ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/10/2020
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 264/2020. ಕಲಂ 41 (ಡಿ)102 ಸಿ.ಆರ್.ಪಿ.ಸಿ. ಮತ್ತು 379 ಐ.ಪಿ.ಸಿ : ಇಂದು ದಿನಾಂಕ:23-10-2019 ರಂದು : 2:00 ಪಿ.ಎಮ್.ಕ್ಕೆ ಶ್ರೀ ಬಾಬು ಹೆಚ್.ಸಿ.162 ರವರು ಠಾಣೆಗೆ ಬಂದು ಒಂದು ವರಿದಿಯೊಂದಿಗೆ ಒಬ್ಬ ವ್ಯಕ್ತಿಯನ್ನು ಹಾಜರು ಪಡಿಸಿದ್ದು ಸದರಿ ವರದಿಯ ಸಾರಾಂವೇನಂದರೆ ಇಂದು ದಿನಾಂಕ:23-10-2020 ರಂದು 1:30 ಪಿ.ಎಮ್.ಕ್ಕೆ ನಾನು ಮತ್ತು ಗೋಕುಲ ಹುಸೇನ ಪಿ.ಸಿ.172 ಇಬ್ಬರೂ ಮಾನ್ಯ ಪಿ.ಐ ಸಾಹೇಬರ ಆದೇಶದ ಮೇರೆಗೆ ನಗರದಲ್ಲಿ ಪೆಟ್ರೋಲಿಂಗ ಕರ್ತವ್ಯಕುರಿತು ಹಳೆ ಬಸ್ ನಿಲ್ದಾಣದ ಹತ್ತಿರ ಹೊರಟಾಗ ಒಬ್ಬ ವ್ಯಕ್ತಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮರೆ ಮಾಚುತ್ತಾ ತನ್ನ ಕೈಯಲ್ಲಿ ಒಂದು ಚೀಲ ಹಿಡಿದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು ಆಗ ನಾವು ಆತನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತಡವರಿಸುತ್ತಾ ತನ್ನ ಹೇಸರನ್ನು ಹೇಳಲು ಹಿಂಜರಿಯುತ್ತಿದ್ದಾಗ ನಾವು ಪುನಃ ಕೇಳಲಾಗಿ ತನ್ನ ಹೆಸರು ಬೀಮಪ್ಪ ತಂದೆ ಚೌಡಪ್ಪ ಕೌಲೇರ ವಯ: 21 ವರ್ಷ ಜಾ: ಬೇಡರ ಉ: ಕೂಲಿಕೆಲಸ ಸಾ: ತಡಬಿಡಿ ತಾ: ಶಹಾಪುರ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ಇರುವ ಚೀಲವನ್ನು ಹಿಂದಕ್ಕೆ ಮುಂದಕ್ಕೆ ಹಿಡಿಯುತ್ತಿರುವಾಗ ನಾವು ಸಂಶಯಗೊಂಡು ಅದನ್ನು ತೆರೆದು ನೋಡಲಾಗಿ ಅದರಲ್ಲಿ ಕೆಲವು ಮೊಬೈಲಗಳು ಇದ್ದು ಇವು ಎಲ್ಲಿಂದ ತಂದಿದ್ದಿಯಾ ಅದರ ಖರೀದಿ ಕಾಗದ ಪತ್ರ ಇದೆಯಾ ಅಂತಾ ಕೇಳಲಾಗಿ ಆತನು ಯಾವುದೇ ಉತ್ತರ ಕೊಡಲಿಲ್ಲ. ಮತ್ತೆ ಕೇಳಲಾಗಿ ಸದರಿ ಮೊಬೈಲಗಳನ್ನು ಟೋಕಾಪುರ ಗ್ರಾಮದಲ್ಲಿ ಕಳ್ಳತನ ಮಾಡಿದ್ದೇನೆ. ಅವುಗಳಿಗೆ ಯಾವುದೇ ಕಾಗದ ಪತ್ರಗಳಿಲ್ಲ ಎಂದು ಹೇಳಿರುತ್ತಾನೆ ಆದ್ದರಿಂದ ಸದರಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಮತ್ತು ಅವನಲ್ಲಿದ್ದ ಮೊಬೈಲಗಳೊಂದಿಗೆ ಮರಳಿ ಠಾಣೆಗೆ ಬಂದು ಆರೋಪಿ ಮತ್ತು ಮುದ್ದೇ ಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಮಾನ್ಯರವರಲ್ಲಿ ವರದಿ ಸಲ್ಲಿಸಿರುತ್ತೇನೆ.. ಅಂತಾ ಇದ್ದ ವರದಿಯ ಸಾರಾಮಶದ ಮೇಲಿಂದ ಠಾಣೆ ಗುನ್ನೆ ನಂ.264/2020 ಕಲಂ. 