ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/11/2020

By blogger on ಗುರುವಾರ, ನವೆಂಬರ್ 5, 2020

 


                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/11/2020 

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 231/2020 ಕಲಂ 279, 338 ಐಪಿಸಿ : ಇಂದು ದಿನಾಂಕ:01/11/2020 ರಂದು 11-30 ಎ.ಎಂ ಕ್ಕೆ ಠಾಣೆಯಎಸ್.ಹೆಚ್.ಡಿಕರ್ತವ್ಯದಲ್ಲಿದ್ದಾಗಶ್ರೀ ನರಸಿಂಹರಾಜು ತಂದೆತಾತಪ್ಪ ಕೊಳ್ಳಿ  ವಯಾ:17 ವರ್ಷ ಉ:ವಿಧ್ಯಾಥರ್ಿ ಜಾತಿ:ಕುರುಬರ ಸಾ:ದಿವಳಗುಡ್ಡಾ ತಾ:ಸುರಪೂರಇವರುಠಾಣೆಗೆ ಬಂದುಒಂದುಗಣಕಯಂತ್ರದಲ್ಲಿಟೈಪ ಮಾಡಿದಅಜರ್ಿ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ:27-10-2020 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ನನ್ನತಂದೆಯಾದತಾತಪ್ಪತಂದೆ ಪಿಡ್ಡಪ್ಪ ಕೊಳ್ಳಿ ವಯಾ:55 ವರ್ಷಈತನು ಹೊರಗಡೆ ಹೋಗಿ ಬರುತ್ತೇನೆಅಂತಾ ಮನೆಯಿಂದ ಹೋಗಿದ್ದನು. ಅಂದಾಜು ಸಾಯಂಕಾಲ 6-30 ಗಂಟೆ  ಸುಮಾರಿಗೆ ನಾನು ನನ್ನಅಣ್ಣನಾದರಾಘವೆಂದ್ರತಾಯಿಯಾದಗಂಗಮ್ಮ ಮೂವರು ಮನೆಯಲ್ಲಿರುವಾಗ ಸುರಪೂರರಂಗಂಪೇಠದರಮೇಶತಂದೆ ವಿಠೊಬಾಚವ್ಹಾಣಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಿನ್ನತಂದೆಯಾದತಾತಪ್ಪಈತನು ಸಾಯಂಕಾಲ 6 ಗಂಟೆ ಸುಮಾರಿಗೆ ಸುರಪೂರ-ಶಹಾಪೂರ ಮುಖ್ಯರಸ್ತೆಯ ಮಹೇಂದ್ರಟ್ಯಾಕ್ಟರ ಶೋರೂಮ ಹತ್ತಿರರೋಡಿನಎಡ ಪಕ್ಕದ ಸೈಡಿನಲ್ಲಿ ಹೋಗುತ್ತಿರುವಾಗ ಸುರಪೂರಕಡೆಯಿಂದಒಂದು ಪ್ಯಾಶನ್ ಪ್ರೋ ಮೊಟಾರ ಸೈಕಲ್ ನಂಬರ ಕೆಎ-33 ಕ್ಯೂ-5038 ನೇದ್ದರ ಚಾಲಕನು ತನ್ನ ಮೊಟಾರ ಸೈಕಲ್ನ್ನುಅತೀ ವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಹಿಂದಿನಿಂದ ನಿನ್ನತಂದೆಗೆಡಿಕ್ಕಿ ಪಡಿಸಿ ಮೊಟಾರ ಸೈಕಲ್ ಸಮೇತ ಬಿದ್ದಿದ್ದು, ಆಗ ಅದೆ ಸಮಯಕ್ಕೆಅಲ್ಲೆ ಹೋಗುತ್ತಿದ್ದ ನಾನು ಘಟನೆಯನ್ನು ನೋಡಿ ನಿನ್ನತಂದೆಯನ್ನು ನಾನು ಎಬ್ಬಿಸಿ ನೋಡಲು ಅವನ ಬಲ ಪಕ್ಕೆಲಬು ಮತ್ತು ಬಲಗೈ ಮುರಿದು ಭಾರಿಗಾಯವಾಗಿದ್ದು, ಹಣೆಯ ಹತ್ತಿರತೆರಚಿದಗಾಯವಾಗಿದ್ದು ಬೇಗ ಬಾ ಮೋಟಾರ ಸೈಕಲ್ ಚಾಲಕನು ಇಲ್ಲೆಇದ್ದಾನೆಅಂತಾ ವಿಷಯ ತಿಳಿಸಿದ ಕೂಡಲೆ ನಾನು ನನ್ನತಾಯಿಯಾದರಂಗಮ್ಮಅಣ್ಣನಾದರಾಘವೆಂದ್ರ ಮೂವರುಘಟನೆ ಸ್ಥಳಕ್ಕೆ ಹೋಗಿ ನೋಡಲು ನನ್ನತಂದೆಗೆ ಮೇಲೆ ಹೇಳಿದಂತೆ ಗಾಯಗಳಾಗಿದ್ದವು. ಮೊಟಾರ ಸೈಕಲ್ ನಂಬರ ಕೆಎ-33 ಕ್ಯೂ-5038 ನೇದ್ದರ ಚಾಲಕನಿಗೆ ನೋಡಿ ಮಾತಾಡಿಸಿ ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರುದೇವಿಂದ್ರಪ್ಪತಂದೆಈರಣ್ಣ@ಬೀಮಣ್ಣಕಮತಗಿಜಾತಿ:ಕಬ್ಬಲಿಗ ಸಾ:ವಾರಿಸಿದ್ದಾಪೂರ ಅಂತಾ ತಿಳಿಸಿದನು. ನಂತರಗಾಯಗೊಂಡ ನನ್ನತಂದೆಯನ್ನುಒಂದು ಖಾಸಗಿ ವಾಹನದಲ್ಲಿಉಪಚಾರಕುರಿತು ಸರಕಾರಿಆಸ್ಪತ್ರೆ ಸುರಪೂರಕ್ಕೆಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ವೈಧ್ಯಾಧಿಕಾರಿಗಳ ಸಲಹೇ ಮೇರಗೆಅಲ್ಲಿಂದ ಹೆಚ್ಚಿನಉಪಚಾರಕುರಿತು ಕಲಬುರಗಿಯಕಾಮರೇಡ್ಡಿಆಸ್ಪತ್ರೆಗೆ ಸೇರಿಕೆ ಮಾಡಿಇಂದುಠಾಣೆಗೆತಡವಾಗಿ ಬಂದುದೂರುಅಜರ್ಿ ನಿಡಿದ್ದುಇರುತ್ತದೆ. ಮೊಟಾರ ಸೈಕಲ್ ಚಾಲಕನಿಗೆ ಯಾವುದೆ ಗಾಯಗಳಾಗಿರುವದಿಲ್ಲ. ಕಾರಣಅಪಘಾತ ಮಾಡಿದ ಮೊಟಾರ ಸೈಕಲ್ ಚಾಲಕ ದೇವಿಂದ್ರಪ್ಪಕಮತಗಿಈತನ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 154/2020 ಕಲಂ 279, 338 ಐಪಿಸಿ : ಇಂದು ದಿನಾಂಕ 01.11.2020 ರಂದು ಬೆಳಿಗ್ಗೆ 9.00 ಗಂಟೆಗೆ ಸರಕಾರಿ ಆಸ್ಪತ್ರೆ ಗುರುಮಠಕಲದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳು ಮಲ್ಲೇಶ ತಂದೆ ಹಣಮಂತು ತಂಗಂ ಈತನು ಅಪಘಾತದಿಂದಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಗ್ಗೆ ಎಲ್.ಎಲ್.ಸಿ ಮಾಹಿತಿ ನೀಡಿದ್ದರಿಂದ ಸದರಿಯವನ ಪತ್ನಿಯಾದ ಇಂದ್ರಮ್ಮ ಗಂಡ ಮಲ್ಲೇಶ ತಂಗಂ ವ|| 45 ವರ್ಷ, ಜಾ|| ಎಸ್.