ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/11/2020

By blogger on ಗುರುವಾರ, ನವೆಂಬರ್ 5, 2020

 


                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/11/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 97/2020 ಕಲಂ. 143, 147, 323, 324, 307, 504, 506 ಸಂ.149 ಐಪಿಸಿ: ಇಂದು ದಿನಾಂಕ. 03/11/2020 ರಂದು 7-00 ಪಿ,ಎಮ್ ಕ್ಕೆ ಪಿಯರ್ಾದಿದಾರರಾದ ಶಿವಾರೆಡ್ಡಿ ತಂದೆ ಮಲ್ಲಣ್ಣ ನಾಯಕ ಮರಗಯ್ಯನೊರ ವ;30 ಜಾ; ಬೇಡರು ಉ; ಕೆ.ಎಸ್.ಆರ್.ಟಿ.ಸಿ ಚಾಲಕ & ನಿವರ್ಾಹಕ ಸಾ; ಹಳಿಗೇರಾ ತಾ; ಯಾದಗಿರಿ ಹಾ.ವ; ಚಿರಂಜೀವಿ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾನು ಮತು ನನ್ನ ಹೆಂಡತಿ ರೇಖಾ ಗಂಡ ಶಿವಾರೆಡ್ಡಿ ಮತ್ತು ನನ್ನ ಮಗಳು ರಕ್ಷಾ ಬಿಂದುಪ್ರಿಯಾ ಮೂರು ಜನರು ಯಾದಗಿರಿಯ ಚಿರಂಜೀವಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇವೆ. ನಮ್ಮ ಮದುವೆಯಾಗಿ 3 ವರ್ಷಗಳಾಗಿದ್ದು ನನ್ನ ಹೆಂಡತಿ ರೇಖಾ ಇವಳು ಮದುವೆಯಾದ ಹೊಸತರಲ್ಲಿ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ನಾವು ಸುಖವಾಗಿದ್ದೆವು. ಹಿಗ್ಗೆ ಒಂದೂವರೆ ವರ್ಷದ ಹಿಂದೆ ನನ್ನ ಹೆಂಡತಿ ರೇಖಾ ಇವಳಿಗೆ ಸರಕಾರಿ ಪ್ರಾಥಾಮಿಕ ಶಾಲಾ ಶಿಕ್ಷಕಿ  ಅಂತಾ ತೆಲಂಗಾಣ ರಾಜ್ಯದಲ್ಲಿ ನೌಕರಿ ಆಗಿದ್ದು ನೌಕರಿ ಆದಾಗಿನಿಂದಲೂ ನನ್ನ ಹೆಂಡತಿ ರೇಖಾ ಇವಳು, ನಾನು ನನ್ನ ಇಷ್ಟ ಬಂದಂತೆ ಇರುತ್ತೇನೆ. ನನಗೆ ನೀನೇನು ಕೇಳುವಂತಿಲ್ಲ ಅಂತಾ ಮನೆಯಲ್ಲಿ ನನ್ನೊಂದಿಗೆ ಕಿರಿಕಿರಿ ಮಾಡುತ್ತಾ ಜಗಳ ಮಾಡುತ್ತಿದ್ದಳು. ಹಿಗೀದ್ದು ನಿನ್ನೆ ದಿನಾಂಕ. 02/11/2020 ರಂದು 7-50 ಎಎಮ್ ಸುಮಾರಿಗೆ ನಾನು ಪ್ರತಿ ನಿತ್ಯದಂತೆ ನನ್ನ ಕರ್ತವ್ಯಕ್ಕೆ ಹೋಗುತ್ತಿರುವಾಗ ನನ್ನ ಹೆಂಡತಿಯ ತಮ್ಮ ಅಂದರೆ ನನ್ನ ಅಳಿಯನಾದ ಮಹೇಶ ತಂದೆ ಕೃಷ್ಣಪ್ಪ ಸಾ; ಕೃಷ್ಣ, ಮಲ್ಲಿನಾಥ ತಂದೆ ಮರೆಪ್ಪ, ಅನಿತಾ ಗಂಡ ಮಲ್ಲಿನಾಥ, ದೇವಿಂದ್ರ ತಂದೆ ಮರೆಪ್ಪ, ಈಶಪ್ಪ ತಂದೆ ಮರೆಪ್ಪ,  ಸುರೇಶ ಚಂದಾಪೂರ,  ಜ್ಯೋತಿ ಗಂಡ ಸುರೇಶ ಸಾ; ಎಲ್ಲರೂ ಹಳಿಗೇರಾ ತಾ; ಜಿ; ಯಾದಗಿರಿ ರವರು ಎಲ್ಲರೂ ನಮ್ಮ ಮನೆಗೆ ಬಂದು ನನ್ನ ಅಳಿಯ 1) ಮಹೇಶ ಈತನು ನನಗೆ, ನೀನು ನಮ್ಮ ಅಕ್ಕನಿಗೆ ಅಲ್ಲಿ-ಇಲ್ಲಿ ಹೋಗುತ್ತೀಯಾ ಅಂತಾ ದಿನಾಲು ತೊಂದರೆ ಕೊಡುತ್ತಿರುವೆ ಅಂತೆ ಇನ್ನು ಮುಂದೆ ನೀನು ಅವಳಿಗೆ ಏನು ಕೇಳುವಂತಿಲ್ಲ. ಅವಳು ಅವಳ ಇಷ್ಟ ಬಂದಂತೆ ಇರುತ್ತಾಳೆ ಅವಳ ಸಂಬಂಳ ನಿನಗೆ ಕೊಡುವುದಿಲ್ಲ ಅಂತಾ ಅಂದಾಗ ನಾನು, ಅವಳ ಗಂಡನಿದ್ದು ನಾನು ಕೇಳದೇ ಅವಳಿಗೆ ಬೇರೆ ಯಾರು ಕೇಳಬೇಕು ಅವಳ ಇಷ್ಟದಂತೆ ಇರುವುದಾದರೆ ಸಂಸಾರ ಹೇಗೆ ನಡೆಯಬೇಕು ಅಂತಾ ಅಂದಾಗ ಮಹೇಶ ಮತ್ತು ನನ್ನ ಹೆಂಡತಿ 2) ರೇಖಾ ಗಂಡ ಶಿವಾರೆಡ್ಡಿ ಹಾಗೂ ಮೇಲ್ಕಂಡ ಎಲ್ಲರೂ ಸೇರಿ ಈ ಸೂಳೇ ಮಗ ಸುಧಾರಣೆ ಆಗುವುದಿಲ್ಲ ಇವನಿಗೆ ಜೀವ ಸಹಿತ ಹೊಡೆಯಬೇಕು ಅಂತಾ ಬೈದಾಡುತ್ತಾ ಅದರಲ್ಲಿ ಮಹೇಶ ಈತನು ನನಗೆ ಕೆಳಗೆ ಕೆಡವಿ ಕೊಲೆ ಮಾಡುವ ಉದ್ದೇಶದಿಂದ ಒಂದು ಹಿಡಿಗಾತ್ರದ ಕಲ್ಲಿನಿಂದ ನನ್ನ ಕುತ್ತಿಗೆಯ ಮೇಲೆ ಹೊಡೆಯುವಷ್ಠರಲ್ಲಿ ನಾನು ತಪ್ಪಿಸಿಕೊಂಡಿದ್ದು ಆಗ ಆ ಕಲ್ಲಿನ ಏಟು ನನ್ನ ಮೂಗಿಗೆ ಬಡೆದು ರಕ್ತಗಾಯವಾಗಿದ್ದು ಇರುತ್ತದೆ. ನಂತರ ನನ್ನ ಹೆಂಡತಿ ರೇಖಾ ಇವಳು ಇವನದ್ದು ದಿನಾಲು ಇದೇ ರಗಳೇ ಆಗಿದೆ ಇವನಿಗೆ ಜೀವ ಸಹಿತ ಬಿಡುವುದು ಬೇಡ ಅಂತಾ ಕಾಲಿನಿಂದ ಹೊಟ್ಟೆಯ ಮೇಲೆ ತುಳಿದು ಗುಪ್ತಗಾಯ ಮಾಡಿರುತ್ತಾಳೆ. ನಂತರ ಉಳಿದ 3) ಮಲ್ಲಿನಾಥ ತಂದೆ ಮರೆಪ್ಪ, 4) ಅನಿತಾ ಗಂಡ ಮಲ್ಲಿನಾಥ, 5) ದೇವಿಂದ್ರ ತಂದೆ ಮರೆಪ್ಪ ಇವರು ಬೆನ್ನಿಗೆ ಕಾಲಿನಿಂದ ಒದ್ದು, ಕೈಯಿಂದ ಹೊಡೆದರು ಮತ್ತು 6) ಈಶಪ್ಪ ತಂದೆ ಮರೆಪ್ಪ, 7) ಸುರೇಶ ಚಂದಾಪೂರ, 8) ಜ್ಯೋತಿ ಗಂಡ ಸುರೇಶ ಇವರು ನನ್ನ ಎದೆ, ಹೊಟ್ಟೆಗೆ ಕಾಲಿನಿಂದ ಒದ್ದು, ಕೈಯಿಂದ ಗುದ್ದಿರುತ್ತಾರೆ. ಜಗಳದ ಸಪ್ಪಳವನ್ನು ಕೇಳಿ ಮನೆಯ ಸುತ್ತಮುತ್ತಲಿನವರು ಬಂದಾಗ ಅವರು ನನಗೆ ಹೊಡೆಯುವುದನ್ನು ಬಿಟ್ಟು ಅಲ್ಲಿಂದ ಹೋಗುತ್ತಾ ಈ ಬಾರಿ ಬಚಾವಾಗಿದ್ದೀಯಾ ಇನ್ನೊಮ್ಮೆ ಸಿಕ್ಕಾಗ ನಿನಗೆ ಕೊಲೆ ಮಾಡುತ್ತೇವೆ ಅಂತಾ ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ನಂತರ ನಾನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಈ ವಿಷಯ ತಿಳಿದು ನನ್ನ ಅಣ್ಣ ಜಗದೀಶ ತಂದೆ ಮಲ್ಲಣ್ಣ ನಾಯಕ ಈತನು ಆಸ್ಪತ್ರೆಗೆ ಬಂದಾಗ ಈ ಘಟನೆಯ ಬಗ್ಗೆ ತಿಳಿಸಿದೆನು. ನಂತರ ನಾನು ನಿನ್ನೆ ದಿನಾಂಕ: 02.11.2020 ರಂದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾದಾಗ ವಿಚಾರಣೆ ಕುರಿತು ಬಂದಿದ್ದ ಯಾದಗಿರಿ ನಗರ ಪೊಲೀಸ್ ಠಾಣೆಯ ಪೊಲೀಸರ ಮುಂದೆ, ಸದ್ಯ ನಾನು ಯಾವುದೇ ಫಿರ್ಯಾದಿ ಹೇಳಿಕೆ ನೀಡುವುದಿಲ್ಲ ನನ್ನ ಮನೆಯಲ್ಲಿ ವಿಚಾರಿಸಿ ಫಿರ್ಯಾದಿ ದೂರು ನೀಡುತ್ತೆನೆ ಅಂತಾ ಹೇಳಿಕೆ ನೀಡಿದ್ದು ಇರುತ್ತದೆ. ಈಗ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ನನಗೆ ಕೊಲೆ ಮಾಡಲು ಪ್ರಯತ್ನಿಸಿ ಹೊಡೆಬಡೆ ಮಾಡಿ ರಕ್ತಗಾಯ ಹಾಗೂ ಗುಪ್ತಗಾಯಗೊಳಿಸಿದ ಮೇಲ್ಕಂಡ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ್ 97/2020 ಕಲಂ. 143, 147, 323, 324, 307, 504. 506 ಸಂ. 149 ಐಪಿಸಿ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 98/2020 ಕಲಂ 78(3) ಕೆ.