ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/11/2020

By blogger on ಗುರುವಾರ, ನವೆಂಬರ್ 5, 2020



                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/11/2020 

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 123/2020 279, 338, 304(ಎ), ಐಪಿಸಿ ಸಂ: 187 ಐಎಂವಿ ಯಾಕ್ಟ : ಇಂದು ದಿನಾಂಕ: 04/11/2020 ರಂದು 06.20 ಪಿಎಂ ಕ್ಕೆ ಅಜರ್ಿ ದಾರ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ ನಮ್ಮ ಅಕ್ಕ ಗಂಗಮ್ಮ ಗಂಡ ಬೀಮಣ್ಣ ಮೇತ್ರಿ ವಯ|| 49 ಉ|| ಕೂಲಿ ಜಾತಿ|| ಬೇಡರ ಸಾ|| ಚಂದಾಪೂರ ಇವರು ತಮ್ಮ ಮಗಳಾದ ಮಾಹೇದೆವಿ ಗಂಡ ಹುಲುಗಪ್ಪ ಮೋಮ್ಮಗಳಾದ ಲಕ್ಷ್ಮಿ ತಂದೆ ಹುಲುಗಪ್ಪ ಇವರೊಂದಿಗೆ ವಾಸವಾಗಿದ್ದು ಅವಳ ಮಗ ಮಾನಪ್ಪ ತಂದೆ ಬೀಮಣ್ಣ ಮೇಸ್ತ್ರಿ ಇವನು ಹೆಂಡತಿ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿರುತ್ತಾನೆ. ಹಿಗಿದ್ದು ದಿನಾಂಕ:04-11-2020 ರಂದು ಬೆಳಿಗ್ಗೆ 11 ಎ.ಎಮ್ ಸುಮಾರಿಗೆ  ಗಂಗಮ್ಮ ಇವಳು ಮೊಮ್ಮಗಳಾದ ಲಕ್ಷ್ಮಿ ಇವಳೋಂದಿಗೆ ಗೋಗಿಗೆ ಸಂತೆ ಮಾಡಿಕೊಂಡು ಬರುವುದಕ್ಕೆ ಹೋಗಿದ್ದಳು  ಸಾಯಂಕಾಲ 4-20 ಪಿ.ಎಮ್ ಸುಮಾರಿಗೆ ನಮ್ಮೂರಿನ ಪರಶುರಾಮ ತಂದೆ ಕರಿಬಸ್ಸಪ್ಪ ಹವಲ್ದಾರ ಇವರು ಫೋನ್ ಮಾಡಿ ವಿಷಯ ತಿಳಿಸಿದ್ದೆನೆಂದರೆ ತಾನು ಮತ್ತು ತಿರುಪತಿ ತಂದೆ ಯಲ್ಲಪ್ಪ ಮೇಸ್ತ್ರಿ ಇಬ್ಬರು ಗೋಗಿ ಸಂತೆಯಿಂದ ಮರಳಿ ಚಂದಾಪೂರಕ್ಕೆ ಬರುತ್ತಿರುವಾಗ ನಮಗಿತಂತಲು ಸ್ವಲ್ಪ ಮುಂದೆ ಟಂ ಟಂ ಆಟೋ ಹೋಗುತ್ತಿದ್ದು ಅದರಲ್ಲಿ 3 ರಿಂದ 4 ಜನ ಇದ್ದರು ಶಹಾಪೂರ ಸಿಂದಗಿ ಮುಖ್ಯ ರಸ್ತೆಯ ಗಂಗಾ ರೈಸ್ ಮೀಲ್ ದಾಟಿ ಅಂದಾಜು 200 ಮೀಟರ ಅಂತರದಲ್ಲಿ ನಮ್ಮ ಮುಂದೆ ಹೂಗುತ್ತಿದ್ದ ಆಟೋ ಟಂ ಟಂ ನೇದ್ದರ ಚಾಲಕ ತನ್ನ ಆಟೋವನ್ನು ಅತಿವೇಗ ಆಲಕ್ಷತನದಿಂದ ನಡೆಸುತ್ತಾ ರೋಡಿನ ತೆಗ್ಗಿಗೆ ಕಟ್ಟ ಹೋಡೆದು ಟಂ ಟಂ ಆಟೋ ಮಲ್ಟಿ ಮಾಡಿದ್ದು ನೋಡಿ ನಾನು ಮತ್ತು ತಿರುಪತಿ ಮೇಸ್ತ್ರಿ ಹೊಡಿ ಹೋಗಿ ನೋಡಾಲಾಗಿ ಸದರಿ ಟಂ ಟಂ ಆಟೋದಲ್ಲಿ ನಿಮ್ಮ ಅಕ್ಕನವರಾದ ಗಂಗಮ್ಮ ಗಂಡ ಭೀಮಣ್ಣ ಮೇಸ್ತ್ರಿ ಇವರಿಗೆ ತೆಲೆ ಹಿಂಬಾಗದಲ್ಲಿ  ಭಾರಿ ರಕ್ತ ಗಾಯವಾಗಿದ್ದು ಹಾಗೂ ಲಕ್ಷ್ಮಿ ಇವಳಿಗೆ ಬಲಗಾಲಿಗೆ ತೋಡೆಯ ಹತ್ತಿರ ಕಾಲು ಮುರಿದು ಗುಪ್ತಗಾಯವಾಗಿದ್ದು ತೆಲೆಗೆ ರಕ್ತಗಾಯ ವಾಗಿರುತ್ತದೆ ಆಗ ಅಂದಾಜು ಸುಮಾರು 4-15 ಪಿ.ಎಮ್ ಆಗಿರುತ್ತದೆ ಆಟೋದಲ್ಲಿ ಇನ್ನು ಒಬ್ಬ ಗಂಡಸು ಮತ್ತು ಒಬ್ಬಳು ಹೆಣ್ಣುಮಗಳಿದ್ದಳು ಅವರು ಎದ್ದು ಹೋದರು ಆಟೋ ಟಂ ಟಂ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ ಹೆಸರು ವಿಜಯ @ ವಿಜಯಕುಮಾರ ತಂದೆ ರೂಪ್ಲಾ ಜಾಧವ ಸಾ|| ಕಾಳುನಾಯಕ ತಾಂಡಾ ಅಂತಾ ತಿಳಿಸಿದ್ದು ಜನರು ಬರುವುದನ್ನು ನೋಡಿ ವಿಜಯ ಈತನು ಆಟೋ ಟಂ ಟಂ ಬಿಟ್ಟು ಹೋಡಿ ಹೊಗಿರುತ್ತಾನೆ ಅಂಬುಲೆನ್ಸ ವಾಹನದಲ್ಲಿ ಗಂಗಮ್ಮ ಗಂಡ ಭೀಮಣ್ಣ ಮತ್ತು ಲಕ್ಷ್ಮಿ ಇವರಿಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿಸಿದರು ಆಗ ನಾನು ಮತ್ತು ನಮ್ಮೂರಿನ ಹಣಮಂತ್ರಾಯ ತಂದೆ ಧರ್ಮಣ್ಣ ಮೇಟಿ , ಶರಣಗೌಡ ತಂದೆ ಮಲ್ಲೆಶೇಪ್ಪಗೌಡ ಪೊಲೀಸ್ ಪಾಟೀಲ್ ಚಂದಾಪೂರ ಎಲ್ಲರೂ ಕೂಡಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ಅಕ್ಕ ಗಂಗಮ್ಮ ಇವಳು ತನಗಾದ ಗಾಯದ ಪೆಟ್ಟಿನಿಂದ  05-05 ಪಿ.ಎಮ್ ಸುಮಾರಿಗೆ ಮೃತಪಟ್ಟಿದ್ದಾರೆಂದು  ತಿಳಿದು ಬಂತು ಲಕ್ಷ್ಮಿ ಇವಳಿಗೆ ಭಾರಿ ಗಾಯವಾಗಿದ್ದರಿಂದ ಮುಂದೆ ಕಳುಹಿಸಿದ್ದು ಇರುತ್ತದೆ ಕಾರಣ ಆಟೋ ಟಂ ಟಂ ನಂಬರ : ಕೆ.