ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/10/2020

By blogger on ಮಂಗಳವಾರ, ಅಕ್ಟೋಬರ್ 27, 2020                           ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/10/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 96/2020 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 27.10.2020 ರಂದು 10-30 ಪಿಎಮ್ ಕ್ಕೆ ಶ್ರೀ ಸೋಮಶೇಖರ ಎಸ್ ಕೆಂಚರೆಡ್ಡಿ ಸಿ.ಪಿ.ಐ ಯಾದಗಿರಿ ವೃತ್ತ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ದಿನಾಂಕ:27/10/2020 ರಂದು ರಾತ್ರಿ 8:15 ಗಂಟೆಯ ಸುಮಾರಿಗೆ ಯಾದಗಿರಿ ನಗರದ ಗಚ್ಚಿಬೌಡಿ ಏರಿಯಾದಲ್ಲಿರುವ ಬೈತುನ್ ಮಹಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಕೈಗೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಇಬ್ಬರು ಪಂಚರೊಂದಿಗೆ ಹಾಗು ಸಿಬ್ಬಂದಿಯವರೊಂದಿಗೆ ಹೋಗಿ ರಾತ್ರಿ 9:10 ಗಂಟೆಗೆ ದಾಳಿ ಕೈಗೊಂಡು ಮಟಕಾ ಜೂಜಾಟ ಆಡಿಸುತ್ತಿದ್ದ ಆರೋಪಿ ಸದ್ದಾಂ ತಂದೆ ಅಬ್ದುಲ್ ರಶೀದ್ ಶೇಖ್, ವಯ:20 ವರ್ಷ, ಜಾತಿ:ಮುಸ್ಲಿಂ, ಸಾ||ಗಚ್ಚಿಬೌಡಿ, ಯಾದಗಿರಿ ಈತನಿಗೆ ಹಿಡಿದಿದ್ದು, ಇನ್ನೊಬ್ಬ ಓಡಿಹೋಗಿದ್ದು, ಆರೋಪಿ ಸದ್ದಾಂ ಈತನಿಂದ 1)ನಗದು ಹಣ ರೂ.2550/- ಮತ್ತು 2)ಒಂದು ಮಟಕಾ ಅಂಕಿಗಳನ್ನು ಬರೆದುಕೊಂಡ ಚೀಟಿ, 3)ಒಂದು ಬಾಲ್ಪೆನ್ ದೊರೆತಿದ್ದು ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕೈಕೊಂಡಿದ್ದು ಇರುತ್ತದೆ. ಮೇಲ್ಕಂಡ ಆರೋಪಿತನಿಗೆ ಹಾಗು ಜಪ್ತಿಪಂಚನಾಮೆಯನ್ನು ಮುದ್ದೆಮಾಲಿನೊಂದಿಗೆ ಈ ಕೂಡ ತಮಗೆ ಒಪ್ಪಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 96/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 95/2020 ಕಲಂ: 323.324.504.506. ಜೋತೆಗೆ 34 ಐಪಿಸಿ : ಇಂದು ದಿನಾಂಕ 27/10/2020 ರಂದು 12.00 ಪಿ,ಎಮ್ ಕ್ಕೆ ಫೀಯರ್ಾದಿದಾರರಾದ ವಜೀರ ಪಟೇಲ ತಂದೆ ಮಹೇಬೂಬ ಅಲಿ ವಯ: 55 ಉ: ಡ್ರೈವರ ಜಾ: ಮುಸ್ಲಿಂ ಸಾ: ಚಾಮಾ ಲೇಔಟ ಯಾದಗಿರಿ  ಇವರು ಠಾಣೆಗೆ ಹಾಜರಾಗಿ ಒಂದು ಫೀಯರ್ಾದಿ ಹೆಳಿಕೆ ನಿಡಿದ್ದು ಸದರ ಸಾರಾಂಶವೆನೆಂದರೆ, ನಾನು ಮೇಲ್ಕಂಡ ಹೆಸರು ಮತ್ತು ವಿಳಾಸದವನಿದ್ದು ಖಾಸಗಿ ಡ್ರೈವರ ಕೇಲಸ ಮಾಡಿಕೊಂಡು ಉಪಜೀವನ ಮಾಡುತ್ತೆನೆ. ನನಗೆ ಸಾದಿಕ ತಂದೆ ಸದರ್ಾರ ಸಾ: ಕುಂಬಾರವಾಡಿ ಯಾದಗಿರಿ ಈತನ ಪರಿಚಯವಿದ್ದು ಇತನ ಲಾರಿಗೆ ನನಗೆ ಪರಿಚಯಸ್ತನಾದ ಮೋದಿನ ತಂದೆ ಮಜೀದ ಸಾ: ಗಚ್ಚಿಬೌಡಿ ಯಾದಗಿರಿ ಈತನಿಗೆ ಡ್ರೈವರ ಅಂತ ಕೆಲಸಕ್ಕೆ ಸೇರಿಸಿರುತ್ತೆನೆ. ಈಗ್ಗೆ 7-8 ದಿವಸಗಳ ಹಿಂದೆ ಸದರಿ ಮೋದಿನ ಈತನು ನನ್ನ ಹತ್ತಿರ ಬಂದು ನಾನು ಸಾದಿಕ ಇವರ ಹತ್ತಿರ ಡ್ರೈವರ ಕೆಲಸ ಮಾಡುವುದಿಲ್ಲ ಅವರು ನನಗೆ ಬಹಳ ತೊಂದರೆ ಕೊಡುತ್ತಾರೆ ನನಗೆ  ಸಾದಿಕ ಇವರ ಹತ್ತಿರದಿಂದ ಡ್ರೈವರ ಕೆಲಸ ಬಿಡಿಸಿರಿ ಅಂತ ಕೇಳಿಕೊಂಡಿದ್ದರಿಂದ ನಾನು ಸಾದಿಕ ಈತನ ಹತ್ತಿರ ಹೋಗಿ, ಮೋದಿನ ಈತನು ನಿಮ್ಮ ಹತ್ತಿರ ಡ್ರೈವರ ಕೆಲಸ ಮಾಡುವುದಿಲ್ಲ ಅಂತ ಹೇಳುತ್ತಿದ್ದಾನೆ ಆದ್ದರಿಂದ ನಿಮ್ಮ ಲಾರಿಗೆ ಬೇರೆ ಡ್ರೈವರ ವ್ಯವಸ್ಥೆ ಮಾಡಿರಿ ಅಂತ ತಿಳಿಸಿದ್ದು ಇರುತ್ತದೆ. ಹಿಗಿದ್ದು ದಿನಾಂಕ: 26.10.2020 ರಂದು ರಾತ್ರಿ 9-45 ಗಂಟೆ ಸೂಮಾರಿಗೆ ನಾನು ಮನೆಯಲ್ಲಿದ್ದಾಗ ಸಾದಿಕ ಈತನು ನನಗೆ ಪೋನ ಮಾಡಿ, ಮೋದಿನ ಡ್ರೈವರ ಈತನ ವಿಚಾರವಾಗಿ ಮಾತನಾಡುವುದಿದೆ ಜ್ಯೂನಿಯರ ಕಾಲೆಜ ಹತ್ತಿರ ಇರುವ ಪೂಜಾ ಹೊಟೇಲ ಮುಂದೆ ಬಾ ಅಂತ ತಿಳಿಸಿದಾಗ ನಾನು ಅಲ್ಲಿಗೆ ಬಂದಿದ್ದು ಅಲ್ಲಿ 1)ಸಾದಿಕ ತಂದೆ ಸದರ್ಾರ 2) ಇಸಾಕ ತಂದೆ ಇಸ್ಮಾಯಿಲ್ 3) ವಾಜೀದ ಮೇಕ್ಯಾನಿಕ್ 4) ತೌಫೀಕ್ ತಂದೆ ಸದರ್ಾರ ಸಾ: ಎಲ್ಲರೂ ಯಾದಗಿರಿ ಇವರು ಇದ್ದು ಅದರಲ್ಲಿ ಸಾದಿಕ ಈತನು ತೇರಿ ಮಾಕಾ ಬೋಸಡಾ ಉಸಕು ಕೈಕು ನಿಖಲರಹಾ ನೌಕರಿಸೇ ಅಂತ ಬೈದಾಡ ತೋಡಿಗಿದನು ಆಗ ನಾನು ತು  