ಸಿ. ಹರಿಜನ ಉ|| ಮನೆಕೆಲಸ ಸಾ|| ಲಕ್ಷ್ಮೀನಗರ ಗುರುಮಠಕಲ ತಾ|| ಗುರುಮಠಕಲ ಜಿ|| ಯಾದಗಿರಿ ಇವರ ಹೇಳಿಕೆ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ. 01.11.2020 ರಂದು ಬೆಳಿಗ್ಗೆ 8-15 ಗಂಟೆಗೆ  ನನ್ನ ಗಂಡ ಮಲ್ಲೇಶ ತಂದೆ ಹಣಮಂತು ತಂಗಂ ವಯ|| 48 ವರ್ಷ, ಜಾ|| ಎಸ್.ಸಿ. ಹರಿಜನ ಸಾ|| ಲಕ್ಷ್ಮೀನಗರ ಗುರುಮಠಕಲ ಇವರು ಪುಟಪಾಕ ಗ್ರಾಮಪಂಚಾಯತದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಮಾಡಿ ಮರಳಿ ಗುರುಮಠಕಲಗೆ ತಮ್ಮ ಹಿರೋ ಮೊಟಾರ ಸೈಕಲ ನಂ. ಕೆ.ಎ-33 ವಾಯ್-8879 ನೇದ್ದರ ಮೇಲೆ ಬರುತ್ತಿದ್ದಾಗ ಕಮಾಂಡರ ಜೀಪ ನಂ. ಎಪಿ-07 ಎ.ಹೆಚ್- 1947 ನೇದ್ದರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮೋಟಾರ ಸೈಕಲಗೆ ಡಿಕ್ಕಿಪಡಿಸಿ ನನ್ನ ಗಂಡನಿಗೆ ಬಲಎದೆಗೆ, ಬಲಗಡೆ ಭುಜಕ್ಕೆ, ತಲೆಗೆ ಭಾರಿ ಒಳಪೆಟ್ಟು ಮತ್ತು ಗದ್ದಕ್ಕೆ, ಮೂಗಿಗೆ ರಕ್ತಗಾಯ ಮಾಡಿ ದು:ಖಪತಗೊಳಿಸಿದ್ದು, ಸದರಿ ಚಾಲಕ ಮೋಹಿನ ತಂದೆ ಗುಲಾಮ ರಸೂಲ್ ಸುಣಕೆ ಜಾ|| ಮುಸ್ಲಿಂ. ಉ|| ಜೀಪ ಚಾಲಕ ಸಾ|| ಮೋಮಿನಪೂರ ಏರಿಯಾ ಗುರುಮಠಕಲ ಈತನ ಮೇಲೆ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿಯರ್ಾದಿ ಸಾರಾಂಶ ಇರುತ್ತದೆ.      

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 120/2020 ಕಲಂ, 87 ಕೆ.ಪಿ ಆ್ಯಕ್ಟ್ : ಇಂದು ದಿನಾಂಕ 01/11/2020 ರಂದು 06.10 ಪಿಎಂ ಕ್ಕೆ ಶ್ರೀ ಸೊಮಲಿಂಗಪ್ಪ ಪಿಎಸ್ಐ (ಅ.ವಿ) ಗೋಗಿ ಠಾಣೆ ರವರು ಠಾಣೆಗೆ ಬಂದು, ಜಪ್ತಿ ಪಂಚನಾಮೆ, ಮುದ್ದೇಮಾಲು ಮತ್ತು 06 ಜನರನ್ನು ಹಾಜರ ಪಡೆಸಿ ಒಂದು ವರದಿ ಹಾಜರ ಪಡೆಸಿದ್ದು, ಅದರ ಸಾರಂಶ ಏನಂದರೆ ವನದುಗರ್ಾ ಗ್ರಾಮದ ಸರಕಾರಿ ಉಗ್ರಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 06 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 2350=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು, 04.35 ಪಿಎಮ್ ದಿಂದ 05.35 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಮುಲಕ ಜಪ್ತಿ ಮಾಡಿಕೊಂಡು 06.10 ಪಿಎಂ ಕ್ಕೆ ಠಾಣೆಗೆ ಬಂದು ವರದಿ ತಯಾರಿಸಿ ಹಾಜರಪಡಿಸಿದ್ದರಿಂದ ಠಾಣೆ ಗುನ್ನೆ ನಂ: 120/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ: ಪಿ.ಎ.ಆರ್ 18/2020 ಕಲಂ:107 ಸಿಆರ್,ಪಿ,ಸಿ : ನಾನು ಶ್ರೀ ಹಣಮಂತ ಪಿಎಸ್ಐ ಗುರುಮಠಕಲ ಪೊಲೀಸ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೇನಂದರೆ ಇಂದು ದಿನಾಂಕ: 01.11.2020 ರಂದು ಸಾಯಂಕಾಲ 04.30 ಗಂಟೆ  ಸುಮಾರಿಗೆ ಹಳ್ಳಿ ಬೇಟಿ ಮತ್ತು ಪೆಟ್ರೋಲಿಂಗ್ ಕುರಿತು ಠಾಣೆಯಿಂದ ಹೊರಟುಬೋರಬಂಡ ಗುಂಜನೂರ ಕಂದಕೂರ ಗ್ರಾಮಕ್ಕೆ ಬೇಟಿ  ನೀಡಿದ ನಂತರ ಸಮಯ 05.20 ಪಿಎಮ್ ಸುಮಾರಿಗೆ ಎಲ್ಲೇರಿ ಗ್ರಾಮಕ್ಕೆ ಹೋಗಿ ಅಲ್ಲಿ ಪೊಲೀಸ ಬಾತ್ಮಿದಾರರಿಗೆ ವಿಚಾರಿಸಿದಾಗ ತಿಳಿದು ಬಂದಿರುವುದೇನೆಂದರೆ, ಯಲ್ಹೇರಿ ಗ್ರಾಮದ ಸೀಮಾಂತರದ ಜಮೀನು ಸವರ್ೆ ನಂಬರ 142ರ 2 ಗುಂಟೆ ವಿಸ್ತಿರ್ಣ ಜಾಗವು  ಹಾಗೂ ಮನೆ ನಂ 6/118/2 ರಲ್ಲಿ 5 ಶೆಟರಗಳು ಮತ್ತು ಜಮೀನು ವಿಷಯಕ್ಕೆ ಸಂಬಂದಿಸಿದಂತೆ ಸುಮಾರು ದಿನಗಳಿಂದ ತಟ್ಟೆ ತಕರಾರುಗಳಿದ್ದು 1ನೇ ಪಾಟರ್ಿ ಹಾಗೂ 2 ನೇ ಪಾಟರ್ಿಯವರಾದ ಇವರ ನಡುವೆ ಆಂತರಿಕ ವೈಮನ್ಸಿನಿಂದ ಕೂಡಿದ್ದು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಈ ಎರಡು ಪಾಟರ್ಿಯ  ಜನರ ನಡುವೆ  ಕಲಹ ಉಂಟಾಗಿ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟಾಗುವ ಸಾದ್ಯತೆಗಳು ಇರುತ್ತವೆ, ಅಲ್ಲದೆ ಇದರಿಂದ ಎಲ್ಲೇರ್ಳಿ ಗ್ರಾಮದಲ್ಲಿ  ಸಾರ್ವಜನಿಕ ಶಾಂತತೆಗೆ ಭಂಗವನುಂಟುಮಾಡುವ ಸಾದ್ಯತೆ ಇದೆ, ಅಂತ ಪೊಲೀಸ  ಬಾತ್ಮಿದಾರರಿಂದ ಹಾಗೂ ಸಾರ್ವಜನಿಕರಿಂದ ವಿಚಾರಣೆ ಕಾಲಕ್ಕೆ ತಿಳಿದು ಬಂದಿದ್ದರಿಂದ ಸದರಿ ಎರಡೂ ಪಾಟರ್ಿಯ ಜನರ ಮೇಲೆ ಮುಂಜಾಗೃತ ಕ್ರಮವಾಗಿ ಕೋರಿ ಗುರುಮಠಕಲ ಪೊಲೀಸ ಠಾಣೆ ಪಿ.ಎ.ಆರ್ ನಂ 17/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

ಕೋಡೇಕಲ್ ಪೊಲೀಸ ಠಾಣೆ ಗುನ್ನೆ ನಂ: 12/2020 ಕಲಂ: 107 ಸಿಆರ್ಪಿಸಿ : ನಾನು ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ಸರಕಾರದ ಪರವಾಗಿ ಕೊಡುವ ಪಿಯರ್ಾದಿ ಏನೆಂದರೆ, ನಾನು ಇಂದು ದಿ:01.11.2020 ರಂದು 9:30 ಎಎಮ್ ಕ್ಕೆ ಹಳ್ಳಿ ಬೇಟಿ ಮತ್ತು ಅಜರ್ಿ ವಿಚಾರಣೆ ಕುರಿತು ಸಿಬ್ಬಂದಿಯವರಾದ ಬಸೆಟೆಪ್ಪ ಪಿಸಿ-110 ರವರಿಗೆ ಕರೆದುಕೊಂಡು ಹೊರಟು ರಾಜನಕೋಳೂರು, ಹಿರೆಹಳ್ಳ, ಕಕ್ಕೇರಾ ಗ್ರಾಮಗಳಿಗೆ ಬೇಟಿ ನೀಡಿ ನಂತರ ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಕಕ್ಕೇರಾಕ್ಕೆ 3:00 ಪಿಎಮ್ಕ್ಕೆ ಬೇಟಿ ನೀಡಿದಾಗ ಸಾರ್ವಜನಿಕರು ಮತ್ತು ಪೊಲೀಸ್ ಭಾತ್ಮಿದಾರರಿಂದ ಮಾಹಿತಿ ತಿಳಿದುಬಂದಿದ್ದೇನೆಂದರೆ ಕಕ್ಕೇರಾ ಸೀಮಾಂತರದಲ್ಲಿರುವ ರಾತ್ರೆಪ್ಪ ತಂದೆ ಪರಮಣ್ಣ ಗುಡಿಪೂಜಾರಿ ಸಾ||ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಕಕ್ಕೇರಾ ಇವರ ಹೊಲದ ಸವರ್ೇ ನಂ.157 ರಲ್ಲಿಯ ಬದುವಿನ ಮೇಲಿನ ತುಗಲಿ ಗಿಡವನ್ನು ನಂದಣ್ಣ ತಂದೆ ಮಲ್ಲಪ್ಪ ಪೂಜಾರಿ ಸಾ|| ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಇವರು ದಿನಾಂಕ:27/09/2020 ರಂದು ಕಡೆದುಕೊಂಡಿದ್ದು ಇರುತ್ತದೆ. ಈ ವಿಷಯಕ್ಕೆ ಸಂಬಂದಿಸಿದಂತೆ ಒಂದನೇ ಪಾಟರ್ಿಯ ಜನರಾದ 1) ನಂದಣ್ಣ ತಂದೆ ಮಲ್ಲಪ್ಪ ಗುಡಿಪೂಜಾರಿ ವ|| 35ವರ್ಷ ಜಾ|| ಹಿಂದೂ ಕುರುಬರ ಉ||ಒಕ್ಕಲುತನ 2) ಅಮ್ಮವ್ವ ಗಂಡ ಮಲ್ಲಪ್ಪ ಗುಡಿಪೂಜಾರಿ ವ|| 55ವರ್ಷ ಉ|| ಮನೆಕೆಲಸ ಜಾ|| ಹಿಂದೂ ಕುರುಬರ ಸಾ|| ಇಬ್ಬರೂ  ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಕಕ್ಕೇರಾ ಮತ್ತು ಎರಡನೇ ಪಾಟರ್ಿಯವರಾದ 1) ರಾತ್ರೆಪ್ಪ ತಂದೆ ಪರಮಣ್ಣ ಗುಡಿಪೂಜಾರಿ ವ|| 62ವರ್ಷ ಜಾ|| ಹಿಂದೂ ಕುರುಬರ ಉ|| ಒಕ್ಕಲುತನ 2) ಸೋಮನಿಂಗಪ್ಪ ತಂದೆ ರಾತ್ರೆಪ್ಪ ಗುಡಿಪೂಜಾರಿ ವ|| 22ವರ್ಷ ಜಾ|| ಹಿಂದೂ ಕುರುಬರ ಉ|| ಒಕ್ಕಲುತನ ಸಾ|| ಇಬ್ಬರೂ ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಕಕ್ಕೇರಾ ಇವರುಗಳ ನಡುವೆ ಭಾರಿ ವೈಮನಸ್ಸು ಉಂಟಾಗಿದ್ದು. ಸದರಿ ಉಭಯ ಗುಂಪಿನ ಜನರು ಈ ವಿಷಯದಲ್ಲಿ ಯಾವ ವೇಳೆಯಲ್ಲಿ ತಮ್ಮ ತಮ್ಮಲ್ಲಿ ಹೊಡೆಬಡೆ ಮಾಡಿಕೊಂಡು ತಮ್ಮ ಪ್ರಾಣ ಹಾನಿ ಮಾಡಿಕೊಳ್ಳುವದಾಗಲಿ ಅಥವಾ ಗ್ರಾಮದಲ್ಲಿ ಯಾವುದೇ ಸಮಯದಲ್ಲಿ ಸಾರ್ವಜನಿಕ ಶಾಂತತಾ ಭಂಗ ಹಾಗು ವಿಷಮ ವಾತಾವರಣ ಉಂಟು ಮಾಡುವ ಸಂಭವ ಇದ್ದ ಬಗ್ಗೆ ತಿಳಿದುಬಂದಿದ್ದರಿಂದ ಮತ್ತು ಸಾರ್ವಜನಿಕ ಆಸ್ತಿಗಾಗಲಿ ಪ್ರಾಣಕ್ಕಾಗಿ ಹಾನಿಯನ್ನುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿ ಪ್ರತಿವಾದಿಗಳಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧಗಳನ್ನು ತಡೆಗಟ್ಟುವ ದೃಷ್ಠಿಯಿಂದ ಪ್ರತಿವಾದಿ ಜನರ ಮೇಲೆ ಮುಂಜಾಗೃತ ಕ್ರಮ ಜರುಗಿಸುವದು ಅವಶ್ಯಕತೆ ಕಂಡುಬಂದಿದ್ದರಿಂದ 5:00 ಪಿಎಮ್ ಕ್ಕೆ ಠಾಣೆಗೆ ಬಂದು ಸರಕಾರದ ಪರವಾಗಿ ಫಿಯರ್ಾದಿಯಾಗಿ ಒಂದನೇ ಪಾಟರ್ಿಯ ಜನರಾದ 1) ನಂದಣ್ಣ ತಂದೆ ಮಲ್ಲಪ್ಪ ಗುಡಿಪೂಜಾರಿ ವ||35ವರ್ಷ ಜಾ||ಹಿಂದೂ ಕುರುಬರ ಉ||ಒಕ್ಕಲುತನ 2) ಅಮ್ಮವ್ವ ಗಂಡ ಮಲ್ಲಪ್ಪ ಗುಡಿಪೂಜಾರಿ ವ|| 55ವರ್ಷ ಉ|| ಮನೆಕೆಲಸ ಜಾ|| ಹಿಂದೂ ಕುರುಬರ ಸಾ||ಇಬ್ಬರೂ ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಕಕ್ಕೇರಾ ಇವರ ವಿರುದ್ಧ ಠಾಣಾ ಪಿ.ಎ.ಆರ್ ನಂ:12/2020 ಕಲಂ:107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡಿದ್ದು ಇರುತ್ತದೆ. ಸದರಿ ಪ್ರತಿವಾದಿಗಳಿಂದ ಶಾಂತರೀತಿಯಿಂದ ಇರುವಂತೆ ಅವರ ಕಡೆಯಿಂದ ಕಲಂ:116(2) ಸಿಆರ್ಪಿಸಿ ಪ್ರಕಾರ ಇಂಟೇರಿಯಂ ಬಾಂಡ್ ಪಡೆದುಕೊಳ್ಳಲು ಮಾನ್ಯರವರಲ್ಲಿ ವಿನಂತಿ.