41(ಡಿ), 102 ಸಿ.ಆರ್.ಪಿ.ಸಿ. ಮತ್ತು 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 100/2020 379 ಐಪಿಸಿ: ಇಂದು ದಿನಾಂಕ:23/10/2020 ರಂದು ಬೆಳಿಗ್ಗೆ 10.30 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದೆರೆ, ದಿನಾಂಕ:19/09/2020 ರಂದು ಸಾಯಂಕಾಲ 17.30 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ.ಕೆಎ-33 ಆರ್-3533 ಸ್ಪ್ಲೆಂಡರ್ ಪ್ಲಸ್ ಅ:ಕಿ:40,000/- ರೂ.ಗಳು ನೇದ್ದನ್ನು ತೆಗೆದುಕೊಂಡು ಪೈನಾನ್ಸದಲ್ಲಿ ಕೆಲಸ ಮಾಡಲು ಹೋಗಿದ್ದು, ಹುಣಸಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಆನಂದ್ ಮೆಡಿಕಲ್ ಅಂಗಡಿ ಹತ್ತಿರ ತನ್ನ ಮೋಟಾರ್ ಸೈಕಲ್ ನಿಲ್ಲಿಸಿ 2 ನೇ ಮಹಡಿಯಲ್ಲಿರುವ ವೈಲಿ ಇವರ ಪೈನಾನ್ಸದಲ್ಲಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ 21.30 ಗಂಟೆಗೆ ವಾಪಸು ಮನೆಗೆ ಹೋಗಲು ಕೆಳಗಡೆ ಬಂದು ತನ್ನ ಮೋಟಾರ್ ಸೈಕಲ್ ನೋಡಲು ಮೋಟಾರ್ ಸೈಕಲ್ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಮೋಟಾರ್ ಸೈಕಲ್ ಹುಡುಕಾಡಿ ಠಾಣೆಗೆ ಬರಲು ತಡವಾಗಿದ್ದು ಇರುತ್ತದೆ. ಮೋಟಾರ್ ಸೈಕಲ್ಲನ್ನು ಪತ್ತೆ ಹಚ್ಚಿ ಕೊಡಬೇಕು ಅಂತಾ ಇತ್ಯಾದಿ ಟೈಪ್ ಮಾಡಿಸಿದ ದೂರಿನ ಮೇಲಿಂದಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 101/2020 379 ಐಪಿಸಿ : ಇಂದು ದಿನಾಂಕ:23/10/2020 ರಂದು ಸಾಯಂಕಾಲ 17.30 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದೆರೆ, ದಿನಾಂಕ:18/09/2020 ರಂದು ಸಾಯಂಕಾಲ 16.00 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ.ಕೆಎ-33 ವ್ಹಿ-4324 ಹಿರೋ ಸ್ಪ್ಲೆಂಡರ್ ಪ್ಲಸ್ ಅ:ಕಿ:45,000/- ರೂ.