ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/11/2020

By blogger on ಗುರುವಾರ, ನವೆಂಬರ್ 5, 2020

 


                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/11/2020 

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 142/2020, ಕಲಂ, 143,147,148,,323,324,354,504.506. ಸಂ.149 ಐ ಪಿ ಸಿ : ದಿನಾಂಕ: 05-11-2020 ಸಾಯಂಕಾಲ 05-30 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ:05-11-2020-2020 ರಂದು ಬೆಳಿಗ್ಗೆ 06-00 ಗಂಟೆಗೆ ಮನೆಯ ಹತ್ತಿರ ಇರುವಾಗ ಆರೋಪಿತರು ದನಗಳನ್ನು ಖುಲ್ಲಾ ಬಿಟ್ಟಿದ್ದು ಅದಕ್ಕೆ ಪಿಯರ್ಾಧಿದಾರಳ ಮನೆಯವರು ಆರೋಪಿತರಿಗೆ ದನಗಳನ್ನು ಖುಲ್ಲಾ ಬಿಡಬೆಡರಿ ಅಂತಾ ಹೇಳಿದ್ದಕ್ಕೆ ಆರೋಪಿತರೆಲ್ಲರೂ ಸೇರಿಕೊಂಡು ಕೈಯಲ್ಲಿ ಕಲ್ಲು ಮತ್ತು ಕಟ್ಟಿಗೆಯನ್ನು ಹಿಡಿದುಕೊಂಡು ಬಂದು ಯಾಕಲೆ ಸೂಳೆ ಮಕ್ಕಳೆ ನಾವು ದನಗಳನ್ನು ಖುಲ್ಲಾ ಬಿಡುತ್ತೇವೆ ನೋಡಿ ಎನ ಮಾಡುತ್ತಿರಿ ಸೂಳೆ ಮಕ್ಕಳೆ ರಂಡಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ ಮತ್ತು ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ರಕ್ತಗಾಯ  ಮಾಡಿ ಸೀರೆ ಸೇರಗೂ ಹಿಡಿದು ಎಳದಾಡಿ ನೆಲಕ್ಕೆ ಬಿಳಿಸಿ ಅವಮಾನ ಮಾಡಿ ನಿಮಗೆ ಇವತ್ತು ಜೀವ ಸಹಿತ ಬಿಡುವದಿಲ್ಲ ಅಂತಾ ಅಂತಾ ಜೀವದ ಬೇದರಿಕೆ ಹಾಕಿದ್ದು, ಇರುತ್ತದೆ.


ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 130/2020 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 05/11/2020 ರಂದು 5 ಪಿ.ಎಮ್.ಕ್ಕೆ ಭೀ.ಗುಡಿಯ ಬಿ.ಎಸ್.ಎನ್.ಎಲ್. ಆಫಿಸ್ ಹತ್ತಿರ ಗೋಗಿ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 6.30 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 7.15 ಪಿಎಮ್ ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1770=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.

           