ಪಿ ಎಕ್ಟ್: ಇಂದು ದಿನಾಂಕ; 03/11/2020 ರಂದು 7-40 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಸವೆನೆಂದರೆ, ಇಂದು ದಿನಾಂಕ.03/11/2020 ರಂದು 6-15 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಚಟಾನಗಲ್ಲಿ ಏರಿಯಾ ಬೀಟ್ ಸಿಬ್ಬಂದಿ ಶ್ರೀ ವಿನೋದ ಪಿ,ಸಿ 88 ರವರು ಬಂದು ಯಾದಗಿರಿ ನಗರದ ಚಟಾನಗಲ್ಲಿಯ ಜಾಮಾ ಮಜೀದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಬಂದಿರುತ್ತದೆ ಅಂತಾ ಮಾಹಿತಿ ನೀಡಿದ್ದು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 7-30 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 7-40 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.98/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

           

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 44/2020  ಕಲಂ 279, 338, 304(ಎ) ಐಪಿಸಿ :   ಇಂದು  ದಿನಾಂಕ 03/11/2020 ರಂದು 4 ಪಿ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮೇಲೆ ಬರುವ ಮುಂಡರಗಿ ಗ್ರಾಮದ ಬಾದಲ್ ಕಾಟನ್ ಮಿಲ್ ಹತ್ತಿರ ರಸ್ತೆಯ ಮೇಲೆ ಈ ಕೇಸಿನಲ್ಲಿ ಗಾಯಾಳು ಬಾಬು ಈತನು ತಮ್ಮ ಮೋಟಾರು ಸೈಕಲ್ ನಂ.ಕೆಎ-33, ಆರ್-3663 ನೇದ್ದರ ಮೇಲೆ ಈ ಕೇಸಿನಲ್ಲಿ ಮೃತಳಾದ ತನ್ನ ತಾಯಿ ಫಾತೀಮಾಬೇಗಂ ಇವರಿಗೆ ಕೂಡಿಸಿಕೊಂಡು ಆಶನಾಳ ಗ್ರಾಮದಿಂದ ಯಾದಗಿರಿ ಕಡೆಗೆ ಬರುವಾಗ ಅದೇ ಸಮಯಕ್ಕೆ ಮೋಟಾರು ಸೈಕಲ್ ಹಿಂದೆ ಬರುತ್ತಿದ್ದ  ಬುಲೇರೋ ಗೂಡ್ಸ್ ವಾಹನ ನಂ.ಕೆಎ-32, ಡಿ-7377 ನೇದ್ದರ ಚಾಲಕನು ಯಾದಗಿರಿ ಕಡೆಗೆ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಮೊಟಾರು ಸೈಕಲ್ ನೇದ್ದಕ್ಕೆ ಹಿಂದೆ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಅಪಘಾತವಾಗಿದ್ದು, ಈ ಅಪಘಾತದಲ್ಲಿ ಮೃತಳ ತಲೆಗೆ, ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿ ರಕ್ತ ಹೊರಬಂದಿದ್ದು, ಅಲ್ಲದೇ ಬಲಗೈ ಮುಂಗೈಗೆ ಭಾರೀ ರಕ್ತಗಾಯವಾಗಿ ಅಪಘಾತದಲ್ಲಾದ ಭಾರೀ ಗಾಯಗಳ ಭಾದೆಯಿಂದ ಘಟನಾ  ಸ್ತಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ  ಮೋಟಾರು ಸೈಕಲ್ ನಡೆಸುತ್ತಿದ್ದ ಬಾಬು ಈತನಿಗೆ ತಲೆಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 44/2020 ಕಲಂ 279, 338, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ


ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ: 140/2020, ಕಲಂ, 341,323,504.506. ಐ ಪಿ ಸಿ : ದಿನಾಂಕ: 03-11-2020 ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ:02-11-2020-2020 ರಂದು ಬೆಳಿಗ್ಗೆ 10-30 ಗಂಟೆಗೆ ಸಿದ್ದಪ್ಪ ಈತನ ಹತ್ತಿಯನ್ನು ಆಟೊದಲ್ಲಿ ಹಾಕಿಕೊಂಡು ನಮ್ಮೂರಿನ ಕನಕ ಚೌಕ ಹತ್ತಿ ಹೋಗುತ್ತಿರುವಾಗ ಆರೋಪಿತನು ಬಂದು ಆಟೋ ನಿಲ್ಲಿಸಿ ನನಗೆ ಲೇ ಸೂಳೆ ಮಗನೆ ನಮ್ಮ ಅಣ್ಣನ ಹತ್ತಿ ನೀನು ಯಾಕೆ ತುಂಬಿಕೊಂಡು ಹೋಗುತಿದ್ದಿ ಮಗನೆ ಅಂತಾ ಬೈದು ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ನಾನು