ಗಳು ನೇದ್ದನ್ನು ತೆಗೆದುಕೊಂಡು ತನ್ನ ಗೆಳೆಯನಿಗೆ ಬಸ್ ನಿಲ್ದಾಣಕ್ಕೆ ಬಿಟ್ಟು ಬರಲು ಹೋಗಿದ್ದು, ಹುಣಸಗಿ ಪಟ್ಟಣದ ಬಸ್ ನಿಲ್ದಾಣದ ಎಡಗಡೆ ಕಂಪೌಂಡದಲ್ಲಿ ತನ್ನ ಮೋಟಾರ್ ಸೈಕಲ್ ನಿ ಲ್ಲಿಸಿ ತನ್ನ ಗೆಳೆಯನು ಹೋದ ನಂತರ 10-15 ನಿಮಿಷಗಳ ನಂತರ ಬಂದು ತನ್ನ ಮೋಟಾರ್ ಸೈಕಲ್ ನೋಡಲು ಮೋಟಾರ್ ಸೈಕಲ್ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಮೋಟಾರ್ ಸೈಕಲ್ ಎಲ್ಲಾ ಕಡೆಗತೆ ಹುಡುಕಾಡಿ ಠಾಣೆಗೆ ಬರಲು ತಡವಾಗಿದ್ದು ಇರುತ್ತದೆ. ಮೋಟಾರ್ ಸೈಕಲ್ಲನ್ನು ಪತ್ತೆ ಹಚ್ಚಿ ಕೊಡಬೇಕು ಅಂತಾ ಇತ್ಯಾದಿ ಟೈಪ್ ಮಾಡಿಸಿದ ದೂರಿನ ಮೇಲಿಂದಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ: 163/2020 ಕಲಂ: ಮಹಿಳೆ ಕಾಣೆಯಾದ ಬಗ್ಗೆ : ಇಂದು ದಿ: 23/10/2020 ರಂದು 12.15 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಕರೆಮ್ಮ ಗಂಡ ಸಾಬಣ್ಣ ಎಲ್ಹೇರಿ ವಯಾ|| 50 ಜಾ|| ಕುರುಬರ ಉ|| ಹೊಲಮನೆಗೆಲಸ ಸಾ|| ಬೂದನೂರ ತಾ|| ಶಹಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನಂದರೆ, ನನಗೆ ಒಟ್ಟು 4 ಜನ ಮಕ್ಕಳಿದ್ದು, 3 ಜನ ಗಂಡುಮಕ್ಕಳು, ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ಹೆಣ್ಣು ಮಗಳಾದ ಸಿದ್ದಮ್ಮ ಇವಳಿಗೆ ಸುಮಾರು 05 ವರ್ಷಗಳ ಹಿಂದೆ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಬೀರಪ್ಪ ಹಿರೇಕುರುಬರ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನನ್ನ ಮಗಳು ಹಾಗು ಅಳಿಯ ಬೀರಪ್ಪ ತಂದೆ ಜಟ್ಟೆಪ್ಪ ಹಿರೆಕುರುಬರ ಇಬ್ಬರೂ ಅನ್ಯೋನ್ಯವಾಗಿದ್ದರು. ಸದ್ಯ ನನ್ನ ಮಗಳಿಗೆ ರೇವಣಸಿದ್ದ ಎಂಬ 2ವರ್ಷದ ಗಂಡು ಮಗು ಹಾಗೂ ಶ್ರಾವಣಿ ಎಂಬ 5 ತಿಂಗಳು ಹೆಣ್ಣುಮಗಳಿರುತ್ತಾರೆ. ನನ್ನ ಮಗಳು ಸುಮಾರು 6 ತಿಂಗಳ ಹಿಂದೆ ನಮ್ಮೂರಾದ ಬೂದನೂರಿಗೆ 2ನೇ ಮಗುವಿನ ಬಾಣೆತನ ಕುರಿತು ಬಂದಿದ್ದಳು. ಸದರಿಯವಳಿಗೆ ತಮ್ಮ ಊರಿಗೆ ಕರೆದುಕೊಂಡು ಹೋಗಲು ಆಕೆಯ ಗಂಡನಾದ ಬೀರಪ್ಪ ಈತನು ದಿನಾಂಕ: 27/09/2020 ರಂದು ನಮ್ಮೂರಿಗೆ ಬಂದಿದ್ದನು. ಹೀಗಿದ್ದು ದಿನಾಂಕ 28/09/2020 ರಂದು ಬೆಳಿಗ್ಗೆ ನನ್ನ ಮಗಳು ಸಿದ್ದಮ್ಮ ಹಾಗೂ ಆಕೆಯ ಗಂಡ ಬೀರಪ್ಪ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ತಮ್ಮ ಊರಾದ ಬಳಗಾನೂರಕ್ಕೆ ಹೋಗುವ ಕುರಿತು ಬೂದನೂರದಿಂದ ಹೋದರು. ನಂತರ ಮದ್ಯಾಹ್ನ 1:00 ಗಂಟೆಗೆ ನಮ್ಮ ಅಳಿಯ ಬೀರಪ್ಪ ಈತನು ನಮಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾವು ಚಾಮನಾಳ ಬಸ್ ನಿಲ್ದಾಣದಲ್ಲಿ ಇದ್ದಾಗ 12:30 ಪಿಎಮ್ ಸುಮಾರಿಗೆ ಸಿದ್ದಮ್ಮ ಇವಳು ತನ್ನ ಮಕ್ಕಳೊಂದಿಗೆ ಕಾಲ್ಮಡಿಯಲು ಹೋಗಿಬರುತ್ತೇನೆ ಅಂತ ಅಂದವಳು ಮರಳಿ ಬರಲಿಲ್ಲ ಆಗ ನಾನು ಎಲ್ಲ ಕಡೆ ಹುಡುಕಿದರೂ ಸಿಕ್ಕಿರುವದಿಲ್ಲ ಅಂತ ತಿಳಿಸಿದಾಗ ನಾನು ಮತ್ತು ನನ್ನ ಮಗನಾದ ಸಿದ್ದಪ್ಪ ತಂದೆ ಸಾಬಣ್ಣ ಇಬ್ಬರೂ ಕೂಡಿ ಚಾಮನಾಳ ಬಸ್ ನಿಲ್ದಾಣಕ್ಕೆ ಬಂದು ನಮ್ಮ ಅಳಿಯ ನಾವು ಕೂಡಿಕೊಂಡು ಬಸ್ ನಿಲ್ದಾಣ, ಚಾಮನಾಳ ಊರಲ್ಲಿ, ದಂಡಸೋಲಾಪುರ ಹೀಗೆ ಎಲ್ಲಾ ಕಡೆ ಹುಡುಕಾಡಿದ್ದು, ನನ್ನ ಮಗಳು ಸಿದ್ದಮ್ಮ ಇವಳು ಎಲ್ಲಿಯೂ ಸಿಗಲಿಲ್ಲ. ನಂತರ ನಾನು ನಮ್ಮ ಸಂಬಂದಿಕರ ಊರಾದ ಮದ್ರಿಕಿ, ಕಿರದಳ್ಳಿ, ಗೌಡಗೇರಾ ಗ್ರಾಮಗಳಿಗೆ ಹೋಗಿ ನನ್ನ ಮಗಳ ಬಗ್ಗೆ ವಿಚಾರಿಸಲು ನನ್ನ ಮಗಳು ಎಲ್ಲಿಯೂ ಸಿಗಲಿಲ್ಲ. ನಾವು ಎಲ್ಲರೂ ಮನೆಯಲ್ಲಿ ವಿಚಾರಿಸಿ ಎಲ್ಲಾ ಕಡೆ ಹುಡುಕಾಡಿ ತಡವಾಗಿ ಇಂದು ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡಿದ್ದು ಇರುತ್ತದೆ. ಸದರಿ ನನ್ನ ಮಗಳ ಚಹರೆ ಪಟ್ಟಿ, ದುಂಡನೇಯ ಮುಖ, ಕಪ್ಪು ಬಣ್ಣ, ನೀಟಾದ ಮೂಗು, ಸಾದಾರಣ ಮೈಕಟ್ಟು, ಎತ್ತರ 5 ಪೀಟ 2 ಇಂಚ ಇದ್ದು ಸದರಿಯವಳು ಮನೆಯಿಂದ ಹೋಗುವಾಗ ಒಂದು ಹಸಿರು ಬಣ್ಣದ ಪತ್ತಲ, ಒಂದು ಹಸಿರು ಬಣ್ಣದ ಜಂಪರ ಧರಿಸಿದ್ದು ಇರುತ್ತದೆ. ಕಾರಣ ಕಾಣೆಯಾದ ನನ್ನ ಮಗಳು ಸಿದ್ದಮ್ಮ ಗಂಡ ಬೀರಪ್ಪ ಹಿರೇಕುರುಬರ ವಯಾ|| 23 ಜಾ|| ಕುರುಬರ ಉ|| ಕೂಲಿಕೆಲಸ ಸಾ|| ಬಳಗಾನೂರ ಇವಳು ತನ್ನ ಮಕ್ಕಳಾದ ರೇವಣಸಿದ್ದ ವಯಾ|| 2ವರ್ಷ, ಶ್ರಾವಣಿ ವಯಾ|| 5 ತಿಂಗಳು ಇವರೊಂದಿಗೆ ಕಾಣೆಯಾಗಿದ್ದು ಕಾರಣ ನನ್ನ ಮಗಳನ್ನು ಹುಡುಕಿ ಕೊಡಬೇಕು ಅಂತಾ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 163/2020 ಕಲಂ: ಮಹಿಳೆ ಕಾಣೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ: 164/2020 ಕಲಂ: 87 ಕೆಪಿ ಯಾಕ್ಟ : ಇಂದು ದಿ : 23/10/2020 ರಂದು 03 :30 ಪಿಎಮ್ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ನಾನು ಇಂದು ದಿನಾಂಕ:-23.10.2020 ರಂದು 02:15 ಪಿ.