ಗಾಲಿ ಮತ್ ದೇ ಅಂತ ಅಂದಾಗಿ ಸಾದಿಕ ಈತನು ಮೇರೆಕು ಗಾಲಿ ಮತ್ ದೇವು ಬೋಲತಾ ಕ್ಯಾ ಸಾಲೆ ಅಂತ ಕೈಯಿಂದ ನನ್ನ ಎಡ ಕಪಾಳ ಮೇಲೆ ಹೊಡೆದನು ನಂತರ ಎಲ್ಲರೂ ಸೇರಿ ಇಸಕಾ ಬಹುತಾ ಹುವಾ ಇಸಕು ಜಾನ್ಸೆ ಮಾರೆಂಗೆ ಅಂತ ಜೀವ ಬೇದರಿಕೆ ಹಾಕುತ್ತಾ ಸಾದಿಕ ಈತನು ನನಗೆ ಹಿಡದುಕೊಂಡಾಗ ಇಸಾಕ ಈತನು ಕೈ ಮುಸ್ಟಿ ಮಾಡಿ ನನ್ನ ಎರಡು ಕಣ್ಣುಗಳಿಗೆ ಮೂಗಿಗೆ ಹೊಡೆದು ರಕ್ತಗಾಯ ಗೊಳಿಸಿದನು ಮತ್ತು ವಾಜೀದ ಈತನು ಕೈಮುಸ್ಟಿ ಮಾಡಿ ಎರಡಿ ಕಿವಿಗಳಿಗೆ ಹೊಡೆದು ಗುಪ್ತ ಗಾಯಗೊಳಿಸಿದನು ಮತ್ತು ತೌಫಿಕ್ ಈತನು ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಪೈಪನಿಂದ ತಲೆಯೆ ಮೇಲೆ ಹೊಡೆದು ಗುಪ್ತಗಾಯ ಗೊಳಿಸಿದನು ಅಷ್ಟರಲ್ಲಿ ಅಲ್ಲಿಗೆ ಬಂದ ಸೈಯದ ರಿಯಾಜ ತಂದೆ ಸೈಯದ ನಸೀರುದ್ದಿನ ಮತ್ತು  ಖಲಿಮ ತಂದೆ ವಾಸೆ ಬಾದಲ್ ರವರು ಜಗಳ ಬಿಡಿಸಿದ್ದು ಇರುತ್ತದೆ. ಸದರಿ ಘಟನೆ ದಿನಾಂಕ: 26.10.2020 ರಂದು ರಾತ್ರಿ 10 ಗಂಟೆ ಸೂಮಾರಿಗೆ ಜರೂಗಿದ್ದು ಇರುತ್ತದೆ. ನಾನು ದಿನಾಂಕ: 26.10.2020 ರಂದು ರಾತ್ರಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾದಾಗಿ ವಿಚಾರಣೆ ಕುರಿತು ಬಂದಿದ್ದ ಯಾದಗಿರಿ ನಗರ ಪೊಲೀಸ್ ಠಾಣೆಯ ಪೊಲೀಸರ ಮುಂದೆ, ಸದ್ಯ ನಾನು ಯಾವುದೇ ಫಿರ್ಯಾದಿ ಹೇಳಿಕೆ ನೀಡುವುದಿಲ್ಲ ನನ್ನ ಮಕ್ಕಳು ಮತ್ತು ಮನೆಯಲ್ಲಿ ವಿಚಾರಿಸಿ ಫಿರ್ಯಾದಿ ದೂರು ನೀಡುತ್ತೆನೆ ಅಂತ ಹೇಳಿಕೆ ನೀಡಿದ್ದು ಇರುತ್ತದೆ. ಈಗ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಹೇಳಿಕೆ ನೀಡುತ್ತಿದ್ದು ಮೇಲ್ಕಂಡ ಆರೋಪಿತರ ವಿರುದ್ಧ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತ ನೀಡಿದ ಹೆಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ್ 95/2020 ಕಲಂ 323.324.504.506. ಜೋತೆಗೆ 34 ಐಪಿಸಿ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.         