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 131/2020 ಕಲಂ ಮನುಷ್ಯ ಕಾಣೆಯಾದ ಬಗ್ಗೆ. : ಫಿಯರ್ಾದಿಯ ಗಂಡ ಯತಾರ್ಥನಿದ್ದು (ಮಾನಸಿಕ ಅಸ್ವಸ್ಥ) ದಿನಾಂಕ:07/12/2019 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ಫಿಯರ್ಾದಿಯ ಗಂಡನಾದ ಭೀಮರಡ್ಡಿ ಈತನು ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನು ಅಂದು ರಾತ್ರಿಯಾದರೂ ಮನೆಗೆ ವಾಪಸ್ ಬಂದಿರುವದಿಲ್ಲ. ಮರುದಿನ ಊರಲ್ಲಿ, ಹೊಲಕ್ಕೆ ಹೋಗಿ ಹುಡುಕಾಡಲಾಗಿ ಸಿಕ್ಕಿರುವದಿಲ್ಲ. ನಂತರ ಸಂಬಂಧಿಕರು, ನೆಂಟರು, ಬೀಗರು ಇವರಿಗೆ ಫೋನ್ ಮಾಡಿ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ನಂತರ ಶಕಾಪುರ ಮಠ, ಗದಗಿನ ಮಠ, ಅಬ್ಬೆತುಕೂರ ಮಠಗಳಿಗೆ, ಗುಡಿಗುಂಡಾರ, ಆಶ್ರಮಗಳಿಗೆ ಹೋಗಿ ಹುಡುಕಾಡಿ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ಫಿಯರ್ಾದಿಯು ತನ್ನ ಗಂಡನಿಗೆ ಕಾಣೆಯಾದಾಗಿನಿಂದ ಇಲ್ಲಿಯವರೆಗೆ ಹುಡುಕಾಡಲಾಗಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾದ ತನ್ನ ಗಂಡನನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ದೂರು ಇರುತ್ತದೆ.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ: 171/2020 ಕಲಂ: 87 ಕೆಪಿ ಯಾಕ್ಟ : ಇಂದು ದಿ : 05/11/2020 ರಂದು 5 :30 ಪಿಎಮ್ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ನಾನು ದಿನಾಂಕ:05.11.2020 ರಂದು 04:00 ಪಿ.ಎಮ್ಕ್ಕೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ಠಾಣಾ ವ್ಯಾಪ್ತಿಯ ಬೈಚಬಾಳ ಗ್ರಾಮದ ಮರಿಗೆಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದಿದ್ದರಿಂದ ಸದರಿ ವಿಷಯವನ್ನು ಖಚಿತಪಡಿಸಿಕೊಂಡು ನಂತರ ಮರಳಿ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತ ಜ್ಞಾಪನ ಪತ್ರ ನೀಡಿದ್ದು, ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 171/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.     ನಂತರ ದಾಳಿ ಮಾಡಿ ಒಟ್ಟು 06 ಜನ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು 11250/- ರೂ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಮತ್ತು 1 ಬಿಳಿ ಬಣ್ಣದ ಬರಕಾವನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.