ಎಂ ಕ್ಕೆ ಪೆಟ್ರೋಲಿಂಗ ಕುರಿತು ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾಳಗಿ ಗ್ರಾಮದ ಕಡೆಗೆ ಹೋದಾಗ ಭಾತ್ಮೀದಾರರಿಂದ ತಿಳಿದು ಬಂದಿದ್ದೇನೆಂದರೆ, ಯಾಳಗಿ ಗ್ರಾಮದ ಲಕ್ಷ್ಮೀ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದಿದ್ದರಿಂದ ಸದರಿ ವಿಷಯವನ್ನು ಖಚಿತಪಡಿಸಿಕೊಂಡು ನಂತರ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 03.30 ಪಿಎಮ್ಕ್ಕೆ ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತ ಜ್ಞಾಪನ ಪತ್ರ ನೀಡಿದ್ದು, ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 164/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 265/2020 ಕಲಂ 324, 504, 506 ಸಂಗಡ 34 ಐ.ಪಿ.ಸಿ : ಇಂದು ದಿನಾಂಕ:23/10/2020 ರಂದು 7.00 ಪಿ.ಎಂ.ಕ್ಕೆ ಕೋರ್ಟ ಕರ್ತವ್ಯದ ಸಿಬ್ಬಂದಿಯವರಾದ ಶ್ರೀ ರಾಮಣ್ಣ ಪಿಸಿ-424 ಶಹಾಪುರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪಡೆದುಕೊಂಡು ಬಂದು ಹಾಜರಪಡಿಸಿದ ಖಾಸಗಿ ದೂರಿನ ಸಾರಾಂಶವೇನೆಂದರೆ, ಫಿಯರ್ಾದಿ ಶ್ರೀ ದೇವಿಂದ್ರಪ್ಪ ತಂ/ ನಿಂಗಪ್ಪ ಛಲವಾದಿ ರವರು ತಮ್ಮ ಸಂಬಂಧಿಕರು ಜಗಳವಾಡಿಕೊಂಡಿದ್ದರಿಂದ ಶಹಾಪುರ ಪೊಲೀಸರು ಅವರಿಗೆ ಠಾಣೆಗೆ ಕರೆದುಕೊಂಡು ಬಂದಿದ್ದಾಗ ಈ ವಿಷಯ ತಿಳಿದುಕೊಂಡ ಫಿಯರ್ಾದಿ ದಿನಾಂಕ: 11/04/2020 ರಂದು ಸಾಯಂಕಾಲ 4 ಪಿ.ಎಂ. ಸುಮಾರಿಗೆ ಶಹಾಪುರ ಠಾಣೆಗೆ ಹಾಜರಾಗಿ ಆರೋಪಿ ನಂ.1 ರವರಿಗೆ ಬೇಟಿಯಾಗಿ ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡಿಕೊಂಡಿದ್ದಾರೆ ನಾವೆಲ್ಲರೂ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಬಿಡುಗಡೆ ಮಾಡಿ ಅಂತಾ ಕೇಳಿದ್ದಕ್ಕೆ ಹಣಮರೆಡ್ಡೆಪ್ಪ ಇನ್ಸಪೆಕ್ಟರ್ ರವರು ಫಿಯರ್ಾದಿಗೆ ಠಾಣೆಯಿಂದ ಹೊರಗೆ ಹಾಕಿ ಗೇಟಿನ ಕುಳ್ಳಿರಿಸಿ ನಂತರ ಆರೋಪಿ ನಂ 2 ಮತ್ತು 3 ರವರು ಫಿಯರ್ಾದಿಯನ್ನು ಆರೋಪಿ.ನಂ.1 ರವರ ಚೇಂಬರಕ್ಕೆ ಕರೆದುಕೊಂಡು ಹೋದಾಗ ಆರೋಪಿ.ನಂ.1 ರವರು ಫಿಯರ್ಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಬಡಿಗೆಯಿಂದ ಹೊಡೆಬಡೆ ಮಾಡಿ ಜೀವ ಭಯ ಹಾಕಿದ್ದು ಈ ಬಗ್ಗೆ ದೂರು ನೀಡಲು ಹೋದರೆ ಆರೋಪಿತರು ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಯಾವುದೇ ಕ್ರಮ ಜರುಗಿಸಿರುವುದಿಲ್ಲ ಮತ್ತು ಕೋರೊನಾ ಹಾವಳಿಯಿಂದ ಲಾಕ್ ಇರುವುದರಿಂದ ಮೇಲಾಧಿಕಾರಿಗಳಲ್ಲಿ ದೂರು ಸಲ್ಲಿಸಲು ವಿಳಂಭವಾಗಿರುತ್ತದೆ ಕಾರಣ ಆರೋಪಿತರ ವಿರುದ್ದ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಲ್ಲಿ ವಿನಂತಿಸಿಕೊಂಡಿದ್ದು, ಖಾಸಗಿ ದೂರು ಸಂಖ್ಯೆ 130/2020 ನೇದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.265/2020 ಕಲಂ 324, 504, 506 ಸಂಗಡ 34 ಐ.ಪಿ.ಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- ಯುಡಿಆರ ನಂ: 30/2020 ಕಲಂ. 174 ಸಿಆರ್.ಪಿಸಿ : ಇಂದು ದಿನಾಂಕ 23.10.2020 ರಂದು ಮಧ್ಯಾಹ್ನ 4-00 ಗಂಟೆಗೆ ಯಾದಗಿರಿಯಿಂದ ಡೆತ ಎಮ್. ಎಲ್.ಸಿ. ಮಾಹಿತಿ ಬಂದ ಮೇರೆಗೆ ಸದರಿ ಡೆತ ಎಮ್.ಎಲ್.ಸಿ ವಿಚಾರಣೆ ಕುರಿತು ಶ್ರೀ ಹಣಮಂತ ಎ.ಎಸ್.ಐ ಗುರುಮಠಕಲ ಪೊಲೀಸ್ ಠಾಣೆರವರನ್ನು ಕಳಿಸಿಕೊಟ್ಟಿದ್ದು ಸದರಿಯವರು ಆಸ್ಪತ್ರೆಗೆ ಭೇಟಿ ಮಾಡಿ ಡೆತ ಎಮ್. ಎಲ್.ಸಿ ವಸೂಲು ಮಾಡಿಕೊಂಡು ಮೃತನ ಪತ್ನಿಯಾದ ಫಿಯರ್ಾದಿ ಹೇಳಿಕೆ ಪಡೆದುಕೊಂಡು ಸಂಗಡ ಕರೆದುಕೊಂಡು ಹೋಗಿದ್ದ ಶ್ರೀ ಮಹಾದೇವ ಪಿಸಿ-334 ರವರ ಸಂಗಡ ಕಳಿಸಿಕೊಟ್ಟಿದ್ದು ಸದರಿ ಫಿಯರ್ಾದಿ ನೀಡಿದ ಹೇಳಿಕೆ ಸಾರಾಂಶವೇನೆಂದರೆ, ಇಂದು ದಿನಾಂಕ 23.10.2020 ರಂದು ಬೆಳಿಗ್ಗೆ ಫಿಯರ್ಾದಿಯ ಗಂಡ ಮೃತ ಶಂಕರ ಮತ್ತು ಬಸವನ ತಾಂಡಾದ ದೇವಪ್ಪ ಇಬ್ಬರೂ ಕೂಡಿ ಮೃತನ ಸ್ವಂತ ಜಮೀನದಲ್ಲಿ ತೊಗರಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಲು ಹೋದಾಗ ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಕೆಲಸ ಮಾಡುವ ಸಮಯದಲ್ಲಿ ಯಾವುದೋ ವಿಷದ ಹಾವು ಶಂಕರನ ಎಡಗಾಲಿನ ಹಿಮ್ಮಡಿಯಿಂದ ಸ್ವಲ್ಪ ಮೇಲಿನ ಭಾಗದಲ್ಲಿ ಕಚ್ಚಿ ಸೂಜಿಮೊನೆ ಗಾತ್ರದಷ್ಟು ಗಾಯಗೊಳಿಸಿದ್ದು, ಮೃತನು ಜೋರಾಗಿ ಚೀರಿ ತನಗೆ ಹಾವು ಕಚ್ಚಿದ ಬಗ್ಗೆ ತನ್ನ ಜೊತೆಗಿದ್ದ ದೇವಪ್ಪನಿಗೆ ತಿಳಿಸಿದ್ದು, ಇಬ್ಬರೂ ಕೂಡಿ ಬಸವನ ತಾಂಡಾಕ್ಕೆ ಬಂದಿದ್ದು ಅಲ್ಲಿಂದ ಫಿಯರ್ಾದಿ ಮತ್ತು ಇತರರು ಸೇರಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಾದಗಿರಿಗೆ ತಂದು ಸೇರಿಕೆ ಮಾಡಿದ್ದು ಸದರಿ ಆಸ್ಪತ್ರೆಯಲ್ಲಿಯೇ ಇಂದು ದಿನಾಂಕ. 23.10.2020 ರಂದು ಮಧ್ಯಾಹ್ನ 3-41 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಸದರಿಯವನ ಸಾವಿನಲ್ಲಿ ಯಾರ ಮೇಲು ಸಂಶಯ, ವಗೈರೆ ಇರುವದಿಲ್ಲ ಮುಂದಿನ ಕ್ರಮ ಜರುಗಿಸಬೇಕು ಅಂತ ಸಾರಾಂಶ ಇರುತ್ತದೆ.
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 149/2020 ಕಲಂ: 15(ಎ), 32(ಸಿ) ಕೆಇ ಆಕ್ಟ್ : ದಿನಾಂಕ: 17.03.2020 ರಂದು ರಾತ್ರಿ 8:25 ಗಂಟೆಗೆ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ ಗುರುಮಠಕಲ್ ಪಟ್ಟಣದ ಸಾಮ್ರಾಟ್ ಲಾಡ್ಜ ಹತ್ತಿರ ಕಾಕಲವಾರ ಕಡೆಗೆ ಹೋಗುವ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಕ್ರಮವಾಗಿ ಮಧ್ಯವನ್ನು ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ಸಮಯ ಸ್ಥಳಕ್ಕೆ ಹೋಗಿ ರಾತ್ರಿ 8:45 ಗಂಟೆಗೆ ದಾಳೀ ಮಾಡಿ ಅವರ ವಶದಲ್ಲಿದ್ದ 1] 90 ಎಂ.ಎಲ್ನ ಓರಿಜಿನಲ್ ಚ್ವಾಯಿಸ್ ವಿಸ್ಕಿಯ 10 ಖಾಲಿ ಪೌಚ್ಗಳು ಅ.ಕಿ-00 2] ಮದ್ಯ ಸೇವನೆ ಮಾಡಲು ಬಳಸಿದ 05 ಪ್ಲಾಸ್ಟಿಕ್ ಗ್ಲಾಸ್ ಅ.ಕಿ-00 3] ಒಂದು ಲೀಟರ್ನ 03 ನೀರಿನ ಬಾಟಲಿ ಅ.ಕಿ-00 4] 90 ಎಮ್.ಎಲ್ನ 10 ಓರಿಜಿನಲ್ ಚ್ವಾಯಿಸ್ ವಿಸ್ಕಿಯ 10 ಪೌಚ್ಗಳ ಬೆಲೆ-351=30 ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ವಶಕ್ಕೆ ತೆಗೆದುಕೊಂಡು ನಂತರ 04 ಜನ ಆರೋಪಿತರನ್ನು, ಮುದ್ದೆ ಮಾಲು, ಮೂಲ ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ಬಂದು ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡೆನು.