಿ-271, ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಸಿದ್ದಪ್ಪ ತಂದೆ ಹೈಯಾಳಪ್ಪ ಟಾರಿಕಾರ ವ|| 65 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ದಿವಳಗುಡ್ಡ ಸುರಪೂರ 2) ಶ್ರೀ ಸೋಮಣ್ಣ ತಂದೆ ಹಣಮಂತ ವಾರಿಯರ್ ವ|| 45 ವರ್ಷ ಜಾ|| ಗೊಲ್ಲರ ಉ|| ಕೂಲಿ ಸಾ|| ರಂಗಂಪೇಠ ಸುರಪುರ ಇವರನ್ನು 4:45 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 5 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0094 ನೇದ್ದರಲ್ಲಿ ಹೊರಟು 5:15 ಪಿ.ಎಮ್ ಕ್ಕೆ ತಿಮ್ಮಾಪೂರ ಬಸ್ ನಿಲ್ದಾಣದ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ತಿಮ್ಮಾಪೂರ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5:20 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು 1) ಹಣಮಂತ ತಂದೆ ಶಿವಣ್ಣ ಕಂದಕೂರ ವ|| 47 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ರತ್ತಾಳ ತಾ|| ಸುರಪುರ ಅಂತಾ ತಿಳಿಸಿದ್ದು, ತಾನು ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ನಗದು ಹಣ 550=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:20 ಪಿ.ಎಮ್ ದಿಂದ 6:20 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 16/2020 ಕಲಂ. 174 ಸಿಆರ್ಪಿಸಿ : ದಿನಾಂಕ: 06-11-2020 ರಾತ್ರಿ 07-00 ಗಂಟೆಗೆ ಪಿಯರ್ಾದಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೇನೆಂದರೆ ನಾವು ನಮ್ಮೂರಿನ ಈಳಿಗೇರ ಬನ್ನಪ್ಪ ಕಂಡೆಕ್ಟರ ಇವರ ಗದ್ದೆಯನ್ನು ಪಾಲಿಗೆ ಮಾಡಿದ್ದು ಆ ಗದ್ದಿ ಊರಿಗೆ ಸಮೀಪದಲ್ಲಿ ಇರುತ್ತದೆ. ಗದ್ದೆ ಊರಿಗೆ ಸಮೀಪ ಇರುವದರಿಂದ ದನಗಳು ಬಂದು ಗದ್ದೆಯನ್ನು ಮೇಯುತಿದ್ದವು. ಅದಕ್ಕೆ ನನ್ನ ಗಂಡ ಬನ್ನಪ್ಪ ತಂದೆ ಭೀಮಪ್ಪ ವ|| 38 ವರ್ಷ ಈತನು ಗದ್ದೆಗೆ ದನಗಳು ಬಾರದಂತೆ ನೋಡಿಕೊಳ್ಳಲು ಮತ್ತು ಗದ್ದೆಗೆ ನೀರು ಬಿಡಲು ದಿನಾಲೂ ಕವಳಿ ಗದ್ದೆ ಕಾಯಲು ಹೋಗುತಿದ್ದನು. ಇಂದು ದಿನಾಂಕ: 06-11-2020 ರಂದು ಮದ್ಯಾಹ್ನ 02-00 ಗಂಟೆ ಸುಮಾರಿಗೆ ನನ್ನ ಗಂಡ ಮನೆಯಿದ ಗದ್ದೆಗೆ ದನಗಳು ಬರುತ್ತವೆ ಮತ್ತು ಗದ್ದೆಗೆ ನೀರು ಬಿಡುವದು ಇದೆ ಗದ್ದೆಗೆ ಹೋಗುತ್ತೇನೆ ಅಂತಾ ಹೇಳಿ ಹೋದನು. ಸ್ವಲ್ಪ ಸಮಯದ ನಂತರ ನಮ್ಮೂರಿನ ಗೋಪಾಲ ತಂದೆ ಭೀಮರಾಯ ಈತನು ಮನೆಗೆ ಬಂದು ತಿಳಿಸಿದ್ದೆನೆಂದರೆ ನಿನ್ನ ಗಂಡ ಗದ್ದೆಗೆ ಹೋಗಿ ಮದ್ಯಾಹ್ನ 03-25 ಗಂಟೆ ಸುಮಾರಿಗೆ ಗದ್ದೆಗೆ ನೀರು ಬಿಡಬೇಕಂತ ಮೋಟರ ಚಾಲು ಮಾಡಲು ಹೋಗುತ್ತಿರುವಾಗ ಕರೆಂಟ ಕಂಬದ ಸವರ್ಿಸ್ ವೈರ ಆಕಸ್ಮಿಕವಾಗಿ ಕಟ್ಟಾಗಿ ಬನ್ನಪ್ಪ ಕಾಲಿಗೆ ಸವರ್ಿಸ್ ವೈರ ತಗುಲಿದ್ದರಿಂದ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು ಆಗ ನಾನು ಮನೆಯಿಂದ ನಾವು ಪಾಲಿಗೆ ಮಾಡಿದ ಗದ್ದೆಗೆ ಹೋಗಿ ನೋಡಲಾಗಿ ನನ್ನ ಗಂಡ ಕರೆಂಟ್ ವೈರ ತಗುಲಿ ಮೃತಪಟ್ಟಿದ್ದನು. ನನ್ನ ಗಂಡ ಗದ್ದೆಗೆ ನೀರು ಬಿಡಲು ಮೋಟರ ಚಾಲು ಮಾಡುವಾಗ ಕರೆಂಟ್ ಕಂಬದ ಸವರ್ಿಸ್ ವೈರ ಆಕಸ್ಮಿಕವಾಗಿ ನನ್ನ ಗಂಡನ ಕಾಲಿಗೆ ತಗುಲಿದ್ದರಿಂದ ನನ್ನ ಗಂಡ ಮದ್ಯಾಹ್ನ 03-25 ಗಂಟೆಗೆ ಮೃತಪಟ್ಟಿರುತ್ತಾನೆ. ಈತನ ಮರಣದಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲ ನನ್ನ ಗಂಡನಿಗೆ ಆಕಸ್ಮಿಕವಾಗಿ ಕರೆಂಟ್ ಸವರ್ಿಸ್ ವೈರ ಕಟ್ ಆಗಿ ಬಿದಿದ್ದರಿಂದ ನನ್ನ ಗಂಡ ಮೃತಪಟ್ಟಿರುತ್ತಾನೆ
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 275/2020.ಕಲಂಃ 78(3) ಕೆ.ಪಿ.ಆ್ಯಕ್ಟ : ಇಂದು ದಿನಾಂಕ 06/11/2020 ರಂದು 22-30 ಗಂಟೆಗೆ ಸ|| ತ|| ಪಿಯರ್ಾದಿ ಚೆನ್ನಯ್ಯ ಹೀರೆಮಠ ಪಿ.ಐ. ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ 06/11/2020 ರಂದು 19-00 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಹೈಯಾಳ (ಬಿ) ಗ್ರಾಮದ ಹೈಯಾಳ ಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ಸದರಿ ಅಪರಾದವು ಅಸಂಜ್ಞಯ ಅಪರಾದವಾಗಿದ್ದರಿಂದ ಠಾಣೆಯ ಎನ್ ಸಿ. 82/2020 ನ್ನೇದ್ದನ್ನು ಧಾಖಲಿಸಿಕೊಂಡು ಸದರಿ ವ್ಯೆಕ್ತಿಯ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರ ವ್ಯವಹಾರ ಮಾಡಿ 19-20 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ.164. ಸಂಗನಬಸಪ್ಪ ಹೆಚ್.ಸಿ.60. ಬಾಗಣ್ಣ ಪಿ.ಸಿ.194. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಸಂಗನಬಸಪ್ಪ ಹೆಚ್.