ಯಾಕೆ ಹೊಡೆಯುತ್ತಿ ಅಂತಾ ಅಂದಾಗ ನಿನ್ನವ್ವನ ನನಗೆ ಎನ ಎದರು ಮಾತಾಡುತ್ತಲೆ ಸೂಳೆ ಮಗನೆ ಅಂದು ಜಾಡಿಸಿ ಹೊಟ್ಟೆಗೆ ಒದ್ದನು. ಆಗ ನಾನು ಸಿದ್ದಪ್ಪನಿಗೆ ನಿಮ್ಮ ತಮ್ಮನಿಗೆ ಹೇಳಪ್ಪ ನನ್ನ ಜೊತೆ ಜಗಳ ಮಾಡುತಾನಲ್ಲಾ ನೀನು ಸುಮ್ಮನೆ ನಿಂತು ನೋಡುತ್ತಲ್ಲ ಅಂತಾ ಅಂದಾಗ ಆತನು ಸಿದ್ದಪ್ಪನಿಗೆ ಬಿಡು ಯಾಕೆ ಹೊಡಿತಿ ಅಂತಾ ಅಂದನು ಆದರೂ ಆತನ ಮಾತು ಕೇಳದೆ ನನಗೆ  ಮಗನೆ ಊರಲ್ಲಿ ನಿನ್ನ ಸೊಕ್ಕು ಬಹಳ ಆಗಿದೆ ಸೂಳೆ ಮಗನೆ ಅಂತಾ ಬೈದು ಲೇ ಸೂಳೆ ಮಗನೆ ಇವತ್ತು ನಿನಗೆ ಹೊಡೆದು ಖಲಾಸ ಮಾಡಿ ಬಿಡುತ್ತಿನಿ ಅಂತಾ ಬೇದರಿಕೆ ಹಾಕುತ್ತಿರುವಾಗ ಆಗ ನಾನು ಆಟೋ ಬಿಟ್ಟು ಅಂಜಿ ನಮ್ಮ ಮನೆಯ ಕಡೆಗೆ ಹೋಗುತ್ತಿರುವಾಗ ಶಿವರಾಜ ತಂದೆ ಭೀಮಶಪ್ಪ ಈತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡ ಗಟ್ಟಿ ನಿಲ್ಲಿಸಿ ಲೇ ಸೂಳೆ ಮಗನೆ ನೀನು ಎಲ್ಲಿಗೆ ಹೋಗುತ್ತಲೆ ನಿನಗೆ ಇವತ್ತು ಹೊಳಿಗೆ ಊಟ ಆದ ಮಗನೆ ಅಂದು ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಲೇ ಸೂಳೆ ಮಗನೆ ಇನ್ನೊಂದು ಸಲ ನಮ್ಮ ಮನೆ ಕಡೆ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಮಗನೆ ಅಂತಾ ಜೀವದ ಬೇದರಿಕೆ ಹಾಕಿದ್ದು, ಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ: 234/2020 ಕಲಂ: 78 () ಕೆ.ಪಿ. ಕಾಯ್ದೆ   : ಇಂದು ದಿನಾಂಕ:03/11/2020 ರಂದು 6-45 ಪಿ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ. ಪಾಟೀಲ್ ಪಿಐ ಸಾಹೇಬರು ಮೂರು ಜನ  ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೆಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:03/11/2020 ರಂದು 4:15 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಪುರ ನಗರದ ಬಾಬುರಾವ್ ಹೊಟೆಲ್ ಹತ್ತಿರ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ಮೂರು ಜನ ಕೂಡಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಪಿಸಿ-271 3) ಮನೋಹರ್ ಹೆಚ್ಸಿ-105, 4) ಬಸಪ್ಪ ಸಿಪಿಸಿ-393, 5) ಸೋಮಯ್ಯ ಸಿಪಿಸಿ-235 ಮತ್ತು 6) ಶ್ರೀ ದೇವಿಂದ್ರಪ್ಪ ಸಿಪಿಸಿ-184 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಮಲ್ಲಕಾಜರ್ುನ್ ತಂದೆ ಕಲ್ಲಪ್ಪ ಅವಂಟಿ ವಯಾ:32 ವರ್ಷ ಜಾ:ಲಿಂಗಾಯತ ಉ:ಕೂಲಿ ಸಾ:ದೇವಾಪೂರ ತಾ:ಸುರಪೂರ 2) ಶ್ರೀ ವೆಂಕಟೇಶ ತಂದೆ ಕಲ್ಲಪ್ಪ ಅವಂಟಿ ವಯಾ:30 ವರ್ಷ ಜಾ:ಲಿಂಗಾಯತ ಉ:ಕೂಲಿ ಸಾ:ದೇವಾಪೂರ ತಾ:ಸುರಪೂರ ಇವರನ್ನು 4:45 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 5 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 5:15 ಪಿ.