ಕೋಡೇಕಲ್ ಪೊಲೀಸ ಠಾಣೆ ಗುನ್ನೆ ನಂ:-  13/2020 ಕಲಂ: 107 ಸಿಆರ್ಪಿಸಿ : ನಾನು ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ಸರಕಾರದ ಪರವಾಗಿ ಕೊಡುವ ಪಿಯರ್ಾದಿ ಏನೆಂದರೆ, ನಾನು ಇಂದು ದಿ:01.11.2020 ರಂದು 9:30 ಎಎಮ್ ಕ್ಕೆ ಹಳ್ಳಿ ಬೇಟಿ ಮತ್ತು ಅಜರ್ಿ ವಿಚಾರಣೆ ಕುರಿತು ಸಿಬ್ಬಂದಿಯವರಾದ ಬಸೆಟೆಪ್ಪ ಪಿಸಿ-110 ರವರಿಗೆ ಕರೆದುಕೊಂಡು ಹೊರಟು ರಾಜನಕೋಳೂರು, ಹಿರೆಹಳ್ಳ, ಕಕ್ಕೇರಾ ಗ್ರಾಮಗಳಿಗೆ ಬೇಟಿ ನೀಡಿ ನಂತರ ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಕಕ್ಕೇರಾಕ್ಕೆ 3:00 ಪಿಎಮ್ಕ್ಕೆ ಬೇಟಿ ನೀಡಿದಾಗ ಸಾರ್ವಜನಿಕರು ಮತ್ತು ಪೊಲೀಸ್ ಭಾತ್ಮಿದಾರರಿಂದ ಮಾಹಿತಿ ತಿಳಿದುಬಂದಿದ್ದೇನೆಂದರೆ ಕಕ್ಕೇರಾ ಸೀಮಾಂತರದಲ್ಲಿರುವ ರಾತ್ರೆಪ್ಪ ತಂದೆ ಪರಮಣ್ಣ ಗುಡಿಪೂಜಾರಿ ಸಾ||ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಕಕ್ಕೇರಾ ಇವರ ಹೊಲದ ಸವರ್ೇ ನಂ.157 ರಲ್ಲಿಯ ಬದುವಿನ ಮೇಲಿನ ತುಗಲಿ ಗಿಡವನ್ನು ನಂದಣ್ಣ ತಂದೆ ಮಲ್ಲಪ್ಪ ಪೂಜಾರಿ ಸಾ|| ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಇವರು ದಿನಾಂಕ:27/09/2020 ರಂದು ಕಡೆದುಕೊಂಡಿದ್ದು ಇರುತ್ತದೆ. ಈ ವಿಷಯಕ್ಕೆ ಸಂಬಂದಿಸಿದಂತೆ ಒಂದನೇ ಪಾಟರ್ಿಯ ಜನರಾದ 1) ನಂದಣ್ಣ ತಂದೆ ಮಲ್ಲಪ್ಪ ಗುಡಿಪೂಜಾರಿ ವ|| 35ವರ್ಷ ಜಾ|| ಹಿಂದೂ ಕುರುಬರ ಉ||ಒಕ್ಕಲುತನ 2) ಅಮ್ಮವ್ವ ಗಂಡ ಮಲ್ಲಪ್ಪ ಗುಡಿಪೂಜಾರಿ ವ|| 55ವರ್ಷ ಉ|| ಮನೆಕೆಲಸ ಜಾ|| ಹಿಂದೂ ಕುರುಬರ ಸಾ|| ಇಬ್ಬರೂ  ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಕಕ್ಕೇರಾ ಮತ್ತು ಎರಡನೇ ಪಾಟರ್ಿಯವರಾದ 1) ರಾತ್ರೆಪ್ಪ ತಂದೆ ಪರಮಣ್ಣ ಗುಡಿಪೂಜಾರಿ ವ|| 62ವರ್ಷ ಜಾ|| ಹಿಂದೂ ಕುರುಬರ ಉ|| ಒಕ್ಕಲುತನ 2) ಸೋಮನಿಂಗಪ್ಪ ತಂದೆ ರಾತ್ರೆಪ್ಪ ಗುಡಿಪೂಜಾರಿ ವ|| 22ವರ್ಷ ಜಾ|| ಹಿಂದೂ ಕುರುಬರ ಉ|| ಒಕ್ಕಲುತನ ಸಾ|| ಇಬ್ಬರೂ ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಕಕ್ಕೇರಾ ಇವರುಗಳ ನಡುವೆ ಭಾರಿ ವೈಮನಸ್ಸು ಉಂಟಾಗಿದ್ದು. ಸದರಿ ಉಭಯ ಗುಂಪಿನ ಜನರು ಈ ವಿಷಯದಲ್ಲಿ ಯಾವ ವೇಳೆಯಲ್ಲಿ ತಮ್ಮ ತಮ್ಮಲ್ಲಿ ಹೊಡೆಬಡೆ ಮಾಡಿಕೊಂಡು ತಮ್ಮ ಪ್ರಾಣ ಹಾನಿ ಮಾಡಿಕೊಳ್ಳುವದಾಗಲಿ ಅಥವಾ ಗ್ರಾಮದಲ್ಲಿ ಯಾವುದೇ ಸಮಯದಲ್ಲಿ ಸಾರ್ವಜನಿಕ ಶಾಂತತಾ ಭಂಗ ಹಾಗು ವಿಷಮ ವಾತಾವರಣ ಉಂಟು ಮಾಡುವ ಸಂಭವ ಇದ್ದ ಬಗ್ಗೆ ತಿಳಿದುಬಂದಿದ್ದರಿಂದ ಮತ್ತು ಸಾರ್ವಜನಿಕ ಆಸ್ತಿಗಾಗಲಿ ಪ್ರಾಣಕ್ಕಾಗಿ ಹಾನಿಯನ್ನುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿ ಪ್ರತಿವಾದಿಗಳಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧಗಳನ್ನು ತಡೆಗಟ್ಟುವ ದೃಷ್ಠಿಯಿಂದ ಪ್ರತಿವಾದಿ ಜನರ ಮೇಲೆ ಮುಂಜಾಗೃತ ಕ್ರಮ ಜರುಗಿಸುವದು ಅವಶ್ಯಕತೆ ಕಂಡುಬಂದಿದ್ದರಿಂದ 5:00 ಪಿಎಮ್ ಕ್ಕೆ ಠಾಣೆಗೆ ಬಂದು 5:30 ಪಿಎಮ್ಕ್ಕೆ ಸರಕಾರದ ಪರವಾಗಿ ಫಿಯರ್ಾದಿಯಾಗಿ ಎರಡನೇ ಪಾಟರ್ಿಯವರಾದ 1) ರಾತ್ರೆಪ್ಪ ತಂದೆ ಪರಮಣ್ಣ ಗುಡಿಪೂಜಾರಿ ವ|| 62ವರ್ಷ ಜಾ|| ಹಿಂದೂ ಕುರುಬರ ಉ|| ಒಕ್ಕಲುತನ 2) ಸೋಮನಿಂಗಪ್ಪ ತಂದೆ ರಾತ್ರೆಪ್ಪ ಗುಡಿಪೂಜಾರಿ ವ|| 22ವರ್ಷ ಜಾ|| ಹಿಂದೂ ಕುರುಬರ ಉ|| ಒಕ್ಕಲುತನ ಸಾ|| ಇಬ್ಬರೂ ಗುಡಿಮ್ಯಾಲಿನ ಪೂಜೆರದೊಡ್ಡಿ ಮಂಜಲಾಪೂರ ಕಕ್ಕೇರಾ ಇವರ ವಿರುದ್ಧ ಠಾಣಾ ಪಿ.ಎ.ಆರ್ ನಂ:13/2020 ಕಲಂ:107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡಿದ್ದು ಇರುತ್ತದೆ. ಸದರಿ ಪ್ರತಿವಾದಿಗಳಿಂದ ಶಾಂತರೀತಿಯಿಂದ ಇರುವಂತೆ ಅವರ ಕಡೆಯಿಂದ ಕಲಂ:116(2) ಸಿಆರ್ಪಿಸಿ ಪ್ರಕಾರ ಇಂಟೇರಿಯಂ ಬಾಂಡ್ ಪಡೆದುಕೊಳ್ಳಲು ಮಾನ್ಯರವರಲ್ಲಿ ವಿನಂತಿ.  

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 139/2020 ಕಲಂ 32,34 ಕೆ,ಇ ಯಾಕ್ಟ್ : ಇಂದು ದಿನಾಂಕ: 01-11-2020 ರಂದು ಬೆಳಿಗ್ಗೆ 10-10 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನಂದೆಪಲ್ಲಿ ಗ್ರಾಮದ ಕರಣಿಗಿ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮದ್ಯದ ಬಟಲಗಳನ್ನು ವಶಕ್ಕೆ ಪಡೆದುಕೊಂಡು ಜ್ಞಾಪನ ಪತ್ರದೊಂದಿಗೆ ಮದ್ಯದ ಬಾಟಲಗಳನ್ನು ಮತ್ತು ಜಪ್ತಿಪಂಚನಾಮೆಯನ್ನು ಹಾಗೂ ಆರೋಪಿತನನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ.139/2020 ಕಲಂ. 32, 34 ಕೆ.ಇ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 104/2020 87  ಕೆ.ಪಿ ಯಾಕ್ಟ : ಇಂದು ದಿನಾಂಕ:01/11/2020 ರಂದು 18.20 ಗಂಟೆಗೆ ಹುಣಸಗಿ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ಬಾಪುಗೌಡ ಪಾಟೀಲ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಬೆನಕನಹಳ್ಳಿ ಸೀಮಾಂತರದ ಸರಕಾರಿ ಪ್ರೌಡ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದು, ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:104/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 270/2020  ಕಲಂ 498(ಎ) 323. 504. 506. ಸಂ: 34 ಐಪಿಸಿ. : ಇಂದು ದಿನಾಂಕ 01/11/2020 ರಂದು 12-15 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀಮತಿ, ನಾಗಮ್ಮ ಗಂಡ ಮರಿಗೌಡ ಚಂದ್ರಾಳದೋರ ವ|| 26 ಜಾ|| ಬೇಡರ ಉ|| ಕೂಲಿ ಸಾ|| ಟೊಣ್ಣೂರ ಹಾ||ವ|| ಹೈಯಾಳ(ಕೆ) ಇವರು ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶ ವೆನೆಂದರೆ, ನನಗೆ ಸುಮಾರು 6 ವರ್ಷಗಳ ಹಿಂದೆ ನಮ್ಮ ಸಂಪ್ರದಾಯದಂತೆ ಟೊಣ್ಣೂರ ಗ್ರಾಮದ ಮರಿಗೌಡ ತಂದೆ ಬಸವರಾಜ ಚಂದ್ರಾಳದೋರ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ.  ಹೀಗಿದ್ದು ನಾನು ಮತ್ತು ನನ್ನ ಗಂಡ ಇಬ್ಬರು ಸುಖವಾಗಿ ಸಂಸಾರ ನಡೆಸಿದ್ದು ಇರುತ್ತದೆ. ನನ್ನ ಗಂಡ ಮರಿಗೌಡನು ಸುಮಾರು 3 ವರ್ಷಗಳ ಹಿಂದೆ ಮನೆಬಿಟ್ಟು ಹೋದವನು ಮರಳಿ ಇಲ್ಲಿಯವರೆಗೆ ಬಂದಿರುವದಿಲ್ಲಾ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಭಾವಂದಿರರಾದ 1) ಭೀಮಾಶಂಕರ ತಂದೆ ಬಸವರಾಜ ಚಂದ್ರಾಳದೋರ, 2) ಯಂಕಣ್ಣ ತಂದೆ ಬಸವರಾಜ ಚಂದ್ರಾಳದೋರ ಮತ್ತು ಮೈದುನ 3) ದೇವರಾಜ ತಂದೆ ಬಸವರಾಜ ಚಂದ್ರಾಳದೋರ ಹಾಗೂ ನನ್ನ ಅತ್ತೆಯಾದ 4) ತಾಯಮ್ಮ ಗಂಡ ಬಸವರಾಜ ಚಂದ್ರಾಳದೋರ ಇವರೆಲ್ಲರು ನನಗೆ ವಿನಾಕಾರಣ ತೊಂದರೆ ನೀಡುತಿದ್ದರು, ನನ್ನ ಗಂಡನ ಬರುವಿಕೆಗಾಗಿ ಅವರು ಕೊಡುತಿದ್ದ ಕಿರಕುಳವನ್ನು ಸಹಿಸಿಕೊಂಡು ಜೀವನ ಸಾಗಿಸುತಿದ್ದೇನು. ಮೇಲ್ಕಂಡ ನನ್ನ ಭಾವ ಮತ್ತು ಮೈದುನ ಹಾಗೂ ಅತ್ತೆಯವರು ಕೊಡುತಿದ್ದ ಕಿರಕುಳವನ್ನು ನಾನು ತವರು ಮನೆಗೆ ಹೋದಾಗ ನನ್ನ ಕುಟುಂಬದವರಿಗೆ ತಿಳಿಸಿರುತ್ತೇನೆ.  ನನ್ನ ತಂದೆ ತಾಯಿಯವರು ಟೊಣ್ಣುರ ಗ್ರಾಮಕ್ಕೆ ಬಂದು ನನ್ನ ಅತ್ತೆ ಮತ್ತು ಮೈದುನ ಹಾಗೂ ಭಾವನವರಿಗೆ ನಮ್ಮ ಮಗಳನ್ನು ಚನ್ನಾಗಿ ನೋಡಿಕೊಳ್ಳುವಂತೆ ಬುದ್ದಿವಾದ ಹೇಳಿ ಹೋಗಿರುತ್ತಾರೆ. ಕೆಲವು ದಿನಗಳವರಗೆ ನನಗೆ ಸರಿಯಾಗಿ ನೋಡಿಕೊಂಡು ಪುನಃ ನನಗೆ ನಿನ್ನ ಗಂಡ ಬರುವರೆಗೆ ನಮ್ಮ ಮನೆಯಲ್ಲಿರಬೇಡ ನಿನ್ನ ತವರು ಮನೆಗೆ ಹೋಗು ಅಂತ ಕಿರಕುಳ ನೀಡಿದ್ದರಿಂದ ನಾನು ಅಂದಾಜು ಒಂದು  ವರ್ಷದಹಿಂದೆ ನನ್ನ ಗಂಡನ ಮನೆಯಿಂದ ನನ್ನ ತವರು ಮನೆಗೆ ಬಂದು ನನ್ನ ತಂದೆ ತಾಯಿಯವರೊಂದಿಗೆ ಹೊಲ ಮನೆ ಕೆಲಸ ಮಾಡಿಕೊಂಡು ವಾಸವಾಗಿದ್ದೇನು ನನಗೆ ಮದುವೆಯಾಗಿ 6 ವರ್ಷಗಳಾಗಿದ್ದು, ನನ್ನ ಗಂಡ ಮನೆ ಬಿಟ್ಟು ಹೋಗಿ 3 ವರ್ಷಗಳಾದರು ನನ್ನ ಗಂಡ ಮರಳಿ ಊರಿಗೆ ಬಂದಿರುವುದಿಲ್ಲ. ನಾನು ತವರು ಮನೆಗೆ  ಬಂದು ಕೆಲವು ತಿಂಗಳಗಳಾದರು ನನ್ನ ಗಂಡ ಊರಿಗೆ ಬರದೆ ಇದ್ದುದ್ದರಿಂದ ನನ್ನ ತಂದೆ ತಾಯಿಯವರ ಮನೆಯಲ್ಲಿ ಇನ್ನೂ ಎಷ್ಟು ದಿನಗಳವರೆಗೆ ಇರಬೇಕು ನಾನು ನನ್ನ ಗಂಡನ ಮನೆಯಲ್ಲಿಯೇ ಜೀವನ ನಡೆಸುತ್ತೇನೆ ಅಂತ ತಿಮರ್ಾನಿಸಿ ಈ ವಿಷಯವನ್ನು ನನ್ನ ತಂದೆ ತಾಯಿವರಿಗೆ ತಿಳಿಸಿ,  ಒಂದು ವಾರದ ಹಿಂದೆ ದಿನಾಂಕ 23/10/2020 ರಂದು ನಾನು ಮತ್ತು ನನ್ನ ತಂದೆ  ಹಣಮಂತ, ತಾಯಿ ಯಂಕಮ್ಮ ಮೂರು ಜನ ಕೂಡಿ ಟೊಣ್ಣುರ ಗ್ರಾಮದ ನನ್ನ ಗಂಡನ ಮನೆಗೆ  ಹೋದಾಗ ಮುಂಜಾನೆ 11-00 ಗಂಟೆಯ ಸುಮಾರಿಗೆ ನನ್ನ ಅತ್ತೆ ತಾಯಮ್ಮ ಮತ್ತು ಭಾವಂದಿರರಾದ ಭೀಮಾಶಂಕರ, ಯಂಕಣ್ಣ  ಹಾಗೂ ಮೈದುನ ದೇವರಾಜ  ರವರೆಲ್ಲರೂ ಮನೆಯಲ್ಲಿದ್ದರು, ಆಗ ನಾನು ನನ್ನ ಗಂಡ ಇಲ್ಲಿಯವರೆಗೆ ಊರಿಗೆ ಬಂದಿರುವುದಿಲ್ಲ ನಾನು ಎಷ್ಟು ದಿನ ಅಂತ ತವರು ಮನೆಯಲ್ಲಿ ಇರಲಿ ನಾನು ಗಂಡನ ಮನೆಯಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿರಲು ಬಂದಿರುತ್ತೇನೆ ನನ್ನ ಗಂಡನ ಪಾಲಿಗೆ ಬರುವ ಹೊಲ ಮತ್ತು ಮನೆ  ಪಾಲು ಕೊಡಿ ಅಂತ ಕೇಳಿದಾಗ, ಭೀಮಾಶಂಕರ, ಯಂಕಣ್ಣ ಹಾಗೂ ದೇವರಾಜ ಮೂವರು ಕೂಡಿ ನನಗೆ ಏ ಸೂಳೇ ನಿನ್ನ ಗಂಡ ಬರುವವರೆಗೆ ನಿನಗೆ ಪಾಲು ಕೊಡುವುದಿಲ್ಲ ಅಲ್ಲಿಯವರೆಗೆ ನೀನು ನಿನ್ನ ತವರು ಮನೆಯಲ್ಲಿಯೇ ಇರಬೇಕು ಅಂತ ಅಂದಾಗ ನಾನು ಇಲ್ಲಿಯೇ ಜೀವನ ಸಾಗಿಸುತ್ತೇನೆ ಅಂತ ಹೇಳಿದಾಗ ನನ್ನ ಅತ್ತೆ ಏ ರಂಡಿ ನಿನಗೆ ನಾವ್ಯಾಕ ನಮ್ಮ ಮನೆಯಲ್ಲಿಟ್ಟುಕೊಳ್ಳೋಣ ನಿನ್ನ ತವರು ಮನೆಗೆ ಹೋಗು, ನಮ್ಮ ಮನೆಯಲ್ಲಿ ಬಂದರೇ ನೋಡು ನಿನಗೆ ಇಲ್ಲೇ ಖಲಾಸ ಮಾಡುತ್ತೇವೆ ಅಂತ ಅಂದರು, ಆಗ ನಾನು ಇದೇ ಮನೆಯಲ್ಲಿ ಇರುತ್ತೇನೆ ಅಂತ ನಾನು ಮನೆಯಲ್ಲಿ ಹೋಗುತಿದ್ದಾಗ ನನ್ನ ಅತ್ತೆ ತಾಯಮ್ಮಳು ನನಗೆ ತಲೆಯ ತಲೆಯ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಹೊಡೆ ಬಡೆ  ಮಾಡಿರುತ್ತಾಳೆ. ಅಷ್ಟರಲ್ಲಿಯೇ ನನ್ನ ತಂದೆ ತಾಯಿ  ಬಂದು ಜಗಳ ಬಿಡಿಸಿಕೊಂಡರು. ನನಗೆ ಜಗಳದಲ್ಲಿ ಯಾವುದೇ ಗಾಯವಗೈರೆ ಆಗಿರದ ಕಾರಣ ಉಪಚಾರ ಮಾಡಿಸಿಕೊಂಡಿರುವುದಿಲ್ಲ. ಸದ್ಯನು ನನಗೆ ಉಪಚಾರದ ಅವಶ್ಯಕತೆ ಇರುವುದಿಲ್ಲ. ಅಂತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 270/2020 ಕಲಂ 498(ಎ) 323, 504, 506, ಸಂ 34 ಐ.ಪಿ.ಸಿ. ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:-. 168/2020 ಕಲಂ: 32, 34 ಕೆ. ಇ ಯಾಕ್ಟ: ಇಂದು ದಿನಾಂಕ: 01/11/2020 ರಂದು 11.05 ಎ.ಎಮ್ಕ್ಕೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿದ್ದಾಗ ಆಲ್ಹಾಳ ಬಸ್ ನಿಲ್ದಾಣದ ಹತ್ತಿರ ಒಂದು ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಎರಡು ಜನರು ಕುಳಿತುಕೊಂಡು ಯಾವದೇ ಲೈಸನ್ಸ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತ ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯವರಾದ 1] ಶಿವಲಿಂಗಪ್ಪ ಹೆಚ್ಸಿ 185 2) ಭೀರಪ್ಪ ಪಿಸಿ 195 ರವರಿಗೆ ಸದರಿ ಭಾತ್ಮಿ ವಿಷಯ ತಿಳಿಸಿ ಭೀರಪ್ಪ ಪಿಸಿ-195 ರವರ ಮುಖಾಂತರ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 36 ಜಾ|| ಪ ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ತಾ:ಸುರಪೂರ ಇವರಿಗೆ ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿದೆನು. ನಂತರ ನಾನು, ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33.ಜಿ/0074 ನೇದ್ದರಲ್ಲಿ ಠಾಣೆಯಿಂದ 11:15 ಎ.ಎಮ್ಕ್ಕೆ ಹೊರಟು 11:45 ಎ.ಎಮ್ಕ್ಕೆ ಆಲ್ಹಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಒಂದು ಅಂಗಡಿಯ ಮುಂದೆ ತಾಳಿಕೋಟಿ-ಕೆಂಭಾವಿ ಮುಖ್ಯ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಹೆಣ್ಣುಮಗಳು ಹಾಗೂ ಒಬ್ಬ ಗಂಡಸು ಸರಾಯಿ ಮಾರಾಟ ಮಾಡುವದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 11:50 ಎಎಮ್ಕ್ಕೆ ದಾಳಿ ಮಾಡಲಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಒಬ್ಬ ಹೆಣ್ಣುಮಗಳು ನಮ್ಮನ್ನು ನೋಡಿ ಓಡಿ ಹೋಗಿದ್ದು, ಇನ್ನೊಬ್ಬನು ಅಲ್ಲಿಯೇ ಇದ್ದು ಕೂಡಲೆ ಆತನನ್ನು ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ದಪ್ಪ ತಂದೆ ಮಲ್ಲಪ್ಪ ಆಲಗೂರ ವಯಾ|| 60 ಜಾ|| ಕಬ್ಬಲಿಗ ಉ|| ಕೂಲಿ ಸಾ|| ತಳ್ಳಳ್ಳಿ (ಬಿ) ಅಂತ ತಿಳಿಸಿದ್ದು, ನಂತರ ಸದರಿಯವನಿಂದ ಓಡಿ ಹೋದ ಹೆಣ್ಣುಮಗಳ ಬಗ್ಗೆ ವಿಚಾರಿಸಿ ತಿಳಿಯಲಾಗಿ ಶಂಕ್ರೆಮ್ಮ ಗಂಡ ಬಸಪ್ಪ ಗೊಗಡಿಹಾಳ ವಯಾ|| 43 ಜಾ|| ಪ.