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 268/2020. ಕಲಂ 295,427 ಐಪಿ.ಸಿ: ಇಂದು ದಿನಾಂಕ:27-10-2020 ರಂದು 6:30 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಬಸಯ್ಯ ಸ್ವಾಮಿ ತಂದೆ ಶಂಕ್ರಯ್ಯ ಇಂಡಿಮಠ ಕಂದಾಯ ನಿರೀಕ್ಷಕರು ಹೈಯಾಳ ಹೋಬಳಿ ತಾ: ವಡಗೇರಾ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಪಂಪ್ಯೂಟರ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇನಂದರೆ ಶ್ರೀ ಹೈಯಾಳ ಲಿಂಗೇಶ್ವರ ದೇವಸ್ಥಾನವು ಸರಕಾರದ ಮುಜರಾಯಿ ಇಲಾಖೆಯ ಆಡಳಿತದಲ್ಲಿರುತ್ತದೆ. ದೇವಸ್ಥಾನದ ಕಟ್ಟಡ ಕಾಮಗಾರಿ ನಡೆದಿದ್ದು  ಕಟ್ಟಡ ಕಾಮಗಾರಿಗೆ   ಕಲ್ಲಿನಿಂದ ಕೆತ್ತಲಾದ ಶಿಲ್ಪಕಲೆ ಆಕೃತಿಗಳನ್ನು  ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದು ಇರುತ್ತವೆ. ಇಂದು ದಿನಾಂಕ: 27-10-2020 ರಂದು ನನಗೆ ಗ್ರಾಮದ ಶ್ರೀ ಲಿಂಗಣ್ಣ ತಂದೆ ಹೈಯಾಳಪ್ಪ ಪೂಜಾರಿ ಯವರು ದೂರವಾಣಿ ಮೂಲಕ ವಿಷಯ ತಿಳಿಸಿದ್ದೇನಂದರೆ  ಇಂದು ದಿನಾಂಕ: 27-10-2020 ರಂದು ಬೆಳಗಿನ ಜಾವ 4:00 ಗಂಟೆ ಸುಮಾರಿಗೆ ಯಾರೋ ದುಷ್ಕಮರ್ಿಗಳು ಕಲ್ಲಿನ ಆಕೃತಿಗಳನ್ನು ಒಡೆದು ನಾಶ ಮಾಡಿರುತ್ತಾರೆ ಅಂತಾ ಹೇಳಿದ್ದು ನಾನು ಮತ್ತು ನಮ್ಮ ಗ್ರಾಮಲೆಕ್ಕಿಗ ಶ್ರೀ ಶಿವಕುಮಾರ ಹೊಸಮನಿ ರವರು ಕೂಡಿ ಹೋಗಿ ನೋಡಲಾಗಿ ಅಲ್ಲಿನ  ಶಿಲ್ಪ ಕಲಾಕೃತಿಯ ಕಲ್ಲುಗಳು ಒಡೆದಿದ್ದು ಅವುಗಳ ಅಂದಾಜು ಕಿಮ್ಮತ್ತು ಸುಮಾರು 200000/- ರೂ. ಆಗುತ್ತದೆ ನಾನು ಸದರಿ ವಿಷಯವನ್ನು ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ ಠಾಣೆಗೆ ಬಂದು ದೂರು ಕೊಡುತ್ತಿದ್ದು ಇರುತ್ತದೆ  ಕಾರಣ ಹೈಯಾಳ ಬಿ ಗ್ರಾಮದ ಹೈಯಾಳಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿನ ಶಿಲ್ಪಕಲಾಕೃತಿಗಳನ್ನು ಒಡೆದು ನಾಶಮಾಡಿದ ದುಷ್ಕಮರ್ಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.268/2020 ಕಲಂ 295, 427 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಗೋಗಿ ಪೊಲೀಸ ಠಾಣೆ ಗುನ್ನೆ ನಂ: 117/2020  323, 324, 504, 506 