ಎ -33 ಎ- 3746 ನೇದ್ದರ ಚಾಲಕ ವಿಜಯ @ ವಿಜಯಕುಮಾರ ತಂದೆ ರೂಪ್ಲಾ ಜಾಧವ ಸಾ|| ಕಾಳುನಾಯಕ ತಂಡಾ ಉಕ್ಕನಾಳ ಈತನ ಮೇಲೆ ಕಾನೂನು ಕ್ರಮ ಜರುಗುಸಬೇಕೆಂದು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ 10.15 ಪಿಎಂ ಕ್ಕೆ ಮರಳಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂ: 123/2020 ಕಲಂ: 279, 338, 304(ಎ), ಐಪಿಸಿ ಸಂ: 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 45/2020  ಕಲಂ 279, 338 ಐಪಿಸಿ : ಇಂದು ದಿನಾಂಕ 04/11/2020 ರಂದು  9 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ  ಮುಖ್ಯ ರಸ್ತೆಯ ಮೇಲೆ ಬರುವ ಮುದ್ನಾಳ ಗ್ರಾಮ ಕ್ರಾಸದಲ್ಲಿ  ಈ ಕೇಸಿನಲ್ಲಿನ ಗಾಯಾಳು ತಮ್ಮ ಮೋಟಾರು ಸೈಕಲ್ ನಂ. ಕೆಎ-33, ಯು-8698 ನೇದ್ದರ ಮೇಲೆ ಮುದ್ನಾಳ ಗ್ರಾಮದ ಕಡೆಯಿಂದ ಯಾದಗಿರಿ ಬೈಪಾಸ್ ಹತ್ತಿಕುಣಿ ರಸ್ತೆ ಕಡೆಗೆ ಬರುತ್ತಿದ್ದಾಗ ಅದೇ ಸಮಯಕ್ಕೆ ಒಂದು ಕ್ರೂಜರ್ ಜೀಪ್ ನಂಬರ ಎಮ್.ಎಚ್-13, ಸಿಕೆ-0482 ನೆದ್ದರ ಚಾಲಕನು ಯಾದಗಿರಿ ಕಡೆಯಿಂದ ವಾಡಿ ಕಡೆಗೆ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೆ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೆದ್ದಕ್ಕೆ  ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ  ಮೋಟಾರು ಸೈಕಲ್ ಸವಾರನಿಗೆ  ತಲೆಗೆ, ಬಲಗಾಲಿನ ಮೊಣಕಾಲಿಗೆ, ತೊಡೆಗೆ, ಬಲಭುಜಕ್ಕೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು  ಕ್ರೂಜರ್ ಚಾಲಕನ ಮೇಲೆ  ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ನೀಡಿದ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 45/2020  ಕಲಂ 279,  338 ಐಪಿಸಿ  ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  

