ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/10/2020

By blogger on ಶುಕ್ರವಾರ, ಅಕ್ಟೋಬರ್ 23, 2020                             ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/10/2020 

ಕೋಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 83/2020 ಕಲಂ: 143, 147, 323, 504, 506, 354 498(ಎ), ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿಪಿ ಕಾಯ್ದೆ : ಇಂದು ದಿನಾಂಕ :21/10/2020 ರಂದು 14:30 ಗಂಟೆಗೆ ಪಿಯರ್ಾದಿ ಶ್ರೀಮತಿ ರೇಣುಕಾ @ ನಿಂಗಮ್ಮ ಗಂಡ ದೇವಪ್ಪ @ ದೇವರಾಜ ಅಸ್ಕಿ ವ|| 26ವರ್ಷ ಜಾ|| ಹಿಂದೂ ಕುರುಬರ ಉ|| ಹೊಲ-ಮನೆ ಕೆಲಸ ಸಾ|| ಅಸ್ಕೇರದೊಡ್ಡಿ ಮಂಜಲಾಪೂರ ತಾ||ಸುರಪೂರ ಜಿ||ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೇಂದರೆ ನಮ್ಮ ತಂದೆ-ತಾಯಿಗೆ ನಾನೊಬ್ಬಳೆ ಹೆಣ್ಣು ಮಗಳಿದ್ದು ನನ್ನ ತವರೂರು ಹುಣಸಗಿ ತಾಲೂಕಿನ ವಜ್ಜಲ ಗ್ರಾಮವಿದ್ದು ದಿನಾಂಕ:12/05/20214 ರಂದು ನಮ್ಮ ತಂದೆ-ತಾಯಿಯವರು ನನಗೆ ಅಸ್ಕೇರದೊಡ್ಡಿ ಮಂಜಲಾಪೂರ ಗ್ರಾಮದ ದೇವಪ್ಪ @ ದೇವರಾಜ ತಂದೆ ಮಾಳಪ್ಪ ಅಸ್ಕಿ ರವರೊಂದಿಗೆ ಊರ ಹಿರಿಯರಾದ ಸಿದ್ರಾಮಪ್ಪ ತಂದೆ ಚಂದಪ್ಪ ಗಿಂಡಿ, ಭೂಮಣ್ಣ ತಂದೆ ಬೈಲಪ್ಪ ದೊಡ್ಡಮನಿ, ಹನಮಂತ್ರಾಯ ತಂದೆ ಭೂಮಣ್ಣ ಕನ್ನಳ್ಳಿ, ಹನಮಂತ್ರಾಯ ತಂದೆ ಬಸಪ್ಪ ತಾಳಿಕೋಟಿ ಸಾ|| ಎಲ್ಲರೂ ವಜ್ಜಲ ಇವರು ವಿವಾಹದ ನಿಶ್ಚಿತಾರ್ಥದ ಸಮಯಕ್ಕೆ ಹಾಜರು ಇದ್ದು ಮದುವೆಯ ಮಾತುಕತೆ ಆಡಿರುತ್ತಾರೆ. ಆಗ ನನ್ನ ಗಂಡನ ಮನೆಯವರು ವಿವಾಹವಾಗಬೇಕಾದರೆ 6ತೊಲೆ ಬಂಗಾರ, 50,000/- ನಗದು ಹಣವನ್ನು ವರದಕ್ಷಿಣೆಯಾಗಿ ಮತ್ತು ಮನೆಯ ಬಳಕೆಯ ವಸ್ತುಗಳನ್ನು ಕೊಡಬೇಕು ಅಂತಾ ಕೇಳಿದಾಗ ನಮ್ಮ ಕುಟುಂಬದವರು ಅದಕ್ಕೆ ಒಪ್ಪಿ ನಿಸ್ಚಿತಾರ್ಥವನ್ನು ಮಾಡಿರುತ್ತಾರೆ. ನನ್ನ ತಂದೆ-ತಾಯಿಯವರು ನಮ್ಮ ಮದುವೆಯ ಕಾಲಕ್ಕೆ 5ತೊಲೆ ಬಂಗಾರ & 50,000/- ನಗದು ಹಣ ಹಾಗೂ ಆಂಡೆ-ಬಾಂಡೆ ಸಾಮಾನುಗಳನ್ನು ಕೊಟ್ಟಿದ್ದು ಇರುತ್ತದೆ. ನಮ್ಮ ವಿವಾಹವಾದ ನಂತರ ಸುಮಾರು 2-3 ವರ್ಷಗಳವರೆಗೆ ನನ್ನ ಗಂಡನಾದ ದೇವಪ್ಪ @ ದೇವರಾಜ ತಂದೆ ಮಾಳಪ್ಪ ಅಸ್ಕಿ, ಮಾವನಾದ ಮಾಳಪ್ಪ ತಂದೆ ನಂದಪ್ಪ ಅಸ್ಕಿ, ಅತ್ತೆಯಾದ ಭೀಮವ್ವ ಗಂಡ ಮಾಳಪ್ಪ ಅಸ್ಕಿ, ಭಾವಂದಿರಾದ ನಂದಪ್ಪ ತಂದೆ ಮಾಳಪ್ಪ ಅಸ್ಕಿ, ನಿಂಗಪ್ಪ ತಂದೆ ಮಾಳಪ್ಪ ಅಸ್ಕಿ, ಮೈದುನನಾದ ಯಲ್ಲಪ್ಪ ತಂದೆ ಮಾಳಪ್ಪ ಅಸ್ಕಿ ಇವರು ನನಗೆ ಚನ್ನಾಗಿ ನೋಡಿಕೊಂಡಿದ್ದು ನನ್ನ ಗಂಡನು ಸಹ ನನ್ನೊಂದಿಗೆ ಅನೋನ್ಯವಾಗಿ ಸಂಸಾರವನ್ನು ಮಾಡಿದ್ದು ನಮ್ಮ ಈ ದಾಂಪತ್ಯ ಜೀವನದಿಂದ ನಮಗೆ ಸೋಮನಾಥ ಮತ್ತು ಲಕ್ಷ್ಮೀ ಅಂತಾ ಇಬ್ಬರೂ ಮಕ್ಕಳು ಆಗಿರುತ್ತಾರೆ. ಹೀಗೆ ಸುಮಾರು ಮೂರು ವರ್ಷಗಳ ಹಿಂದಿನಿಂದ ನನ್ನ ಗಂಡ, ಮಾವ, ಅತ್ತೆ, ಭಾವಂದಿರು, ಮೈದುನ ಇವರುಗಳು ನನಗೆ ಮನೆಯಲ್ಲಿ ನೀನು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನಾದರು ಹೇಳಿದರೆ ಎದರು ಮಾತನಾಡುತ್ತಿಯಾ ಸರಿಯಾಗಿ ಅಡುಗೆ ಮಾಡಲು, ಹೊಲದ ಕೆಲಸ ಮಾಡಲು ಬರುವುದಿಲ್ಲ ಸೂಳಿ ನೀನು ನಮಗೆ ಎಷ್ಟು ದಿವಸದಿಂದ ಮೂಲ ಆಗಿದ್ದಿಯಾ ಸೂಳಿ ನಿಮ್ಮ ತವರು ಮನೆಗೆ ಹೋಗು ಅಂತಾ ವಿನಾಃಕಾರಣ ಬೈಯುದು ಮತ್ತು ಹಿಯಾಳಿಸುವುದು ಮಾಡುತ್ತಾ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಾ ಬಂದಿರುತ್ತಾರೆ. ಅಲ್ಲದೇ ಮದುವೆ ಕಾಲಕ್ಕೆ ಉಳಿದ ಇನ್ನೂ ಒಂದು ತೊಲೆ ಬಂಗಾರ ಮತ್ತು ಅದರ ಜೊತೆಗೆ ಇನ್ನೂ ಎರಡು ತೊಲೆ ಬಂಗಾರವನ್ನು ನೀನು ನಿಮ್ಮ ತವರು ಮನೆಯಿಂದ ತೆಗೆದುಕೊಂಡು ಬಾ ಇಲ್ಲದಿದ್ದರೆ ಅಲ್ಲಿಯೇ ತವರು ಮನೆಯಲ್ಲಿ ಇದ್ದು ಬೀಡು ಅಂತಾ ಬೈಯುತ್ತಿದ್ದರು ನಾನು ಅವರಿಗೆ ನಮ್ಮ ತವರು ಮನೆಯವರು ತುಂಬಾ ಬಡವರು ಇದ್ದಾರೆ ಈಗಾಗಲೆ 5ತೊಲೆ ಬಂಗಾರ ಕೊಟ್ಟಿದ್ದಾರೆ ಮತ್ತೆ ಕೊಡುವುದು ಅಂದರೆ ಅವರಿಂದ ಆಗುವುದಿಲ್ಲ ಅಂತಾ ಹೇಳುತ್ತಾ ಬಂದಿರುತ್ತೇನೆ. ಈ ವಿಷಯವನ್ನು ನಮ್ಮ ತವರು ಮನೆಯವರಿಗೆ ತಿಳಿಸಿದ್ದು ನಂತರ ಎರಡು ತಿಂಗಳ ಹಿಂದೆ ನನ್ನ ತಂದೆ-ತಾಯಿಗಳು ಮದುವೆ ಕಾಲಕ್ಕೆ ಮಾತುಕತೆ ಆಡಿದ ನನ್ನ ತವರೂರಿನವರಾದ ಸಿದ್ರಾಮಪ್ಪ ತಂದೆ ಚಂದಪ್ಪ  ಗಿಂಡಿ, ಭೂಮಣ್ಣ ತಂದೆ ಬೈಲಪ್ಪ ದೊಡ್ಡಮನಿ, ಹನಮಂತ್ರಾಯ ತಂದೆ ಭೂಮಣ್ಣ ಕನ್ನಳ್ಳಿ, ಹನಮಂತ್ರಾಯ ತಂದೆ ಬಸಪ್ಪ ತಾಳಿಕೋಟಿ ರವರುಗಳಿಗೆ ನನ್ನ ಗಂಡನ ಮನೆಗೆ ಕರೆದುಕೊಂಡು ಬಂದಿದ್ದು ಇವರು ಮತ್ತು ನನ್ನ ತಂದೆ-ತಾಯಿವರು ನನ್ನ ಗಂಡನಿಗೆ, ಗಂಡನ ಮನೆಯವರಿಗೆ ನಿಮಗೆ ಮದುವೆ ಕಾಲಕ್ಕೆ 5ತೊಲೆ ಬಂಗಾರ ಕೊಟ್ಟಿದೆ ಇನ್ನೂ ಕೊಡುವುದು ಆಗುವುದಿಲ್ಲ ಅದಕ್ಕಾಗಿ ಬೈಯುವುದು ಮತ್ತು ಹೊಡೆಯವುದು ಮಾಡಬೇಡಿ ಮುಂದೆ ನಮ್ಮ ಹೊಲಗಳು ಸರಿಯಾಗಿ ಬೆಳೆದ ಮೇಲೆ ಇನ್ನೂ ಕೊಡಬೇಕಾದ ಒಂದು ತೊಲೆ ಬಂಗಾರವನ್ನು ಕೊಡುತ್ತೇವೆ ಅಂತಾ ಹೇಳಿದ್ದು ಇರುತ್ತದೆ. ನಂತರ ನನ್ನ ತಂದೆ-ತಾಯಿವರು ನನಗೆ ಇಂದಿಲ್ಲ ನಾಳೆ ನಿನ್ನ ಸಂಸಾರ ಸರಿ ಹೊಂದುತ್ತದೆ ತಾಳ್ಮೇ ತೆಗೆದುಕೊಂಡು ಗಂಡನೊಂದಿಗೆ ಬದುಕು ಅಂತಾ ಬುದ್ದಿಮಾತು ಹೇಳಿದ್ದರಿಂದ ನಾನು ನನ್ನ ಸಂಸಾರ ಇಂದಿಲ್ಲ ನಾಳೆ ಸರಿ ಆಗುತ್ತದೆ ಅಂತಾ ನನ್ನ ಗಂಡ ಮತ್ತು ಗಂಡನ ಮನೆಯವರು ಇಲ್ಲಿಯವರೆಗೆ ನೀಡಿದ ಕಿರುಕುಳವನ್ನು ಸಹಿಸಿಕೊಂಡು ಬಂದಿರುತ್ತೇನೆ. ಹೀಗಿದ್ದು ದಿನಾಂಕ:15/10/2020 ರಂದು ಮುಂಜಾನೆ 8:30 ಗಂಟೆಯ ಸುಮಾರಿಗೆ ಅಸ್ಕೇರದೊಡ್ಡಿ ಮಂಜಲಾಪೂರದಲ್ಲಿ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡನಾದ ದೇವಪ್ಪ @ ದೇವರಾಜ ತಂದೆ ಮಾಳಪ್ಪ ಅಸ್ಕಿ, ಮಾವನಾದ ಮಾಳಪ್ಪ ತಂದೆ ನಂದಪ್ಪ ಅಸ್ಕಿ, ಅತ್ತೆಯಾದ ಭೀಮವ್ವ ಗಂಡ ಮಾಳಪ್ಪ ಅಸ್ಕಿ, ಭಾವಂದಿರಾದ ನಂದಪ್ಪ ತಂದೆ ಮಾಳಪ್ಪ ಅಸ್ಕಿ, ನಿಂಗಪ್ಪ ತಂದೆ ಮಾಳಪ್ಪ ಅಸ್ಕಿ, ಮೈದುನನಾದ ಯಲ್ಲಪ್ಪ ತಂದೆ ಮಾಳಪ್ಪ ಅಸ್ಕಿ ಇವರು ನನಗೆ  ಕೂದಲು ಹಿಡಿದು ಜಗ್ಗಾಡಿ ಏ ರಂಡಿ ಭೊಸೂಡಿ ನೀನು ಎಷ್ಟು ಹೇಳಿದರು ಕೇಳುವುದಿಲ್ಲ ನಿನಗೆ ಎರಡು ಮಕ್ಕಳು ಆದರು ಸಹ ಇದುವರೆಗು ಬಂಗಾರ ಹಾಕಿರುವುದಿಲ್ಲ ಮತ್ತು ಮಗನ ತೊಟ್ಟಿಲ ಕಾರಣದಲ್ಲಿಯು ನಿನ್ನ ತವರು ಮನೆಯವರು ಬಂಗಾರ ಹಾಕಿರುವುದಿಲ್ಲ ಎಂದವರೆ ನನ್ನ ಅತ್ತೆ ಭೀಮವ್ವಳು ಕೂದಲು ಹಿಡಿದು ನನಗೆ ಬಾಗಿಸಿದ್ದು ಆಗ ನನಗೆ ನನ್ನ ಮಾವ ಮಾಳಪ್ಪನು ಕೈಯಿಂದ ಎಡ ಕಪಾಳಕ್ಕೆ ಹೊಡೆದ್ದಿದ್ದು, ಭಾವನಾದ ನಂದಪ್ಪನು ನನ್ನ ಕೈ ಹಿಡಿದು ಜಗ್ಗಾಡಿ ಸೀರೆ ಹಿಡಿದು ಎಳೆದಾಡಿ ಮಾನಭಂಗ ಪಡೆಸಿದ್ದು ಇನ್ನೊಬ್ಬ ಭಾವನಾದ  ನಿಂಗಪ್ಪ ಇವರು ನನಗೆ ಕೈಯಿಂದ ನನ್ನ ಬೆನ್ನಿನ ಮೇಲೆ ಗುದ್ದಿ ಒಳಪೆಟ್ಟು ಮಾಡಿದ್ದು ಮೈದುನ ಯಲ್ಲಪ್ಪ ಈತನು ನನ್ನ ಕೈಯನ್ನು ಬಿಗಿಯಾಗಿ ಹಿಡಿದ್ದು ಆಗ ನನ್ನ ಕೈ ಬಳೆಗಳು ಹೊಡೆದಿರುತ್ತವೆ. ಆಗ ನನ್ನ ಗಂಡನು ನನಗೆ ಎ ಸೂಳಿ ನೀನು ನಿನ್ನ ತವರು ಮನೆಗೆ ಹೋಗಿ ಬಂಗಾರ ತಗೆದುಕೊಂಡು ಬಾ ಇಲ್ಲದಿದ್ದರೆ ನಿನಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಸುಟ್ಟು ಬೀಡುತ್ತೆನೆ ಅಂತಾ ಜೀವದ ಬೇದರಿಕೆ ಹಾಕಿದ್ದು ಆಗ ನಾನು ಚೀರಾಡಿಕೊಂಡಾಂಗ ನನ್ನ ಚೀರಾಟವನ್ನು ಕೇಳಿ ನಮ್ಮೂರಿನ ಮ್ಲಲಪ್ಪ ತಂದೆ ಬಸಪ್ಪ ಗೊಡಿಹಾಳ, ನಿಂಗಪ್ಪ ತಂದೆ ಹೈಯಾಳಪ್ಪ ಅಸ್ಕಿ ಇವರುಗಳು ಬಂದು ಅವರ ಕೈಯಿಂದ ನನ್ನನ್ನ ಬಿಡಿಸಿಕೊಂಡರು ನಂತರ ನಾನು ಅಲ್ಲಿಂದ ನನ್ನ ತವರು ಮನೆಗೆ ಹೋಗಿ ತವರು ಮನೆಯಲ್ಲಿ ನನ್ನ ತಂದೆ-ತಾಯಿಗೆ ಘಟನೆಯ ಬಗ್ಗೆ ತಿಳಿಸಿ ಇಲ್ಲಿಯ ವರೆಗೆ ವಿಚಾರಮಾಡಿಕೊಂಡು ಇಂದು ನನ್ನ ತಂದೆ-ತಾಯಿಯೊಂದಿಗೆ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಈ ಘಟನೆಯಲ್ಲಿ ನನಗೆ ಅಷ್ಟೆನು ಪೆಟ್ಟಾಗಿರುವದಿಲ್ಲ ಉಪಚಾರಕ್ಕೆ ಆಸ್ಪತ್ರೆಗೆ ಹೋಗುವದಿಲ್ಲ ಕಾರಣ ನನಗೆ ಮಾನಸಿಕವಾಗಿ ದೈಹಿಕವಾಗಿ ಕಿರುಕುಳಕೊಟ್ಟು ಜೀವದ ಬೇದರಿಕೆ ಹಾಕಿ ತವರು ಮನೆಯಿಂದ ಬಂಗಾರ ತರುವಂತೆ ಒತ್ತಾಯ ಪಡಿಸಿದ ಮೇಲೆ ನಮೂದಿಸಿದ ನನ್ನ ಗಂಡ, ಮಾವ, ಅತ್ತೆ, ಭಾವಂದಿರು ಮತ್ತು ಮೈದುನನ ಮೇಲೆ ಕೇಸ್ ಮಾಡಿ ಕಾನೂನು ಪ್ರಕಾರ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಲು ವಿನಂತಿ ಅಂತಾ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.83/2020 ಕಲಂ: 143, 147, 323, 504, 506 354 498(ಎ) 149 ಐ.ಪಿ.ಸಿ ಮತ್ತು 3 & 4 ಡಿಪಿ ಕಾಯ್ದೆ ಪ್ರಕಾರ ಗುನ್ನೆ  ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 261/2020 ಕಲಂ 304(ಎ) ಐ.ಪಿ.ಸಿ : ಇಂದು ದಿನಾಂಕ:21/10/2020 ರಂದು ಮಧ್ಯಾಹ್ನ 1.30 ಪಿ.ಎಂ.ಕ್ಕೆ ಶ್ರೀಮತಿ ಮಾನಮ್ಮ ಗಂ/ ದೇವಪ್ಪ ನಾಟೇಕಾರ ಸಾ|| ಹುಂಡೇಕಲ್ ತಾ|| ಶಹಾಪುರ ನನ್ನ ತಂದೆ-ತಾಯಿಗೆ ನಾವು 4 ಜನ ಹೆಣ್ಣು ಮಕ್ಕಳು ಇದ್ದು, ಸುಮಾರು 8 ವರ್ಷಗಳ ಹಿಂದೆ ನನ್ನ ಗಂಡ ತೀರಿಕೊಂಡ ನಂತರ ನಾನು ನನ್ನ ತವರು ಮನೆಯಲ್ಲಿ ನನ್ನ ತಂದೆ-ತಾಯಿ ಯೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ: 20/10/2020 ರಂದು ಬೆಳಿಗ್ಗೆ ನಾನು ಮತ್ತು ನನ್ನ ತಾಯಿ ಬಸಮ್ಮ ಗಂ/ ಮುದಕಪ್ಪ ನಾಟೆಕಾರ ಇಬ್ಬರೂ ಕೂಡಿಕೊಂಡು ಹುಂಡೆಕಲ್ ಸೀಮಾಂತರದ ನಮ್ಮ ಅಣ್ಣತಮಕೀಯ ರಮೇಶ ತಂ/ ದೊಡ್ಡಪ್ಪ ನಾಟೇಕಾರ ಇವರ ಹತ್ತಿ ಹೊಲಕ್ಕೆ ಹತ್ತಿಬಿಡಿಸಲು ಹೋಗಿದ್ದೆವು ನಮ್ಮಂತೆ ನಮ್ಮ ಓಣಿಯ ನೀಲಮ್ಮ ಗಂ/ ಮಲ್ಲಿಕಾಜರ್ುನ ನಾಟೇಕಾರ ನಾಗರತ್ನ ಗಂ/ ಗುರಪ್ಪ ನಾಟೇಕಾರ ರವರು ಕೂಲಿಕೆ ಕೆಲಸಕ್ಕೆ ಬಂದಿದ್ದರು ಹೊಲದಲ್ಲಿ ಹೊಲದ ಮಾಲೀಕ ರಮೇಶ ನಾಟೀಕಾರ ಹಾಗೂ ಸಾಬಣ್ಣ ತಂ/ ಬಸವರಾಜ ನಾಟೇಕಾರ ಇವರೂ ಇದ್ದರು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ನಾವೆಲ್ಲರೂ ಹತ್ತಿಬಿಡಿಸುವ ಕೆಲಸ ಮಾಡಿದ್ದು, ಸಾಯಂಕಾಲ 5.20 ಪಿ.ಎಂ. ಸುಮಾರಿಗೆ ಮಳೆ ಬರಲು ಪ್ರಾರಂಭಿಸಿದಾಗ ಗುರಪ್ಪ ತಂ/ ದೊಡ್ಡಪ್ಪ ನಾಟೀಕಾರ ಈತನು ಹೊಲದ ಬದುವಿನಲ್ಲಿ ನಿಲ್ಲಿಸಿ ಹೋಗಿದ್ದ ಟ್ರಾಕ್ಟರ್ ಟ್ರಾಲಿ ಕೆಳಗೆ ನಾವೆಲ್ಲರೂ ಹೋಗಿ ಕುಳಿತೆವು 5.30 ಪಿ.ಎಂ. ಸುಮಾರಿಗೆ ಸದರಿ ಟ್ರಾಕ್ಟರನ್ನು ಗುರಪ್ಪನ್ನು ಇಳಿಜಾರಿನಲ್ಲಿ ಟ್ರಾಕ್ಟರ ಹಿಂದೆ ಹೋಗದಂತೆ ಯಾವುದೇ ಕ್ರಮ ಕೈಕೊಳ್ಳದೆ ನಿಷ್ಕಾಳಜಿತನದಿಂದ ನಿಲ್ಲಿಸಿದ್ದರಿಂದ ಟ್ರಾಕ್ಟರ್ ಟೈರ್ ಕೆಳಗಿನ ಭೂಮಿ ಹಸಿಯಾಗಿ ಟ್ರಾಕ್ಟರ್ ಹಿಂದಕ್ಕೆ ಬಂದಿದ್ದರಿಂದ ಟ್ರಾಕ್ಟರ ಕೆಳಗೆ ಕುಳಿತ ನನ್ನ ತಾಯಿ ಬಸಮ್ಮ ಗಂ/ ಮುದಕಪ್ಪ ನಾಟೆಕಾರ ಈಕೆಯ ಟ್ರಾಕ್ಟರ್ ಟ್ರಾಲಿಯ ಟೈರಿಗೆ ಸಿಕ್ಕಿಬಿದ್ದ ಪರಿಣಾಮ ಹೊಟ್ಟೆಯ ಬಲಭಾಗಕ್ಕೆ ಭಾರೀ ರಕ್ತಗಾಯವಾಯಿತು. ಕೂಡಲೆ ಅದೇ ಟ್ರಾಕ್ಟರದಲ್ಲಿ ನನ್ನ ತಾಯಿಗೆ ಹಾಕಿಕೊಂಡು 6.00 ಪಿ.ಎಂ. ಸುಮಾರಿಗೆ ತಡಿಬಿಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ತಪಾಸಣೆ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಯಾದಗಿರಿ ಹೋಗಲು ತಿಳಿಸಿದರು. ನಂತರ  ಒಂದು ಖಾಸಗಿ ವಾಹನದಲ್ಲಿ ನನ್ನ ತಾಯಿಗೆ ಹಾಕಿಕೊಂಡು ಯಾದಗಿರಿಗೆ ಹೋಗುವಾಗ 6.15 ಪಿ.ಎಂ. ಸುಮಾರಿಗೆ ಖಾನಾಪುರ ಕ್ರಾಸ್ ಹತ್ತಿರ ನನ್ನ ತಾಯಿ ಮೃತಪಟ್ಟಿರುತ್ತಾಳೆ. ನಮಗೆ ಕಾನೂನಿನ ಅರಿವು ಇಲ್ಲದರಿಂದ ನಂತರ ನನ್ನ ತಾಯಿಯ ಮೃತ ದೇಹವನ್ನು ನಮ್ಮ ಊರಿಗೆ ತೆಗೆದುಕೊಂಡು ಹೋಗಿ, ನಮ್ಮ ಹಿರಿಯರೊಂದಿಗೆ ವಿಚಾರಣೆ ಮಾಡಿ ಮೃತ ದೇಹವನ್ನು ಶಹಾಪುರ ಸಕರ್ಾರಿ ಆಸ್ಪತ್ರೆಯ ಮರ್ಚರಿ ಕೋಣೆಯಲ್ಲಿ ಹಾಕಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಸದರಿ ಟ್ರಾಕ್ಟರ ಇಂಜಿನ್.ನಂ.ಕೆಎ-35 ಟಿ-5476 ಇದ್ದು, ಟ್ರಾಲಿಯ ರಜಿಸ್ಟರ್ ನಂಬರ ಇರುವುದಿಲ್ಲ ಸದರ ಟ್ರಾಲಿಯ ಚೆಸ್ಸಿ.ನಂ.77/2013 ಅಂತಾ ಇರುತ್ತದೆ. ಕಾರಣ ದುಡುಕಿನಿಂದ ಮತ್ತು ನಿಷ್ಕಾಳಜಿತನದಿಂದ ಯಾವುದೇ ಮುಂಜಾಗ್ರತೆ ಕಮ ಕೈಗೊಳ್ಳದೆ ಟ್ರಾಕ್ಟರನ್ನು ನಿಲ್ಲಿಸಿದ್ದರಿಂದ ಟ್ರಾಕ್ಟರ್ ಹಿಂದೆ ಸರಿದು ಟ್ರಾಕ್ಟರ ಕೆಳಗೆ ಕುಳಿತ ನನ್ನ ತಾಯಿಯ ಮೇಲೆ ಟ್ರಾಕ್ಟರ್ ಟ್ರಾಲಿಯ ಟೈರ ಹರಿದ ಕಾರಣ ನನ್ನ ತಾಯಿ ಮೃತಪಟ್ಟಿದ್ದರಿಂದ ಟ್ರಾಕ್ಟರ ಚಾಲಕ ಗುರಪ್ಪ ತಂ/ ದೊಡ್ಡಪ್ಪ ನಾಟೇಕಾರ ಇವನ ವಿರುದ್ದ ಕಾನೂನು ಜರುಗಿಸಲು ವಿನಂತಿ. ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 261/2020 ಕಲಂ 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 

ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 148/2020 ಕಲಂ 379 ಐಪಿಸಿ : ಇಂದು ದಿನಾಂಕ 21.10.2020 ರಂದು ಫಿರ್ಯಾದಿದಾರರು ಬೆಳಿಗ್ಗೆ 9:00 ಗಂಟೆಗೆ ವೃತ್ತ ಕಛೇರಿಯಲ್ಲಿದ್ದಾಗ ಗಣಪೂರ ಸಿಮಾಂತರದಲ್ಲಿ ಎರಡೂ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ದಾಳೀ ಕುರಿತು ಹೋಗಿ ಬೆಳಿಗ್ಗೆ 10:30 ಗಂಟೆಗೆ ಗಣಪುರ ಗೇಟ್ ಹತ್ತಿರ ಒಂದರ ಹಿಂದೆ ಒಂದರಂತೆ ಒಟ್ಟು ಎರಡೂ ಮರಳು ತುಂಬಿದ ಟ್ರ್ಯಾಕ್ಟರಗಳು ಬಂದಿರುವುದನ್ನು ಕಂಡು ದಾಳೀ ಮಾಡಿ ಎ-1 ಮತ್ತು ಎ-3 ರವರು ಹಿಡಿದು ಕಾಲಂ: 08 ರಲ್ಲಿಯ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಸಿಕೊಂಡು ವಶಕ್ಕೆ ತೆಗೆದುಕೊಂಡಿದ್ದು ಸದರಿ ಎ-1 ಈತನು ಎ-2 ಹೇಳಿದಂತೆ ಎ-2 ಈತನ ಹೆಸರಿನಲ್ಲಿರುವ ಕ್ರ.ಸಂ-01 ನೇ ಟ್ರ್ಯಾಕ್ಟರನಲ್ಲಿಯ ಮರಳನ್ನು ಅದೇ ರೀತಿ ಎ-3 ಈತನು ಎ-4 ಹೇಳಿದಂತೆ ಕ್ರ.ಸಂ-02 ನೇ ಟ್ರ್ಯಾಕ್ಟರನಲ್ಲಿಯ ಮರಳನ್ನು ಕಳ್ಳತನದಿಂದ ಸಾಗಿಸುತಿದ್ದ ಬಗ್ಗೆ ದೃಢಪಟ್ಟಿದ್ದರಿಂದ ಸಮಯ ಬೆಳಿಗ್ಗೆ 10:30 ಗಂಟೆಯಿಂದ 11:30 ಗಂಟೆಯ ವರೆಗೆ ಪಂಚನಾಮೆಯನ್ನು ಮಾಡಿದ ನಂತರ ಮರಳಿ ಠಾಣೆಗೆ ಬಂದು ಸಮಯ ಮಧ್ಯಾಹ್ನ 12:00 ಗಂಟೆಗೆ ಮುದ್ದೆ ಮಾಲು, ಮೂಲ ಜಪ್ತಿ ಪಂಚನಾಮೆ, ಮತ್ತು ಇಬ್ಬರು ಆರೋಪಿತರನ್ನು ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ: 148/2020 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ: ಪಿ.ಎ.ಆರ್ ನಂ: 08/2020 ಕಲಂ 107 ಸಿ.ಆರ್.ಪಿ.ಸಿ : ಇಂದು ದಿನಾಂಕ 21-10-2020 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾನು ಶ್ರಿ ಸಂಜೀವಪ್ಪಾ ತಂದೆ ದಿವಂಗತ ಶರಣಪ್ಪಾ ಹಂಪೀನ ಸಾ: ಕಂಚಗಾರಹಳ್ಳಿ ಇವರು ಸಲ್ಲಿಸಿದ ಅಜರ್ಿಯ ವಿಚಾರಣೆಗಾಗಿ ಕಂಚಗಾರಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದಾಗ ಅಲ್ಲಿ ಭಾತ್ಮೀದಾರರಿಂದ ತಿಳಿದುಬಂದಿದ್ದೆನೆಂದರೆ ಕಂಚಗಾರಹಳ್ಳಿ  ಗ್ರಾಮದ ಎರಡನೇ ಪಾಟರ್ಿಯ ಶ್ರೀ ನಾಗರಾಜ ತಂದೆ ಅಂಬೂಜೀ ಹಂಪೀನ ಇವರ ಹೆಸರಿಗೆ ಅವರ ಹಿರಿಯರಿಂದ ಪಿತ್ರಾಜರ್ಿತ ಆಸ್ತಿ ಹೋಲ ಸವರ್ೇ ನಂ: 60 ರಲ್ಲಿ ಆಕಾರ 7 ಎಕರೆ 23 ಗುಂಟೆ ಹೋಲವಿರುತ್ತದೆ. ಮತ್ತು ಈ  ಹೋಲ ಸಧ್ಯ ದಾಖಲಾತಿಗಳ ಪ್ರಕಾರ ಅವರ ಕಬ್ಜೇದಲ್ಲಿಯೇ ಇದ್ದು ಅವರೇ ಸಾಗುವಳಿ ಮಾಡುತ್ತಾ ಬಂದಿರುತ್ತಾರೆ ಹಾಗೂ ಅವರೇ ಮಾಲೀಕರುತ್ತಾರೆ. ಈಗ ಒಂದನೇ ಪಾಟರ್ಿಯ 1) ಸಂಜೀವಪ್ಪಾ ತಂದೆ ಶರಣಪ್ಪಾ ಹಂಪೀನ್ ವಯಾ: 45 2) ರಾಜಪ್ಪಾ ತಂದೆ ಶರಣಪ್ಪಾ ಹಂಪೀನ್ ವಯಾ: 48 ಹಾಗೂ ಇವರ ಚಿಕ್ಕಪ್ಪನ ಮಕ್ಕಳಾದ 3) ಬಸಪ್ಪಾ ತಂದೆ ಮಲ್ಲಪ್ಪಾ ಹಂಪೀನ್ ವಯಾ: 35 ಹಾಗೂ 4) ಮರೆಪ್ಪಾ ತಂದೆ ಮಲ್ಲಪ್ಪಾ ಹಂಪೀನ ವಯಾ:30 ಎಲ್ಲರೂ ಸಾ:ಕಂಚಗಾರಹಳ್ಳಿ ಗ್ರಾಮದವರು ಈ 4 ಜನರು ಕೂಡಿಕೊಂಡು ವಿನಾಕಾರಣ ಒಂದನೇ ಪಾಟರ್ಿಯ ನಾಗರಾಜ ತಂದೆ ಅಂಬೂಜೀ ಹಂಪೀನ್ ಇವರೊಂದಿಗೆ ತಕರಾರು ಮಾಡುತ್ತಾ ಈ ಹೋಲ ನಮ್ಮದಿದೆ ನಿನಗೆ ಸಾಗುವಳಿ ಮಾಡಲು ಬಿಡುವುದಿಲ್ಲಾ ನೀ ಹೋಲ ಹೇಗೆ ಸಾಗುವಳಿ ಮಾಡುತ್ತಿ ನೋಡಿಕೊಳ್ಳುತ್ತೆವೆ ಅಂತಾ ಅವನಿಗೆ ಸಾಗುವಳಿ ಮಾಡಲು ತೊಂದರೆ ಮಾಡುತ್ತಿದ್ದು ಅಲ್ಲದೇ ಅವನು ಸಾಗುವಳಿ ಮಾಡದಂತೆ ಮಾನ್ಯ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ಪಡೆದುಕೊಂಡು ಬಂದಿರುತ್ತಾರೆ. ಆದಕ್ಕೆ ಒಂದನೇ ಪಾಟರ್ಿಯ ನಾಗರಾಜನು ಕಾನೂನು ಬದ್ದವಾಗಿ ತಾನು ಸದರಿ ಹೋಲದ ಮಾಲೀಕನಿದ್ದು ಮತ್ತು ಅದಕ್ಕೆ ಸಂಬಂದಪಟ್ಟಂತೆ ತನ್ನ ಹತ್ತಿರ ದಾಖಲಾತಿಗಳು ಇರುತ್ತವೆ. ಯಾಔಉದೇ ಕಾರಣಕ್ಕೂ ಬೇರೆಯವರಿಗೆ ನನ್ನ ಹೋಲದಲ್ಲಿ ಪ್ರವೇಶ ಮಾಡಲು ಬಿಡುವುದಿಲ್ಲಾ ಅಂತಾ ಅನ್ನುತ್ತಾ ತಿರುಗಾಡುತ್ತಿದ್ದಾನೆ, ಮತ್ತು ಒಂದನೇ ಎರಡನೇ ಪಾಟರ್ಿಯವರು ತಮ್ಮ ಹತ್ತಿರ ಸದರಿ ಹೋಲಕ್ಕೆ ಸಂಬಂಧಪಟ್ಟ ಯಾವುದೇ ದಾಖಲಾತಿಗಳು ಇರದೇ ವಿನಾಕಾರಣ ನಾಗರಾಜನಿಗೆ ತೊಂದರೆ ಕೊಡುವ ಉದ್ದೇಶದಿಂದ ಮಾನ್ಯ ನ್ಯಾಯಾಲಯದಿಂದ ತಡೆಯಾಜ್ಞೇ ಪಡೆದುಕೊಂಡು ಬಂದಿರುತ್ತಾರೆ. ಸಧ್ಯ ಸದರಿ ಹೋಲದ ವಿಷಯದಲ್ಲಿ ಎರಡೂ ಪಾಟರ್ಿಯವರು ಪಾಟರ್ಿ ಜನರು ಒಳ ಒಳಗೆ ತೀವೃ ವೈಮನಸ್ಸು ಬೆಳೆಸಿಕೊಂಡು ಬಂದಿದ್ದು ಎರಡೂ ಪಾಟರ್ಿ ಜನರ ಮದ್ಯ ಯಾವ ವೇಳೆಯಲ್ಲಾದರೂ ಜಗಳವಾಗಿ ಜೀವಹಾನಿ ಮತ್ತು ಆಸ್ತಿಪಾಸ್ತಿಗೆ ಹಾನಿ ಮಾಡಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗವುಂಟಾಗುವ ಸಂಭವ ಕಂಡುಬಂದಿರುತ್ತದೆ. ಆದ್ದರಿಂದ ಕಂಚಗಾರಹಳ್ಳಿ ಗ್ರಾಮದಿಂದ ಮರಳಿ 5-30 ಪಿ.ಎಮ್ ಕ್ಕೆ ಠಾಣೆಗೆೆ ಬಂದು ಎರಡು ಪಾಟಿ ಜನರ ವಿರುದ್ದ ಮುಂಜಾಗೃತಾ ಕ್ರಮಕ್ಕಾಗಿ ಠಾಣೆಯ ಪಿ.ಎ.ಆರ್ ನಂ: 08/2020 ಕಲಂ 107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತಾ ಕ್ರಮ ಕೈಗೊಂಡಿದ್ದು ಇರುತ್ತದೆ.