ಸಿ.60. ರವರಿಗೆ 19-30 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ 2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 19-35 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.ಮಾನ್ಯ ಡಿವೈ.ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಎಲ್ಲರು ಠಾಣೆ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲಿ ಕುಳಿತುಕೊಂಡು ದಾಳಿ ಕುರಿತು ಠಾಣೆಯಿಂದ 19-40 ಗಂಟೆಗೆ ಹೊರಟೇವು. ನೇರವಾಗಿ ಹೈಯಾಳ (ಬಿ) ಗ್ರಾಮದ ಹೈಯಾಳ ಲಿಂಗೇಶ್ವರ ಗುಡಿಯ ಹತ್ತಿರ ಸ್ಪಲ್ಪ ದೂರದಲ್ಲಿ 20-20 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಜೀಪಿನಿಂದ ನಾವು ಎಲ್ಲರು ಇಳಿದು ಅಲ್ಲಿಂದ ಹೈಯಾಳ ಲಿಂಗೇಶ್ವರ ಗುಡಿಯ ಹತ್ತಿರ ನಡೆದುಕೊಂಡು ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಹೈಯಾಳ ಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 20-30 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ದೇವಪ್ಪ ತಂದೆ ಹೈಯಾಳಪ್ಪ ಯಕ್ಷಿಂತಿ ವ|| 29 ಜಾ|| ಕುರುಬರ ಉ|| ಮಟಕಾಬರೆದುಕೊಳ್ಳುವದು ಸಾ|| ಬೈರಮಡ್ಡಿ ತಾ|| ಸುರಪೂರ. ಅಂತ ಹೇಳಿದನು. ಈತನ ಹತ್ತಿರ ನಗದು ಹಣ 2150-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಹಾಗೂ 2 ಮಟಕಾ ಚೀಟಿಗಳು, ಸಿಕ್ಕಿದ್ದು ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 2150-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 20-30 ಗಂಟೆಯಿಂದ 21-30 ಗಂಟೆಯವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು. ಎಲ್ಲರೂ ಕೂಡಿ ಮರಳಿ ಠಾಣೆಗೆ 22-10 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ 22-30 ಗಂಟೆಗೆ ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 275/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 276/2020ಕಲಂ 279, 283, 337, 338, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ: 06/11/2020 ರಂದು 10.20 ಪಿ.ಎಂ. ಸುಮಾರಿ ಜಿ.ಜಿ.ಹೆಚ್ ಶಹಾಪುರದಿಂದ ಫೋನ್ ಮೂಲಕ ಎಂ.ಎಲ್.