ಸಂ: 34 ಐಪಿಸಿ :ಇಂದು ದಿನಾಂಕ: 27/10/2020 ರಂದು 1.30 ಪಿಎಂ ಕ್ಕೆ ಅಜರ್ಿದಾರ ಶ್ರೀ. ಗುರಣ್ಣ ತಂದೆ ರೆವೆಣಪ್ಪ ತೋಟದ ವಯ|| 60 ಜಾತಿ|| ಕುರುಬರ ಸಾ|| ಭೋವಿ ಕಾಡಂಗೇರಾ  ತಾ: ಶಹಾಪೂರ ಜೀ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿ ನೀಡಿದ್ದು, ಅದರ ಸಾರಂಶ ಏನಂದರೆ, ನನ್ನ ಅಣ್ಣನ ಮಗನಾದ ರೇವಣಸಿದ್ದಪ್ಪ ತಂದೆ ಕಲ್ಲಪ್ಪ ತೋಟದ ವ:30 ವರ್ಷ ಸಾ: ಕಾಡಂಗೇರಾ ತಾ: ಶಹಾಪೂರ ಜಿ: ಯಾದಗಿರಿ ಇವರೊಂದಿಗೆ ನಮ್ಮೂರಿನ ರೇವಣಸಿದ್ದಪ್ಪ ತಂದೆ ರಾಮಚಂದ್ರ ಒಡೆಯರ ವಯಾ:32 ವರ್ಷ ಉ: ಡ್ರೈವರ ಜಾ: ಕುರುಬರ ಸಾ: ಕಾಡಂಗೇರಾ ಈತನು ಈ ಹಿಂದೆ ಸುಮಾರು 2 ತಿಂಗಳ ಹಿಂದೆ ರೇವಣಸಿದ್ದಪ್ಪ ತೋಟದ ಇವನೊಂದಿಗೆ ಜಗಳ ಮಾಡಿದ್ದು ಅದೆ ವೈಷ್ಯಮ್ಯ ದಿಂದ ನಮ್ಮ ಮಗನಾದ ರೇವಣಸಿದ್ದಪ್ಪ ತೋಟದ ಇವನೊಂದಿಗೆ ಆಗಾಗಾ ಜಗಳಕ್ಕೆ ಬಂದು ಅವಾಚ್ಯವಾಗಿ ಬೈಯುತ್ತಿದ್ದ,.ಹೀಗಿದ್ದು, ದಿನಾಂಕ: 25/10/2020 ರಂದು ನಮ್ಮ ಮಗನಾದ ರೇವಣಸಿದ್ದಪ್ಪ ತೋಟದ ಈತನು ನಮ್ಮ ಹೊಲಕ್ಕೆ ಹೊಗುವಾಗ ಬೂದನೂರ ದಾರಿಯಲ್ಲಿ ಸದರಿ ರೇವಣಸಿದ್ದಪ್ಪ ಒಡೆಯರ ಇವರ ಮನೆಯ ಮುಂದೆ ಮದ್ಯಾಹ್ನ 01.00 ಗಂಟೆಯ ಸುಮಾರಿಗೆ ರೇವಣಸಿದ್ದಪ್ಪ ಒಡೆಯರ ಮೋಟಾರ್ ಸೈಕಲ್ ಮೇಲೆ ಅತೀವೇಗವಾಗಿ ಬಂದು ಮೈಮೇಲೆ ಬಂದಿದ್ದರಿಂದ ನಮ್ಮ ಮಗ ರೇವಣಸಿದ್ದಪ್ಪ ಈತನು ನಿದಾನವಾಗಿ ನಡೆಸು ಅಂತಾ ಅಂದಿದ್ದಕ್ಕೆ ರೇವಣಸಿದ್ದಪ್ಪ ಈತನು ಬೋಸಡಿ ಮಗನೆ ನಾನು ಹೆಂಗರೆ ನಡೆಸುತ್ತೇನೆ ಅದನ್ನು ಕೇಳಲು ನಿನ್ಯಾರಲೆ ಅಂತಾ ಅಂದಾಗ ನಮ್ಮ ಮಗ ರೇವಣಸಿದ್ದಪ್ಪ ಅವಾಚ್ಯವಾಗಿ ಬೈಯಬೇಡ ಅಂತಾ ಅಂದಿದ್ದಕ್ಕೆ ಒಮ್ಮೆಲೆ ಸಿಟ್ಟಿಗೆ ಬಂದು, ಈ ಮೊದಲು ನನ್ನ ಕೈಯಲ್ಲಿ ಉಳದಿದಿ ಮಗನೆ ಅಂತಾ ಅನ್ನುತ್ತಾ ಒಂದು ಕಟ್ಟಿಗೆಯ ಪಳಿಯಿಂದ ರೇವಣಸಿದ್ದಪ್ಪ ತೋಟದ ಈತನ ತಲೆಗೆ ಹೊಡೆದು ಗುಪ್ತ ಗಾಯ ಮಾಡಿರುತ್ತಾನೆ. ಅಷ್ಟರಲ್ಲಿ ಯಂಕಪ್ಪ ತಂದೆ ನಂದಪ್ಪ ಕವಾಲ್ದಾರ, ಭಿಮಾಶಂಕರ ತಂದೆ ನಾಗಪ್ಪ ಮಾಳ ಇವರುಗಳು ಬಿಡಿಸಿಕೊಂಡರು, ಆಗ ರಾಮಚಂದ್ರಪ್ಪ ತಂದೆ ರೇವಣಸಿದ್ದಪ್ಪ ಒಡೆಯರ ಈತನು ರೇವಣಸಿದ್ದಪ್ಪ ತೋಟದ ಈತನಿಗೆ ಕೈ ಹಿಡಿದಿದ್ದು, ಆಗ ಆತನ ಮಗನಾದ ರೇವಣಸಿದ್ದಪ್ಪ ಒಡೆಯರ ಈತನು ಬೆನ್ನಿಗೆ ಕೈಮುಷ್ಠಿ ಮಾಡಿ ಹೊಡೆಯುತ್ತಾ ಮಗನೆ ಇವತ್ತು ಉಳದಿದಿ ಇನ್ನೊಮ್ಮೆ ನನ್ನ ತಂಟೆಗೆ ಬಂದರೆ, ನಿನ್ನನ್ನು ಖಲ್ಲಾಸ್ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ. ಕಾರಣ ನಮ್ಮ ಮಗನಾದ ರೇವಣಸಿದ್ದಪ್ಪ ತೋಟದ ಈತನಿಗೆ ದಿ:25/10/2020 ರಂದು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಸೇರಿಸಿ, ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ: 27/10/2020 ರಂದು ಠಾಣೆಗೆ ಬಂದು ಈ ಅಜರ್ಿ ನೀಡಿದ್ದು ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 117/2020 ಕಲಂ, 323, 324, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ: 36/2020 ಕಲಂ: 109 ಸಿ.ಆರ್.ಪಿ.ಸಿ : ಇಂದು ದಿನಾಂಕ: 27/10/2020ರಂದು8-30 ಎ.ಎಂ.ಕ್ಕೆ ಠಾಣೆಯಲ್ಲಿರುವಾಗ ಶ್ರೀ ರವಿಕುಮಾರ ಸಿಪಿಸಿ-278 ರವರುಠಾಣೆಗೆ ಬಂದುವರಧಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ: 27-10-2020ರಂದು ನಾನು ಎನ್.ಆರ್.ಕರ್ತವ್ಯಕುರಿತು 5 ಎ.ಎಮ್.ಕ್ಕೆಸುರಪುರದ ಬಸ್ ನಿಲ್ದಾಣದ ಹತ್ತಿರಇರುವಾಗಒಬ್ಬ ವ್ಯಕ್ತಿ ನಮ್ಮನ್ನುಕಂಡು ಮರೆಮಾಚುತ್ತಾಓಡುತ್ತಿರುವುದನ್ನು ಗಮನಿಸಿ ಅವನನ್ನು ಹಿಡಿದು ವಿಚಾರಿಸಲಾಗಿ ಅವನುತಡವರಿಸುತ್ತಾ ಹೆಸರು ಹೇಳಲು ಹಿಂಜರಿಯುತ್ತಿದ್ದುದರಿಂದಅವನನ್ನು ಕೂಲಂಕುಷವಾಗಿ ವಿಚಾರಿಸಲಾಗಿಆತನುತನ್ನ ಹೆಸರು 1) ಪರಶುರಾಮತಂದೆ ಸೋಮಪ್ಪಕಟ್ಟಿಮನಿ ವ|| 30 ವರ್ಷಜಾ|| ಪರಿಶಿಷ್ಠ ಜಾತಿ ಉ|| ಕೂಲಿ ಕೆಲಸ ಸಾ|| ಕೋಳಿಹಾಳ ತಾ|| ಸುರಪುರಅಂತಾ ತಿಳಿಸಿದ್ದು ಸದರಿಯವನನ್ನುಅಲ್ಲೇ ಬಿಟ್ಟರೆಯಾವುದಾದರೂ ಸ್ವತ್ತಿನಅಪರಾಧ ಮಾಡುಬಹುದೆಂದು ಮನಗಂಡು ಸದರಿಯವರನ್ನು ಸ್ಥಳದಲ್ಲೇ ವಶಕ್ಕೆ ತೆಗೆದುಕೊಂಡು ಅವನ ವಿರುದ್ದ ಕಾನೂನು ಕ್ರಮಕ್ಕಾಗಿತಮ್ಮ ಮುಂದೆತಂದು ಹಾಜರು ಪಡಿಸುತ್ತಿದ್ದೇವೆಅಂತಾ ಈ ವರದಿ ನಿವೇಧಿಸಿಕೊಂಡಿದ್ದರ ಮೇಲಿಂದ  ಸದರಿಯವನ ವಿರುದ್ಧಠಾಣೆ ಪಿ.ಎ.ಆರ್ ನಂಬರ 36/2020 ಕಲಂ:109 ಸಿಆರ್ಪಿಸಿ  ನೇದ್ದರಂತೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ

 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!