ಎಮ್ ಕ್ಕೆ ಸುರಪುರ ನಗರದ ಬಾಬುರಾವ್ ಹೊಟೆಲ್ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಾಬುರಾವ್ ಹೊಟೆಲ್ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಇಬ್ಬರು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಿದ್ದು, ಇನ್ನೋಬ್ಬನು ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5:20 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಮೂರು ಜನರು ಸಿಕ್ಕಿದ್ದು ಅವರ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ಅವರ ಹೆಸರು 1) ಅಶೋಕ ತಂದೆ ಮಲ್ಲಪ್ಪ ಬಮ್ಮಚಟ್ನಳ್ಳಿ ವಯಾ:52 ವರ್ಷ ಜಾ:ನಾಯ್ದ್ ಉ:ಕೂಲಿ ಸಾ:ಶೆಟ್ಟಿ ಮೊಹಲ್ಲಾ ಸುರಪೂರ ಅಂತಾ ತಿಳಿಸಿದ್ದು, 2) ಚಂದ್ರಶೇಖರ ತಂದೆ ಹಣಮಂತಪ್ಪ ಹೂಗಾರ ವಯಾ:60 ವರ್ಷ ಜಾ:ಹೂಗಾರ ಉ: ಹೂ ಮಾರುವುದು ಸಾ:ಶೆಟ್ಟಿ ಮೊಹಲ್ಲಾ ಸುರಪೂರ ಅಂತಾ ತಿಳಿಸಿದ್ದು, 3) ವೆಂಕಟೇಶ ತಂದೆ ಈರಣ್ಣಗೌಡ ಮಾಲಿ ಪಾಟೀಲ್ ವಯಾ:29 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಕುಪ್ಗಲ್ ತಾ:ಸುರಪೂರ ಅಂತಾ ತಿಳಿಸಿದ್ದು, ಸದರಿ ವೆಂಕಟೇಶನಿಗೆ ವಿಚಾರಿಸಲಾಗಿ, ನನಗೆ ಮಟಕಾ ನಂಬರ್ ಬರೆಯಲು ಮುದಕಪ್ಪ @ ಅಂಬ್ಲಪ್ಪ ತಂದೆ ಹಣಮಂತ್ರಾಯ ಕರಿಗುಡ್ಡಾ ವ|| 35 ರ್ವ ಜಾ|| ಬೇಡರ ಉ|| ಕೂಲಿ ಸಾ|| ಹಳೆ ಸಿದ್ದಾಪೂರ ತಾ|| ಸುರಪೂರ ಈತನು ಬರೆಯಲು ಹೇಳಿದ್ದು, ಆತನು ಹೇಳಿದ ಪ್ರಕಾರ ನಾನು ಮಟಕಾ ನಂಬರಗಳನ್ನು ಬರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ದಿನಾಲೂ ಮುದಕಪ್ಪ @ ಅಂಬ್ಲಪ್ಪ ಈತನಿಗೆ ಕೊಡುತ್ತೇನೆ ಅಂತಾ ತಿಳಿಸಿರುತ್ತಾನೆ. ಸದರಿಯವರ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 4300=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:20 ಪಿ.ಎಮ್ ದಿಂದ 6:20 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಮೂರು ಜನ ಆರೋಪಿತರೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ.                                                               


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:-  272/2020 ಕಲಂ 3, 4, 5, 7 ಮತ್ತು 9 ಐ.ಟಿ.ಪಿ ಯಾಕ್ಟ 1956 ಹಾಗೂ ಕಲಂ 370 ಐಪಿಸಿ : ಇಂದು ದಿನಾಂಕ:03/11/2020 ರಂದು 8.30 ಪಿ.ಎಂ.ಕ್ಕೆ ಸಕರ್ಾರಿ ತಫರ್ೆ ಫಿಯರ್ಾದಿ ಶ್ರೀ ಚನ್ನಯ್ಯ ಎಸ್ ಹಿರೇಮಠ ಪಿ.ಐ ಶಹಾಪುರ ರವರು ಒಬ್ಬ ನೊಂದ ಮಹಿಳೆ, ಇಬ್ಬರು ಆರೋಪಿತರು ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದರ ಸಾರಾಂಶವೇನೆಂದರೆ, ಇಂದು ದಿನಾಂಕ: 03/11/2020 ರಂದು 5.00 ಪಿ.