ಸಿ ಮಾಹಿತಿ ವಸೂಲಾಗಿದ್ದರಿಂದ 10.30 ಪಿ.ಎಂ ಸುಮರಿಗೆ ನಾನು, ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ಫಿಯರ್ಾದಿ ಶ್ರೀ ಎಂ.ಡಿ.ತೌಫಿಕ ತಂ/ ಅಬ್ದುಲ್ನಬಿ ದಫೇದಾರ ಸಾ|| ರಸ್ತಾಪುರ ಇವರ ಹೇಳಿಕೆ ಪಡೆದುಕೊಳ್ಳಲಾಗಿ ಸದರಿಯವರ ಹೇಳಿಕೆ ಸಾರಾಂಶವೇನೆಂದರೆ, ಇಂದು 06/11/2020 ರಂದು ರಾತ್ರಿ 8.45 ಪಿ.ಎಂ. ಸುಮಾರಿಗೆ ನಮ್ಮ ದೊಡ್ಡಮ್ಮ ಅಫೀಜಾಬೇಗಂ ಗಂ/ ಖಾಸಿಂಸಾಬ ಹವಾಲ್ದಾರ ಇವರಿಗೆ ಆರೋಗ್ಯ ಸರಿ ಇಲ್ಲದರಿಂದ ಶಹಾಪುರ ಆಸ್ಪತ್ರೆಗೆ ಹೋಗೋಣ ಅಂತಾ ನಾನು ಮತ್ತು ನನ್ನ ತಾಯಿ ಅಭಿದಾಬೇಗಂ ಗಂ/ ಅಬ್ದುಲ್ನಬಿ ದಫೆದಾರ, ದೊಡ್ಡಮ್ಮ ಕುಲಸುಮ್ಬಿ ಗಂ/ ಮೋಯಿನ್ ಮೂಲಿಮನಿ ಮತ್ತು ನಮ್ಮ ಸಂಬಂಧಿ ಸರಮದ ತಂ/ ಮಹಿಬೂಬ ಶೇಖ್ ಎಲ್ಲರೂ ಕೂಡಿಕೊಂಡು ನಮ್ಮ ಆಲ್ಟೋ 800 ಕಾರ್.ನಂ. ಕೆಎ-34 ಪಿ-2806 ನೇದ್ದರಲ್ಲಿ ಕುಳಿತು ರಸ್ತಾಪುರದಿಂದ ಹೊರಟಿದ್ದಾಗ 9.00 ಪಿ.ಎಂ. ಸುಮಾರಿಗೆ ಸರಮದನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಾ ರಸ್ತಾಪುರ ಹೈಸ್ಕೂಲ್ ಮುಂದೆ ರೋಡಿನಲ್ಲಿ ಯಾವುದೇ ಮುಂಜಾಗ್ರತೆ ಕ್ರಮ ಜರುಗಿಸದೆ ನಿಲ್ಲಿಸಿದ್ದ ಒಂದು ರಜಿಸ್ಟರ್ ನಂಬರ ಇಲ್ಲದ ಟ್ರಾಕ್ಟರ ಟ್ರಾಲಿಯ ಹಿಂಭಾಗದಲ್ಲಿ ಜೋರಾಗಿ ಡಿಕ್ಕಿಪಡಿಸಿದಾಗ ಸದರಿ ಅಪಘಾತದಲ್ಲಿ ನನ್ನ ತಾಯಿ ಅಭಿದಾಬೇಗಂ ಗಂ/ ಅಬ್ದುಲ್ನಬಿ ದಫೆದಾರ ಭಾರೀ ಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನನ್ನ ದೊಡ್ಡಮ್ಮ ಅಫೀಜಾಬೇಗಂ ಇವರು ರಸ್ತೆ ಮಾರ್ಗದಲ್ಲಿ ವಿಭೂತಿಹಳ್ಳಿ ಗ್ರಾಮದ ಹತ್ತಿರ ರಾತ್ರಿ 10-00 ಗಂಟೆಗೆ ಮೃತಪಟ್ಟಿದ್ದು ಇನ್ನುಳಿದವರಿಗೆ ಭಾರೀ ಹಾಗೂ ಸಾಧಾ ಸ್ವರೂಪದ ಗಾಯಗಳಾಗಿರುತ್ತವೆ. ಕಾರಣ ಈ ಅಪಘಾತಕ್ಕೆ ಕಾರಣೀಭೂತರಾದ ಕಾರ್ ಚಾಲಕ ಸರಮದ ತಂ/ ಮಹಿಬೂಬ ಶೇಖ್ ವ|| 35 ವರ್ಷ ಸಾ|| ರಸ್ತಾಪುರ ಮತ್ತು ರಸ್ತೆಯ ಮೇಲೆ ಯಾವುದೇ ಮುಂಜಾಗೃತೆ ಕ್ರಮ ಜರುಗಿಸದೆ ನಿಲ್ಲಿಸಿದ್ದ ಮರಳು ತುಂಬಿದ ಟ್ರಾಕ್ಟರ್ ಟ್ರಾಲಿ ಚಾಲಕ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ರಾತ್ರಿ 11-40 ಗಂಟೆಗೆ ಬಂದು, ಫಿಯರ್ಾದಿಯವರ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ. 276/2020 279, 283, 337, 338, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.