           

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 273/2020.ಕಲಂಃ 78(3) ಕೆ.ಪಿ.ಆ್ಯಕ್ಟ : ಇಂದು ದಿನಾಂಕ 04/11/2020 ರಂದು 21-30 ಗಂಟೆಗೆ ಸ|| ತ|| ಪಿಯರ್ಾದಿ ಚಂದ್ರಕಾಂತ ಪಿ.ಎಸ್.ಐ.(ಕಾ.ಸೂ) ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ 04/11/2020 ರಂದು 19-15 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂರ, ಗಂಗಾನಗರದ ಬಲಭೀಮೇಶ್ವರ ಕಟ್ಟಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ಸದರಿ ಅಪರಾದವು ಅಸಂಜ್ಞಯ ಅಪರಾದವಾಗಿದ್ದರಿಂದ ಠಾಣೆಯ ಎನ್ ಸಿ. 81/2020 ನ್ನೇದ್ದನ್ನು ದಾಖಲಿಸಿಕೊಂಡು ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರ ವ್ಯವಹಾರ ಮಾಡಿ 19-35 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಬಾಬು ಹೆಚ್.ಸಿ.162. ಗೋಕುಲ್ ಪಿ.ಸಿ.172. ಬಾಗಣ್ಣ ಪಿ.ಸಿ. 194. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಬಾಬು ಹೆಚ್.ಸಿ.162. ರವರಿಗೆ 19-40 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 19-45 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು. ಮೇಲಾಧಿಕಾರಿಯವರ  ಮಾರ್ಗದರ್ಶನದಲ್ಲಿ. ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ನಡೆದುಕೊಂಡು ದಾಳಿ ಕುರಿತು ಠಾಣೆಯಿಂದ 19-50 ಗಂಟೆಗೆ ಹೊರಟೇವು. ನೇರವಾಗಿ ಶಹಾಪೂರ ಗಂಗಾನಗರದ ಬಲಭೀಮೇಶ್ವರ ಕಟ್ಟಿಯ ಹತ್ತಿರ 20-00 ಗಂಟೆಗೆ ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಬಲಭೀಮೇಶ್ವರ ಕಟ್ಟೆಯ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ, ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 20-05 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ಭೀಮರಾಯ ತಂದೆ ಸಾಯಿಬಣ್ಣ ಹಳಿಸಗರ ವ|| 24 ಜಾ|| ಕಬ್ಬಲಿಗ ಉ|| ಮಟಕಾಬರೆದುಕೊಳ್ಳುವದು ಸಾ|| ಗಂಗಾನಗರ, ಶಹಾಪೂರ ಅಂತ ಹೇಳಿದನು. ಈತನ ಹತ್ತಿರ ನಗದು ಹಣ 590-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಮತ್ತು 2 ಮಟಕಾ ಚೀಟಿಗಳು, ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 590-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 20-10 ಗಂಟೆಯಿಂದ 21-10 ಗಂಟೆಯವರೆಗೆ ರಸ್ತೆಯ ಲೈಟಿನ ಕಂಬದ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 21-15 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ, ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ 21-30 ಗಂಟೆಗೆ ವರದಿ  ಸಲ್ಲಿಸಿದ್ದರ ಸಾರಾಂಶದ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 273/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಕೋಡೇಕಲ್ ಪೊಲೀಸ ಠಾಣೆ ಗುನ್ನೆ ನಂ: 84/2020 ಕಲಂ: 78(3) ಕೆ.ಪಿ ಆಕ್ಟ್ : ದಿನಾಂಕ:04/11/2020 ರಂದು 7:45 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆ ಇವರು ನೀಡಿದ ಮಾನ್ಯ ನ್ಯಾಯಾಲಯದ ಅನುಮತಿ ಪತ್ರ ಮತ್ತು ಜ್ಞಾಪನ ಪತ್ರದ ಸಾರಾಂಶ ಏನೆಂದರೆ ದಿನಾಂಕ:04.11.2020 ರಂದು 7:00 ಪಿ.ಎಮ್.ಕ್ಕೆ ತಾವು ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಸಿಬ್ಬಂದಿಯಾದ ಸಣ್ಣೆಕೆಪ್ಪ ಹೆಚ್ಸಿ-27 ರವರು ತಿಳಿಸಿದ್ದುಎನೇಂದರೆ ಕಕ್ಕೇರಾ ಗ್ರಾಮದಲ್ಲಿನ ಶ್ರೀ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಬಾಂಬೆ ಮಟಕಾ 1ರೂಪಾಯಿಗೆ 80ರೂಪಾಯಿ ಕೊಡುತ್ತೇವೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ತಿಳಿಸಿದ್ದು ಇರುತ್ತದೆ. ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:84/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 10:50 ಪಿ.ಎಮ್ಕ್ಕೆ ಮರಳಿ ಠಾಣೆಗೆ ಬಂದು ಎರಡು ಬಾಲ್ ಪೆನನ್ನು, ಅಂಕಿ ಸಂಖ್ಯೆಗಳನ್ನು ಬರೆದ ಎರಡು ಮಟಕಾ ಚೀಟಿ ಹಾಗೂ ನಗದು ಹಣ 2360/-ರೂ ಗಳನ್ನು ಇಬ್ಬರನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. 


ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ: 75/2020 ಕಲಂ: 87 ಕೆ.ಪಿ ಯಾಕ್ಟ್ : ದಿನಾಂಕ: 04/11/2020 ರಂದು 7:30 ಪಿ.ಎಂ. ಕ್ಕೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ: 04/11/2020 ರಂದು 7:00 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಮೇಲಿನಗಡ್ಡಿ ಸೀಮಾಂತರದ ಗೊಪಾಲ ಕುಲಕಣರ್ಿ ರವರ ಹೊಲದ ಬದುವಿನ ಹತ್ತಿರ ಇರುವ ಹುಣಸಗಿ ಗಿಡದ ಕೆಳಗೆ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಿ ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ನೀಡುವಂತೆ ಪತ್ರ ಬರೆದು ವಿನಂತಿಸಿಕೊಂಡಿದ್ದು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರು ಸದರಿ ಇಸ್ಪೀಟ್ ಜೂಜಾಟ ಆಡುವವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಪರವಾನಿಗೆ ನೀಡಿದ್ದು ಕಾರಣ ನಿಮಗೆ ಎಪ್ ಐ ಆರ್ ದಾಖಲಿಸಲು ಸೂಚಿಸಿಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 75/2020 ಕಲಂ 87 ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 

        ನಂತರ ಮಾನ್ಯ ಪಿ.ಎಸ್.ಐ ಸಾಹೇಬರು ಮರಳಿ ಠಾಣೆಗೆ ಬಂದು 11 ಜನ ಆರೋಪಿತರು ನಗದು ಹಣ 18050/- ರೂ, 52 ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ. 

ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 

 1) ಈಶಯ್ಯ ತಂದೆ ಸಂಗಯ್ಯ ಹಿರೇಮಠ ವ:58 ವರ್ಷ ಸಾ:ಹಿರೇಜಾವೂರ ತಾ:ಲಿಂಗಸೂರ 

2) ರವಿ ತಂದೆ ಛತ್ರಪ್ಪ ಜಾದವ ವ:38 ವರ್ಷ ಸಾ:ಜಂಗಿರಾಂಪೂರ ತಾಂಡಾ 

3) ಬಸವರಾಜ ತಂದೆ ಹಣಮಂತಪ್ಪ ತಳವಾರ ವ:39 ವರ್ಷ ಸಾ:ಆನೇಹೋಸುರ 

4) ಆನಂದ ತಂದೆ ಬಸವರಾಜ ತುಪ್ಪದೂರ ವ:28 ವರ್ಷ ಸಾ:ಆನೇಹೊಸೂರ 

5) ಮೈಹಿಬೂಬಸಾಬ ತಂದೆ ಹುಸೇನಸಾಬ ಬಾಗವಾನ ವ:32 ವರ್ಷ ಸಾ:ಆನೆಹೊಸೂರ 

6). ಗ್ಯಾನನಗೌಡ ತಂದೆ ಗದ್ದೆನಗೌಡ ವ:50 ವರ್ಷ ಸಾ:ಈಚನಾಳ  

7) ಮಲ್ಲೇಶನಾಯಕ ತಂದೆ ಹರಿಲಾಲನಾಯಕ ಲಂಬಾಣಿ ವ:42 ವರ್ಷ ಸಾ:ಜಂಗಿರಾಂಪೂರ ತಾಂಡಾ 

8)ಹಣಮಂತ ತಂದೆ ಯಮನಪ್ಪ ಈಚನಾಳ ವ:50 ವರ್ಷ ಸಾ:ಈಚನಾಳ 

9) ಶಖರಪ್ಪ ತಂದೆ ಸಂಗಪ್ಪ ಕುಂಬಾರ ವ:43 ವರ್ಷ ಸಾ:ಹಿರೇಜಾವೂರ 

10) ಗುರುಪಾದಪ್ಪ ತಂದೆ ಮಲ್ಲಪ್ಪ ಮಡಿವಾಳರ ವ:36 ವರ್ಷ ಸಾ:ಹಿರೇಜಾವೂರ 

11) ಗದ್ದೆಣ್ಣ ತಂದೆ ಗದ್ದೆಪ್ಪ ಗಡ್ಡಿ ವ:30 ವರ್ಷ ಸಾ:ಸುಣಕಲ್ಲ ತಾ:ಹುಣಸಗಿ

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!