ಕೋಡೇಕಲ್ ಪೊಲೀಸ ಠಾಣೆ ಗುನ್ನೆ ನಂ: ಯು.ಡಿ.ಆರ್ ನಂ: 17/2020 ಕಲಂ : 174 ಸಿ.ಆರ್.ಪಿ.ಸಿ : ದಿನಾಂಕ:05.11.2020 ರಂದು 9:00 ಎ.ಎಮ್.ಕ್ಕೆ ಪಿಯರ್ಾದಿ ರಮೇಶ ತಂದೆ ಸಿದ್ರಾಮಪ್ಪ ಅಸ್ಕಿ ಸಾ|| ಭಂಟನೂರ ತಾ|| ತಾಳಿಕೋಟಿ ಜಿ|| ವಿಜಯಪೂರ ಇವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೇಂದರೆ ತಾವು ರಮೇಶ, ಮಹಾದೇವಪ್ಪ, ಜಗದೀಶ, ವಿರುಪಾಕ್ಷ, ಸಂತೋಷ, ಶಿವಕುಮಾರ ಅಂತಾ ಆರು ಜನ ಅಣ್ಣ ತಮ್ಮಂದಿರಿದ್ದು ನಮಗೆ ರೇಣುಕಾ ಅಂತಾ ಒಬ್ಬ ತಂಗಿ ಇರುತ್ತಾಳೆ.  ಹೀಗಿದ್ದು ನಮ್ಮೂರಿನ ಶ್ರೀ ಜಟ್ಟಿಂಗೇಶ್ವರ ದೇವರ ಪಲ್ಲಕ್ಕಿಯನ್ನು ನಮ್ಮೂರಿನ ಜನರಾದ ಭೀಮಣ್ಣ ತಂದೆ ನಡಿಗೇರಪ್ಪ ಆಲ್ಯಾಳ, ಬಂಡೆಪ್ಪ ತಂದೆ ಬಸಪ್ಪ ಮೈಲಾಸೂರ, ನಿಂಗಪ್ಪ ತಂದೆ ಮಲ್ಲಪ್ಪ ದೊಡ್ಡಮನಿಮ ವಿಶ್ವನಾಥ ತಂದೆ ಹಣಮಗೌಡ ಹೆಗರೆಡ್ಡಿ, ರಾಜು ತಂದೆ ಶಂಕ್ರಪ್ಪ ಶಿವಸಿಂಪಿಗೇರ ಮತ್ತು ಇತರರು ಸೇರಿ ಕೃಷ್ಣಾ ನದಿಗೆ ಪೂಜೆ ಮಾಡಿಕೊಂಡು ಬರಲು ದಿನಾಂಕ:02/11/2020 ರಂದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ನಮ್ಮೂರಿನಿಂದ ಪಲ್ಲಕ್ಕಿಯನ್ನು ತೆಗೆದುಕೊಂಡು ಜುಮಾಲಪೂರ ಸೀಮಾಂತರದಲ್ಲಿರುವ ಕೃಷ್ಣಾ ನದಿಗೆ ಹೋಗಿದ್ದರು ಅವರ ಸಂಗಡ ನಮ್ಮ ಸ್ವಂತ ತಮ್ಮನಾದ ಶಿವಕುಮಾರ ಅಸ್ಕಿ ವ|| 19ವರ್ಷ ಈತನು ಸಹ ಹೋಗಿದ್ದನು. ದಿನಾಂಕ:03/11/2020 ರಂದು ಮುಂಜಾನೆ 11:30 ಗಂಟೆಯ ಸುಮಾರಿಗೆ ನಮ್ಮೂರಿನ ವಿಶ್ವನಾಥ ತಂದೆ ಹಣಮಗೌಡ ಹೆಗರೆಡ್ಡಿ ಇವರು ನಮಗೆ ಪೋನ್ ಮಾಡಿ ತಿಳಿಸಿದ್ದು ಏನೆಂದರೆ ತಾನು ರಾಜು ತಂದೆ ಶಂಕ್ರಪ್ಪ ಶಿವಸಿಂಪಿಗೇರ, ಹಾಗೂ ನಿಮ್ಮ ತಮ್ಮನಾದ ಶಿವಕುಮಾರ ಕೂಡಿಕೊಂಡು ಜುಮಾಲಪೂರ ಸೀಮಾಂತರದಲ್ಲಿರುವ ಕೃಷ್ಣಾ ನದಿಗೆ ಮುಂಜಾನೆ 11:00 ಗಂಟೆಯ ಸುಮಾರಿಗೆ ಸ್ನಾನ ಮಾಡಲು ಹೋಗಿ ಈಜಾಡುತ್ತಿದ್ದಾಗ ನಿಮ್ಮ ತಮ್ಮನು ನದಿಯಲ್ಲಿಇ ಮುಳುಗಿದ್ದು ಒಮ್ಮೇಲೆ ಮುಳುಗಿದಾಗ ನಾವು ಗಾಬರಿಗೊಂಡು ನನ್ನ ಜೊತೆ ಇದ್ದ ರಾಜು ಈತನು ನಿಮ್ಮ ತಮ್ಮನಿಗೆ ಕಾಪಾಡಲು ಪ್ರಯತ್ನಿಸಿದ್ದು ಆದರೆೆ ಆಗಲಿಲ್ಲ ನಿಮ್ಮ ತಮ್ಮನು ನದಿಯಲ್ಲಿ ಮುಳುಗುವುದು ತೆಲುವುದು ಮಾಡಿ ಮುಳುಗಿರುತ್ತಾನೆ ಅಂತಾ ಪೋನ್ ಮೂಲಕ ತಿಳಿಸಿದಾಗ ನಾವು ಊರಿಂದ ನಮ್ಮ ಅಣ್ಣ ತಮ್ಮಂದಿರು ಮತ್ತು ನಮ್ಮವರಾದ ಅಶೋಕಾ ತಂದೆ ಶಾಸಪ್ಪ ರತ್ನಗಿರಿ, ದೆವೇಂದ್ರ ತಂದೆ ಜಟ್ಟೆಪ್ಪ ತಳ್ಳಳ್ಳಿ, ಕೃಷ್ಣಾ ತಂದೆ ಮಲ್ಲಪ್ಪ ತಳ್ಳಳ್ಳಿ ಕೂಡಿಕೊಂಡು ಜುಮಾಲಪೂರ ಗ್ರಾಮದ ಪಕ್ಕದಲ್ಲಿರುವ ಕೃಷ್ಣಾ ನದಿಗೆ ದಿನಾಂಕ:03/11/2020 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ಬಂದು ಕೃಷ್ಣಾ ನದಿಯಲ್ಲಿ ನಾವುಗಳು ಹುಡುಕಾಡಿದ್ದು ನಮ್ಮ ತಮ್ಮನು ಸಿಗಲಿಲ್ಲ ನಂತರ ಸುರಪೂರ ದಿಂದ ಅಗ್ನಿ ಶಾಮಕ ಪೊಲೀಸ್ ಸಿಬ್ಬಂದಿಯವರು ಬಂದು ನದಿಯಲ್ಲಿ ಬೋಟ್ ಮೂಲಕ ಹುಡುಕಾಡಿದ್ದು ಹಾಗೂ ಅಂತರಗಂಗಿಯನ್ನು ಬಿಟ್ಟು ಹುಡುಕಾಡಿದ್ದು ನಮ್ಮ ತಮ್ಮನು ಪತ್ತೆಯಾಗಲಿಲ್ಲ. ಮತ್ತು ಹುಣಸಗಿ ತಹಸೀಲ್ದಾರರು ಬಂದು ಹೋಗಿರುತ್ತಾರೆ. ಹೀಗೆ ಅಂದಿನಿಂದ ಇಲ್ಲಿಯವರೆಗೆ ನಾವುಗಳು ನಮ್ಮ ತಮ್ಮನನ್ನು ಕೃಷ್ಣಾ ನದಿಯಲ್ಲಿ ಹುಡುಕಾಡುತ್ತಿದ್ದಾಗ ಇಂದು ದಿನಾಂಕ:05/11/2020 ರಂದು ಮುಂಜಾನೆ 7:30 ಗಂಟೆಯ ಸುಮಾರಿಗೆ ಕೃಷ್ಣಾ ನದಿಯಲ್ಲಿ ನಮ್ಮ ತಮ್ಮನ ಮೃತ ದೇಹವು ಬೋರಲು ಬಿದ್ದು ಸ್ಥೀತಿಯಲ್ಲಿ ತೆಲಿಕೊಂಡು ಸಿಕ್ಕಿದ್ದು ನಾವು ಮೃತ ದೇಹವನ್ನು ನೋಡಿ ಗುರುತಿಸಿದ್ದು ಅದು ನಮ್ಮ ತಮ್ಮನಾದ ಶಿವಕುಮಾರ ತಂದೆ ಸಿದ್ರಾಮಪ್ಪ ಅಸ್ಕಿ ವ|| 19ವರ್ಷ ಸಾ|| ಭಂಟನೂರ ಈತನ ಮೃತ ದೇಹವಾಗಿದ್ದು ಇರುತ್ತದೆ. ನಮ್ಮ ತಮ್ಮನು ಶ್ರೀ ಜಟ್ಟಿಂಗೇಶ್ವರ ಪಲ್ಲಕ್ಕಿಯೊಂದಿಗೆ ಗಂಗಾ ಸ್ನಾನಕ್ಕೆ ಜುಮಾಪೂರ ಹತ್ತಿರದಲ್ಲಿರುವ ಕೃಷ್ಣಾ ನದಿಗೆ ಹೋಗಿ ದಿನಾಂಕ:03/11/2020 ರಂದು ಮುಂಜಾನೆಯ 11:00 ಗಂಟೆಯ ಸುಮಾರಿಗೆ ನದಿಯಲ್ಲಿ ಈಜಾಡುತ್ತಿದ್ದಾಗ ಆಕಸ್ಮಿಕವಾಗಿ ನದಿಯಲ್ಲಿ ಮುಳಗಿ ಮೃತ ಪಟ್ಟಿದ್ದು ನಮ್ಮ ತಮ್ಮನ ಸಾವಿನ ವಿಷಯದಲ್ಲಿ ಯಾರ ಮೇಲು ಸಂಶಯಾಸ್ಪದ ದೂರು ಇರುವುದಿಲ್ಲ. ನಮ್ಮ ತಮ್ಮನು ದಿನಾಂಕ:03/11/2020 ರ 11:00 ಎ.ಎಮ್ ದಿಂದ ದಿನಾಂಕ:05/11/2020 ರ 7:30 ಎ.ಎಮ್ ಅವಧಿಯಲ್ಲಿ ಮೃತ ಪಟ್ಟಿದ್ದು ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂ.17/2020 ಕಲಂ: 174 ಸಿಆರ್ಪಿಸಿ ಅಡಿಯಲ್ಲಿ ಯುಡಿಆರ್ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.  


 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!