ಎಂಕ್ಕೆ ಠಾಣೆಯಲ್ಲಿದ್ದಾಗ ಠಾಣಾ ಸರಹದ್ದಿನ ಶಹಾಪುರ ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ಇರುವ ಸೂರ್ಯ ಲಾಡ್ಜ್ನಲ್ಲಿ ಮಾನವ ಕಳ್ಳ ಸಾಗಾಣಿಕೆ ಮಾಡಿ ಹುಡುಗಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಗುರುರಾಜ ತಂ/ ರೇವಣಸಿದ್ದಪ್ಪ ಕೆಂದೂಳಿ ಮತ್ತು ಶರಣಪ್ಪ ತಂ/ ಭೀರಪ್ಪ ಪೂಜಾರಿ ರವರಿಗೆ ದಸ್ತಗಿರಿ ಮಾಡಿ ಘಟನೆ ಸ್ಥಳದಲ್ಲಿದ್ದ ನೊಂದ ಮಹಿಳೆ ಇವಳಿಗೆ ವೇಶ್ಯಾವಾಟಿಕೆ ಇಂದ ಸಂರಕ್ಷಿಸಿದ್ದು, ಸದರ ಮೇಲ್ಕಾಣಿಸಿದ ಇಬ್ಬರು ಆರೋಪಿತರ ವಿರುದ್ದ ಕಲಂ 3, 4, 5, 7 ಮತ್ತು 9 ಐ.ಟಿ.ಪಿ ಯಾಕ್ಟ 1956 ಹಾಗೂ ಕಲಂ 370 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಳ್ಳುವಂತೆ ಸೂಚಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ. 272/2020 ಕಲಂ 3, 4, 5, 7 ಮತ್ತು 9 ಐ.ಟಿ.ಪಿ ಯಾಕ್ಟ 1956 ಹಾಗೂ ಕಲಂ 370 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ. 


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 169/2020 ಕಲಂ: 78(3) ಕೆಪಿ ಯಾಕ್ಟ : ಇಂದು ದಿ : 03/11/2020 ರಂದು 03:10 ಪಿಎಮ್ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ನಾನು ಇಂದು ದಿನಾಂಕ: 03.11.2020 ರಂದು 12:30 ಪಿ.ಎಂಕ್ಕೆ ಪೆಟ್ರೋಲಿಂಗ ಕುರಿತು ಠಾಣಾ ವ್ಯಾಪ್ತಿಯ ಮಲ್ಲಾ, ಹದನೂರ ಗ್ರಾಮಗಳ ಕಡೆಗೆ ಹೋಗುತ್ತಿದ್ದಾಗ ಭಾತ್ಮೀದಾರರಿಂದ ತಿಳಿದು ಬಂದಿದ್ದೇನೆಂದರೆ, ಹದನೂರ ಗ್ರಾಮದ ಮರೆಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಭಾತ್ಮೀ ಬಂದಿದ್ದರಿಂದ ಸದರಿ ವಿಷಯವನ್ನು ಖಚಿತಪಡಿಸಿಕೊಂಡು ನಂತರ ಕೆಂಭಾವಿ ಪೊಲೀಸ್ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತ ಜ್ಞಾಪನ ಪತ್ರ ನೀಡಿದ್ದು, ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 169/2020 ಕಲಂ : 78 (3) ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.     


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 170/2020 ಕಲಂ: 87 ಕೆಪಿ ಯಾಕ್ಟ : ಇಂದು ದಿ : 03/11/2020 ರಂದು 08 :15 ಪಿಎಮ್ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ನಾನು ಇಂದು ದಿನಾಂಕ:03.11.2020 ರಂದು 05:00 ಪಿ.ಎಮ್ಕ್ಕೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ಠಾಣಾ ವ್ಯಾಪ್ತಿಯ ಮಾಲಗತ್ತಿ ಗ್ರಾಮದ ಮಹಾದೇವಪ್ಪನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದಿದ್ದರಿಂದ ಸದರಿ ವಿಷಯವನ್ನು ಖಚಿತಪಡಿಸಿಕೊಂಡು ನಂತರ ಮರಳಿ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತ ಜ್ಞಾಪನ ಪತ್ರ ನೀಡಿದ್ದು, ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 170/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.     


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 30/2020 ಕಲಂ: 498(ಎ),  323, 324, 504, 506, , ಸಂ/ 149  ಐ.ಪಿ.ಸಿ ಮತ್ತು ಕಲಂ:  3.&4 ಡಿಪಿ ಯಾಕ್ಟ್ : ಇಂದು ದಿನಾಂಕ: 03.11.2020 ರಂದು ರಾತ್ರಿ 8.30 ಗಂಟೆಗೆ ಪಿರ್ಯಾಧಿ ಶ್ರೀಮತಿ ರೇಖಾ ಗಂಡ ಶಿವರೆಡ್ಡಿ ನಾಯಕ್ ವಯಾ-27 ಉ- ಸಹ ಶಿಕ್ಷಕಿ ಜಾತಿ-ಬೇಡರು ಸಾ-ಹಳಿಗೇರಾ ಹಾಲಿ ವಾಸ ಚಿರಂಜೀವಿ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಟೈಫ್ ಮಾಡಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಂಶವೇನೆಂದರೆ ನನ್ನ ತವರು ಮನೆ ತೆಲಂಗಾಣ ರಾಜ್ಯದ ಕೃಷ್ಣಾ ಗ್ರಾಮವಿದ್ದು 2017 ನೇ ಸಾಲಿನ ಮೇ ತಿಂಗಳದ 17 ನೇ ತಾರೀಖಿನಂದು ಯಾದಗಿರಿ ತಾಲೂಕಿನ ಹಳಿಗೇರಾ ಗ್ರಾಮದ ಶಿವರೆಡ್ಡಿ ತಂದೆ ಮಲ್ಲಣ್ಣ ಚಂದಾನೊರ ಈತನೊಟ್ಟಿಗೆ ಮದುವೆಯಾಗಿದ್ದು ನಮ್ಮ ದಾಂಪತ್ಯ ಜೀವನದಲ್ಲಿ ಒಂದು ಹೆಣ್ಣು ಮಗು ಇರುತ್ತದೆ. ನಾನು ಸಕರ್ಾರಿ ಸಹ ಶಿಕ್ಷಕಿಅಂತ ಕೆಲಸ ಮಾಢಿಕೊಂಡು ಇರುತ್ತೇನೆ. ನನ್ನ ಗಂಡ ಶಿವರೆಡ್ಡಿ ಕೂಡ ಕೆ.ಎಸ್.ಆರ್.ಟಿ.ಸಿಯಲ್ಲಿ ಕಂಡಕ್ಟರ್ ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ನಮ್ಮ ಕೆಲಸ ಆಧಾಯದ ಮೇಲೆ ಜೀವನ ಮಾಡಿಕೊಂಡು ಯಾದಗಿರಿಯ ಚಿರಂಜೀವಿ ನಗರದಲ್ಲಿ ಮನೆ ಬಾಡಿಗೆ ಮಾಡಿಕೊಂಡು ಇರುತ್ತೇವೆ. ಮದುವೆಯಾಗಿ 3 ತಿಂಗಳು ಮಾತ್ರ ನನ್ನ ಗಂಡ ಮತ್ತು ಗಂಡನ ಮನೆಯವರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದು ನಂತರದ ದಿನಗಳಲ್ಲಿ ನನಗೆ ಮಾನಸಿಕ ಮತ್ತು ದೈಹಿಕವಾಗಿ ನಿನಗೆ ಅಡುಗೆ ಸರಿಯಾಗಿ ಬರುವುದಿಲ್ಲ ಕೆಲಸ ಮಾಡಲು ಬರುವುದಿಲ್ಲವೆಂದು ಕಿರುಕುಳ ಕೊಡಲು ಶುರು ಮಾಡಿದರು ನನ್ನ ಗಂಡ ಅತ್ತೆ ಭಾವ ಮೈದುನ ನೆಗೆಣಿ, ನಾದಿನಿ, ನಾದಿನಿ ಗಂಡ ಹಾಗೂ ನಾದಿನಿ ಮಗ ಇವರು ನನಗೆ ಮಾನಸಿಕವಾಗಿ ಕಿರುಕುಳ ನೀಡಿ ದೈಹಿಕವಾಗಿ ಹಿಂಸೆ ನೀಡಿ ತವರು ಮನೆಯಿದ ಬಂಗಾರ ಹಣ ತರಬೇಕು ಅಂತ ಕಿರುಕುಳ ನೀಡಿರುತ್ತಾರೆ. ದಸರಾ ಹಬ್ಬಕ್ಕೆ ನನ್ನ ತವರು ಮನೆಗೆ ಹೋಗಿ ಮರಳಿ ದಿನಾಂಕ:  01.11.2020 ರಂದು ಸಂಜೆ 6.00 ಗಂಟೆಗೆ ಯಾದಗಿರಿಗೆ ನಾನು ಮತ್ತು ನನ್ನ ತಮ್ಮ ಇಬ್ಬರು ಯಾದಗಿರಿಗೆ  ಬಂದಿದ್ದೇವು. ದಿನಾಂಕ:  02.11.2020 ರಂದು ಬೆಳಿಗ್ಗೆ 8.00 ಗಂಟೆಗೆ ನನ್ನ ಗಂಡ ನನ್ನ ಸಂಗಡ ಜಗಳ ಮಾಡಿ ನೀನು ನಿನ್ನ ತವರು ಮನೆಯಿಂದ ಹಣ ಮತ್ತು ಬಂಗಾರ ತಂದಿಲ್ಲ ನೀನು ಟೀಚರ ಕೆಲಸ ಮಾಡುತ್ತಿ ನಿನ್ನ ಸಂಬಳವೇಲ್ಲ ನನಗೆ ಕೊಡಬೇಕು ಅಂತ ಮಾನಸಿಕವ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದು, ಅವ್ಯಾಚವಾಗಿ ಬೈದು , ಪ್ರಾಣ  ಬೆದರಿಕೆ ಹಾಕಿ ನನಗೆ ಚಾಕುವಿನಿಂದ ಹೊಡೆಯಲು ಬಂದಾಗ ನನ್ನ ತಮ್ಮ ಮಧ್ಯ ಬಿಡಿಸಲು ಬಂದಾಗ ಆತನ  ಬಲಗೈಗೆ ಚಾಕು ಹತ್ತಿ ಗಾಯವಾಗಿರುತ್ತದೆ. ಆದ್ದರಿಂದ ನನ್ನನ್ನು ನನ್ನ ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ತೆಗೆದುಕೊಂಡು ಬಾ ಅಂತ ಹೇಳಿ ಮಾನಸಿಕವಾಗಿ ಕಿರುಕುಳ ನೀಡಿ ದೈಹಿಕವಾಗಿ ಹಿಂಸೆ ಕೊಟ್ಟು ಅವ್ಯಾಚವಾಗಿ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಎಂಬ ಇತ್ಯಾಧಿ ದೂರಿನ ಮೇಲಿಂದ ಮಹಿಳಾ ಠಾಣೆಯಲ್ಲಿ ಗುನ್ನೆ ನಂ: 30/2020 ಕಲಂ: 498(ಎ),  323, 324, 504, 506, , ಸಂ/ 149  ಐ.ಪಿ.ಸಿ ಮತ್ತು ಕಲಂ:  3.&4 ಡಿಪಿ ಯಾಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ. 