ಜಾತಿ ಉ|| ವ್ಯಾಪಾರ ಸಾ|| ಆಲ್ಹಾಳ ಅಂತ ತಿಳಿಸಿದ್ದು ಇರುತ್ತದೆ. ನಂತರ ಸದರಿ ಸ್ಥಳದಲ್ಲಿದ್ದ ಸರಾಯಿ ಪರಿಶೀಲಿಸಿ ನೋಡಲಾಗಿ 1) 90 ಎಮ್ಎಲ್ನ 13 ಓರಿಜಿನಲ್ ಚ್ವಾಯೀಸ್ ಪೌಚಗಳು ಇದ್ದು ಒಂದು ಪೌಚಿನ ಬೆಲೆ 35.13 ರೂ. ಇದ್ದು ಒಟ್ಟು ಪೌಚಗಳ ಕಿಮ್ಮತ್ತು 456.69/- ರೂ ಆಗುತ್ತಿದ್ದು, 2) 330 ಎಮ್ಎಲ್ನ 7 ಕಿಂಗಫಿಶರ್ ಸ್ಟ್ರಾಂಗ್ ಬೀಯರ್ ಇದ್ದು, ಒಂದು ಬಿಯರ್ನ ಬೆಲೆ 85 ರೂ. ಇದ್ದು ಒಟ್ಟು 7 ಬಿಯರ್ಗಳ ಬೆಲೆ 595/ ರೂ ಆಗುತ್ತಿದ್ದು, ಮತ್ತು 3) 650 ಎಮ್ಎಲ್ನ 3 ಕಿಂಗಫಿಶರ್ ಸ್ಟ್ರಾಂಗ್ ಬೀಯರ್ ಇದ್ದು, ಒಂದು ಬಿಯರ್ನ ಬೆಲೆ 150 ರೂ. ಇದ್ದು ಒಟ್ಟು 3 ಬಿಯರ್ಗಳ ಬೆಲೆ 450/ ರೂ ಆಗುತ್ತಿದ್ದು ಹೀಗೆ ಒಟ್ಟು 1501=69 ರೂಪಾಯಿ ಕಿಮ್ಮತ್ತಿನ ಒಟ್ಟು 5 ಲೀಟರ 430 ಎಮ್ಎಲ್ನ ಸರಾಯಿ ಪೌಚ್ ಹಾಗೂ ಬಾಟಲ್ಗಳನ್ನು ಇಂದು ದಿನಾಂಕ 01/11/2020 ರಂದು 11:50 ಎಎಮ್ದಿಂದ 12:50 ಪಿಎಮ್ದವರೆಗೆ ಪಂಚರ ಸಮಕ್ಷಮ ಜಪ್ತಪಡಿಸಿಕೊಂಡು ಸದರಿ ಸರಾಯಿಯಲ್ಲಿ ಪ್ರತಿಯೊಂದು ನಮೂನೆಯಲ್ಲಿನ ಒಂದೊಂದು ಸರಾಯಿ ಪೌಚನ್ನು ಹಾಗೂ ಬಾಟಲ್ನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಪಂಚರ ಸಮಕ್ಷಮದಲ್ಲಿ ಪ್ರತೇಕವಾಗಿ ಬಿಳಿ ಬಟ್ಟೆಯಲ್ಲಿ ಹೊಲೆದು ಅದರ ಮೇಲೆ ಇಂಗ್ಲೀಷ ಅಕ್ಷರದ ಏ ಅಂತ ಶೀಲ ಮಾಡಿ ಜಪ್ತಪಡಿಸಿಕೊಂಡಿದ್ದು ಇರುತ್ತದೆ. ಈ ಮೇಲೆ ನಮೂದಿಸಿದ ಆರೋಪಿತರು ಸರಾಯಿ ಮಾರಾಟ ಮಾಡಲು ಯಾವುದೇ ಪರವಾನಿಗೆ ಪತ್ರ [ಲೈಸನ್ಸ] ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿದ್ದು, ಒಬ್ಬಳು ಆರೋಪಿತಳು ಓಡಿ ಹೋಗಿದ್ದು ಹಾಗೂ ಒಬ್ಬ ಆರೋಪಿ ಸಿಕ್ಕಿದ್ದು ಸಿಕ್ಕ ಆರೋಪಿತನೊಂದಿಗೆ ಹಾಗೂ ಮುದ್ದೆಮಾಲು ಸಮೇತ 01:20 ಪಿ.ಎಂಕ್ಕೆ ಠಾಣೆಗೆ ಬಂದು ಓಡಿ ಹೋದ ಆರೋಪಿತರ ವಿರುದ್ದ ಮುಂದಿನ ಕ್ರಮ ಜರುಗಿಸಲು ಈ ಮೂಲಕ  ಆದೇಶಿಸಿದ ಮೇರೆಗೆ ಠಾಣೆ ಗುನ್ನೆ ನಂ 168/2020 ಕಲಂ 32,34 ಕೆ.ಇ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 232/2020 ಕಲಂ: 78 (ಗಿ) ಕೆ.ಪಿ. ಕಾಯ್ದೆ : ಇಂದು ದಿನಾಂಕ: 01/11/2020 ರಂದು 7:15 ಪಿ.ಎಂಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರಿ ಸಾಹೇಬಗೌಡ ಎಮ್ ಪಾಟೀಲ ಪಿ.ಐ ಸಾಹೇಬರು ಇಬ್ಬರು ಆರೋಪಿತರು ಹಾಗು ಮುದ್ದೆಮಾಲು ಮತ್ತು ಮೂಲ ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿ ಸಕರ್ಾರಿ ತಫರ್ೆ ಪಿರ್ಯಾಧಿದಾರರಾಗಿ ವರದಿ ಸಲ್ಲಿಸಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:01-11-2020 ರಂದು ಸಾಯಂಕಾಲ 4:45 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿಯಲ್ಲಿರುವಾಗ ಖಚಿತವಾದ ಮಾಹಿತಿ ಬಂದ್ದಿದ್ದೆನೆಂದರೆ ಸುರಪೂರ ಪಟ್ಟಣದ ಉದ್ದಾರ ಓಣಿಯ ಪಾಂಡುರಂಗ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮೂರು ಜನ ವ್ಯಕ್ತಿಗಳು ನಿಂತುಕೊಂಡು ಏಘಿಕ ಗಿ/ಖ  ಅಖಏ  ತಂಡಗಳ ಮಧ್ಯ ಜರುಗಲಿರುವ ಟಿ20 ಕ್ರಿಕೇಟಪಂದ್ಯ ಏಘಿಕ ತಂಡ ಮೊದಲು ಒಂದು ಓವರಿಗೆ 10 ರನ್ ಹೋಡೆದರೆ 10 ರೂಪಾಯಿಗೆ 100 ರೂಪಾಯಿ ಕೊಡುವದಾಗಿ ಮತ್ತು ಏಘಿಕ ತಂಡದ ಮೊತ್ತ 165 ದಾಟಿದರೆ 3000 ಸಾವಿರ ರೂಪಾಯಿಗೆ 6000 ಸಾವಿರ ರೂಪಾಯಿ ಕೊಡುವುದಾಗಿ ಅಂತ ಪೋನ್ ಮುಖಾಂತರ ಬೆಟ್ಟಿಂಗ್ ಮಾತಾಡುತ್ತಾ ಬರೆದುಕೊಳ್ಳುತಿದ್ದಾರೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮನೋಹರ ಹೆಚ್ಸಿ-105, ಶ್ರೀ ಮಂಜುನಾಥ ಸಿಪಿಸಿ-271 , ಶ್ರೀ ಪರಮೇಶ  ಸಿಪಿಸಿ-142 ಎಲ್ಲರಿಗೂ ಕರೆದು ವಿಷಯ ತಿಳಿಸಿ ದಾಳಿ ಕುರಿತು ಹೊಗೋಣ ಅಂತಾ ತಿಳಿಸಿ ಮಂಜುನಾಥ ಹೆಚ್ಸಿ-176 ಈತನಿಗೆ  ಇವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದಂತೆ ಮಂಜುನಾಥ ಹೆಚ್ಸಿ-176 ಈತನು ಇಬ್ಬರು ಪಂಚರಾದ 1) ಶ್ರೀ ನರಸಪ್ಪ ತಂದೆ ಮಾನಪ್ಪ ಕರಿಗುಡ್ಡಾ ವಯಾ:30 ವರ್ಷ ಉ:ಒಕ್ಕಲುತನ  ಜಾತಿ:ಬೇಡರ ಸಾ:ವೆಂಕಟಾಪೂರ ತಾ:ಸುರಪೂರ 2) ಶ್ರೀ ರಂಗನಾಥ ತಂದೆ ತಿಪ್ಪಣ್ಣ ಪ್ಯಾಪಲಿ ವಯಾ:37 ಉ:ಕೂಲಿ ಜಾತಿ:ಬೇಡರ ಸಾ:ಮ್ಯಾಗೇರಿ ಓಣಿ ಸುರಪೂರ ತಾ:ಸುರಪೂರ ಇವರನ್ನು ಠಾಣೆಗೆ ಸಾಯಂಕಾಲ 5 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದ್ದಿದ್ದು, ಸದರಿ ಇಬ್ಬರು ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಇಬ್ಬರು ಪಂಚರು ಒಪ್ಪಿಕೊಂಡಿದ್ದು. ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ ಸಾಯಂಕಾಲ 5:15 ಗಂಟೆಗೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಎಲ್ಲರೂ ಕೂಡಿ ಹೊರಟು ಸಾಯಂಕಾಲ 5:30 ಕ್ಕೆ ಉದ್ದಾರ ಓಣಿ ಪಾಂಡುರಂಗ ಗುಡಿಯ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತುನೋಡಲು ಪಾಂಡುರಂಗ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಪೋನಿನಲ್ಲಿ ಸಂಪರ್ಕ ಮಾಡುತ್ತಾ ಇಂದು ಜರುಗಲಿರುವ ಕ್ರಿಕೇಟ್ ಪಂದ್ಯಾಗಳಾಧ ಏಘಿಕ ಗಿ/ಖ  ಅಖಏ  ಈ ತಂಡಗಳ ಮೇಲೆ ಬೆಟ್ಟಿಂಗ ಕಟ್ಟಿದ ಬಗ್ಗೆ ಖಚಿತ ಪಡಸಿಕೊಂಡು ಅವನ ಮೇಲೆ  ಪಂಚರ ಸಮಕ್ಷಮದಲ್ಲಿ ಸಾಯಂಕಾಲ 05:35 ಗಂಟೆಗೆ ದಾಳಿ ಮಾಡಿ ಇಬ್ಬರಿಗೆ ಹಿಡಿದು  ಅವರ  ಹೆಸರು ವಿಳಾಸ ವಿಚಾರಿಸಿ ಅವರ ಅಂಗ ಶೋದನೆ ಮಾಡಲು 1) ಭೀರಪ್ಪ ತಂದೆ ಜೆಟ್ಟೆಪ್ಪ ದೇವರಮನಿ ವಯಾ:27 ವರ್ಷ ಜಾತಿ:ಕುರುಬರ ಉ:ಒಕ್ಕಲುತನ ಸಾ:ಉದ್ದಾರ ಓಣಿ ಸುರಪೂರ ಈತನ ಹತ್ತಿರ 2400=00 ರೂಗಳು ಹಾಗೂ ಒಂದು ರೀಯಲ್ಮಿ ಕಂಪನಿಯ ಮೊಬೈಲ್ ಪೋನ ಅ.ಕಿ 500=00 ರೂಗಳು ದೊರೆತವು 2) ತಿಪ್ಪಣ್ಣ ತಂದೆ ರೇವಪ್ಪ ಬಜಂತ್ರಿ ವಯಾ:27 ವರ್ಷ ಜಾತಿ:ಕೊರಮ ಉ:ವಿಧ್ಯಾಥರ್ಿ ಸಾ:ರುಕ್ಮಾಪೂರ 1600=00 ರೂಗಳು ಒಂದು ರೆಡ್ಮೀ ಮೊಬೈಲ್ ಪೋನ ಅ.ಕಿ 500=00 ರೂಗಳು ದೊರೆತವು ದೊರೆತವು. ಹೀಗೆ ಒಟ್ಟು 4000/- ರೂಗಳ ನಗದು ಹಣ ಹಾಗು ಎರಡು ಮೊಬೈಲ್ ಪೋನ್ಗಳು ಅ.ಕಿ 1000/- ರೂಗಳು ಹಾಗೂ ಒಂದು ನೋಟ ಬುಕ್ ಮತ್ತು ಒಂದು ಬಾಲ್ ಪೆನ್ನು  ದೊರೆತಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ 5:35 ಪಿ.ಎಂ ದಿಂದ 6:35 ಪಿ,ಎಂ ದವರೆಗೆ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆ ಬರೆದುಕೊಂಡು ನಮ್ಮ ತಾಬೆಕ್ಕೆ ತೆಗೆದುಕೊಂಡು, ಜಪ್ತಿಪಡಿಸಿದ ಮುದ್ದೆಮಾಲು ಹಾಗೂ ಸಿಕ್ಕಿ ಬಿದ್ದ ಆರೋಪಿತರೊಂದಿಗೆ ಮರಳಿ ಠಾಣೆಗೆ 7:15 ಪಿ.ಎಂಕ್ಕೆ ಬಂದು  ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಇಬ್ಬರು ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ  ಸರಕಾರಿ ತಫರ್ೇ ಫಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು ಇರುತ್ತದೆ

ನಾರಾಯಣಪೂರ  ಪೊಲೀಸ ಠಾಣೆ ಗುನ್ನೆ ನಂ:- 74/2020  ಕಲಂ: 87 ಕೆ.ಪಿ ಯಾಕ್ಟ್ : ದಿನಾಂಕ: 01/11/2020 ರಂದು 4:15 ಪಿ .ಎಂ. ಕ್ಕೆ ಶ್ರೀ ಸಿದ್ದೇಶ್ವರ ಗೆರೆಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಫನ ಪತ್ರ ನೀಡಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ: 01/11/2020  ರಂದು 1:00 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಜೊಗಂಡಬಾವಿ ಗ್ರಾಮದಲ್ಲಿನ ಶ್ರೀ ಗುರುಪಾದೇಶ್ವರ ಮಠದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಿ ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ನೀಡುವಂತೆ ಪತ್ರ ಬರೆದು ವಿನಂತಿಸಿಕೊಂಡಿದ್ದು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರು ಸದರಿ ಇಸ್ಪೀಟ್ ಜೂಜಾಟ ಆಡುವವರ ಮೇಲೆ  ಪ್ರಕರಣ ದಾಖಲಿಸಿ ದಾಳಿಮಾಡಲು ಪರವಾನಿಗೆ ನೀಡಿದ್ದು ಕಾರಣ ನಿಮಗೆ ಎಪ್ ಐ ಆರ್ ದಾಖಲಿಸಲು ಸೂಚಿಸಿಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 74/2020 ಕಲಂ 87 ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!