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ: 42/2020 ಕಲಂ 279, 429 ಐಪಿಸಿ: ಇಂದು ದಿನಾಂಕ 21/10/2020 ರಂದು ಸಾಯಂಕಾಲ 6 ಪಿ.ಎಂ. ಸುಮಾರಿಗೆ ಈ ಕೇಸಿನಲ್ಲಿನ ಲಾರಿ ನಂಬರ ಎಮ್.ಎಚ್.-12, ಎನ್.ಎಕ್ಸ್-3933 ನೇದ್ದರ ಚಾಲಕ ಸಚಿನ್ ಶಿಂದೆ ತಂದೆ ವಿಷ್ಣು ಶಿಂದೆ ಸಾ; ದಪಿಟನ್, ತಾ;ಆಸ್ಟಿ, ಜಿ;ಬೀಡ (ಮಹಾರಾಷ್ಟ್ರ) ಈತನು ತನ್ನ ಲಾರಿಯನ್ನು ವಾಡಿ ರಸ್ತೆ  ಕಡೆಯಿಂದ ಯಾದಗಿರಿಗೆ ಬರುವಾಗ ಅಲ್ಲಿಪುರ ಕ್ರಾಸ್ ಹತ್ತಿರ ಅತೀವೇಗ ಮತ್ತು ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ವಾಹನದ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಹೊರಟಿದ್ದ ಆಡುಗಳಿಗೆ (ಮೇಕೆ) ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಈ ಅಪಘಾತದಲ್ಲಿ 09 ಆಡುಗಳು (ಮೇಕೆ) ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆಡುಗಳ ಅ.ಕಿ.ರೂ. 1,08,000/- ದಷ್ಟು ಲುಕ್ಸಾನ ಮಾಡಿದ್ದು ಇರುತ್ತದೆ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ಈ ಘಟನೆ ಜರುಗಿದ್ದು ಅಂತಾ ಫಿಯರ್ಾದು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 42/2020 ಕಲಂ 279, 429 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:-  224/2020 ಕಲಂ: 279, 338 ಐ.ಪಿಸಿ : ಇಂದು ದಿನಾಂಕಃ 21/10/2020 ರಂದು ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯ ಹೊಂದಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಮಲ್ಲಪ್ಪ ತಂದೆ ದೇವಿಂದ್ರಪ್ಪ ತಳವಾರ ಸಾ: ದೇವಾಪೂರ ಇತನ ಹೇಳಿಕೆ ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ಇಂದು ಸಾಯಂಕಾಲ ನಾನು ನನ್ನ ಅಟೋರಿಕ್ಷಾ ನಂಬರ ಕೆ.ಎ 33 ಎ 4133 ನೇದ್ದನ್ನು ದೇವಾಪೂರ ಕ್ರಾಸಿನಿಂದ ದೇವಾಪೂರ ಗ್ರಾಮದಲ್ಲಿರುವ ನಮ್ಮ ಮನೆಯ ಕಡೆಗೆ ಸುರಪೂರ ಲಿಂಗಸುಗೂರ ಮುಖ್ಯರಸ್ತೆಯ ಮೇಲೆ ನಡೆಸಿಕೊಂಡು ಹೊರಟಿದ್ದಾಗ 6-40 ಪಿ.ಎಮ್ ಸುಮಾರಿಗೆ ದೇವಾಪೂರ ಗ್ರಾಮದ ಅಂಬಿಗೇರ ಚೌಡಯ್ಯ ಕಟ್ಟೆಯ ಹತ್ತಿರ ಎದುರಿನಿಂದ ಬಸ್ ನಂಬರ ಕೆ.ಎ 35 ಎಫ್ 266 ನೇದ್ದರ ಚಾಲಕನಾದ ರಾಮಪ್ಪ ತಂದೆ ಚನ್ನಬಸಪ್ಪ ಪೂಜಾರಿ ಹೂವಿನಹಡಗಲಿ ಬಸ್ ಘಟಕ, ಜಿಲ್ಲೆ: ಬಳ್ಳಾರಿ ಇತನು ತನ್ನ ಬಸ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಅಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ್ದರಿಂದ ನನಗೆ ಎಡತಲೆಯಲ್ಲಿ, ಎಡಗಣ್ಣಿನ ಹುಬ್ಬಿಗೆ ಭಾರಿರಕ್ತಗಾಯಗಳಾಗಿದ್ದು ಎಡಕಿವಿಗೆ, ಎಡಗಲ್ಲದ ಮೇಲೆ, ಮೂಗಿನ ಎಡಭಾಗದಲ್ಲಿ, ಎಡಭುಜದ ಮೇಲೆ ರಕ್ತಗಾಯಗಳಾಗಿರುತ್ತದೆ. ಹಾಗು ಎಡಪಕ್ಕಡಿಗೆ ಹಾಗು ಎಡಗಡೆ ಹೊಟ್ಟೆಯ ಮೇಲೆ ಭಾರಿಗುಪ್ತಗಾಯಗಳಾಗಿರುತ್ತದೆ. ಆಗ ನಮ್ಮೂರಿನ ಮೌನೇಶ ತಳವಾರ, ಹುಸನಪ್ಪ ವಸ್ತಾರಿ ಹಾಗು ವೆಂಕಟೇಶ ಮೂವರು ನೋಡಿ ನನಗೆ ಅಟೋರಿಕ್ಷಾದಿಂದ ಹೊರಗಡೆ ತಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಅಪಘಾತಪಡಿಸಿ ಭಾರಿ ರಕ್ತಗಾಯ, ಗುಪ್ತಗಾಯ ಪಡಿಸಿರುವ ಬಸ್ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 224/2020 ಕಲಂ. 279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


 ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!