ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/10/2020
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 262/2020 ಕಲಂ 78 (3) ಕೆ.ಪಿ ಕೆ.ಪಿ ಆಕ್ಟ : ಇಂದು ದಿನಾಂಕ 22/10/2020 ರಂದು ರಾತ್ರಿ 21-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ್ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು, ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 22/10/2020 ರಂದು ಸಾಯಂಕಾಲ 18-00 ಗಂಟೆಗೆ ಠಾಣೆಯಲ್ಲಿದ್ದಾಗ, ಶಹಾಪೂರ ನಗರದ ಸಿ.ಬಿ ಕಮಾನ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 77/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿಮಾಡಿಕೊಂಡು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಸಾಯಂಕಾಲ 19-00 ಗಂಟೆಗೆ ಅನುಮತಿ ಪಡೆದುಕೊಂಡು, ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಸಾಯಂಕಾಲ 19-20 ಗಂಟೆಗೆ ದಾಳಿ ಮಾಡಿ ಆರೋಪಿ ಲಕ್ಷ್ಮಣ ತಂದೆ ಶಿವಣ್ಣ ಸಿದ್ರಾ ವಯ 50 ವರ್ಷ ಜಾತಿ ಗಾಣೀಗ ಉಃ ಮಟಕಾ ನಂಬರ ಬರೆದುಕೊಳ್ಳುವದು ಸಾಃ ಸಗರ(ಬಿ) ಹಾಲಿವಸತಿ ಬಾಪುಗೌಡ ನಗರ ಶಹಾಪೂರ. ಜಿಃ ಯಾದಗಿರಿ ಈತನನ್ನು ವಶಕ್ಕೆ ಪಡೆದುಕೊಂಡು ಈತನಿಂದ ನಗದು ಹಣ 1060=00 ರೂಪಾಯಿ, ಒಂದು ಬಾಲ್ ಪೆನ್, ಹಾಗೂ ನಾಲ್ಕು ಮಟಕಾ ಚೀಟಿಗಳು ಸಾಯಂಕಾಲ 19-30 ಗಂಟೆಯಿಂದ 20-30 ಗಂಟೆಯ ಅವಧಿಯಲ್ಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ ಆರೋಪಿತನ ವಿರುದ್ದ ಠಾಣೆ ಗುನ್ನೆ ನಂ 262/2020 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 122/2020 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 22/10/2020 ರಂದು 6 ಪಿ.ಎಮ್.ಕ್ಕೆ ಮುಡಬೂಳ ಗ್ರಾಮದ ಹಣಮಂತ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 7.30 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 8.15 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 2275=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 12/2020 174 ಸಿ.ಆರ್.ಪಿ.ಸಿ : ಮೃತನು ಸುಮಾರು 5-6 ವರ್ಷಗಳಿಂದ ಸರಾಯಿ ಕುಡಿಯಲು ಪ್ರಾರಂಭಿಸಿ ದಿನಾಲೂ ಬೆಳಗಿನಿಂದ ರಾತ್ರಿ ವರೆಗೆ ತಾನು ಮಾಡಿದ ಕೂಲಿ ಕೆಲಸದ ಹಣವನ್ನು ಸರಾಯಿ ಕುಡಿದು ತಿರುಗಾಡುತಿದ್ದು, ಆರು ತಿಂಗಳ ಕಾಲ ತಮ್ಮೂರಿನಲ್ಲಿರಿವುದು ಮತ್ತೆ ಆರು ತಿಂಗಳು ಹುಣಸಗಿ ತಾಂಡಾದಲ್ಲಿರುವ ತನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ತನ್ನ ಅತ್ತೆ-ಮಾವನ ಮನೆಯಲ್ಲಿ ಇರುತ್ತಿದ್ದು, ಈಗೆ ಎರಡು ತಿಂಗಳ ಹಿಂದೆ ಮೃತ ಹಣಮಂತ ಇತನು ತನ್ನ ಹೆಂಡತಿ ಮಕ್ಕಳೊಂದಿಗೆ ಹುಣಸಗಿ ತಾಂಡಾಕ್ಕೆ ಬಂದು ತನ್ನ ಅತ್ತೆ-ಮಾವನವರ ತಮ್ಮ ಮನೆಯ ಪಕ್ಕದಲ್ಲಿ ಶೆಡ್ ಹಾಕಿಕೊಟ್ಟಿದ್ದು, ಮೃತನು ತನ್ನ ಹೆಂಡತಿ ಮಕ್ಕಳೊಂದಿಗೆ ಅದರಲ್ಲಿ ವಾಸವಾಗಿದ್ದು. ದಿನಾಂಕ;21/10/2020 ರಂದು ರಾತ್ರಿ 09 ಗಂಟೆಯ ಸುಮಾರಿಗೆ ಅತಿಯಾಗಿ ಸರಾಯಿ ಕುಡಿದ ಅಮಲಿನಲ್ಲಿ, ಕ್ರೀಮಿನಾಶಕ ಔಷದಿ ಬಾಟಲಿಯನ್ನು ತನ್ನೊಂದಿಗೆ ತಂದು ಮೃತನ್ನು ಪಿಯರ್ಾದಿಯ ಎದುರುಗಡೆಯೇ ಕ್ರೀಮಿನಾಶಕ ಔಷದಿಯ ಬಾಟಲಿಯ ಡಕ್ಕನ್ ತೆಗೆದು ಕುಡಿದಾಗ ಪಿಯರ್ಾದಿ & ಮೃತನ ಮಕ್ಕಳು ಚಿರಾಡಿದಾಗ ಅಕ್ಕಪಕ್ಕದ ಜನರು ಬಂದು ನೋಡಿ ಹುಣಸಗಿ ಸರಕಾರಿ ಆಸ್ಪತ್ರೆಗೆ ಒಂದು ಆಟೋ ಟಮ್-ಟಮ್ದಲ್ಲಿ ತಂದು ಇಲಾಜು ಕುರಿತು ಸೇರಿಕೆ ಮಾಡಿದ್ದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಸುರಪೂರ & ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಒಯ್ದು ಇಲಾಜು ಮಾಡಿಸಿ, ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ, ಇಂದು ದಿನಾಂಕ;22/10/2020 ರಂದು ಬೆಳಗ್ಗೆ 05.10 ಗಂಟೆಗೆ ಸುಮಾರಿಗೆ ಚಿಕಿತ್ಸೆ ಕುರಿತು ಒಯ್ದದಾಗ ಮೃತನು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿದ್ದು ಇರುತ್ತದೆ ರಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ನಾನು ಪಿಎಸ್ಐ ಹುಣಸಗಿ ಠಾಣೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಹೋಗಿ ಮೃತನ ಹೆಂಡತಿಯಾದ ಶ್ರೀಮತಿ. ಚಾಂದಿಬಾಯಿ ಗಂಡ ಹಣಮಂತ ಪವಾರ ವಯ:30ವರ್ಷ ಜಾತಿ:ಲಮಾಣಿ ಉ:ಕೂಲಿ ಕೆಲಸ ಸಾ;ಹಾಲಬಾವಿ ತಾಂಡಾ ತಾ:ಲಿಂಗಸೂಗುರ ಹಾವ:ಹುಣಸಗಿ ತಾಂಡಾ ತಾ:ಹುಣಸಗಿ ಇವರ ಹೇಳಿಕೆ ಪಡೆದುಕೊಂಡು ಠಾಣೆಯಿಂದ ಪೋನ್ ಮುಖಾಂತರ ಯುಡಿಆರ್ ನಂಬರ ಪಡೆದು ಮೃತನ ಶವ ಪಂಚನಾಮೆ ಮಾಡಿ, ಶವದ ಪಿ.ಎಮ್.ಇ ಯನ್ನು ಮಾನ್ಯ ವೈದ್ಯಾಧಿಕಾರಿಗಳು ರಿಮ್ಸ್ ಆಸ್ಪತ್ರೆ ರಾಯಚೂರ ರವರಲ್ಲಿ ಮಾಡಿಸಿ ನಂತರ ಠಾಣೆಗೆ ಬಂದಿದ್ದು, ಮೃತನ ಹೆಂಡತಿಯಾದ ಚಾಂದಿಬಾಯಿ ರವರು ಹೇಳಿಕೆ ಮೇಲಿನಂತೆ ಕೊಟ್ಟಿದ್ದು, ಸದರಿ ಸಾರಾಂಶದ ಮೇಲಿಂದಾ ಠಾಣೆ ಯುಡಿಆರ್ ನಂ:12/2020 ಕಲಂ. 174 ಸಿಆರ್ ಪಿಸಿ ಅಡಿಯಲ್ಲಿಕ್ರಮ ಜರುಗಿಸಿದ್ದು ಇರುತ್ತದೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ: 263/2020. ಕಲಂ. 279.338 ಐ.ಪಿ.ಸಿ. ಮತ್ತು 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ: 22/10/2020 ರಂದು 22-20 ಗಂಟೆಗೆ ಪಿಯರ್ಾದಿ ಶ್ರೀ ಮಲ್ಲಣ್ಣ ತಂದೆ ಮಾರ್ಥಂಡಪ್ಪ ಮಡಿವಾಳಕರ ವ||36 ಜಾ|| ಅಗಸರ ಉ||ಗುತ್ತೇದಾರ ಸಾ|| ಗೌಡಗೇರ ತಾ|| ಸುರಪೂರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ದಸ್ತೂರು ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ-19/10/2020 ರಂದು ರಾತ್ರಿ ಸುಮಾರು 07-30 ಗಂಟೆಯ ಸಮಯದಲ್ಲಿ ನನ್ನ ತಮ್ಮನಾದ ದೇವರಾಜನು ನನಗೆ ಪೋನ ಮಾಡಿ, ನನ್ನ ದೊಡ್ಡಪ್ಪನ ಮಗನಾದ ಮೌನೇಶನು ಮೋಟರ್ ಬೈಕ್ ನಿಂದ ಬಿದ್ದು ಗಾಯಗೊಂಡು ಶಹಾಪೂರ ಆಸ್ಪತ್ರೆಗೆ ಬಂದಿರುವ ವಿಚಾರವನ್ನು ತಿಳಿಸಿದನು. ನಂತರ ನಾನು ಶಹಾಪೂರ ಸರಕಾರಿ ಆಸ್ಪತ್ರೆಗೆ ಹೋಗಿ ಮೌನೇಶನನ್ನು ನೋಡಲಾಗಿ ಆತನ ಎರಡೂ ಮೊಳಕಾಲುಗಳಿಗೆ, ಎಡಗೈಗೆ ತೆರಚಿದ ರಕ್ತಗಾಯವಾಗಿದ್ದು ಎಡಗಾಲು ಮೇಲೆತ್ತಲು ಬರುತ್ತಿರಲಿಲ್ಲ. ಈ ಬಗ್ಗೆ ನಾನು ಮೌನೇಶನನ್ನು ಕೇಳಿದಾಗ ಈ ದಿನ ದಿನಾಂಕ-19/10/2020 ರಂದು ಕೊಂಕಲ್ ನಲ್ಲಿ ನಮ್ಮ ಸಂಬಂದದಲ್ಲಿ ಇದ್ದ ತೊಟ್ಟಿಲು ಕಾರ್ಯಕ್ರಮವನ್ನು ಮುಗಿಸಿಕೊಂಡು ನಾನು ನಮ್ಮ ಗ್ರಾಮದ ಚಂದ್ರಪ್ಪ ಇಬ್ಬರೂ ಮೋಟರ್ ಸೈಕಲ್ ನಂ ಕೆಎ-33 ವಾಯ್-8470 ನೇದ್ದರ ಮೇಲೆ ಕೊಂಕಲ್ ನಿಂದ ಹೊರಟು ಗೌಡಗೇರಾಗೆ ಹೋಗುತ್ತಿದ್ದಾಗ ಯಾದಗಿರಿ-ಸುರಪೂರ ಮುಖ್ಯ ರಸ್ತೆಯ ಮೇಲೆ ಹತ್ತಿಗೂಡುರು ಗ್ರಾಮದ ಗುಳಗಿ ವೇ ಬ್ರೀಡ್ಜ ಹತ್ತಿರ ರಸ್ತೆಯ ಹಂಪ್ಸ ಬಳಿ ಸಂಜೆ 06-00 ಗಂಟೆಯ ಸುಮಾರಿಗೆ ಮೋಟರ್ ಸೈಕಲ್ ನಡೆಸುತ್ತಿದ್ದ ಚಂದ್ರಪ್ಪನು ಮೊಟರ್ ಬೈಕ್ನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಓಡಿಸಿಕೊಂಡು ಹೋಗಿ ಹಂಪ್ಸ್ ಹಾರಿಸಿದ್ದರಿಂದ ಬೈಕ ಸಮೇತ ಗಾಡಿ ಓಡಿಸುತ್ತಿದ್ದ ಚಂದ್ರಪ್ಪ ಮತ್ತು ಬೈಕನ ಹಿಂಬದಿಯಲ್ಲಿ ಕುಳಿತಿದ್ದ ನಾನು ಇಬ್ಬರೂ ಕೆಳಗಡೆ ಬಿದ್ದಿದ್ದು ಅಲ್ಲಿಯೇ ಹೋಗುತ್ತಿದ್ದ ಆಲ್ದಾಳ ವೆಂಕಟೇಶ ಮತ್ತು ಪ್ರಭುರೆಡ್ಡಿ ಬೂದನೂರು ರವರುಗಳು ಅಪಘಾತವನ್ನು ನೋಡಿ ಬಂದು ವಿಚಾರಿಸಿ ಗಾಯಗೊಂಡಿದ್ದ ತನ್ನನ್ನು ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಶಹಾಪೂರಕ್ಕೆ ಕಳುಹಿಸಿದ ಬಗ್ಗೆ ಮತ್ತು ಅಲ್ಲಿ ಜನರು ಸೇರುತ್ತಿದ್ದಂತಯೇ ಸಣ್ಣ ಪುಟ್ಟ ಗಾಯಗಳಾಗಿದ್ದ ಚಂದ್ರಪ್ಪ ತಂದೆ ಮಾನಕೋಜಪ್ಪನು ಅಲ್ಲಿಂದ ಓಡಿ ಹೋದನು. ಅಪಘಾತವಾದ ಮೋಟರ ಬೈಕ್ ನಂ ಕೆ,ಎ-33 ವಾಯ್-8470 ನೇದ್ದು ಜಖಂಗೊಂಡಿರುತ್ತದೆ ಅಂತಾ ಮೌನೇಶನು ತಿಳಿಸಿದನು. ನನ್ನ ತಮ್ಮ ಮೌನೇಶನನ್ನು ಹೆಚ್ಚಿನ ಚಿಕಿತ್ಸೆಗೆ ಮೀರಜ್ ಆಸ್ಪತ್ರೆಗೆ ಸೇರಿಕೆ ಮಾಡಿ ಈಗ ತಡವಾಗಿ ಬಂದು ಅಜರ್ಿ ನೀಡಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 263/2020 ಕಲಂ: 279, 338, ಐಪಿಸಿ ಮತ್ತು 187 ಐ,ಎಂ,ವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.