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:-. 99/2020 ಕಲಂ: 78(6) ಕೆ.ಪಿ.ಆಕ್ಟ್ : ಇಂದು ದಿನಾಂಕ.04/11/2020 ರಂದು ರಾತ್ರಿ 00-05 ಎಎಂಕ್ಕೆ ಶ್ರೀ ಸುನೀಲ ವ್ಹಿ ಮೂಲಿಮನಿ ಪಿ.ಐ ಸಿ.ಇ.ಎನ್ ಪೊಲೀಸ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ: 03/11/2020 ರಂದು 8:30 ಪಿ.ಎಮ್. ಸುಮಾರಿಗೆ ಯಾದಗಿರಿ ನಗರದ ಡಬರ ಮೊಹಲ್ಲಾ ಏರಿಯಾದಲ್ಲಿ ಕೆಲವರು ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಅವರ ಮೇಲೆ ದಾಳಿ ಕೈಗೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ನಂತರ 10-40 ಪಿಎಮ್ ಯಾದಗಿರಿ ನಗರ ಪೊಲೀಸ ಠಾಣೆಗೆ ಬಂದು ಇಬ್ಬರು ಪಂಚರನ್ನು ಬರಮಾಡಿಕೊಂಡು ನಾನು ಸಂಗಡ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ 1)ಸೈಯದ ಶಫಿಯೊಧ್ದೀನ ಹೆಚ.ಸಿ-97 2) ಈರಣ್ಣ ಹೆಚ.ಸಿ-144 3)  ಗುಂಡಪ್ಪ ಹೆಚ.ಸಿ-115 4)ಸಂಗಣ್ಣಗೌಡ ಸಿ.ಪಿ.ಸಿ-208, 5) ಶರಣು ಎ.ಹೆಚ.ಸಿ.-19 6) ಸಾಬರೆಡ್ಡಿ ಪಿಸಿ-379 ರವರೊಂದಿಗೆ 10-50 ಪಿಎಮ್ ಕ್ಕೆ ಹೊರಟು ಯಾದಗಿರಿ ನಗರದ ಡಬೀರ ಕಾಲೋನಿಯ ನವಾಬ ಈತನ ಕಿರಾಣಿ ಅಂಗಡಿ ಹತ್ತಿರ 11:00 ಪಿಎಮ್ ಕ್ಕೆ ದಾಳಿ ಕೈಗೊಂಡು 1) ಸೈಯ್ಯದ ಮಕ್ಸೂದ್ಅಲಿ ತಂದೆ ಕುದರತ ಅಲಿ ಸೈಯ್ಯದ್, ವಯ:35 ವರ್ಷ, ಜಾತಿ:ಮುಸ್ಲಿಂ, ಸಾ||ಡಬರಮೊಹಲ್ಲಾ, ಯಾದಗಿರಿ 2) ಶಫಿ ತಂದೆ ಸದರ್ಾರ ವ;40 ಜಾ; ಮುಸ್ಲಿಂ ಉ; ವೆಲ್ಡಿಂಗ ಕೆಲಸ ಸಾ; ಡಬೀರ ಕಾಲೋನಿ ಯಾದಗಿರಿ ಇವರನ್ನು ವಶಕ್ಕೆ ಪಡೆದುಕೊಂಡು ಅವರಿಂದ 1)ನಗದು ಹಣ 37,900/-ರೂಪಾಯಿ 2)ಒಂದು ಓನರ ಕಂಪನೀಯ ಮೊಬೈಲ್ ಅ.ಕಿ.ರೂ.1000/-3)ಒಂದು ಎಮ್.ಐ ಕಂಪನಿಯ ಮೊಬೈಲ್ ಅ.ಕಿ.ರೂ.1000/- ಇವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಪಂಚನಾಮೆ ಕೈಗೊಂಡಿದ್ದು ಇರುತ್ತದೆ. ಇಂದು ದಿನಾಂಕ; 04/11/2020 ರಂದು 00-05 ಎಎಮ್ ಕ್ಕೆ ಈ ಮೇಲ್ಕಂಡ 2 ಜನ ಆರೋಪಿತರನ್ನು ಹಾಗೂ ಜಪ್ತಿಪಂಚನಾಮೆಯನ್ನು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಈ ಕೂಡ ತಮಗೆ ಒಪ್ಪಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡಿದ್ದು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ್ದರಿಂದ ಠಾಣೆ ಗುನ್ನೆ ನಂ.99/2020 ಕಲಂ.78(6) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!